309 ರಕ್ಷಾಬಂಧನ

#ಜಡೆಕವನ

#ಬಣ್ಣ_ಬಣ್ಣದ_ರಾಖಿ

ಬಂದಿತು ರಕ್ಷಾಬಂಧನದ ಹಬ್ಬ
ಹಬ್ಬವಿದು ಸೋದರತ್ವ ತಂದಂಥ
ತಂದ ನಲ್ಮೆಯ ವಾತ್ಸಲ್ಯ ಬಂಧ
ಬಂಧವಿದು ಚಂದದ ರಾಖಿ ಜೊತೆ
ಜೊತೆಗೆ ಮಿಳಿತು ಸೋದರಿಯ ಮಮತೆ
ಮಮತೆಯಲಿ ಮಿಂದು ವಾತ್ಸಲ್ಯ ಬೆಸೆದು
ಬೆಸೆದು ಬಣ್ಣಬಣ್ಣದ ರಾಖಿಯ ಹೊಸೆದು
ಹೊಸೆದು ರೇಷ್ಮೆ ನೂಲಿನೆಳೆಯಲ್ಲಿ
ಅಲ್ಲಿ ಪೋಣಿಸಿಹುದು ಪ್ರೀತಿಯ ಮುತ್ತುರತ್ನಗಳು
ರತ್ನದಂತಹ ಸೋದರನಿಗೆ ಒಳಿತಾಗಲೆಂದು
ಒಳಿತಾಗಲಿ ಎಲ್ಲ ಸಹೋದರರಿಗೆ ಎನುತ
ಎನುತ ರಕ್ಷಾಬಂಧನದಲಿ ಬಂಧಿಸಿ ಪ್ರೀತಿಯ
ಪ್ರೀತಿಯಲ್ಲಿ ಹಾರೈಸುತಿಹಳು ಎಲ್ಲರಿಗೆ ಸಹೋದರಿ

ಎಲ್ಲಾ ಸಹೋದರರಿಗೂ ರಕ್ಷಾಬಂಧನದ ಶುಭಾಶಯಗಳು🌹🌹🌹

          ಶೈಲಜಾ ರಮೇಶ್.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ