Posts

Showing posts with the label 119. ಒಲವಿನ ಉಡುಗೊರೆ

119. ಒಲವಿನ ಉಡುಗೊರೆ

Image
ಒಲವಿನ ಉಡುಗೊರೆ ***************** ಏನ ನೀಡಲಿ  ಗೆಳೆಯಾ ಒಲವಿನ ಉಡುಗೊರೆ ನನ್ನದೆನ್ನುವುದೇಂನುಂಟು ನಾನೇ ನಿನ್ನವಳಾಗಿರುವಾಗ ಮನಸ್ಸನ್ನೇ ಇತ್ತಿರುವೆನಲ್ಲ ಇನ್ನೇನು ನೀಡಲಿ ನಿನಗೆ ಮನದ ಮಾತುಗಳೆಲ್ಲಾ ನಿನ್ನನರ್ಚಿಸುವ ಮಂತ್ರ ಹೃದಯದಾಸನದಲ್ಲಿ ಕುಳಿತ ಮನೋಮೂರ್ತಿ ನಿನಗೆ ನೀಡಲೇನುಂಟು ಉಡುಗೊರೆ ಪ್ರತಿ ಮಿಡಿತದಲೂ ನಿನ್ನ ಹೆಸರೇ ಧನ ಕನಕ ನೀಡಲಿ ಹೇಗೆ ನನ್ನನೇ ನಾನರ್ಪಿಸಿಕೊಂಡೇ ನನ್ನದಾಗಿನ್ನೇನಿಹುದು  ತನುಮನದ ಒಡೆಯ ನೀನೇ ಉಸಿರು ಉಸಿರಲಿ ಬೆರೆತ ನನ್ನುಸಿರೇ ಓ ಗೆಳೆಯಾ ಉಸಿರ ನೀಡಲು ಬಲ್ಲೆ ಒಲವ ಉಡುಗೊರೆಯಾಗಿ             ಶೈಲೂ.....