207 ಸಾಕುಮಾಡು ಮೌನ ಬಲ್ಲೆ ನಾ ನಿನ್ನ ಮನ
ಸಾಕುಮಾಡು ಮೌನ ಬಲ್ಲೆ ನಾ ನಿನ್ನ ಮನ ********************************* ಏಕೋ ಇಂಥ ಬಿಂಕ ಬಿಗುಮಾನ ಅಪರಾಧವೇನಿದೆ ನನ್ನದು? ಅರಳು ಹುರಿದಂತೆ ಮಾತು ಈ ನಡುವೆ ಏಕೋ ಕಾಣದು ಮೌನವಾಗಿದೆ ಹಾಡುಹಕ್ಕಿ ಏನಿದೆಯೋ ಕೋಪತಾಪ ಮರೆತುಹೋಯಿತೇ ರಾಗ ಯಾಕೋ ಈ ಪರಿ ತಾಪ ನುಡಿಯಲಾರದೆ ಮನದ ವೀಣೆ ಮಿಡಿವ ಹೃದಯ ಎಲ್ಲಿದೆ? ಮುನಿಸೆಕೋ ವೈಣಿಕನಿಗೆ ಹಿತವಾಗಿ ನಗಲೂ ಬಾರದೆ? ಎಲ್ಲಿ ಹೋಯಿತು ಪ್ರೀತಿ ಏಕಿಂಥ ದುರಭಿಮಾನ ಸಾಕು ಮಾಡು.ಈ ಮೌನ ಬಲ್ಲೆ ನಾ ನಿನ್ನ ಮನ ಶೈಲೂ.....