278 ನಮೋ_ಸಂತ_ಯಮನೂರೇಶ

#ಚಿತ್ರಕಾವ್ಯ_ಅಭಿಯಾನ_೩೦

#ನಮೋ_ಸಂತ_ಯಮನೂರೇಶ

ಪುರದಾಳದಲುದ್ಭವಿಸಿದ ಪುಣ್ಯಪುರುಷ
ಅಪಾರ ಭಕ್ತವೃಂದವ ಗೆದ್ದ ಹೃದಯೇಶ
ಸಾವಿರದ ತತ್ವ ಪದಗಳ ಮಹಾಜನಕ
ಈತನದು ನಿಜನಾಮ ಯಮನೂರೇಶ.!!

ಆಧುನಿಕ ತತ್ವ ಪದಗಳ ಹರಿಕಾರ
ಸಾವಿರದ ಹಾಡುಗಳ ಸಂತ ಸರದಾರ
ಅದ್ವೈತ ಭಾರ್ಗವನೀತ ಸಾರ್ಥಕ ಜೀವ
ಈತನೇ ಯಮನೂರೇಶ ಬಿರಾದಾರ

ಟೀಕಾತಾತ್ಪರ್ಯ ರಚಿತ ಟೀಕಾಚಾರ್ಯ
ಬರೆದನೆಷ್ಟೋ ಮಹಿಮರ ಜೀವನ ಚಾರಿತ್ರ್ಯ
ಅಂಕಿತ ನಾಮವದು ಭೀಮಾಶಂಕರ
ಯಮನೂರೇಶ ಶರಣ ಸಂತತಿಯ ಪಾವಿತ್ರ್ಯ

ತಿದ್ದಿದರು ತತ್ವಪದದಲೇ ಜಗವ
ಸಾಹಿತ್ಯ ಕ್ಷೇತ್ರದಲ್ಲಿ ಕಾಣುತ ಭವವ
ಗುರುಗೀತಾಮೃತದಲಿಟ್ಟು ಜೀವನಸಾರ
ಭವ್ಯ ಗೊಳಿಸಿದರೆಲ್ಲ ಶರಣರ ಭಾವ

ದೇಸಿಮಾತಿನ ಧಾಟಿಯಲೇ ಪದ ಭಂಡಾರ
ಕಲಿಸುತೆಲ್ಲರಿಗೆ ತಾನೂ ಕಲಿತ ಗುರುವರ್ಯ
ಪದಗಟ್ಟಿನಲೇ ಅಧ್ಯಾತ್ಮ ಬೆರೆಸಿ ರಚಿಸಿದ
ಅಗಣಿತ ಸಂತಶರಣ ಮನದ ತಾತ್ಪರ್ಯ

ಅಸ್ತಮವಾದರು ಪುರದಾಳದ ರವಿ
ಕಣ್ಣೀರಿಟ್ಟಿಹಳು ಅಗಲಿಕೆಗೆ ಭುವಿ
ಶಿವನಡಿಯಲಿ ಲೀನವಾದ ಶಿವಾಚಾರ್ಯ
ಮತ್ತೊಮ್ಮೆ ಉದ್ಭವಿಸಿ ಬನ್ನಿ ಸಂತ ಕವಿ

      ಡಾ: B.N.ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ