311 ಗಝಲ್

#ಗಝಲ್_ಸ್ಪರ್ಧೆ

#ಸಾಗರದ_ಅಲೆಗಳಲ್ಲಿ_ಅಳಿಸದಿರಲಿ_ನಿಂಹೆಸರು

ಬರೆಯುತ್ತಿರುವೆ ಆಸ್ಥೆಯಿಂದ ಮರಳಿನಲ್ಲಿ ನಿನ್ಹೆಸರು
ಸಾಗರದ ಅಲೆಗಳಲ್ಲಿ ಅಳಿಸದಿರಲಿ ನಿನ್ಹೆಸರು

ಮನದಲ್ಲೇ ಗುನುಗುತ್ತಿರುವೆ ಸಹಸ್ತ್ರ ನಾಮದಂತೆ
ಕಿವಿಗೊಟ್ಟು ಆಲಿಸು ಗೆಳೆಯ ಕೇಳಿಸಲಿ ನಿನ್ಹೆಸರು

ಅಂತರಾಳದಲ್ಲಿ ಎಂದಿಗೂ ಅಳಿಯದ ನೋವತರಂಗ
ಸುರಿವ ಕಂಬನಿ ಧಾರೆಯಲ್ಲಿ ತೋಯದಿರಲಿ ನಿನ್ಹೆಸರು

ಅಂತರಂಗದಲ್ಲಿ ನೆಲೆಯಾಗಿ ನಿಂತಿರುವೆ ಅಚ್ಚಳಿಯದೆ
ಹಚ್ಚ ಹಸಿರಿನಂತೆ ಕಂಗೊಳಿಸುತ್ತಿರಲಿ ನಿನ್ಹೆಸರು

ಶೈಲಳಲ್ಲಿ ಅನವರತ ಬೆರೆತಿಹುದು ಪ್ರಿಯನಾಮ
ತನುವಳಿದರೂ ಉಳಿವ ಉಸಿರಾಗಲಿ ನಿನ್ಹೆಸರು

          ಶೈಲಜಾ ರಮೇಶ್

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ