Posts

Showing posts from May, 2020

266 ಸುಖದುಃಖ

Image
ಸುಖ ದುಃಖ *********** ಸುಖ ದುಃಖಗಳೆರಡೂ ಬಾಳಿನ ಅವಿಭಾಜ್ಯ ಅಂಗ ಹಗಲಿರುಳಿನಂತೆ ಸದಾ ಒಂದ್ಕಕೊಂದಂಟಿದಂಥ ಸಂಗ ಆಸೆಯೇ ದುಃಖಕ್ಕೆ ಮೂಲ ಇದು ಜನಮನದ ನಾಳ್ನುಡಿ ಸಾಮರಸ್ಯ ಸುಖದ ಮೂಲ ಅರಿತಾಗ ಮದುರ ಬಾಳ ಮುನ್ನುಡಿ ಸುಖವಿದೆಯೆಂದು ಮೆರೆದು ಬೀಗಿದರಾಯ್ತು..ಹಿಂದೆಯೇ ಹೊಂಚುಹಾಕುವ, ಬಿಡದೆ ಕಡುಕಷ್ಟದ ದುಃಖದ ಧೂರ್ತ ದುಃಖವಿದೆಯೆಂದು ಮರುಗಿ ಕುಗ್ಗಿದರಾದೀತೆ..ಮುಂದಿದೆ ಬೆಳಗುವ ಬೆಳಕ ನಾಳೆಗಳ ಕಡುಸುಖದ ಸಿಹಿ ಹೂರಣ ದುಃಖ ಕಂಡಾಗಲೇ ಅರಿವು ಜೀವನದ ಸುಖದ ಬೆಲೆ ಶಾಂತಿ ಸಂಯಮದ ಬಾಳುವೆ ಹುಡುಕಿ ತಂದೀತು ಸುಖದ ನೆಲೆ ಇರಬೇಕು ಎರಡೂ ಬದುಕಲಿ ಸಮಾನಾಂತರ ರೇಖೆಯಂತೆ ಸಾಗಬೇಕು ಎಡವಿ ಬೀಳದೆ ಸುಖದುಃಖ ಬೇವುಬೆಲ್ಲದಂತೆ               ಶೈಲೂ.......

265. ನನ್ನ ಬರಹಗಳು (ಸಂಕ್ರಾಂತಿ)

Image
ಹರಿಃ ಓಂ ಸಂಕ್ರಾಂತಿ          ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ. "ಹಬ್ಬಗಳು". ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು.ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ವೈವಿದ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಹರಿದಿನಗಳಂತು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು, ರೀತಿ ನೀತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು. ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು "ಸಂಕ್ರಾಂತಿ" ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ಹಬ್ಬಗಳಲ್ಲಿ ಒಂದು.           ಸಂಕ್ರಾಂತಿ ಹಬ್ಬ ದೇಶದಾದ್ಯಂತ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ.     ಕನ್ನಡನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀ

264...ನನ್ನ ಬರಹಗಳು..(ನನ್ನ ಜೀವನ ನನ್ನ ಕಥೆ)

Image
ನನ್ನ ಜೀವನ ನನ್ನ ಕಥೆ## ಜೀವನ ಸಂಗಾತಿಯ ಆಯ್ಕೆ ಸಂದರ್ಭ *****************************           ಎಲ್ಲಾ ಹೆಣ್ಣು ಮಕ್ಕಳಿಗೂ ಮದುವೆ ಅಂದರೆ  ನವಿರುಭಾವ, ಕನಸು, ನಾಚಿಕೆ, ನಿರೀಕ್ಷೆ, ಆತಂಕ, ಇರುತ್ತೆ.    ನನ್ನ ಕಥೆಯೋ ವಿಚಿತ್ರ.... ಅಸಲಿ ನನಗೆ ಮದುವೆ ಆಗೋ ಆಸಕ್ತಿ,  ಆಸೆಯೇ ಇರಲಿಲ್ಲ,  ಮದುವೆ ಅಂದ್ರೆ ಮಾರು ದೂರ ಹಾರ್ತಾಇದ್ದೆ.  ನಾನು ಮನೆಯ ಕೊನೆಯ ಮಗಳಾದ್ದರಿಂದ, ಅಲ್ಲದೇ  ನನ್ನ ಅಣ್ಣಂದಿರು, ಅಕ್ಕನೊಂದಿಗೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದದ್ದರಿಂದ  ಅವರುಗಳ ಮದುವೆ ನಾನು ತುಂಬಾ ಚಿಕ್ಕವಳಿದ್ದಾಗಲೇ ಆಗಿತ್ತು . ಅವರುಗಳ ನೋವು ನಲಿವು , ಜಂಜಾಟ,  ಎಲ್ಲಾ ನೋಡಿ ನನಗೆ ಮದುವೆ ಅಂದ್ರೆ ಹೇಸಿಗೆ ಬರೋಷ್ಟು ಬೇಸರ ತರಿಸಿತ್ತು.  ಜೊತೆಗೆ ನನ್ನ ಸೋದರತ್ತೆಯoದಿರ ಮಕ್ಕಳುಗಳು ನನ್ನನ್ನು ಮದುವೆಯಾಗಲು ನಡೆಸುತ್ತಿದ್ದ ಸರ್ಕಸ್..  ಅಸಹ್ಯ ಮೂಡಿಸುತ್ತಿತ್ತು.   ಅಲ್ಲದೇ ಬಾಲ್ಯದಿಂದಲೂ ಶ್ರೀ ರಾಮಕೃಷ್ಣಾಶ್ರಮದ ಒಡನಾಟ,  ಸಾಧುಸಂತರ ಸಂಗ ನನಗೆ ವೈರಾಗ್ಯ ಮೂಡಿಸುತ್ತಿತ್ತು. ಅಲ್ಲದೆ ಚಿಕ್ಕಂದಿನಿಂದಲೂ ಅಮ್ಮ ಅಪ್ಪ ಹೇಳುತ್ತಿದ್ದ ಈಶ್ವರನ, ಕೃಷ್ಣನ ಕಥೆಗಳು, ನಾನೇ ಪಾರಾಯಣ ಮಾಡುತ್ತಿದ್ದ ರಾಮಾಯಣ, ಮಾಹಾಭಾರತ  ಕಥೆಗಳು ಅಧ್ಯಾತ್ಮದೆಡೆಗೆ ನನ್ನನ್ನ ಒಯ್ಯುತ್ಗಿದ್ದವು,  ರಾಮಕೃಷ್ಣಾಶ್ರಮದ ಒಡನಾಟ ಬಂದಮೇಲಂತೂ,  ಪ್ರತಿದಿನ ಎರಡು ಬಾರಿ ಆಶ್ರಮಕ್ಕೆ ಭೇಟಿ, ಪೂಜ್ಯ ಗುರುಗಳ ಪ್ರವಚನ, ಶ್ರೀರಾಮಕೃಷ್ಣ ಪರಮಹಂಸರ,.ಶ್ರೀಮಾತೆ ಶಾ

262 ಇಂದೆನ್ನ ಮನೆಗೆ ಕೃಷ್ಣಯ್ಯ ಬರುತ್ತಾನೆ

Image
 ಮುದ್ದುಕೃಷ್ಣ ಇಂದೆನ್ನ ಮನೆಗೆ  ಕೃಷ್ಣಯ್ಯ ಬರುತ್ತಾನೆ ******************************* ಇಂದೆನ್ನ ಮನೆಗೆ  ಕೃಷ್ಣಯ್ಯ ಬರುತ್ತಾನೆ ನನ್ನೆಲ್ಲ ಭಾಂಧವರೆ ನೋಡಬನ್ನಿ ಹಸುವಿನಾ ನೊರೆಹಾಲು ಹಸನಾದ ಮೊಸರ್ಬೆಣ್ಣೆ ಅವನಿಗಾಗಿ ತಂದಿರುವೆ ಕದ್ದು ತಿನ್ನುತ್ತಾನಂತೆ ನೋಡಬನ್ನಿ ಕೊರಳಲ್ಲಿ ಕೌಸ್ತುಭ ಕೈಯಲ್ಲಿ ಕೊಳಲು ಕಾಲ್ಗೆಜ್ಜೆ ರಿಂಗಣವ  ಕೇಳಬನ್ನಿ ಅಂಬೆಗಾಲಿಡುತ್ತಾ ಮುದ್ದುಗರೆವುತ ಬರುತ್ತಾನೆ ಮುದದಿಂದವನ  ನೋಡಬನ್ನಿ ವನದ ಸೀಬೆಹಣ್ಣು, ಅಡವಿ ಕಾರೇಹಣ್ಣು ಮರದ ನೆರಳೆಹಣ್ಣು ಅವನಿಗಿಷ್ಟವಂತೆ  ಕೇಳಬನ್ನಿ ಅವನಿಗಿಷ್ಟದ್ದೆಲ್ಲ  ಜೋಪಾನಮಾಡಿಟ್ಟಿ ರುವೆ ಈಗ ತಿನ್ನುತ್ತಾನೆ  ನೋಡಬನ್ನಿ ಚಕ್ಕುಲಿ ಮುಚ್ಚೋರೆ  ಕರಿದ ಆವಲಕ್ಕಿಯ  ಮುದದಿಂದ  ಮಾಡಿರುವೆ  ನೋಡಬನ್ನಿ ತರತರದ ಉಂಡೆಗಳು ಜೊತೆಗೆ ಸಿಹಿ ಅವಲಕ್ಕಿ ಕಡೆದು ಮಾಡಿದ ಬೆಣ್ಣೆ  ಭಕ್ತಿಯಲಿ ಮಾಡಿರುವೆ  ನೋಡಬನ್ನಿ ಪುಟ್ಟ ಹೆಜ್ಜೆ ಇಡುತ, ಸದ್ದು ಮಾಡಿ ಮನೆಯಲ್ಲಿ ಮುದ್ದು ಮುಖವ ಸ್ಪಷ್ಟ ತೋರುತ್ತಾನೆ  ನೋಡಬನ್ನಿ ಮುದ್ದುಗರೆವುತ ಪಿಸುನುಡಿಯನಾಡಿ ಕಿವಿಯಲ್ಲಿ ಮಹದಾನಂದ ತರುತ್ತಾನೆ  ಕೇಳಬನ್ನಿ                    ಶೈಲೂ........

261. ಹೇಡಿಯಾಗದಿರು

Image
ಹೇಡಿ ***** ಬದುಕಲಾರೆನೆಂದು ಜೀವ ಕಳೆದುಕೊಂಡರಾದೀತೆ ಹೇಳು ಬದುಕುವ ಛಲ ತಳೆದು ಸೆಟೆದೆದ್ದು ನಿಲ್ಲಬೇಕು ಬಾಳಲಿ ಕೈಲಾಗದೆಂದು ಹೇಡಿಯಂತೆ ಕುಳಿತರಾದೀತೇ  ಹೇಳು ಕೈಲಾಗದ್ದೇನೇನೂ ಇಲ್ಲ ಮನಸ್ಸೊಂದಿದ್ದರೆ ಮಾರ್ಗ ಬಾಳಲಿ ದುಡಿಮೆಯೇ ದೇವರು ತಾನೇ ಸೋಮಾರಿಯಾದರಾದೀತೆ ಹೇಳು ಶ್ರದ್ದೆಯೊಳಗಿತ್ತು ಮನವ ದುಡಿದರೆ ಸಿರಿತನ ನಿನ್ನ ಕಾಲ ಬಳಿಯಲಿ ದುಃಖವಿರಬಹುದು ಇಂದು ಅತ್ತು ಕುಳಿತರಾದೀತೆ ಹೇಳು ತೆರೆದಿಟ್ಟು ಮನವ  ಹಗುರಾಗಿಸು ನಿನ್ನವರಿಲ್ಲವೇನು ಬದುಕಲಿ? ಕತ್ತಲೆಯಾಯ್ತೆಂದು ಬೆಚ್ಚಿ ಮೂಲೆಹಿಡಿದು ಕುಳಿತರಾದೀತೆ ಹೇಳು ತಾಳಿ, ಕಾಯಬೇಕು ಬೆಳಕಿಗಾಗಿ ಬಂದೇ ಬರುವ ರವಿ ಬಾನಲಿ ಇರುಳು ಕಳೆದೊಡನೇ ಇದೆ ಭರವಸೆಯ ಬೆಳಕು ಕೇಳು ಬೆಚ್ಚದೆ ಹಚ್ಚು ಜ್ಞಾನ ದೇವಿಗೆ ಮನದ ತಮ ಓಡುವುದು ಕ್ಷಣದಲಿ ತಾಳಿದವನು ಬಾಳಿಯಾನು ಗೊತ್ತೇ ಇದರರ್ಥ ವಿಶಾಲವಿದೆ ಕೇಳು ಬಿದ್ದರೇನಂತೆ ಎದ್ದುನಿಲ್ಲು ಛಲದಲಿ ಹೇಡಿಬದುಕು ಹೀನಾಯ ಬಾಳಲಿ ಏನಾದರೂ ಸಾಧಿಸು ಬದುಕಿದ್ದು ಸಾವಿನಾಚೆಗೂ ಘನತೆ ತರುವುದು ಕೇಳು ಹಾದಿಯುಂಟು ಆಯ್ಕೆಯುಂಟು ಬಹಳ ಹೇಡಿಯಾಗದೆ ಸಾಧಿಸಿ ತೋರು ಬಾಳಲಿ              ಶೈಲೂ.....

260 ಹೇಡಿ

Image
#ಹೇಡಿ ***** ಹೇಡಿಯಾಗದಿರು *************** ಬದುಕಿದು ಸುಂದರ ಹೂವು ಮೊಗ್ಗರಳಿ ನಗಲು ಕಾಯಬೇಕು ಮೊಗ್ಗಲ್ಲೇ ಹಿಸುಕಿ ಹೊಸಕಿದರೆ ಅರಳಿ ಸೌಗಂಧ ಬೀರೀತೇ..? ಬದುಕೆಂದರೆ ಸುಂದರ ಶಿಲ್ಪ ಕೆತ್ತನೆಯಲಿ ಆಯ್ತು ದೈವ ಸಹಿಸಲಾರೆ ಉಳಿಪೆಟ್ಟೆಂದು ಅತ್ತರೆ ಪೂಜಿಪ ದೇವ ಮೂರ್ತಿಯಾದೀತೆ..? ಬದುಕೆಂದರೆ ರುಚಿಯಾದ ಹಣ್ಣು ಪಕ್ವವಾಗಿ ಮಾಗಬೇಕು ತಾನೇ? ಕಾಯಾದಾಗಲೇ ಕಸಿದು ತಿಂದರೆ ಹುಳಿಯಾಗದೆ ಸಿಹಿರುಚಿಯಾದೀತೆ..? ಬದುಕೊಂದು ಸುಶ್ರಾವ್ಯ ಗೀತೆ ಭಾವತುಂಬಿ ಹಾಡಿದರೆ ಚೆಂದ ಅಪಶ್ರುತಿಹಿಡಿದು ಹಾಡಿದರೆ ಮನವಿತ್ತು ಕೇಳಲಾದೀತೆ..? ಬದುಕಿದು ಆ ದೇವನಿತ್ತ ವರ ಅವಮೆಚ್ಚುವ ತೆರದಿ ಬಾಳಬೇಕು ಕಷ್ಟ ಸುಖವ ಮೆಟ್ಟಿ ಬದುಕಲಾರದೆ ಹೇಡಿಯಂತೆ ಸಾಯಲಾದೀತೇ..? ಅದೆಷ್ಟು ಕಷ್ಟನಷ್ಟಗಳನು ಉಂಡು ನಲುಗಿದೆ ಪ್ರಕೃತಿ ಆದರೂ ನಿತ್ಯ ಜನಿಸುವವರನಪ್ಪಿ ತನ್ನ ಮಡಿಲೊಳಿಟ್ಟು ಪಾಲಿಸಿಲ್ಲವೇ... ಕಷ್ಟ ಮನುಜನಿಗಷ್ಟೇ ಅಲ್ಲ ಸಕಲ ಚರಾಚರಕೂ ಉಂಟು ಸೆಟೆದು ಮೇಲೇರುವ ಛಲವಿರಲಿ ಎದ್ದೇಳು ಹೇಡಿಯಾಗದಿರು ಬಾಳಲಿ            ಶೈಲೂ.......