ಅಕ್ಷಯ ತೃತೀಯ

ಹಲವು ಶುಭಗಳ ಪರ್ವದಿನವಿದುವೆ
ವೈಶಾಖ ಶುದ್ಧ ಅಕ್ಷಯ ತದಿಗೆ
ದಾನಗಳಿಗೆ ಅತಿ ಮಹತ್ವವೀದಿನ
ಫಲಗಳು ಅಕ್ಷಯವಾಗಿಸುವ ಸುದಿನ

ವಿಶ್ವವಿಖ್ಯಾತರ ಜನ್ಮಮಹೋತ್ಸವದ ದಿನ
ಕ್ಷತ್ರಿಯ ದ್ವೇಷಿ ಪರುಶುರಾಮನ ಜನನ
ಜಗಜ್ಯೋತಿ ಬಸವೇಶ್ವರರುದಿಸಿದ ದಿನ
ಭರವಸೆಯ ಹೊಸ ಹೊಂಬೆಳಕಿನ ಕಥನ

ಬರೆದನಿಂದು ಗಣಪ ವ್ಯಾಸಭಾರತ
ಭಗೀರಥನೈತಂದ ಗಂಗೆ ಧುಮ್ಮಿಕ್ಕುತ
ಕೃಷ್ಣನೊಲುಮೆಗೆ ವಸ್ತ್ರ ಅಕ್ಷಯವಾಗುತ
ಕ್ಷಯಿಸಿತ್ತಧರ್ಮ ಧರ್ಮಕೆ ಜೈ ಎನುತ

ಚೈತ್ರದ ಗೌರಿಗಿಂದು ವಿಶೇಷ ಪೂಜಾದಿನ
ಅಕ್ಷಯವಾಗುವುದು ಮಂಗಳದ್ರವ್ಯಗಳ ದಾನ
ಕೊಟ್ಟವಗೆ ಕೊಟ್ಟದ್ದು ದುಪ್ಪಟ್ಟು ಫಲವಂತೆ
ಶುಭಕಾರ್ಯದಾರಂಭ ಶುಭಫಲಪ್ರದವಂತೆ

ಅಕ್ಷಯದ ದಿನವಿಂದು ಅರಿಕೆ ಆ ದೇವನಲಿ
ಸಕಲ ಉತ್ತಮೊತ್ತಮ ಗುಣವು ಮೈಗೂಡಲಿ
ಅಕ್ಷಯ ಸಿರಿ ಸಂಪತ್ತಿನೊಡನೆ ಬಾಳಿನಲಿ
ಮೌಢ್ಯ ತೊರೆದು ವಿದ್ಯಾಬುದ್ಧಿ ಅಕ್ಷಯವಾಗಲಿ

          ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ