ನಮಿಪೆ ಗಜಾನನ
ಹೇ ಸುಲಭ ಸಾಧನ
ಸನ್ಮಾರ್ಗವ ತೋರಿ
ಸನ್ಮತಿಯಿತ್ತು ಸಲಹೆನ್ನ
ಪ್ರಥಮ ಪೂಜೆಗೆ ಒಲಿವೆ
ವಿಘ್ನಗಳ ಹರಿಸುವೆ
ಸಕಲ ಶುಭಮತಿಯಿತ್ತು
ಸುಖದಿಂದ ಪಾಲಿಸುವೆ
ಗರಿಕೆಯ ಕುಡಿ ನೀಡೇ
ನಿನ್ನ ಗಮನ ಎನ್ನ ಕಡೆ
ಮೊದಕಗಳ ಅರ್ಪಿಸಲು
ಹರಿಸುವೆ ಎಲ್ಲ ಭಿಡೆ
ಕಬ್ಬು ರಸಬಾಳೆ ಬೆಲ್ಲ
ಭಕ್ತಿಯಲಿ ಅರ್ಪಿಸುವೆ
ನೀಡು ವಿದ್ಯಾ ವಿನಯ
ತಪ್ಪದೇ ನಿನಗೆ ಒಪ್ಪಿಸುವೆ
ಶೈಲೂ.......
Comments
Post a Comment