319 ವ್ಯಂಜನಾಕ್ಷರಗಳ ಕವನ

#ವ್ಯಂಜನಾಕ್ಷರಗಳ ಕವನ

ಕಣ್ಣಂಚಲ್ಲೇ ಕಾಡಿ ಕರೆದೆ, ಕಣ್ಣ
ಖಡ್ಗದಲ್ಲೇ ಇರಿದೆ ನನ್ನೆದೆಯ
ಗಂಡೆಂದರೆ ನೀನೇ ಎಂಬ ಗಮ್ಮತ್ತಲ್ಲಿ
ಘಮ್ಮೆನ್ನೊ ಪ್ರೀತಿ ಪರಿಮಳವ ಸೂಸಿದೆ
ಚಂದ್ರನಂತಹ ಮೊಗದವನೆ ನೀನು
ಛಲವಿಡಿದು ಮರುಳುಮಾಡಿದೆ ನನ್ನ
ಜರಿದರೂ ಕೇಳದೆ, ನೀ ಸುರಿಸಿದ ಪ್ರೀತಿ
ಝರಿಯಲ್ಲಿ ತೋಯಿಸಿಬಿಟ್ಟೆ
ಜ್ಞಾನದ ಕಣ್ಣ ತೆರೆಯಿಸಿಬಿಟ್ಟೆ
ಟಪಟಪನೆ ಸುರಿವ ಮಳೆಹನಿಯಲ್ಲಿ
ಠಳಾರನೆ ಸುಳಿದ ಸುಳಿಮಿಂಚಲ್ಲಿ
ಡಂ ಡಂ ಎನ್ನುವ ಗುಡುಗಿಗೆ ಹೆದರಿ
ಢಾಳಾಗಿ ನಾ ನಡುಗುತ್ತಿರುವಾಗ
ಕ್ಷಣಮಾತ್ರದಲ್ಲಿ ಅಪ್ಪಿ ಮೈ ಮರೆಸಿದೆ
ತಬ್ಬಿನಿಂತ ನಿನ್ನ ತೊಳಲ್ಲಿ ನಾ ಬಂಧಿ
ಥಳಥಳನೆ ಹೊಳೆವ ಕಣ್ಣಲ್ಲಿ ನಾ ಕಂಡೆ
ದಯನೀಯ ಗುಣವ.... ಚೆಲುವ
ಧನ್ಯತೆಯಲಿ ತುಂಬಿ ಬಂತು ಕಣ್ಣು
ನಯನದಲಿ ಸುರಿಯಿತು ಪ್ರೇಮಾಶ್ರು
ಪಲ್ಲವಿಸಿತಾಗ ಪ್ರೀತಿಯ ಕೊನರು
ಫಲಾಫಲದ ನಿರೀಕ್ಷೆ ಎನಗಿಲ್ಲ
ಬದುಕು ಬಂದಂತೆ ನಡೆವೆ.. ನಿನ್ನ
ಭವ್ಯ ಪ್ರೇಮ ಮಂದಿರದಲಿ
ಮಂದಾರದಂತರಳುವೆ ನಾ
ಯಜ್ಞ ಮಾಡದೆ ಪಡೆದೆ ನಾ ನಿನ್ನ 
"ರಮೇಶ"  ನೀ ನನ್ನ ಬಾಳಿನ ಚಿನ್ನ
ಲಕ್ಷ್ಯ ವಿಟ್ಟು  ನಮಿಪೆ ಆ ದೇವಗೆ
ವರ ನೀ ತಂದೆ ನನ್ನ ಬಾಳಿಗೆ
ಶಾಂತ ಸ್ವಭಾವದ ಗೆಳೆಯ ನೀ
ಷರತ್ತುಗಳಿಲ್ಲದ ಪ್ರೇಮವಿತ್ತೆ
ಸವಿಗಾನದಂತಿದೆ ಬದುಕು
ಹರಸಿ ಕೊಟ್ಟನೇನು ನನ್ನ ಕೃಷ್ಣ ನಿನ್ನ .. ತ
ಳಮಳವಿಲ್ಲದೇ ಬದುಕು ಸಾಗಿದೆ ಗುರಿಯೆಡೆಗೆ
ಕ್ಷಮಿಸಿಬಿಡು.. ನನ್ನ ಸಣ್ಣಪುಟ್ಟ ದೋಷಗಳ

       ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ