327 ನಕ್ಷತ್ರ ಕವಿತೆ
#ನಕ್ಷತ್ರ_ಕವಿತೆ
#ಶೀರ್ಷಿಕೆ:--
#ಮುದ್ದು_ಮೊಗದ_ಚೆಲುವನಿಗಾಗಿ_ಕಾದ_ಒಲವು
ಹೇ
ಕೇಶವಾ
ಕಾಯುತಿರುವೆ
ನಿನಗಾಗಿಯೇ ಬಾ ನಲ್ಲ
ಅಂತರಂಗದೊಳು ನೆಲೆನಿಂತ ಸವಿ ಪ್ರೇಮಭಾವ
ಮುದ್ದುಮೊಗದ ಚೆಲುವನಿಗಾಗಿ ಕಾಯ್ದ
ಒಲವ ರಾಧೇಯ ಮರೆತೆಯೇನು
ಚಾತಕ ಪಕ್ಷಿಯಂತೆ ಹಗಲಿರುಳು
ನಿನ್ನ ನೆನಪಲ್ಲೇ ಜೀವ
ಸವೆಸುವ ನನ್ನ ನೀಮರೆಯದಿರು
ಕಾಣದೇನೆ ಮೊಗವ ಬೇಯುತಿರುವೆ
ಬಳಿ ಬಾ ಒಲವೇ ನಿನಗಾಗೆ ಕಾಯುತ್ತಿರುವೆ
ಜೀವನಿಲ್ಲದೋ ಮಾಧವಾ ಬಳಿ ಬಾ ಉಳಿಸು ನನ್ನ
ಚಂದ್ರನ ಮೊಗದ ಚೆಲುವಾ
ನೊರೆಹಾಲ ತಂದಿರುವೆ
ಸವಿಯಲು ಬಾ
ಬೇಗನೇ
ನೀ
ಶೈಲೂ.......
Comments
Post a Comment