326 ಸ್ವಸ್ತಿಕ್_ಕವನ
ಮುತ್ತೈದೆ ಹೆಣ್ಣಿಗೆ ಐದು ಮುತ್ತುಗಳೇ
ಭೂಷಣ ಹಣೆಗೆ ನಗುವ ಸಿಂಧೂರ
ಚೆಲುವ. ಕೈಯಲ್ಲಿ
ಅಂದದ ಗಾಜಿನ
ಹಸಿರು ಬಳೆಯು
ಬಾಲೆಯ ಎಳೆ ಕಿವಿಗೆ ಹೊಳೆವ ಮುತ್ತಿನ ಓಲೆ
ಮದುವಣಗಿತ್ತಿಯ ಚೆಲುವ ಪಾದಕೆ ಬೆಳ್ಳಿಯ
ಕಾಲಿನ. ಉಂಗುರ
ಸಿರಿಯು. ಸಂಪಿಗೆ
ಮೂಗಿಗೆ. ಹೊಳೆವ
ಮೂಗುತಿ. ಚೆಲುವ ಮುದ್ದು ಕೊರಳಿಗೆ ನಲ್ಲ
ಕಟ್ಟಿದನು ಶೋಭಿಪ ಮಾಂಗಲ್ಯ ಸಿರಿಯು
ಶೈಲಜಾ ರಮೇಶ್
Comments
Post a Comment