ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

#ಜಡೆಕವನ
#ಸೋರುತಿಹುದು_ಮನೆಯ_ಮಾಳಿಗೆ

ಸೋರುತಿಹುದು ಮನೆಯ ಮಾಳಿಗೆ
ಮಾಳಿಗೆಯಲ್ಲಲ್ಲಲ್ಲಿ ಬಿರುಕು ಬಿಟ್ಟು
ಬಿಟ್ಟ ಬಿರುಕಲ್ಲಿ ಮಳೆಯ ನೀರು
ನೀರು ಧೋ ಎಂದು ಸೋರಿ ಸೋರಿ
ಸೋರಿ ತಾ ನೆನೆದೆಲ್ಲಾ ಒದ್ದೆ ಮುದ್ದೆ
ಮುದ್ದೆಯಂತೆ ಮುದುರಿ ಮೂಲೆಯಲಿ ಕುಳಿತು
ಕುಳಿತೆ ಮಾಡಲೇನೆಂದು ಚಿಂತಿಸುವ
ಚಿಂತೆ ಹತ್ತಿ ಮನಕೆ ಎಲ್ಲವೂ ಘೋರ
ಘೋರ ಈ ಬದುಕು ಬಲು ಭಾರ
ಭಾರವೆಂದು ಕುಳಿತರಾದೀತೇ ಹೇಳು?
ಹೇಳು, ಭರವಸೆಯಲ್ಲಿದೆ ತಾನೇ ಬಾಳು?
ಬಾಳಲು ಬೇಕು ಉತ್ಸಾಹ ಮನದಿ
ಮನಸ್ಸಿದ್ದರೆ ತಾನೇ ಮಾರ್ಗ ಕೇಳು
ಕೇಳು ಧೈರ್ಯದಿಂದ ಎದ್ದು ನಿಲ್ಲು
ನಿಲ್ಲದೇ ತಕ್ಷಣ ಕಾರ್ಯತತ್ವರ ಆಗು
ಆಗದೇ? ಸರಿಪಡಿಸಲು ಮಾಳಿಗೆ
ಮಾಳಿಗೆಗೆ ಕಾಂಕ್ರೀಟ್ ತೇಪೆ ಹಾಕಿ
ಹಾಕು ಸಧೃಡ ಮೇಲ್ಮಚ್ಚಿನ ಹೊದಿಕೆ
ಹೊದಿಕೆ ಬರುವುದು ಭಾರೀ ಬಾಳಿಕೆ
ಬಾಳಿಕೆ ಬರುವುದು ಇನ್ನೆಲ್ಲಿ ಸೋರಿಕೆ?
ಸೊರಲಾರದೆಂದೂ ಆ ಮನೆಯ ಮಾಳಿಗೆ

            ಶೈಲೂ......

Comments

Popular posts from this blog

ನನ್ನ ಕವನಗಳು

80. ಆಶಾವಾದ