320 ಭೂರಮೇಯ ಶೃಂಗಾರ

#ಶೀರ್ಷಿಕೆ

#ಹಸಿರ_ಹೊದಿಕೆಯಲಿ_ಭೂರಮೆಯ_ಶೃಂಗಾರ

ಮೇಳೈಸಿದೆ ಎಲ್ಲೆಲ್ಲೂ ಮುಂಗಾರುಮಳೆ
ತಣಿದು ನಲಿದಳು ಬಾಯಾರಿದ್ದ ಇಳೆ
ಮಳೆಯ ಜಳಕದಿ ಮಿಂದೆದ್ದ ಭೂಮಿ ಬಂಗಾರ
ಹಸಿರ ಹೊದಿಕೆಯು ಭೂರಮೆಯ ಶೃಂಗಾರ

ಪ್ರಕೃತಿ ಸೊಬಗ ವಿಸ್ಮಯಕೆ ತಲೆದೂಗಿದೆ ಬಾನು
ಗಿಡಮರಗಳನೊಡಲಲೊತ್ತು ನಗುತಿದೆ ಕಾನು
ತಲತಲನೆ ಹರಿವ ಜಲತರಂಗ ಸುಂದರ
ನೋಡಿದಷ್ಟೂ ತಣಿಯದ ಭೂರಮೆಯ ಸಿಂಗಾರ

ಸಸ್ಯ ಶ್ಯಾಮಲೆ ನಸುನಗುತಿಹಳಿಲ್ಲಿ ನೋಡು
ಬಣ್ಣನೆಗೆ ನಿಲುಕದ ಸುಂದರ ಸುಶ್ರಾವ್ಯ ಹಾಡು
ಸ್ವರ್ಗವೇ ಕೆಳಗಿಳಿದು ಮೇಳೈಸಿತೇ ಧರೆಗೆ
ಇಳೆಯ ಸೌಂದರ್ಯವ ಹಚ್ಚಲಾದೀತೇ ಒರೆಗೆ

ಎತ್ತ ನೋಡಿದರತ್ತ ಸುತ್ತ ಹಸಿರೇ ಹಸಿರು
ತೆಂಗು ಕಂಗು ಬಾಳೆ ಕೃಷಿಕ ಮಿತ್ರರ ಉಸಿರು
ತಂಗಾಳಿಗೆ ತಲೆದೂಗುವ ಪಚ್ಚೆಪೈರುಗಳೇ ಚೆನ್ನ
ನೀ ನಳನಳಿಸಿದರೆ ತಾನೇ ನಮಗುಣ್ಣಲು ಅನ್ನ

        ಶೈಲೂ.....

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ