ಸಾಗುತ್ತಿದೆ ನೀರಿನೊಂದಿಗೆ ಮೇನೆ



#ಸಾಗುತ್ತಿದೆ_ನೀರಿನೊಂದಿಗೆ_ಮೇನೇ

ಸೋನೆ ಮಳೆಯ ನವಿರಾದ ಸುರಿತ
ಮನದಲ್ಲಿ ಹರುಷದ  ಥಕದಿಮಿತ
ಸುರಿವ ಮಳೆಯಲ್ಲಿ ನೆನೆವ ಮಜಾ
ತಂಗಾಳಿ ಜೋಗುಳದ ನಲ್ಮೆಯ ಸಜಾ

ಎಡೆಬಿಡದೆ ಸುರಿವ ಹನಿ ಮಳೆಯಲ್ಲಿ
ತಂಪಾದ ಭೂತಾಯಿಯ ಮಡಿಲಲ್ಲಿ
ಪಲ್ಲವಿಸಿದೆ ಹೊಸ ಚಿಗುರಿನ ಸಾಲು
ಎತ್ತ ನೋಡಿದರತ್ತ ಹಸಿರಿನದೇ ಪಾಲು

ಮೆಲ್ಲ ಸುರಿಯುತ್ತ ಮೇಳೈಸಿದೆ ಸೋನೆ 
ಸಾಗುತ್ತಿದೆ ನೀರಿನೊಂದಿಗೆ ಬದುಕ ಮೇನೇ
ಮುಳುಗದಂತೆ ತೇಲಿಸುವ ಹೊಣೆ ನಮ್ಮದು
ಸಾಮರಸ್ಯದ ಬದುಕ ಸಾಗಿಸುವ ಗುರಿ ನಮ್ಮದು

             ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ