258 ಕವಿಯ ಮುಂದೆ ದೇವರು ನಿಂತಾಗ
*******************************
ಕವಿಯ ಮುಂದೆ ಆ ದೇವ ನಿಂತಾಗ
ಕೇಳುವುದಕೆನಾದರೂ ಪದಗಳಿವೆಯೇ
ಮಾತು ಹೊರಬರಲಾಗದೇ ಸ್ಥಬ್ದ ಮೌನ..!
ಕೇಳಲಿವೆ ಸಾವಿರಾರು ವಿಷಯಗಳು
ಸೃಷ್ಠಿಯಲ್ಲಿನ ಏರುಪೇರಿನ ಕಥೆಗಳು
ಆದರೆಕೋ ತುಟಿಬಿಚ್ಚಲಾಗದ ಅವಸ್ಥೆ..!
ಮುರಿದ ಸಂಬಂಧದ ಸಂಕೋಲೆಗಳು
ಹೊರಬರಲಾರದೇ ಮಿಡಿವ ಹೃದಯಗಳು
ಕೇಳಲಿವೆ ಮನಹಿಂಡುವ ವ್ಯಥೆಯ ಕಥೆ..!
ದುರಾಸೆಗೆ ಬಲಿಯಾದ ಅಮಾಯಕ ಜೀವ
ಸ್ವಾರ್ಥ ಲಾಲಸೆಯಲಿ ಮೆರೆದ ಬೇಧಭಾವ
ದ್ವೇಷ ಜ್ವಾಲೆಗೆ ತತ್ತರಿಸಿದ ಮುಗ್ಧ ಪ್ರೇಮ.!
ಜಗವ ಕಾಣುವ ಮೊದಲೇ ಮಣ್ಣಾದ ಭ್ರೂಣ
ಕಾಮುಕರ ಅಟ್ಟಹಾಸಕೆ ಬಲಿಯಾದ ಪ್ರಾಣ
ಏಕಿಂತ ಕ್ರೂರತನ ನಿನ್ನೀ ಸೃಷ್ಟಿಯಲಿ..!
ತುತ್ತನ್ನಕೇ ಆಹಾಕಾರ ಬೆವರ್ಹರಿಸಿ ದುಡಿದ್ರೂ
ಹೆತ್ತವರಿಗೆ ತುತ್ತಿಡದ ದುರುಳ ಮನುಜರು
ಹೀಗೇಕೆ ಅಸ್ವಸ್ಥ ಮನದ ಮಾನವರು.!
ಕರುಣೆಯೇ ಇಲ್ಲದ ಕಲ್ಲಿನಂಥ ಮನ
ತಿನ್ನುವ ಅನ್ನಕೇ ವಿಷವಿಕ್ಕುವ ಜನ
ಏನೀ ಸೃಷ್ಟಿ ವೈಪರೀತ್ಯಕೆ ಕಾರಣ..!
ಕೇಳಲಿವೆ ಇನ್ನೂ ಏನೇನೋ....
ಆ ದೇವನ ಪ್ರಭೆಯೆದುರು ಮಂಕಾದೆ ನಾನು
ಮನದಲ್ಲಿನ ಮಾತು ಅಲ್ಲೇ ಮರೆಯಾಯ್ತೆನೋ...
ಶೈಲೂ.....
Comments
Post a Comment