ಭೂ ಸಂರಕ್ಷಣೆ


ಭೂ ಸಂರಕ್ಷಣೆ
************

ಇತ್ತೊಂದು ಕಾಲದಲಿ ಹಸಿರು ಭೂ ಸಂಪತ್ತು
ಅಭಿವೃದ್ಧಿಯ ಸೋಗಿನಲಿ ಭೂತಾಯಿಗಿಂದು  ಆಪತ್ತು

ಎತ್ತೆತ್ತ ನೋಡಿದರೂ ಇತ್ತು ಹಸಿರು ವನಸಿರಿ
ದುರಾಸೆಗೆ ಬಲಿಯಾಗಿ ಮನುಜ ಕಳೆದ ಐಸಿರಿ

ನಗರೀಕರಣದ ಮಜಾ ತಂದಿದೆ ಭೂದೇವಿಗೆ ಸಜ
ಸ್ವಾರ್ಥ ಲಾಲಸೆಗೆ ಪ್ರತಿಫಲನ ಹೆಚ್ಚಿರುವ ಜಾಗತಿಕ ತಾಪಮಾನ

ಬಿಸಿಲ ಝಳಕೆ  ತತ್ತರ ಜನ ಜೀವನ ಅಸ್ತವ್ಯಸ್ತ
ವರುಣ ಕೃಪೆಮಾಡಲಿಲ್ಲ ದಹಿಸುತ್ತಿದೆ ಸಮಸ್ತ

ಅಂತರ್ಜಲವೂ ಬತ್ತುತ್ತಿದೆ ಕುಡಿವ ನೀರಿಗೆ ಹಾಹಾಕಾರ
ಬೆಂದು ಬರಡಾದ ಭೂಮಿ ಹೇಗೆ ಕೊಡುವಳು ಆಹಾರ

ಬೆಳೆಯುತ್ತಿದ್ದ ಭೂಮಿಯಲ್ಲಿಂದು ಹೆಜ್ಜೆಜ್ಜೆಗೊಂದು ಕಾರ್ಖಾನೆ
ಹಣದಾಸೆಗೆ ಗುರಿಯಾಗಿ ಮನುಜ ಭೂತಾಯಿಯನೇ ಮಾರಿದನೆ.?

ತೂಗಿ ತಂಪೀಯುತ್ತಿದ್ದ ಮರದ ಬುಡಕೇ ಹಾಕಿ ಕೊಡಲಿ ಪೆಟ್ಟು
ತನ್ನ ಕಾಲ ಬುಡವೇ ಅಗೆದು ಮಾಡಿಕೊಂಡ  ಎಡವಟ್ಟು

ಹೆಚ್ಚುತ್ತಿದೆ ಜಗದ ತಾಪಮಾನ ಅರಿವಿನೊರತೆ ಅದಕೆ ಕಾರಣ
ಅನಾವೃಷ್ಟಿ ಹಿಡಿಮುಷ್ಠಿಗೆ ಸಿಕ್ಕು' ಬರ' ದ ಬಾಳಿನ ಅನಾವರಣ

ಎಚ್ಚೆತ್ತುಕೊಳ್ಳಬೇಕಿದೆ ಮನುಜ.ಬೆಳೆಸಬೇಕಿದೆ ಗಿಡಮರವನ್ನು
ಬಿಸಿಲ ಬೇಗೆಗೆ ಬಲಿಯಾಗಿ.ಕಳಚುತ್ತಿದೆ ಪದರ ಓಝೋನು

ತಡೆಯಬೇಕು ತಾಪಮಾನ ಸಂರಕ್ಷಿಸಿ ಭೂತಾಯಿ ಹಸಿರನ್ನ
ಜೊತೆಜೊತೆಗೇ ನೆಟ್ಟು ಗಿಡವನ್ನ ಹೆಚ್ಚಿಸಬೇಕು ಅಂತರ್ಜಲವನ್ನ

              ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ