Posts

259 ಜೋಕೆ ಮನಸೇ

ಶ್ರೀಮಾನ್ ರಮೇಶ್ ಗುಬ್ಬಿ ಅವರ ಜೋಕೆ ಮನಸೇ ಕವನದಿಂದ ಪ್ರೇರಿತ ಥ್ಯಾಂಕ್ಸ್ ರಮೇಶ್ ಸರ್🙏🙏  ಜೋಕೆ... ಮನಸೇ..!! ****************** ಅಭಿಮಾನವುಕ್ಕಿಸುವ ಆತ್ಮಗೌರವವಿರಬೇಕೆ..ಹೊರತು ಅದಃಪತನಕ್ಕೆ ತಳ್ಳುವ ಅಹಂಕಾರ ವಿರಬಾರದು ಎಲ್ಲ ಮೆಚ್ಚುವ ತೆರದಿ ತಗ್ಗಿನಡೆವ ವಿಧೇಯತೆಬೇಕೆ ಹೊರತು ತುಳಿಸಿಕೊಂಡು ಮರುಗುವ ಶೋಷಿತರಾಗಬಾರದು ಕಾರ್ಯ ಕಾರಣದಲಿ ಉತ್ಸಾಹಿಯಾಗಿರಬೇಕೆ ಹೊರತು ಆಪತ್ತು ವಿಪತ್ತೊ ಡ್ಡುವ ಉನ್ಮತ್ತನಾಗಬಾರದು ತೀರದ ಪ್ರೀತಿಯ ಹಂಬಲವಿರಬೇಕೆ ಹೊರತು ಪರದಾಸ್ಯಕ್ಕೆಡೆಕೊಡುವ ಕುರುಡು ಪ್ರೇಮವಿರಬಾರದು ಭರವಸೆಯ ಬಾಳಿನ ಕನಸು ಕಾಣಬೇಕೆ ಹೊರತು ಬಾಳಿನ ಭರವಸೆಯೇ ಕನಸಾಗಬಾರದು ಪ್ರೀತಿಯಲಿ ಜಗವ ಗೆಲ್ಲುವೆನೆಂಬ ದಿಟ್ಟ ಭರವಸೆಯಿರಬೇಕೇ ಹೊರತು ಜಗವೇ ನನ್ನದೆಂಬ ಕುರುಡು ಭ್ರಮೆಯಲ್ಲಿ ಮುಳುಗಬಾರದು ಆರೋಗ್ಯಕರ ಹಿತ ಕೋಪವಿರಬೇಕೇ ಹೊರತು ಅಂತರಂಗವನ್ನೇ ದಹಿಸುವ ಜ್ವಾಲಾಮುಖಿ ಯಾಗಬಾರದು ದಯಾ ಪ್ರೇಮಪೂರಿತ ಆರಾಧನೆಯಿರಬೇಕೇ ಹೊರತು ವಿವೇಕ ಶೂನ್ಯತೆಯಲಿ ಅಂಧರಾಗಬಾರದು ಬಾಳ ಬೆಳಗಿಸಲು ಜ್ಯೋತಿಯಾಗಬೇಕೇ ಹೊರತು ಉನ್ಮತ್ತತೆಯಲಿ ಮೆರೆದು ದಹಿಸುವ ಜ್ವಾಲೆಯಾಗಬಾರದು ಮನವರಳಿಸುವ ನಲಿವಿನ ಮಧುರ ನೆನೆಪಾಗಬೇಕೇ ಹೊರತು ಮನಹಿಂಡುವ ನೋವಿನ ವ್ಯಥೆಯ ಕಥೆಯಾಗಬಾರದು           ಶೈಲೂ......

258 ಕವಿಯ ಮುಂದೆ ದೇವರು ನಿಂತಾಗ

Image
ಕವಿಯ ಮುಂದೆ ದೇವರು ನಿಂತಾಗ ******************************* ಕವಿಯ ಮುಂದೆ ಆ ದೇವ ನಿಂತಾಗ ಕೇಳುವುದಕೆನಾದರೂ ಪದಗಳಿವೆಯೇ ಮಾತು ಹೊರಬರಲಾಗದೇ ಸ್ಥಬ್ದ ಮೌನ..! ಕೇಳಲಿವೆ ಸಾವಿರಾರು ವಿಷಯಗಳು ಸೃಷ್ಠಿಯಲ್ಲಿನ ಏರುಪೇರಿನ ಕಥೆಗಳು ಆದರೆಕೋ ತುಟಿಬಿಚ್ಚಲಾಗದ ಅವಸ್ಥೆ..! ಮುರಿದ ಸಂಬಂಧದ ಸಂಕೋಲೆಗಳು ಹೊರಬರಲಾರದೇ ಮಿಡಿವ ಹೃದಯಗಳು ಕೇಳಲಿವೆ ಮನಹಿಂಡುವ ವ್ಯಥೆಯ ಕಥೆ..! ದುರಾಸೆಗೆ ಬಲಿಯಾದ ಅಮಾಯಕ ಜೀವ ಸ್ವಾರ್ಥ ಲಾಲಸೆಯಲಿ ಮೆರೆದ ಬೇಧಭಾವ ದ್ವೇಷ ಜ್ವಾಲೆಗೆ ತತ್ತರಿಸಿದ ಮುಗ್ಧ ಪ್ರೇಮ.! ಜಗವ ಕಾಣುವ ಮೊದಲೇ ಮಣ್ಣಾದ ಭ್ರೂಣ ಕಾಮುಕರ ಅಟ್ಟಹಾಸಕೆ ಬಲಿಯಾದ ಪ್ರಾಣ ಏಕಿಂತ ಕ್ರೂರತನ ನಿನ್ನೀ ಸೃಷ್ಟಿಯಲಿ..! ತುತ್ತನ್ನಕೇ ಆಹಾಕಾರ ಬೆವರ್ಹರಿಸಿ ದುಡಿದ್ರೂ ಹೆತ್ತವರಿಗೆ ತುತ್ತಿಡದ ದುರುಳ ಮನುಜರು ಹೀಗೇಕೆ ಅಸ್ವಸ್ಥ ಮನದ ಮಾನವರು.! ಕರುಣೆಯೇ ಇಲ್ಲದ ಕಲ್ಲಿನಂಥ ಮನ ತಿನ್ನುವ ಅನ್ನಕೇ ವಿಷವಿಕ್ಕುವ ಜನ ಏನೀ ಸೃಷ್ಟಿ ವೈಪರೀತ್ಯಕೆ ಕಾರಣ..! ಕೇಳಲಿವೆ ಇನ್ನೂ ಏನೇನೋ.... ಆ ದೇವನ ಪ್ರಭೆಯೆದುರು ಮಂಕಾದೆ ನಾನು ಮನದಲ್ಲಿನ ಮಾತು ಅಲ್ಲೇ ಮರೆಯಾಯ್ತೆನೋ...           ಶೈಲೂ.....

257 ವಚನ

Image
ವಚನ ***** ವಚನವೆಂದರೆ ಭಾವುಕತೆಯಲಿ ನುಡಿದ ನಲ್ಮೆಯ ನುಡಿಯಲ್ಲ ಆಸ್ಥೆಯಿಂದ ಜತನ ಮಾಡುವ ಒಪ್ಪಂದದಲಿ  ಕೊಟ್ಟಮಾತು... ವಚನವೆಂದರೆ ಉಡಾಫೆಯಲಿ ಮನಬಂದಂತೆ ಉಲಿಯುವುದಲ್ಲ ಅಂತರಾಳದಿಂದುಕ್ಕಿಬರುವ ಆಣೆ ಪ್ರಮಾಣದಲಿ ಕೊಟ್ಟಮಾತು.. ವಚನವೆಂದರೆ ಸುಮ್ಮನೆ ಬರಿದೇ ನುಡಿವ ಸರಳ ನುಡಿಗಟ್ಟಲ್ಲ ಆಡಿದಂತೆಯೇ ನಡೆಯಲು ಅಭಿಮಾನದಲಿ ಕೊಟ್ಟ ಮಾತು.. ವಚನವೆಂದರೆ  ತೋರಿಕೆಯ ಒಣ ಜಂಭದ ಮಾತಲ್ಲ ನಮ್ಮದೇ ನುಡಿಯ ಮೇಲಣ ನಮಗಿರುವ ಅಕ್ಕರಾಸ್ಥೆ... ವಚನವೆಂದರೆ ತುಟಿಯಂಚಲಿ ಹೊರಬಿದ್ದ ಜಾಳು ಮಾತಲ್ಲ ಜಗಮೆಚ್ಚುವಂತೆ ನಿಷ್ಠೆಯಲಿ ಪಾಲಿಸುವ ತಲೆದೂಗುವ ಮಾತು.. ವಚನವೆಂದರೆ ಮಾತಿನ ಮೇಲಿನ ಹೊಣೆಗಾರಿಕೆಯ ಹಿಡಿತ ಶ್ರೇಷ್ಠ ಚಿಂತನೆಗಳಡಿಯಲ್ಲಿ ಬರುವ ಜವಾಬ್ದಾರಿಯುತ ದಿಟ್ಟ ಮಾತು.. ಅಂದು ಹಿಡಿದಿಟ್ಟಿದ್ದರು ಆಸ್ಥೆಯಲಿ ಸಂತ ಶಿವ ಶರಣರು ವಚನ ರೂಪಿನಲಿ ತಮ್ಮಂತರಂಗದ ದಿವ್ಯಾನುಭವಗಳ ಅನನ್ಯ ಅನುಭವೋಕ್ತಿಗಳ ಸೂಕ್ತಿ.. ಹೊರಹೊಮ್ಮಿತ್ತಂದು ವಚನದಲಿ ಸಾಮಾಜಿಕ ಕಳಕಳಿಯಡಿಯಲ್ಲಿ ಲಿಂಗಜಂಗಮ ಸಂವಾದ ರೂಪಿ ಮನೋಜ್ಞ ವಾಙ್ಮಯ ಜ್ಞಾನಧಾರೆ.. ನಾವಲ್ಲ ಶರಣ ಸಂತ ದಾಸರು ಸುರಿಸಲು ವಚನ ದಿವ್ಯಾಮೃತ ಹಿಡಿತವಿದ್ದರಷ್ಟೇ ಸಾಕು ಮಾತಿನಲಿ ಸ್ಪುರಿಸಲಿ ಪ್ರೀತಿ ಅದುವೇ ವಚನಾಮೃತ..            ಶೈಲೂ......

256 ಹಾಸ್ಯ ಕವನ

Image
ಹಾಸ್ಯಕವನ## 😊 ಹಾಸ್ಯ ಕವನ ಒಂದನು  ಬರೀಬೇಕು ಅಂತ ಕೂತೆ ಯಾವತ್ತೂ ಬರದ ನೆಂಟ ಅಪರೂಪಕ್ಕೆ ಇವತ್ತೇ ಬರಬೇಕೆ.? ಅತ್ತೆ ಯವರ ಅಣತಿ ಆಯ್ತು ಏನಾದ್ರೂ ಸ್ಪೆಷಲ್ ಮಾಡು ಮಾಡೋಕ್ಕೆ ಬೇಕಾದಷ್ಟಿದೆ ಕೆಲ್ಸ ಇದ್ಬೇರೆ ಅಂದೆ ಉರ್ಕೊಂಡು ಅಪರೂಪದ ನೆಂಟ ಅವನು ತಿರುವ ಬೇಡ ಮೂತಿ ಸೊಟ್ಟ ಕಥೆ ಕವನ ಹೊಟ್ಟೆ ತುಂಬ್ಸಲ್ಲ ನೆಟ್ಟಗೆ ಮಾಡಿ ಬಡಿಸು ಊಟ ಅತ್ತೆಮ್ಮನ ಮಾತಿನ ಮುಂದೆ ನನ್ಯಾವ್ದೇ ಆಟ ನಡೆಯಲ್ಲ ಏನಾದ್ರೂ ಮಾಡಿ ಬಡಿಸಿದ್ರಾಯ್ತು ಅಂತ ಕಿಚನ್ಗೆ ಹೋದ್ನಲ್ಲ ತಲೇಲಿ ಬರೀ ಕವನದ್ಚಿಂತೆ ಕೆಲ್ಸ ಬರೀ ಯಾಂತ್ರಿಕತೆ ಹಾಸ್ಯದ್ಕವನ ಎನ್ಬರೀಲಿ ಅಂತ ಏನೋ ಒಂದಡ್ಗೆ ಮಾಡಿಟ್ಟೆ ಊಟ ಬಡ್ಸೋವಾಗ್ಲೇ ಗೊತ್ತಾದದ್ ನಾ ಮಾಡಿದ್ ಎಡವಟ್ಟು ಸಾರಿನ್ ಮಾಸಾಲೆ ಪಾಯ್ಸಕ್ಕಾಕಿ ಬೇಳೆತರಕಾರಿಗ್ಹಾಕಿದ್ದೇ ಬೆಲ್ಲ ಕಾಯ್ಹಾಲು ನೆಂಟ ಕಣ್ಕಣ್ಬಿಟ್ಟು ನೋಡ್ತಾಯಿದ್ದ ಇದ್ಯಾವ್ ನಮೂನೆ ಅಡ್ಗೆ ಅಯ್ಯೋ ಅಣ್ಣಾ ನಿಮ್ಗೊತ್ತಿಲ್ವಾಂದೆ ಇದು ಹೊಸಾರುಚಿ ಅಡುಗೆ ಮಸಾಲೆ ಅದ್ಲು ಬದ್ಲಾದ್ರೆನಂತೆ ರುಚಿಯಿತ್ತು ಒಂಥರಾ ಮಸ್ತು ಕೆಳಗ್ಬಿದ್ರೂ ಮೀಸೆ ಮಣ್ಣಾಗಲಿಲ್ಲ ರುಚಿ ನೋಡಿ ನೆಂಟ ಸುಸ್ತು ಎಡ್ವಟ್ಮಾಡಿ ಸುಸ್ತಾಗಿದ್ದೀನಿ ಇನ್ನೇನ್ ಬರೀಲಿ ಕವಿತೆ.? ಇದೇ ಮಹಾನೈವೇದ್ಯ ಅಂತ ಹೊಟ್ಟೆಗ್ ಹಾಕ್ಕೋಳ್ರೀ ಮಾತೇ           ಶೈಲೂ......

255 ಹಾಸ್ಯ ಕವನ

Image
ಹಾಸ್ಯ ಕವನ ********** ಎನ್ಬರೀಲಿ ಹಾಸ್ಯಾ? ಇದ್ಯಾಕೋ ತಲೆ ಕೆಡೋ ವಿಸ್ಯಾ ಏನೂ ತಲೀಗ್ ಹೊಳೀತಿಲ್ಲ ಏನ್ ಬರೀಲಿ ಸಿಸ್ಯಾ? ಅಡ್ಗೆ ವಿಸ್ಯ ಬರ್ಯಾಣ ಅಂದ್ರೆ ಎಲ್ರೂ ಅದ್ನೇ ಬರ್ದವ್ರೆ ಪ್ರೀತಿ ಪ್ರೇಮ ಬರ್ಯೋದಂದ್ರೆ ಯಾಕೋ ಬಲು ಹೆದ್ರಿಕೆ ಸ್ಕೂಲಿನ್ ತರ್ಲೆ ಹೇಳೋನಾಂದ್ರೆ ನನ್ಮರ್ವಾದೆ ನಾನೇ ತೆಗ್ದಂಗೆ ಕಾಲೇಜ್ ವಿಸ್ಯಾ ಬ್ಯಾಡಾ ದೇವ್ರೇ ನೆನ್ಸ್ಕಂಡ್ರೆ ಭಯ ಆಯ್ತದೆ ಹುಡ್ಗುನ್ ನೋಡಿದ್ ವಿಸ್ಯ ಹೇಳ್ದ್ರೆ ನನ್ಮರ್ವಾದೆನೇ ಮಾಯಾ ಇನ್ಮದ್ವೇ  ಮಕ್ಕಳ ವಿಸ್ಯ ಹೆಂಗೇಳ್ಳೊ ಮಾರಾಯ ಕೆಲ್ಸ ಮಾಡಿದ್ ವಿಸ್ಯಾ ಕೇಳ್ದ್ರೆ ಬಾಯ್ಬಾಯ್ ಬಿಟ್ ನಗ್ತೀರಿ ತೋಚಿದ್ ಗೀಚಿಡ್ ಕವಿತೆ ಓದಿದ್ರೆ ಇದು ಐಲೋ ಪೈಲೋ ಅಂತೀರಿ ಇನ್ನೇನ್ ಬರೀಲಿ ಗೊತ್ತಾಗ್ತಿಲ್ಲ ತಲೆ ತುಂಬಾ ಜೇಡಿಮಣ್ಣು ತೆಪ್ಪಾಗಿದ್ರೆ ಹೊಟ್ಟೆಗಾಕ್ಕಳಿ ನಾನಂತೂ ಮುಗ್ದ ಹೆಣ್ಣು ದಿನಾ ನಡ್ಯೋ  ಮನೆವಾರ್ತೆ ಎಲ್ರ ಮನೆಲೂ ಇದ್ದದ್ದೇ ಆದ್ರೂ ಒಂದೆಳ್ತೀನ್ ಕೇಳು ದರ್ಬಾರ್ಮಾತ್ರ ಹೆಂಡ್ತೀದೇ                ಶೈಲೂ....

254 ಹೆಂಡತಿ

Image
ಹೆಂಡತಿ ******* ಸಂಸಾರ ಸಾಗರದ ಸರಳ ನೌಕೆ ಕಷ್ಟದಲೂ ನಗುತ ಜೊತೆಯಾದಾಕೆ  ಪ್ರೀತಿಗೆ ಹೊಸ ವ್ಯಾಖ್ಯಾನ ಬರೆದವಳು ನಗುತೆಲ್ಲ ನೋವ ಮರೆಸುವಳು ಮನೆಮನಕೆ ಯಜಮಾನಿ ಈ ಸಂಗಾತಿ ಆಳಂತೆ ಜೀವ ಸವೆಸುವಳು ನಿಜದ ಸಂಗತಿ ಸಂಸಾರದ ನೊಗಕ್ಕೆ ಎತ್ತಾದವಳು ಶಾಂತಿ ನೆಮ್ಮದಿ ಜೀವನಕೆ ಮುತ್ತಾದವಳು ಮಾಡುತ ಮನೆಮಂದಿಯ ಆರೈಕೆ ತೇಯುವಳು ಜೀವ ಸಂತಸದ ಜೀವನಕೆ ಪ್ರೇಮಪ್ರಭೆಯ ಬೀರಿ ಅಲಂಗಿಸುವಳೆಲ್ಲರನು ಪ್ರಸನ್ನತೆಯೇ ಆಸ್ತಿ ಪ್ರೀತಿತೋರುವ ಕಾಮಧೇನು ಬಾಳಪಥದಲಿ ದಾರಿತೋರುವ ಜ್ಯೋತಿ ಸಮಯಕೊದಗುವ ಸಚಿವೆ ಚತುರಮತಿ ಗೃಹಿಣಿಇದ್ದರೆ ತಾನೇ ಗೃಹಮುಚ್ಯತೇ ಇಲ್ಲದಿರೆ ಬದುಕು ಶೂನ್ಯ ಗಂಡೇ ಅರಿವಾಯಿತೇ? ಆ ದೇವನಿತ್ತ ವರ ಪುರುಷನಿಗೆ ಸತಿ ಜೊತೆಯಾಗಿ ಬಾಳ ಬೆಳಗುವ ಪ್ರಣತಿ ಮಕ್ಕಳಿಗೆ ಮಮತೆಯೀವ ವಾತ್ಸಲ್ಯಮಯಿ ಸರ್ವರನು ತಬ್ಬಿ ಸಲಹುವ ಪ್ರೇಮಮಯಿ ಮಡದಿ ಇದ್ದೆಡೆ ಮನಕುಲ್ಲಾಸ ಆಸ್ಮಿತೆ ಆರುಗುಣಗಳ ಹೊತ್ತ ಸಹದರ್ಮಪತ್ನೀ ಸತಿಯಿದ್ದರೆ ಸದಾ ತಂಪು ತಂಗಾಳಿ ಹೆಂಡತಿ ಬಾಳ ರಥವನೆಳೆಯುವ ಗಾಲಿ ನಾರಿ ಮುನಿದರೆ ಮಾರಿ.. ಜೋಕೆ..!! ಬಯಸುವಳವಳು ನಿನ್ನ ಸಾಂಗತ್ಯಕೆ ನೋಯಿಸದಿರು ಮನವ ಕುಲನಾರಿಯವಳು ಸುಖಸಂಸಾರಕೆ ಅವಳೆ ಬೆಳದಿಂಗಳು ಇರಲಿ ಗಂಡೇ...ಆದರ ಬದುಕಿತ್ತ ಭಗಿನಿಗೆ ತವರ ತೊರೆದು ಬಂದವಳವಳು ನಿನ್ನ ಪ್ರೀತಿಗೆ ದೇವಿಯಂತೆ ಮೆರೆಸುವುದು ಬೇಡ ಪ್ರೇಮವಿರಲಿ ಸಾಕು ಪರಿಪೂರ್ಣ ಬದುಕಿಗೆ ಸತಿಯ ಸಹಕಾರ ಬೇಕು             ಶೈಲೂ.....

253

Image
ನನ್ನ ಜೀವನ ನನ್ನಕಥೆ## ವಿಫಲವಾದ ನನ್ನ ಪ್ರಯತ್ನ##         ನಂಗ್ಯಾಕೋ ಮೊದಲಿಂದಲೂ ವೈರಾಗ್ಯದ ಕಡೆಗೇ ಗಮನ,  ನಮ್ಮ ಸುಖ ಸಂಸಾರದ ಬಗ್ಗೆ ಅತೀವ ಅಭಿಮಾನವಿತ್ತಾದರೂ ಮನದಲ್ಲಿ ಇದಕ್ಕಿಂತಲೂ ಮೀರಿ ಬೇರೆ ಏನೋ ಇದೆ.. ಅದನ್ನ ಪಡೆಯುವ ಯತ್ನ ಮಾಡ್ಬೇಕು ಅನ್ನೋ ಅತೀವ ಆಸೆ,  ಹಾಗಾಗಿ ಬಾಲ್ಯದಿಂದಲೇ ಪುರಾಣ ಪುಣ್ಯ ಕಥೆಗಳ ಬಗೆಗೆ ಒಲವು.  ರಾಮಾಯಣ, ಮಹಾಭಾರತ  ಗ್ರಂಥದ ಪಾರಾಯಣ ಪ್ರತಿನಿತ್ಯ ಮಾಡ್ತಾಇದ್ದೆ..  ರಾಮಾಯಣದ ಮಾತಾ ಸೀತಾದೇವಿಯ ಪಾತ್ರ, ಮಂಡೋದರಿಯ ಪಾತ್ರ ಹಾಗೂ, ಮಾಹಾಭಾರತದ ಕುಂತಿಯ ಪಾತ್ರ ನನ್ನನ್ನು ಚಿಂತನೆಗೆ ಒರೆಗೆ ಹಚ್ಚಿದಂಥವು.  ಮಹಾಭಾರತದ  ಕೃಷ್ಣಲೀಲಾದಲ್ಲಿ ಬರುವ ರಾಧೆಯ ಪಾತ್ರವಂತೂ ಇಂದಿಗೂ ನನ್ನ ಕಾಡುವಂಥಹದು.   ಅವಳ ಅತೀವ ಪ್ರೇಮಭಕ್ತಿ, ಕೃಷ್ಣನ ಹೊರತಾಗಿ ಬೇರೆಲ್ಲಾ ವಿಷಯದಲ್ಲಿ ಅವಳ ನಿರ್ಲಿಪ್ತತೆ,.ಸಂಸಾರದಲ್ಲಿದ್ದೂ... ಇರದಂತಹ ಸ್ಥಿತಪ್ರಜ್ಞತೆ, ನನ್ನ ಮನಸ್ಸಿನಲ್ಲಿ ಏನೋ ಒಂತರಾ ವೈರಾಗ್ಯಭಾವ ಮೂಡಿಸಿಬಿಡ್ತು..  ಅದರಲ್ಲೂ ಶ್ರೀ ರಾಮಕೃಷ್ಣಾಶ್ರಮದ ಒಡನಾಟ ಬಂದ ಮೇಲಂತೂ ನಾನು ಸನ್ಯಾಸಿನಿ ಆಗಬೇಕು ಅನ್ನೋ ಆಸೆ ತೀವ್ರವಾಗುತ್ತಾ ಹೋಯ್ತು.. ಇದರ ಜೊತೆಜೊತೆಗೇ ವಿದ್ಯಾಭ್ಯಾಸ,  ಕಾಲೇಜು ಮುಗಿದ ತಕ್ಷಣವೇ ಆಶ್ರಮದ ಒಡನಾಟ, ಪ್ರತಿದಿನ ಅನೇಕ ಸದ್ವಿಚಾರಗಳ ಬಗ್ಗೆ ಪ್ರವಚನ ಕೇಳುತ್ತಾ, ಆಶ್ರಮದ ಹಿರಿಯ ಸನ್ಯಾಸಿಗಳಾದ ಶ್ರೀ...