329 ನಿನ್ನದೇ ನೆನಪಲ್ಲಿ


#ಶೀರ್ಷಿಕೆ

#ನಿನ್ನದೇ_ನೆನಪಲ್ಲಿ

ನಿನ್ನದೇ ನೆನಪಲ್ಲಿ ಬೇಯುತಿಹೆ ನಾನಿಲ್ಲಿ
ಅರಿವಾಗದೆ ಒಲವೇ ನನ್ನ ನಿತ್ಯ ನರಳಾಟ
ಕಾತರದ ಮನದಲ್ಲಿ ಕಾಯುತಿಹೆ ನಿನಗಿಲ್ಲಿ
ತರಬಾರದೆ ಒಲವೇ ಪ್ರೀತಿ ಸವಿಯೂಟ

ಎಷ್ಟೊಂದು ಸುಮಧುರ ನೀ ಬಳಿಯಿದ್ದ ಸಮಯ
ನೆನಪಾಗದೇ ನಿನಗೆ ನನ್ನ ನವಿರು ಪ್ರೇಮ
ಯಾಕ್ಹೀಗೆ ದೂರಾದೆ ಎನಿತ್ತಂತಹ ಪ್ರಮೇಯ
ತಿಳಿ ..ಒಲವೇ ನನ್ನ ಪ್ರೇಮ ನಿಷ್ಕಾಮ

ಮನಸಾರೆ ಬಯಸಿದ್ದೆ ಪ್ರೀತಿಧಾರೆ ಹರಿಸಿದ್ದೆ
ಎಷ್ಟೊಂದಿತ್ತು ನಮ್ಮಿಬ್ಬರ ನಡುವೆ  ಪ್ರೀತಿ
ಮನಸುಗಳು ಬೆರೆತಿತ್ತು ಕನಸುಗಳು ಹೊಸೆದಿತ್ತು
ತಂದೆಯೇಕೆ ಒಲವೇ... ಅಗಲಿಕೆಯ ಭೀತಿ.!

ತಾಳಲಾರೆ ನಾನಿನ್ನು, ಬೇಡ ನೀನಿಲ್ಲದ ಬದುಕು
ನೀತಾನೇ ಒಲವೇ... ನನ್ನ ಜೀವರ ಜೀವ..!
ಕಾಯುತಿಹೆ ಹಗಲಿರುಳು ನೀ ಬಂದರೇ ಬೆಳಕು
ಬಂದು ಬಿಡು ಬೇಗ.. ಹರಿಸುತ್ತಾ ಪ್ರೇಮ ಭಾವ.!

         ಶೈಲಜಾ ರಮೇಶ್.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ