Posts

Showing posts from August, 2020

327 ನಕ್ಷತ್ರ ಕವಿತೆ

#ನಕ್ಷತ್ರ_ಕವಿತೆ #ಶೀರ್ಷಿಕೆ:-- #ಮುದ್ದು_ಮೊಗದ_ಚೆಲುವನಿಗಾಗಿ_ಕಾದ_ಒಲವು                              ಹೇ                           ಕೇಶವಾ                       ಕಾಯುತಿರುವೆ                 ನಿನಗಾಗಿಯೇ ಬಾ ನಲ್ಲ  ಅಂತರಂಗದೊಳು ನೆಲೆನಿಂತ ಸವಿ ಪ್ರೇಮಭಾವ       ಮುದ್ದುಮೊಗದ ಚೆಲುವನಿಗಾಗಿ ಕಾಯ್ದ          ಒಲವ ರಾಧೇಯ ಮರೆತೆಯೇನು            ಚಾತಕ ಪಕ್ಷಿಯಂತೆ ಹಗಲಿರುಳು                   ನಿನ್ನ ನೆನಪಲ್ಲೇ ಜೀವ            ಸವೆಸುವ ನನ್ನ ನೀಮರೆಯದಿರು          ಕಾಣದೇನೆ ಮೊಗವ ಬೇಯುತಿರುವೆ       ಬಳಿ ಬಾ ಒಲವೇ ನಿನಗಾಗೆ ಕಾಯುತ್ತಿರುವೆ ಜೀವನಿಲ್ಲದೋ ಮಾಧವಾ ಬಳಿ ಬಾ ಉಳಿಸು ನನ್ನ                ಚಂದ್ರನ ಮೊಗದ ಚೆಲುವಾ                   ನೊರೆಹಾಲ ತಂದಿರುವೆ                        ಸವಿಯಲು ಬಾ                             ಬೇಗನೇ                                 ನೀ         ಶೈಲೂ.......

326 ಸ್ವಸ್ತಿಕ್_ಕವನ

Image
#ಸ್ವಸ್ತಿಕ್_ಕವನ ಮುತ್ತೈದೆ ಹೆಣ್ಣಿಗೆ ಐದು             ಮುತ್ತುಗಳೇ ಭೂಷಣ ಹಣೆಗೆ ನಗುವ             ಸಿಂಧೂರ                         ಚೆಲುವ.            ಕೈಯಲ್ಲಿ                         ಅಂದದ              ಗಾಜಿನ                          ಹಸಿರು             ಬಳೆಯು ಬಾಲೆಯ ಎಳೆ ಕಿವಿಗೆ ಹೊಳೆವ ಮುತ್ತಿನ ಓಲೆ ಮದುವಣಗಿತ್ತಿಯ ಚೆಲುವ ಪಾದಕೆ ಬೆಳ್ಳಿಯ ಕಾಲಿನ.            ಉಂಗುರ ಸಿರಿಯು.          ಸಂಪಿಗೆ ಮೂಗಿಗೆ.         ಹೊಳೆವ ಮೂಗುತಿ.        ಚೆಲುವ ಮುದ್ದು ಕೊರಳಿಗೆ ನಲ್ಲ ಕಟ್ಟಿದನು          ಶೋಭಿಪ ಮಾಂಗಲ್ಯ ಸಿರಿಯು          ಶೈಲಜಾ ರಮೇಶ್

325 ಶಾರದ

Image
#ಶಾರದ ವೀಣಾಪಾಣಿಯಿವಳು ಬ್ರಹ್ಮನ ರಾಣಿ ಅಕ್ಷಮಾಲಾ ಪುಸ್ತಕ ವೀಣಾಧಾರಿಣಿ ವಿದ್ಯೆಯಿತ್ತು ಪಾಲಿಸೆ ವಿದ್ಯಾದಾಯಿನಿ ಸಕಲರ ಪೊರೆಯಮ್ಮ ಬುದ್ಧಿಶಿರೋಮಣಿ ಶುಭ್ರವಸ್ತ್ರಾನ್ವಿತೆ  ಶುಭ್ರರೂಪಧರೆ ಶ್ವೇತಕಮಲದಲಿ ವಾಸಿಪ ಮಧುರೆ ಹಂಸವಾಹಿನಿ ಮಾತೇ ಕಾಮಿತದಾಯಿನಿ ನೀಡಮ್ಮ ಶುಭಮತಿ ವಿದ್ಯಾಪ್ರದಾಯಿನಿ ಸಿದ್ಧಿ ಶಿರೋಮಣಿ ಬುದ್ಧಿಪ್ರಕಾಶಿನಿ ತ್ರೈಲೋಕ್ಯ ಪೂಜಿತೇ ಪ್ರಸನ್ನ ವದನೆ ಜಯತು ಸರಸ್ವತಿ ಸುರಸ ಅಮೃತವಾಣಿ ಸದ್ಭುದ್ಧಿ ನೀಡಮ್ಮ ವರವಿದ್ಯಾಭೂಷಿಣಿ          ಶೈಲೂ.....

324 ನಮ್ಮ ಊರು ನಮ್ಮ ಹೆಮ್ಮೆ

Image
#ನಮ್ಮ_ಊರು_ನಮ್ಮ ಹೆಮ್ಮೆ ನಮ್ಮ ಊರು ಬೆಂಗಳೂರು ವಿವಿಧತೆಗಳ ತವರೂರು ಪ್ರಪಂಚದ ನಾನಾ ತಾಣಗಳ ಜನಜಂಗುಳಿಗುಂಟಿಲ್ಲಿ ನೆಲೆ ಕೆಂಪೇಗೌಡರ ಬೆಂದಕಾಳೂರು ಕರ್ನಾಟಕದ ರಾಜಧಾನಿ ನನ್ನ ತವರು ಸಿಲಿಕಾನ್ ಸಿಟಿಎಂಬ ಹೆಸರು ತಂತ್ರಜ್ಞಾನದಲ್ಲಿ ಮೇರು ನಗರ ದೇವತೆಯಿಲ್ಲಿ ಅಣ್ಣಮ್ಮ ಜನತೆಯ ಸದಾ ಕಾಪಿಡುವಳಮ್ಮ ಅವಳ ಜೊತೆಗಿದೆ ಸಕಲ ದೇವಗಣ ನಿರಂತರ ರಕ್ಷಣೆಯಲ್ಲೇ ಮನ ಹಳ್ಳಿಯ ಸೊಗಡಿನ ಜಾತ್ರೆಯಿದೆ ಬಸವನ ಕಡಲೆಕಾಯಿ ಪರಿಷೆ ಬೃಹತ್ ಬಸವನ ಜೊತೆ ಗಣಪ ನಂಬಿಬಂದವರನ್ನೆಲ್ಲ ರಕ್ಷಿಪ ಸಂಕ್ರಾಂತಿಯ ಬೆರಗಿಗಿಲ್ಲಿ ಸಾಕ್ಷಿ ಗವಿ ಗಂಗಾಧರೇಶ್ವರ ದೇಗುಲ ಸ್ವಾಮಿ, ಭಕ್ತನ ಪ್ರೀತಿಗಿಲ್ಲಿ ಸಾಕ್ಷಿ ರಾಮಾನಂಜನೆಯ ಗುಡ್ಡ ವಿಶಾಲ ಉದ್ಯಾನದ ಜೀವಂತಿಕೆ ವಿಖ್ಯಾತ ಲಾಲ್ಬಾಗ್ ಕಬ್ಬನ್ಪಾರ್ಕ್ ವ್ಯಾಪಾರೋದ್ಯಮಕೇ ಹೆಸರು ಸಾಂಸ್ಕೃತಿಕತೆಗೂ  ಉಸಿರು ಇಲ್ಲಿ ಇಲ್ಲವೆಂಬುದೇ ಇಲ್ಲ ಪ್ರೀತಿಗೂ ಸೈ ದ್ವೇಷಕ್ಕೂ ಜೈ ಆಚಾರ ವಿಚಾರಕ್ಕಿದೆ ತಾವು ಅನೈತಿಕತೆ ಅನಾಚಾರದ ಟಾವು ವಿಸ್ಮಯದ ಭ್ರಮಾಲೋಕ ವಿಳಾಸ ಜೀವನಕೆ ನಾಕ ಜೊತೆಗಿದೆ ವಿವಿಧ ಪ್ರಾಂತ್ಯಗಳ ಹೆಸರಾಂತ ಬಗೆಬಗೆಯ ನಳಪಾಕ ಜಗವ ಸುತ್ತದಿದ್ದರೂ ಸರಿ ಇಲ್ಲೇ ಇದೆ ಸರ್ವ ಜಗದ ಸಿರಿ ಇದು ನನ್ನ ಮೆಚ್ಚಿನ ತವರೂರು ನನ್ನ ಹೆಮ್ಮೆಯ ಬೆಂಗಳೂರು    ಶೈಲಜಾ ರಮೇಶ್

322 ಹನಿಗವನ ಮುತ್ತಿನಾರಾತಿ

Image
#ಹನಿಗವನ #ಮುತ್ತಿನಾರತಿ ತನ್ನವರೆಲ್ಲರ ತೊರೆದು ತಾಯ್ನಾಡಿನ ಸೇವೆಯೇ ಹಿರಿದು ಎಂದೆನ್ನುತ ಅರಿಗಳ ತರಿದು ಜಯತಂದ ಯೋಧರಿಗೆ ಮುತ್ತಿನಾರಾತಿ ಪ್ರಾಣದ ಹಂಗನು ತೊರೆದು ಚಳಿ ಗಾಳಿ ಮಳೆಯೆನ್ನದೆ ನೆನೆದು ಗಡಿಗಳಲ್ಲೇ ವೈರಿಗಳ ಸೆದೆಬಡಿದು ತಾಯ್ನಾಡನು ರಕ್ಷಿಸಿದರಿಗೆ ಮುತ್ತಿನಾರಾತಿ ಡಾ: B.N. ಶೈಲಜಾ ರಮೇಶ್

320 ಭೂರಮೇಯ ಶೃಂಗಾರ

Image
#ಶೀರ್ಷಿಕೆ #ಹಸಿರ_ಹೊದಿಕೆಯಲಿ_ಭೂರಮೆಯ_ಶೃಂಗಾರ ಮೇಳೈಸಿದೆ ಎಲ್ಲೆಲ್ಲೂ ಮುಂಗಾರುಮಳೆ ತಣಿದು ನಲಿದಳು ಬಾಯಾರಿದ್ದ ಇಳೆ ಮಳೆಯ ಜಳಕದಿ ಮಿಂದೆದ್ದ ಭೂಮಿ ಬಂಗಾರ ಹಸಿರ ಹೊದಿಕೆಯು ಭೂರಮೆಯ ಶೃಂಗಾರ ಪ್ರಕೃತಿ ಸೊಬಗ ವಿಸ್ಮಯಕೆ ತಲೆದೂಗಿದೆ ಬಾನು ಗಿಡಮರಗಳನೊಡಲಲೊತ್ತು ನಗುತಿದೆ ಕಾನು ತಲತಲನೆ ಹರಿವ ಜಲತರಂಗ ಸುಂದರ ನೋಡಿದಷ್ಟೂ ತಣಿಯದ ಭೂರಮೆಯ ಸಿಂಗಾರ ಸಸ್ಯ ಶ್ಯಾಮಲೆ ನಸುನಗುತಿಹಳಿಲ್ಲಿ ನೋಡು ಬಣ್ಣನೆಗೆ ನಿಲುಕದ ಸುಂದರ ಸುಶ್ರಾವ್ಯ ಹಾಡು ಸ್ವರ್ಗವೇ ಕೆಳಗಿಳಿದು ಮೇಳೈಸಿತೇ ಧರೆಗೆ ಇಳೆಯ ಸೌಂದರ್ಯವ ಹಚ್ಚಲಾದೀತೇ ಒರೆಗೆ ಎತ್ತ ನೋಡಿದರತ್ತ ಸುತ್ತ ಹಸಿರೇ ಹಸಿರು ತೆಂಗು ಕಂಗು ಬಾಳೆ ಕೃಷಿಕ ಮಿತ್ರರ ಉಸಿರು ತಂಗಾಳಿಗೆ ತಲೆದೂಗುವ ಪಚ್ಚೆಪೈರುಗಳೇ ಚೆನ್ನ ನೀ ನಳನಳಿಸಿದರೆ ತಾನೇ ನಮಗುಣ್ಣಲು ಅನ್ನ         ಶೈಲೂ.....

319 ವ್ಯಂಜನಾಕ್ಷರಗಳ ಕವನ

Image
#ವ್ಯಂಜನಾಕ್ಷರಗಳ ಕವನ ಕಣ್ಣಂಚಲ್ಲೇ ಕಾಡಿ ಕರೆದೆ, ಕಣ್ಣ ಖಡ್ಗದಲ್ಲೇ ಇರಿದೆ ನನ್ನೆದೆಯ ಗಂಡೆಂದರೆ ನೀನೇ ಎಂಬ ಗಮ್ಮತ್ತಲ್ಲಿ ಘಮ್ಮೆನ್ನೊ ಪ್ರೀತಿ ಪರಿಮಳವ ಸೂಸಿದೆ ಚಂದ್ರನಂತಹ ಮೊಗದವನೆ ನೀನು ಛಲವಿಡಿದು ಮರುಳುಮಾಡಿದೆ ನನ್ನ ಜರಿದರೂ ಕೇಳದೆ, ನೀ ಸುರಿಸಿದ ಪ್ರೀತಿ ಝರಿಯಲ್ಲಿ ತೋಯಿಸಿಬಿಟ್ಟೆ ಜ್ಞಾನದ ಕಣ್ಣ ತೆರೆಯಿಸಿಬಿಟ್ಟೆ ಟಪಟಪನೆ ಸುರಿವ ಮಳೆಹನಿಯಲ್ಲಿ ಠಳಾರನೆ ಸುಳಿದ ಸುಳಿಮಿಂಚಲ್ಲಿ ಡಂ ಡಂ ಎನ್ನುವ ಗುಡುಗಿಗೆ ಹೆದರಿ ಢಾಳಾಗಿ ನಾ ನಡುಗುತ್ತಿರುವಾಗ ಕ್ಷಣಮಾತ್ರದಲ್ಲಿ ಅಪ್ಪಿ ಮೈ ಮರೆಸಿದೆ ತಬ್ಬಿನಿಂತ ನಿನ್ನ ತೊಳಲ್ಲಿ ನಾ ಬಂಧಿ ಥಳಥಳನೆ ಹೊಳೆವ ಕಣ್ಣಲ್ಲಿ ನಾ ಕಂಡೆ ದಯನೀಯ ಗುಣವ.... ಚೆಲುವ ಧನ್ಯತೆಯಲಿ ತುಂಬಿ ಬಂತು ಕಣ್ಣು ನಯನದಲಿ ಸುರಿಯಿತು ಪ್ರೇಮಾಶ್ರು ಪಲ್ಲವಿಸಿತಾಗ ಪ್ರೀತಿಯ ಕೊನರು ಫಲಾಫಲದ ನಿರೀಕ್ಷೆ ಎನಗಿಲ್ಲ ಬದುಕು ಬಂದಂತೆ ನಡೆವೆ.. ನಿನ್ನ ಭವ್ಯ ಪ್ರೇಮ ಮಂದಿರದಲಿ ಮಂದಾರದಂತರಳುವೆ ನಾ ಯಜ್ಞ ಮಾಡದೆ ಪಡೆದೆ ನಾ ನಿನ್ನ  "ರಮೇಶ"  ನೀ ನನ್ನ ಬಾಳಿನ ಚಿನ್ನ ಲಕ್ಷ್ಯ ವಿಟ್ಟು  ನಮಿಪೆ ಆ ದೇವಗೆ ವರ ನೀ ತಂದೆ ನನ್ನ ಬಾಳಿಗೆ ಶಾಂತ ಸ್ವಭಾವದ ಗೆಳೆಯ ನೀ ಷರತ್ತುಗಳಿಲ್ಲದ ಪ್ರೇಮವಿತ್ತೆ ಸವಿಗಾನದಂತಿದೆ ಬದುಕು ಹರಸಿ ಕೊಟ್ಟನೇನು ನನ್ನ ಕೃಷ್ಣ ನಿನ್ನ .. ತ ಳಮಳವಿಲ್ಲದೇ ಬದುಕು ಸಾಗಿದೆ ಗುರಿಯೆಡೆಗೆ ಕ್ಷಮಿಸಿಬಿಡು.. ನನ್ನ ಸಣ್ಣಪುಟ್ಟ ದೋಷಗಳ        ಶೈಲಜಾ ರಮೇಶ್

318 ಹೀಗೇಕೆ ಮೌನ

#ಮೌನ_ಮೃದಂಗ ಹೀಗೇಕೆ  ಮೌನ ಮನಸು ಮನಸುಗಳ ನಡುವೆ ಅದೆಲ್ಲಿಂದ ತೂರಿ ಬರುವುದೋ ಸಹಿಸಲಾರದ ಮೌನದ ನೀರವತೆ ಅದಾವ ಮುಲಾಜೂ ಇಲ್ಲದಕೆ ಬೇಕಿಲ್ಲ ಯಾವ ಮಾತಿನ ಗೊಡವೆ ಹ್ಞೂಕರಿಸಿ ಕೂತಿದೆ ಮಾತು ಮರೆತಂತೆ ನಲ್ನುಡಿಯ ನುಡಿಸಲು ಕಹಿ ನೆನಪ ಬಿಸುಡಲು ಕಾತರಿಸಿದ್ದ ಬಾಯಿ ಕೇಳಲು ಆತುರಿಸಿದ್ದ ಕಿವಿಗೆ ಮಂಕು ಬಡಿದಿದೆ ಬೆಳಗುವ ಹಣತೆಯನು ಬಲಿ ತೆಗೆದಂತೆ ದುರುಳ ಭೀಕರ ಗಾಳಿ ಮನದ ಮಾತನು ಅಪೋಷಣಗೈದಿದೆ ನೀರವ ಮೌನ ಮನದ ಚೀತ್ಕಾರವದು ಲೀನವಾಯ್ತು ಗಗನದಿ ದೈನ್ಯತೆಯ ಮೂರ್ತವೆತ್ತ ಮಾತಿನ ಪ್ರಾಣಪಕ್ಷಿ ಲೀನವಾಗಿದೆ  ಮೌನದಲೇ ಬಾರಿಸುತ್ತಿದೆ ಆರ್ದತೆಯಲಿ ಅತಿಘೋರ ಮೌನಮೃದಂಗ ಸಹಿಸಲಾರದ ಬೇನೆಯಿದು ಅಲ್ಲೋಲಕಲ್ಲೋಲ ಅಂತರಂಗ ಮಾತಿಗೂ  ಮೌನಕೂ ಹೀಗೇಕೆ ಅಂತರ ಸೂತ್ರ ಧಾರನ ಕೈಯೊಳಾಡುವ ಮನದ ಭಾವಾಂತರಾಳವನರಿಯಲು ಇರಬೇಕಿತ್ತು ಮೌನಕೆ  ಅಂತಃಕರಣ               ಶೈಲೂ.......

317 ಶಿವಸ್ತುತಿ

Image
ಚಿತ್ರದೊಂದಿಗೆ ಶಿವಸ್ತುತಿ🙏 ಭಸ್ಮವಿಲೇಪಿತ ಚಂದ್ರಮುಕುಟ ಹರ ತ್ರಿಶೂಲ ಢಮರುಗಧಾರಿ ಸದಾಶಿವ ಬಿಲ್ವದಳಪ್ರಿಯ ಜಟಾಜೂಟಧರ ನಾಗಾಭರಣ ಗೌರೀಪ್ರಿಯ ವಲ್ಲಭ ಓಂಕಾರ ಪ್ರಣವ ಮಂತ್ರದಿ ಧ್ಯಾನಿಪೆ ನಿನ್ನನು ಕಾಯೋ ಎಮ್ಮನು ಗಂಗಾಧರ ಶಿವ          ಶೈಲೂ.....

316 ಜಡೆಕವನ ( ಒಂಟಿ ಮನೆ ಒಂಟಿ ಬದುಕು)

Image
#ಜಡೆಕವನ #ಒಂಟಿಮನೆ_ಒಂಟಿಮನಸ್ಸು ಆಹಾ.... ಅದ್ಭುತವೀ ಪ್ರಕೃತಿ ಪ್ರಕೃತಿಯು ವಿಸ್ಮಯಗಳ ತಾಣ ತಾಣವಿದು ಹಸಿರು ಶೃಂಗಗಳ ಮಧ್ಯೆ ಮದ್ಯೆ ಮರಗಿಡಗಳು ಬಾನೆತ್ತರಕ್ಕೆ ಬೆಳೆದು ಬೆಳೆದ ತರುಲತೆಗಳ ಒನಪು ನೋಡು ನೋಡು ಚಂದವೀ ಪ್ರಕೃತಿ ಮಡಿಲು ಮಡಿಲಲ್ಲಿ ಅಲ್ಲೊಂದು ಪುಟ್ಟ ಮನೆ ಮನೆಗೆ ಮುಸುಕಿದೆ ಬಳ್ಳಿಗಳ ಹಂದರ ಹಂದರದೀ ಚಪ್ಪರ ನೋಡಲು ಸುಂದರ ಸುಂದರ ಈ ನಿಸರ್ಗ ಭುವಿಗಿಳಿದಂತೆ ಸಗ್ಗ ಸಗ್ಗದ ಸೊಬಗೆಲ್ಲ ಮಲೆನಾಡಲ್ಲಿ ತುಂಬಿ ತುಂಬಿ ಚೆಲುವ ಎರಕಹೊಯ್ದನೇನೋ ಆ ದೇವ ಆ ದೇವನಗರಿಯಲೊಂದು ಒಂಟಿ ಮನೆ ಒಂಟಿಮನೆಯಲ್ಲಿರಬಹುದೇನೋ ಒಂಟಿಮನಸ್ಸು ಒಂಟಿ ಮನವು ಮಾಡುತ್ತಿರಹುದು ತಪಸ್ಸು ತಪದ ಪುಣ್ಯವೆಲ್ಲ ಸಿಗಲಿ ಈ ಧರೆಗೆ ಧರೆಯ ದೊರೆಯರನ್ನೆಲ್ಲ ಹಚ್ಚಿ ಒರೆಗೆ ಒರೆಗ್ಹಚ್ಚಿದ ಚಿನ್ನದಂತಿರಲಿ ಬದುಕು         ಶೈಲಜಾ ರಮೇಶ್

315 ಲೇಖನ (ಬರಗಾಲದಲಿ ಬರಡಾಯಿತೆ ಬದುಕು ?)

Image
#ಲೇಖನ #ಬರಗಾಲದಲ್ಲಿ_ಬರಡಾಯಿತೇ_ಬದುಕು            #ದುರ್ಭಿಕ್ಷದಲ್ಲಿ_ಅಧಿಕಮಾಸ ಅನ್ನೋದು ನಾಳ್ನುಡಿ.  ಮೊದಲೇ... ಮಳೆ ಬೆಳೆ ಇಲ್ಲದೆ, ಊಟಕ್ಕೂ ಇಲ್ಲದೆ ತಲ್ಲಣಿಸಿ ಹೇಗಪ್ಪಾ ಜೀವನ  ಸಾಗಿಸೋದು ಅನ್ನುವ ಪರಿಸ್ಥಿತಿಯಲ್ಲಿ , ಅಧಿಕಮಾಸ ಬೇರೆ ಬಂದ್ರೆ ಹೇಗಿರುತ್ತೆ ಆ ಸಮಯದ ಮನಸ್ಥಿತಿ ಅನ್ನುವ ಅರ್ಥ ಇರಬಹುದು ಈ ನಾಳ್ನುಡಿಗೆ.         ನಿಜ ಅಲ್ವಾ.?.. ಪ್ರತಿದಿನ ದಿನ ದೂಡೋದೇ ಕಷ್ಟ ಅನ್ನಿಸ್ತಿರುವಾಗ... ಧುತ್ತ0ತ... ಮತ್ತೊಂದು ತಿಂಗಳು ಎದುರು ನಿಂತರೆ.. ಹೇಗಪ್ಪ ನಿಭಾಯಿಸೋದು?      ಆಗ ಈ ಚಿಂತನೆ ತಪ್ಪು ಅನ್ನಿಸಲ್ಲ.           ಇನ್ನೊಂದು ರೀತಿ ವಿಶ್ಲೇಷಿಸಿದರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಧಿಕ ಮಾಸಕ್ಕೆ ವಿಶೇಷ ಪ್ರಾಮುಖ್ಯತೆ. ಅಧಿಕಮಾಸದಲ್ಲಿ ಧಾರ್ಮಿಕ ಕಾರ್ಯಗಳು, ದಾನಧರ್ಮಗಳನ್ನ ಮಾಡಿದರೆ ಅಧಿಕಫಲ.  ಜಪತಪ ಹೋಮ ಹವನಗಳನ್ನ ಮಾಡಿದರೆ ದುಪ್ಪಟ್ಟು ಪುಣ್ಯಪ್ರಾಪ್ತಿ ಅಂತ ಹೇಳ್ತಾರೆ ನಮ್ಮ ಹಿರಿಯರು. ಅಲ್ಲದೆ ಇದನ್ನ ಅವರುಗಳು ಚಾಚೂ ತಪ್ಪದೆ ಪಾಲಿಸ್ಕೊಂಡು ಬಂದಿದ್ದಾರೆ ಕೂಡ.. ಮೊದಲೇ ತಿನ್ನೋದಕ್ಕೂ ಇಲ್ಲದೆ ದುರ್ಭಿಕ್ಷ, ಅದರಲ್ಲಿ ಇಂತಹ ಅಧಿಕಮಾಸ ಬಂದ್ರೆ,  ಈ ಧಾರ್ಮಿಕ ವಿಧಿವಿಧಾನಗಳನ್ನ ಹೇಗೆ ಆಚರಿಸೋದು? ಅದರ ಖರ್ಚು ನಿಭಾಯಿಸುವುದು ಹೇಗೆ?... ಆಗಲೇ ಈ ನಾಳ್ನುಡಿ ಹುಟ್ಟಿರಬೇಕು.! ಈಗಲೂ  ಕಷ್ಟವಿದ್ದಾಗ ಏನಾದರೂ ಖರ್ಚುವೆಚ್ಚಗಳು ದಿಢೀರ್ ಅಂತ ಬಂದಾಗ ಥಟ್ಟನೆ ನೆನಪಾಗೋದು ಈ ನಾಳ್ನುಡಿಯೇ😊            

314 ಲಜ್ಜೆಯೇ ಮನದ ಭಾಷೆ

Image
#ಗಝಲ್ #ವಿಷಯ #ಲಜ್ಜೆಯೇ_ಮನದ_ಭಾಷೆ ಆ ನಿನ್ನ ಹುಸಿನಗುವೇ ಎನ್ನ ಸೆಳೆದಿದೆ ಗೆಳೆಯ ಹೃದಯ ಭಾಷೆಯ ಬಿಚ್ಚಿಟ್ಟು ತಿಳಿಸಿದೆ ಗೆಳೆಯಾ ಒಲವ ನೋಟದೊಳೆನ್ನ ಇಂಚಿಂಚಾಗಿ ಹೊಕ್ಕೆ ಪ್ರೇಮದ ಹೊಳೆಯ ಹೊನಲಾಗಿ ಹರಿಸಿದೆ ಗೆಳೆಯಾ ಬಿತ್ತಿದೆ ಹೊಸ ಆಸೆಯ ಬದುಕು ಹಸನಾಗಿಸಲು ಭರವಸೆಯಿತ್ತು ಬಾಳಿಗೆ ಬೆಳಕು ಹಾಯಿಸಿದೆ ಗೆಳೆಯಾ ಸೋತೆ ನವಿರಾದ ಪ್ರೀತಿಯ ವಚನವನು ಮನ್ನಿಸಿ ಮನವ ಮೆಚ್ಚಿದೆನೆಂದು ಅರುಹಿದೆ ಗೆಳೆಯಾ ಲಜ್ಜೆಯೇ ನನ್ನ ಮನಸ್ಸಿನ ಮಾತು ಅರ್ಥವಾಯಿತೆ? ಶೈಲ ನಿನಗೊಲಿದಳೆಂದು ನಸುನಾಚಿದೆ ಗೆಳೆಯಾ ಡಾ: B.N. ಶೈಲಜಾ ರಮೇಶ್

313 ಶುಭ ಹಾರೈಕೆ

Image
ಹುಟ್ಟುಹಬ್ಬದ ಶುಭಾಶಯಗಳು ಯಶ್ ಅಪ್ಪಿ💐💐💐💐💐 #ಶುಭ_ಹಾರೈಕೆ ಕೊಡಗಿನ ಕಣ್ಮಣಿಗಿಂದು ಜನ್ಮದಿನ ಹಾರೈಸುವೇ ನಲ್ಮೆಯಲಿ ಈ ದಿನ ಯಶದ ಹಾದಿಯಲಿ ತೊಡಕೆಲ್ಲ ಸರಿದು ಜಯದ ಮಾಲೆ ಸಿಗಲಿ ಅನುದಿನ ಮಿಂಚಿನಂತ ಸೊಗಸು ಮಾತಿನ ಗಣಿ ಅಪ್ರತಿಮ ಕಾವ್ಯಕಲೆಗಳ ಖನಿ ಕಲಾದೇಗುಲದ ಹೆಮ್ಮೆಯ ಹೊನ್ನಕಳಸ ಎತ್ತೆತ್ತರಕ್ಕೆ ಬೆಳೆದವರೆಲ್ಲ ನಿನಗೆ ಋಣಿ ಅರಳು ಮಾತಿನ ಕನಸುಗಾರ ಆ ದೈವದಾರೈಕೆಯಿದೆ ನಿನ್ನ ಪರ ಯಶೋಕೀರ್ತಿ ನಿನ್ನದಾಗಲಿ ಸತತ ಸಾಹಿತ್ಯ ದೇವಿ ಕರುಣಿಸಲಿ ವರ ವರ್ಷ ಕಳೆದು ಮತ್ತೆ ತಂದಿದೆ ಹರುಷ ಸುಖ ಜೀವನ ನಿನ್ನದಾಗಲಿ ಪ್ರತಿನಿಮಿಷ ಜನ್ಮದಿನದ ಸಮಯದಲ್ಲಿ ನನ್ನ ಹರಕೆಯು ಯಶವೇ ತುಂಬಿ ನಗುತ ಬಾಳು ನೂರುವರ್ಷ        ಡಾ: B.N. ಶೈಲಜಾ ರಮೇಶ್

312 ಹುಟ್ಟುಹಬ್ಬದ ಶುಭಾಶಯಗಳು

Image

311 ಗಝಲ್

Image
#ಗಝಲ್_ಸ್ಪರ್ಧೆ #ಸಾಗರದ_ಅಲೆಗಳಲ್ಲಿ_ಅಳಿಸದಿರಲಿ_ನಿಂಹೆಸರು ಬರೆಯುತ್ತಿರುವೆ ಆಸ್ಥೆಯಿಂದ ಮರಳಿನಲ್ಲಿ ನಿನ್ಹೆಸರು ಸಾಗರದ ಅಲೆಗಳಲ್ಲಿ ಅಳಿಸದಿರಲಿ ನಿನ್ಹೆಸರು ಮನದಲ್ಲೇ ಗುನುಗುತ್ತಿರುವೆ ಸಹಸ್ತ್ರ ನಾಮದಂತೆ ಕಿವಿಗೊಟ್ಟು ಆಲಿಸು ಗೆಳೆಯ ಕೇಳಿಸಲಿ ನಿನ್ಹೆಸರು ಅಂತರಾಳದಲ್ಲಿ ಎಂದಿಗೂ ಅಳಿಯದ ನೋವತರಂಗ ಸುರಿವ ಕಂಬನಿ ಧಾರೆಯಲ್ಲಿ ತೋಯದಿರಲಿ ನಿನ್ಹೆಸರು ಅಂತರಂಗದಲ್ಲಿ ನೆಲೆಯಾಗಿ ನಿಂತಿರುವೆ ಅಚ್ಚಳಿಯದೆ ಹಚ್ಚ ಹಸಿರಿನಂತೆ ಕಂಗೊಳಿಸುತ್ತಿರಲಿ ನಿನ್ಹೆಸರು ಶೈಲಳಲ್ಲಿ ಅನವರತ ಬೆರೆತಿಹುದು ಪ್ರಿಯನಾಮ ತನುವಳಿದರೂ ಉಳಿವ ಉಸಿರಾಗಲಿ ನಿನ್ಹೆಸರು           ಶೈಲಜಾ ರಮೇಶ್

310 ಪರಿಸರ

Image
#ಪರಿಸರ ಸ್ವರ್ಗವೇ ಧರೆಗಿಳಿದಂತೆ.! ಈ ಭವ್ಯ ಪ್ರಕೃತಿ ಮಾತೇ ನದಿ ನದ ನೆಲ ಜಲ ಸುಂದರ ರಸಋಷಿಯ ಕಾವ್ಯವೀ ಪರಿಸರ.! ಎಲ್ಲೆಲ್ಲಿ ನೋಡಲಿ ಹಸಿರು.! ಪರಿಸರ ನಮ್ಮೆಲ್ಲರ ಉಸಿರು ಬಾನೆತ್ತರಕ್ಕೆ ಚಾಚಿದ ತರುಗಳು.! ಸ್ವಚ್ಛಂದ ಹಾರುವ ಖಗಗಳು.! ಸುತ್ತಲೂ ಗಗನಚುಂಬಿ ಪರ್ವತ.! ತಣ್ಣನೆ ಬೀಸುವ ಮಂದಮಾರುತ ಅದ್ಭುತವೀ ಸೃಷ್ಟಿಯ ಸೊಬಗು ನಿಸರ್ಗ ದೇವತೆಗಿದು ಮೆರುಗು.! ರಕ್ಷಿಸಬೇಕಿದೆ ಹಾಳುಗೆಡವದೇ ಕಾಪಿಡುವ ಹೊಣೆ ನಮ್ಮದೇ.! ಸ್ವಚ್ಛವಿದ್ದರೇ ತಾನೇ ಪರಿಸರ.! ನೆಮ್ಮದಿಯ ಬದುಕಿಗೆ ಆಧಾರ.!         ಶೈಲಜಾ ರಮೇಶ್

309 ರಕ್ಷಾಬಂಧನ

Image
#ಜಡೆಕವನ #ಬಣ್ಣ_ಬಣ್ಣದ_ರಾಖಿ ಬಂದಿತು ರಕ್ಷಾಬಂಧನದ ಹಬ್ಬ ಹಬ್ಬವಿದು ಸೋದರತ್ವ ತಂದಂಥ ತಂದ ನಲ್ಮೆಯ ವಾತ್ಸಲ್ಯ ಬಂಧ ಬಂಧವಿದು ಚಂದದ ರಾಖಿ ಜೊತೆ ಜೊತೆಗೆ ಮಿಳಿತು ಸೋದರಿಯ ಮಮತೆ ಮಮತೆಯಲಿ ಮಿಂದು ವಾತ್ಸಲ್ಯ ಬೆಸೆದು ಬೆಸೆದು ಬಣ್ಣಬಣ್ಣದ ರಾಖಿಯ ಹೊಸೆದು ಹೊಸೆದು ರೇಷ್ಮೆ ನೂಲಿನೆಳೆಯಲ್ಲಿ ಅಲ್ಲಿ ಪೋಣಿಸಿಹುದು ಪ್ರೀತಿಯ ಮುತ್ತುರತ್ನಗಳು ರತ್ನದಂತಹ ಸೋದರನಿಗೆ ಒಳಿತಾಗಲೆಂದು ಒಳಿತಾಗಲಿ ಎಲ್ಲ ಸಹೋದರರಿಗೆ ಎನುತ ಎನುತ ರಕ್ಷಾಬಂಧನದಲಿ ಬಂಧಿಸಿ ಪ್ರೀತಿಯ ಪ್ರೀತಿಯಲ್ಲಿ ಹಾರೈಸುತಿಹಳು ಎಲ್ಲರಿಗೆ ಸಹೋದರಿ ಎಲ್ಲಾ ಸಹೋದರರಿಗೂ ರಕ್ಷಾಬಂಧನದ ಶುಭಾಶಯಗಳು🌹🌹🌹           ಶೈಲಜಾ ರಮೇಶ್.....