266 ಸುಖದುಃಖ


ಸುಖ ದುಃಖ
***********
ಸುಖ ದುಃಖಗಳೆರಡೂ
ಬಾಳಿನ ಅವಿಭಾಜ್ಯ ಅಂಗ
ಹಗಲಿರುಳಿನಂತೆ ಸದಾ
ಒಂದ್ಕಕೊಂದಂಟಿದಂಥ ಸಂಗ

ಆಸೆಯೇ ದುಃಖಕ್ಕೆ ಮೂಲ
ಇದು ಜನಮನದ ನಾಳ್ನುಡಿ
ಸಾಮರಸ್ಯ ಸುಖದ ಮೂಲ
ಅರಿತಾಗ ಮದುರ ಬಾಳ ಮುನ್ನುಡಿ

ಸುಖವಿದೆಯೆಂದು ಮೆರೆದು
ಬೀಗಿದರಾಯ್ತು..ಹಿಂದೆಯೇ
ಹೊಂಚುಹಾಕುವ, ಬಿಡದೆ
ಕಡುಕಷ್ಟದ ದುಃಖದ ಧೂರ್ತ

ದುಃಖವಿದೆಯೆಂದು ಮರುಗಿ
ಕುಗ್ಗಿದರಾದೀತೆ..ಮುಂದಿದೆ
ಬೆಳಗುವ ಬೆಳಕ ನಾಳೆಗಳ
ಕಡುಸುಖದ ಸಿಹಿ ಹೂರಣ

ದುಃಖ ಕಂಡಾಗಲೇ ಅರಿವು
ಜೀವನದ ಸುಖದ ಬೆಲೆ
ಶಾಂತಿ ಸಂಯಮದ ಬಾಳುವೆ
ಹುಡುಕಿ ತಂದೀತು ಸುಖದ ನೆಲೆ

ಇರಬೇಕು ಎರಡೂ ಬದುಕಲಿ
ಸಮಾನಾಂತರ ರೇಖೆಯಂತೆ
ಸಾಗಬೇಕು ಎಡವಿ ಬೀಳದೆ
ಸುಖದುಃಖ ಬೇವುಬೆಲ್ಲದಂತೆ
              ಶೈಲೂ.......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ