ಪ್ರೇಮ ಖೈದಿ

ಪ್ರೇಮ ಖೈದಿ
***********

ನನ್ನೆದೆಯ ಬಾಂದಳಲಿ ತಾರೆ ನೀನು
ನಿನ್ನೊಲವ ಬಂಧನದಿ ಖೈದಿ ನಾನು

ಮೀಟುತಿರುವೆ ನೀ ನನ್ನ ಮನದ ವೀಣೆ
ಮಧುರ ಸುಸ್ವರದ ರಾಗದಾಲಾಪ ನಾನೇ
ಎದೆಯ ತಂತಿಯ ನವಿರಾಗಿ ಮೀಟಿ ಮಿಡಿದೆ
ಮನವ ನಲಿಸುವ ಪ್ರೇಮರಾಗ ನುಡಿದೆ

ಹಚ್ಚಹಸಿರು ವನಸಿರಿಯ ನಡುವೆ
ಅರಳಿ ಘಮಿಸುವ ಹೂವಂತೆ ನಲಿವೆ
ಬೀಸಿ ಪ್ರೇಮದಬಲೆಯ ಒಲಿಸಿ ತಾನು
ಮಕರಂದ ಹೀರಲು ಬಂದ ಭೃಂಗ ನಾನು

ಬಾಳ ಬೆಳಗಲು ಬಂದ ಭಾಗ್ಯದೇವತೆ
ಕಾಪಿಡುವೆ ಬರದಂತೆ ಯಾವ ಕೊರತೆ
ಪ್ರೀತಿ ಮಳೆ ಹನಿಸಿ ಹಸಿರಾಗಿಸಿದೆ ಬಾಳು
ಒಲವ ಜೇನಹೊಳೆಯಲ್ಲಿ ಮೀಯುವೆ ತಾಳು

ಗುನುಗುತಿದೆ ಮನದಲ್ಲಿ ಒಲವ ಭಾವಗೀತೆ
ಪ್ರತಿ ಪದಪದದಲ್ಲೂ ನಿನ್ನೊಲವ ಮಾತೇ
ಬಾಳ ಪ್ರತಿ ಪುಟದಲ್ಲೂ ನಿನ್ಹೆಸರ ಬರೆದಿರುವೆ
ಎದೆಯಗುಡಿಯಲಿ ಗೆಳತಿ ನೀನೇ ಕುಳಿತಿರುವೆ

       ಶೈಲೂ

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ