Posts

Showing posts from April, 2020

ಬಾಂಧವ್ಯದ ನೆಲೆ

Image
ಬಾಂಧವ್ಯದ ನೆಲೆ *************** ನಂಬಿಕೆಗಳ ನೆಲೆಗಟ್ಟಿನ ಮೇಲೆಯೇ ನಿಂತಿಹುದು ಬಾಂಧವ್ಯ ಸಂದೇಹ ಅಪನಂಬಿಕೆಗಳಡಿಯಲ್ಲಿ.  ಒಡೆಯುವುದು ಸಂಭಾವ್ಯ ಸ್ನೇಹ ಪ್ರೀತಿ ವಿಶ್ವಾಸಗಳ ಒಡಲಲ್ಲಿಹುದು ಬಾಂಧವ್ಯ ನಿರೀಕ್ಷೆ ಪ್ರತೀಕ್ಷೆಗಳ ಪ್ರಖರ ಜ್ವಾಲೆ ದಹಿಸುವುದು ಸಂಭಾವ್ಯ ಕಾಳಜಿ ಒಲುಮೆ ಬಲುಮೆಗಳ ಅಪ್ಪಿ ಸುಖಿಸುವುದು ಬಾಂಧವ್ಯ ಅಪಮಾನ ಆತಂಕಾಸೂಯೆಗಳು ಕೊಚ್ಚಿ ಕೆಡವುವುದು ಸಂಭಾವ್ಯ ಭದ್ರತೆ ಮಮತಾವಾತ್ಸಲ್ಯಗಳ  ನೆರಳಲ್ಲರಳುವುದು ಬಾಂಧವ್ಯ ದ್ವೇಷಾಸೂಯೆ ಅಭದ್ರತೆಯ ಕರಿನೆರಳು ಕಬಳಿಸುವುದು ಸoಭಾವ್ಯ ಮುದವೀವ ನುಡಿಗಟ್ಟು ಸಿರಿಸ್ನೇಹ ಅದರಲಿಟ್ಟು ನಗಿಸುವುದು ಬಾಂಧವ್ಯ ಇಲ್ಲಸಲ್ಲದ ವಿಚಾರಗಳ ಭೂತ ಸಂಭ್ರಮವ ನುಂಗುವುದು ಸಂಭಾವ್ಯ ಬಾಂಧವ್ಯಗಳು ಬೆಸೆದು ಬಣ್ಣಗಳು ಮೇಳೈಸಿ ಬದುಕು ರಂಗಾಗಲಿ ಆತಂಕ ಬದಿಗಿಟ್ಟು ನಗುವೇ ಒಳಗುಟ್ಟು ಬಾಳು ಬೆಳದಿಂಗಳಾಗಲಿ..             ಶೈಲೂ.......

ಕಂಡೆ ನಿನ್ನ ರೂಪ

Image
ಕಂಡೆ ನಿನ್ನ ರೂಪ ************** ಹೀಗೆ ಕಾಡುತಿರಲೆಂತು? ಸರಿಯಬಾರದೆ ಕೊಂಚ ಬೇಡವೇನೆನಗೆ ಏಕಾಂತ ಬರುವೆ ನಡೆ ಕಾಂತ...!!! ನೀನೆದುರಿಗಿದ್ದರೆ ಹೀಗೆ ಸಿಂಗರಗೊಳ್ಳಲಿ ಹೇಗೆ? ನಾಚದೇನು ತನುಮನ? ಹೋಗು ಹೊರಗೆ ಮದನ ಮುಕುರದಲ್ಲಿ ನೀ ಪ್ರಖರ ಕಾಣಲ್ಹೇಗೆನ್ನ ಮೊಗ ಪೂರಾ ಕೃಷ್ಣ ನಿಲ್ಲುನೀ ಬದಿ ಸರಿದು  ಕಾಣಲಿದೆಯೆನ್ನ ಕಣ್ಣ ಮೆರುಗು ಜರಿಯ ಸೀರೆ ಉಡಬೇಕಲ್ಲ ಹೊರಳಿ ನೋಡದಿರು ಮೆಲ್ಲ ಸಿಂಗರಿಸಿ ಬರುವೆ ನಿನ್ನಂಗಳಕೆ ಕೊಂಚ ಅದುಮಿಡು ಬಯಕೆ ಬಳಸಿ ಹಿಡಿದರೇಗೆನ್ನ ಕೊರಳು ಹೆಣೆಯಬೇಕಲ್ಲ ನೀಳ ಹೆರಳು ಮೊಲ್ಲೆ ಮೊಗ್ಗು ಹೆಕ್ಕಿ ತರುವೆ ಮುಡಿಸಲೆನಗೆ ನಿನ್ನೇ ಕರೆವೆ ಧರಿಸಬೇಕಿದೆ ರತ್ನದೊಡ್ಯಾಣ ಬಳಸಿದ ನಡುವ ಬಿಡೋ ಜಾಣ ಕೊರಳ ಮಾಲೆಯಂತಿರಲು ಕರ ಧರಿಸಲ್ಹೇಗೇಳು ಮಣಿಹಾರ ನಾಚಿದೆ ತುಂಟಾಟಕೆ ಮನವು ಸೋತು ಶರಣಾಗಿದೆ ತನುವು ನಿನ್ನೊಡನಾಟ ತಂದಿದೆ ಸುಖ ಬಾಳೆಲ್ಲ ಸವಿ ಜೇನಾಯ್ತೋ ಸಖ ಓಹ್..!! ಇದೇನಿದು ಮರುಳೇ? ಕಂಡದ್ದೆಲ್ಲ ಸವಿಗನಸ ತಿರುಳೇ? ಸದಾ ನಿನ್ನ ಧ್ಯಾನವೇ ಮದನ ಕಂಡೀತೇನದಕೆ ದರ್ಪಣದೆ ವದನ ನಾ ಏನ ಹೇಳಲಿ ಗೋಪಾಲ ಬೀಸಿರುವೆ ನೀ ಪ್ರೇಮದಜಾಲ ಮನದ ಒಳ ಹೊರಗೂ ನೀನೇ ಕಾಣುವೆ ನಾ ಎಲ್ಲೆಡೆ ನಿನ್ನನ್ನೇ             ಶೈಲೂ.....

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

Image
#ಜಡೆಕವನ #ಸೋರುತಿಹುದು_ಮನೆಯ_ಮಾಳಿಗೆ ಸೋರುತಿಹುದು ಮನೆಯ ಮಾಳಿಗೆ ಮಾಳಿಗೆಯಲ್ಲಲ್ಲಲ್ಲಿ ಬಿರುಕು ಬಿಟ್ಟು ಬಿಟ್ಟ ಬಿರುಕಲ್ಲಿ ಮಳೆಯ ನೀರು ನೀರು ಧೋ ಎಂದು ಸೋರಿ ಸೋರಿ ಸೋರಿ ತಾ ನೆನೆದೆಲ್ಲಾ ಒದ್ದೆ ಮುದ್ದೆ ಮುದ್ದೆಯಂತೆ ಮುದುರಿ ಮೂಲೆಯಲಿ ಕುಳಿತು ಕುಳಿತೆ ಮಾಡಲೇನೆಂದು ಚಿಂತಿಸುವ ಚಿಂತೆ ಹತ್ತಿ ಮನಕೆ ಎಲ್ಲವೂ ಘೋರ ಘೋರ ಈ ಬದುಕು ಬಲು ಭಾರ ಭಾರವೆಂದು ಕುಳಿತರಾದೀತೇ ಹೇಳು? ಹೇಳು, ಭರವಸೆಯಲ್ಲಿದೆ ತಾನೇ ಬಾಳು? ಬಾಳಲು ಬೇಕು ಉತ್ಸಾಹ ಮನದಿ ಮನಸ್ಸಿದ್ದರೆ ತಾನೇ ಮಾರ್ಗ ಕೇಳು ಕೇಳು ಧೈರ್ಯದಿಂದ ಎದ್ದು ನಿಲ್ಲು ನಿಲ್ಲದೇ ತಕ್ಷಣ ಕಾರ್ಯತತ್ವರ ಆಗು ಆಗದೇ? ಸರಿಪಡಿಸಲು ಮಾಳಿಗೆ ಮಾಳಿಗೆಗೆ ಕಾಂಕ್ರೀಟ್ ತೇಪೆ ಹಾಕಿ ಹಾಕು ಸಧೃಡ ಮೇಲ್ಮಚ್ಚಿನ ಹೊದಿಕೆ ಹೊದಿಕೆ ಬರುವುದು ಭಾರೀ ಬಾಳಿಕೆ ಬಾಳಿಕೆ ಬರುವುದು ಇನ್ನೆಲ್ಲಿ ಸೋರಿಕೆ? ಸೊರಲಾರದೆಂದೂ ಆ ಮನೆಯ ಮಾಳಿಗೆ             ಶೈಲೂ......

ಸಾಗಿದೆ_ಬದುಕು_ನಿನ್ನ_ಹುಡುಕುತ್ತಾ

Image
#ಸಾಗಿದೆ_ಬದುಕು_ನಿನ್ನ_ಹುಡುಕುತ್ತಾ ******************************** ಹಸಿರು ಬನಸಿರಿಯ ನಡುವೆ ನಾ ಹುಡುಕುತ್ತ ಸಾಗುತ್ತಿರುವೆ ಎಲ್ಲಡಗಿ ಕುಳಿತಿರುವೆ ಮಾಧವ ಏಕೆ ಹೀಗೆ ಕಾಡಿಸುವೆ ಮನವ..!! ನಾ ನಿನ್ನ ಕಾಣದೇ ಅರೆಕ್ಷಣ ಮನ ನಿಲ್ಲದು ಏನೋ ತಲ್ಲಣ ದರುಷನವ ನೀಡು ಪ್ರಭುವೇ ನಾ ನಿನ್ನನ್ನೇ ನಂಬಿರುವೆ..!! ಜೊತೆಗೆ ಹೆಜ್ಜೆ ಹಾಕಿದ ಸಮಯ ನೆನಪು ಬಾರದೇನೋ ಇನಿಯ ಸುತ್ತಿದ್ದೆವಲ್ಲ ಈ ಗಿರಿ ಕಾನನ ಮರೆಯಾದೆ ಎಲ್ಲೀಗ ಕೃಷ್ಣಾ..!! ಒರಗಿ ನಿಂತಿದ್ದೆಯಲ್ಲ ಈ ಮರಕೆ ಕೊಳಲೂದುತ್ತಾ ಕರೆದು ಸರಸಕೆ ಸನಿಹ ಬಂದೊಡನೇ ಆಲಂಗಿಸಿ ಇತ್ತಿದ್ದೆಯಲ್ಲ ಪ್ರೇಮ ಜಗವ ಮರೆಸಿ..!! ಅದೇ ಬಳ್ಳಿಯಲ್ಲಿದ್ದ ಮಲ್ಲಿಗೆ ಮುಡಿಸಿದ್ದೆಯಲ್ಲ ನನ್ನ ಮುಡಿಗೆ ಕೈ ಕೈ ಹಿಡಿದು ಕರೆದು ತಾನು ಅಲೆದಿದ್ದೆವಲ್ಲ  ಈ ಕಾನು..!!! ಇದೇ ದಾರಿಯಲ್ಲೇ ಹೂ ಹಾಸಿ ಕಾದಿದ್ದೆ ನಿನ್ನ ಬರುವ ಬಯಸಿ ಹದವಾಗಿ ಕಾಯಿಸಿದ ನೊರೆಹಾಲು ನಿನಗರ್ಪಿಸಿ ಒತ್ತುತ್ತುದ್ದೆ ಕಾಲು..!! ಸಾರಿ ಹೇಳುತ್ತಿದೆ ನೋಡು ಕಾನನ ನಮ್ಮೊಲವಿನ ಸವಿ ಪ್ರೇಮಕಥನ ತರುಲತೆ ಗಿಳಿ ನವಿಲು ಕೋಕಿಲ ಸಾಕ್ಷಿಯಿದೆ ನಮ್ಮ ಪ್ರೇಮಕೆ ಸಕಲ..!! ಎಲ್ಲ ಮರೆತು ನೀ ಹೊರಟೆಯೆಲ್ಲಿಗೆ? ಸದಾ ನಿನ್ನದೇ ಕನವರಿಕೆಯೆನಗೆ ಮತ್ತದೇ ದಾರಿಯಲಿ ಹೆಜ್ಜೆ ಹಾಕುತ್ತ ಸಾಗಿದೆ ಬದುಕು ನಿನ್ನ ಹುಡುಕುತ್ತ               ಶೈಲೂ......

ಬಾಳ_ದಾರಿಯಲ್ಲಿ_ಒಲವಿನ_ಪ್ರಯಾಣ

Image
#ಬಾಳ_ದಾರಿಯಲ್ಲಿ_ಒಲವಿನ_ಪ್ರಯಾಣ ಬಾಳದಾರಿಯಲಿ ಒಲವಿನ ಪಯಣ ಸರಾಗ ಸಾಗುತ್ತಿದೆ ನಿನ್ನೊಡನೆ ಜೀವನ ಬಾಳ ಬಂಡಿಯ ಚಾಲಕ ನೀ ತಾನೇ ಅನುಸರಿಸಿ ಸಾಗುವೆ ಜೊತೆಗೆನೇ ನನ್ನ ಪಯಣ ನಿನ್ನ ಜೊತೆ ಜೊತೆಗೆ ಸುಭದ್ರ ಬದುಕೆನ್ನೆದು ನಿನ್ನೊಂದಿಗೆ ನೀ ಜೊತೆಗಿರಲಿನ್ನೇತರ ಭಯ ಕ್ಷಣಕ್ಷಣವೂ ಸುಂದರ ಇನಿಯಾ ಬಡತನವಿದ್ದರೇನಂತೆ ಬಾಳಲ್ಲಿ ದುಡಿದು ಗಳಿಸೋಣ ಜೊತೆಯಲ್ಲಿ ಗಂಜಿಯುಂಡರೇನಂತೆ ಬಿಡು ಪ್ರೀತಿಯoಮೃತವ ನೀ ಕೊಡು ಮೋಟಾರಿನಂತೆಯೇ ಈ ಬದುಕು ಪ್ರೀತಿಯ ತೈಲವ ತುಂಬಬೇಕು ಆಗಲೇ ತಾನೇ ಚಲನೆ ಸರಾಗ ನಮ್ಮ ನಡುವಿದ್ದಂತೆ ಅನುರಾಗ ಚಲಿಸಲಿ ಹೀಗೆಯೇ ಬಾಳಬಂಡಿ ಬೆಸೆದಿರಲಿ ಜೊತೆಗೆ ಪ್ರೀತಿಯ ಕೊಂಡಿ ನೀ ನನಗೆ, ನಾನೆಂದೆಂದಿಗೂ ನಿನಗೆ ನಗುತ ಸಾಗೋಣ ಜೊತೆ ಜೊತೆಗೆ            ಶೈಲೂ......

ನೀ ನನ್ನ ಬಾಳ ಚಂದಿರ

Image
ನೀ ನನ್ನ ಬಾಳ ಚಂದಿರ ******************* ಅದೆಂಥ ಪುಳಕ ಕಂದ ನಿನ್ನಪ್ಪುಗೆಯ ಸುಖ ಆ ದೇವನಿತ್ತ ವರವಿದು ನೀನನ್ನ ಬಾಳ ಕನಕ ನಿನ್ನ ಸ್ಪರ್ಶ ವಿತ್ತಿದೆ ಹರ್ಷ ಅದೇನಂಥಾ ಒನಪು ಆ ಜೊಲ್ಲ ಸವಿಜೇನಧಾರೆ ಬದುಕಿಗಿತ್ತಿದೆ ಹುರುಪು ಮುಗ್ಧ ಮುಖದಲ್ಲಿ ಎಂಥಾ ಸೆಳೆದೆಳೆವ ಚೆಲುವು ಆ ಕಣ್ಣಕಾಂತಿಯಲ್ಲೇ ಬೆಳಗುತ್ತಿದೆ ಜೀವನವು ನಿನ್ನ ತೊದಲ್ನುಡಿಯ ಬಾಲಭಾಷೆ ಕೇಳಲೆಷ್ಟು ಚೆಂದ  *ಅಮ್ಮಾ* ಎಂಬ ಆ ಕರೆಗೆ ನಾ ಬೆರಗಾದೆ ಕಂದ ಮುದ್ದುಮಗುವೆ ನಿನ್ನ ನಗುವೆ ಎನ್ನ ಬಾಳಿಗಾಸರೆ ಕರುಳಕುಡಿಯೇ ನಿನ್ನ ನುಡಿಗೆ ಆದೇ ನಾನು ಕೈಸೆರೆ ನೀಬಂದ ಕ್ಷಣದಿಂದ ಈ ಬದುಕು ಎಷ್ಟು ಸುಂದರ ಮುದ್ದುಬಾಲ ಕಂಡ ನೀನೇ ನನ್ನ ಬಾಳ ಚಂದಿರ          ಶೈಲೂ......

ಗುಣಿತಾಕ್ಷರ ಕವನ## ಮ ಕಾರದಲ್ಲಿ ಮಾಧವ

Image
ಗುಣಿತಾಕ್ಷರ ಕವನ##  *ಮ  ಕಾರದಲ್ಲಿ  ಮಾಧವ* ************************ ಮನದಲಿ ನಿಂತ ಮಮತೆಯ ಮೂರ್ತಿ  *ಮಾಧವಾ* ಸದಾ ನಿನದೇ ನೆನಪು ಮಿಡಿವ ಮನದಲಿ  ನೆಲೆನಿಂತವ ನೀನು ಮೀಟುತಿಹೆ ಸುಶ್ರಾವ್ಯದಿ ಹೃದಯ ವೀಣೆಯನು ಮುದ ನೀಡುತಿದೆ ನಿನ್ನ ಮುರಳೀಗಾನ ಮೂಡುತಿದೆ ಮನದಲಿ ನಿನ್ನೊಲವ ಗಾನ ಮೃದು ನುಡಿಗಳಕ್ಕರದ  ಭಾವದಲಿ ಮೆಲ್ಲ ಮೆಲ್ಲನೆ ಜಾರುತಿದೆ ಮನಸು ಮೇಳೈಸಲಿ ನಮ್ಮೀಒಲವ ರಂಗಮಂಚ ಮೈಮರೆತಿರುವೆ ನಿನ್ನನುಭಾವದಲ್ಲೇ ನಾ          ಮೈದೋರು ದೊರೆಯೇ ಮೊಗದ ತುಂಬೆಲ್ಲ ನಸುನಗೆಯ ಭಾವ ಮೋಹನ ನಿನ್ನೀ ಮೋಹಕ ರೂಪದ ಪ್ರಭಾವ ಮೌನ ರೂಪಕವಾದೆ ನಾ ಮರೆತೆಲ್ಲ ಮಾತುಗಳ ಮಂದಿರವಾಯ್ತೆನ್ನೆದೆಯು ನಿನಗಾಗಿ            ಮಹಾ ಮಹಿಮ ಮುನಿಸು ತೋರದೆ             ಬಾರೆನ್ನ ಹೃನ್ಮ0ದಿರಕೆ....          ಶೈಲೂ......

ಪ್ರೇಮ ಖೈದಿ

Image
ಪ್ರೇಮ ಖೈದಿ *********** ನನ್ನೆದೆಯ ಬಾಂದಳಲಿ ತಾರೆ ನೀನು ನಿನ್ನೊಲವ ಬಂಧನದಿ ಖೈದಿ ನಾನು ಮೀಟುತಿರುವೆ ನೀ ನನ್ನ ಮನದ ವೀಣೆ ಮಧುರ ಸುಸ್ವರದ ರಾಗದಾಲಾಪ ನಾನೇ ಎದೆಯ ತಂತಿಯ ನವಿರಾಗಿ ಮೀಟಿ ಮಿಡಿದೆ ಮನವ ನಲಿಸುವ ಪ್ರೇಮರಾಗ ನುಡಿದೆ ಹಚ್ಚಹಸಿರು ವನಸಿರಿಯ ನಡುವೆ ಅರಳಿ ಘಮಿಸುವ ಹೂವಂತೆ ನಲಿವೆ ಬೀಸಿ ಪ್ರೇಮದಬಲೆಯ ಒಲಿಸಿ ತಾನು ಮಕರಂದ ಹೀರಲು ಬಂದ ಭೃಂಗ ನಾನು ಬಾಳ ಬೆಳಗಲು ಬಂದ ಭಾಗ್ಯದೇವತೆ ಕಾಪಿಡುವೆ ಬರದಂತೆ ಯಾವ ಕೊರತೆ ಪ್ರೀತಿ ಮಳೆ ಹನಿಸಿ ಹಸಿರಾಗಿಸಿದೆ ಬಾಳು ಒಲವ ಜೇನಹೊಳೆಯಲ್ಲಿ ಮೀಯುವೆ ತಾಳು ಗುನುಗುತಿದೆ ಮನದಲ್ಲಿ ಒಲವ ಭಾವಗೀತೆ ಪ್ರತಿ ಪದಪದದಲ್ಲೂ ನಿನ್ನೊಲವ ಮಾತೇ ಬಾಳ ಪ್ರತಿ ಪುಟದಲ್ಲೂ ನಿನ್ಹೆಸರ ಬರೆದಿರುವೆ ಎದೆಯಗುಡಿಯಲಿ ಗೆಳತಿ ನೀನೇ ಕುಳಿತಿರುವೆ        ಶೈಲೂ

ವಾತ್ಸಲ್ಯದ _ಮಡಿಲು

Image
#ವಾತ್ಸಲ್ಯದ _ಮಡಿಲು ತಾಯಿಯದು ವಿಶಿಷ್ಟ ಶಕ್ತಿಗಳ ಸಂಗಮ ಪ್ರೀತಿ, ಮಮತೆ ವಾತ್ಸಲ್ಯಗಳ  ಸಂಭ್ರಮ ಕರುಳ ಕುಡಿಯ ಅಕ್ಕರೆಯಿಂದ ಬೆಳೆಸುವತ್ತ ತುಡಿತ, ಅದು ತಾಯಿಯ ಅಸಾಮಾನ್ಯ ಪ್ರೇಮ ಪಶುಪಕ್ಷಿ, ಖಗನಖವೂ ಹೊರತಲ್ಲ ಮಮತೆಗೆ ಗುಟುಕಿತ್ತು ಕಾಪಿಡುವವು ಮನುಜನ ಹಾಗೇ ಹೆಕ್ಕಿತಂದು ಕಸಕಡ್ಡಿ ಕಟ್ಟಿ ಮೆತ್ತನೆಯ ಗೂಡು ಅಕ್ಕರೆಯ ವಾತ್ಸಲ್ಯಾಮೃತವಿತ್ತು  ಕಾವಿಡುವುದು ತತ್ತಿಗೆ          ಶೈಲೂ......

ಭೂ ಸಂರಕ್ಷಣೆ

Image
ಭೂ ಸಂರಕ್ಷಣೆ ************ ಇತ್ತೊಂದು ಕಾಲದಲಿ ಹಸಿರು ಭೂ ಸಂಪತ್ತು ಅಭಿವೃದ್ಧಿಯ ಸೋಗಿನಲಿ ಭೂತಾಯಿಗಿಂದು  ಆಪತ್ತು ಎತ್ತೆತ್ತ ನೋಡಿದರೂ ಇತ್ತು ಹಸಿರು ವನಸಿರಿ ದುರಾಸೆಗೆ ಬಲಿಯಾಗಿ ಮನುಜ ಕಳೆದ ಐಸಿರಿ ನಗರೀಕರಣದ ಮಜಾ ತಂದಿದೆ ಭೂದೇವಿಗೆ ಸಜ ಸ್ವಾರ್ಥ ಲಾಲಸೆಗೆ ಪ್ರತಿಫಲನ ಹೆಚ್ಚಿರುವ ಜಾಗತಿಕ ತಾಪಮಾನ ಬಿಸಿಲ ಝಳಕೆ  ತತ್ತರ ಜನ ಜೀವನ ಅಸ್ತವ್ಯಸ್ತ ವರುಣ ಕೃಪೆಮಾಡಲಿಲ್ಲ ದಹಿಸುತ್ತಿದೆ ಸಮಸ್ತ ಅಂತರ್ಜಲವೂ ಬತ್ತುತ್ತಿದೆ ಕುಡಿವ ನೀರಿಗೆ ಹಾಹಾಕಾರ ಬೆಂದು ಬರಡಾದ ಭೂಮಿ ಹೇಗೆ ಕೊಡುವಳು ಆಹಾರ ಬೆಳೆಯುತ್ತಿದ್ದ ಭೂಮಿಯಲ್ಲಿಂದು ಹೆಜ್ಜೆಜ್ಜೆಗೊಂದು ಕಾರ್ಖಾನೆ ಹಣದಾಸೆಗೆ ಗುರಿಯಾಗಿ ಮನುಜ ಭೂತಾಯಿಯನೇ ಮಾರಿದನೆ.? ತೂಗಿ ತಂಪೀಯುತ್ತಿದ್ದ ಮರದ ಬುಡಕೇ ಹಾಕಿ ಕೊಡಲಿ ಪೆಟ್ಟು ತನ್ನ ಕಾಲ ಬುಡವೇ ಅಗೆದು ಮಾಡಿಕೊಂಡ  ಎಡವಟ್ಟು ಹೆಚ್ಚುತ್ತಿದೆ ಜಗದ ತಾಪಮಾನ ಅರಿವಿನೊರತೆ ಅದಕೆ ಕಾರಣ ಅನಾವೃಷ್ಟಿ ಹಿಡಿಮುಷ್ಠಿಗೆ ಸಿಕ್ಕು' ಬರ' ದ ಬಾಳಿನ ಅನಾವರಣ ಎಚ್ಚೆತ್ತುಕೊಳ್ಳಬೇಕಿದೆ ಮನುಜ.ಬೆಳೆಸಬೇಕಿದೆ ಗಿಡಮರವನ್ನು ಬಿಸಿಲ ಬೇಗೆಗೆ ಬಲಿಯಾಗಿ.ಕಳಚುತ್ತಿದೆ ಪದರ ಓಝೋನು ತಡೆಯಬೇಕು ತಾಪಮಾನ ಸಂರಕ್ಷಿಸಿ ಭೂತಾಯಿ ಹಸಿರನ್ನ ಜೊತೆಜೊತೆಗೇ ನೆಟ್ಟು ಗಿಡವನ್ನ ಹೆಚ್ಚಿಸಬೇಕು ಅಂತರ್ಜಲವನ್ನ               ಶೈಲೂ......

ಮೊದಲ ಮಾವು

Image
ವರ್ಷದ ಮೊದಲ ಮಾವು ********************** ವಸಂತನಾಗಮನಕೆ ಮೆರುಗು ತಳಿರು ಮಾವಿನ ಬೆಡಗು ಹಬ್ಬ ಹರಿದಿನಕೆ ಶುಭ ತೋರಣ ಮಾವು ಬೇವಿನ ಸಂಗಮ ಕಾರಣ ಬಂದನಿವ ಹಣ್ಣುಗಳ ರಾಜ ಹೊಸವರುಷದ ಫಲ ತಾಜಾ ಮಿಡಿಯೋ ಕಾಯೋ ಹಣ್ಣೊ ಬಾಯಲ್ಲಿ ನೀರೂರುವುದು ಸಹಜ ಹಳದಿ ಹಸಿರು ಮಿಶ್ರಿತ ಹಣ್ಣು ಹುಳಿ ಸಿಹಿ ಬೆರೆತರೆ ಬಲುಚೆನ್ನು ಅಪ್ರತಿಮ ರುಚಿ ತಿನ್ನಲು ಸೊಗಸು ಆರೋಗ್ಯಕ್ಕೂ ಹಿತ,ಹಿತಮಿತದೆ ಮೆಲ್ಲಲು ತರತರ ಜಾತಿಯ ಹಣ್ಣು ಮಾವಿನ ಮೇಲೆಯೇ ಎಲ್ಲರ ಕಣ್ಣು ಏನೆಲ್ಲಾ ಖಾದ್ಯ ತರಾವರಿ ತೊಕ್ಕು ಉಪ್ಪಿನಕಾಯಿಗೆ ನೀರೂರಿ ಸೀಕರಣೆ ರಸಾಯನ ಪಾನಕ ಹೋಳಿಗೆ ಸಿಹಿ ಖಾದ್ಯಕ್ಕೂ ನೇಮಕ ಮಾವಿನ ಕಾಯಿ ಜಜ್ಜಿ ಉಪ್ಪುಹಚ್ಚಿ ಖಾರ ಬೆರೆಸಿ ತಿನ್ನಲದೋ ಬಲು ರುಚಿ ಚಿತ್ರಾನ್ನಕ್ಕೂ ಸೈ ಕೋಸಂಬರಿಗೂ ಜೈ ಸೀಸಾರು, ಗೊಜ್ಜು ಮಾವಿನ ಸಾಸಿವೆ ತರ ತರ ಅಡುಗೆಯ ಮಾಡಲು ಬರುವೆ ಮಾವಿನ ಹಣ್ಣೆ ಏನಿದು ನಿನ್ನ ಮಹಿಮೆ ಆಬಾಲವೃದ್ಹರು ಬಲ್ಲರು ನಿನ್ನ ಹಿರಿಮೆ ಬೆಳೆದೆಲ್ಲರ ತಣಿಸಿ ಆಗಲಿ ವೃದ್ಧಿ ಮಾವಿನ ಫಲ ತರಲೆಳೆದು ಸಂವೃದ್ಧಿ                 ಶೈಲೂ.....

ವಿಶ್ವ ಭೂ - ದಿನಾಚರಣೆ

Image
#ಭೂ_ದಿನ ಉಸಿರಿತ್ತು..ಹೊತ್ತ ಭೂತಾಯಿಗೂ ಒಂದು ದಿನ.!! ಮೀಸಲಿಟ್ಟು..ಆಚರಿಸುವುದು ಮನುಜ ನ್ಯಾಯಾನಾ? ಅಸನ - ವಸನವಿತ್ತು ಕಾವಳವಳು ಪ್ರತಿದಿನ ಇಳೆಯ ಹಾಳುಗೆಡವಿ ಮೆರೆದರೆ ಈ ಜನ  ತುತ್ತನ್ನಕ್ಕೂ ಆಹಾಕಾರವಾಗಬಹುದು ಒಂದು ದಿನ..!!            ಶೈಲೂ.....

ಆತ್ಮ ಸಂಗಾತಿ - ಪುಸ್ತಕ

Image
ನನ್ನ ಆತ್ಮ ಸಂಗಾತಿ - ಪುಸ್ತಕ  ******************** ಪುಸ್ತಕಗಳ ಸಂಬಂಧ ಮಸ್ತಕಕೆ ಅನುಬಂಧ ಜ್ಞಾನ ದಾಹವ ತಣಿಸೋ ಅಮೃತ ಕಲಶವೇ ಪುಸ್ತಕ ಬಾಳಿಗೆ ಒಡನಾಡಿಯಿದು ನೋವು.ದುಃಖವ ಮರೆಸಿ ನಿತ್ಯ ರಸದೌತಣವೀವ ಆತ್ಮ ಸಂಗಾತಿ ಪುಸ್ತಕ ಅರಿವಿನ ಹರಿವು ನಿತ್ಯ ಮೌಢ್ಯ ಹರಿಸುತ ಸತ್ಯ ಜ್ಞಾನ.ಸೆಲೆಯ ಮೂಲ ಅಜ್ಞಾನದ ತೆರೆ ನಿರ್ಮೂಲ ನೋವು ನಲಿವಿಗೆ ಗೆಳೆಯ ತುಂಬುತ ಸದಾಶಯ ತಿಳಿಸುತ್ತ  ಅಕ್ಕರದ ತಿಳುಹು ಹೊತ್ತಿಗೆಯ ಮಹತ್ವದರಿವು ಇರಲೆಲ್ಲರಿಗೂ ಪುಸ್ತಕ ಜ್ಞಾನ ತೊಡೆಯುತ್ತ ಮೌಢ್ಯ ಅಜ್ಞಾನ ಮೂಡಲಿ ಸಾಹಿತ್ಯ ಜಿಜ್ಞಾಸೆ ಅದುವೇ ಜ್ಞಾನದ ಪರಿಭಾಷೆ              ಶೈಲೂ....

ಅಕ್ಷಯ ತೃತೀಯ

Image
ಹಲವು ಶುಭಗಳ ಪರ್ವದಿನವಿದುವೆ ವೈಶಾಖ ಶುದ್ಧ ಅಕ್ಷಯ ತದಿಗೆ ದಾನಗಳಿಗೆ ಅತಿ ಮಹತ್ವವೀದಿನ ಫಲಗಳು ಅಕ್ಷಯವಾಗಿಸುವ ಸುದಿನ ವಿಶ್ವವಿಖ್ಯಾತರ ಜನ್ಮಮಹೋತ್ಸವದ ದಿನ ಕ್ಷತ್ರಿಯ ದ್ವೇಷಿ ಪರುಶುರಾಮನ ಜನನ ಜಗಜ್ಯೋತಿ ಬಸವೇಶ್ವರರುದಿಸಿದ ದಿನ ಭರವಸೆಯ ಹೊಸ ಹೊಂಬೆಳಕಿನ ಕಥನ ಬರೆದನಿಂದು ಗಣಪ ವ್ಯಾಸಭಾರತ ಭಗೀರಥನೈತಂದ ಗಂಗೆ ಧುಮ್ಮಿಕ್ಕುತ ಕೃಷ್ಣನೊಲುಮೆಗೆ ವಸ್ತ್ರ ಅಕ್ಷಯವಾಗುತ ಕ್ಷಯಿಸಿತ್ತಧರ್ಮ ಧರ್ಮಕೆ ಜೈ ಎನುತ ಚೈತ್ರದ ಗೌರಿಗಿಂದು ವಿಶೇಷ ಪೂಜಾದಿನ ಅಕ್ಷಯವಾಗುವುದು ಮಂಗಳದ್ರವ್ಯಗಳ ದಾನ ಕೊಟ್ಟವಗೆ ಕೊಟ್ಟದ್ದು ದುಪ್ಪಟ್ಟು ಫಲವಂತೆ ಶುಭಕಾರ್ಯದಾರಂಭ ಶುಭಫಲಪ್ರದವಂತೆ ಅಕ್ಷಯದ ದಿನವಿಂದು ಅರಿಕೆ ಆ ದೇವನಲಿ ಸಕಲ ಉತ್ತಮೊತ್ತಮ ಗುಣವು ಮೈಗೂಡಲಿ ಅಕ್ಷಯ ಸಿರಿ ಸಂಪತ್ತಿನೊಡನೆ ಬಾಳಿನಲಿ ಮೌಢ್ಯ ತೊರೆದು ವಿದ್ಯಾಬುದ್ಧಿ ಅಕ್ಷಯವಾಗಲಿ           ಶೈಲೂ......

ಬೆಳದಿಂಗಳ ರಾತ್ರಿಯಲ್ಲಿ ಮೇಘಗಳ ಪ್ರೇಮ ಸಂದೇಶ

Image
ಬೆಳದಿಂಗಳ ರಾತ್ರಿಯಲ್ಲಿ ಮೇಘಗಳ ಪ್ರೇಮ ಸಂದೇಶ ಅಂಬರದಲ್ಲಿ ಚಂದಿರನ ಚಂದದ ಒಡ್ಡೋಲಗ ಜೊತೆಗಿಹುದಲ್ಲಿ ಚುಕ್ಕಿಗಳ ಪ್ರೀತಿಯ ಕಾಳಗ ಏನಿರಬಹುದು ಹುಣ್ಣಿಮೆ ರಾತ್ರಿಯ ತಂಪಿನಲಿ ಚಂದಿರ ತಾರಾಗಣಗಳ ಪಿಸುಮಾತಿನ ಹಾಸ ಕಾದಿರುವೆ ನಿನಗಾಗಿ ಕೃಷ್ಣ ಯಮುನಾ ತಟದಿ ತಂಪೆರೆವ ಬೆಳದಿಂಗಳ ಕಣ್ತುಂಬಿಕೊಳ್ಳುತ್ತಾ ತುಂಬಿ ಕಣ್ಣ ತುಂಬಾ ನಿನದೇ ಕನಸು ನೀನೆಂದು ಬರುವೆ ಹೇಳು ನನ್ನ ಜೊತೆಗಾಗಿ ದಟ್ಟೈಸಿವೆ ದಟ್ಟ ಬೆಳ್ಳಿ ಮೋಡಗಳ ಸಾಲು ಸಾಲು  ನೀಲಾಕಾಶದೊಡಲಲ್ಲಿ ಮೇಘದ್ದೇ ಸಿಂಹಪಾಲು ತೇಲಿ ತೇಲಿ ಸಾಗುತಿದೆ ನಿನ್ನನೇ ನೆನಪಿಸುತ್ತಾ ಭಾವುಕಳಾದೆ ತೇಲುವ ಮೇಘಗಳಲಿ ನಿನ್ನ ಹುಡುಕುತ್ತಾ ಈ ಬೆಳದಿಂಗಳ ಈ ಸುಂದರ ನೀರವ ರಾತ್ರಿಯಲಿ ಮೇಘಗಳ ಜೊತೆಗೆ ಒಲವ ಪ್ರೇಮ ಸಂದೇಶ ಕಳುಹಿಸಿರಬಹುದೇ ನನಗಾಗಿ ನನ್ನ ಗೋಪಾಲ ಅದಕ್ಕೇ ನಗುತಿರಬಹುದು ಚಂದಿರನೊಡನೆ ನಕ್ಷತ್ರ ಜಾಲ         ಶೈಲೂ.....

ಸಾಗುತ್ತಿದೆ ನೀರಿನೊಂದಿಗೆ ಮೇನೆ

Image
#ಸಾಗುತ್ತಿದೆ_ನೀರಿನೊಂದಿಗೆ_ಮೇನೇ ಸೋನೆ ಮಳೆಯ ನವಿರಾದ ಸುರಿತ ಮನದಲ್ಲಿ ಹರುಷದ  ಥಕದಿಮಿತ ಸುರಿವ ಮಳೆಯಲ್ಲಿ ನೆನೆವ ಮಜಾ ತಂಗಾಳಿ ಜೋಗುಳದ ನಲ್ಮೆಯ ಸಜಾ ಎಡೆಬಿಡದೆ ಸುರಿವ ಹನಿ ಮಳೆಯಲ್ಲಿ ತಂಪಾದ ಭೂತಾಯಿಯ ಮಡಿಲಲ್ಲಿ ಪಲ್ಲವಿಸಿದೆ ಹೊಸ ಚಿಗುರಿನ ಸಾಲು ಎತ್ತ ನೋಡಿದರತ್ತ ಹಸಿರಿನದೇ ಪಾಲು ಮೆಲ್ಲ ಸುರಿಯುತ್ತ ಮೇಳೈಸಿದೆ ಸೋನೆ  ಸಾಗುತ್ತಿದೆ ನೀರಿನೊಂದಿಗೆ ಬದುಕ ಮೇನೇ ಮುಳುಗದಂತೆ ತೇಲಿಸುವ ಹೊಣೆ ನಮ್ಮದು ಸಾಮರಸ್ಯದ ಬದುಕ ಸಾಗಿಸುವ ಗುರಿ ನಮ್ಮದು              ಶೈಲೂ....

ರೇಖಾಚಿತ್ರ

Image
ರೇಖಾಚಿತ್ರ ********** ರೇಖೆಯಲ್ಲೇ  ಭಾವತುಂಬಿ ಅಮ್ಮ ಮಗಳ ಜುಗಲ್ಬಂದಿ ಎದೆಗಪ್ಪಿದಂತೆ ಚಿತ್ರ ಸಚಿತ್ರ  ಈ  ರೇಖಾಚಿತ್ರ ಗಲ್ಲಕಾನಿಸಿ  ತಲೆಯ ಎದೆಭಾರವನಿಳಿಸುವಂತೆ ಅಪ್ಪಿ ಎದೆಗೆ ಆಸ್ಥೆಯಿಂದ ನೋವ ಮರೆಸೋ ತಾಯಿಯಂತೆ ನೋಡಲಿದು  ಸರಳ ಸುಂದರ ಭಾವನೆಗಳ ಮಹಾಪೂರ ಒಂದೇ ಎಳೆಯ ವಿಸ್ಮಯ ನೆಟ್ಟನೋಟ ತನ್ಮಯ ಮುಚ್ಚಿದೆವೆಗಳಲ್ಲಿ ಸಾವಿರಾರು ಅರ್ಥತುಂಬಿ ಮನವ ಸೆಳೆದ ಕಲಾಕಾರ ನಮನವಿದೋ ಹೃದಯತುಂಬಿ       ಶೈಲೂ.....

ಬಸವೇಶ್ವರ

Image
ಜಗಜ್ಯೋತಿ ಬಸವೇಶ್ವರ ******************** ಇವ ಮಹಾನ್ಚೇತನ ಯುಗಪುರುಷ ಕಾಯಕದಲ್ಲೇ ಕೈಲಾಸವ ಕಂಡವ ಧೀಮಂತನಿವ ಅತಿ ಕರುಣೆಯ ಮನ ಕಂದಾಚಾರ, ಮೌಢ್ಯಗಳ ಬದಿಗೊತ್ತಿ ಸಾಮಾಜಿಕ ಅಸಮಾನತೆಗೆ ಮುಕ್ತಿ ಮಾನವತಾವಾದಕ್ಕೆ ಇವನೇ ಸೂಕ್ತಿ ಪ್ರತಿಪಾದಕನಿವ ಮಾನವ ಹಕ್ಕುಗಳಿಗೆ ದಾರಿದೀಪನಿವ ಅತಿ ದೀನ ದಲಿತರಿಗೆ ಸಮಾನತೆಯಿತ್ತ ಮಹಿಳಾ ಸಾಧಕರಿಗೆ ಅನುಭವ ಮಂಟಪದ ರೂವಾರಿ ತೋರಿದನಿವ ಭಕ್ತಿಮಾರ್ಗಕ್ಕೆ ದಾರಿ ಸರಳತೆಗಿವ ಜಗತ್ತಿಗೇ ಮಾದರಿ ಜಾತಿಯಿಲ್ಲ,ಭಕ್ತರದ್ದೊಂದೇ ಜಾತಿ ಎಂದ ದಯೆಯೊಂದೇ ಧರ್ಮಕ್ಕೆ ಮೂಲವೆಂದ ಸಕಲ ಜೀವರಲಿ ಶಿವ ನೆಲೆಸಿಹನೆಂದ ಆ ದೇವನಿತ್ತ ಕೊಡುಗೆ ಈ ಭುವಿಗೆ ದೇವನಂತೆಯೇ ಕಂಡನಿವ ಅರಿತವರಿಗೆ ಬಸವ ನೀನೇ ಹೊಂಬೆಳಕು ಈ ಜಗತ್ತಿಗೆ             ಶೈಲೂ......

ಅದೇನಿಂತು ನಾಚಿಕೆ?

Image
ಅದೇನಿಂತು ನಾಚಿಕೆ ***************** ಅದೇನಿಂತು ನಾಚಿಕೆ ಗೆಳತಿ ನೀ.ಸೌಂದರ್ಯದ ಒಡತಿ ಮುಚ್ಚಿದ್ದೇಕೆ ಅರೆಬರೆ ಕಣ್ಣು ನೀನೊಂದುಸವಿಯಾದ ಹಣ್ಣು ಆಹಾ ಕೆಂಪಿನ ಚಂದದ ತುಟಿ ಅಡಗಿದ್ದೇಕಲ್ಲಿ ದಾಳಿಂಬೆ ಕಾಳು ಸೇಬನ್ನೂ ನಾಚಿಸುವ ಕದಪು ಹೆಣ್ಣೇ ಏಕಿಂತು ವೈಯ್ಯಾರ ಒನಪು ಕಾಮನ ಬಿಲ್ಲಂತೆ ತೀಡಿದ ಹುಬ್ಬು ಚಂದ್ರಕಾಂತಿಯೂ ನಿನ್ನೆದುರು ಮಬ್ಬು ಅರೆಬಿರಿದ ತುಟಿಯ ಮಾಸದ ನಗು ಮರೆಯಲಾರೆ ಗೆಳತಿ ಸದಾನಿನ್ನದೆ ಗುಂಗು ಮೇಘಮಾಲೆಯೇನು ನಿನ್ನ ಹೆರಳು ತೂಗಾಡುವ ಚೂಪು ಮುಂಗುರುಳು ಆಹಾ ಅದೇನಂತ ನಾಚಿಕದದ್ಭುತ ನಸು ನಾಚಿಕೆಯಲೇ ಇತ್ತೆಯೇನು ಸಮ್ಮತ ಮಲ್ಲೆ ಮುಡಿದ ಮನಸೆಳೆದ ನಲ್ಲೆ ನೀನಾರ ಕುಂಚದ ಕಲೆಯ ಬಲೆ ಮನಸೆಳೆಯಲೇ ಕಡೆದನೇನು ಚತುರ ಸೆರೆಯಾದೆ ನಾ ನಿನ್ನೊಲವೇ ಮಧುರ           ಶೈಲೂ.....

ನಮಿಪೆ ಗಜಾನನ

Image
                       ನಮಿಪೆ ಗಜಾನನ                         ************                       ನಮಿಪೆ ಗಜಾನನ                       ಹೇ ಸುಲಭ ಸಾಧನ                       ಸನ್ಮಾರ್ಗವ ತೋರಿ                       ಸನ್ಮತಿಯಿತ್ತು ಸಲಹೆನ್ನ                       ಪ್ರಥಮ ಪೂಜೆಗೆ ಒಲಿವೆ                       ವಿಘ್ನಗಳ ಹರಿಸುವೆ                       ಸಕಲ ಶುಭಮತಿಯಿತ್ತು                       ಸುಖದಿಂದ ಪಾಲಿಸುವೆ                       ಗರಿಕೆಯ ಕುಡಿ ನೀಡೇ                       ನಿನ್ನ ಗಮನ ಎನ್ನ ಕಡೆ                      ಮೊದಕಗಳ ಅರ್ಪಿಸಲು                      ಹರಿಸುವೆ ಎಲ್ಲ ಭಿಡೆ                       ಕಬ್ಬು ರಸಬಾಳೆ ಬೆಲ್ಲ                       ಭಕ್ತಿಯಲಿ ಅರ್ಪಿಸುವೆ                       ನೀಡು ವಿದ್ಯಾ ವಿನಯ                       ತಪ್ಪದೇ ನಿನಗೆ ಒಪ್ಪಿಸುವೆ                                   ಶೈಲೂ.......