256 ಹಾಸ್ಯ ಕವನ


ಹಾಸ್ಯಕವನ## 😊

ಹಾಸ್ಯ ಕವನ ಒಂದನು
 ಬರೀಬೇಕು ಅಂತ ಕೂತೆ
ಯಾವತ್ತೂ ಬರದ ನೆಂಟ
ಅಪರೂಪಕ್ಕೆ ಇವತ್ತೇ ಬರಬೇಕೆ.?

ಅತ್ತೆ ಯವರ ಅಣತಿ ಆಯ್ತು
ಏನಾದ್ರೂ ಸ್ಪೆಷಲ್ ಮಾಡು
ಮಾಡೋಕ್ಕೆ ಬೇಕಾದಷ್ಟಿದೆ ಕೆಲ್ಸ
ಇದ್ಬೇರೆ ಅಂದೆ ಉರ್ಕೊಂಡು

ಅಪರೂಪದ ನೆಂಟ ಅವನು
ತಿರುವ ಬೇಡ ಮೂತಿ ಸೊಟ್ಟ
ಕಥೆ ಕವನ ಹೊಟ್ಟೆ ತುಂಬ್ಸಲ್ಲ
ನೆಟ್ಟಗೆ ಮಾಡಿ ಬಡಿಸು ಊಟ

ಅತ್ತೆಮ್ಮನ ಮಾತಿನ ಮುಂದೆ
ನನ್ಯಾವ್ದೇ ಆಟ ನಡೆಯಲ್ಲ
ಏನಾದ್ರೂ ಮಾಡಿ ಬಡಿಸಿದ್ರಾಯ್ತು
ಅಂತ ಕಿಚನ್ಗೆ ಹೋದ್ನಲ್ಲ

ತಲೇಲಿ ಬರೀ ಕವನದ್ಚಿಂತೆ
ಕೆಲ್ಸ ಬರೀ ಯಾಂತ್ರಿಕತೆ
ಹಾಸ್ಯದ್ಕವನ ಎನ್ಬರೀಲಿ ಅಂತ
ಏನೋ ಒಂದಡ್ಗೆ ಮಾಡಿಟ್ಟೆ

ಊಟ ಬಡ್ಸೋವಾಗ್ಲೇ ಗೊತ್ತಾದದ್
ನಾ ಮಾಡಿದ್ ಎಡವಟ್ಟು
ಸಾರಿನ್ ಮಾಸಾಲೆ ಪಾಯ್ಸಕ್ಕಾಕಿ
ಬೇಳೆತರಕಾರಿಗ್ಹಾಕಿದ್ದೇ ಬೆಲ್ಲ ಕಾಯ್ಹಾಲು

ನೆಂಟ ಕಣ್ಕಣ್ಬಿಟ್ಟು ನೋಡ್ತಾಯಿದ್ದ
ಇದ್ಯಾವ್ ನಮೂನೆ ಅಡ್ಗೆ
ಅಯ್ಯೋ ಅಣ್ಣಾ ನಿಮ್ಗೊತ್ತಿಲ್ವಾಂದೆ
ಇದು ಹೊಸಾರುಚಿ ಅಡುಗೆ

ಮಸಾಲೆ ಅದ್ಲು ಬದ್ಲಾದ್ರೆನಂತೆ
ರುಚಿಯಿತ್ತು ಒಂಥರಾ ಮಸ್ತು
ಕೆಳಗ್ಬಿದ್ರೂ ಮೀಸೆ ಮಣ್ಣಾಗಲಿಲ್ಲ
ರುಚಿ ನೋಡಿ ನೆಂಟ ಸುಸ್ತು

ಎಡ್ವಟ್ಮಾಡಿ ಸುಸ್ತಾಗಿದ್ದೀನಿ
ಇನ್ನೇನ್ ಬರೀಲಿ ಕವಿತೆ.?
ಇದೇ ಮಹಾನೈವೇದ್ಯ ಅಂತ
ಹೊಟ್ಟೆಗ್ ಹಾಕ್ಕೋಳ್ರೀ ಮಾತೇ

          ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ