ರೇಖಾಚಿತ್ರ

ರೇಖಾಚಿತ್ರ
**********

ರೇಖೆಯಲ್ಲೇ  ಭಾವತುಂಬಿ
ಅಮ್ಮ ಮಗಳ ಜುಗಲ್ಬಂದಿ
ಎದೆಗಪ್ಪಿದಂತೆ ಚಿತ್ರ
ಸಚಿತ್ರ  ಈ  ರೇಖಾಚಿತ್ರ

ಗಲ್ಲಕಾನಿಸಿ  ತಲೆಯ
ಎದೆಭಾರವನಿಳಿಸುವಂತೆ
ಅಪ್ಪಿ ಎದೆಗೆ ಆಸ್ಥೆಯಿಂದ
ನೋವ ಮರೆಸೋ ತಾಯಿಯಂತೆ

ನೋಡಲಿದು  ಸರಳ ಸುಂದರ
ಭಾವನೆಗಳ ಮಹಾಪೂರ
ಒಂದೇ ಎಳೆಯ ವಿಸ್ಮಯ
ನೆಟ್ಟನೋಟ ತನ್ಮಯ

ಮುಚ್ಚಿದೆವೆಗಳಲ್ಲಿ
ಸಾವಿರಾರು ಅರ್ಥತುಂಬಿ
ಮನವ ಸೆಳೆದ ಕಲಾಕಾರ
ನಮನವಿದೋ ಹೃದಯತುಂಬಿ

      ಶೈಲೂ.....

Comments

Popular posts from this blog

197 ತವರ ಸೆಳೆತ

343 ಒಗಟಿನ ರೂಪದ.ಚುಟುಕು

353ಅಮ್ಮ