Posts

332 ಕನಸಲ್ಲಾದರೂ ಗುರಿ ನನಸಾಗಲಿ

Image

331 #ನಿನ್ನ_ನಂಬಿದೆ_ಗುರುವೇ

Image
331 #ನಿನ್ನ_ನಂಬಿದೆ_ಗುರುವೇ ನಿನ್ನ ನಂಬಿದೆ ಗುರುವೇ ನಂಬಿದವರ ನೀ ಪೊರೆವೆ ಶರಣು ಬಂದಿಹೆ ನಿನ್ನಡಿಗೆ ಕಡೆಗಣಿಸದೆ ಕಾಯೋ ಅಡಿಗಡಿಗೆ ವರಗುರು ಕಲ್ಪತರು ನೀನು ಬೇಡಿದುದನೀವ ಕಾಮಧೇನು ನೊಂದೆನೂ ಬಲು ಭವದಿ ಹರಸೋ ಎನ್ನ ಮುದದಿ ಧ್ಯಾನ ಜಪ ತಪವೆಲ್ಲ ಅರಿತವಳು ನಾನಲ್ಲ ಭಕುತಿ ಭಾವವೂ ಇಲ್ಲ ನೀನಲ್ಲದೇ ಬೇರೆ ಗತಿಯಿಲ್ಲ ಕರವ ಹಿಡಿದು ನಡೆಸು ಮಂದಮತಿಯನು ಅಳಿಸು ಕರುಣೆ ದೃಷ್ಟಿಯ ಬೀರಿ ತೋರಿಸೆನಗೆ ಸರಿದಾರಿ ನಡೆದೇ ನಾ ದುರ್ಮಾರ್ಗದಲಿ ಸರಿಸಾಟಿ ಎನಗ್ಯಾರೆನುತಲಿ ಮೋಹ ಪಾಶದೊಳು ಸಿಕ್ಕು ಬೆಂದೆ ರೋಷಾಗ್ನಿಯಲಿ ಹೊಕ್ಕು ಕಾಯೋ ತಪ್ಪುಗಳ ಮನ್ನಿಸಿ ನಾ ನಿನ್ನ ಕಂದನೆಂದೆಣಿಸಿ ನಡೆಸು ನ್ಯಾಯ ಮಾರ್ಗದಲಿ ಬೀಳದಂತೆ ತಪ್ಪಿನ ಸುಳಿಯಲಿ ನಿನ್ನ ನಾಮವೇ ತೀರ್ಥ ನೀ ಪಾವನಗೈಯ್ವ ಕರ್ತ ಈ ದೇಹವೇ ಬೃಂದಾವನ ನೆಲೆಸಿ ಪವಿತ್ರಗೊಳಿಸೆನ್ನ ಸಾಕು, ಈ ಭವಬಂಧನ ನಿನ್ನ ಸೇವೆಗಣಿಗೊಳಿಸೆನ್ನ ತುಸುವಾದರೂ ಬೆಳಕುಚೆಲ್ಲಿ ನಡೆಸು ಜ್ಞಾನಮಾರ್ಗದಲಿ       ಶೈಲೂ.... .Pitcher sources :via internet / social media

330 ನಾ ಕಂಡ ಕನಸು

#ನಾನು_ಕಂಡ_ಕನಸು ಕನಸುಗಳ ಕಂಡಿದ್ದೆ ನೂರಾರು ಅಡೆತಡೆಗಳಿದ್ದವು ಹಲವಾರು ನನಸಾಗಿಸುವ ಮಾರ್ಗವರಿಯದೆ ಹರಿದು ಕಡಲಾಗಿತ್ತು ಕಣ್ಣೀರು ಏನೆಲ್ಲ ಪ್ರಯತ್ನಗಳತ್ತ ನಡೆ ಯಾವುದಕ್ಕೂ ಜಗ್ಗದ ಅಡೆತಡೆ ಹಣೆಬರಹದಲ್ಲಿದೆಯೋ ಇಲ್ಲವೋ ಎಂಬ ನೋವೇ ತಂದಿತ್ತು ಭಿಡೆ ಬಂದನೊಬ್ಬ ಅದೃಷ್ಟವಂತ ಬಾಳಿಗೆ ಬದುಕುವ ಭರವಸೆಯಿತ್ತ ನಾಳೆಗೆ ನನ್ನೆಲ್ಲ ಕನಸ ನನಸಾಗಿಸುವತ್ತ ಜೀವ ಸವೆಸಿ ಉಸಿರಿತ್ತ ಬದುಕಿಗೆ ಅಧ್ಯಯನದಿ ಕಂಡಿದ್ದ ಕನಸು ನನಸಾಯ್ತು ಬರವಣಿಗೆಯೇ ಬದುಕ ಬಗೆಯಾಯ್ತು ಸಹೃದಯಿ ಪತಿ ನೀಡಿದ ನೆರವಿಗೆ ನನ್ನ ಬದುಕೇ ಬಂಗಾರವಾಯ್ತು😊 ಡಾ: B.N.ಶೈಲಜಾ ರಮೇಶ್

329 ನಿನ್ನದೇ ನೆನಪಲ್ಲಿ

Image
#ಶೀರ್ಷಿಕೆ #ನಿನ್ನದೇ_ನೆನಪಲ್ಲಿ ನಿನ್ನದೇ ನೆನಪಲ್ಲಿ ಬೇಯುತಿಹೆ ನಾನಿಲ್ಲಿ ಅರಿವಾಗದೆ ಒಲವೇ ನನ್ನ ನಿತ್ಯ ನರಳಾಟ ಕಾತರದ ಮನದಲ್ಲಿ ಕಾಯುತಿಹೆ ನಿನಗಿಲ್ಲಿ ತರಬಾರದೆ ಒಲವೇ ಪ್ರೀತಿ ಸವಿಯೂಟ ಎಷ್ಟೊಂದು ಸುಮಧುರ ನೀ ಬಳಿಯಿದ್ದ ಸಮಯ ನೆನಪಾಗದೇ ನಿನಗೆ ನನ್ನ ನವಿರು ಪ್ರೇಮ ಯಾಕ್ಹೀಗೆ ದೂರಾದೆ ಎನಿತ್ತಂತಹ ಪ್ರಮೇಯ ತಿಳಿ ..ಒಲವೇ ನನ್ನ ಪ್ರೇಮ ನಿಷ್ಕಾಮ ಮನಸಾರೆ ಬಯಸಿದ್ದೆ ಪ್ರೀತಿಧಾರೆ ಹರಿಸಿದ್ದೆ ಎಷ್ಟೊಂದಿತ್ತು ನಮ್ಮಿಬ್ಬರ ನಡುವೆ  ಪ್ರೀತಿ ಮನಸುಗಳು ಬೆರೆತಿತ್ತು ಕನಸುಗಳು ಹೊಸೆದಿತ್ತು ತಂದೆಯೇಕೆ ಒಲವೇ... ಅಗಲಿಕೆಯ ಭೀತಿ.! ತಾಳಲಾರೆ ನಾನಿನ್ನು, ಬೇಡ ನೀನಿಲ್ಲದ ಬದುಕು ನೀತಾನೇ ಒಲವೇ... ನನ್ನ ಜೀವರ ಜೀವ..! ಕಾಯುತಿಹೆ ಹಗಲಿರುಳು ನೀ ಬಂದರೇ ಬೆಳಕು ಬಂದು ಬಿಡು ಬೇಗ.. ಹರಿಸುತ್ತಾ ಪ್ರೇಮ ಭಾವ.!          ಶೈಲಜಾ ರಮೇಶ್.....

ನನ್ನವನು

Image
#ನನ್ನವನು ಬಾಳ ಜ್ಯೋತಿಗೆ ತೈಲದಂತೆನ್ನವನು ಉರಿದು ಬೆಳಕೀವ ಬತ್ತಿ ನಾನು...! ಇಬ್ಬರ ಸಮರಸಕೆ ಬೆಳಕಾಯ್ತು ಜೀವನ ಅವನೊಲುಮೆಯಲಿ ಈ ಜೀವ ಪಾವನ..! ಆಗಸದಿ ಘನೀಭವಿಸಿದ ಮೇಘದಂತೆನ್ನವನು ಸುರಿದು ತಂಪೀವ ಮಳೆಯು ನಾನು..! ಒಲವ ಸಿಂಚನಕೆ ಹಸಿರಾಯ್ತು ಬಾಳ ಭುವಿ ತಳಿರೊಡೆದು ಬಾಳಾಯ್ತು ಹೊಳೆವ ಛವಿ..! ಖಗಪಕ್ಷಿಗಳಿಗೆ ನೆಳಲೀವ ವೃಕ್ಷದಂತೆನ್ನವನು ತಬ್ಬಿ ಹಬ್ಬಿ ಹರಡುವ ಬಳ್ಳಿ ನಾನು...! ಒಲವ ಸಾಂಗತ್ಯದ ಸುಮಘಮಲ ಕಂಪು ಭಾವ ರಸಧಾರೆಯಲ್ಲೆಮ್ಮ ಬದುಕು ಪೆಂಪು..! ಕಲ್ಪನೆಗೂ ನಿಲುಕದ ಘನ್ನ ಬದುಕಿತ್ತ ನನ್ನವನು ಸುಡು ಬಿಸಿಲಲ್ಲಿ ನೆರಳಂತೆ ನಿಂತು ತಾನು..! ಉಸಿರಲಿಲುಸಿರಾಗುತ ಬಾಳ ಹಸಿರಾಗಿಸಿದವ ಆ ದೇವ ಎನಗಿತ್ತ ವರವೇ ನನ್ನವ..!           ಶೈಲೂ.... (ಡಾ: B.N.ಶೈಲಜಾ ರಮೇಶ್)

ಭಾವನೆಗಳ ಭಾವಗೀತೆ

sanchaya kavana sankalana ಭಾವನೆಗಳ  ಭಾವಗೀತೆ ******************** ಬರಿದೇ ನೆನಪುಗಳ ಸುಳಿಯಲ್ಲಿ ಸಿಕ್ಕಿ ಹುಡುಕಿ ತಡಕಾಡಿ ಅಕ್ಷರಗಳ  ಹೆಕ್ಕಿ ಮನದೊಳಗಿನ ಭಾವ ಪದಗಳಲಿ ತುರುಕಿ ಸುಖದುಃಖಗಳಲೆಯಲಿ ಮುಳುಗೇಳಿ ತೇಲಿ ಮನದೊಳಗಿನ ಪ್ರೀತಿಯನು ಮೊಗೆಮೊಗೆದು ನೀಡಿ ಸ್ನೇಹ ಕಾರಂಜಿಯ ರಸಧಾರೆ ಸಿಂಪರಿಸಿ ನೋವು ನಲಿವುಗಳ ಅಳೆದಳೆದು  ತೂಗಿ ತೋಚಿದ್ದನ್ನು ಗೀಚುವ  *ಸಂಚಯ ಕವನ ಸಂಕಲನವೇ*  ನನ್ನ ಭಾವನೆಗಳ  ಭಾವಗೀತೆ..!!          ಶೈಲೂ.....

327 ನಕ್ಷತ್ರ ಕವಿತೆ

#ನಕ್ಷತ್ರ_ಕವಿತೆ #ಶೀರ್ಷಿಕೆ:-- #ಮುದ್ದು_ಮೊಗದ_ಚೆಲುವನಿಗಾಗಿ_ಕಾದ_ಒಲವು                              ಹೇ                           ಕೇಶವಾ                       ಕಾಯುತಿರುವೆ                 ನಿನಗಾಗಿಯೇ ಬಾ ನಲ್ಲ  ಅಂತರಂಗದೊಳು ನೆಲೆನಿಂತ ಸವಿ ಪ್ರೇಮಭಾವ       ಮುದ್ದುಮೊಗದ ಚೆಲುವನಿಗಾಗಿ ಕಾಯ್ದ          ಒಲವ ರಾಧೇಯ ಮರೆತೆಯೇನು            ಚಾತಕ ಪಕ್ಷಿಯಂತೆ ಹಗಲಿರುಳು                   ನಿನ್ನ ನೆನಪಲ್ಲೇ ಜೀವ            ಸವೆಸುವ ನನ್ನ ನೀಮರೆಯದಿರು          ಕಾಣದೇನೆ ಮೊಗವ ಬೇಯುತಿರುವೆ       ಬಳಿ ಬಾ ಒಲವೇ ನಿನಗಾಗೆ ಕಾಯುತ್ತಿರುವೆ ಜೀವನಿಲ್ಲದೋ ಮಾಧವಾ ಬಳಿ ಬಾ ಉಳಿಸು ನನ್ನ                ಚಂದ್ರನ ಮೊಗದ ಚೆಲುವ...