325 ಶಾರದ

#ಶಾರದ

ವೀಣಾಪಾಣಿಯಿವಳು ಬ್ರಹ್ಮನ ರಾಣಿ
ಅಕ್ಷಮಾಲಾ ಪುಸ್ತಕ ವೀಣಾಧಾರಿಣಿ
ವಿದ್ಯೆಯಿತ್ತು ಪಾಲಿಸೆ ವಿದ್ಯಾದಾಯಿನಿ
ಸಕಲರ ಪೊರೆಯಮ್ಮ ಬುದ್ಧಿಶಿರೋಮಣಿ

ಶುಭ್ರವಸ್ತ್ರಾನ್ವಿತೆ  ಶುಭ್ರರೂಪಧರೆ
ಶ್ವೇತಕಮಲದಲಿ ವಾಸಿಪ ಮಧುರೆ
ಹಂಸವಾಹಿನಿ ಮಾತೇ ಕಾಮಿತದಾಯಿನಿ
ನೀಡಮ್ಮ ಶುಭಮತಿ ವಿದ್ಯಾಪ್ರದಾಯಿನಿ

ಸಿದ್ಧಿ ಶಿರೋಮಣಿ ಬುದ್ಧಿಪ್ರಕಾಶಿನಿ
ತ್ರೈಲೋಕ್ಯ ಪೂಜಿತೇ ಪ್ರಸನ್ನ ವದನೆ
ಜಯತು ಸರಸ್ವತಿ ಸುರಸ ಅಮೃತವಾಣಿ
ಸದ್ಭುದ್ಧಿ ನೀಡಮ್ಮ ವರವಿದ್ಯಾಭೂಷಿಣಿ

         ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ