Posts

ನನ್ನ ಕವನಗಳು

[8/6/2020, 8:45 am] Dr. B. N. Shylaja Ramesh: ಇಂದು ನನ್ನ ಜೀವನದಲ್ಲಿ ಮರೆಯಲಾಗದ  ದಿನ ಸ್ವಾತಿ ಮತ್ತೊಂದನ್ನು ಪಡೆದ ಸುಂದರ ದಿನ ಹೊಸಬಾಳಿಗೆ ಕಾಲಿಟ್ಟ ಸುದಿನ ನಿಮ್ಮೆಲ್ಲರ ಹಾರೈಕೆಯಿರಲಿ ಈ ದಿನ🙏🙏 ಆಗಮನ ********* ಇಪ್ಪತ್ತೆರಡು  ವರ್ಷತುಂಬಿತು ಅವ  ನನ್ನ  ಜೀವನದಿ ಕಾಲಿಟ್ಟು ಈಗಲೂ  ಕೇಳುತ್ತಿದೆ ಆ ಮಂಗಳದ ನಾದ ಅವನದೇ  ನೆನಪಿನ ಆ  ಮಧುರ  ನಿನಾದ ನೆನಪಿದೆ ಇನ್ನೂ  ಅವ ಬದುಕಲಿ  ಬಂದದ್ದು ಸವಿ ಕನಸುಗಳ ಬಿತ್ತಿದ್ದು ಮಧುರ ನೆನಪ ಹೆಕ್ಕಿ  ತಂದದ್ದು ಅವ ಬಂದದ್ದೇ ಬಂದದ್ದು ಮರೆಯಾಯ್ತು ಅಂದೇ ಕಹಿನೆನಪ ಭಾವ ಉದಿಸಿ ನಲ್ಮೆಯಾ  ಬೆಳಕು ಮೇರೆ ಇಲ್ಲದೇ ಮೆರೆಯುತ್ತಿದೆ ಎದೆಯಲ್ಲಿ  ಅನುರಾಗ ಎಂದಿಗೂ  ಊಹಿಸಲಾರೆ ಅವನಿಲ್ಲದ  ಜೀವನ ಉಸಿರುಸಿರಿನಲ್ಲೂ ಅನುರಣಿಸುತ್ತಿದೇ ಅವನದೇ  ಧ್ಯಾನ ಅಬ್ಭಾ!!!!..... ಹೀಗೇಕೆ  ಉರುಳುತ್ತಿದೆ ಕಾಲ ನೆನ್ನೆ ಮೊನ್ನೆಯ  ಪ್ರೀತಿಗೆ ಆಗಲೇ  ಇಪ್ಪತ್ಮೂರು  ವರ್ಷಗಳಾಯ್ತಲ್ಲ ಆ  ದೇವನಾ  ದಯವಿರಲಿ ಒಲವ  ಜೀವನ  ಹೀಗೆಯೇ ಸಾಗಲಿ  ಮೆಲ್ಲ...             ಶೈಲೂ...... [8/6/2020, 8:45 am] Dr. B. N. Shylaja Ramesh: ನೀ  ಬಂದ ದಿನ ************* ಅಂದು ನೀ  ಬಂದ ದಿನ ಹೃದಯದಲಿ ರಾಗಗಳ ತ...

366 ಅನ್ನಕ್ಕಾಗಿ ಅರಸುತ್ತಾ

Image
#ಕವನಸ್ಪರ್ಧೆ #ಶೀರ್ಷಿಕೆ:-- #ಅನ್ನಕ್ಕಾಗಿ_ಅರಸುತ ಬಡತನವೇ ಕೂಪ ಹಸಿವೊಂದು ಶಾಪ ತುತ್ತನ್ನಕ್ಕಾಗಿ ಪ್ರತಿದಿನವೂ ಪರಿತಾಪ ಕಸದ ತೊಟ್ಟಿಯಲಿ ರಸವನ್ನು ಹುಡುಕುತ ಹೊರಟೆವು ನಾವು ಅನ್ನವನು ಅರಸುತ ಚಿಂದಿ ಆಯುವೆವು ತುತ್ತನ್ನಕ್ಕಾಗಿ ನಾವು ಯಾಕಿಟ್ಟನೋ ಭಗವಂತ ಈ ಪರಿ ಹಸಿವು ಕಸವೋ ಅಸಹ್ಯವೋ ಅದರ ಪರಿವಿಲ್ಲ ಹೊಟ್ಟೆ ತುಂಬಿದರೆಂದೇ ಹಬ್ಬ ನಮಗೆಲ್ಲ ಸೂರಿಲ್ಲದ ನಮಗೆ ಕೊಳವೆಯಾಶ್ರಯವು ಮಳೆಗಾಳಿ ಚಳಿಯಲ್ಲೂ ಇದೇ ಆಲಯವೂ ನಾಲ್ಕಾರು ಪಾತ್ರೆ ಪಡಗಗಳೇ ನಮ್ಮಯ ಸ್ವತ್ತು ಕುಳಿತೆವು ಶಪಿಸುತ್ತ ಬಡತನಕೆ ಬೇಸತ್ತು ಬಡತನದ ಕರ್ಮಕ್ಕೆ ಮಕ್ಕಳು ಜಾಸ್ತಿ ಹಸಿವೆ ತಾಳದೆ ಮಾಡುವವನ್ನಕ್ಕೆ ಕುಸ್ತಿ ಹೇಗೆ ಪೊರೆಯಲಿ ತಂದೆ ನಂಬಿದ ಕುಟುಂಬವ ಮಾಡಲಿನ್ನೇನಿಹುದು ಏಳಿ ಚಿಂದಿ ಆಯುವಾ   ಡಾ: B.N. ಶೈಲಜಾ ರಮೇಶ್

365 ಏಕೆ ಹೀಗಾಯ್ತು..?..😔

ಏಕೆ ಹೀಗಾಯ್ತು..?..😔 ******************** ಎಲ್ಲಿ ಹೋದವೋ ಕಾಣೆ ಮನದ ಭಾವಗಳ ಸಾರ ಬರಡಾದ ಭಾವನೆಯಲಿ ಮನವು ಭಾರ ಭಾರ ಸಮಯಕ್ಕೊದಗುತ್ತಿದ್ದವು ಪದಪುಂಜಗಳು ಸಪೂರ ಇಂದೆಲ್ಲಿಗ್ಹೋದವೋ ಕಾಣೆ ದೂರ ಬಹು ದೂರ ಎಷ್ಟು ತಡಕಿ ಹುಡುಕಿದರೂ ಬರುತ್ತಿಲ್ಲ  ಒಂದಕ್ಷರ ಮಾಡುತ್ತಿದೆ ಯಾಕೋ ಕಾವ್ಯಕೆ ಪದಗಳು ಮುಷ್ಕರ ಇನ್ನೂ ಏನನ್ನೂ ಬರೆಯದ ಖಾಲಿಯಿರುವ ಹಾಳೆಯಲಿ ಬರೆಯಲಿ ನಾ ಹೇಗೆ ಬತ್ತಿಹೋದ ಪದಗಳಲ್ಲಿ ಮಾತನ್ನೇ ಸಾಲಾಗಿಸಿ ಬರೆಯಲು ಹೊರಟಾಗಲೂ ಭಾವನೆಗಳ  ಸೌಧವೇ ಆದಂತಿದೆ  ಮುರುಕಲು ಬರೆವ ಪದಗಳಿಗೆ ಅರ್ಥವೇ ಇಲ್ಲದಂತಾಗಲು ಬರೆಯಲಿ  ನಾ ಹೇಗೆ ಹೊಸಪದಗಳ ಸಾಲು ಹೇಗೆ ಬರೆದರೂ ಪದಗಳ ಒಳಾರ್ಥವೇ ಕವಿತೆಯ ಜೀವ ಭಾವ ತುಂಬಿದ ಪದಗಳೇ ಕವಿಮನದ  ಭಾವ ಮನದಲ್ಲಿರುವುದನ್ನೆಲ್ಲಾ  ಬರೆಯಲಾಗದು ಭಾವಾರ್ಥ ಕೆಟ್ಟರೆ  ಕವಿತೆ  ಸಾಯುವುದು ಅನ್ನಿಸಿದ್ದನ್ನೆಲ್ಲಾ ಬರೆಯಲು ಹೊರಟ  ನಾನು  ಮರುಳೇ?? ಬರೆವ ಮನಸ ಕಾಡಿ ಕಾಡಿಸಿತ್ತು  ನನ್ನ  ನೆರಳೇ ಕಂಡ ಕನಸನ್ನೆಲ್ಲ ಕವಿತೆಯಲ್ಲಿ  ತುಂಬುವನೆಂಬ  ಆಸೆ ಬರೆಯಲಾರದೆ ಕುಳಿತೆ ಆಯಿತು ಏಕೋ ನಿರಾಸೆ....        ಶೈಲೂ......

364 ಆಧುನಿಕ ವಚನ

#ಆಧುನಿಕ_ವಚನ #ಶೀರ್ಷಿಕೆ #ನಿಷ್ಕಾಮ ಜೀವನವಿದು   ಮೂರು   ದಿನದ    ಬಾಳು ಅವನಕರೆ ಬಂದಾಕ್ಷಣ ತೆರಳಬೇಕು ಕೇಳು ಇದ್ದಾಗಲೇ ಗಳಿಸಿಬಿಡೆಲ್ಲರ ಪ್ರೀತಿ ವಾತ್ಸಲ್ಯ ಸಹಬಾಳ್ವೆಯಲಿ ತುಂಬಿದೆ ಜೀವನದ ಮೌಲ್ಯ ಸಕಲಜೀವಿಗಳಲ್ಲಿರಲಿ ನಿಷ್ಕಾಮಪ್ರೇಮದ ಧಾರಾ ಪ್ರೇಮದಿಂದೆಲ್ಲರ ಗೆಲ್ಲಬಹುದೆಂದ ಶ್ರೀಶೈಲನಾಥೇಶ್ವರ          ಶೈಲೂ....

363 ಮರೆಯಲಾದೀತೆ...??

Image
ಮರೆಯಲಾದೀತೆ...?? ******************* ನಿನ್ಹೆಸರೇ ನನ್ನುಸಿರಾಗಿರುವಾಗ ನಿನ್ನ ಸವಿ ನಾಮ ಮನದಲಿ ಅನುರಣಿಸುತ್ತಿರುವಾಗ ನಿನ್ನ ಮರೆಯುವ ಮಾತೆಲ್ಲಿ  ಕೃಷ್ಣಾ... ನಿತ್ಯವೂ  ನಿನ್ನದೇ ಧ್ಯಾನ ಮನದಲ್ಲಿ ನಿನ್ನನುಸಂಧಾನ ಕಣ್ಣೆವೆಯ ಮುಚ್ಚಿದರೆ ನಿನ್ನ ಪ್ರತಿಬಿಂಬ ಕಣಕಣದಲೂ  ಆವರಿಸಿದೆ ನಿನದೇ ಬಿಂಬ..!! ನಿನ್ನೊಲವಿನ ಲೇ  ಧ್ಯಾನ ಮನಸು ನಿನ್ನಲೇ ಲೀನ ಕ್ಷಣ ಕ್ಷಣವೂ ನಿನ್ನದೇ ಸ್ಮರಣೆ ನಿನ್ನೊಲವಿನ ನೆನಪಲ್ಲೇ ರಾತ್ರಿ ಜಾಗರಣೆ..!! ಬೀಸು ಗಾಳಿಯ ರವದಿ ನಿನ್ನಾಗಮನದ ನಿರೀಕ್ಷೆ ತರಗೆಲೆಯ .ಸದ್ಧಿನಲೂ ನಿನ್ನದೇ  ಪ್ರತೀಕ್ಷೆ..!! ಅಣುರೇಣು ತೃಣ ಕಾಷ್ಠದಲೂ ನೀನಿರುವೆ ನೀನಿರುವ ಪ್ರತಿ ನಡೆಯ ನಾ ಹೇಗೆ  ಮರೆವೆ..??        ಶೈಲೂ.......

362 ಗಾದೆ ವಿಸ್ತರಣೆ

ವಿಷಯ ಗಾದೆ ವಿಸ್ತರಣೆ #ಗಾದೆ #ಮಾತು_ಬಲ್ಲವನಿಗೆ_ಜಗಳವಿಲ್ಲ_ಊಟ_ಬಲ್ಲವಗೆ_ರೋಗವಿಲ್ಲ #ಪೀಠಿಕೆ         "ವೇದ ಸುಳ್ಳಾದರೂ ಗಾದೆ ಸುಳ್ಳಾಗದು " ಎಂಬುದು ಅತೀ ಜನಜನಿತ ಗಾದೆ. ಗಾದೆಯು ಅನುಭವದ ಸಾರಾಮೃತ. ಎಂದೆಂದಿಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಅರ್ಥಪೂರ್ಣ ವಾಕ್ಯಗಳು ಇವು. #ವಿವರಣೆ....       #ಮಾತು_ಬಲ್ಲವನಿಗೆ_ಜಗಳವಿಲ್ಲ_ಊಟ_ಬಲ್ಲವಗೆ_ರೋಗವಿಲ್ಲ...         ಈ ಗಾದೆಯು ಪ್ರಸ್ತುತ ಕಾಲಮಾನಕ್ಕೆ ಅತೀ ತಕ್ಕುದಾಗಿದೆ.            ವಿಷಮ ಪರಿಸ್ಥಿತಿಯಲ್ಲಿ.... ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಸಂದರ್ಭ ಬಂದಾಗ ನಾಜೂಕಾದ ಮಾತಿನಿಂದ ಪರಿಸ್ಥಿತಿಯನ್ನು ತಹಬಂದಿಗೆ ತರಬಹುದು. ಸಂಘರ್ಷದ ಮಾತುಗಳಿಲ್ಲದೆ ವೈರಿಗಳನ್ನೂ ಕೂಡ ಜಗಳವಿಲ್ಲದೆ ಸಮಾಧಾನದಿಂದ ನಿಭಾಯಿಸಬಹುದು.        ಊಟದ  ಮಹತ್ವ ಅರಿತವರು, ಅತಿಯಾದ ಅನಾರೋಗ್ಯಕರ ಆಹಾರ ಸೇವಿಸದೇ,ತಮ್ಮ ತಮ್ಮ ಆರೋಗ್ಯಕ್ಕೆ ತಕ್ಕಂಥ ಆಹಾರ ಸೇವನೆಯಿಂದ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಬಹುದು. #ಉಪಸಂಹಾರ...     ಇದರಿಂದ ತಿಳಿಯಬೇಕಾದದ್ದು,  ಯಾರೊಡನೆ ಯಾವರೀತಿಯಲ್ಲಿ ವ್ಯವಹರಿಸಿದರೆ ಉತ್ತಮ.  ಹಾಗೂ ಋತುಗನುಗುಣವಾದ, ಹಿತಮಿತವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅತೀ ಸಾಮಾನ್ಯ ಮಾತುಗಳಿ...

361 ಸಿಂಕೇನ್ ಕಾವ್ಯ

#ಸಿಂಕೇನ್_ಕಾವ್ಯಸ್ಪರ್ಧೆ #ಅಮ್ಮ ಅಮ್ಮ ಮಮತಾಮಯಿ ಕರುಣಾಪೂರ್ಣೆ ಅಮೃತವುಣಿಸಿ ಬಿಗಿದಪ್ಪಿ ಕಾಯುವಳು ಮಗುವ ಮುದ್ದಿಸಿ ಲಾಲಿ ಹಾಡುವಳು ಜನನಿ..! #ಗುರು ಗುರು ಜ್ಞಾನವಾರಿಧಿ ಕರುಣಾಕರ ಅಕ್ಷರವಿತ್ತು ಕಲಿಸಿ ಕಾಯುವರು ಕೈಹಿಡಿದು ತಿದ್ದಿ ಬರೆಸಿ ಬೋಧಿಸುವ ಜ್ಞಾನದಾತ..! #ಅಣ್ಣ ಅಣ್ಣ ಪಿತೃಸಮಾನ ಸನ್ಮಿತ್ರ ಪ್ರೀತಿಯಿತ್ತು ಆದರಿಸಿ ಪೋಷಿಸುವನು ತವರಿನ ಸಿರಿಗೆ ಅರ್ಥವಿತ್ತು ಬೆಳಕಾದವ ಹಿರಿಯಣ್ಣ..!         #ಶೈಲೂ