365 ಏಕೆ ಹೀಗಾಯ್ತು..?..😔

ಏಕೆ ಹೀಗಾಯ್ತು..?..😔
********************
ಎಲ್ಲಿ ಹೋದವೋ ಕಾಣೆ ಮನದ ಭಾವಗಳ ಸಾರ
ಬರಡಾದ ಭಾವನೆಯಲಿ ಮನವು ಭಾರ ಭಾರ
ಸಮಯಕ್ಕೊದಗುತ್ತಿದ್ದವು ಪದಪುಂಜಗಳು ಸಪೂರ
ಇಂದೆಲ್ಲಿಗ್ಹೋದವೋ ಕಾಣೆ ದೂರ ಬಹು ದೂರ

ಎಷ್ಟು ತಡಕಿ ಹುಡುಕಿದರೂ ಬರುತ್ತಿಲ್ಲ  ಒಂದಕ್ಷರ
ಮಾಡುತ್ತಿದೆ ಯಾಕೋ ಕಾವ್ಯಕೆ ಪದಗಳು ಮುಷ್ಕರ
ಇನ್ನೂ ಏನನ್ನೂ ಬರೆಯದ ಖಾಲಿಯಿರುವ ಹಾಳೆಯಲಿ
ಬರೆಯಲಿ ನಾ ಹೇಗೆ ಬತ್ತಿಹೋದ ಪದಗಳಲ್ಲಿ

ಮಾತನ್ನೇ ಸಾಲಾಗಿಸಿ ಬರೆಯಲು ಹೊರಟಾಗಲೂ
ಭಾವನೆಗಳ  ಸೌಧವೇ ಆದಂತಿದೆ  ಮುರುಕಲು
ಬರೆವ ಪದಗಳಿಗೆ ಅರ್ಥವೇ ಇಲ್ಲದಂತಾಗಲು
ಬರೆಯಲಿ  ನಾ ಹೇಗೆ ಹೊಸಪದಗಳ ಸಾಲು

ಹೇಗೆ ಬರೆದರೂ ಪದಗಳ ಒಳಾರ್ಥವೇ ಕವಿತೆಯ ಜೀವ
ಭಾವ ತುಂಬಿದ ಪದಗಳೇ ಕವಿಮನದ  ಭಾವ
ಮನದಲ್ಲಿರುವುದನ್ನೆಲ್ಲಾ  ಬರೆಯಲಾಗದು
ಭಾವಾರ್ಥ ಕೆಟ್ಟರೆ  ಕವಿತೆ  ಸಾಯುವುದು

ಅನ್ನಿಸಿದ್ದನ್ನೆಲ್ಲಾ ಬರೆಯಲು ಹೊರಟ  ನಾನು  ಮರುಳೇ??
ಬರೆವ ಮನಸ ಕಾಡಿ ಕಾಡಿಸಿತ್ತು  ನನ್ನ  ನೆರಳೇ
ಕಂಡ ಕನಸನ್ನೆಲ್ಲ ಕವಿತೆಯಲ್ಲಿ  ತುಂಬುವನೆಂಬ  ಆಸೆ
ಬರೆಯಲಾರದೆ ಕುಳಿತೆ ಆಯಿತು ಏಕೋ ನಿರಾಸೆ....

       ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ