Posts

Showing posts with the label 159 ಅಮ್ಮಾ ಅಪ್ಪಿಕೋ ಎನ್ನ

159 ಅಮ್ಮಾ ಅಪ್ಪಿಕೋ ಎನ್ನ

Image
ಶ್ರೀಮಾತಾ ಶ್ರೀ ಶಾರದಾ ದೇವಿಯರ ಜನ್ಮೋತ್ಸವದ  ಹಿನ್ನೆಲೆಯಲ್ಲಿ  ಬರೆದ  ಕವಿತೆ ಅಮ್ಮಾ ಅಪ್ಪಿಕೋ ಎನ್ನ ******************* ಅಮ್ಮಾ ಅಮ್ಮಾ ಎಂದು ಹಾತೊರೆದು ನಾ ಬಂದೆ ಬಳಿಸಾರಿ  ಪ್ರೀತಿಯಲ್ಲಿ ಪೊರೆಯೆನ್ನ ತಾಯೇ. || ಹೊಕ್ಕಿಹುದು ಹೃದಯದೊಳು ಹೆರತನದ  ಹೆದರಿಕೆಯು ಬದುಕ  ಜಂಜಾಟದಲ್ಲಿ ಜೀವ ಸಿಕ್ಕಿಹುದು ಬವಣೆಯ  ಹುದುರೊಳಗೆ ಬುದ್ಧಿ ಮಂಕಾಗಿಹುದು ನನ್ನತನವೇನಾಯ್ತೋ  ಕಾಣದಾಗಿಹುದೂ.  || ಎಲ್ಲೆಲ್ಲಿ  ನೋಡಿದರೂ ಸಿಕ್ಕುಗಳು  ಬದುಕಲ್ಲಿ ನರಳಿ ಬದುಕಲು ಕಷ್ಟ  ಕಾಯಬೇಕಿಲ್ಲಿ ಬೆದರಿಕೆಯ  ಮುಸುಕೊಳಗೆ ಉಸಿರು ಬಿಗಿದಂತಾಗಿ ತಾಳಲಾರೆನು ತಾಯೇ  ಪಾರುಗಾಣಿಸೆಲೇ. || ಸಿಲುಕಿ ನಿಂತಿಹೆ ನಾನು ಆಸೆ ಮಾಯೆಯ ಒಳಗೆ ನೀಡು ನಾಮದ ಬಲವ ದಾಟುವೆ ಭವಸಾಗರವ ಮುಚ್ಚುಮರೆ ಮಾಡದೇ ಎತ್ತಿ ನಿಲಿಸು ತಾಯೇ ಹೊದಿಸಿ ಪ್ರೀತಿಯ  ಸೆರಗ ಅಪ್ಪಿಕೊ ಎನ್ನ . ||             ಶೈಲೂ......