ಮೊದಲ ಮಾವು

ವರ್ಷದ ಮೊದಲ ಮಾವು
**********************

ವಸಂತನಾಗಮನಕೆ ಮೆರುಗು
ತಳಿರು ಮಾವಿನ ಬೆಡಗು
ಹಬ್ಬ ಹರಿದಿನಕೆ ಶುಭ ತೋರಣ
ಮಾವು ಬೇವಿನ ಸಂಗಮ ಕಾರಣ

ಬಂದನಿವ ಹಣ್ಣುಗಳ ರಾಜ
ಹೊಸವರುಷದ ಫಲ ತಾಜಾ
ಮಿಡಿಯೋ ಕಾಯೋ ಹಣ್ಣೊ
ಬಾಯಲ್ಲಿ ನೀರೂರುವುದು ಸಹಜ

ಹಳದಿ ಹಸಿರು ಮಿಶ್ರಿತ ಹಣ್ಣು
ಹುಳಿ ಸಿಹಿ ಬೆರೆತರೆ ಬಲುಚೆನ್ನು
ಅಪ್ರತಿಮ ರುಚಿ ತಿನ್ನಲು ಸೊಗಸು
ಆರೋಗ್ಯಕ್ಕೂ ಹಿತ,ಹಿತಮಿತದೆ ಮೆಲ್ಲಲು

ತರತರ ಜಾತಿಯ ಹಣ್ಣು
ಮಾವಿನ ಮೇಲೆಯೇ ಎಲ್ಲರ ಕಣ್ಣು
ಏನೆಲ್ಲಾ ಖಾದ್ಯ ತರಾವರಿ
ತೊಕ್ಕು ಉಪ್ಪಿನಕಾಯಿಗೆ ನೀರೂರಿ

ಸೀಕರಣೆ ರಸಾಯನ ಪಾನಕ
ಹೋಳಿಗೆ ಸಿಹಿ ಖಾದ್ಯಕ್ಕೂ ನೇಮಕ
ಮಾವಿನ ಕಾಯಿ ಜಜ್ಜಿ ಉಪ್ಪುಹಚ್ಚಿ
ಖಾರ ಬೆರೆಸಿ ತಿನ್ನಲದೋ ಬಲು ರುಚಿ

ಚಿತ್ರಾನ್ನಕ್ಕೂ ಸೈ ಕೋಸಂಬರಿಗೂ ಜೈ
ಸೀಸಾರು, ಗೊಜ್ಜು ಮಾವಿನ ಸಾಸಿವೆ
ತರ ತರ ಅಡುಗೆಯ ಮಾಡಲು ಬರುವೆ

ಮಾವಿನ ಹಣ್ಣೆ ಏನಿದು ನಿನ್ನ ಮಹಿಮೆ
ಆಬಾಲವೃದ್ಹರು ಬಲ್ಲರು ನಿನ್ನ ಹಿರಿಮೆ
ಬೆಳೆದೆಲ್ಲರ ತಣಿಸಿ ಆಗಲಿ ವೃದ್ಧಿ
ಮಾವಿನ ಫಲ ತರಲೆಳೆದು ಸಂವೃದ್ಧಿ

                ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು