ನನ್ನವನು

#ನನ್ನವನು

ಬಾಳ ಜ್ಯೋತಿಗೆ ತೈಲದಂತೆನ್ನವನು
ಉರಿದು ಬೆಳಕೀವ ಬತ್ತಿ ನಾನು...!
ಇಬ್ಬರ ಸಮರಸಕೆ ಬೆಳಕಾಯ್ತು ಜೀವನ
ಅವನೊಲುಮೆಯಲಿ ಈ ಜೀವ ಪಾವನ..!

ಆಗಸದಿ ಘನೀಭವಿಸಿದ ಮೇಘದಂತೆನ್ನವನು
ಸುರಿದು ತಂಪೀವ ಮಳೆಯು ನಾನು..!
ಒಲವ ಸಿಂಚನಕೆ ಹಸಿರಾಯ್ತು ಬಾಳ ಭುವಿ
ತಳಿರೊಡೆದು ಬಾಳಾಯ್ತು ಹೊಳೆವ ಛವಿ..!

ಖಗಪಕ್ಷಿಗಳಿಗೆ ನೆಳಲೀವ ವೃಕ್ಷದಂತೆನ್ನವನು
ತಬ್ಬಿ ಹಬ್ಬಿ ಹರಡುವ ಬಳ್ಳಿ ನಾನು...!
ಒಲವ ಸಾಂಗತ್ಯದ ಸುಮಘಮಲ ಕಂಪು
ಭಾವ ರಸಧಾರೆಯಲ್ಲೆಮ್ಮ ಬದುಕು ಪೆಂಪು..!

ಕಲ್ಪನೆಗೂ ನಿಲುಕದ ಘನ್ನ ಬದುಕಿತ್ತ ನನ್ನವನು
ಸುಡು ಬಿಸಿಲಲ್ಲಿ ನೆರಳಂತೆ ನಿಂತು ತಾನು..!
ಉಸಿರಲಿಲುಸಿರಾಗುತ ಬಾಳ ಹಸಿರಾಗಿಸಿದವ
ಆ ದೇವ ಎನಗಿತ್ತ ವರವೇ ನನ್ನವ..!

          ಶೈಲೂ....
(ಡಾ: B.N.ಶೈಲಜಾ ರಮೇಶ್)

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ