Posts

327 ನಕ್ಷತ್ರ ಕವಿತೆ

#ನಕ್ಷತ್ರ_ಕವಿತೆ #ಶೀರ್ಷಿಕೆ:-- #ಮುದ್ದು_ಮೊಗದ_ಚೆಲುವನಿಗಾಗಿ_ಕಾದ_ಒಲವು                              ಹೇ                           ಕೇಶವಾ                       ಕಾಯುತಿರುವೆ                 ನಿನಗಾಗಿಯೇ ಬಾ ನಲ್ಲ  ಅಂತರಂಗದೊಳು ನೆಲೆನಿಂತ ಸವಿ ಪ್ರೇಮಭಾವ       ಮುದ್ದುಮೊಗದ ಚೆಲುವನಿಗಾಗಿ ಕಾಯ್ದ          ಒಲವ ರಾಧೇಯ ಮರೆತೆಯೇನು            ಚಾತಕ ಪಕ್ಷಿಯಂತೆ ಹಗಲಿರುಳು                   ನಿನ್ನ ನೆನಪಲ್ಲೇ ಜೀವ            ಸವೆಸುವ ನನ್ನ ನೀಮರೆಯದಿರು          ಕಾಣದೇನೆ ಮೊಗವ ಬೇಯುತಿರುವೆ       ಬಳಿ ಬಾ ಒಲವೇ ನಿನಗಾಗೆ ಕಾಯುತ್ತಿರುವೆ ಜೀವನಿಲ್ಲದೋ ಮಾಧವಾ ಬಳಿ ಬಾ ಉಳಿಸು ನನ್ನ                ಚಂದ್ರನ ಮೊಗದ ಚೆಲುವ...

326 ಸ್ವಸ್ತಿಕ್_ಕವನ

Image
#ಸ್ವಸ್ತಿಕ್_ಕವನ ಮುತ್ತೈದೆ ಹೆಣ್ಣಿಗೆ ಐದು             ಮುತ್ತುಗಳೇ ಭೂಷಣ ಹಣೆಗೆ ನಗುವ             ಸಿಂಧೂರ                         ಚೆಲುವ.            ಕೈಯಲ್ಲಿ                         ಅಂದದ              ಗಾಜಿನ                          ಹಸಿರು             ಬಳೆಯು ಬಾಲೆಯ ಎಳೆ ಕಿವಿಗೆ ಹೊಳೆವ ಮುತ್ತಿನ ಓಲೆ ಮದುವಣಗಿತ್ತಿಯ ಚೆಲುವ ಪಾದಕೆ ಬೆಳ್ಳಿಯ ಕಾಲಿನ.            ಉಂಗುರ ಸಿರಿಯು.          ಸಂಪಿಗೆ ಮೂಗಿಗೆ.         ಹೊಳೆವ ಮೂಗುತಿ.        ಚೆಲುವ ಮುದ್ದು ಕೊರಳಿಗೆ ನಲ್ಲ ಕಟ್ಟಿದನು          ಶೋಭಿಪ ಮಾಂಗಲ್ಯ ಸಿರಿಯು          ಶೈಲಜಾ ರಮೇಶ್

325 ಶಾರದ

Image
#ಶಾರದ ವೀಣಾಪಾಣಿಯಿವಳು ಬ್ರಹ್ಮನ ರಾಣಿ ಅಕ್ಷಮಾಲಾ ಪುಸ್ತಕ ವೀಣಾಧಾರಿಣಿ ವಿದ್ಯೆಯಿತ್ತು ಪಾಲಿಸೆ ವಿದ್ಯಾದಾಯಿನಿ ಸಕಲರ ಪೊರೆಯಮ್ಮ ಬುದ್ಧಿಶಿರೋಮಣಿ ಶುಭ್ರವಸ್ತ್ರಾನ್ವಿತೆ  ಶುಭ್ರರೂಪಧರೆ ಶ್ವೇತಕಮಲದಲಿ ವಾಸಿಪ ಮಧುರೆ ಹಂಸವಾಹಿನಿ ಮಾತೇ ಕಾಮಿತದಾಯಿನಿ ನೀಡಮ್ಮ ಶುಭಮತಿ ವಿದ್ಯಾಪ್ರದಾಯಿನಿ ಸಿದ್ಧಿ ಶಿರೋಮಣಿ ಬುದ್ಧಿಪ್ರಕಾಶಿನಿ ತ್ರೈಲೋಕ್ಯ ಪೂಜಿತೇ ಪ್ರಸನ್ನ ವದನೆ ಜಯತು ಸರಸ್ವತಿ ಸುರಸ ಅಮೃತವಾಣಿ ಸದ್ಭುದ್ಧಿ ನೀಡಮ್ಮ ವರವಿದ್ಯಾಭೂಷಿಣಿ          ಶೈಲೂ.....

324 ನಮ್ಮ ಊರು ನಮ್ಮ ಹೆಮ್ಮೆ

Image
#ನಮ್ಮ_ಊರು_ನಮ್ಮ ಹೆಮ್ಮೆ ನಮ್ಮ ಊರು ಬೆಂಗಳೂರು ವಿವಿಧತೆಗಳ ತವರೂರು ಪ್ರಪಂಚದ ನಾನಾ ತಾಣಗಳ ಜನಜಂಗುಳಿಗುಂಟಿಲ್ಲಿ ನೆಲೆ ಕೆಂಪೇಗೌಡರ ಬೆಂದಕಾಳೂರು ಕರ್ನಾಟಕದ ರಾಜಧಾನಿ ನನ್ನ ತವರು ಸಿಲಿಕಾನ್ ಸಿಟಿಎಂಬ ಹೆಸರು ತಂತ್ರಜ್ಞಾನದಲ್ಲಿ ಮೇರು ನಗರ ದೇವತೆಯಿಲ್ಲಿ ಅಣ್ಣಮ್ಮ ಜನತೆಯ ಸದಾ ಕಾಪಿಡುವಳಮ್ಮ ಅವಳ ಜೊತೆಗಿದೆ ಸಕಲ ದೇವಗಣ ನಿರಂತರ ರಕ್ಷಣೆಯಲ್ಲೇ ಮನ ಹಳ್ಳಿಯ ಸೊಗಡಿನ ಜಾತ್ರೆಯಿದೆ ಬಸವನ ಕಡಲೆಕಾಯಿ ಪರಿಷೆ ಬೃಹತ್ ಬಸವನ ಜೊತೆ ಗಣಪ ನಂಬಿಬಂದವರನ್ನೆಲ್ಲ ರಕ್ಷಿಪ ಸಂಕ್ರಾಂತಿಯ ಬೆರಗಿಗಿಲ್ಲಿ ಸಾಕ್ಷಿ ಗವಿ ಗಂಗಾಧರೇಶ್ವರ ದೇಗುಲ ಸ್ವಾಮಿ, ಭಕ್ತನ ಪ್ರೀತಿಗಿಲ್ಲಿ ಸಾಕ್ಷಿ ರಾಮಾನಂಜನೆಯ ಗುಡ್ಡ ವಿಶಾಲ ಉದ್ಯಾನದ ಜೀವಂತಿಕೆ ವಿಖ್ಯಾತ ಲಾಲ್ಬಾಗ್ ಕಬ್ಬನ್ಪಾರ್ಕ್ ವ್ಯಾಪಾರೋದ್ಯಮಕೇ ಹೆಸರು ಸಾಂಸ್ಕೃತಿಕತೆಗೂ  ಉಸಿರು ಇಲ್ಲಿ ಇಲ್ಲವೆಂಬುದೇ ಇಲ್ಲ ಪ್ರೀತಿಗೂ ಸೈ ದ್ವೇಷಕ್ಕೂ ಜೈ ಆಚಾರ ವಿಚಾರಕ್ಕಿದೆ ತಾವು ಅನೈತಿಕತೆ ಅನಾಚಾರದ ಟಾವು ವಿಸ್ಮಯದ ಭ್ರಮಾಲೋಕ ವಿಳಾಸ ಜೀವನಕೆ ನಾಕ ಜೊತೆಗಿದೆ ವಿವಿಧ ಪ್ರಾಂತ್ಯಗಳ ಹೆಸರಾಂತ ಬಗೆಬಗೆಯ ನಳಪಾಕ ಜಗವ ಸುತ್ತದಿದ್ದರೂ ಸರಿ ಇಲ್ಲೇ ಇದೆ ಸರ್ವ ಜಗದ ಸಿರಿ ಇದು ನನ್ನ ಮೆಚ್ಚಿನ ತವರೂರು ನನ್ನ ಹೆಮ್ಮೆಯ ಬೆಂಗಳೂರು    ಶೈಲಜಾ ರಮೇಶ್

322 ಹನಿಗವನ ಮುತ್ತಿನಾರಾತಿ

Image
#ಹನಿಗವನ #ಮುತ್ತಿನಾರತಿ ತನ್ನವರೆಲ್ಲರ ತೊರೆದು ತಾಯ್ನಾಡಿನ ಸೇವೆಯೇ ಹಿರಿದು ಎಂದೆನ್ನುತ ಅರಿಗಳ ತರಿದು ಜಯತಂದ ಯೋಧರಿಗೆ ಮುತ್ತಿನಾರಾತಿ ಪ್ರಾಣದ ಹಂಗನು ತೊರೆದು ಚಳಿ ಗಾಳಿ ಮಳೆಯೆನ್ನದೆ ನೆನೆದು ಗಡಿಗಳಲ್ಲೇ ವೈರಿಗಳ ಸೆದೆಬಡಿದು ತಾಯ್ನಾಡನು ರಕ್ಷಿಸಿದರಿಗೆ ಮುತ್ತಿನಾರಾತಿ ಡಾ: B.N. ಶೈಲಜಾ ರಮೇಶ್

320 ಭೂರಮೇಯ ಶೃಂಗಾರ

Image
#ಶೀರ್ಷಿಕೆ #ಹಸಿರ_ಹೊದಿಕೆಯಲಿ_ಭೂರಮೆಯ_ಶೃಂಗಾರ ಮೇಳೈಸಿದೆ ಎಲ್ಲೆಲ್ಲೂ ಮುಂಗಾರುಮಳೆ ತಣಿದು ನಲಿದಳು ಬಾಯಾರಿದ್ದ ಇಳೆ ಮಳೆಯ ಜಳಕದಿ ಮಿಂದೆದ್ದ ಭೂಮಿ ಬಂಗಾರ ಹಸಿರ ಹೊದಿಕೆಯು ಭೂರಮೆಯ ಶೃಂಗಾರ ಪ್ರಕೃತಿ ಸೊಬಗ ವಿಸ್ಮಯಕೆ ತಲೆದೂಗಿದೆ ಬಾನು ಗಿಡಮರಗಳನೊಡಲಲೊತ್ತು ನಗುತಿದೆ ಕಾನು ತಲತಲನೆ ಹರಿವ ಜಲತರಂಗ ಸುಂದರ ನೋಡಿದಷ್ಟೂ ತಣಿಯದ ಭೂರಮೆಯ ಸಿಂಗಾರ ಸಸ್ಯ ಶ್ಯಾಮಲೆ ನಸುನಗುತಿಹಳಿಲ್ಲಿ ನೋಡು ಬಣ್ಣನೆಗೆ ನಿಲುಕದ ಸುಂದರ ಸುಶ್ರಾವ್ಯ ಹಾಡು ಸ್ವರ್ಗವೇ ಕೆಳಗಿಳಿದು ಮೇಳೈಸಿತೇ ಧರೆಗೆ ಇಳೆಯ ಸೌಂದರ್ಯವ ಹಚ್ಚಲಾದೀತೇ ಒರೆಗೆ ಎತ್ತ ನೋಡಿದರತ್ತ ಸುತ್ತ ಹಸಿರೇ ಹಸಿರು ತೆಂಗು ಕಂಗು ಬಾಳೆ ಕೃಷಿಕ ಮಿತ್ರರ ಉಸಿರು ತಂಗಾಳಿಗೆ ತಲೆದೂಗುವ ಪಚ್ಚೆಪೈರುಗಳೇ ಚೆನ್ನ ನೀ ನಳನಳಿಸಿದರೆ ತಾನೇ ನಮಗುಣ್ಣಲು ಅನ್ನ         ಶೈಲೂ.....

319 ವ್ಯಂಜನಾಕ್ಷರಗಳ ಕವನ

Image
#ವ್ಯಂಜನಾಕ್ಷರಗಳ ಕವನ ಕಣ್ಣಂಚಲ್ಲೇ ಕಾಡಿ ಕರೆದೆ, ಕಣ್ಣ ಖಡ್ಗದಲ್ಲೇ ಇರಿದೆ ನನ್ನೆದೆಯ ಗಂಡೆಂದರೆ ನೀನೇ ಎಂಬ ಗಮ್ಮತ್ತಲ್ಲಿ ಘಮ್ಮೆನ್ನೊ ಪ್ರೀತಿ ಪರಿಮಳವ ಸೂಸಿದೆ ಚಂದ್ರನಂತಹ ಮೊಗದವನೆ ನೀನು ಛಲವಿಡಿದು ಮರುಳುಮಾಡಿದೆ ನನ್ನ ಜರಿದರೂ ಕೇಳದೆ, ನೀ ಸುರಿಸಿದ ಪ್ರೀತಿ ಝರಿಯಲ್ಲಿ ತೋಯಿಸಿಬಿಟ್ಟೆ ಜ್ಞಾನದ ಕಣ್ಣ ತೆರೆಯಿಸಿಬಿಟ್ಟೆ ಟಪಟಪನೆ ಸುರಿವ ಮಳೆಹನಿಯಲ್ಲಿ ಠಳಾರನೆ ಸುಳಿದ ಸುಳಿಮಿಂಚಲ್ಲಿ ಡಂ ಡಂ ಎನ್ನುವ ಗುಡುಗಿಗೆ ಹೆದರಿ ಢಾಳಾಗಿ ನಾ ನಡುಗುತ್ತಿರುವಾಗ ಕ್ಷಣಮಾತ್ರದಲ್ಲಿ ಅಪ್ಪಿ ಮೈ ಮರೆಸಿದೆ ತಬ್ಬಿನಿಂತ ನಿನ್ನ ತೊಳಲ್ಲಿ ನಾ ಬಂಧಿ ಥಳಥಳನೆ ಹೊಳೆವ ಕಣ್ಣಲ್ಲಿ ನಾ ಕಂಡೆ ದಯನೀಯ ಗುಣವ.... ಚೆಲುವ ಧನ್ಯತೆಯಲಿ ತುಂಬಿ ಬಂತು ಕಣ್ಣು ನಯನದಲಿ ಸುರಿಯಿತು ಪ್ರೇಮಾಶ್ರು ಪಲ್ಲವಿಸಿತಾಗ ಪ್ರೀತಿಯ ಕೊನರು ಫಲಾಫಲದ ನಿರೀಕ್ಷೆ ಎನಗಿಲ್ಲ ಬದುಕು ಬಂದಂತೆ ನಡೆವೆ.. ನಿನ್ನ ಭವ್ಯ ಪ್ರೇಮ ಮಂದಿರದಲಿ ಮಂದಾರದಂತರಳುವೆ ನಾ ಯಜ್ಞ ಮಾಡದೆ ಪಡೆದೆ ನಾ ನಿನ್ನ  "ರಮೇಶ"  ನೀ ನನ್ನ ಬಾಳಿನ ಚಿನ್ನ ಲಕ್ಷ್ಯ ವಿಟ್ಟು  ನಮಿಪೆ ಆ ದೇವಗೆ ವರ ನೀ ತಂದೆ ನನ್ನ ಬಾಳಿಗೆ ಶಾಂತ ಸ್ವಭಾವದ ಗೆಳೆಯ ನೀ ಷರತ್ತುಗಳಿಲ್ಲದ ಪ್ರೇಮವಿತ್ತೆ ಸವಿಗಾನದಂತಿದೆ ಬದುಕು ಹರಸಿ ಕೊಟ್ಟನೇನು ನನ್ನ ಕೃಷ್ಣ ನಿನ್ನ .. ತ ಳಮಳವಿಲ್ಲದೇ ಬದುಕು ಸಾಗಿದೆ ಗುರಿಯೆಡೆಗೆ ಕ್ಷಮಿಸಿಬಿಡು.. ನನ್ನ ಸಣ್ಣಪುಟ್ಟ ದೋಷಗಳ        ಶೈಲಜಾ ರಮೇಶ್