313 ಶುಭ ಹಾರೈಕೆ

ಹುಟ್ಟುಹಬ್ಬದ ಶುಭಾಶಯಗಳು ಯಶ್ ಅಪ್ಪಿ💐💐💐💐💐

#ಶುಭ_ಹಾರೈಕೆ

ಕೊಡಗಿನ ಕಣ್ಮಣಿಗಿಂದು ಜನ್ಮದಿನ
ಹಾರೈಸುವೇ ನಲ್ಮೆಯಲಿ ಈ ದಿನ
ಯಶದ ಹಾದಿಯಲಿ ತೊಡಕೆಲ್ಲ ಸರಿದು
ಜಯದ ಮಾಲೆ ಸಿಗಲಿ ಅನುದಿನ

ಮಿಂಚಿನಂತ ಸೊಗಸು ಮಾತಿನ ಗಣಿ
ಅಪ್ರತಿಮ ಕಾವ್ಯಕಲೆಗಳ ಖನಿ
ಕಲಾದೇಗುಲದ ಹೆಮ್ಮೆಯ ಹೊನ್ನಕಳಸ
ಎತ್ತೆತ್ತರಕ್ಕೆ ಬೆಳೆದವರೆಲ್ಲ ನಿನಗೆ ಋಣಿ

ಅರಳು ಮಾತಿನ ಕನಸುಗಾರ
ಆ ದೈವದಾರೈಕೆಯಿದೆ ನಿನ್ನ ಪರ
ಯಶೋಕೀರ್ತಿ ನಿನ್ನದಾಗಲಿ ಸತತ
ಸಾಹಿತ್ಯ ದೇವಿ ಕರುಣಿಸಲಿ ವರ

ವರ್ಷ ಕಳೆದು ಮತ್ತೆ ತಂದಿದೆ ಹರುಷ
ಸುಖ ಜೀವನ ನಿನ್ನದಾಗಲಿ ಪ್ರತಿನಿಮಿಷ
ಜನ್ಮದಿನದ ಸಮಯದಲ್ಲಿ ನನ್ನ ಹರಕೆಯು
ಯಶವೇ ತುಂಬಿ ನಗುತ ಬಾಳು ನೂರುವರ್ಷ

       ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ