ಬೆಳದಿಂಗಳ ರಾತ್ರಿಯಲ್ಲಿ ಮೇಘಗಳ ಪ್ರೇಮ ಸಂದೇಶ

ಬೆಳದಿಂಗಳ ರಾತ್ರಿಯಲ್ಲಿ ಮೇಘಗಳ ಪ್ರೇಮ ಸಂದೇಶ

ಅಂಬರದಲ್ಲಿ ಚಂದಿರನ ಚಂದದ ಒಡ್ಡೋಲಗ
ಜೊತೆಗಿಹುದಲ್ಲಿ ಚುಕ್ಕಿಗಳ ಪ್ರೀತಿಯ ಕಾಳಗ
ಏನಿರಬಹುದು ಹುಣ್ಣಿಮೆ ರಾತ್ರಿಯ ತಂಪಿನಲಿ
ಚಂದಿರ ತಾರಾಗಣಗಳ ಪಿಸುಮಾತಿನ ಹಾಸ

ಕಾದಿರುವೆ ನಿನಗಾಗಿ ಕೃಷ್ಣ ಯಮುನಾ ತಟದಿ
ತಂಪೆರೆವ ಬೆಳದಿಂಗಳ ಕಣ್ತುಂಬಿಕೊಳ್ಳುತ್ತಾ
ತುಂಬಿ ಕಣ್ಣ ತುಂಬಾ ನಿನದೇ ಕನಸು
ನೀನೆಂದು ಬರುವೆ ಹೇಳು ನನ್ನ ಜೊತೆಗಾಗಿ

ದಟ್ಟೈಸಿವೆ ದಟ್ಟ ಬೆಳ್ಳಿ ಮೋಡಗಳ ಸಾಲು ಸಾಲು
 ನೀಲಾಕಾಶದೊಡಲಲ್ಲಿ ಮೇಘದ್ದೇ ಸಿಂಹಪಾಲು
ತೇಲಿ ತೇಲಿ ಸಾಗುತಿದೆ ನಿನ್ನನೇ ನೆನಪಿಸುತ್ತಾ
ಭಾವುಕಳಾದೆ ತೇಲುವ ಮೇಘಗಳಲಿ ನಿನ್ನ ಹುಡುಕುತ್ತಾ

ಈ ಬೆಳದಿಂಗಳ ಈ ಸುಂದರ ನೀರವ ರಾತ್ರಿಯಲಿ
ಮೇಘಗಳ ಜೊತೆಗೆ ಒಲವ ಪ್ರೇಮ ಸಂದೇಶ
ಕಳುಹಿಸಿರಬಹುದೇ ನನಗಾಗಿ ನನ್ನ ಗೋಪಾಲ
ಅದಕ್ಕೇ ನಗುತಿರಬಹುದು ಚಂದಿರನೊಡನೆ ನಕ್ಷತ್ರ ಜಾಲ

        ಶೈಲೂ.....

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ