362 ಗಾದೆ ವಿಸ್ತರಣೆ

ವಿಷಯ ಗಾದೆ ವಿಸ್ತರಣೆ

#ಗಾದೆ
#ಮಾತು_ಬಲ್ಲವನಿಗೆ_ಜಗಳವಿಲ್ಲ_ಊಟ_ಬಲ್ಲವಗೆ_ರೋಗವಿಲ್ಲ

#ಪೀಠಿಕೆ

        "ವೇದ ಸುಳ್ಳಾದರೂ ಗಾದೆ ಸುಳ್ಳಾಗದು " ಎಂಬುದು ಅತೀ ಜನಜನಿತ ಗಾದೆ. ಗಾದೆಯು ಅನುಭವದ ಸಾರಾಮೃತ. ಎಂದೆಂದಿಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಅರ್ಥಪೂರ್ಣ ವಾಕ್ಯಗಳು ಇವು.

#ವಿವರಣೆ....
     
#ಮಾತು_ಬಲ್ಲವನಿಗೆ_ಜಗಳವಿಲ್ಲ_ಊಟ_ಬಲ್ಲವಗೆ_ರೋಗವಿಲ್ಲ...

        ಈ ಗಾದೆಯು ಪ್ರಸ್ತುತ ಕಾಲಮಾನಕ್ಕೆ ಅತೀ ತಕ್ಕುದಾಗಿದೆ.
           ವಿಷಮ ಪರಿಸ್ಥಿತಿಯಲ್ಲಿ.... ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಸಂದರ್ಭ ಬಂದಾಗ ನಾಜೂಕಾದ ಮಾತಿನಿಂದ ಪರಿಸ್ಥಿತಿಯನ್ನು ತಹಬಂದಿಗೆ ತರಬಹುದು. ಸಂಘರ್ಷದ ಮಾತುಗಳಿಲ್ಲದೆ ವೈರಿಗಳನ್ನೂ ಕೂಡ ಜಗಳವಿಲ್ಲದೆ ಸಮಾಧಾನದಿಂದ ನಿಭಾಯಿಸಬಹುದು.

       ಊಟದ  ಮಹತ್ವ ಅರಿತವರು, ಅತಿಯಾದ ಅನಾರೋಗ್ಯಕರ ಆಹಾರ ಸೇವಿಸದೇ,ತಮ್ಮ ತಮ್ಮ ಆರೋಗ್ಯಕ್ಕೆ ತಕ್ಕಂಥ ಆಹಾರ ಸೇವನೆಯಿಂದ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಬಹುದು.

#ಉಪಸಂಹಾರ...
    ಇದರಿಂದ ತಿಳಿಯಬೇಕಾದದ್ದು,  ಯಾರೊಡನೆ ಯಾವರೀತಿಯಲ್ಲಿ ವ್ಯವಹರಿಸಿದರೆ ಉತ್ತಮ.  ಹಾಗೂ ಋತುಗನುಗುಣವಾದ, ಹಿತಮಿತವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅತೀ ಸಾಮಾನ್ಯ ಮಾತುಗಳಿಂದಲೇ ಅಸಾಮಾನ್ಯ ಅರ್ಥದ ಗಾದೆಗಳ ಮೂಲಕ ನಮ್ಮ ಜನಪದರು ತಿಳಿಸಿದ್ದಾರೆ.

       ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ