366 ಅನ್ನಕ್ಕಾಗಿ ಅರಸುತ್ತಾ

#ಕವನಸ್ಪರ್ಧೆ

#ಶೀರ್ಷಿಕೆ:--

#ಅನ್ನಕ್ಕಾಗಿ_ಅರಸುತ

ಬಡತನವೇ ಕೂಪ ಹಸಿವೊಂದು ಶಾಪ
ತುತ್ತನ್ನಕ್ಕಾಗಿ ಪ್ರತಿದಿನವೂ ಪರಿತಾಪ
ಕಸದ ತೊಟ್ಟಿಯಲಿ ರಸವನ್ನು ಹುಡುಕುತ
ಹೊರಟೆವು ನಾವು ಅನ್ನವನು ಅರಸುತ

ಚಿಂದಿ ಆಯುವೆವು ತುತ್ತನ್ನಕ್ಕಾಗಿ ನಾವು
ಯಾಕಿಟ್ಟನೋ ಭಗವಂತ ಈ ಪರಿ ಹಸಿವು
ಕಸವೋ ಅಸಹ್ಯವೋ ಅದರ ಪರಿವಿಲ್ಲ
ಹೊಟ್ಟೆ ತುಂಬಿದರೆಂದೇ ಹಬ್ಬ ನಮಗೆಲ್ಲ

ಸೂರಿಲ್ಲದ ನಮಗೆ ಕೊಳವೆಯಾಶ್ರಯವು
ಮಳೆಗಾಳಿ ಚಳಿಯಲ್ಲೂ ಇದೇ ಆಲಯವೂ
ನಾಲ್ಕಾರು ಪಾತ್ರೆ ಪಡಗಗಳೇ ನಮ್ಮಯ ಸ್ವತ್ತು
ಕುಳಿತೆವು ಶಪಿಸುತ್ತ ಬಡತನಕೆ ಬೇಸತ್ತು

ಬಡತನದ ಕರ್ಮಕ್ಕೆ ಮಕ್ಕಳು ಜಾಸ್ತಿ
ಹಸಿವೆ ತಾಳದೆ ಮಾಡುವವನ್ನಕ್ಕೆ ಕುಸ್ತಿ
ಹೇಗೆ ಪೊರೆಯಲಿ ತಂದೆ ನಂಬಿದ ಕುಟುಂಬವ
ಮಾಡಲಿನ್ನೇನಿಹುದು ಏಳಿ ಚಿಂದಿ ಆಯುವಾ

  ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ