331 #ನಿನ್ನ_ನಂಬಿದೆ_ಗುರುವೇ

331 #ನಿನ್ನ_ನಂಬಿದೆ_ಗುರುವೇ

ನಿನ್ನ ನಂಬಿದೆ ಗುರುವೇ
ನಂಬಿದವರ ನೀ ಪೊರೆವೆ
ಶರಣು ಬಂದಿಹೆ ನಿನ್ನಡಿಗೆ
ಕಡೆಗಣಿಸದೆ ಕಾಯೋ ಅಡಿಗಡಿಗೆ

ವರಗುರು ಕಲ್ಪತರು ನೀನು
ಬೇಡಿದುದನೀವ ಕಾಮಧೇನು
ನೊಂದೆನೂ ಬಲು ಭವದಿ
ಹರಸೋ ಎನ್ನ ಮುದದಿ

ಧ್ಯಾನ ಜಪ ತಪವೆಲ್ಲ
ಅರಿತವಳು ನಾನಲ್ಲ
ಭಕುತಿ ಭಾವವೂ ಇಲ್ಲ
ನೀನಲ್ಲದೇ ಬೇರೆ ಗತಿಯಿಲ್ಲ

ಕರವ ಹಿಡಿದು ನಡೆಸು
ಮಂದಮತಿಯನು ಅಳಿಸು
ಕರುಣೆ ದೃಷ್ಟಿಯ ಬೀರಿ
ತೋರಿಸೆನಗೆ ಸರಿದಾರಿ

ನಡೆದೇ ನಾ ದುರ್ಮಾರ್ಗದಲಿ
ಸರಿಸಾಟಿ ಎನಗ್ಯಾರೆನುತಲಿ
ಮೋಹ ಪಾಶದೊಳು ಸಿಕ್ಕು
ಬೆಂದೆ ರೋಷಾಗ್ನಿಯಲಿ ಹೊಕ್ಕು

ಕಾಯೋ ತಪ್ಪುಗಳ ಮನ್ನಿಸಿ
ನಾ ನಿನ್ನ ಕಂದನೆಂದೆಣಿಸಿ
ನಡೆಸು ನ್ಯಾಯ ಮಾರ್ಗದಲಿ
ಬೀಳದಂತೆ ತಪ್ಪಿನ ಸುಳಿಯಲಿ

ನಿನ್ನ ನಾಮವೇ ತೀರ್ಥ
ನೀ ಪಾವನಗೈಯ್ವ ಕರ್ತ
ಈ ದೇಹವೇ ಬೃಂದಾವನ
ನೆಲೆಸಿ ಪವಿತ್ರಗೊಳಿಸೆನ್ನ

ಸಾಕು, ಈ ಭವಬಂಧನ
ನಿನ್ನ ಸೇವೆಗಣಿಗೊಳಿಸೆನ್ನ
ತುಸುವಾದರೂ ಬೆಳಕುಚೆಲ್ಲಿ
ನಡೆಸು ಜ್ಞಾನಮಾರ್ಗದಲಿ     

 ಶೈಲೂ....
.Pitcher sources :via internet / social media

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ