260 ಹೇಡಿ


#ಹೇಡಿ
*****

ಹೇಡಿಯಾಗದಿರು
***************

ಬದುಕಿದು ಸುಂದರ ಹೂವು
ಮೊಗ್ಗರಳಿ ನಗಲು ಕಾಯಬೇಕು
ಮೊಗ್ಗಲ್ಲೇ ಹಿಸುಕಿ ಹೊಸಕಿದರೆ
ಅರಳಿ ಸೌಗಂಧ ಬೀರೀತೇ..?

ಬದುಕೆಂದರೆ ಸುಂದರ ಶಿಲ್ಪ
ಕೆತ್ತನೆಯಲಿ ಆಯ್ತು ದೈವ
ಸಹಿಸಲಾರೆ ಉಳಿಪೆಟ್ಟೆಂದು ಅತ್ತರೆ
ಪೂಜಿಪ ದೇವ ಮೂರ್ತಿಯಾದೀತೆ..?

ಬದುಕೆಂದರೆ ರುಚಿಯಾದ ಹಣ್ಣು
ಪಕ್ವವಾಗಿ ಮಾಗಬೇಕು ತಾನೇ?
ಕಾಯಾದಾಗಲೇ ಕಸಿದು ತಿಂದರೆ
ಹುಳಿಯಾಗದೆ ಸಿಹಿರುಚಿಯಾದೀತೆ..?

ಬದುಕೊಂದು ಸುಶ್ರಾವ್ಯ ಗೀತೆ
ಭಾವತುಂಬಿ ಹಾಡಿದರೆ ಚೆಂದ
ಅಪಶ್ರುತಿಹಿಡಿದು ಹಾಡಿದರೆ
ಮನವಿತ್ತು ಕೇಳಲಾದೀತೆ..?

ಬದುಕಿದು ಆ ದೇವನಿತ್ತ ವರ
ಅವಮೆಚ್ಚುವ ತೆರದಿ ಬಾಳಬೇಕು
ಕಷ್ಟ ಸುಖವ ಮೆಟ್ಟಿ ಬದುಕಲಾರದೆ
ಹೇಡಿಯಂತೆ ಸಾಯಲಾದೀತೇ..?

ಅದೆಷ್ಟು ಕಷ್ಟನಷ್ಟಗಳನು
ಉಂಡು ನಲುಗಿದೆ ಪ್ರಕೃತಿ
ಆದರೂ ನಿತ್ಯ ಜನಿಸುವವರನಪ್ಪಿ
ತನ್ನ ಮಡಿಲೊಳಿಟ್ಟು ಪಾಲಿಸಿಲ್ಲವೇ...

ಕಷ್ಟ ಮನುಜನಿಗಷ್ಟೇ ಅಲ್ಲ
ಸಕಲ ಚರಾಚರಕೂ ಉಂಟು
ಸೆಟೆದು ಮೇಲೇರುವ ಛಲವಿರಲಿ
ಎದ್ದೇಳು ಹೇಡಿಯಾಗದಿರು ಬಾಳಲಿ

           ಶೈಲೂ.......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ