254 ಹೆಂಡತಿ


ಹೆಂಡತಿ
*******

ಸಂಸಾರ ಸಾಗರದ ಸರಳ ನೌಕೆ
ಕಷ್ಟದಲೂ ನಗುತ ಜೊತೆಯಾದಾಕೆ
 ಪ್ರೀತಿಗೆ ಹೊಸ ವ್ಯಾಖ್ಯಾನ ಬರೆದವಳು
ನಗುತೆಲ್ಲ ನೋವ ಮರೆಸುವಳು

ಮನೆಮನಕೆ ಯಜಮಾನಿ ಈ ಸಂಗಾತಿ
ಆಳಂತೆ ಜೀವ ಸವೆಸುವಳು ನಿಜದ ಸಂಗತಿ
ಸಂಸಾರದ ನೊಗಕ್ಕೆ ಎತ್ತಾದವಳು
ಶಾಂತಿ ನೆಮ್ಮದಿ ಜೀವನಕೆ ಮುತ್ತಾದವಳು

ಮಾಡುತ ಮನೆಮಂದಿಯ ಆರೈಕೆ
ತೇಯುವಳು ಜೀವ ಸಂತಸದ ಜೀವನಕೆ
ಪ್ರೇಮಪ್ರಭೆಯ ಬೀರಿ ಅಲಂಗಿಸುವಳೆಲ್ಲರನು
ಪ್ರಸನ್ನತೆಯೇ ಆಸ್ತಿ ಪ್ರೀತಿತೋರುವ ಕಾಮಧೇನು

ಬಾಳಪಥದಲಿ ದಾರಿತೋರುವ ಜ್ಯೋತಿ
ಸಮಯಕೊದಗುವ ಸಚಿವೆ ಚತುರಮತಿ
ಗೃಹಿಣಿಇದ್ದರೆ ತಾನೇ ಗೃಹಮುಚ್ಯತೇ
ಇಲ್ಲದಿರೆ ಬದುಕು ಶೂನ್ಯ ಗಂಡೇ ಅರಿವಾಯಿತೇ?

ಆ ದೇವನಿತ್ತ ವರ ಪುರುಷನಿಗೆ ಸತಿ
ಜೊತೆಯಾಗಿ ಬಾಳ ಬೆಳಗುವ ಪ್ರಣತಿ
ಮಕ್ಕಳಿಗೆ ಮಮತೆಯೀವ ವಾತ್ಸಲ್ಯಮಯಿ
ಸರ್ವರನು ತಬ್ಬಿ ಸಲಹುವ ಪ್ರೇಮಮಯಿ

ಮಡದಿ ಇದ್ದೆಡೆ ಮನಕುಲ್ಲಾಸ ಆಸ್ಮಿತೆ
ಆರುಗುಣಗಳ ಹೊತ್ತ ಸಹದರ್ಮಪತ್ನೀ
ಸತಿಯಿದ್ದರೆ ಸದಾ ತಂಪು ತಂಗಾಳಿ
ಹೆಂಡತಿ ಬಾಳ ರಥವನೆಳೆಯುವ ಗಾಲಿ

ನಾರಿ ಮುನಿದರೆ ಮಾರಿ.. ಜೋಕೆ..!!
ಬಯಸುವಳವಳು ನಿನ್ನ ಸಾಂಗತ್ಯಕೆ
ನೋಯಿಸದಿರು ಮನವ ಕುಲನಾರಿಯವಳು
ಸುಖಸಂಸಾರಕೆ ಅವಳೆ ಬೆಳದಿಂಗಳು

ಇರಲಿ ಗಂಡೇ...ಆದರ ಬದುಕಿತ್ತ ಭಗಿನಿಗೆ
ತವರ ತೊರೆದು ಬಂದವಳವಳು ನಿನ್ನ ಪ್ರೀತಿಗೆ
ದೇವಿಯಂತೆ ಮೆರೆಸುವುದು ಬೇಡ ಪ್ರೇಮವಿರಲಿ ಸಾಕು
ಪರಿಪೂರ್ಣ ಬದುಕಿಗೆ ಸತಿಯ ಸಹಕಾರ ಬೇಕು

            ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು