304 ದೇಶಭಕ್ತಿ - ನಮ್ಮ ಶಕ್ತಿ

ಸಾಲಿಗೊಂದು ಕವನ##

ದೇಶಭಕ್ತಿ - ನಮ್ಮ ಶಕ್ತಿ
******************
ವೇಷ ಭಾಷೆ ಯಾವುದಾದರೇನು?
ನಮ್ಮ ದೇಶವೊಂದೇ ಭಾರತ..!
ಜಾತಿ ಬೇಧ ಭಾವ ಮರೆತು
ಎಲ್ಲರಲಿರಲಿ ಒಮ್ಮತ..!!

ದೇಶಭಕ್ತಿ  - ನಮ್ಮಶಕ್ತಿ
ಒಗ್ಗಟ್ಟಿನಲ್ಲಿದೆ ಬಲ ...!!
ಕಾದುವ ಅರಿಗಳ ಹಿಮ್ಮೆಟ್ಟಿಸಿ
ತೋರಿಸೋಣ  ಭುಜಬಲ..!!

ಕಾಶ್ಮೀರ ಕಣಿವೆಯಿಂದಿಡಿದು
ಕನ್ಯಾಕುಮಾರಿಯ ವರೆವಿಗೂ
ವಿವಿಧ ಸಂಸ್ಕೃತಿ ವೇಷ ಭಾಷೆ
ಇದು ತಾಯ್ನಾಡಿಗೆ ಮೆರುಗು..!!

ನಾವೆಲ್ಲರೊಂದೇ ಇಲ್ಲಿ
ಭಾರತಾಂಬೆಯ ಸುತರು
ಭಾವೈಕ್ಯತೆಯ ಸಾರುವ
ಮಂದಿ ನಮಗೆಲ್ಲ ಹಿತರು..!!

ಸಾಮರಸ್ಯ ಸಹಬಾಳ್ವೆ
ನಮಗಾಗಲಿ ಸೂತ್ರ..!!
ಒಂದೇ ಮಾತರಂ ಇದು
ಭಾವೈಕ್ಯತೆಯ ಮಂತ್ರ..!!

ದೇಶಭಕ್ತಿಯೇ ನಮ್ಮ ಶಕ್ತಿ
ಇರಲಿ ಪ್ರೀತಿ  ಸಂತತ..!!
ತನು ಮನ ಧನವೆಲ್ಲವೂ
ಭರತ ಮಾತೆಗೆ ಅರ್ಪಿತ..!!

             ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ