ಗುಣಿತಾಕ್ಷರ ಕವನ## ಮ ಕಾರದಲ್ಲಿ ಮಾಧವ

ಗುಣಿತಾಕ್ಷರ ಕವನ##

 *ಮ  ಕಾರದಲ್ಲಿ  ಮಾಧವ*
************************

ಮನದಲಿ ನಿಂತ ಮಮತೆಯ ಮೂರ್ತಿ
 *ಮಾಧವಾ* ಸದಾ ನಿನದೇ ನೆನಪು
ಮಿಡಿವ ಮನದಲಿ  ನೆಲೆನಿಂತವ ನೀನು
ಮೀಟುತಿಹೆ ಸುಶ್ರಾವ್ಯದಿ ಹೃದಯ ವೀಣೆಯನು
ಮುದ ನೀಡುತಿದೆ ನಿನ್ನ ಮುರಳೀಗಾನ
ಮೂಡುತಿದೆ ಮನದಲಿ ನಿನ್ನೊಲವ ಗಾನ
ಮೃದು ನುಡಿಗಳಕ್ಕರದ  ಭಾವದಲಿ
ಮೆಲ್ಲ ಮೆಲ್ಲನೆ ಜಾರುತಿದೆ ಮನಸು
ಮೇಳೈಸಲಿ ನಮ್ಮೀಒಲವ ರಂಗಮಂಚ
ಮೈಮರೆತಿರುವೆ ನಿನ್ನನುಭಾವದಲ್ಲೇ ನಾ
         ಮೈದೋರು ದೊರೆಯೇ
ಮೊಗದ ತುಂಬೆಲ್ಲ ನಸುನಗೆಯ ಭಾವ
ಮೋಹನ ನಿನ್ನೀ ಮೋಹಕ ರೂಪದ ಪ್ರಭಾವ
ಮೌನ ರೂಪಕವಾದೆ ನಾ ಮರೆತೆಲ್ಲ ಮಾತುಗಳ
ಮಂದಿರವಾಯ್ತೆನ್ನೆದೆಯು ನಿನಗಾಗಿ
           ಮಹಾ ಮಹಿಮ ಮುನಿಸು ತೋರದೆ 
           ಬಾರೆನ್ನ ಹೃನ್ಮ0ದಿರಕೆ....

         ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು