ನೀ ನನ್ನ ಬಾಳ ಚಂದಿರ

ನೀ ನನ್ನ ಬಾಳ ಚಂದಿರ
*******************

ಅದೆಂಥ ಪುಳಕ ಕಂದ ನಿನ್ನಪ್ಪುಗೆಯ ಸುಖ
ಆ ದೇವನಿತ್ತ ವರವಿದು ನೀನನ್ನ ಬಾಳ ಕನಕ

ನಿನ್ನ ಸ್ಪರ್ಶ ವಿತ್ತಿದೆ ಹರ್ಷ ಅದೇನಂಥಾ ಒನಪು
ಆ ಜೊಲ್ಲ ಸವಿಜೇನಧಾರೆ ಬದುಕಿಗಿತ್ತಿದೆ ಹುರುಪು

ಮುಗ್ಧ ಮುಖದಲ್ಲಿ ಎಂಥಾ ಸೆಳೆದೆಳೆವ ಚೆಲುವು
ಆ ಕಣ್ಣಕಾಂತಿಯಲ್ಲೇ ಬೆಳಗುತ್ತಿದೆ ಜೀವನವು

ನಿನ್ನ ತೊದಲ್ನುಡಿಯ ಬಾಲಭಾಷೆ ಕೇಳಲೆಷ್ಟು ಚೆಂದ
 *ಅಮ್ಮಾ* ಎಂಬ ಆ ಕರೆಗೆ ನಾ ಬೆರಗಾದೆ ಕಂದ

ಮುದ್ದುಮಗುವೆ ನಿನ್ನ ನಗುವೆ ಎನ್ನ ಬಾಳಿಗಾಸರೆ
ಕರುಳಕುಡಿಯೇ ನಿನ್ನ ನುಡಿಗೆ ಆದೇ ನಾನು ಕೈಸೆರೆ

ನೀಬಂದ ಕ್ಷಣದಿಂದ ಈ ಬದುಕು ಎಷ್ಟು ಸುಂದರ
ಮುದ್ದುಬಾಲ ಕಂಡ ನೀನೇ ನನ್ನ ಬಾಳ ಚಂದಿರ

         ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ