363 ಮರೆಯಲಾದೀತೆ...??

ಮರೆಯಲಾದೀತೆ...??
*******************

ನಿನ್ಹೆಸರೇ ನನ್ನುಸಿರಾಗಿರುವಾಗ
ನಿನ್ನ ಸವಿ ನಾಮ ಮನದಲಿ
ಅನುರಣಿಸುತ್ತಿರುವಾಗ
ನಿನ್ನ ಮರೆಯುವ ಮಾತೆಲ್ಲಿ  ಕೃಷ್ಣಾ...
ನಿತ್ಯವೂ  ನಿನ್ನದೇ ಧ್ಯಾನ
ಮನದಲ್ಲಿ ನಿನ್ನನುಸಂಧಾನ
ಕಣ್ಣೆವೆಯ ಮುಚ್ಚಿದರೆ ನಿನ್ನ ಪ್ರತಿಬಿಂಬ
ಕಣಕಣದಲೂ  ಆವರಿಸಿದೆ ನಿನದೇ ಬಿಂಬ..!!
ನಿನ್ನೊಲವಿನ ಲೇ  ಧ್ಯಾನ
ಮನಸು ನಿನ್ನಲೇ ಲೀನ
ಕ್ಷಣ ಕ್ಷಣವೂ ನಿನ್ನದೇ ಸ್ಮರಣೆ
ನಿನ್ನೊಲವಿನ ನೆನಪಲ್ಲೇ
ರಾತ್ರಿ ಜಾಗರಣೆ..!!
ಬೀಸು ಗಾಳಿಯ ರವದಿ
ನಿನ್ನಾಗಮನದ ನಿರೀಕ್ಷೆ
ತರಗೆಲೆಯ .ಸದ್ಧಿನಲೂ
ನಿನ್ನದೇ  ಪ್ರತೀಕ್ಷೆ..!!
ಅಣುರೇಣು ತೃಣ ಕಾಷ್ಠದಲೂ ನೀನಿರುವೆ
ನೀನಿರುವ ಪ್ರತಿ ನಡೆಯ
ನಾ ಹೇಗೆ  ಮರೆವೆ..??

       ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು