ಕವನಗಳು
ಹಾರೈಕೆ... ಅರಿಕೆ
***************
ಕೋರುವೇ ಶುಭಹಾರೈಕೆ
ಹೊಸಬಾಳಿಗಡಿಯಿಟ್ಟ ದಿನಕೆ
ನಲಿವು ಗೆಲುವಲಿ ಜೊತೆಯಾದ
ನವ ಬಾಂಧವ್ಯ ಬೆಸೆದ ಕ್ಷಣಕೆ
ಒಲಿದ ಮನವೆರಡು ಕಲೆತು
ಸಂಸಾರ ನೊಗವ ಹೊತ್ತು
ಬಾಳ ಹಾದಿಯ ಪಯಣ
ಜೊತೆಗೂಡಿ ನಡೆದ ದಿನಕೆ
ಸರಸವಿರಸಗಳನು ಗೆದ್ದು
ನವಿರಾದ ಪ್ರೀತಿಯ ಹೊದ್ದು
ಬಾಳ ನೌಕೆಯ ಪಯಣ
ನಲಿದು ಸಾಗುವ.ದಿನಕೆ
ಶೈಲೂವಿನ ಬಯಕೆಯಿದು
ನಲ್ಮೆಯ ಹಾರೈಕೆಯಿದು
ದುಃಖ ದುಮ್ಮಾನಗಳ ಮರೆತು
ತುಂಬಿ ಬರಲಿ ಹೊಸತು
ಸಂಭ್ರಮದ ದಿನವಿಂದು
ದುಪ್ಪಟ್ಟಾಗಲಿ ಹರುಷ
ಸವಿಯಬೇಕು ಪ್ರೀತಿ ಜೇನು
ಅನಂತವಾಗಲಿ ರಸನಿಮಿಷ
ಶೈಲೂ.....
ಪ್ರೇಮ ಸಂಭಾಷಣೆ
****************
ಎನಿತು ಚಂದವೇ ಸಖಿ
ಮುಗ್ಧಸ್ನಿಗ್ದ ಸೌಂದರ್ಯ
ನಕ್ಕರೂ ಕಾಣದಂತ
ಮುಗುಳುನಗೆಯ ಮಾಧುರ್ಯ
ಹೊಗಳಿದ್ದು ಸಾಕು ಕೃಷ್ಣ
ನೀನೇ ಸೌಂದರ್ಯದ ಗಣಿ
ನಿನ್ನ ಕಣ್ಣ ಕಾಂತಿಯಲ್ಲೇ
ಅಡಗಿಹನು ದಿನಮಣಿ
ಇಲ್ಲ ರಾದೇ ನೀನೇ ಚಂದ
ಕದಪುಗಳಲಿ ಇಹ ಚಂದಿರ
ಅರ್ಧ ತೆರೆದ ನಯನದಲೇ
ಇಹುದು ತಾರಾ ಮಂದಿರ
ಬಾಯಲ್ಲೇ ಅಡಗಿಸಿರುವೆ
ಚತುರ್ದಶ ಭುವನಲೋಕ
ಅರಿಯಲಿ ಹೇಗೇಳು ನಿನ್ನ
ಕೃಷ್ಣ ನಾನಾದೆ ಮೂಕ
ಬಿಡು ಬಿಡು ಅದೆಲ್ಲ ಸಖಿ
ಅರಿಯಲಾಗದ ನಿಗೂಢ
ನಿನ್ನ ಸೌಂದರ್ಯ ಸೆಳೆತಕೆ
ವಶವಾಗಿ ನಾ ಧಿಗ್ಮೂಢ
ತುಂಟತನದ ನೋಟದಲ್ಲೇ
ಸೆಳೆದು ಬಿಟ್ಟೆ ಮನಸ್ಸಸನ್ನ
ಹೇಳಲೇನಿದೆ ಮಾಧವಾ
ನೀನೇ ನನ್ನ ಮನದನ್ನ
ಶೈಲೂ......
ಪ್ರೇಮ.ಸಂಭಾಷಣೆ
*****************
ನುಡಿಸುವುದು ಹೇಗೆ
ಕೃಷ್ಣ ನಿನ್ನ ಕೊಳಲು
ನುಡಿಸಿ ಮರೆಯಬೇಕಿದೆ
ನನ್ನ ಮನದ ಅಳಲು
ಹಿಡಿಯಲ್ಹೇಗೆ ಕೈಯಲಿ
ಯಾವುದು ತುದಿ ಮೊದಲು
ತುಟಿಯಲಿಟ್ಟು ಉಸಿರು ತುಂಬಿ
ಹೇಳಿಕೊಡು ನುಡಿಸಲು
ಶ್.!! ಸುಮ್ಮನಿರು ರಾಧೇ
ಇಲ್ಲ ಸಮಯ ನುಡಿಯಲು
ಸ್ವರ್ಗ ಸುಖವ ನೀಡುತಿದೆ
ಪ್ರೇಮ ತುಂಬಿದ ಮಡಿಲು
ತುಂಬಿ ನನ್ನ ಕಣ್ಣಲೇ ನಿನ್ನ
ಮರೆವೆ ಜಗದ ಪರಿವೆಯ
ಸ್ಫೂರ್ತಿ ನೀನೇ ಮುನ್ನಡೆಸಲು
ಶಕ್ತಿ ನೀನೇ ಅರಿತೆಯಾ
ಸಾಕು ಬಡಿವಾರ ಬಿಡು
ಬರಿದೇ ಮಾತಿನ ಮಲ್ಲ
ನುಡಿಸಲ್ಹೇಗೆ ಹೇಳಿಕೊಡು
ಊದಬೇಕು ಬಿದಿರುಕೊಳಲ
ನನ್ನೆದೆಯ ಮಾತುಗಳ
ಹಾಡಾಗಿಸಿ ನುಡಿಸಿ
ತುಂಬ ಬೇಕು ಪ್ರೇಮಭಕ್ತಿ
ನಿನ್ನೊಲುಮೆಯಲಿ ಕರಗಿ
ನುಡಿಸಲಾರೆ ಬಿಡು ಸಖಿ
ಹೊಮ್ಮುವ ರಾಗ ನೀನೇ
ಕರದಲಿ ನವಿರಾಗಿ ಹಿಡಿದ
ಬಿದಿರು ಕೊಳಲು ನಾನೇ
ನಿನ್ನ ಕೈಯ ಹಿಡಿತದಲಿ
ಮೆರೆವ ಕೊಳಲು ನಾನು
ಮಾಂತ್ರಿಕ ಸ್ಪರ್ಶದಲೇ
ಮಿಡಿವ ನಾದ ನೀನು
ನಾನು ನೀನು, ನೀನು ನಾನು
ಸೇರಿದರೇ ನವರಾಗ ತಾನೇ
ವೇಣು ನಾನು ನಾದ ನೀನು
ನುಡಿಸಿದರೇ ಸ್ವರ್ಗ ತಾನೇ
ಶೈಲೂ......
ಬರೆಯಲೇ ಗೆಳೆಯ
ನಿನಗಾಗಿ ಕವಿತೆ
ತುಂಬಿ ಅದರಲ್ಲಿ
ಸಿರಿಸ್ನೇಹ ಮಮತೆ
ಬರದಿರಲಿ ಎಂದೂ
ಸ್ನೇಹಕ್ಕೆ ಕೊರತೆ
ಸಂಭ್ರಮದ ಬದುಕಲಿ
ಬೆಳಗಲಿ ಘನತೆ
ನನ್ನ ಆತ್ಮ ಸಂಗಾತಿ - ಪುಸ್ತಕ
**************************
ಪುಸ್ತಕಗಳ ಸಂಬಂಧ
ಮಸ್ತಕಕೆ ಅನುಬಂಧ
ಜ್ಞಾನ ದಾಹವ ತಣಿಸೋ
ಅಮೃತ ಕಲಶವೇ ಪುಸ್ತಕ
ಬಾಳಿಗೆ ಒಡನಾಡಿಯಿದು
ನೋವು.ದುಃಖವ ಮರೆಸಿ
ನಿತ್ಯ ರಸದೌತಣವೀವ
ಆತ್ಮ ಸಂಗಾತಿ ಪುಸ್ತಕ
ಅರಿವಿನ ಹರಿವು ನಿತ್ಯ
ಮೌಢ್ಯ ಹರಿಸುತ ಸತ್ಯ
ಜ್ಞಾನ.ಸೆಲೆಯ ಮೂಲ
ಅಜ್ಞಾನದ ತೆರೆ ನಿರ್ಮೂಲ
ನೋವು ನಲಿವಿಗೆ ಗೆಳೆಯ
ತುಂಬುತ ಸದಾಶಯ
ತಿಳಿಸುತ್ತ ಅಕ್ಕರದ ತಿಳುಹು
ಹೊತ್ತಿಗೆಯ ಮಹತ್ವದರಿವು
ಇರಲೆಲ್ಲರಿಗೂ ಪುಸ್ತಕ ಜ್ಞಾನ
ತೊಡೆಯುತ್ತ ಮೌಢ್ಯ ಅಜ್ಞಾನ
ಮೂಡಲಿ ಸಾಹಿತ್ಯ ಜಿಜ್ಞಾಸೆ
ಅದುವೇ ಜ್ಞಾನದ ಪರಿಭಾಷೆ
ಶೈಲೂ....
ಎಲ್ಲವೂ ನೀನೇ
*************
ನನ್ನೊಲವ ಮಂದಿರದಿ
ನೆಲೆಸಿಹ ಮೂರುತಿ ನೀನೇ
ಕಿರುನಗೆಯ ಜ್ಯೋತಿಯನು
ಬೆಳಗುವವನೂ ನೀನೇ
ನನ್ನೊಲವ ಬದುಕಿನಲಿ
ಬೆಳಕಂತೆ ತಾ ಬಂದು
ಕಹಿಯ ಕತ್ತಲ ದೂಡಿ
ಬಾಳು ಬೆಳಗುವವ ನೀನೇ
ನನ್ನೊಲವ ಹೂ ಬನದಿ
ಬಿರಿದು ಮಲ್ಲಿಗೆಯಂತೆ
ಸೊಗವಿತ್ತು ಹೂ ಬನಕೆ
ಗಂಧ ಪಸರಿಸಿದವ ನೀನೇ
ನನ್ನೊಲವ ಆಗಸದಿ
ಸರಿಸಿ ದುಃಖದ ಮೋಡ
ಶುಭ್ರಾಗಸದಿ ನಗುತ
ಪ್ರಭೆ ಬೀರೋ ಸೂರ್ಯನೂ ನೀನೇ
ಅಡಗಿ ಮೋಡದ ಹಿಂದೆ
ಇಣುಕಿಣುಕಿ ನೋಡುತಲಿ
ಒಲವ ಅಮೃತದ ಧಾರೆ
ಸುರಿವ ಚಂದ್ರಮನೂ ನೀನೇ
ಬಿರಿದ ಮಲ್ಲಿಗೆಯಂತ
ಮನದ ಕುಸುಮದ ಜೇನು
ಮೊಗೆಮೊಗೆದು ಹೀರುವ
ನನ್ನೊಲವ ಭ್ರಮರವು ನೀನೇ
ಒಲವ ಸುಂದರ ಬದುಕು
ತೂಗೋ ಉಯ್ಯಾಲೆಯ ತೆರದಿ
ಹಾಗೊಮ್ಮೆ ಹೀಗೊಮ್ಮೆ ಅಳಿಸಿ ನಲಿಸಿ
ಜೀಕುವವನೂ ನೀನೇ
ನಾ ಏನ ಹೇಳಲಿ ಕೃಷ್ಣ
ನನ್ನದಿನಿತೂ ಇಲ್ಲ,, ಜಗವ
ಮಾಯೆಯೋಳಾಡಿಸೋ
ಸರ್ವೋತ್ತಮನೂ ನೀನೇ
ಶೈಲೂ....
ಹೇಳಲಿ ಹೇಗೆ.?
*************
ಹೇಳಲಿದೆ ಬೇಕಾದಷ್ಟು
ಹೇಳಲಾರದ ಬಿಕ್ಕಟ್ಟು
ಹೇಳಲೆಂತು ಮನದ ಮಾತು
ಹೇಳೆ ನೋವಾದರೆಂತು?
ಹೇಳುವಾಸೆ ಎಲ್ಲ ನಿನಗೆ
ಹೇಳಿದರೆ ಹೇಗೋ ನಿನ್ನ ಬಗೆ
ಹೇಳದೇನೋ ತಳಮಳ
ಹೇಳಲೆಂತರಿಯಲಿ ನಿನ್ನೊಡಲ
ಹೇಳೆಂದರೂ ನಾ ಹೇಳಲೇನು?
ಹೇಳದಿರೆ ತಪನ ಬಲ್ಲೆಯೇನು.?
ಹೇಳದೆಯೂ ನೀನರಿಯಬೇಕು
ಹೇಳಿ ಕೇಳೇಕೆ ತಿಳಿಯಬೇಕು?
ಹೇಳಿ ಬಂದೆಯೇನು ಒಳಗೆ
ಹೇಳದೇ ಹೋದ್ದದ್ದೇಕೆ ಹೊರಗೆ
ಹೇಳಲಿಲ್ಲವೇನೂ ವಿಷಯ?
ಹೇಳೆ ಸಂತಸ ನೀ ಬಲ್ಲೆಯಾ
ಹೇಳಲೇನು ಮನದ ಮಾತ
ಹೇಳಲ್ಹೇಗೆ ಕಾರಣವಿಲ್ಲದೆ ಖಚಿತ
ಹೇಳಬೇಕೆಂದರೂ ಬರಲೊಲ್ಲದು
ಹೇಳಿದ್ಯಾತರ ಗೊಂದಲ ಮನದ್ದು
ಶೈಲೂ.....
ಹೊಲೆದಾಟ
ಹೊಲೆದಾಟ ಸುಲಭದ್ದಲ್ಲ
ಸರಿಸುತ್ತಿರಬೇಕು ವಸ್ತ್ರವ ಮೆಲ್ಲ
ಮೈಮರೆತರೆ ಕೈಯೊಳಗೆ ಸೂಜಿ
ಚಾಕಚಕ್ಯತೆಯಿರೆ ಉತ್ತಮ ದರ್ಜಿ
ವಸ್ತ್ರದ ಮೇಲೆ ವಿವಿಧ ವಿನ್ಯಾಸ
ಬಣ್ಣದ ಬಳಪದಿಂದ ಚಿತ್ರೀತ ನ್ಯಾಸ
ಚಕಚಕನೆ ಚಲಿಸಿ ಕತ್ತರಿ
ಬಲು ಚಂದ ಕತ್ತರಿಸುವ ಪರಿ
ಮಾರುದ್ಧದ ಬಟ್ಟೆ ನೂರಾರು ಪೀಸು
ಒಂದಕೊಂದ ಜೋಡಿಸ್ಹೊಲೆಯೇ ಜೋಶು
ನಾಜೂಕಿನಲಿ ಮಾಡಿ ಕುಸರಿ
ಸುಂದರ ವಸ್ತ್ರದನುಬಂಧದ ಪರಿ
ಹೊಲೆಯಬೇಕಿದೆ ಹೊಲಿಗೆ
ಬಂಧ ಕಳಚಿದ ಬದುಕ ಬಿರುಕಿನ ನಡುವೆ
ಹಾಕಿ ಎಲ್ಲ ತೂತುಗಳಿಗೆ ತೇಪೆ
ಬಾಂಧವ್ಯದ ಬೆಸುಗೆಯಿದ್ದರೆ ಹೊಳಪೇ..!
ಆಗಬೇಕಿದೆ ಸೃಜಿಸುವ ಯಂತ್ರ
ಬಿತ್ತಿ ಎಲ್ಲರೊಳಗೆ ಶಾಂತಿ ಮಂತ್ರ
ಬಿರುಕು ಕಾಣದಂತೆ ಹೊಲೆದು
ಹೊಂದಾಣಿಸೆ ಚತುರತೆ ಮೆರೆದು
ದಿಗಂತ
*******
ಹೇ ದಿಗಂತ... ನೀನನಂತ
ವರ್ಣಿಸಲಿ ನಿನ್ನಂಏನಂತ?
ಮಿತಿಯುಂಟೇನು ಪರಿಧಿಗೆ
ಸಕಲ ಬ್ರಹ್ಮಾಂಡ ನಿನ್ನೊಳಗೆ
ಅಷ್ಟದಿಕ್ಕಿಗೂ ವ್ಯಾಪಿಸುತ
ಅದರಾಚೆ ಪರಿಧಿ ಪಸರಿಸುತ
ವಿಸ್ತರಿಸುತ್ತಾ ದಿಗ್ದಿಗಂತ
ವ್ಯೋಮಾಕಾಶ ನಿನದೇ ಪೂರ್ತ
ಜಗದಗಲ ಮುಗಿಲಗಲ ವ್ಯಾಪ್ತಿ
ಅಂಬರ ಆಕಾಶ ದಿಗಂತ ದೀಪ್ತಿ
ಮಿತಿಯೆಲ್ಲಿದೆ ಅನಂತ ದಿಗಂತಕೆ
ಹಿಗ್ಗಿ ಹಿರಿದಾಗಿ ಬೆಳೆದ ಅನಂತಕೆ
ಎತ್ತರೆತ್ತರಕೆ ಮುಗಿಲನೂ ದಾಟಿ
ಬೆಳೆಯಲಿದೆ ದಿಗಂತವನೂ ಮೀಟಿ
ಬೆಳೆವಮನಕೆಲ್ಲಿಯ ಇತಿಮಿತಿ
ಬೆಳೆಯಲಿದೆ ಜೀವನ ಪೂರ್ತಿ
ಶೈಲೂ....
[
ಎಂದೂ ಬರೆದಿರದ ಸಾಲುಗಳು
**************************
ಬಾಳ ಹೊತ್ತಿಗೆಯಲಿ
ಖಾಲಿ ಖಾಲಿ ಪುಟಗಳು
ಬರಿದಾದ ಮನದಂಗಳದಿ
ಬರೆದಿರದ ಸಾಲುಗಳು
ಬರೆಯಬೇಕೆಂದರೂ ಬಾರದು
ಒಳಮನದ ನೋವುಗಳು
ಅಕ್ಷರದಲ್ಲಡಗಿಸಲಸಾಧ್ಯ
ಬರಿದಾದ ಪದಪುಂಜಗಳು
ಕನಸಲ್ಲಿ ಕಾಡಿದ್ದ ನವಿರು ನೆನಪು
ಹಗಲಲ್ಲಿ ಕಂಡಿದ್ದ ಸವಿಗನಸು
ತುಸು ಕೋಪತಾಪ ಹುಸಿಮುನಿಸು
ಎಂದೂ ಬರೆದಿರದ ಸಾಲಾಯ್ತು
ಕಂಗಳಿಂದಿಳಿದಿದ್ದ ಕಂಬನಿ ಲೆಕ್ಕ
ನವಿರಾದ ಪ್ರೇಮದ ಪುಳಕ
ಬರೆಯಲಾರದ ಕವನದ ಶೈಲಿ
ಬರಿದೇ ಖಾಲಿ ಖಾಲಿ ಖಾಲಿ
ಶೈಲೂ.....
ಅದೇನಿಂತು ನಾಚಿಕೆ ಗೆಳತಿ
ಅದೇನಿಂತು ನಾಚಿಕೆ ಗೆಳತಿ
ನೀ.ಸೌಂದರ್ಯದ ಒಡತಿ
ಮುಚ್ಚಿದ್ದೇಕೆ ಅರೆಬರೆ ಕಣ್ಣು
ನೀನೊಂದುಸವಿಯಾದ ಹಣ್ಣು
ಆಹಾ ಕೆಂಪಿನ ಚಂದದ ತುಟಿ
ಅಡಗಿದ್ದೇಕಲ್ಲಿ ದಾಳಿಂಬೆ ಕಾಳು
ಸೇಬನ್ನೂ ನಾಚಿಸುವ ಕದಪು
ಹೆಣ್ಣೇ ಏಕಿಂತು ವೈಯ್ಯಾರ ಒನಪು
ಕಾಮನ ಬಿಲ್ಲಂತೆ ತೀಡಿದ ಹುಬ್ಬು
ಚಂದ್ರಕಾಂತಿಯೂ ನಿನ್ನೆದುರು ಮಬ್ಬು
ಅರೆಬಿರಿದ ತುಟಿಯ ಮಾಸದ ನಗು
ಮರೆಯಲಾರೆ ಗೆಳತಿ ಸದಾನಿನ್ನದೆ ಗುಂಗು
ಮೇಘಮಾಲೆಯೇನು ನಿನ್ನ ಹೆರಳು
ತೂಗಾಡುವ ಚೂಪು ಮುಂಗುರುಳು
ಆಹಾ ಅದೇನಂತ ನಾಚಿಕದದ್ಭುತ
ನಸು ನಾಚಿಕೆಯಲೇ ಇತ್ತೆಯೇನು ಸಮ್ಮತ
ಮಲ್ಲೆ ಮುಡಿದ ಮನಸೆಳೆದ ನಲ್ಲೆ
ನೀನಾರ ಕುಂಚದ ಕಲೆಯ ಬಲೆ
ಮನಸೆಳೆಯಲೇ ಕಡೆದನೇನು ಚತುರ
ಸೆರೆಯಾದೆ ನಾ ನಿನ್ನೊಲವೇ ಮಧುರ
ಶೈಲೂ.....
ದ್ರೋಣ
*******
ಅಂಬಾರಿ ಹೊರುವ ದ್ರೋಣ
ಪಾಪ ತೊರೆದುಬಿಟ್ಟ ಪ್ರಾಣ
ಭಾರೀ ಆಕಾರ ಧೀರ ಗಂಭೀರ
ಭುವನೇಶ್ವರಿಗೆ ಸೇವೆಯಿತ್ತಿದ್ದ ಅಪಾರ
ದಸರಾ ದಿಬ್ಬಣದ ಮುಖ್ಯಸ್ಥ
ಚಂದಾಲಂಕಾರ ಸಾಲಂಕೃತ
ಶಿಸ್ತಿನ ಸಿಪಾಯಿ ಮೆರವಣಿಗೆ
ನಿನ್ನಿಂದಲೇ ಮೆರುಗು ಅಂಬಾರಿಗೆ
ಅದೆಷ್ಟು ಹೊತ್ತು ಮೆರೆದಿದ್ದೆ ಭಾರ
ಸಾವಿರಾರು ಕಿಲೋ ಬೆಳ್ಳಿ ಬಂಗಾರ
ಭಾರದಬ್ಬರಕೆ ಹೇಳು ಆಯಾಸವಾಯ್ತೆ
ಮಾಗಿ ಬಾಗಿದ ಜೀವಕೆ ವಯಸ್ಸಾಯ್ತೆ
ನಾಗರಹೊಳೆ ಅರಣ್ಯದ ದೊರೆ
ಇಳಿಸಿದೆ ಭೂಮಿ ಋಣದ ಹೊರೆ
ಗಜರಾಜ ನಿನಗಿದೋ ಅಶ್ರುತರ್ಪಣ
ದಸರ ಸಂಭ್ರಮವಿನ್ನು ಭಣ ಭಣ
ಶೈಲೂ.....
ಮನದ ಮಾತು
*************
ಮನವು ಹೇಳುತಿದೆ
ಮನದೊಳಗಿನ ಮಾತು
ಮನವಿರಿಸಿ ಕೇಳಿದರೆ
ಮನವರಿಕೆಯಾದೀತು
ಮನದ ಮಾತಿದು ಕೇಳು
ಮನವನಾವರಿಸಿರುವೆ ನೀನು
ಮನ ಮತ್ತೆ.ಹೇಳುತಿದೆ
ಮನದೊಡೆಯ ನೀನು
ಮನದ ಭಿತ್ತಿಯೊಳಗೆ
ಮನಸಿಟ್ಟು ನೆಟ್ಟ ಚಿತ್ರ
ಮನಮುಟ್ಟುವಂತಿದೆ
ಮನದನ್ನ ನೀ ಕೇಳು
ಮನವೇಕಿಲ್ಲ ನಿನಗೆ.?
ಮನದ ಮಾತು ಕೇಳಲು
ಮನಸು ಮಾಡೆನ್ನ ಚೆನ್ನ
ಮನವನರಿತು ನೋಡು
ಮನದೊಳಗೆ ಮುಳುಗಿಹುದು
ಮನಸ್ಸೆಂಬ ಸ್ವಾತಿಮುತ್ತು
ಮನವಿತ್ತು ಚಿತ್ತೈಸು
ಮನಸದು ನಿನ್ನದೇ ಸ್ವತ್ತು
ಶೈಲೂ......
ಕಾರ್ಮಿಕ ದಿನಾಚರಣೆ
*******************
ಬಂಡವಾಳಶಾಹಿಗಳ ಹಿಡಿತದಲಿ
ದುಡಿವ ವರ್ಗವಿದು ನಿತ್ಯ ನರಳುತಲಿ
ಶೋಷಣೆಗೆ ಒಳಪಟ್ಟ ಶ್ರಮಿಕವರ್ಗ
ಸಿಡಿದು ನಿಂತಾಗ ಆಯ್ತು ಕಾರ್ಮಿಕ ಪರ್ವ
ಅನಿರ್ದಿಷ್ಟ ಅವಧಿಯ ದುಡಿತದ ಶ್ರಮ
ಶ್ರೀಮಂತರಿಗಾಗಿಯೇ ದುಡಿವ ಕರ್ಮ
ನಿರಂತರ ಶೋಷಣೆಯ ವಿರುದ್ಧ ಹೋರಾಟ
ಫಲನೀಡಿತ್ತು 8 ಗಂಟೆಗಳ ದುಡಿತದ ಹಠ
ಸರ್ಕಾರದ ಸ್ವಾಮ್ಯದಡಿಯ ಸಂಘಟಿತರು
ಖಾಸಗಿಉದ್ದಿಮೆಗಳಲಿ ದುಡಿವ ಅಸಂಘಟಿತರು
ನಿರ್ಧಿಷ್ಟ ಕೂಲಿಯದು ಗಗನ ಕುಸುಮ
ದಿನಗೂಲಿ ಲೆಕ್ಕದಲೂ ದುಡಿಮೆ ಅಸಮ
ಶೋಷಣೆಯಲೇ ಬದುಕುತ್ತಿರುವ ಕಾರ್ಮಿಕ ಸಂತ
ಅವರ ದುಡಿಮೆಯಲ್ಲಿ ದುಪ್ಪಟ್ಟಾದ ಶ್ರೀಮಂತ
ದುಡಿವವರು ದುಡಿದು ದುಡಿದೂ ಸೋಲು
ಶ್ರಮವಿತ್ತರೂ ಕೊನೆಗೆ ಹಸನಾಗಲಿಲ್ಲ ಬಾಳು
ಇರಬೇಕು ಕಾರ್ಮಿಕರಲಿ ಐಕ್ಯತೆಯ ಮಂತ್ರ
ಶ್ರಮಿಕರಿಗೆ ನೆರವಾಯ್ತು ಒಕ್ಕೂಟ ಸೂತ್ರ
ಬಂಡವಾಳಶಾಹಿ ವಿರುದ್ಧ ಕೂಗು ಹೋರಾಟ
ಕಾರ್ಮಿಕ ದಿನಾಚರಣೆ ಎಂಬ ಆವಿಷ್ಕಾರ
ದುಡಿದು ದುಡಿದೂ ಬಸವಳಿದ ಕಾರ್ಮಿಕ
ಇಂದೊಂದು ದಿನವಾದರೂ ವಿಶ್ರಾಂತಿ ಕಾಯಕ
ಅಮರವಾಗಲಿ ನಿಮ್ಮ ದುಡಿತದ ಫಲದ ಗದ್ದುಗೆ
ಜಯವಾಗಲೀ ಕಾರ್ಮಿಕ ದಿನಾಚರಣೆಯ ಹಾದಿಗೆ
ಶೈಲೂ.....
ಕಿಟಕಿಬಳಿ ನಿಂತವಳನ್ನು
ಮುದ್ದಿಸಿದನೇನು ಭಾನು.?
ಸುಳಿದು ಕಿಂಡಿ ಕಿಂಡಿಯಲಿ
ಬರಸೆಳೆದು ಅಪ್ಪಿದನೇನು.?
ಆಗಿರಬೇಕು ಪ್ರಣಯದಾಸೆ
ದಂತದ ಗೊಂಬೆಯ ಕಂಡು
ಇಣುಕಿಣುಕಿ ನೋಡುತಿರುವ
ಚಂದದ ಪರಿಯ ಕಂಡು
ಬೆಚ್ಚಿದ್ದಳಂದು ಸಂಜ್ನ್ಯಾ
ಪ್ರಖರ ಶಾಖವ ಕಂಡು
ಬೇಸರವಾಗಿರಬೇಕು ಪಾಪ
ಬರಿದೇ ಛಾಯೆಯನುಂಡು
ಎಳೆ ಬಿಸಿಲ ಶಾಖಕೆ ಮೈಯೊಡ್ಡಿ
ನಿಂತ ವೈಯ್ಯಾರಿಯ ಸ್ಪರ್ಶಕೆ
ಭಾಸ್ಕರ ನೇ ಬಿಸಿ ಬಿಸಿಯಾಗಿ
ಬೆವರಾಗಿ ಸುರಿದು ಸರಿದ ನೇಪಥ್ಯಕೆ
ಶೈಲೂ...
ಮಾತಿನ ಮಲ್ಲನ ಮೌನ ಮೆರವಣಿಗೆ
ಮಾತಿನ ಮಲ್ಲನ ಮೌನ ಮೆರವಣಿಗೆ
ಬಾಳ ಪುಟರ ಕೊನೆ ಹಾಳೆಯ ವರೆಗೆ
ನಾಟಕ ಪರದೆಯ ಅಂಕವು ಜಾರಿ
ಜೀವನ್ನಾಟಕ ಮುಗಿಸಿದ ಸೂತ್ರಧಾರಿ
ಕರುನಾಡ ಕಣ್ಮಣಿ ನರಸಿಂಹಮೂರ್ತಿ
ರಂಗಭೂಮಿಯಲ್ಲಿ ಗಳಿಸಿದ ಕೀರ್ತಿ
ಬೆಳ್ಳಿತೆರೆಗೂ ಹಬ್ಬಿತು ಅದಮ್ಯ." ವಾಣಿ "
ಕಂಚಿನ ಕಂಠದ ನಿರರ್ಗಳ ವಾಣಿ
ನಟರತ್ನಾಕರನ ನಟನೆ ಅಪಾರ
ಹೆಸರು ಗಳಿಸಿದ್ದು ಲಂಚಾವತಾರ
ರಾಜಕೀಯದ ಹೊಲಸ ಬಿಚ್ಚಿದ ಧೀರ
ಯಾರಿಗೂ ಹೆದರದ ಕೆಚ್ಚೆದೆಗಾರ
ಸಾಮಾಜಿಕ ಕಾಳಜಿಯ ಕಳಕಳಿ
ಭ್ರಷ್ಟತೆಯ ಅನಾವರಣ ಮಾಡಿದ ಪುತ್ಥಳಿ
ಮೊನಚು ಮಾತಲ್ಲೇ ಜನಜಾಗೃತಿಯ ಅನಾವರಣ
ಸಹಿಸದನೇಕ ಮಂದಿಯ ಹಗೆ ವಿನಾಕಾರಣ
ಹಿರಣ್ಣಯ್ಯ ಮಿತ್ರಮಂಡಲಿಯ ರೂವಾರಿ
ನಟ ರತ್ನಾಕರ ಬಿರುದಾಂಕಿತ ಪಾತ್ರಧಾರಿ
ಹಾಸ್ಯ ವಿಡಂಬನೆಯಲೇ ಚಾಟಿ ಏಟಿತ್ತ ನಾಜೂಕಯ್ಯ
ನಟನೆಯ ದೈತ್ಯ ಪ್ರತಿಭೆ ನೀ ಮಹಾರಾಯ
ಹೊರಟು ಬಿಟ್ಟಿರೇಕೆ ಭೂಮಿಯನು ತೊರೆದು
ರಂಗಭೂಮಿಯಲಿ ಸಾರ್ವಭೌಮಿಕೆ ಮೆರೆದು
ಇನ್ನಾರಿಹರು ನಿಮ್ಮಂಥ ಧೀಮಂತ ವ್ಯಕ್ತಿ
ಭ್ರಷ್ಟತೆಯ ಎಳೆಎಳೆಯಾಗಿ ಬಿಚ್ಚಿಡುವ ಅಭಿವ್ಯಕ್ತಿ
ಶೈಲೂ.....
★★ ರಂಗೋಲಿ ★★
******************
ಅಂಗಳಕೆ ಶೋಭೆ ಅಂದದ ರಂಗೋಲಿ
ಶುಭವ ಸೂಸುವ ಚಿತ್ತಾರ ಬಾಗಿಲ ಬಳಿಯಲ್ಲಿ
ಬಿಳಿಪುಡಿಯ ಎಳೆ ಎಳೆಯು ಹೊಸ್ತಿಲ ಮೇಲೆ
ನಡುವೆ ಕೆಂಪಿನ ಗೆರೆಯು ರಂಗೋಲಿ ಮಡಿಲಲ್ಲೇ
ಸಂಪ್ರದಾಯದ ಸಿರಿಯು ಮನೆಗೆ ಭೂಷಣ
ಗೃಹಿಣಿಯರ ಕೌಶಲ್ಯದನಾವರಣ
ವೃ0ದಾವನಡೆದುರು ಶಂಕುಚಕ್ರಗಧಾಪದ್ಮ
ದೇವನಿರುವೆಡೆಯಲ್ಲಿ ಶುಭಕರ ಗೋಪದ್ಮ
ಶ್ರೀರಂಗ ನಿಗೆ ಅತಿಪ್ರಿಯ ರಂಗೋಲಿ
ಬಣ್ಣದ ನವಾವರಣ ತುಂಬಿ ಅದರಲ್ಲಿ
ಒಂದೊಂದು ದೈವಕೊಂದೊಂದು ತೆರನಾಗಿ
ವಾಂಛಿತ ಫಲವೀವ ದೈವಿಕ ರಂಗವಲ್ಲಿ
ಎಳೆಎಳೆಯ ಸರಳ ಗೆರೆಗಳುಂಟು
ಚಿಕ್ಕುಗಳ ಚಿತ್ತಾರವಿಹುದು ಬ್ರಹ್ಮಗಂಟು
ವಿವಿಧ ವಿನ್ಯಾಸ ಆಕಾರ ಸಾಕಾರ
ಕೌಶಲತೆಯ ಕೈಚಳಕದ ಕಲಾಹಂದರ
ನಮ್ಮ ಸಂಸ್ಕೃತಿಯ ಪ್ರತೀಕ ರಂಗೋಲಿ
ಭಕ್ತಿ ಭಾವ ಕೌಶಲ ಮಿಳಿತ ಅದರಲ್ಲಿ
ರಾರಾಜಿಸುತಿರೇ ಮನೆಯ ಮುಂದೆ
ಶುಭಸಮಾರಂಭ ಇಹುದು ಎಂದೇ
ಜೀವನವೂ ಇಹುದು ರಂಗೋಲಿಯಂತೆ
ಬಿಡಿಸದಿದ್ದರೆ ಮನೆಮನ ಸೂತಕಛಾಯೆಯಂತೆ
ತಪ್ಪಿದ ಚುಕ್ಕಿಗಳಲ್ಲಿ ವಿನ್ಯಾಸ ಅಪೂರ್ಣ
ಹದವರಿತು ಬಿಡಿಸಿದರೆ ಬಾಳು ಸಂಪೂರ್ಣ
ಶೈಲೂ.....
ನಾ ಹಾರುವ ಹಕ್ಕಿಯಾಗಿದ್ದರೆ.?
************************
ಬಾನಲ್ಲಿ ಹಾರಾಡುವ
ಹಕ್ಕಿ ನಾನಾಗಿದ್ದರೆ
ಆಹಾ ಅದೆಷ್ಟು ಚಂದವಿರುತಿತ್ತು
ಬೀಗಿಸುತ್ತಾ ಕೊಕ್ಕು
ಹಾರಿಸುತ್ತಾ ರೆಕ್ಕೆ
ಭೂಮಂಡಲವನ್ನೆಲ್ಲ ಸುತ್ತಬಹುದಿತ್ತು
ಹಾಗೇ ತೇಲುತ್ತ ತೇಲುತ್ತ
ಗಗನಡೆದೆಗೆ ಹಾರುತ್ತ
ಬೆಳ್ಮುಗಿಲಮೇಲೆ ಕೂರಬಹುದತ್ತು
ಕಟ್ಟಿದ್ದ ಕಾರ್ಮುಗಿಲ
ಕೊಕ್ಕಿನಿಂದ ಕುಕ್ಕುತ್ತಾ
ಧರೆಯೆಡೆಗೆ ಮಳೆಯ ಸುರಿಸಬಹುದಿತ್ತು
ಖಗವಾಗಿ ಗೆಲುವಾಗಿ
ದೇವಲೋಕದೆಡೆಹೋಗಿ
ಮಾಧವನನ್ನೊಮ್ಮೆ ನೋಡಬಹುದಿತ್ತು
ಮೃದುವಾಗಿ ತಲೆಬಾಗಿ
ಭಕ್ತಿಯಿಂದ ಬೇಡಿ
ಹೆಗಲಮೇಲವನ ಮೆರೆಸಬಹುದಿತ್ತು
ಕಪ್ಪಾದರೇನಂತೆ
ಕೋಗಿಲೆ ನಾನಾಗಿ
ಇಂಪಾಗಿ ಹಾಡನ್ನ ಹಾಡಬಹುದಿತ್ತು
ಹಸಿರುಡುಗೆಯನ್ನುಟ್ಟು
ಕೆಂಪು ಕೊಕ್ಕಲಿ ಕುಕ್ಕಿ
ರುಚಿಯಾದ ಹಣ್ಣನ್ನು ಸವಿಯಬಹುದಿತ್ತು
ಬಣ್ಣಬಣ್ಣದ ಗರಿಯ
ಹೊತ್ತ ನವಿಲಾಗಿದ್ದರೆ
ಕೃಷ್ಣನ ಮುಡಿಯೇರಿ ನಲಿಯಬಹುದಿತ್ತು
ಆಡುತ್ತ ಕುಣಿಯುತ್ತ
ಮನವನ್ನು ತಣಿಸುತ್ತ
ನನ್ನವನೋಡನಾಟ ಸವಿಯಬಹುದಿತ್ತು
ಸ್ವಚ್ಛ ಬಿಳಿಯ ಪುಕ್ಕ
ಹೊತ್ತ ಹಂಸನಾನಾಗಿದ್ದರೆ
ಪ್ರೇಮಿಗಳ ಪತ್ರ ತಲುಪಿಸಬಹುದಿತ್ತು
ಸ್ವಚ್ಛ ಹಾಲಿನೊಳಗೆ
ಬೆರೆತ ನೀರನ್ನೊಮ್ಮೆ
ಹಂಸಕ್ಷೀರನ್ಯಾಯ ತೋರಬಹುದಿತ್ತು
ಶೈಲೂ....
ಗತವೈಭವ
*********
ಅಂದು ಬಾಳಿ ಬದುಕಿದ್ದ
ಮನೆಯಿಂದು ಪಾಳು ಗುಡಿ
ಮೆರೆದ ಗತವೈಭವವಿಂದು
ಅಳಿದು ಪಳಯುಳಿಕೆಯಡಿ
ತಲೆ ತಲೆಮಾರುಗಳು ಬದುಕಿ
ಪೋಷಣೆಯಿಲ್ಲದೆ ಕುಸಿಯಿತಿಂದು
ಪರಂಪರಾನುಗತ ಅಂದದಮನೆ
ಕಾಲನವಶಕೆ ಸಿಲುಕಿತಿಂದು
ಅದೆಷ್ಟು ಮಂದಿಗೆ ನೆರಳಿತ್ತಿತ್ತೋ
ಹಸಿದು ಬಂದವರಿಗೆ ತುತ್ತನೀಡಿ
ನಿಷ್ಠೆಯ ಬೆವರ ಹನಿ ಬಸಿದವರಿಗೆ
ಅಸನವಸನವಿತ್ತಿತ್ತು ಪ್ರೀತಿ ಮಾಡಿ
ಅಸರೆಯ ತಂಪಿತ್ತು ಬಾಚಿ ತಬ್ಬಿದ್ದ
ಗುರುಹಿರಿಯರಿದ್ದ ಅಂದದಂಕಣ
ಹಳೆ ಬೇರು ಹೊಸ ಚಿಗುರು
ಹಬ್ಬಿ ನಕ್ಕಿದ್ದ ಭಾವದನಾವರಣ
ಇತ್ತೊಂದು ಕಾಲದಲಿ ಭರಪೂರ
ಸುವರ್ಣಯುಗದ ಸಂಭ್ರಮದ ಕಾಲ
ತಾತ ಮುತ್ತಾತರಾಳಿ ಬದುಕಿದ್ದ
ಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲ
ಶೈಲೂ...
ಕಾಯಕವೇ ಕೈಲಾಸ
*****************
ಕಾಯಕವೇ ಇಲ್ಲದಿರೆ
ಕೈಲಾಸವೆಲ್ಲಿಯದು.?
ಕೈ ಕೆಸರಾದರೆ ತಾನೇ
ಬಾಯಿಗೆ ಮೊಸರು..!!
ದುಡಿಮೆಯೇ ದೇವರು
ಸುರಿಸಿ ಹರಿಸಿ ಬೆವರು
ನಿಷ್ಠೆಯಿಂದ ದುಡಿದವಗೆ
ಅಷ್ಟೇ.. ಒಳ್ಳೆ ಹೆಸರು..!!
ಮೇಲುಕೀಳಿಲ್ಲ ವೃತ್ತಿಯಲಿ
ಗೌರವಿಸಿ ನಡೆದರದು ಧರ್ಮ
ಅವರವರ ವೃತ್ತಿ ದೇವನಾಣತಿ
ನಿಷ್ಠೆಯಲಿಹನು ಅದುವೇ ಮರ್ಮ
ಇಂಥ ಸವಿನುಡಿಯನಾಣತಿಯ
ನೀಡಿದರೊಬ್ಬ ಮಹಿಮರು
ಭರತವರ್ಷಕೆ ಕ್ರಾಂತಿ ತಂದ
ಜಗಜ್ಯೋತಿ ಬಸವೇಶ್ವರರು
✍ ಶೈಲಜಾ ರಮೇಶ್
ಜಗಜ್ಯೋತಿ ಬಸವೇಶ್ವರ
*********************
ಕಾಯಕವೇ ಕೈಲಾಸ ದುಡಿದರಿಹುದು ಉಲ್ಲಾಸ
ದುಡಿಮೆಯಲಿಹನು ದೇವರು ಶ್ರದ್ಧೆಯಿಂದ ದುಡಿಯುತಿರು
ದಯೆಯಲಿಹುದು ಧರ್ಮ ಕರುಣೆಯದರ ಮರ್ಮ
ಮೂಢನಂಬಿಕೆಯ ಮೌಢ್ಯ ಅಳಿಸಿ ಬಿಸುಟು ಆಗುನೀ ಪ್ರೌಢ
ಜಾತಿವಿಜಾತಿಯಾವುದಿಹುದು ಜಗಕಿಹುದೊಂದೆ ಜಾತಿ
ಭಕ್ತಿಯ ಬಾಂಡ ದೊಳಗಿಹ ಶಿವಶರಣರಿಗಿಲ್ಲ ಯಾವ ಜಾತಿ
ಭಕ್ತಿ ಚಳುವಳಿಯ ಹರಿಕಾರ ಇಷ್ಟಲಿಂಗವದರಾಧಾರ
ಜಾತಿಬೇಧಗಳಿಗಿತ್ತಿತ್ತು ಕೊನೆ ಅನುಭವ ಮಂಟಪದ ಮಹಾಮನೆ
ಏನಗಿಂತ ಕಿರಿಯರಿಲ್ಲೆಂಬ ಸರಳ ಸಜ್ಜನಿಕೆಯ ಶರಣಾಗತಿ
ಶಿವಶರಣರಿಗಿಂತ ಹಿರಿಯರಿಲ್ಲೆಂಬ ಅನುಭವದ ಮಹಾಮತಿ
ಹಸಿದವರಿಗೆ ಅನ್ನವಿಕ್ಕುವ ಮಹಾ ಅನ್ನದಾನ ದಾಸೋಹ
ಇಷ್ಟಲಿಂಗ ಪೂಜಾಕೈಂಕರ್ಯ ಸಾಕಾರ ಶಿವನಿಗಿಷ್ಟು ಸನಿಹ
ದೇಹವಿದು ದೇಗುಲ ನಿಜಭಕ್ತಿಯಲರ್ಚಿಸಲವನು ಸಲಿಲ
ಮೃದುವಚನವೇ ಮಂತ್ರ ಆ ದೇವನೊಲಿಯುವಿಕೆಯ ತಂತ್ರ
ನೀಡಿ ವಚನಾಮೃತ ವಾಣಿ ಬಸವಣ್ಣ ನೀವಾದಿರೆಲ್ಲರ ಕಣ್ಮಣಿ
ಕ್ರಾಂತಿಯ ಹರಿಕಾರ ನಿಜಗುಣ ಭಕ್ತಿ ಭಂಡಾರಿ ಬಸವಣ್ಣ
ಜಗವ ಬೆಳಗಿದ ಜ್ಯೋತಿ ಮಹಾ ಮಾನವತಾವಾದಿ ಬಸವಣ್ಣ
ದೇವನೊಲಿಯುವ ಪರಿಗಿಹುದು ಶರಣು ಶರಣಾರ್ಥಿ ಶರಣ್ಯ
ಶೈಲೂ......
ಸಂತೈಕೆ
*******
ಹಸಿವಾಗಿಹುದೇ..? ಅಳದಿರೂ ತಮ್ಮ
ಏನು ಮಾಡುವುದೇಳು ಹಸಿವೆಯೇ ನಮ್ಮ ಕರ್ಮ
ಎಲ್ಲೆಲ್ಲಿ ನೋಡಿದರೂ ಮರವಿಲ್ಲ ಬಟಾಬಯಲು
ಹಣ್ಣು ಹಂಪಲುಗಲಿಲ್ಲ ಹಸಿವನ್ನು ನೀಗಲು
ಅಂದಿತ್ತು ಸಂವದ್ಧಿ ಫಲಭರಿತ ಮರಗಳು
ನಿತ್ಯ ಗೋಳಾಯ್ತೆಮಗೆ ಮರವೆಲ್ಲ ಕಡಿಯಲು
ಕಾಡೆಲ್ಲಾ ನಾಡಾಗಿ ಇಲ್ಲವಾಯ್ತೆಮಗೆ ನೆಲೆ
ಅರಸುತ್ತ ಆಹಾರ ಬಂದಿದ್ದೇವೆ ಗುಳೆ
ತುಸು ಸುಮ್ಮನಿರು ತಮ್ಮ ನೋಡುತಿಹಳಮ್ಮ ಆಚೀಚೆ
ಎಲ್ಲಾದರೂ ಕಾಣಸಿಗಬಹುದು ಹಣ್ಣು ಕಾಯಿಪೀಚು ಹೀಚು
ನಮಗೂ ಹಸಿವಾಗುತಿಹುದು ನೋಡು ನಾವು ಅಳುತ್ತಿಲ್ಲ
ಸ್ವಲ್ಪ ಸಾವರಿಸಿಕೊ ಕಂದ ಅಭ್ಯಾಸವಾಗುವುದು ಮೆಲ್ಲ
ಮನುಜರ ಅತ್ಯಾಸೆಗಿಂದು ನಾವು ಬೀದಿ ಪಾಲು
ಕೇಳುವರಾರಿಲ್ಲ ಇಲ್ಲಿ ನಮ್ಮಳಲಿನ ಅಹವಾಲು
ಕರೆದು ಉಣಲಿಕ್ಕುವರಿಲ್ಲ ನಾವು ಮಂಗಗಳಂತೆ
ಬೆದರಿಸಿ ಕಸಿದರಾಯ್ತು ಹೊಡೆದೋಡಿಸುವರು ಮೃಗದಂತೆ
ಸುಮ್ಮನಿರಲೂ ಬಿಡರಲ್ಲ ಹಿಡಿದೆಮ್ಮ ಪಳಗಿಸಿ ಮಣಿಸಿ
ಅವರಾಟಕೆ ಕುಣಿಸುವರು ಹೊಡೆದು ಹೆದರಿಸಿ ಬೆದರಿಸಿ
ನಮ್ಮ ಅನ್ನ ಕಸಿದವರಿಗೆ ದುಡಿದು ಕೊಡಬೇಕು ಹಣ
ತನ್ನ ಹೊಟ್ಟೆ ತುಂಬಿಸಿಕೊಂಡು ನಮಗೆ ಬರೀ ಅರೆಹೊಟ್ಟೆನಾ
ಬಾಯಲ್ಲೇನೋ ದೇವರೆಂದು ಕಟ್ಟಿದರು ಗುಡಿಗೋಪುರವ
ಕಂಡಲೆದುರು ಬೀಸುವರು ಕಲ್ಲು ಇದು ಮನುಜನ ತತ್ವವಾ.?
ಅತ್ತು ಹೈರಾಣಾಗದಿರು ಕುಡಿ ಅಮ್ಮನೆದೆಯ ಹಾಲು
ಸಿಕ್ಕಿದೊಡನೆ ಆಹಾರ ಕೊಡುವೆ ನಿನಗೆ ಪಾಲು
ಶೈಲೂ.....
ಇರಲೀಸುಖ ಅನವರತ
********************
ಯಾಕೋ ತುಸು ಆರಾಮಿಲ್ಲ
ಮಲಗಲೇ ಮಡಿಲಲಿ ನಲ್ಲ
ಕೈಕಾಲುಗಳಲೆನೋ ಸುಸ್ತು ಸೆಳೆತ
ಓಡಾಡಲಾಗದೇನೋ ನೋವು ಎಳೆತ
ಬಾ ಮಲಗು ರಾಧೇ
ನೀಗಿಸುವೆ ನಿನ್ನೆಲ್ಲ ಬಾಧೆ
ಏನಾಯಿತ್ಹೇಳೇ ಚಿನ್ನಾ
ಪರಿಹರಿಸುವೆ ನೋವನ್ನ
ಎನಿಲ್ಲವೋ ಗೋಪಾಲ
ನಿನ್ನನರಸುತ ಕಳೆದೆ ಕಾಲ
ಹುಡುಕಿ ಹುಡುಕಿ ಸುಸ್ತಾದೆ
ಅಲೆದಲೆದು ಆಯಾಸವಾಗಿದೆ
ಹೌದೇನೇ ರಾಧಾಮಣಿ
ನೆನೆದಿದ್ದರೆ ಸಾಕಿತ್ತಲವೇ ರಾಣಿ
ಓಡೋಡಿ ಬಂದಿರುತ್ತಿದ್ದೆ
ನೆನೆದೊಡನೆ ಹಾಜರು ಕಣ್ಮುಂದೆ
ಸಾಕು ಬಿಡು ಬಡಿವಾರ
ನಿನ್ನನೆನಪೇ ಪ್ರತಿದಿನ ವಾರ
ನೀನೇನೋ ಜಗದಾದಿಪತಿ
ಇಹುದೆಲ್ಲಿ ನನ್ನೊಳು ಮತಿ
ನೆನೆದೊಡನೆ ಬಂದೆನಲ್ಲವೇ ನಾನು
ಹೇಳು ಜಾಣೆ ಮನದಳಲನ್ನು
ನಿನ್ನೊಡನೆಯೇ ನಾನಿಹೆನಲ್ಲ
ಜಗವೇ ರಾಧಾಕೃಷ್ಣ ಎನುವರಲ್ಲ
ಹೆಸರೊಂದೇ ಸಾಕೇ ನಲ್ಲ
ನಿನ್ನೊಡನಾಟ ಬೇಕಲ್ಲ
ಸದಾ ನಿನ್ನೊಡನಿರಬೇಕು
ಜಗದ ಪರಿವೇ ಮರೆಯಬೇಕು
ಹಾಗೆಂದರಾದೀತೇ ಹೇಳು
ಬೇಕಲ್ಲ ಎಲ್ಲರಿಗೂ ಸಮ ಪಾಲು
ನಿನ್ನೊಡನಾಟದ ಸಿರಿ ಸ್ನೇಹ ಸಖ್ಯ
ಜಗವ ತಣಿಸುವುದೂ ಅಷ್ಟೇ ಮುಖ್ಯ
ಸರಿ ಬಿಡು ಬಿಡು ಮಾಧವಾ
ಅರಿತಿರುವೆ ನಿನ್ನ ಮನವಾ
ಜಗವ ಪಾಲಿಪ ಸ್ವಾಮಿ ನೀನು
ನನಗೇ ಮೀಸಲಿರಲೆಂದು ಬಯೆಸೆನು
ಹೋಗಲಿ ಆ ಮಾತ ಬಿಡು ರಾಧೇ
ಇಂದಿನ ಇಡೀ ಸಮಯ ನಮ್ಮದೇ
ಸುಂದರ ಈ ಪ್ರಕೃತಿ ಮಡಿಲಿನಲಿ
ಕಳೆಯೋಣ ಸುಸಮಯ ಏಕಾಂತದಲಿ
ಅದಕೆಂದೇ ಬಯಸಿದೆ ಮಡಿಲು
ಎದೆಗೊರಗಿ ಆನಂದ ಸವಿಯಲು
ಆಹಾ ಏನೀಸುಖಮಯ ಪ್ರಶಾಂತ
ಇರಲೀ ಬೆಸುಗೆ ನಿತ್ಯ ಅನವರತ
ಶೈಲೂ....
ತನ್ನದೆನ್ನುವಜೀವ ಉದರದೊಳರಳೆ
****************************
ಉದರದೊಳು ಮೊಳೆಯುತ್ತಿರುವ ಜೀವ
ತನ್ನದೆನ್ನುವ ಅತೀವ ಪ್ರೇಮ ಭಾವ
ಹೊತ್ತವಳ ಕಷ್ಟಕ್ಕೊದಗುವ ಜೀವ
ತಿಳಿಯುತ್ತಿದ್ದನವಳು ಪಡುವ ನೋವ
ಏನೇನೂ ಮಾಡಲು ಬರದವ
ಹೊತ್ತು ನೆತ್ತಿಗೇರಿದರೂ ಏಳದವ
ಇಂದೆಲ್ಲಾ ಕೆಲಸಕ್ಕೂ ಸಿದ್ದ ಸನ್ನದ್ದ
ಕರುಳ ಕುಡಿಯ ರಕ್ಷಣೆಗೆ ಬದ್ದ
ಬೇಯಿಸಿದ್ದ ರಮಿಸಿ ಉಣಿಸಬೇಕಿತ್ತು
ಕೂತೆಡೆಯೇ ಸರ್ವಸೇವೆಗೈಯ್ಯಬೇಕಿತ್ತು
ದರ್ಪಧಮಡಿ ಜೋರುಮಾತಿಗ್ಹೆದರಿ
ನಡುಗುತ್ತಿದ್ದೆ ಕೈಕಾಲುಗಳದುರಿ
ಈ ನಡುವೇನಾಯ್ತೋ ಎನ್ನರಸನಿಗೆ
ತುಂಬು ಆರೈಕೆ ಬಿಡನರಗಳಿಗೆ
ಮನೆಗೆಲಸಕೆಲ್ಲಾ ಸಹಾಯ ಹಸ್ತ
ಇರಬಹುದೇ ಗರ್ಭಧರಿಸಿದ ನಿಮ್ಮಿತ್ತ
ಅಡುಗೆಮಾಡಲೊಡನೆ ಇರುವ
ಬಟ್ಟೆ ತೊಳೆಯೇ ಜೊತೆಗೆ ಬರುವ
ಹೆಜ್ಜೆಯಿಟ್ಟರವ ಮೆಲ್ಲ ಎನ್ನುವ
ಅಬ್ಬಾ..! ಅದೆಷ್ಟು ಕಾಳಜಿ ತೋರುವ
ತನ್ನದೆನ್ನುವ ಜೀವ ಉದರದೊಳರಳೆ
ಹಮ್ಮೆಲ್ಲ ಹುಸಿಯಾಯ್ತು ಹೆಮ್ಮೆಯರಳೆ
ಕರುಳಕುಡಿ ಹೊತ್ತವಳನ್ಹೊತ್ತು ಮೆರೆಸಿ
ಜೀವ ತಾನಾಗಿಹ ಒಲವ ಸುರಿಸಿ
ಶೈಲೂ.....
ಕವಿಯ ಬೆರಗು ನೋಟವ ಕಂಡು
ಅವಳು
ನಾಚಿ ಇಳೆಯಾದಳು
ಚೆಲುವಿನ ಬಲೆಯಾದಳು
ತಂಪೀವ ಮಳೆಯಾದಳು
ಜೇನ ಹೊಳೆಯಾದಳು
🌹🌹ಜನ್ಮೋತ್ಸವದ ಶುಭಾಶಯ🌹🌹
ವರ್ಷದ ಕೂಸು
*************
ಕನ್ನಡದ ಕಂದ
ನಲ್ಮೆಯ ಬಾಲ ಮುಕುಂದ
ಎಲ್ಲರಚ್ಚುಮೆಚ್ಚಿನ ಕೂಸು
ನಡೆವ ಹಾದಿಯಲ್ಲೆಲ್ಲ ಹೂ ಹಾಸು
ಮನಸು ತುಂಬಾ ಸ್ವಚ್ಛ
ಹೆಸರಿದಕೆ ಕನ್ನಡ *ಕಥಾಗುಚ್ಛ..!!*
ಹಡೆದವರು ಹಲವು ದೇವಕೀಯರು..!!
ಪಾಲಿಸುವವರೆಲ್ಲ ಯಶೋಧೆಯರು..!!
ವಸುದೇವರುಗಳ
ಪಾತ್ರವನ್ತೂ ವರ್ಣನಾತೀತ
ನಂದಗೋಪರುಗಳ
ಸಂಖ್ಯೆ ಅಪರಿಮಿತ..!!
ಗೋಪಿಕೆಯರದೂ ದೊಡ್ಡ ಹಿಂಡು
ಈ ಕೃಷ್ಣನ ರಮಿಸುವಲ್ಲಿ
ಸದಾ ಮುಂದು
ಅದೆಷ್ಟು ಪ್ರೇಮ ಭಕ್ತಿ
ಹಾಸ್ಯ ಕವನ ಕಥಾಹಂದರ
ನಡುವಲ್ಲೇ ಬೆಳೆಯುತ್ತಿರುವ
*ಕಥಾಗುಚ್ಛ* ಸುಂದರ..!
ಹಾಲು ಮೊಸರು ಮಥಿಸಿ
ನವನೀತ ತೆಗೆದಂತೆ
ಹಲವು ಭಾವಗಳು ಮಿಳಿತ
ಸಂಕಲನ *ಪಯೋನಿಧಿ* ಯಂತೆ
ಉತ್ಕೃಷತೆಗೆ ಸಂದ ಗೌರವ *ಶಾರದಾತನಯ..!*
ಸಂತೋಷ ಸಂಭ್ರಮಕೇ ಕಾರಣ
*ಅನುಪಮಾ* ..!
ಹಲವು ಹೂ ಮನಗಳು
ಬೆಸೆದು ಹೊಸೆದ ಕೂಸು..!
ಅಂಬೆಗಾಲಿನಿಂದ ದಾಪುಗಾಲಿನ
ನಡಿಗೆಗಿಂದು ವರ್ಷವಾಯ್ತು
ಜನ್ಮ ಮಹೋತ್ಸವಕಿಂದು
ನಲ್ಮೆಯ ಹಾರೈಕೆ..!
ಹಲವು ಬಗೆಬಗೆಯ ಚಂದದ
ಈ ಹೂಗುಚ್ಛದೊಂದಿಗೆ
ಈ ನಾರೂ ಸ್ವರ್ಗ ಸೇರುವ ಬಯಕೆ.!
*ಶೈಲೂ.....*
ನನ್ನೊಳಗಿನ ನಾನು
****************
ನನ್ನೊಳಗೊಂದು ಅಭಿವ್ಯಕ್ತಿ
ಉದ್ಭವಿಸಿದೆ ನನ್ನದೇ ಭಿತ್ತಿ
ನೋವು ನಲಿವುಗಳಿಗೆ ಸಂಗಾತಿ
ನನ್ನೊಳಿಹ ಉತ್ತಮೊತ್ತಮ ಗೆಳತಿ
ದೃಢಹೆಜ್ಜೆಗೆ ಸಹಕಾರಿಯಾದವಳು
ತಪ್ಪೋಪ್ಪುಗಳ ತಿಳಿಹೇಳಿದವಳು
ಕಣ್ಣೀರೊರೆಸಿ ನೋವ ಮರೆಸಿದವಳು
ಸೋತು ಕಂಗೆಟ್ಟಾಗ ಮಾಡಿಲಾದವಳು
ಮುಂದಡಿಯಿಡಲು ಒತ್ತಾಸೆಯಾದವಳು
ಆತ್ಮವಿಶ್ವಾಸ ನೀಡಿ ನಲಿವಿತ್ತವಳು
ಗುರಿಯೆಡೆಗೆ ಗುರುವಿನಂತಾದವಳು
ಏಕಾಂಗಿತನಕೆ ಜೊತೆಯಾದವಳು
ಬದುಕಿಗೆ ಭರವಸೆಯಿತ್ತವಳು
ಸಾಧಿಸುವ ಚಲವಿತ್ತ ವಳು
ಕಾಲೆಳೆವವರ ಕಡೆಗಣಿಸೆ0ದವಳು
ನನಗಾಗಿ ಕಣ್ಣೀರಸುರಿಸುವವಳು
ನನ್ನೊಳಗಿನ ಈ ನಾನು ಅಹಂ ಅಲ್ಲ
ಎಲ್ಲದೋಳರಿವಿತ್ತ ಸುಮನಸೇ ಎಲ್ಲ
ಧೈರ್ಯ ಗುಂದದಂತೆ ನೀಡಿ ಶಕ್ತಿ
ನನ್ನತನವ ಎತ್ತಿ ಹಿಡಿವ ಅಭಿವ್ಯಕ್ತಿ..!!
ಶೈಲೂ...
.
ಸಪ್ತಪದಿ
*******
ಏಳು ಹೆಜ್ಜೆಗಳ ಈ ಬಂದ
ಜನ್ಮಜನ್ಮಗಳ ಅನುಬಂಧ
ಎರಡು ಮುಗ್ಧ ಮನಗಳ ಬೆಸೆಗೆ
ಪ್ರೀತಿ ಸಾಂಗತ್ಯ ಕೆ ಸೇತುವೆ
ಸನಾತನ ಸಂಸ್ಕೃತಿಯ ಪ್ರತೀಕ
ಸತ್ಸಂಪ್ರಧಾಯದ ದ್ಯೋತಕ
ವೇಧಘೋಷ ಮೇಳಗಳ ನಡುವೆ
ಸಂಬಂಧ ಅನುರಾಗದ ಒಸಗೆ
ಸಂಸಾರಸಾಗರದಲಿ ಈಸಲು
ಪರಸ್ಪರರಲಿ ಸಹಕಾರವಿರಿಸಲು
ಮುಂದಿಡಲು ಸಜ್ಜು ಬಾಳ ಹೆಜ್ಜೆ
ಮುನ್ನಡಿಯಿದು ಈ ಏಳು ಹೆಜ್ಜೆ
ಧರ್ಮೇಚ ಅರ್ಥೇಚ ಕಾಮೇಚ
ನೀನಿಲ್ಲದೇ ನಾತಿ ಚರಾಮಿ..!!
ನಂಬುಗೆಯಡಿಯಲಿ ಸಾಗುವ
ಈ ಜೀವ ನಿನಗೆ ಸಮರ್ಪಯಾಮಿ..!!
ಜೀವದೊಳೊಂದಾಗೆ ಅಗ್ನಿಸಾಕ್ಷಿ
ವಚನಬದ್ಧತೆಗೆ ಆ ದೈವಸಾಕ್ಷಿ
ಹದಿಬದೆಯ ಧರ್ಮಕಡಿಪಾಯ
ಸಪ್ತಪದಿ ಸುಖ ಜೀವನಕುಪಾಯ
ಜೀವನದ ಸರ್ವ ಸುಖ ದುಃಖ
ಜನನಮರಣಗಳೆರಡರಲೂ ಸಾಂಗತ್ಯ
ಉಸಿರಲುಸಿರಾಗಿ ಬಾಳಹಸಿರಾಗಿಸಿ
ಬೆಸೆವ ಬಂಧನ ಸಪ್ತಪದಿಯ ಸ್ವಾರಸ್ಯ
ಶೈಲೂ.....
ಮನದೊಳಗಿನ
ಮರಿದುಂಬಿ
ಸುಶ್ರಾವ್ಯವಾಗಿ
ಹಾಡಿದಾಗ
ಮೂಡಿಬಂದ
ಮಧುರಾನುಭವದ
ಮನದ
ಮಾತುಗಳು...
: ಹಸಿರು ಗಾಜಿನ ಬಳೆಗಳೇ
**********************
ನೋಡೇ ಅಮ್ಮ ಎಷ್ಟು ಚಂದವಿದೆ
ಘಲ್ ಘಲ್ ಬಳೆಗಳ ನಾದ
ನಿನ್ನಂತೆಯೇ ಇದೆ ಅಂದದ ಕೈಯಲಿ
ತುಂಬಿದ ಬಳೆಗಳ ಮೋದ
ಹೌದು ಪುಟಾಣಿ ಮಕ್ಕಳ ರಾಣಿ
ಬಳೆಗಳೇ ಹೆಣ್ಣಿಗೆ ಭೂಷಣ
ಚಂದದ ಕೈಯಲ್ಲಿ ಹಸಿರಿನ ಬಳೆಗಳು
ಸೌಭಾಗ್ಯದ ಸಿರಿಗೆ ಕಾರಣ
ಗಾಜಿನ ಬಳೆಯಿದು ಒಡೆದರೆ ತೊಂದರೆ
ಬಹು ಜಾಣ್ಮೆಯಲಿ ಸಂಭಾಳಿಸು
ಸ್ತ್ರೀತ್ವದ ಸೌಭಾಗ್ಯದ ಸಂಕೇತವಿದು
ತೊಟ್ಟು ಸದಾ ಹಸಿರಂತೆ ಕಂಗೊಳಿಸು
ಚಿನ್ನ ವಜ್ರಕಿಂತ ಅತಿಬೆಲೆಯುಳ್ಳದ್ದು
ಹಸಿರು ಬಳೆಗಳಿಗುಂಟೆ ಸರಿಸಮ
ಐದು ಮುತ್ತುಗಳಲಿ ಸರ್ವಶ್ರೇಷ್ಠವಿದು
ಸದಾ ಧರಿಸುವುದೇ ಸತೀಧರ್ಮ
ಅಂದದ ಕೈಯಲಿ ಬಳೆಗಳು ತುಂಬಿರಲಿ
ಸಕಲ ಸೌಭಾಗ್ಯ ನಿನದಾಗಲಿ ಮಗು
ಹಸಿರು ತುಂಬಿರುವ ಭೂಮಾತೆ ನಲಿದಂತೆ
ಮೊಗದಲ್ಲಿ ತುಂಬಿರಲಿ ಸದಾ ನಗು
ಶೈಲೂ
ಕಥಾಗುಚ್ಛವೆಂಬ
ಹೂಗುಚ್ಛ ದಲಿ ಅರಳಿದ
ಸುಮಗಳು ನಾವೆಲ್ಲಾ
ಪ್ರೀತಿ ಸಿಂಚನವ
ಸಿಂಪರಿಸಿ ಆರೈಕೆಮಾಡುವ
ನಿರ್ವಾಹಕರಿರುವಾಗ
ಬಾಡುವ ಭಯವೂ ನಮಗಿಲ್ಲ
ನಳನಳಿಸಿ ಅಕ್ಷರ ಸೌಗಂಧವ
ಪಸರಿಸೆಲ್ಲೆಡೆ ಸಾಹಿತ್ಯ ದೇವಿಯ
ಪಡದಡಿ ನಲಿಯೋಣ
ಬನ್ನಿರೆಲ್ಲ...
ಜ್ಞಾನ ರಥದಲ್ಲಿ ವಿರಾಜಿಸುತ್ತಿರುವ
ಸಾಹಿತ್ಯದೇವಿಯ
ಕರಸೇವಕರು ನಾವು
ಸುಮನದ ಸಮಾನ ಮನಸ್ಕ
ಸ್ನೇಹಿತರೊಡನೆ
ತಾಯ ಸೇವೆಗೈಯಲು
ಕಂಕಣಬದ್ದರು ನಾವು
ನಿಮ್ಮೊಡನಾಟದ
ರಸಗಳಿಗೆಗೆ ಕಟಿಬದ್ದರು ನಾವು
🙏🙏
ದ್ರೌಪದಿ ಸ್ವಯಂವರ
******************
ಪಾಂಚಾಲಾಧಿಪತಿ ದ್ರುಪದ ಮಾಹಾರಾಜ
ನಡೆಸಿದ ವೈಖಾನವೆಂಬ ಯಜ್ಞದಿಂದ
ಆವಿರ್ಭವಿಸಿದ ತ್ರಿಭುವನ ಚೆಲುವೆ..!!
ಹೆಸರಿಹುದು ದ್ರೌಪದಿ, ಕೃಷ್ಣೆ, ಪಾಂಚಾಲಿ..!!
ವೃದ್ಧಿಚಂದ್ರನಂತೆ ದಿನಂಪ್ರತಿ ಬೆಳಗುತ್ತಿರುವ
ತ್ರೈಲೋಕ್ಯ ಸುಂದರಿ ಕುವರಿಗೆ
ಅನುರೂಪ ವರನ ಆರಿಸುವ ನಿಮಿತ್ತ
ಸ್ವಯಂವರಕ್ಕೆ ಸಜ್ಜಾಗಿತ್ತು ಪಾಂಚಾಲದೇಶ..!
ಜಗದೇಕವೀರ ಧನಂಜಯ ತನ್ನಳಿಯನಾಗಳೆಂದು
ಅವ ಮಾತ್ರ ಬೇಧಿಸುವ
ಮತ್ಸ್ಯಯಂತ್ರವ ಪಣವಾಗಿರಿಸಿ
ಗರಗರನೇ ತಿರುಗುವ ಮತ್ಸ್ಯವನಿರಿಸಿ
ಬೇಧಿಸುವವನೇ ವಿಜೇತನವಗೆ ಮಗಳ ಕೊಡುವೆನೆಂದು ಸಾರಿದರು..!
ದೇಶವಿದೇಶದಿಂದಾಗಮಿಸಿದ ರಾಜಕುಮಾರರು
ಕೃಷ್ಣೆಯ ಚೆಲುವಿಗೆ ಬೆರಗಾಗಿ ನಿಂತರು.!
ಧನುವನು ಹೆದೆಯೇರಿಸಿ ಪಂಚಬಾಣಗಳ ಹೂಡಿ
ತಿರುಗುವ ಮತ್ಸ್ಯಯಂತ್ರವ ಭೇಧಿಸುವಲ್ಲಿ ಸೋತರು.!!
ಚೇದಿರಾಜ್ಯದ ಶಿಶುಪಾಲ ಮಗಧದ ಜರಾಸಂಧ
ಘಟಾನುಘಟಿ ರಾಜರೆಲ್ಲ ಸೋತು ತಲೆತಗ್ಗಿಸಿದರು.!
ಅಂಗರಾಜ ಕರ್ಣ ಹೆದೆಯೇರಿಸಲು ನಡೆಯೇ
ಸೂತಪುತ್ರನ ವರಿಸಲು ನಾನೊಲ್ಲೆನೆಂದಳು ಕೃಷ್ಣೆ..!
ಕ್ಷತ್ರಿಯರೆಲ್ಲ ಕಡೆಗಾಣಿಸಿ ಬಸವಳಿದು ಸೋತಾಗ
ಸಭೆಯಲ್ಲಿದ್ದ ಬ್ರಾಹ್ಮಣ ವರರಾದರೂ
ಯತ್ನಿಸಬಹುದೆಂಬ ಅಣತಿಯ ಮೇರೆಗೆ
ಕೌರವರ ಉಪಟಳಕೆ ಬೇಸತ್ತು ಬ್ರಾಹ್ಮಣ ವೇಷದಿ
ತಲೆಮರೆಸಿ ಅಡಗಿದ್ದ ಗಾಂಢೀವಿ ಎದ್ದು ಅಣಿಯಾದನು
ಆವನಿವ ಬ್ರಾಹ್ಮಣ.. ರಾಜಾದಿರಾಜರೇ ಸೋತು ಶರಣಾದಾಗ
ಇವನೇನ ಮಾಡಬಲ್ಲನೆಂದು ನಗುತ್ತಿದ್ದರು ಸಭಿಕರು.!
ದ್ರುಪದನಾಹ್ವಾನ ಮನ್ನಿಸಿ ಯುಧಿಷ್ಠಿರನ ಸಮ್ಮತಿಯ ಮೇರೆಗೆ
ಮನದಲ್ಲೇ ಚಿರಬಂದು ಶ್ರೀಕೃಷ್ಣ ನಿಗೊಂದಿಸಿ
ಸ್ವಯಂವರ ಮಂಟಪದೆಡೆ ಬಂದು..ಧನುವನು
ಲೀಲಾಜಾಲದಿ ಹೆದೆಯೇರಿಸಿದನು..!
ತೈಲಬಾಂಡದಲಿ ನೋಡುತ ಮೇಲಿದ್ದ ಮತ್ಸ್ಯದೆಡೆಗೆ ಲಕ್ಷ್ಯವನಿರಿಸಿ
ಹೂಡಿ ಬಾಣಗಳ ಮತ್ಸ್ಯಯಂತ್ರವ ಬೇಧಿಸಿದ ಪಾರ್ಥನು.!
ಎಲ್ಲೆಲ್ಲೂ ಜಯಘೋಷ ಮಂಗಳವಾದ್ಯ ಮೊಳಗಲು
ಲಜ್ಜೆಯಾಭರಣ ತೊಟ್ಟ ಚೆಲುವಿನರಸಿ ಪಾಂಚಾಲಿ
ವಿಜಯಮಾಲೆಯನು ತೊಡಿಸಿದಳು..!
ಅಪಮಾನಿತರಾದ ನೃಪರೆಲ್ಲ ದ್ವೇಷಾಸೂಯೆಯಲಿ
ಪಾಂಚಾಲನ ಮೇಲೆ ದಂಡೆತ್ತಿ ಬರಲು..!
ವೇಷ ಮರೆಸಿದ್ದ ಭೀಮಾರ್ಜುನರರಪರಿಮಿತ
ಕಾಳಗದ ದೆಸೆಯಿಂದ ದ್ರುಪದ ಜಯಗಳಿಸಿದನು..!
ಸ್ವಯಂವರದಲ್ಲಿ ವರಿಸಿದ್ದ ಪಾಂಚಾಲಿಯೊಡನೆ
ತಮ್ಮ ಕುಠೀರಕೈತಂದು
ಅಮ್ಮಾ... ಹೆಣ್ಣು ತಂದೆವೆಂದಿದ್ದನ್ನು ಹಣ್ಣೆಂದು ಭ್ರಮಿಸಿದ ಕುಂತಿ
ಸರ್ವರೂ ಸಮಪಾಲಾಗಿ ಹಂಚಿಕೊಳ್ಳಿರೆನಲು..!
ಅಮ್ಮಾ.. ಇದು ಹಣ್ಣಲ್ಲ.. ಹೆಣ್ಣು..
ದ್ರುಪದ ಕುವರಿ ದ್ರೌಪದಿಯ ಸ್ವಯಂವರ ದಲಿ ಗೆದ್ದು
ವರಿಸಿ ಬಂದಿದ್ದೇವೆನಲು.. ತಾನುಡಿದ ತಪ್ಪಿಗಾಗಿ ಮರುಗಿದಳು..!
ತಾಯ ನುಡಿ ಅನೃತವಾಗಬಾರದೆಂದೆಣಿಸಿ
ವ್ಯಾಸಮಹರ್ಷಿಗಳಾಣತಿಯಂತೆ
ಪಾಂಡವರೈವರೂ ಕೃಷ್ಣೆಯ ಪತಿಗಳಾದರು..!!
ಹಿಂದಿನ ಜನ್ಮದಲ್ಲಾಕೆ ಶಿವನನ್ನು ಒಲಿಸಿ ನಮಿಸಿ
ಸರ್ವಗುಣಸಂಪನ್ನ ಜಗದೇಕವೀರ ನಾದ
ಪತಿಂದೇಹಿ..ಪತಿಂದೇಹಿ ಎಂದೈದು ಬಾರಿ ಕೇಳಲಾಗಿ..!
ಒಬ್ಬನಲೇ ಸರ್ವಗುಣಸಂಪನ್ನತೆ
ಸಿಗದೆಂಬ ಕಾರಣಕೆ
ಐದು ಪತಿಗಳ ಸತಿಯಾಗೆಂದು ವರ ಕರುಣಿಸಿದ್ದ ನಿಮಿತ್ತ
ಇಂದಾಕೆ ಪಂಚ ಪಾಂಡವರ ಸತಿಯಾದಳು..!
ಶೈಲೂ....
ನನ್ನವನು...
***********
ಎಲ್ಲರಂತಲ್ಲ ನನ್ನವನು
ಕರುಣಾರಸ ಭರಪೂರಹರಿವ
ಕನಸು ಕಂಗಳ ಚೆಲುವ ಸೊಗಸುಗಾರ...
ಮುಗ್ಧಮುಖ ತುಂಬಿಹುದು
ಬೆಳದಿಂಗಳ ಚಂದ್ರಕಳೆ
ಮನಸೆಳೆವ ಮಾಂತ್ರಿಕ ಮೋಡಿಗಾರ...
ನೀಲ ಮೇಘದ ವರ್ಣ
ಮನವಿಹುದು ಹಳದಿಯ ಚಿನ್ನ
ಸಮ್ಮೋಹಕ ನುಡಿಗಳ ಮಾತುಗಾರ...
ತುಸು ಮುನಿಸು,ಪ್ರೀತಿ ಕಡಲು
ಸುಗಂಧಬೀರುವ ಹೂಮನಸು
ತುಂಟತನದ ಭಂಟ ಮೋಜುಗಾರ...
ದಿಟ್ಟ ನಡೆ ಮಾರ್ಮಿಕ ನುಡಿ
ದುಷ್ಟರ ತರಿದು ಶಿಷ್ಟರ ಪೊರೆವ
ಜಗದೊದ್ಧಾರಕ ಕೃಷ್ಣ ಪೊರೆವನೆಲ್ಲರ...
ಹಾಸ್ಯ ಭರಿತ ತುಂಟತನ
ಕದ್ದನವ ಎಲ್ಲರ ಮನ
ಹಸುಮಗುವಿನ ಮನದ ಜೊತೆಗಾರ...
ಸ್ನೇಹ ತೋರಿದರೆ ಭಂಟ
ಪ್ರೀತಿ ಮಾಡಿದರೆ ನೆಂಟ
ಶರಣಾಗತರ ಪೊರೆವ ಕರುಣಾಕರ...
ಹೆಚ್ಚೇನು ಹೇಳಲಿ..?
ವರ್ಣನೆಗೆ ನಿಲುಕನವ
ದಾಟಿಸುವನವ ಭಾವಸಾಗರ...
ಹೃದಯವೈಶಾಲ್ಯತೆಯ ಕಡಲು
ಅಪ್ಪಿದರೆ ತಾಯ್ಮಡಿಲು
ಸರ್ವಸ್ವ ಅವನೆನ್ನ ಮುರಳೀಧರ...
ಶೈಲೂ....
ಸುಗ್ಗಿಕಾಲ
*********
ಬಂದಿದೆ ನೋಡು ಸುಗ್ಗಿಕಾಲ
ವರ್ಷದ ದುಡಿಮೆಯ ಪ್ರತಿಫಲ
ಉತ್ತು,ಬಿತ್ತು, ಕಳೆ, ಸುಗ್ಗಿ ಕೊಯ್ಲು
ಇಂದು ಈ ಕಣದಲಿ ಬಟಾ ಬಯಲು
ಮನೆಮಂದಿಗೆಲ್ಲ ಕೈತುಂಬ ಕೆಲಸ
ವರ್ಷಂಪ್ರತಿ ದಿನ ಪ್ರತಿದಿವಸ
ದುಡಿದು ದಣಿದು ಭೂತಾಯಿ ಸೇವೆಮಾಡಿ
ಉದರನಿಮಿತ್ತ ಬೆಳೆದದ್ದು ಕಾಳುಕಡಿ
ಮಳೆ ಚಳಿ ಬಿಸಿಲೆನ್ನದ ಕಾಯಕ
ತುತ್ತು ಕೂಳಿಗೂ ಒಮ್ಮೊಮ್ಮೆ ಕಂಟಕ
ದುಡಿತದ ಪ್ರತಿಫಲಕೆ ಕಾಯಬೇಕು ವರ್ಷ
ರಾಶಿಯಲಿ ಧಾನ್ಯವ ಕಂಡಾಗ ಹರುಷ
ಸುಗ್ಗಿಯೆಂದರೇನೋ ಹಿಗ್ಗು ಮನಕೆ
ತೆನೆಯಲಿ ಪೋಣಿಸಿದ್ದ ಕಾಳ ಹೆಕ್ಕುವ ಬಯಕೆ
ಕೊಯ್ದ ಪೈರು ಕಲ್ಲುಗುಂಡಲಿ ತುಳಿಸಿ
ಬೇರ್ಪಡಿಸಿದ್ದ ಕಾಳ ರಾಶಿಯನ್ನಾಗಿಸಿ
ಹೊಟ್ಟು ಬೇರ್ಪಡಿಸಿ ಗಟ್ಟಿಕಾಳನ್ನಾರಿಸಿ
ತೂರಿ ಕೇರಿ ಜೊಳ್ಳುಗಳ ಪ್ರತ್ಯೇಕಿಸಿ
ರಾಶಿಯಾಗಿಸಿ ಹಣ್ಣುಕಾಯಿತ್ತು ಪೂಜಿಸಿ
ಮೊರತುಂಬಿದ ಕಾಳು ಬಡವನಿಗರ್ಪಿಸಿ
ವಂದಿಸಿ ಬೆಳೆಯಿತ್ತ ಭೂತಾಯಿಗೆ
ಸಹಕರಿಸಿ ಜೊತೆಯಾದ ದನ ಕರುವಿಗೆ
ಬೆಳೆದ ರೈತನಿಗೆ ನಂತರವೇ ತುತ್ತು
ಇದುವೇ ತಾನೇ ಸತ್ಸಂಸ್ಕಾರದ ಗತ್ತು
ಶೈಲೂ.......
ಮೌನವೇಕೆ ರಾಧೇ
****************
ಮೌನಕ್ಕೆ ಶರಣಾದೆ ಏಕೆ ಗೆಳತಿ ರಾಧೇ.?
ಮನದಲೇಲಿನಿತು ಚಿಂತೆ ಆವರಿಸಿದೆ
ನಿನ್ನೀ ಮೌನಕೆ ಬೃಂದಾವನವೇ ಸ್ಥಬ್ಧ
ನೋಡೀ ಪರಿಸರ ತಾಳಿತೆಂತು ನಿಶ್ಯಬ್ದ..!!
ನಿನ್ನ ನಲಿವಿಲ್ಲದೇ ಸೃಷ್ಟಿ ಚೈತನ್ಯಕೆಲ್ಲಿ ನಲಿವು
ಪುಷ್ಪಗಂಧಗಳಲೂ ಇನಿತಿಲ್ಲ ಚೆಲುವು
ನೋಡಲ್ಲಿ ಮಂದಾಲಿನವೂ ಮೌನವಾಗಿಹ
ಉರಿವ ಸೂರ್ಯನೂ ಅದೇಕೋ ಬಳಲಿಹ.!!
ನೀ ಬೃಂದಾವನದ ಚೆಲುವಿನ ಖನಿ
ಮರೆಯಾಯ್ತೆಕೇ ನಿನ್ನುಲಿತದ ಇನಿದನಿ?
ಮಾಧವನ ಕಾಣದೇ ಬೇಸರವೇ?
ಅವನ ಅನುಪಸ್ಥಿತಿ ಮೌನಕೆ ಕಾರಣವೇ..!!
ಎನಿಹುದೇಳು ಮನದ ನೋವು?
ಶ್ಯಾಮನಿಲ್ಲದಿದ್ದುದಕೇನು ಕೊರಗು?
ಇರಬಹುದವನಿಗೆನೇನೋ ಕೆಲಸ
ಬಿಟ್ಟಿಲ್ಲೇ ಹೋಗಿರುವನಲ್ಲ ಮನಸ..!!
ಅವನ ನೆನಪಿಹುದಷ್ಟು ರಾಶಿ ರಾಶಿ
ಮನವಿರಿಸಿ ಅವನನೆನಪಲ್ಲೆ ಕಾಣೋಣ ಖುಷಿ
ನೋವು ನಲಿವುಗಳನ್ನೆಲ್ಲಾ ಅವನಿಗರ್ಪಿಸಿ
ಸೆಟೆದೇಳು ಗೆಳತಿ ಮೌನ ಮರ್ಧಿಸಿ..!!
ನೆನಪಿಗಿಹುದಲ್ಲ ಅವನ ಕೊಳಲು
ಕೊಳಲಲ್ಲವಿದು ಅವನದೇ ನೆರಳು
ಸಾವಿರಜನ್ಮಕ್ಕಾಗುವಷ್ಟಿದೆ ಅವನೊಡನಾಟದ ಸುಖ
ಮೌನವ ತೊರೆದೇಳು ಬಾ ಗೆಳತಿ ಧರಿಸುತ ಹಸನ್ಮುಖ..!!
ಶೈಲೂ......
ನಯನ
******
ಮನದ ಕನ್ನಡಿಯಿದು ನಯನ
ಅಂದದ ಮೊಗಕೆ ಮುನ್ನುಡಿ ನಯನ
ಮುಖಾರವಿಂದದಲಿ ಚಂದದ ಭಿತ್ತಿ
ಮನದ ಭಾವನೆ ಅರುಹುವ ಅಭಿವ್ಯಕ್ತಿ..!
ಹಾಲಿನ ಬಟ್ಟಲೊಳು ಕಪ್ಪು ದ್ರಾಕ್ಷಿ ಇಟ್ಟಂತೆ
ಹರಿವ ನೀರಿನೊಳು ಮೀನು ಹೊರಳಿದಂತೆ
ಮುಖದ ಕಮಲದಲ್ಲಿ ಜೋಡಿ ಕಮಲವಂತೆ
ಅಬ್ಬಾ..!! ಏನೇನು ಉಪಮೆ ನಯನಕೆ
ಸಂತಸದಿ ಅರಳರಲಿ ನಗುವುದು
ದುಃಖವಾದೊಡೆ ತಾನೇ ಅಳುವುದು
ಆಶ್ಚರ್ಯ ಸಂಭ್ರಮಕೇ ಬೆರಗು ನೋಟ
ಆಹಾ... ನಯನದಲೇನಿನಿತು ಬಗೆ ಬಗೆ ಮಾಟ
ಮನದ ಮಾತುಗಳ ಅರುಹುವುದು ನೋಟ
ಅದೇನು ಕರುಣೆ ಪ್ರೀತಿ ಒಡನಾಟ
ಜಗವನನುಭವಿಸಿ ಕಾಣಲು ಬೇಕು ದೃಷ್ಠಿ
ಆಹಾ.. ಅದೇನು ಸೊಬಗು ಆ ದೇವನ ಸೃಷ್ಟಿ
ಒಂದೊಂದು ಭಾವಕೊಂದೊಂದು ನೋಟ
ಭಯ ರೌದ್ರ ಭೀಕರ ಕರುಣಾ ಶೃಂಗಾರ
ಕೋಪತಾಪಕೂ ಹುಸಿ ಮುನಿಸ ನೋಟ
ಒಳಮರ್ಮವರಿವುದಕೆ ನೇರ ನೋಟ
ಶಾಂತಿಯನರಸಲು ನಯನ ಬುದ್ಧ ಪ್ರಬುದ್ಧ
ಅಂತಃಚಕ್ಷು ತೆರೆದರೆ ಸತ್ಯದರ್ಶನ ಸಂವೃದ್ಧ
ಮನದ ಬಿಂಬದ ಪ್ರತಿಬಿಂಬವೀ ಕಣ್ಣು
ಹೃದಯಭಾಷೆಯನರಿವ ನಯನವೇ ಹೊನ್ನು
ಸೃಷ್ಟಿ ಸೌಂದರ್ಯ ಸವಿಯೆ ದೇವನಿತ್ತ ವರದಾನ
ದೇಹಸೌಂದರ್ಯಕೂ ಕಾರಣವೀ ನಯನ
ದೃಷ್ಠಿಹೀನರ ಕಂಡು ಕರಗಿ ಮರುಗುವುದು ಮನ
ತಮ್ಮೊಂದಿಗೆ ಮಣ್ಣಾಗಲು ಬಿಡದೆ ಮಾಡಿ ನೇತ್ರದಾನ
ಶೈಲೂ......
ನಾವಿಬ್ಬರೊಂದೇ..!!
*****************
ನಾವಿಬ್ಬರೊಂದೇ ಯಾಕೀ ಮೊರೆತ
ಬೇರಾದರೂ ಬೇರಲ್ಲವಿದು ಆನೃತ
ಪ್ರುರುಷ - ಪ್ರಕೃತಿ ಒಂದಾದ ವೇಷ
ತಿಳಿ ನಾವರ್ಧನಾರೀ ಪುರುಷ
ನಾ ನಿನ್ನ ಕೈಯೊಳ ಕೊಳಲು
ನೀನಾಗಿ ಹೊಮ್ಮಿ ಅದರ ದನಿ
ಬೆಸೆದು ನವ ರಾಗ ಹೊಸೆಯೇ
ಹೊರಹೊಮ್ಮದೇ ಇನಿದನಿ.?
ನಾನವನಿ ನೀನಾದೆ ಅಂಬರ
ಭೋರ್ಗರೆದು ಪ್ರೇಮ ಧಾರಾಕಾರ
ಎನಿಂಥ ಚುಂಬಕ ಸೆಳೆತವೀ ಅಮಲು.!
ತಡೆಹಿಡಿಯಿತೇ ಕಯ್ಯಲ್ಲಿನ ಕೊಳಲು ?
ತುಸು ಲಜ್ಜೆ ಬೆರೆಸಲಾರೆ ಕಣ್ಣು
ಇಂಥ ಸನಿಹ ಎದುರಿಸಲ್ಹೇಗೆ ನಾ ಹೆಣ್ಣು.!
ನೀಲದೊಳಗೇ ಗೌರ ಮಿಳಿತು
ನೀಲವಾಯ್ತು ಜಗ ಅವನೊಡನೆ ಕಲೆತು
ಹೇಗಿದ್ದರೂ ನಾವಿಬ್ಬರೊಂದು
ಬಿಡಿಸಲಾಗದ್ದು ಅನಂತವೀ ಸಖ್ಯ
ನಿನ್ನೊಳಗೆ ನಾನಾಗಿ ನನ್ನೊಳು ನೀನು
ದೂರಾಗದೆ ಬೆರೆಯುವುದು ಮುಖ್ಯ
ಶೈಲೂ.....
ದಾರಿ ಕಾಯುತ ನಿಂತೆ
*******************
ದಾರಿಕಾಯುತಿರುವೆ ನಲ್ಲ
ಇನ್ನೂ ನೀ ಏಕೆ ಬರಲಿಲ್ಲ
ಕನಸುಗಳ ಬೆನ್ನತ್ತಿ ನಿಂತೆ
ನೆನಪುಗಳ ಭಾರಕೆ ಸೋತೆ
ಮನದೊಳು ಅಳತೆ ಮೀರಿದ
ಭಾವಗಳ ಆಂದೋಳನ
ಮನತುಂಬಿ ಓಡಿ ಬರುವ
ನೆನಪುಗಳ ಸಮ್ಮಿಲನ
ಅನುರಾಗದ ಹೊಳೆಯಲ್ಲಿ
ಕೊಚ್ಚಿಹೋದ ಆ ಘಳಿಗೆ
ಬಿಡದೆ ಕಾಡುವ ಕನಸುಕಂಗಳ
ತುಂಬಾ ಭಾವಬಿಂಬದ ಮಳಿಗೆ
ಬಿಡದೆ ಭೋರ್ಗರೆವ ನಿನ್ನ
ಭಾವದಲೆಯಲಿ ಕೊಚ್ಚಿಹೋಗಿ
ಹಂಬಲಿಕೆ ಬಲವಾಯ್ತು
ಬರಲಿಲ್ಲೇಕಿನ್ನುನನ್ನ ಹೆಸರು ಕೂಗಿ
ಸಾವಿರ ಕನಸಿಗೆ ರಂಗು ಬಳಿದು
ಕಾದಿರುವೆ ನಿನಗಾಗಿ ಅಂಗಳದಲಿ
ಮಳೆಯಾಗಿ ಹನಿಸಿ ಕಾರ್ಮೋಡ ಕರಗಿ
ಕಾಣಲು ತವಕಿಸುತ್ತಿರುವೆ ಗೋಡೆಗೊರಗಿ
ಶೈಲೂ.....
ಮುಗಿಯದ ಕಥೆ
**************
ನೋವುಗಳ ಹಿಂದಿಕ್ಕಿ
ನೋವು ನುಸುಳುವುದಲ್ಲ
ನಗುವೆಂವುದು ಮರೀಚಿಕೆ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ನಾಳೆಗಳಂದದ ಬದುಕಿಗೆ
ಇಂದು ಅಡಿಗಲ್ಲನಿಡಲು
ಕಾಲೆಳೆದು ಹೀಗಳೆವರೆಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಕಂಡ ಕನಸುಗಳನ್ನೆಲ್ಲ
ನನಸಾಗಿಸುವ ಬಯಕೆ
ಚುಚ್ಚಿ ಮನ ಹಿಂಡುವರಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಆಸೆಬಳ್ಳಿಗೆ ನೀರನುಣಿಸಿ
ಹೆಮ್ಮರವಾಗಿಸುವ ಬಯಕೆ
ಚಿಗುರಲ್ಲೇ ಚಿವುಟುವರು ಮಂದಿ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಚಂದದ ಸಾವಿರ ಕುಸುರಿ
ಚಿತ್ತಾರದೆಳೆಯಲ್ಲೂ
ಕಪ್ಪೊಂದು ಹುಡುಕುವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ರಾಜಾಸನದಿ ಕೂರಿಸಿ
ಸರ್ವಸೇವೆಗೈದರೂ
ತಪ್ಪೊಂದು ಹುಡುಕುವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಅಸನ ವಸನವಿತ್ತು
ತುತ್ತಿತ್ತು ತಣಿಸಿದರೂ
ದ್ರೋಹ ಬಗೆವವರೇ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಕಷ್ಟದಲಿ ಜೊತೆಯಿದ್ದು
ಸಹಕಾರವಿತ್ತರೂ ಕೊನೆಗೆ
ಬೆನ್ನ ಇರಿಯುವ ಮಂದಿ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಸಹಜ ಸ್ನೇಹವನಿತ್ತು
ಅಪ್ಪಿ ಅಧರಿಸಿದರೂ
ತಪ್ಪೇಣಿಸುವವರೆ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಬೆಳಕೀವ ದೀಪದ ಬೆಳಕಿದ್ದರೂ
ಅಡಿಯ ಕತ್ತಲೆಯನೆತ್ತೆತ್ತಿ
ಅಡಿಕೊಳ್ಳುವ ಮಂದಿಯಿವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಜ್ಯೋತಿಯೊಲು ತಾನುರಿದು
ಮನೆಗೆ ಬೆಳಕಾದರೂ ಸಹಿತ
ಹೆಣ್ಣೆಂದು ಜರಿವವರೆ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಹೆತ್ತವರ ಮರೆತು ಕೈಹಿಡಿದವರ
ಅನುಸರಿಸಿ ತೃಪ್ತಿಯಿಂದಿದ್ದರೂ
ತೆಪ್ಪಗಿರರೀಮಂದಿ ಕುಹಕ ನುಡಿವವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಸಹಜತೆಯ ಮರೆತೇಕೆ
ಅಸಹಜತೆಯ ದಾರಿಯಲಿ
ಕುಹಕವಾಡುವರಿವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!
ಮುಗಿಯದೀ ಕಥೆಯ
ಎಂದು ಮುಗಿಸುವೆದೇವ
ಸಹನೆ ತಪ್ಪುವುದರೊಳಗೆ
ಮನ್ನಿಸಿ ಮುಗಿಸಿಬಿಡು ಬಾಳ ವ್ಯಥೆ...
ಶೈಲೂ......
ನಾನಾಗಬೇಕಿತ್ತು
***************
ಮೋಡದ ಮರೆಯಿಂದಿಣುಕಿ
ಹಾಲುಚೆಲ್ಲುದಂತೆ ಸುತ್ತಮುತ್ತ
ನಗುವ ಬೆಳದಿಂಗಳ ಕಂಡು
ಉಕ್ಕುಕ್ಕಿ ಹರಿವ ಕಡಲು ನಾನಾಗಬೇಕಿತ್ತು.!
ಇರುಳು ಬಾನಿನ ಲಾಂದ್ರ
ಹೊಳೆದೆಳೆವ ಸಮಯದಲಿ
ತಿಳಿಗೊಳದಿ ಬಿಮ್ಮನರಳಿ
ನಗುವ ನೈದಿಲೆ ಹೂವು ನಾನಾಗಬೇಕಿತ್ತು.!
ಕಾರ್ಮೋಡ ತಾ ಕರಗಿ
ಹನಿಹನಿಯಾಗಿ ಧರೆಗಿಳಿದು
ಭುವಿಯೊಡಲ ತಣಿಸುವ
ತುಂತುರು ಸೋನೆ ಮಳೆ ನಾನಾಗಬೇಕಿತ್ತು.!
ಗುಡುಗು ಸಿಡಿಲಾರ್ಭಟಡಿ
ಧೋ ಎಂದು ಮಳೆ ಸುರಿದಾಗ
ಬೆಚ್ಚಿ ಬೆದರದೆ ತಾನು
ಅಪ್ಪಿ ಅಲಂಗಿಸುವ ಇಳೆ ನಾನಾಗಬೇಕಿತ್ತು.!
ಮಳೆ ಬಿಸಿಲಿನಾಟಕೆ
ಪ್ರತಿಫಲಿಸಿ ಪ್ರತಿದ್ವನಿಸಿ
ವರ್ಣ ಮೇಳಗಳ ಸಂತೆಯಲಿ
ಮನಸೆಳೆವ ಇಂದ್ರಧನುಶ್ ನಾನಾಗಬೇಕಿತ್ತು.!
ಪಚ್ಚೆಗಿಡಗಳಲರಳಿ ಮೆಲ್ಲ
ಸೌಗಂಧದಲೇ ಬಂಧಿಸೆಲ್ಲ
ಕ್ಷಣಿಕ ಬದುಕಿದ್ದರೂ ಸಾಕು
ಅಚ್ಚ ಬಿಳಿಯ ಮಲ್ಲಿಗೆ ನಾನಾಗಬೇಕಿತ್ತು.!
ದೇವ ಆಸೆಯಿಹುದೇನೋ ಬಹಳ
ನಾ ನೀನಿಟ್ಟಂತೆ ಇರುವ ಮರುಳ
ಆದರೂ ಕೊನೆಗೊಂದಾಸೆ
ನಿನ್ನೊಡಲಲ್ಲಿ ನಲಿವ ಕೈಗೂಸು ನಾನಾಗಬೇಕಿತ್ತು.!
ಶೈಲೂ.
.
ಕವಲುದಾರಿ
***********
ಇದು ಮುಗಿಯದ ಬಾಳ ಪಯಣ
ನಿತ್ಯ ನಿರಂತರ ಸಾಗುವುದೇ ಜೀವನ
ಸಾಗುತ್ತ ಸಾಗುತ್ತ ಸವೆಸಿ ಅರ್ಧದಾರಿ
ಧುತ್ತನೆದುರು ನಿಂತಿತೇಕೆ ಈ ಕವಲುದಾರಿ?
ಎತ್ತಕಡೆಗಿನ್ನು ಪಯಣ ತಿಳಿಯದಾಯ್ತೆ
ಇತ್ತಲೋ ಅತ್ತಲೋ ಎತ್ತಲೋ ಎದುರಾಯ್ತು ಚಿಂತೆ
ಎತ್ತ ನಡೆದರೆ ಇಹುದು ಪಯಣ ಸುಗಮ
ತಪ್ಹೆಜ್ಜೆ ಇಟ್ಟರದು ಕವಲುದಾರಿಯ ಭ್ರಮಾ
ಪ್ರಮುಖ.ಘಟ್ಟವಿದು ಬಾಳ ಪಯಣಕೆ
ನಿರ್ಧರಿಸಲಾಗದು ಏಕೋ ಹೆದರಿಕೆ
ನಿರ್ಣಯದಲಿಹುದು ಬದುಕ ಸಿಹಿ ಕಹಿ
ತಪ್ಪುದಾರಿಯ ನಡಿಗೆ ಭರಿಸಲಾಗದ ಕಹಿ
ತೋಚದಾಗಿದೆ... ಈಗ ಎತ್ತ ನಡೆಯಲಿ?
ಭರವಸೆಯ ಜ್ಯೋತಿ ಬೇಕಿದೆ ದೃಢ ನಿಲುವಿನಲಿ
ಕರಹಿಡಿದೆನ್ನ ಮುನ್ನೆಡೆಸು ಹೇ ಮಾಧವಾ
ಸರಿದಾರಿಯಲೆನ್ನ ನಡೆಸು ಹೇ ಯಾದವಾ..
ಶೈಲೂ.....
ಪರಿಸರ ಸಂರಕ್ಷಣೆ
***************
ಜೀವ ಸಂಕುಲದ ಉಳಿವಿಗಿರಬೇಕು ಕಾಡು
ಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡು
ಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತ
ಅವಿವೇಕದ ನಡತೆಗೆ ಪರಿಸರವೇ ದೂಷಿತ
ಪರಿಶುದ್ಧ ಗಾಳಿಗೂ ಬಂತು ಸಂಚಕಾರ
ಗಿಡಮರವ ಕಡಿದು ತಂಪಿಲ್ಲದೆ ಆಹಾಕಾರ
ಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನ
ಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನ
ಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನ
ಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನ
ಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡು
ಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡು
ಹಸಿರಿನ ಸ್ವಚ್ಛ ಪರಿಸರ ಜಗದ ಜೀವನಾಡಿ
ಗಿಡನೆಡಿ ಮುಂದೊಮ್ಮೆ ಅದುವೆನಮ್ಮ ಒಡನಾಡಿ
ಮನುಜನ ಕೈಯಲ್ಲಿದೆ ಅಳಿವುಉಳಿವಿನ ಪ್ರಶ್ನೆ
ಮರೆಯದೇ ಮಾಡಿ ಪರಿಸರ ಸಂರಕ್ಷಣೆ
ಶೈಲೂ.....
ಮಾತಿನ ಮೇಲೆ ನಿಗಾ ಇರಲಿ##
ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..
ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..
ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..
ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು..
ತರ್ಕದಲಿ ಮಾತು ಅತಿ ತೂಕವಿದ್ದರೆ ಸೊಗಸು..
ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..
ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ..
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ..
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು..
ಹಿಡಿತವಿರೆ ಮಾತಿನಲಿ ಅದೇ ಸೌಜನ್ಯದ ಹೆಗ್ಗುರುತು..
ಶೈಲೂ.....
,
ಹಾರೈಕೆ... ಅರಿಕೆ***************ಕೋರುವೇ ಶುಭಹಾರೈಕೆಹೊಸಬಾಳಿಗಡಿಯಿಟ್ಟ ದಿನಕೆನಲಿವು ಗೆಲುವಲಿ ಜೊತೆಯಾದನವ ಬಾಂಧವ್ಯ ಬೆಸೆದ ಕ್ಷಣಕೆಒಲಿದ ಮನವೆರಡು ಕಲೆತುಸಂಸಾರ ನೊಗವ ಹೊತ್ತುಬಾಳ ಹಾದಿಯ ಪಯಣಜೊತೆಗೂಡಿ ನಡೆದ ದಿನಕೆಸರಸವಿರಸಗಳನು ಗೆದ್ದುನವಿರಾದ ಪ್ರೀತಿಯ ಹೊದ್ದುಬಾಳ ನೌಕೆಯ ಪಯಣನಲಿದು ಸಾಗುವ.ದಿನಕೆಶೈಲೂವಿನ ಬಯಕೆಯಿದುನಲ್ಮೆಯ ಹಾರೈಕೆಯಿದುದುಃಖ ದುಮ್ಮಾನಗಳ ಮರೆತುತುಂಬಿ ಬರಲಿ ಹೊಸತುಸಂಭ್ರಮದ ದಿನವಿಂದುದುಪ್ಪಟ್ಟಾಗಲಿ ಹರುಷಸವಿಯಬೇಕು ಪ್ರೀತಿ ಜೇನುಅನಂತವಾಗಲಿ ರಸನಿಮಿಷಶೈಲೂ.....ಪ್ರೇಮ ಸಂಭಾಷಣೆ****************ಎನಿತು ಚಂದವೇ ಸಖಿಮುಗ್ಧಸ್ನಿಗ್ದ ಸೌಂದರ್ಯನಕ್ಕರೂ ಕಾಣದಂತಮುಗುಳುನಗೆಯ ಮಾಧುರ್ಯಹೊಗಳಿದ್ದು ಸಾಕು ಕೃಷ್ಣನೀನೇ ಸೌಂದರ್ಯದ ಗಣಿನಿನ್ನ ಕಣ್ಣ ಕಾಂತಿಯಲ್ಲೇಅಡಗಿಹನು ದಿನಮಣಿಇಲ್ಲ ರಾದೇ ನೀನೇ ಚಂದಕದಪುಗಳಲಿ ಇಹ ಚಂದಿರಅರ್ಧ ತೆರೆದ ನಯನದಲೇಇಹುದು ತಾರಾ ಮಂದಿರಬಾಯಲ್ಲೇ ಅಡಗಿಸಿರುವೆಚತುರ್ದಶ ಭುವನಲೋಕಅರಿಯಲಿ ಹೇಗೇಳು ನಿನ್ನಕೃಷ್ಣ ನಾನಾದೆ ಮೂಕಬಿಡು ಬಿಡು ಅದೆಲ್ಲ ಸಖಿಅರಿಯಲಾಗದ ನಿಗೂಢನಿನ್ನ ಸೌಂದರ್ಯ ಸೆಳೆತಕೆವಶವಾಗಿ ನಾ ಧಿಗ್ಮೂಢತುಂಟತನದ ನೋಟದಲ್ಲೇಸೆಳೆದು ಬಿಟ್ಟೆ ಮನಸ್ಸಸನ್ನಹೇಳಲೇನಿದೆ ಮಾಧವಾನೀನೇ ನನ್ನ ಮನದನ್ನಶೈಲೂ......ಪ್ರೇಮ.ಸಂಭಾಷಣೆ*****************ನುಡಿಸುವುದು ಹೇಗೆಕೃಷ್ಣ ನಿನ್ನ ಕೊಳಲುನುಡಿಸಿ ಮರೆಯಬೇಕಿದೆನನ್ನ ಮನದ ಅಳಲುಹಿಡಿಯಲ್ಹೇಗೆ ಕೈಯಲಿಯಾವುದು ತುದಿ ಮೊದಲುತುಟಿಯಲಿಟ್ಟು ಉಸಿರು ತುಂಬಿಹೇಳಿಕೊಡು ನುಡಿಸಲುಶ್.!! ಸುಮ್ಮನಿರು ರಾಧೇಇಲ್ಲ ಸಮಯ ನುಡಿಯಲುಸ್ವರ್ಗ ಸುಖವ ನೀಡುತಿದೆಪ್ರೇಮ ತುಂಬಿದ ಮಡಿಲುತುಂಬಿ ನನ್ನ ಕಣ್ಣಲೇ ನಿನ್ನಮರೆವೆ ಜಗದ ಪರಿವೆಯಸ್ಫೂರ್ತಿ ನೀನೇ ಮುನ್ನಡೆಸಲುಶಕ್ತಿ ನೀನೇ ಅರಿತೆಯಾಸಾಕು ಬಡಿವಾರ ಬಿಡುಬರಿದೇ ಮಾತಿನ ಮಲ್ಲನುಡಿಸಲ್ಹೇಗೆ ಹೇಳಿಕೊಡುಊದಬೇಕು ಬಿದಿರುಕೊಳಲನನ್ನೆದೆಯ ಮಾತುಗಳಹಾಡಾಗಿಸಿ ನುಡಿಸಿತುಂಬ ಬೇಕು ಪ್ರೇಮಭಕ್ತಿನಿನ್ನೊಲುಮೆಯಲಿ ಕರಗಿನುಡಿಸಲಾರೆ ಬಿಡು ಸಖಿಹೊಮ್ಮುವ ರಾಗ ನೀನೇಕರದಲಿ ನವಿರಾಗಿ ಹಿಡಿದಬಿದಿರು ಕೊಳಲು ನಾನೇನಿನ್ನ ಕೈಯ ಹಿಡಿತದಲಿಮೆರೆವ ಕೊಳಲು ನಾನುಮಾಂತ್ರಿಕ ಸ್ಪರ್ಶದಲೇಮಿಡಿವ ನಾದ ನೀನುನಾನು ನೀನು, ನೀನು ನಾನುಸೇರಿದರೇ ನವರಾಗ ತಾನೇವೇಣು ನಾನು ನಾದ ನೀನುನುಡಿಸಿದರೇ ಸ್ವರ್ಗ ತಾನೇಶೈಲೂ......[ಬರೆಯಲೇ ಗೆಳೆಯನಿನಗಾಗಿ ಕವಿತೆತುಂಬಿ ಅದರಲ್ಲಿಸಿರಿಸ್ನೇಹ ಮಮತೆಬರದಿರಲಿ ಎಂದೂಸ್ನೇಹಕ್ಕೆ ಕೊರತೆಸಂಭ್ರಮದ ಬದುಕಲಿಬೆಳಗಲಿ ಘನತೆನನ್ನ ಆತ್ಮ ಸಂಗಾತಿ - ಪುಸ್ತಕ**************************ಪುಸ್ತಕಗಳ ಸಂಬಂಧಮಸ್ತಕಕೆ ಅನುಬಂಧಜ್ಞಾನ ದಾಹವ ತಣಿಸೋಅಮೃತ ಕಲಶವೇ ಪುಸ್ತಕಬಾಳಿಗೆ ಒಡನಾಡಿಯಿದುನೋವು.ದುಃಖವ ಮರೆಸಿನಿತ್ಯ ರಸದೌತಣವೀವಆತ್ಮ ಸಂಗಾತಿ ಪುಸ್ತಕಅರಿವಿನ ಹರಿವು ನಿತ್ಯಮೌಢ್ಯ ಹರಿಸುತ ಸತ್ಯಜ್ಞಾನ.ಸೆಲೆಯ ಮೂಲಅಜ್ಞಾನದ ತೆರೆ ನಿರ್ಮೂಲನೋವು ನಲಿವಿಗೆ ಗೆಳೆಯತುಂಬುತ ಸದಾಶಯತಿಳಿಸುತ್ತ ಅಕ್ಕರದ ತಿಳುಹುಹೊತ್ತಿಗೆಯ ಮಹತ್ವದರಿವುಇರಲೆಲ್ಲರಿಗೂ ಪುಸ್ತಕ ಜ್ಞಾನತೊಡೆಯುತ್ತ ಮೌಢ್ಯ ಅಜ್ಞಾನಮೂಡಲಿ ಸಾಹಿತ್ಯ ಜಿಜ್ಞಾಸೆಅದುವೇ ಜ್ಞಾನದ ಪರಿಭಾಷೆಶೈಲೂ....[ಎಲ್ಲವೂ ನೀನೇ*************ನನ್ನೊಲವ ಮಂದಿರದಿನೆಲೆಸಿಹ ಮೂರುತಿ ನೀನೇಕಿರುನಗೆಯ ಜ್ಯೋತಿಯನುಬೆಳಗುವವನೂ ನೀನೇನನ್ನೊಲವ ಬದುಕಿನಲಿಬೆಳಕಂತೆ ತಾ ಬಂದುಕಹಿಯ ಕತ್ತಲ ದೂಡಿಬಾಳು ಬೆಳಗುವವ ನೀನೇನನ್ನೊಲವ ಹೂ ಬನದಿಬಿರಿದು ಮಲ್ಲಿಗೆಯಂತೆಸೊಗವಿತ್ತು ಹೂ ಬನಕೆಗಂಧ ಪಸರಿಸಿದವ ನೀನೇನನ್ನೊಲವ ಆಗಸದಿಸರಿಸಿ ದುಃಖದ ಮೋಡಶುಭ್ರಾಗಸದಿ ನಗುತಪ್ರಭೆ ಬೀರೋ ಸೂರ್ಯನೂ ನೀನೇಅಡಗಿ ಮೋಡದ ಹಿಂದೆಇಣುಕಿಣುಕಿ ನೋಡುತಲಿಒಲವ ಅಮೃತದ ಧಾರೆಸುರಿವ ಚಂದ್ರಮನೂ ನೀನೇಬಿರಿದ ಮಲ್ಲಿಗೆಯಂತಮನದ ಕುಸುಮದ ಜೇನುಮೊಗೆಮೊಗೆದು ಹೀರುವನನ್ನೊಲವ ಭ್ರಮರವು ನೀನೇಒಲವ ಸುಂದರ ಬದುಕುತೂಗೋ ಉಯ್ಯಾಲೆಯ ತೆರದಿಹಾಗೊಮ್ಮೆ ಹೀಗೊಮ್ಮೆ ಅಳಿಸಿ ನಲಿಸಿಜೀಕುವವನೂ ನೀನೇನಾ ಏನ ಹೇಳಲಿ ಕೃಷ್ಣನನ್ನದಿನಿತೂ ಇಲ್ಲ,, ಜಗವಮಾಯೆಯೋಳಾಡಿಸೋಸರ್ವೋತ್ತಮನೂ ನೀನೇಶೈಲೂ....ಹೇಳಲಿ ಹೇಗೆ.?*************ಹೇಳಲಿದೆ ಬೇಕಾದಷ್ಟುಹೇಳಲಾರದ ಬಿಕ್ಕಟ್ಟುಹೇಳಲೆಂತು ಮನದ ಮಾತುಹೇಳೆ ನೋವಾದರೆಂತು?ಹೇಳುವಾಸೆ ಎಲ್ಲ ನಿನಗೆಹೇಳಿದರೆ ಹೇಗೋ ನಿನ್ನ ಬಗೆಹೇಳದೇನೋ ತಳಮಳಹೇಳಲೆಂತರಿಯಲಿ ನಿನ್ನೊಡಲಹೇಳೆಂದರೂ ನಾ ಹೇಳಲೇನು?ಹೇಳದಿರೆ ತಪನ ಬಲ್ಲೆಯೇನು.?ಹೇಳದೆಯೂ ನೀನರಿಯಬೇಕುಹೇಳಿ ಕೇಳೇಕೆ ತಿಳಿಯಬೇಕು?ಹೇಳಿ ಬಂದೆಯೇನು ಒಳಗೆಹೇಳದೇ ಹೋದ್ದದ್ದೇಕೆ ಹೊರಗೆಹೇಳಲಿಲ್ಲವೇನೂ ವಿಷಯ?ಹೇಳೆ ಸಂತಸ ನೀ ಬಲ್ಲೆಯಾಹೇಳಲೇನು ಮನದ ಮಾತಹೇಳಲ್ಹೇಗೆ ಕಾರಣವಿಲ್ಲದೆ ಖಚಿತಹೇಳಬೇಕೆಂದರೂ ಬರಲೊಲ್ಲದುಹೇಳಿದ್ಯಾತರ ಗೊಂದಲ ಮನದ್ದುಶೈಲೂ.....ಹೊಲೆದಾಟ ಸುಲಭದ್ದಲ್ಲಸರಿಸುತ್ತಿರಬೇಕು ವಸ್ತ್ರವ ಮೆಲ್ಲಮೈಮರೆತರೆ ಕೈಯೊಳಗೆ ಸೂಜಿಚಾಕಚಕ್ಯತೆಯಿರೆ ಉತ್ತಮ ದರ್ಜಿವಸ್ತ್ರದ ಮೇಲೆ ವಿವಿಧ ವಿನ್ಯಾಸಬಣ್ಣದ ಬಳಪದಿಂದ ಚಿತ್ರೀತ ನ್ಯಾಸಚಕಚಕನೆ ಚಲಿಸಿ ಕತ್ತರಿಬಲು ಚಂದ ಕತ್ತರಿಸುವ ಪರಿಮಾರುದ್ಧದ ಬಟ್ಟೆ ನೂರಾರು ಪೀಸುಒಂದಕೊಂದ ಜೋಡಿಸ್ಹೊಲೆಯೇ ಜೋಶುನಾಜೂಕಿನಲಿ ಮಾಡಿ ಕುಸರಿಸುಂದರ ವಸ್ತ್ರದನುಬಂಧದ ಪರಿಹೊಲೆಯಬೇಕಿದೆ ಹೊಲಿಗೆಬಂಧ ಕಳಚಿದ ಬದುಕ ಬಿರುಕಿನ ನಡುವೆಹಾಕಿ ಎಲ್ಲ ತೂತುಗಳಿಗೆ ತೇಪೆಬಾಂಧವ್ಯದ ಬೆಸುಗೆಯಿದ್ದರೆ ಹೊಳಪೇ..!ಆಗಬೇಕಿದೆ ಸೃಜಿಸುವ ಯಂತ್ರಬಿತ್ತಿ ಎಲ್ಲರೊಳಗೆ ಶಾಂತಿ ಮಂತ್ರಬಿರುಕು ಕಾಣದಂತೆ ಹೊಲೆದುಹೊಂದಾಣಿಸೆ ಚತುರತೆ ಮೆರೆದು: ದಿಗಂತ*******ಹೇ ದಿಗಂತ... ನೀನನಂತವರ್ಣಿಸಲಿ ನಿನ್ನಂಏನಂತ?ಮಿತಿಯುಂಟೇನು ಪರಿಧಿಗೆಸಕಲ ಬ್ರಹ್ಮಾಂಡ ನಿನ್ನೊಳಗೆಅಷ್ಟದಿಕ್ಕಿಗೂ ವ್ಯಾಪಿಸುತಅದರಾಚೆ ಪರಿಧಿ ಪಸರಿಸುತವಿಸ್ತರಿಸುತ್ತಾ ದಿಗ್ದಿಗಂತವ್ಯೋಮಾಕಾಶ ನಿನದೇ ಪೂರ್ತಜಗದಗಲ ಮುಗಿಲಗಲ ವ್ಯಾಪ್ತಿಅಂಬರ ಆಕಾಶ ದಿಗಂತ ದೀಪ್ತಿಮಿತಿಯೆಲ್ಲಿದೆ ಅನಂತ ದಿಗಂತಕೆಹಿಗ್ಗಿ ಹಿರಿದಾಗಿ ಬೆಳೆದ ಅನಂತಕೆಎತ್ತರೆತ್ತರಕೆ ಮುಗಿಲನೂ ದಾಟಿಬೆಳೆಯಲಿದೆ ದಿಗಂತವನೂ ಮೀಟಿಬೆಳೆವಮನಕೆಲ್ಲಿಯ ಇತಿಮಿತಿಬೆಳೆಯಲಿದೆ ಜೀವನ ಪೂರ್ತಿಶೈಲೂ....[ ಎಂದೂ ಬರೆದಿರದ ಸಾಲುಗಳು**************************ಬಾಳ ಹೊತ್ತಿಗೆಯಲಿಖಾಲಿ ಖಾಲಿ ಪುಟಗಳುಬರಿದಾದ ಮನದಂಗಳದಿಬರೆದಿರದ ಸಾಲುಗಳುಬರೆಯಬೇಕೆಂದರೂ ಬಾರದುಒಳಮನದ ನೋವುಗಳುಅಕ್ಷರದಲ್ಲಡಗಿಸಲಸಾಧ್ಯಬರಿದಾದ ಪದಪುಂಜಗಳುಕನಸಲ್ಲಿ ಕಾಡಿದ್ದ ನವಿರು ನೆನಪುಹಗಲಲ್ಲಿ ಕಂಡಿದ್ದ ಸವಿಗನಸುತುಸು ಕೋಪತಾಪ ಹುಸಿಮುನಿಸುಎಂದೂ ಬರೆದಿರದ ಸಾಲಾಯ್ತುಕಂಗಳಿಂದಿಳಿದಿದ್ದ ಕಂಬನಿ ಲೆಕ್ಕನವಿರಾದ ಪ್ರೇಮದ ಪುಳಕಬರೆಯಲಾರದ ಕವನದ ಶೈಲಿಬರಿದೇ ಖಾಲಿ ಖಾಲಿ ಖಾಲಿಶೈಲೂ.....[ಅದೇನಿಂತು ನಾಚಿಕೆ ಗೆಳತಿನೀ.ಸೌಂದರ್ಯದ ಒಡತಿಮುಚ್ಚಿದ್ದೇಕೆ ಅರೆಬರೆ ಕಣ್ಣುನೀನೊಂದುಸವಿಯಾದ ಹಣ್ಣುಆಹಾ ಕೆಂಪಿನ ಚಂದದ ತುಟಿಅಡಗಿದ್ದೇಕಲ್ಲಿ ದಾಳಿಂಬೆ ಕಾಳುಸೇಬನ್ನೂ ನಾಚಿಸುವ ಕದಪುಹೆಣ್ಣೇ ಏಕಿಂತು ವೈಯ್ಯಾರ ಒನಪುಕಾಮನ ಬಿಲ್ಲಂತೆ ತೀಡಿದ ಹುಬ್ಬುಚಂದ್ರಕಾಂತಿಯೂ ನಿನ್ನೆದುರು ಮಬ್ಬುಅರೆಬಿರಿದ ತುಟಿಯ ಮಾಸದ ನಗುಮರೆಯಲಾರೆ ಗೆಳತಿ ಸದಾನಿನ್ನದೆ ಗುಂಗುಮೇಘಮಾಲೆಯೇನು ನಿನ್ನ ಹೆರಳುತೂಗಾಡುವ ಚೂಪು ಮುಂಗುರುಳುಆಹಾ ಅದೇನಂತ ನಾಚಿಕದದ್ಭುತನಸು ನಾಚಿಕೆಯಲೇ ಇತ್ತೆಯೇನು ಸಮ್ಮತಮಲ್ಲೆ ಮುಡಿದ ಮನಸೆಳೆದ ನಲ್ಲೆನೀನಾರ ಕುಂಚದ ಕಲೆಯ ಬಲೆಮನಸೆಳೆಯಲೇ ಕಡೆದನೇನು ಚತುರಸೆರೆಯಾದೆ ನಾ ನಿನ್ನೊಲವೇ ಮಧುರಶೈಲೂ.....[ದ್ರೋಣ*******ಅಂಬಾರಿ ಹೊರುವ ದ್ರೋಣಪಾಪ ತೊರೆದುಬಿಟ್ಟ ಪ್ರಾಣಭಾರೀ ಆಕಾರ ಧೀರ ಗಂಭೀರಭುವನೇಶ್ವರಿಗೆ ಸೇವೆಯಿತ್ತಿದ್ದ ಅಪಾರದಸರಾ ದಿಬ್ಬಣದ ಮುಖ್ಯಸ್ಥಚಂದಾಲಂಕಾರ ಸಾಲಂಕೃತಶಿಸ್ತಿನ ಸಿಪಾಯಿ ಮೆರವಣಿಗೆನಿನ್ನಿಂದಲೇ ಮೆರುಗು ಅಂಬಾರಿಗೆಅದೆಷ್ಟು ಹೊತ್ತು ಮೆರೆದಿದ್ದೆ ಭಾರಸಾವಿರಾರು ಕಿಲೋ ಬೆಳ್ಳಿ ಬಂಗಾರಭಾರದಬ್ಬರಕೆ ಹೇಳು ಆಯಾಸವಾಯ್ತೆಮಾಗಿ ಬಾಗಿದ ಜೀವಕೆ ವಯಸ್ಸಾಯ್ತೆನಾಗರಹೊಳೆ ಅರಣ್ಯದ ದೊರೆಇಳಿಸಿದೆ ಭೂಮಿ ಋಣದ ಹೊರೆಗಜರಾಜ ನಿನಗಿದೋ ಅಶ್ರುತರ್ಪಣದಸರ ಸಂಭ್ರಮವಿನ್ನು ಭಣ ಭಣಶೈಲೂ.....ಮನದ ಮಾತು*************ಮನವು ಹೇಳುತಿದೆಮನದೊಳಗಿನ ಮಾತುಮನವಿರಿಸಿ ಕೇಳಿದರೆಮನವರಿಕೆಯಾದೀತುಮನದ ಮಾತಿದು ಕೇಳುಮನವನಾವರಿಸಿರುವೆ ನೀನುಮನ ಮತ್ತೆ.ಹೇಳುತಿದೆಮನದೊಡೆಯ ನೀನುಮನದ ಭಿತ್ತಿಯೊಳಗೆಮನಸಿಟ್ಟು ನೆಟ್ಟ ಚಿತ್ರಮನಮುಟ್ಟುವಂತಿದೆಮನದನ್ನ ನೀ ಕೇಳುಮನವೇಕಿಲ್ಲ ನಿನಗೆ.?ಮನದ ಮಾತು ಕೇಳಲುಮನಸು ಮಾಡೆನ್ನ ಚೆನ್ನಮನವನರಿತು ನೋಡುಮನದೊಳಗೆ ಮುಳುಗಿಹುದುಮನಸ್ಸೆಂಬ ಸ್ವಾತಿಮುತ್ತುಮನವಿತ್ತು ಚಿತ್ತೈಸುಮನಸದು ನಿನ್ನದೇ ಸ್ವತ್ತುಶೈಲೂ......ಕಾರ್ಮಿಕ ದಿನಾಚರಣೆ*******************ಬಂಡವಾಳಶಾಹಿಗಳ ಹಿಡಿತದಲಿದುಡಿವ ವರ್ಗವಿದು ನಿತ್ಯ ನರಳುತಲಿಶೋಷಣೆಗೆ ಒಳಪಟ್ಟ ಶ್ರಮಿಕವರ್ಗಸಿಡಿದು ನಿಂತಾಗ ಆಯ್ತು ಕಾರ್ಮಿಕ ಪರ್ವಅನಿರ್ದಿಷ್ಟ ಅವಧಿಯ ದುಡಿತದ ಶ್ರಮಶ್ರೀಮಂತರಿಗಾಗಿಯೇ ದುಡಿವ ಕರ್ಮನಿರಂತರ ಶೋಷಣೆಯ ವಿರುದ್ಧ ಹೋರಾಟಫಲನೀಡಿತ್ತು 8 ಗಂಟೆಗಳ ದುಡಿತದ ಹಠಸರ್ಕಾರದ ಸ್ವಾಮ್ಯದಡಿಯ ಸಂಘಟಿತರುಖಾಸಗಿಉದ್ದಿಮೆಗಳಲಿ ದುಡಿವ ಅಸಂಘಟಿತರುನಿರ್ಧಿಷ್ಟ ಕೂಲಿಯದು ಗಗನ ಕುಸುಮದಿನಗೂಲಿ ಲೆಕ್ಕದಲೂ ದುಡಿಮೆ ಅಸಮಶೋಷಣೆಯಲೇ ಬದುಕುತ್ತಿರುವ ಕಾರ್ಮಿಕ ಸಂತಅವರ ದುಡಿಮೆಯಲ್ಲಿ ದುಪ್ಪಟ್ಟಾದ ಶ್ರೀಮಂತದುಡಿವವರು ದುಡಿದು ದುಡಿದೂ ಸೋಲುಶ್ರಮವಿತ್ತರೂ ಕೊನೆಗೆ ಹಸನಾಗಲಿಲ್ಲ ಬಾಳುಇರಬೇಕು ಕಾರ್ಮಿಕರಲಿ ಐಕ್ಯತೆಯ ಮಂತ್ರಶ್ರಮಿಕರಿಗೆ ನೆರವಾಯ್ತು ಒಕ್ಕೂಟ ಸೂತ್ರಬಂಡವಾಳಶಾಹಿ ವಿರುದ್ಧ ಕೂಗು ಹೋರಾಟಕಾರ್ಮಿಕ ದಿನಾಚರಣೆ ಎಂಬ ಆವಿಷ್ಕಾರದುಡಿದು ದುಡಿದೂ ಬಸವಳಿದ ಕಾರ್ಮಿಕಇಂದೊಂದು ದಿನವಾದರೂ ವಿಶ್ರಾಂತಿ ಕಾಯಕಅಮರವಾಗಲಿ ನಿಮ್ಮ ದುಡಿತದ ಫಲದ ಗದ್ದುಗೆಜಯವಾಗಲೀ ಕಾರ್ಮಿಕ ದಿನಾಚರಣೆಯ ಹಾದಿಗೆಶೈಲೂ.....[: ಕಿಟಕಿಬಳಿ ನಿಂತವಳನ್ನುಮುದ್ದಿಸಿದನೇನು ಭಾನು.?ಸುಳಿದು ಕಿಂಡಿ ಕಿಂಡಿಯಲಿಬರಸೆಳೆದು ಅಪ್ಪಿದನೇನು.?ಆಗಿರಬೇಕು ಪ್ರಣಯದಾಸೆದಂತದ ಗೊಂಬೆಯ ಕಂಡುಇಣುಕಿಣುಕಿ ನೋಡುತಿರುವಚಂದದ ಪರಿಯ ಕಂಡುಬೆಚ್ಚಿದ್ದಳಂದು ಸಂಜ್ನ್ಯಾಪ್ರಖರ ಶಾಖವ ಕಂಡುಬೇಸರವಾಗಿರಬೇಕು ಪಾಪಬರಿದೇ ಛಾಯೆಯನುಂಡುಎಳೆ ಬಿಸಿಲ ಶಾಖಕೆ ಮೈಯೊಡ್ಡಿನಿಂತ ವೈಯ್ಯಾರಿಯ ಸ್ಪರ್ಶಕೆಭಾಸ್ಕರ ನೇ ಬಿಸಿ ಬಿಸಿಯಾಗಿಬೆವರಾಗಿ ಸುರಿದು ಸರಿದ ನೇಪಥ್ಯಕೆಶೈಲೂ...[03/05 9:32 am] drbnshylaramesh: ಮಾತಿನ ಮಲ್ಲನ ಮೌನ ಮೆರವಣಿಗೆಬಾಳ ಪುಟರ ಕೊನೆ ಹಾಳೆಯ ವರೆಗೆನಾಟಕ ಪರದೆಯ ಅಂಕವು ಜಾರಿಜೀವನ್ನಾಟಕ ಮುಗಿಸಿದ ಸೂತ್ರಧಾರಿಕರುನಾಡ ಕಣ್ಮಣಿ ನರಸಿಂಹಮೂರ್ತಿರಂಗಭೂಮಿಯಲ್ಲಿ ಗಳಿಸಿದ ಕೀರ್ತಿಬೆಳ್ಳಿತೆರೆಗೂ ಹಬ್ಬಿತು ಅದಮ್ಯ." ವಾಣಿ "ಕಂಚಿನ ಕಂಠದ ನಿರರ್ಗಳ ವಾಣಿನಟರತ್ನಾಕರನ ನಟನೆ ಅಪಾರಹೆಸರು ಗಳಿಸಿದ್ದು ಲಂಚಾವತಾರರಾಜಕೀಯದ ಹೊಲಸ ಬಿಚ್ಚಿದ ಧೀರಯಾರಿಗೂ ಹೆದರದ ಕೆಚ್ಚೆದೆಗಾರಸಾಮಾಜಿಕ ಕಾಳಜಿಯ ಕಳಕಳಿಭ್ರಷ್ಟತೆಯ ಅನಾವರಣ ಮಾಡಿದ ಪುತ್ಥಳಿಮೊನಚು ಮಾತಲ್ಲೇ ಜನಜಾಗೃತಿಯ ಅನಾವರಣಸಹಿಸದನೇಕ ಮಂದಿಯ ಹಗೆ ವಿನಾಕಾರಣಹಿರಣ್ಣಯ್ಯ ಮಿತ್ರಮಂಡಲಿಯ ರೂವಾರಿನಟ ರತ್ನಾಕರ ಬಿರುದಾಂಕಿತ ಪಾತ್ರಧಾರಿಹಾಸ್ಯ ವಿಡಂಬನೆಯಲೇ ಚಾಟಿ ಏಟಿತ್ತ ನಾಜೂಕಯ್ಯನಟನೆಯ ದೈತ್ಯ ಪ್ರತಿಭೆ ನೀ ಮಹಾರಾಯಹೊರಟು ಬಿಟ್ಟಿರೇಕೆ ಭೂಮಿಯನು ತೊರೆದುರಂಗಭೂಮಿಯಲಿ ಸಾರ್ವಭೌಮಿಕೆ ಮೆರೆದುಇನ್ನಾರಿಹರು ನಿಮ್ಮಂಥ ಧೀಮಂತ ವ್ಯಕ್ತಿಭ್ರಷ್ಟತೆಯ ಎಳೆಎಳೆಯಾಗಿ ಬಿಚ್ಚಿಡುವ ಅಭಿವ್ಯಕ್ತಿಶೈಲೂ.....[03/05 11:25 am] drbnshylaramesh: ಪದಪಿದ್ಯೋತ್ಸವ##★★ ರಂಗೋಲಿ ★★******************ಅಂಗಳಕೆ ಶೋಭೆ ಅಂದದ ರಂಗೋಲಿಶುಭವ ಸೂಸುವ ಚಿತ್ತಾರ ಬಾಗಿಲ ಬಳಿಯಲ್ಲಿಬಿಳಿಪುಡಿಯ ಎಳೆ ಎಳೆಯು ಹೊಸ್ತಿಲ ಮೇಲೆನಡುವೆ ಕೆಂಪಿನ ಗೆರೆಯು ರಂಗೋಲಿ ಮಡಿಲಲ್ಲೇಸಂಪ್ರದಾಯದ ಸಿರಿಯು ಮನೆಗೆ ಭೂಷಣಗೃಹಿಣಿಯರ ಕೌಶಲ್ಯದನಾವರಣವೃ0ದಾವನಡೆದುರು ಶಂಕುಚಕ್ರಗಧಾಪದ್ಮದೇವನಿರುವೆಡೆಯಲ್ಲಿ ಶುಭಕರ ಗೋಪದ್ಮಶ್ರೀರಂಗ ನಿಗೆ ಅತಿಪ್ರಿಯ ರಂಗೋಲಿಬಣ್ಣದ ನವಾವರಣ ತುಂಬಿ ಅದರಲ್ಲಿಒಂದೊಂದು ದೈವಕೊಂದೊಂದು ತೆರನಾಗಿವಾಂಛಿತ ಫಲವೀವ ದೈವಿಕ ರಂಗವಲ್ಲಿಎಳೆಎಳೆಯ ಸರಳ ಗೆರೆಗಳುಂಟುಚಿಕ್ಕುಗಳ ಚಿತ್ತಾರವಿಹುದು ಬ್ರಹ್ಮಗಂಟುವಿವಿಧ ವಿನ್ಯಾಸ ಆಕಾರ ಸಾಕಾರಕೌಶಲತೆಯ ಕೈಚಳಕದ ಕಲಾಹಂದರನಮ್ಮ ಸಂಸ್ಕೃತಿಯ ಪ್ರತೀಕ ರಂಗೋಲಿಭಕ್ತಿ ಭಾವ ಕೌಶಲ ಮಿಳಿತ ಅದರಲ್ಲಿರಾರಾಜಿಸುತಿರೇ ಮನೆಯ ಮುಂದೆಶುಭಸಮಾರಂಭ ಇಹುದು ಎಂದೇಜೀವನವೂ ಇಹುದು ರಂಗೋಲಿಯಂತೆಬಿಡಿಸದಿದ್ದರೆ ಮನೆಮನ ಸೂತಕಛಾಯೆಯಂತೆತಪ್ಪಿದ ಚುಕ್ಕಿಗಳಲ್ಲಿ ವಿನ್ಯಾಸ ಅಪೂರ್ಣಹದವರಿತು ಬಿಡಿಸಿದರೆ ಬಾಳು ಸಂಪೂರ್ಣಶೈಲೂ.....[03/05 8:29 pm] drbnshylaramesh: ನಾ ಹಾರುವ ಹಕ್ಕಿಯಾಗಿದ್ದರೆ.?************************ಬಾನಲ್ಲಿ ಹಾರಾಡುವಹಕ್ಕಿ ನಾನಾಗಿದ್ದರೆಆಹಾ ಅದೆಷ್ಟು ಚಂದವಿರುತಿತ್ತುಬೀಗಿಸುತ್ತಾ ಕೊಕ್ಕುಹಾರಿಸುತ್ತಾ ರೆಕ್ಕೆಭೂಮಂಡಲವನ್ನೆಲ್ಲ ಸುತ್ತಬಹುದಿತ್ತುಹಾಗೇ ತೇಲುತ್ತ ತೇಲುತ್ತಗಗನಡೆದೆಗೆ ಹಾರುತ್ತಬೆಳ್ಮುಗಿಲಮೇಲೆ ಕೂರಬಹುದತ್ತುಕಟ್ಟಿದ್ದ ಕಾರ್ಮುಗಿಲಕೊಕ್ಕಿನಿಂದ ಕುಕ್ಕುತ್ತಾಧರೆಯೆಡೆಗೆ ಮಳೆಯ ಸುರಿಸಬಹುದಿತ್ತುಖಗವಾಗಿ ಗೆಲುವಾಗಿದೇವಲೋಕದೆಡೆಹೋಗಿಮಾಧವನನ್ನೊಮ್ಮೆ ನೋಡಬಹುದಿತ್ತುಮೃದುವಾಗಿ ತಲೆಬಾಗಿಭಕ್ತಿಯಿಂದ ಬೇಡಿಹೆಗಲಮೇಲವನ ಮೆರೆಸಬಹುದಿತ್ತುಕಪ್ಪಾದರೇನಂತೆಕೋಗಿಲೆ ನಾನಾಗಿಇಂಪಾಗಿ ಹಾಡನ್ನ ಹಾಡಬಹುದಿತ್ತುಹಸಿರುಡುಗೆಯನ್ನುಟ್ಟುಕೆಂಪು ಕೊಕ್ಕಲಿ ಕುಕ್ಕಿರುಚಿಯಾದ ಹಣ್ಣನ್ನು ಸವಿಯಬಹುದಿತ್ತುಬಣ್ಣಬಣ್ಣದ ಗರಿಯಹೊತ್ತ ನವಿಲಾಗಿದ್ದರೆಕೃಷ್ಣನ ಮುಡಿಯೇರಿ ನಲಿಯಬಹುದಿತ್ತುಆಡುತ್ತ ಕುಣಿಯುತ್ತಮನವನ್ನು ತಣಿಸುತ್ತನನ್ನವನೋಡನಾಟ ಸವಿಯಬಹುದಿತ್ತುಸ್ವಚ್ಛ ಬಿಳಿಯ ಪುಕ್ಕಹೊತ್ತ ಹಂಸನಾನಾಗಿದ್ದರೆಪ್ರೇಮಿಗಳ ಪತ್ರ ತಲುಪಿಸಬಹುದಿತ್ತುಸ್ವಚ್ಛ ಹಾಲಿನೊಳಗೆಬೆರೆತ ನೀರನ್ನೊಮ್ಮೆಹಂಸಕ್ಷೀರನ್ಯಾಯ ತೋರಬಹುದಿತ್ತುಶೈಲೂ....[04/05 7:37 pm] drbnshylaramesh: ಗತವೈಭವ*********ಅಂದು ಬಾಳಿ ಬದುಕಿದ್ದಮನೆಯಿಂದು ಪಾಳು ಗುಡಿಮೆರೆದ ಗತವೈಭವವಿಂದುಅಳಿದು ಪಳಯುಳಿಕೆಯಡಿತಲೆ ತಲೆಮಾರುಗಳು ಬದುಕಿಪೋಷಣೆಯಿಲ್ಲದೆ ಕುಸಿಯಿತಿಂದುಪರಂಪರಾನುಗತ ಅಂದದಮನೆಕಾಲನವಶಕೆ ಸಿಲುಕಿತಿಂದುಅದೆಷ್ಟು ಮಂದಿಗೆ ನೆರಳಿತ್ತಿತ್ತೋಹಸಿದು ಬಂದವರಿಗೆ ತುತ್ತನೀಡಿನಿಷ್ಠೆಯ ಬೆವರ ಹನಿ ಬಸಿದವರಿಗೆಅಸನವಸನವಿತ್ತಿತ್ತು ಪ್ರೀತಿ ಮಾಡಿಅಸರೆಯ ತಂಪಿತ್ತು ಬಾಚಿ ತಬ್ಬಿದ್ದಗುರುಹಿರಿಯರಿದ್ದ ಅಂದದಂಕಣಹಳೆ ಬೇರು ಹೊಸ ಚಿಗುರುಹಬ್ಬಿ ನಕ್ಕಿದ್ದ ಭಾವದನಾವರಣಇತ್ತೊಂದು ಕಾಲದಲಿ ಭರಪೂರಸುವರ್ಣಯುಗದ ಸಂಭ್ರಮದ ಕಾಲತಾತ ಮುತ್ತಾತರಾಳಿ ಬದುಕಿದ್ದಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲಶೈಲೂ...[07/05 1:12 pm] drbnshylaramesh: ಕಾಯಕವೇ ಕೈಲಾಸ*****************ಕಾಯಕವೇ ಇಲ್ಲದಿರೆಕೈಲಾಸವೆಲ್ಲಿಯದು.?ಕೈ ಕೆಸರಾದರೆ ತಾನೇಬಾಯಿಗೆ ಮೊಸರು..!!ದುಡಿಮೆಯೇ ದೇವರುಸುರಿಸಿ ಹರಿಸಿ ಬೆವರುನಿಷ್ಠೆಯಿಂದ ದುಡಿದವಗೆಅಷ್ಟೇ.. ಒಳ್ಳೆ ಹೆಸರು..!!ಮೇಲುಕೀಳಿಲ್ಲ ವೃತ್ತಿಯಲಿಗೌರವಿಸಿ ನಡೆದರದು ಧರ್ಮಅವರವರ ವೃತ್ತಿ ದೇವನಾಣತಿನಿಷ್ಠೆಯಲಿಹನು ಅದುವೇ ಮರ್ಮಇಂಥ ಸವಿನುಡಿಯನಾಣತಿಯನೀಡಿದರೊಬ್ಬ ಮಹಿಮರುಭರತವರ್ಷಕೆ ಕ್ರಾಂತಿ ತಂದಜಗಜ್ಯೋತಿ ಬಸವೇಶ್ವರರು✍ ಶೈಲಜಾ ರಮೇಶ್ಸಮಯ 1 :11 pm[07/05 3:06 pm] drbnshylaramesh: ಜಗಜ್ಯೋತಿ ಬಸವೇಶ್ವರ*********************ಕಾಯಕವೇ ಕೈಲಾಸ ದುಡಿದರಿಹುದು ಉಲ್ಲಾಸದುಡಿಮೆಯಲಿಹನು ದೇವರು ಶ್ರದ್ಧೆಯಿಂದ ದುಡಿಯುತಿರುದಯೆಯಲಿಹುದು ಧರ್ಮ ಕರುಣೆಯದರ ಮರ್ಮಮೂಢನಂಬಿಕೆಯ ಮೌಢ್ಯ ಅಳಿಸಿ ಬಿಸುಟು ಆಗುನೀ ಪ್ರೌಢಜಾತಿವಿಜಾತಿಯಾವುದಿಹುದು ಜಗಕಿಹುದೊಂದೆ ಜಾತಿಭಕ್ತಿಯ ಬಾಂಡ ದೊಳಗಿಹ ಶಿವಶರಣರಿಗಿಲ್ಲ ಯಾವ ಜಾತಿಭಕ್ತಿ ಚಳುವಳಿಯ ಹರಿಕಾರ ಇಷ್ಟಲಿಂಗವದರಾಧಾರಜಾತಿಬೇಧಗಳಿಗಿತ್ತಿತ್ತು ಕೊನೆ ಅನುಭವ ಮಂಟಪದ ಮಹಾಮನೆಏನಗಿಂತ ಕಿರಿಯರಿಲ್ಲೆಂಬ ಸರಳ ಸಜ್ಜನಿಕೆಯ ಶರಣಾಗತಿಶಿವಶರಣರಿಗಿಂತ ಹಿರಿಯರಿಲ್ಲೆಂಬ ಅನುಭವದ ಮಹಾಮತಿಹಸಿದವರಿಗೆ ಅನ್ನವಿಕ್ಕುವ ಮಹಾ ಅನ್ನದಾನ ದಾಸೋಹಇಷ್ಟಲಿಂಗ ಪೂಜಾಕೈಂಕರ್ಯ ಸಾಕಾರ ಶಿವನಿಗಿಷ್ಟು ಸನಿಹದೇಹವಿದು ದೇಗುಲ ನಿಜಭಕ್ತಿಯಲರ್ಚಿಸಲವನು ಸಲಿಲಮೃದುವಚನವೇ ಮಂತ್ರ ಆ ದೇವನೊಲಿಯುವಿಕೆಯ ತಂತ್ರನೀಡಿ ವಚನಾಮೃತ ವಾಣಿ ಬಸವಣ್ಣ ನೀವಾದಿರೆಲ್ಲರ ಕಣ್ಮಣಿಕ್ರಾಂತಿಯ ಹರಿಕಾರ ನಿಜಗುಣ ಭಕ್ತಿ ಭಂಡಾರಿ ಬಸವಣ್ಣಜಗವ ಬೆಳಗಿದ ಜ್ಯೋತಿ ಮಹಾ ಮಾನವತಾವಾದಿ ಬಸವಣ್ಣದೇವನೊಲಿಯುವ ಪರಿಗಿಹುದು ಶರಣು ಶರಣಾರ್ಥಿ ಶರಣ್ಯಶೈಲೂ......[08/05 8:30 pm] drbnshylaramesh: ಸಂತೈಕೆ*******ಹಸಿವಾಗಿಹುದೇ..? ಅಳದಿರೂ ತಮ್ಮಏನು ಮಾಡುವುದೇಳು ಹಸಿವೆಯೇ ನಮ್ಮ ಕರ್ಮಎಲ್ಲೆಲ್ಲಿ ನೋಡಿದರೂ ಮರವಿಲ್ಲ ಬಟಾಬಯಲುಹಣ್ಣು ಹಂಪಲುಗಲಿಲ್ಲ ಹಸಿವನ್ನು ನೀಗಲುಅಂದಿತ್ತು ಸಂವದ್ಧಿ ಫಲಭರಿತ ಮರಗಳುನಿತ್ಯ ಗೋಳಾಯ್ತೆಮಗೆ ಮರವೆಲ್ಲ ಕಡಿಯಲುಕಾಡೆಲ್ಲಾ ನಾಡಾಗಿ ಇಲ್ಲವಾಯ್ತೆಮಗೆ ನೆಲೆಅರಸುತ್ತ ಆಹಾರ ಬಂದಿದ್ದೇವೆ ಗುಳೆತುಸು ಸುಮ್ಮನಿರು ತಮ್ಮ ನೋಡುತಿಹಳಮ್ಮ ಆಚೀಚೆಎಲ್ಲಾದರೂ ಕಾಣಸಿಗಬಹುದು ಹಣ್ಣು ಕಾಯಿಪೀಚು ಹೀಚುನಮಗೂ ಹಸಿವಾಗುತಿಹುದು ನೋಡು ನಾವು ಅಳುತ್ತಿಲ್ಲಸ್ವಲ್ಪ ಸಾವರಿಸಿಕೊ ಕಂದ ಅಭ್ಯಾಸವಾಗುವುದು ಮೆಲ್ಲಮನುಜರ ಅತ್ಯಾಸೆಗಿಂದು ನಾವು ಬೀದಿ ಪಾಲುಕೇಳುವರಾರಿಲ್ಲ ಇಲ್ಲಿ ನಮ್ಮಳಲಿನ ಅಹವಾಲುಕರೆದು ಉಣಲಿಕ್ಕುವರಿಲ್ಲ ನಾವು ಮಂಗಗಳಂತೆಬೆದರಿಸಿ ಕಸಿದರಾಯ್ತು ಹೊಡೆದೋಡಿಸುವರು ಮೃಗದಂತೆಸುಮ್ಮನಿರಲೂ ಬಿಡರಲ್ಲ ಹಿಡಿದೆಮ್ಮ ಪಳಗಿಸಿ ಮಣಿಸಿಅವರಾಟಕೆ ಕುಣಿಸುವರು ಹೊಡೆದು ಹೆದರಿಸಿ ಬೆದರಿಸಿನಮ್ಮ ಅನ್ನ ಕಸಿದವರಿಗೆ ದುಡಿದು ಕೊಡಬೇಕು ಹಣತನ್ನ ಹೊಟ್ಟೆ ತುಂಬಿಸಿಕೊಂಡು ನಮಗೆ ಬರೀ ಅರೆಹೊಟ್ಟೆನಾಬಾಯಲ್ಲೇನೋ ದೇವರೆಂದು ಕಟ್ಟಿದರು ಗುಡಿಗೋಪುರವಕಂಡಲೆದುರು ಬೀಸುವರು ಕಲ್ಲು ಇದು ಮನುಜನ ತತ್ವವಾ.?ಅತ್ತು ಹೈರಾಣಾಗದಿರು ಕುಡಿ ಅಮ್ಮನೆದೆಯ ಹಾಲುಸಿಕ್ಕಿದೊಡನೆ ಆಹಾರ ಕೊಡುವೆ ನಿನಗೆ ಪಾಲುಶೈಲೂ.....[15/05 7:12 pm] drbnshylaramesh: ಇರಲೀಸುಖ ಅನವರತ********************ಯಾಕೋ ತುಸು ಆರಾಮಿಲ್ಲಮಲಗಲೇ ಮಡಿಲಲಿ ನಲ್ಲಕೈಕಾಲುಗಳಲೆನೋ ಸುಸ್ತು ಸೆಳೆತಓಡಾಡಲಾಗದೇನೋ ನೋವು ಎಳೆತಬಾ ಮಲಗು ರಾಧೇನೀಗಿಸುವೆ ನಿನ್ನೆಲ್ಲ ಬಾಧೆಏನಾಯಿತ್ಹೇಳೇ ಚಿನ್ನಾಪರಿಹರಿಸುವೆ ನೋವನ್ನಎನಿಲ್ಲವೋ ಗೋಪಾಲನಿನ್ನನರಸುತ ಕಳೆದೆ ಕಾಲಹುಡುಕಿ ಹುಡುಕಿ ಸುಸ್ತಾದೆಅಲೆದಲೆದು ಆಯಾಸವಾಗಿದೆಹೌದೇನೇ ರಾಧಾಮಣಿನೆನೆದಿದ್ದರೆ ಸಾಕಿತ್ತಲವೇ ರಾಣಿಓಡೋಡಿ ಬಂದಿರುತ್ತಿದ್ದೆನೆನೆದೊಡನೆ ಹಾಜರು ಕಣ್ಮುಂದೆಸಾಕು ಬಿಡು ಬಡಿವಾರನಿನ್ನನೆನಪೇ ಪ್ರತಿದಿನ ವಾರನೀನೇನೋ ಜಗದಾದಿಪತಿಇಹುದೆಲ್ಲಿ ನನ್ನೊಳು ಮತಿನೆನೆದೊಡನೆ ಬಂದೆನಲ್ಲವೇ ನಾನುಹೇಳು ಜಾಣೆ ಮನದಳಲನ್ನುನಿನ್ನೊಡನೆಯೇ ನಾನಿಹೆನಲ್ಲಜಗವೇ ರಾಧಾಕೃಷ್ಣ ಎನುವರಲ್ಲಹೆಸರೊಂದೇ ಸಾಕೇ ನಲ್ಲನಿನ್ನೊಡನಾಟ ಬೇಕಲ್ಲಸದಾ ನಿನ್ನೊಡನಿರಬೇಕುಜಗದ ಪರಿವೇ ಮರೆಯಬೇಕುಹಾಗೆಂದರಾದೀತೇ ಹೇಳುಬೇಕಲ್ಲ ಎಲ್ಲರಿಗೂ ಸಮ ಪಾಲುನಿನ್ನೊಡನಾಟದ ಸಿರಿ ಸ್ನೇಹ ಸಖ್ಯಜಗವ ತಣಿಸುವುದೂ ಅಷ್ಟೇ ಮುಖ್ಯಸರಿ ಬಿಡು ಬಿಡು ಮಾಧವಾಅರಿತಿರುವೆ ನಿನ್ನ ಮನವಾಜಗವ ಪಾಲಿಪ ಸ್ವಾಮಿ ನೀನುನನಗೇ ಮೀಸಲಿರಲೆಂದು ಬಯೆಸೆನುಹೋಗಲಿ ಆ ಮಾತ ಬಿಡು ರಾಧೇಇಂದಿನ ಇಡೀ ಸಮಯ ನಮ್ಮದೇಸುಂದರ ಈ ಪ್ರಕೃತಿ ಮಡಿಲಿನಲಿಕಳೆಯೋಣ ಸುಸಮಯ ಏಕಾಂತದಲಿಅದಕೆಂದೇ ಬಯಸಿದೆ ಮಡಿಲುಎದೆಗೊರಗಿ ಆನಂದ ಸವಿಯಲುಆಹಾ ಏನೀಸುಖಮಯ ಪ್ರಶಾಂತಇರಲೀ ಬೆಸುಗೆ ನಿತ್ಯ ಅನವರತಶೈಲೂ....[15/05 8:12 pm] drbnshylaramesh: ತನ್ನದೆನ್ನುವಜೀವ ಉದರದೊಳರಳೆ****************************ಉದರದೊಳು ಮೊಳೆಯುತ್ತಿರುವ ಜೀವತನ್ನದೆನ್ನುವ ಅತೀವ ಪ್ರೇಮ ಭಾವಹೊತ್ತವಳ ಕಷ್ಟಕ್ಕೊದಗುವ ಜೀವತಿಳಿಯುತ್ತಿದ್ದನವಳು ಪಡುವ ನೋವಏನೇನೂ ಮಾಡಲು ಬರದವಹೊತ್ತು ನೆತ್ತಿಗೇರಿದರೂ ಏಳದವಇಂದೆಲ್ಲಾ ಕೆಲಸಕ್ಕೂ ಸಿದ್ದ ಸನ್ನದ್ದಕರುಳ ಕುಡಿಯ ರಕ್ಷಣೆಗೆ ಬದ್ದಬೇಯಿಸಿದ್ದ ರಮಿಸಿ ಉಣಿಸಬೇಕಿತ್ತುಕೂತೆಡೆಯೇ ಸರ್ವಸೇವೆಗೈಯ್ಯಬೇಕಿತ್ತುದರ್ಪಧಮಡಿ ಜೋರುಮಾತಿಗ್ಹೆದರಿನಡುಗುತ್ತಿದ್ದೆ ಕೈಕಾಲುಗಳದುರಿಈ ನಡುವೇನಾಯ್ತೋ ಎನ್ನರಸನಿಗೆತುಂಬು ಆರೈಕೆ ಬಿಡನರಗಳಿಗೆಮನೆಗೆಲಸಕೆಲ್ಲಾ ಸಹಾಯ ಹಸ್ತಇರಬಹುದೇ ಗರ್ಭಧರಿಸಿದ ನಿಮ್ಮಿತ್ತಅಡುಗೆಮಾಡಲೊಡನೆ ಇರುವಬಟ್ಟೆ ತೊಳೆಯೇ ಜೊತೆಗೆ ಬರುವಹೆಜ್ಜೆಯಿಟ್ಟರವ ಮೆಲ್ಲ ಎನ್ನುವಅಬ್ಬಾ..! ಅದೆಷ್ಟು ಕಾಳಜಿ ತೋರುವತನ್ನದೆನ್ನುವ ಜೀವ ಉದರದೊಳರಳೆಹಮ್ಮೆಲ್ಲ ಹುಸಿಯಾಯ್ತು ಹೆಮ್ಮೆಯರಳೆಕರುಳಕುಡಿ ಹೊತ್ತವಳನ್ಹೊತ್ತು ಮೆರೆಸಿಜೀವ ತಾನಾಗಿಹ ಒಲವ ಸುರಿಸಿಶೈಲೂ.....[16/05 10:02 am] drbnshylaramesh: ಕವಿಯ ಬೆರಗು ನೋಟವ ಕಂಡುಅವಳುನಾಚಿ ಇಳೆಯಾದಳುಚೆಲುವಿನ ಬಲೆಯಾದಳುತಂಪೀವ ಮಳೆಯಾದಳುಜೇನ ಹೊಳೆಯಾದಳು[19/05 1:49 pm] drbnshylaramesh: 🌹🌹ಜನ್ಮೋತ್ಸವದ ಶುಭಾಶಯ🌹🌹ವರ್ಷದ ಕೂಸು*************ಕನ್ನಡದ ಕಂದನಲ್ಮೆಯ ಬಾಲ ಮುಕುಂದಎಲ್ಲರಚ್ಚುಮೆಚ್ಚಿನ ಕೂಸುನಡೆವ ಹಾದಿಯಲ್ಲೆಲ್ಲ ಹೂ ಹಾಸುಮನಸು ತುಂಬಾ ಸ್ವಚ್ಛಹೆಸರಿದಕೆ ಕನ್ನಡ *ಕಥಾಗುಚ್ಛ..!!*ಹಡೆದವರು ಹಲವು ದೇವಕೀಯರು..!!ಪಾಲಿಸುವವರೆಲ್ಲ ಯಶೋಧೆಯರು..!!ವಸುದೇವರುಗಳಪಾತ್ರವನ್ತೂ ವರ್ಣನಾತೀತನಂದಗೋಪರುಗಳಸಂಖ್ಯೆ ಅಪರಿಮಿತ..!!ಗೋಪಿಕೆಯರದೂ ದೊಡ್ಡ ಹಿಂಡುಈ ಕೃಷ್ಣನ ರಮಿಸುವಲ್ಲಿಸದಾ ಮುಂದುಅದೆಷ್ಟು ಪ್ರೇಮ ಭಕ್ತಿಹಾಸ್ಯ ಕವನ ಕಥಾಹಂದರನಡುವಲ್ಲೇ ಬೆಳೆಯುತ್ತಿರುವ*ಕಥಾಗುಚ್ಛ* ಸುಂದರ..!ಹಾಲು ಮೊಸರು ಮಥಿಸಿನವನೀತ ತೆಗೆದಂತೆಹಲವು ಭಾವಗಳು ಮಿಳಿತಸಂಕಲನ *ಪಯೋನಿಧಿ* ಯಂತೆಉತ್ಕೃಷತೆಗೆ ಸಂದ ಗೌರವ *ಶಾರದಾತನಯ..!*ಸಂತೋಷ ಸಂಭ್ರಮಕೇ ಕಾರಣ*ಅನುಪಮಾ* ..!ಹಲವು ಹೂ ಮನಗಳುಬೆಸೆದು ಹೊಸೆದ ಕೂಸು..!ಅಂಬೆಗಾಲಿನಿಂದ ದಾಪುಗಾಲಿನನಡಿಗೆಗಿಂದು ವರ್ಷವಾಯ್ತುಜನ್ಮ ಮಹೋತ್ಸವಕಿಂದುನಲ್ಮೆಯ ಹಾರೈಕೆ..!ಹಲವು ಬಗೆಬಗೆಯ ಚಂದದಈ ಹೂಗುಚ್ಛದೊಂದಿಗೆಈ ನಾರೂ ಸ್ವರ್ಗ ಸೇರುವ ಬಯಕೆ.!*ಶೈಲೂ.....*[19/05 3:19 pm] drbnshylaramesh: ನನ್ನೊಳಗಿನ ನಾನು****************ನನ್ನೊಳಗೊಂದು ಅಭಿವ್ಯಕ್ತಿಉದ್ಭವಿಸಿದೆ ನನ್ನದೇ ಭಿತ್ತಿನೋವು ನಲಿವುಗಳಿಗೆ ಸಂಗಾತಿನನ್ನೊಳಿಹ ಉತ್ತಮೊತ್ತಮ ಗೆಳತಿದೃಢಹೆಜ್ಜೆಗೆ ಸಹಕಾರಿಯಾದವಳುತಪ್ಪೋಪ್ಪುಗಳ ತಿಳಿಹೇಳಿದವಳುಕಣ್ಣೀರೊರೆಸಿ ನೋವ ಮರೆಸಿದವಳುಸೋತು ಕಂಗೆಟ್ಟಾಗ ಮಾಡಿಲಾದವಳುಮುಂದಡಿಯಿಡಲು ಒತ್ತಾಸೆಯಾದವಳುಆತ್ಮವಿಶ್ವಾಸ ನೀಡಿ ನಲಿವಿತ್ತವಳುಗುರಿಯೆಡೆಗೆ ಗುರುವಿನಂತಾದವಳುಏಕಾಂಗಿತನಕೆ ಜೊತೆಯಾದವಳುಬದುಕಿಗೆ ಭರವಸೆಯಿತ್ತವಳುಸಾಧಿಸುವ ಚಲವಿತ್ತ ವಳುಕಾಲೆಳೆವವರ ಕಡೆಗಣಿಸೆ0ದವಳುನನಗಾಗಿ ಕಣ್ಣೀರಸುರಿಸುವವಳುನನ್ನೊಳಗಿನ ಈ ನಾನು ಅಹಂ ಅಲ್ಲಎಲ್ಲದೋಳರಿವಿತ್ತ ಸುಮನಸೇ ಎಲ್ಲಧೈರ್ಯ ಗುಂದದಂತೆ ನೀಡಿ ಶಕ್ತಿನನ್ನತನವ ಎತ್ತಿ ಹಿಡಿವ ಅಭಿವ್ಯಕ್ತಿ..!!ಶೈಲೂ....[19/05 5:29 pm] drbnshylaramesh: ಸಪ್ತಪದಿ*******ಏಳು ಹೆಜ್ಜೆಗಳ ಈ ಬಂದಜನ್ಮಜನ್ಮಗಳ ಅನುಬಂಧಎರಡು ಮುಗ್ಧ ಮನಗಳ ಬೆಸೆಗೆಪ್ರೀತಿ ಸಾಂಗತ್ಯ ಕೆ ಸೇತುವೆಸನಾತನ ಸಂಸ್ಕೃತಿಯ ಪ್ರತೀಕಸತ್ಸಂಪ್ರಧಾಯದ ದ್ಯೋತಕವೇಧಘೋಷ ಮೇಳಗಳ ನಡುವೆಸಂಬಂಧ ಅನುರಾಗದ ಒಸಗೆಸಂಸಾರಸಾಗರದಲಿ ಈಸಲುಪರಸ್ಪರರಲಿ ಸಹಕಾರವಿರಿಸಲುಮುಂದಿಡಲು ಸಜ್ಜು ಬಾಳ ಹೆಜ್ಜೆಮುನ್ನಡಿಯಿದು ಈ ಏಳು ಹೆಜ್ಜೆಧರ್ಮೇಚ ಅರ್ಥೇಚ ಕಾಮೇಚನೀನಿಲ್ಲದೇ ನಾತಿ ಚರಾಮಿ..!!ನಂಬುಗೆಯಡಿಯಲಿ ಸಾಗುವಈ ಜೀವ ನಿನಗೆ ಸಮರ್ಪಯಾಮಿ..!!ಜೀವದೊಳೊಂದಾಗೆ ಅಗ್ನಿಸಾಕ್ಷಿವಚನಬದ್ಧತೆಗೆ ಆ ದೈವಸಾಕ್ಷಿಹದಿಬದೆಯ ಧರ್ಮಕಡಿಪಾಯಸಪ್ತಪದಿ ಸುಖ ಜೀವನಕುಪಾಯಜೀವನದ ಸರ್ವ ಸುಖ ದುಃಖಜನನಮರಣಗಳೆರಡರಲೂ ಸಾಂಗತ್ಯಉಸಿರಲುಸಿರಾಗಿ ಬಾಳಹಸಿರಾಗಿಸಿಬೆಸೆವ ಬಂಧನ ಸಪ್ತಪದಿಯ ಸ್ವಾರಸ್ಯಶೈಲೂ.....[19/05 10:32 pm] drbnshylaramesh: Vishwanathkv Kamath ಮನದೊಳಗಿನಮರಿದುಂಬಿಸುಶ್ರಾವ್ಯವಾಗಿಹಾಡಿದಾಗಮೂಡಿಬಂದಮಧುರಾನುಭವದಮನದಮಾತುಗಳು...🙏🙏🙏🙏😊😊😊😊😊😊[20/05 2:19 pm] drbnshylaramesh: ಹಸಿರು ಗಾಜಿನ ಬಳೆಗಳೇ**********************ನೋಡೇ ಅಮ್ಮ ಎಷ್ಟು ಚಂದವಿದೆಘಲ್ ಘಲ್ ಬಳೆಗಳ ನಾದನಿನ್ನಂತೆಯೇ ಇದೆ ಅಂದದ ಕೈಯಲಿತುಂಬಿದ ಬಳೆಗಳ ಮೋದಹೌದು ಪುಟಾಣಿ ಮಕ್ಕಳ ರಾಣಿಬಳೆಗಳೇ ಹೆಣ್ಣಿಗೆ ಭೂಷಣಚಂದದ ಕೈಯಲ್ಲಿ ಹಸಿರಿನ ಬಳೆಗಳುಸೌಭಾಗ್ಯದ ಸಿರಿಗೆ ಕಾರಣಗಾಜಿನ ಬಳೆಯಿದು ಒಡೆದರೆ ತೊಂದರೆಬಹು ಜಾಣ್ಮೆಯಲಿ ಸಂಭಾಳಿಸುಸ್ತ್ರೀತ್ವದ ಸೌಭಾಗ್ಯದ ಸಂಕೇತವಿದುತೊಟ್ಟು ಸದಾ ಹಸಿರಂತೆ ಕಂಗೊಳಿಸುಚಿನ್ನ ವಜ್ರಕಿಂತ ಅತಿಬೆಲೆಯುಳ್ಳದ್ದುಹಸಿರು ಬಳೆಗಳಿಗುಂಟೆ ಸರಿಸಮಐದು ಮುತ್ತುಗಳಲಿ ಸರ್ವಶ್ರೇಷ್ಠವಿದುಸದಾ ಧರಿಸುವುದೇ ಸತೀಧರ್ಮಅಂದದ ಕೈಯಲಿ ಬಳೆಗಳು ತುಂಬಿರಲಿಸಕಲ ಸೌಭಾಗ್ಯ ನಿನದಾಗಲಿ ಮಗುಹಸಿರು ತುಂಬಿರುವ ಭೂಮಾತೆ ನಲಿದಂತೆಮೊಗದಲ್ಲಿ ತುಂಬಿರಲಿ ಸದಾ ನಗುಶೈಲೂ[20/05 2:27 pm] drbnshylaramesh: ಕಥಾಗುಚ್ಛವೆಂಬಹೂಗುಚ್ಛ ದಲಿ ಅರಳಿದಸುಮಗಳು ನಾವೆಲ್ಲಾಪ್ರೀತಿ ಸಿಂಚನವಸಿಂಪರಿಸಿ ಆರೈಕೆಮಾಡುವನಿರ್ವಾಹಕರಿರುವಾಗಬಾಡುವ ಭಯವೂ ನಮಗಿಲ್ಲನಳನಳಿಸಿ ಅಕ್ಷರ ಸೌಗಂಧವಪಸರಿಸೆಲ್ಲೆಡೆ ಸಾಹಿತ್ಯ ದೇವಿಯಪಡದಡಿ ನಲಿಯೋಣಬನ್ನಿರೆಲ್ಲ...ಜ್ಞಾನ ರಥದಲ್ಲಿ ವಿರಾಜಿಸುತ್ತಿರುವಸಾಹಿತ್ಯದೇವಿಯಕರಸೇವಕರು ನಾವುಸುಮನದ ಸಮಾನ ಮನಸ್ಕಸ್ನೇಹಿತರೊಡನೆತಾಯ ಸೇವೆಗೈಯಲುಕಂಕಣಬದ್ದರು ನಾವುನಿಮ್ಮೊಡನಾಟದರಸಗಳಿಗೆಗೆ ಕಟಿಬದ್ದರು ನಾವು🙏🙏[21/05 5:09 pm] drbnshylaramesh: ದ್ರೌಪದಿ ಸ್ವಯಂವರ******************ಪಾಂಚಾಲಾಧಿಪತಿ ದ್ರುಪದ ಮಾಹಾರಾಜನಡೆಸಿದ ವೈಖಾನವೆಂಬ ಯಜ್ಞದಿಂದಆವಿರ್ಭವಿಸಿದ ತ್ರಿಭುವನ ಚೆಲುವೆ..!!ಹೆಸರಿಹುದು ದ್ರೌಪದಿ, ಕೃಷ್ಣೆ, ಪಾಂಚಾಲಿ..!!ವೃದ್ಧಿಚಂದ್ರನಂತೆ ದಿನಂಪ್ರತಿ ಬೆಳಗುತ್ತಿರುವತ್ರೈಲೋಕ್ಯ ಸುಂದರಿ ಕುವರಿಗೆಅನುರೂಪ ವರನ ಆರಿಸುವ ನಿಮಿತ್ತಸ್ವಯಂವರಕ್ಕೆ ಸಜ್ಜಾಗಿತ್ತು ಪಾಂಚಾಲದೇಶ..!ಜಗದೇಕವೀರ ಧನಂಜಯ ತನ್ನಳಿಯನಾಗಳೆಂದುಅವ ಮಾತ್ರ ಬೇಧಿಸುವಮತ್ಸ್ಯಯಂತ್ರವ ಪಣವಾಗಿರಿಸಿಗರಗರನೇ ತಿರುಗುವ ಮತ್ಸ್ಯವನಿರಿಸಿಬೇಧಿಸುವವನೇ ವಿಜೇತನವಗೆ ಮಗಳ ಕೊಡುವೆನೆಂದು ಸಾರಿದರು..!ದೇಶವಿದೇಶದಿಂದಾಗಮಿಸಿದ ರಾಜಕುಮಾರರುಕೃಷ್ಣೆಯ ಚೆಲುವಿಗೆ ಬೆರಗಾಗಿ ನಿಂತರು.!ಧನುವನು ಹೆದೆಯೇರಿಸಿ ಪಂಚಬಾಣಗಳ ಹೂಡಿತಿರುಗುವ ಮತ್ಸ್ಯಯಂತ್ರವ ಭೇಧಿಸುವಲ್ಲಿ ಸೋತರು.!!ಚೇದಿರಾಜ್ಯದ ಶಿಶುಪಾಲ ಮಗಧದ ಜರಾಸಂಧಘಟಾನುಘಟಿ ರಾಜರೆಲ್ಲ ಸೋತು ತಲೆತಗ್ಗಿಸಿದರು.!ಅಂಗರಾಜ ಕರ್ಣ ಹೆದೆಯೇರಿಸಲು ನಡೆಯೇಸೂತಪುತ್ರನ ವರಿಸಲು ನಾನೊಲ್ಲೆನೆಂದಳು ಕೃಷ್ಣೆ..!ಕ್ಷತ್ರಿಯರೆಲ್ಲ ಕಡೆಗಾಣಿಸಿ ಬಸವಳಿದು ಸೋತಾಗಸಭೆಯಲ್ಲಿದ್ದ ಬ್ರಾಹ್ಮಣ ವರರಾದರೂಯತ್ನಿಸಬಹುದೆಂಬ ಅಣತಿಯ ಮೇರೆಗೆಕೌರವರ ಉಪಟಳಕೆ ಬೇಸತ್ತು ಬ್ರಾಹ್ಮಣ ವೇಷದಿತಲೆಮರೆಸಿ ಅಡಗಿದ್ದ ಗಾಂಢೀವಿ ಎದ್ದು ಅಣಿಯಾದನುಆವನಿವ ಬ್ರಾಹ್ಮಣ.. ರಾಜಾದಿರಾಜರೇ ಸೋತು ಶರಣಾದಾಗಇವನೇನ ಮಾಡಬಲ್ಲನೆಂದು ನಗುತ್ತಿದ್ದರು ಸಭಿಕರು.!ದ್ರುಪದನಾಹ್ವಾನ ಮನ್ನಿಸಿ ಯುಧಿಷ್ಠಿರನ ಸಮ್ಮತಿಯ ಮೇರೆಗೆಮನದಲ್ಲೇ ಚಿರಬಂದು ಶ್ರೀಕೃಷ್ಣ ನಿಗೊಂದಿಸಿಸ್ವಯಂವರ ಮಂಟಪದೆಡೆ ಬಂದು..ಧನುವನುಲೀಲಾಜಾಲದಿ ಹೆದೆಯೇರಿಸಿದನು..!ತೈಲಬಾಂಡದಲಿ ನೋಡುತ ಮೇಲಿದ್ದ ಮತ್ಸ್ಯದೆಡೆಗೆ ಲಕ್ಷ್ಯವನಿರಿಸಿಹೂಡಿ ಬಾಣಗಳ ಮತ್ಸ್ಯಯಂತ್ರವ ಬೇಧಿಸಿದ ಪಾರ್ಥನು.!ಎಲ್ಲೆಲ್ಲೂ ಜಯಘೋಷ ಮಂಗಳವಾದ್ಯ ಮೊಳಗಲುಲಜ್ಜೆಯಾಭರಣ ತೊಟ್ಟ ಚೆಲುವಿನರಸಿ ಪಾಂಚಾಲಿವಿಜಯಮಾಲೆಯನು ತೊಡಿಸಿದಳು..!ಅಪಮಾನಿತರಾದ ನೃಪರೆಲ್ಲ ದ್ವೇಷಾಸೂಯೆಯಲಿಪಾಂಚಾಲನ ಮೇಲೆ ದಂಡೆತ್ತಿ ಬರಲು..!ವೇಷ ಮರೆಸಿದ್ದ ಭೀಮಾರ್ಜುನರರಪರಿಮಿತಕಾಳಗದ ದೆಸೆಯಿಂದ ದ್ರುಪದ ಜಯಗಳಿಸಿದನು..!ಸ್ವಯಂವರದಲ್ಲಿ ವರಿಸಿದ್ದ ಪಾಂಚಾಲಿಯೊಡನೆತಮ್ಮ ಕುಠೀರಕೈತಂದುಅಮ್ಮಾ... ಹೆಣ್ಣು ತಂದೆವೆಂದಿದ್ದನ್ನು ಹಣ್ಣೆಂದು ಭ್ರಮಿಸಿದ ಕುಂತಿಸರ್ವರೂ ಸಮಪಾಲಾಗಿ ಹಂಚಿಕೊಳ್ಳಿರೆನಲು..!ಅಮ್ಮಾ.. ಇದು ಹಣ್ಣಲ್ಲ.. ಹೆಣ್ಣು..ದ್ರುಪದ ಕುವರಿ ದ್ರೌಪದಿಯ ಸ್ವಯಂವರ ದಲಿ ಗೆದ್ದುವರಿಸಿ ಬಂದಿದ್ದೇವೆನಲು.. ತಾನುಡಿದ ತಪ್ಪಿಗಾಗಿ ಮರುಗಿದಳು..!ತಾಯ ನುಡಿ ಅನೃತವಾಗಬಾರದೆಂದೆಣಿಸಿವ್ಯಾಸಮಹರ್ಷಿಗಳಾಣತಿಯಂತೆಪಾಂಡವರೈವರೂ ಕೃಷ್ಣೆಯ ಪತಿಗಳಾದರು..!!ಹಿಂದಿನ ಜನ್ಮದಲ್ಲಾಕೆ ಶಿವನನ್ನು ಒಲಿಸಿ ನಮಿಸಿಸರ್ವಗುಣಸಂಪನ್ನ ಜಗದೇಕವೀರ ನಾದಪತಿಂದೇಹಿ..ಪತಿಂದೇಹಿ ಎಂದೈದು ಬಾರಿ ಕೇಳಲಾಗಿ..!ಒಬ್ಬನಲೇ ಸರ್ವಗುಣಸಂಪನ್ನತೆಸಿಗದೆಂಬ ಕಾರಣಕೆಐದು ಪತಿಗಳ ಸತಿಯಾಗೆಂದು ವರ ಕರುಣಿಸಿದ್ದ ನಿಮಿತ್ತಇಂದಾಕೆ ಪಂಚ ಪಾಂಡವರ ಸತಿಯಾದಳು..!ಶೈಲೂ....[21/05 9:34 pm] drbnshylaramesh: ನನ್ನವನು...***********ಎಲ್ಲರಂತಲ್ಲ ನನ್ನವನುಕರುಣಾರಸ ಭರಪೂರಹರಿವಕನಸು ಕಂಗಳ ಚೆಲುವ ಸೊಗಸುಗಾರ...ಮುಗ್ಧಮುಖ ತುಂಬಿಹುದುಬೆಳದಿಂಗಳ ಚಂದ್ರಕಳೆಮನಸೆಳೆವ ಮಾಂತ್ರಿಕ ಮೋಡಿಗಾರ...ನೀಲ ಮೇಘದ ವರ್ಣಮನವಿಹುದು ಹಳದಿಯ ಚಿನ್ನಸಮ್ಮೋಹಕ ನುಡಿಗಳ ಮಾತುಗಾರ...ತುಸು ಮುನಿಸು,ಪ್ರೀತಿ ಕಡಲುಸುಗಂಧಬೀರುವ ಹೂಮನಸುತುಂಟತನದ ಭಂಟ ಮೋಜುಗಾರ...ದಿಟ್ಟ ನಡೆ ಮಾರ್ಮಿಕ ನುಡಿದುಷ್ಟರ ತರಿದು ಶಿಷ್ಟರ ಪೊರೆವಜಗದೊದ್ಧಾರಕ ಕೃಷ್ಣ ಪೊರೆವನೆಲ್ಲರ...ಹಾಸ್ಯ ಭರಿತ ತುಂಟತನಕದ್ದನವ ಎಲ್ಲರ ಮನಹಸುಮಗುವಿನ ಮನದ ಜೊತೆಗಾರ...ಸ್ನೇಹ ತೋರಿದರೆ ಭಂಟಪ್ರೀತಿ ಮಾಡಿದರೆ ನೆಂಟಶರಣಾಗತರ ಪೊರೆವ ಕರುಣಾಕರ...ಹೆಚ್ಚೇನು ಹೇಳಲಿ..?ವರ್ಣನೆಗೆ ನಿಲುಕನವದಾಟಿಸುವನವ ಭಾವಸಾಗರ...ಹೃದಯವೈಶಾಲ್ಯತೆಯ ಕಡಲುಅಪ್ಪಿದರೆ ತಾಯ್ಮಡಿಲುಸರ್ವಸ್ವ ಅವನೆನ್ನ ಮುರಳೀಧರ...ಶೈಲೂ....[22/05 2:44 pm] drbnshylaramesh: ಸುಗ್ಗಿಕಾಲ*********ಬಂದಿದೆ ನೋಡು ಸುಗ್ಗಿಕಾಲವರ್ಷದ ದುಡಿಮೆಯ ಪ್ರತಿಫಲಉತ್ತು,ಬಿತ್ತು, ಕಳೆ, ಸುಗ್ಗಿ ಕೊಯ್ಲುಇಂದು ಈ ಕಣದಲಿ ಬಟಾ ಬಯಲುಮನೆಮಂದಿಗೆಲ್ಲ ಕೈತುಂಬ ಕೆಲಸವರ್ಷಂಪ್ರತಿ ದಿನ ಪ್ರತಿದಿವಸದುಡಿದು ದಣಿದು ಭೂತಾಯಿ ಸೇವೆಮಾಡಿಉದರನಿಮಿತ್ತ ಬೆಳೆದದ್ದು ಕಾಳುಕಡಿಮಳೆ ಚಳಿ ಬಿಸಿಲೆನ್ನದ ಕಾಯಕತುತ್ತು ಕೂಳಿಗೂ ಒಮ್ಮೊಮ್ಮೆ ಕಂಟಕದುಡಿತದ ಪ್ರತಿಫಲಕೆ ಕಾಯಬೇಕು ವರ್ಷರಾಶಿಯಲಿ ಧಾನ್ಯವ ಕಂಡಾಗ ಹರುಷಸುಗ್ಗಿಯೆಂದರೇನೋ ಹಿಗ್ಗು ಮನಕೆತೆನೆಯಲಿ ಪೋಣಿಸಿದ್ದ ಕಾಳ ಹೆಕ್ಕುವ ಬಯಕೆಕೊಯ್ದ ಪೈರು ಕಲ್ಲುಗುಂಡಲಿ ತುಳಿಸಿಬೇರ್ಪಡಿಸಿದ್ದ ಕಾಳ ರಾಶಿಯನ್ನಾಗಿಸಿಹೊಟ್ಟು ಬೇರ್ಪಡಿಸಿ ಗಟ್ಟಿಕಾಳನ್ನಾರಿಸಿತೂರಿ ಕೇರಿ ಜೊಳ್ಳುಗಳ ಪ್ರತ್ಯೇಕಿಸಿರಾಶಿಯಾಗಿಸಿ ಹಣ್ಣುಕಾಯಿತ್ತು ಪೂಜಿಸಿಮೊರತುಂಬಿದ ಕಾಳು ಬಡವನಿಗರ್ಪಿಸಿವಂದಿಸಿ ಬೆಳೆಯಿತ್ತ ಭೂತಾಯಿಗೆಸಹಕರಿಸಿ ಜೊತೆಯಾದ ದನ ಕರುವಿಗೆಬೆಳೆದ ರೈತನಿಗೆ ನಂತರವೇ ತುತ್ತುಇದುವೇ ತಾನೇ ಸತ್ಸಂಸ್ಕಾರದ ಗತ್ತುಶೈಲೂ.......[23/05 9:52 am] drbnshylaramesh: ಮೌನವೇಕೆ ರಾಧೇ****************ಮೌನಕ್ಕೆ ಶರಣಾದೆ ಏಕೆ ಗೆಳತಿ ರಾಧೇ.?ಮನದಲೇಲಿನಿತು ಚಿಂತೆ ಆವರಿಸಿದೆನಿನ್ನೀ ಮೌನಕೆ ಬೃಂದಾವನವೇ ಸ್ಥಬ್ಧನೋಡೀ ಪರಿಸರ ತಾಳಿತೆಂತು ನಿಶ್ಯಬ್ದ..!!ನಿನ್ನ ನಲಿವಿಲ್ಲದೇ ಸೃಷ್ಟಿ ಚೈತನ್ಯಕೆಲ್ಲಿ ನಲಿವುಪುಷ್ಪಗಂಧಗಳಲೂ ಇನಿತಿಲ್ಲ ಚೆಲುವುನೋಡಲ್ಲಿ ಮಂದಾಲಿನವೂ ಮೌನವಾಗಿಹಉರಿವ ಸೂರ್ಯನೂ ಅದೇಕೋ ಬಳಲಿಹ.!!ನೀ ಬೃಂದಾವನದ ಚೆಲುವಿನ ಖನಿಮರೆಯಾಯ್ತೆಕೇ ನಿನ್ನುಲಿತದ ಇನಿದನಿ?ಮಾಧವನ ಕಾಣದೇ ಬೇಸರವೇ?ಅವನ ಅನುಪಸ್ಥಿತಿ ಮೌನಕೆ ಕಾರಣವೇ..!!ಎನಿಹುದೇಳು ಮನದ ನೋವು?ಶ್ಯಾಮನಿಲ್ಲದಿದ್ದುದಕೇನು ಕೊರಗು?ಇರಬಹುದವನಿಗೆನೇನೋ ಕೆಲಸಬಿಟ್ಟಿಲ್ಲೇ ಹೋಗಿರುವನಲ್ಲ ಮನಸ..!!ಅವನ ನೆನಪಿಹುದಷ್ಟು ರಾಶಿ ರಾಶಿಮನವಿರಿಸಿ ಅವನನೆನಪಲ್ಲೆ ಕಾಣೋಣ ಖುಷಿನೋವು ನಲಿವುಗಳನ್ನೆಲ್ಲಾ ಅವನಿಗರ್ಪಿಸಿಸೆಟೆದೇಳು ಗೆಳತಿ ಮೌನ ಮರ್ಧಿಸಿ..!!ನೆನಪಿಗಿಹುದಲ್ಲ ಅವನ ಕೊಳಲುಕೊಳಲಲ್ಲವಿದು ಅವನದೇ ನೆರಳುಸಾವಿರಜನ್ಮಕ್ಕಾಗುವಷ್ಟಿದೆ ಅವನೊಡನಾಟದ ಸುಖಮೌನವ ತೊರೆದೇಳು ಬಾ ಗೆಳತಿ ಧರಿಸುತ ಹಸನ್ಮುಖ..!!ಶೈಲೂ......[24/05 11:37 am] drbnshylaramesh: ನಯನ******ಮನದ ಕನ್ನಡಿಯಿದು ನಯನಅಂದದ ಮೊಗಕೆ ಮುನ್ನುಡಿ ನಯನಮುಖಾರವಿಂದದಲಿ ಚಂದದ ಭಿತ್ತಿಮನದ ಭಾವನೆ ಅರುಹುವ ಅಭಿವ್ಯಕ್ತಿ..!ಹಾಲಿನ ಬಟ್ಟಲೊಳು ಕಪ್ಪು ದ್ರಾಕ್ಷಿ ಇಟ್ಟಂತೆಹರಿವ ನೀರಿನೊಳು ಮೀನು ಹೊರಳಿದಂತೆಮುಖದ ಕಮಲದಲ್ಲಿ ಜೋಡಿ ಕಮಲವಂತೆಅಬ್ಬಾ..!! ಏನೇನು ಉಪಮೆ ನಯನಕೆಸಂತಸದಿ ಅರಳರಲಿ ನಗುವುದುದುಃಖವಾದೊಡೆ ತಾನೇ ಅಳುವುದುಆಶ್ಚರ್ಯ ಸಂಭ್ರಮಕೇ ಬೆರಗು ನೋಟಆಹಾ... ನಯನದಲೇನಿನಿತು ಬಗೆ ಬಗೆ ಮಾಟಮನದ ಮಾತುಗಳ ಅರುಹುವುದು ನೋಟಅದೇನು ಕರುಣೆ ಪ್ರೀತಿ ಒಡನಾಟಜಗವನನುಭವಿಸಿ ಕಾಣಲು ಬೇಕು ದೃಷ್ಠಿಆಹಾ.. ಅದೇನು ಸೊಬಗು ಆ ದೇವನ ಸೃಷ್ಟಿಒಂದೊಂದು ಭಾವಕೊಂದೊಂದು ನೋಟಭಯ ರೌದ್ರ ಭೀಕರ ಕರುಣಾ ಶೃಂಗಾರಕೋಪತಾಪಕೂ ಹುಸಿ ಮುನಿಸ ನೋಟಒಳಮರ್ಮವರಿವುದಕೆ ನೇರ ನೋಟಶಾಂತಿಯನರಸಲು ನಯನ ಬುದ್ಧ ಪ್ರಬುದ್ಧಅಂತಃಚಕ್ಷು ತೆರೆದರೆ ಸತ್ಯದರ್ಶನ ಸಂವೃದ್ಧಮನದ ಬಿಂಬದ ಪ್ರತಿಬಿಂಬವೀ ಕಣ್ಣುಹೃದಯಭಾಷೆಯನರಿವ ನಯನವೇ ಹೊನ್ನುಸೃಷ್ಟಿ ಸೌಂದರ್ಯ ಸವಿಯೆ ದೇವನಿತ್ತ ವರದಾನದೇಹಸೌಂದರ್ಯಕೂ ಕಾರಣವೀ ನಯನದೃಷ್ಠಿಹೀನರ ಕಂಡು ಕರಗಿ ಮರುಗುವುದು ಮನತಮ್ಮೊಂದಿಗೆ ಮಣ್ಣಾಗಲು ಬಿಡದೆ ಮಾಡಿ ನೇತ್ರದಾನಶೈಲೂ......[24/05 8:23 pm] drbnshylaramesh: ನಾವಿಬ್ಬರೊಂದೇ..!!*****************ನಾವಿಬ್ಬರೊಂದೇ ಯಾಕೀ ಮೊರೆತಬೇರಾದರೂ ಬೇರಲ್ಲವಿದು ಆನೃತಪ್ರುರುಷ - ಪ್ರಕೃತಿ ಒಂದಾದ ವೇಷತಿಳಿ ನಾವರ್ಧನಾರೀ ಪುರುಷನಾ ನಿನ್ನ ಕೈಯೊಳ ಕೊಳಲುನೀನಾಗಿ ಹೊಮ್ಮಿ ಅದರ ದನಿಬೆಸೆದು ನವ ರಾಗ ಹೊಸೆಯೇಹೊರಹೊಮ್ಮದೇ ಇನಿದನಿ.?ನಾನವನಿ ನೀನಾದೆ ಅಂಬರಭೋರ್ಗರೆದು ಪ್ರೇಮ ಧಾರಾಕಾರಎನಿಂಥ ಚುಂಬಕ ಸೆಳೆತವೀ ಅಮಲು.!ತಡೆಹಿಡಿಯಿತೇ ಕಯ್ಯಲ್ಲಿನ ಕೊಳಲು ?ತುಸು ಲಜ್ಜೆ ಬೆರೆಸಲಾರೆ ಕಣ್ಣುಇಂಥ ಸನಿಹ ಎದುರಿಸಲ್ಹೇಗೆ ನಾ ಹೆಣ್ಣು.!ನೀಲದೊಳಗೇ ಗೌರ ಮಿಳಿತುನೀಲವಾಯ್ತು ಜಗ ಅವನೊಡನೆ ಕಲೆತುಹೇಗಿದ್ದರೂ ನಾವಿಬ್ಬರೊಂದುಬಿಡಿಸಲಾಗದ್ದು ಅನಂತವೀ ಸಖ್ಯನಿನ್ನೊಳಗೆ ನಾನಾಗಿ ನನ್ನೊಳು ನೀನುದೂರಾಗದೆ ಬೆರೆಯುವುದು ಮುಖ್ಯಶೈಲೂ.....[25/05 8:09 pm] drbnshylaramesh: ದಾರಿ ಕಾಯುತ ನಿಂತೆ*******************ದಾರಿಕಾಯುತಿರುವೆ ನಲ್ಲಇನ್ನೂ ನೀ ಏಕೆ ಬರಲಿಲ್ಲಕನಸುಗಳ ಬೆನ್ನತ್ತಿ ನಿಂತೆನೆನಪುಗಳ ಭಾರಕೆ ಸೋತೆಮನದೊಳು ಅಳತೆ ಮೀರಿದಭಾವಗಳ ಆಂದೋಳನಮನತುಂಬಿ ಓಡಿ ಬರುವನೆನಪುಗಳ ಸಮ್ಮಿಲನಅನುರಾಗದ ಹೊಳೆಯಲ್ಲಿಕೊಚ್ಚಿಹೋದ ಆ ಘಳಿಗೆಬಿಡದೆ ಕಾಡುವ ಕನಸುಕಂಗಳತುಂಬಾ ಭಾವಬಿಂಬದ ಮಳಿಗೆಬಿಡದೆ ಭೋರ್ಗರೆವ ನಿನ್ನಭಾವದಲೆಯಲಿ ಕೊಚ್ಚಿಹೋಗಿಹಂಬಲಿಕೆ ಬಲವಾಯ್ತುಬರಲಿಲ್ಲೇಕಿನ್ನುನನ್ನ ಹೆಸರು ಕೂಗಿಸಾವಿರ ಕನಸಿಗೆ ರಂಗು ಬಳಿದುಕಾದಿರುವೆ ನಿನಗಾಗಿ ಅಂಗಳದಲಿಮಳೆಯಾಗಿ ಹನಿಸಿ ಕಾರ್ಮೋಡ ಕರಗಿಕಾಣಲು ತವಕಿಸುತ್ತಿರುವೆ ಗೋಡೆಗೊರಗಿಶೈಲೂ.....[28/05 5:01 pm] drbnshylaramesh: ಮುಗಿಯದ ಕಥೆ**************ನೋವುಗಳ ಹಿಂದಿಕ್ಕಿನೋವು ನುಸುಳುವುದಲ್ಲನಗುವೆಂವುದು ಮರೀಚಿಕೆಅಯ್ಯೋ ಬಿಡಿ ಇದು ಮುಗಿಯದ ಕಥೆ..!!ನಾಳೆಗಳಂದದ ಬದುಕಿಗೆಇಂದು ಅಡಿಗಲ್ಲನಿಡಲುಕಾಲೆಳೆದು ಹೀಗಳೆವರೆಲ್ಲಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಕಂಡ ಕನಸುಗಳನ್ನೆಲ್ಲನನಸಾಗಿಸುವ ಬಯಕೆಚುಚ್ಚಿ ಮನ ಹಿಂಡುವರಲ್ಲಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಆಸೆಬಳ್ಳಿಗೆ ನೀರನುಣಿಸಿಹೆಮ್ಮರವಾಗಿಸುವ ಬಯಕೆಚಿಗುರಲ್ಲೇ ಚಿವುಟುವರು ಮಂದಿಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಚಂದದ ಸಾವಿರ ಕುಸುರಿಚಿತ್ತಾರದೆಳೆಯಲ್ಲೂಕಪ್ಪೊಂದು ಹುಡುಕುವರುಅಯ್ಯೋ ಬಿಡಿ ಇದು ಮುಗಿಯದ ಕಥೆ..!!ರಾಜಾಸನದಿ ಕೂರಿಸಿಸರ್ವಸೇವೆಗೈದರೂತಪ್ಪೊಂದು ಹುಡುಕುವರುಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಅಸನ ವಸನವಿತ್ತುತುತ್ತಿತ್ತು ತಣಿಸಿದರೂದ್ರೋಹ ಬಗೆವವರೇ ಎಲ್ಲಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಕಷ್ಟದಲಿ ಜೊತೆಯಿದ್ದುಸಹಕಾರವಿತ್ತರೂ ಕೊನೆಗೆಬೆನ್ನ ಇರಿಯುವ ಮಂದಿಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಸಹಜ ಸ್ನೇಹವನಿತ್ತುಅಪ್ಪಿ ಅಧರಿಸಿದರೂತಪ್ಪೇಣಿಸುವವರೆ ಎಲ್ಲಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಬೆಳಕೀವ ದೀಪದ ಬೆಳಕಿದ್ದರೂಅಡಿಯ ಕತ್ತಲೆಯನೆತ್ತೆತ್ತಿಅಡಿಕೊಳ್ಳುವ ಮಂದಿಯಿವರುಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಜ್ಯೋತಿಯೊಲು ತಾನುರಿದುಮನೆಗೆ ಬೆಳಕಾದರೂ ಸಹಿತಹೆಣ್ಣೆಂದು ಜರಿವವರೆ ಎಲ್ಲಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಹೆತ್ತವರ ಮರೆತು ಕೈಹಿಡಿದವರಅನುಸರಿಸಿ ತೃಪ್ತಿಯಿಂದಿದ್ದರೂತೆಪ್ಪಗಿರರೀಮಂದಿ ಕುಹಕ ನುಡಿವವರುಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಸಹಜತೆಯ ಮರೆತೇಕೆಅಸಹಜತೆಯ ದಾರಿಯಲಿಕುಹಕವಾಡುವರಿವರುಅಯ್ಯೋ ಬಿಡಿ ಇದು ಮುಗಿಯದ ಕಥೆ..!!ಮುಗಿಯದೀ ಕಥೆಯಎಂದು ಮುಗಿಸುವೆದೇವಸಹನೆ ತಪ್ಪುವುದರೊಳಗೆಮನ್ನಿಸಿ ಮುಗಿಸಿಬಿಡು ಬಾಳ ವ್ಯಥೆ...ಶೈಲೂ......[30/05 10:45 am] drbnshylaramesh: ನಾನಾಗಬೇಕಿತ್ತು***************ಮೋಡದ ಮರೆಯಿಂದಿಣುಕಿಹಾಲುಚೆಲ್ಲುದಂತೆ ಸುತ್ತಮುತ್ತನಗುವ ಬೆಳದಿಂಗಳ ಕಂಡುಉಕ್ಕುಕ್ಕಿ ಹರಿವ ಕಡಲು ನಾನಾಗಬೇಕಿತ್ತು.!ಇರುಳು ಬಾನಿನ ಲಾಂದ್ರಹೊಳೆದೆಳೆವ ಸಮಯದಲಿತಿಳಿಗೊಳದಿ ಬಿಮ್ಮನರಳಿನಗುವ ನೈದಿಲೆ ಹೂವು ನಾನಾಗಬೇಕಿತ್ತು.!ಕಾರ್ಮೋಡ ತಾ ಕರಗಿಹನಿಹನಿಯಾಗಿ ಧರೆಗಿಳಿದುಭುವಿಯೊಡಲ ತಣಿಸುವತುಂತುರು ಸೋನೆ ಮಳೆ ನಾನಾಗಬೇಕಿತ್ತು.!ಗುಡುಗು ಸಿಡಿಲಾರ್ಭಟಡಿಧೋ ಎಂದು ಮಳೆ ಸುರಿದಾಗಬೆಚ್ಚಿ ಬೆದರದೆ ತಾನುಅಪ್ಪಿ ಅಲಂಗಿಸುವ ಇಳೆ ನಾನಾಗಬೇಕಿತ್ತು.!ಮಳೆ ಬಿಸಿಲಿನಾಟಕೆಪ್ರತಿಫಲಿಸಿ ಪ್ರತಿದ್ವನಿಸಿವರ್ಣ ಮೇಳಗಳ ಸಂತೆಯಲಿಮನಸೆಳೆವ ಇಂದ್ರಧನುಶ್ ನಾನಾಗಬೇಕಿತ್ತು.!ಪಚ್ಚೆಗಿಡಗಳಲರಳಿ ಮೆಲ್ಲಸೌಗಂಧದಲೇ ಬಂಧಿಸೆಲ್ಲಕ್ಷಣಿಕ ಬದುಕಿದ್ದರೂ ಸಾಕುಅಚ್ಚ ಬಿಳಿಯ ಮಲ್ಲಿಗೆ ನಾನಾಗಬೇಕಿತ್ತು.!ದೇವ ಆಸೆಯಿಹುದೇನೋ ಬಹಳನಾ ನೀನಿಟ್ಟಂತೆ ಇರುವ ಮರುಳಆದರೂ ಕೊನೆಗೊಂದಾಸೆನಿನ್ನೊಡಲಲ್ಲಿ ನಲಿವ ಕೈಗೂಸು ನಾನಾಗಬೇಕಿತ್ತು.!ಶೈಲೂ..[31/05 12:45 pm] drbnshylaramesh: ಕವಲುದಾರಿ***********ಇದು ಮುಗಿಯದ ಬಾಳ ಪಯಣನಿತ್ಯ ನಿರಂತರ ಸಾಗುವುದೇ ಜೀವನಸಾಗುತ್ತ ಸಾಗುತ್ತ ಸವೆಸಿ ಅರ್ಧದಾರಿಧುತ್ತನೆದುರು ನಿಂತಿತೇಕೆ ಈ ಕವಲುದಾರಿ?ಎತ್ತಕಡೆಗಿನ್ನು ಪಯಣ ತಿಳಿಯದಾಯ್ತೆಇತ್ತಲೋ ಅತ್ತಲೋ ಎತ್ತಲೋ ಎದುರಾಯ್ತು ಚಿಂತೆಎತ್ತ ನಡೆದರೆ ಇಹುದು ಪಯಣ ಸುಗಮತಪ್ಹೆಜ್ಜೆ ಇಟ್ಟರದು ಕವಲುದಾರಿಯ ಭ್ರಮಾಪ್ರಮುಖ.ಘಟ್ಟವಿದು ಬಾಳ ಪಯಣಕೆನಿರ್ಧರಿಸಲಾಗದು ಏಕೋ ಹೆದರಿಕೆನಿರ್ಣಯದಲಿಹುದು ಬದುಕ ಸಿಹಿ ಕಹಿತಪ್ಪುದಾರಿಯ ನಡಿಗೆ ಭರಿಸಲಾಗದ ಕಹಿತೋಚದಾಗಿದೆ... ಈಗ ಎತ್ತ ನಡೆಯಲಿ?ಭರವಸೆಯ ಜ್ಯೋತಿ ಬೇಕಿದೆ ದೃಢ ನಿಲುವಿನಲಿಕರಹಿಡಿದೆನ್ನ ಮುನ್ನೆಡೆಸು ಹೇ ಮಾಧವಾಸರಿದಾರಿಯಲೆನ್ನ ನಡೆಸು ಹೇ ಯಾದವಾ..ಶೈಲೂ.....[02/06 4:57 pm] drbnshylaramesh: ಪರಿಸರ ಸಂರಕ್ಷಣೆ***************ಜೀವ ಸಂಕುಲದ ಉಳಿವಿಗಿರಬೇಕು ಕಾಡುಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡುಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತಅವಿವೇಕದ ನಡತೆಗೆ ಪರಿಸರವೇ ದೂಷಿತಪರಿಶುದ್ಧ ಗಾಳಿಗೂ ಬಂತು ಸಂಚಕಾರಗಿಡಮರವ ಕಡಿದು ತಂಪಿಲ್ಲದೆ ಆಹಾಕಾರಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡುಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡುಹಸಿರಿನ ಸ್ವಚ್ಛ ಪರಿಸರ ಜಗದ ಜೀವನಾಡಿಗಿಡನೆಡಿ ಮುಂದೊಮ್ಮೆ ಅದುವೆನಮ್ಮ ಒಡನಾಡಿಮನುಜನ ಕೈಯಲ್ಲಿದೆ ಅಳಿವುಉಳಿವಿನ ಪ್ರಶ್ನೆಮರೆಯದೇ ಮಾಡಿ ಪರಿಸರ ಸಂರಕ್ಷಣೆಶೈಲೂ.....[03/06 8:10 pm] drbnshylaramesh: ಥೀಮ್ ಬರಹ##ಮಾತಿನ ಮೇಲೆ ನಿಗಾ ಇರಲಿ##ನುಡಿದರೆ ಮಾತು ಮುತ್ತಿನ ಹಾರದಂತಿರಲಿಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..ಕೃತಿಮ ನುಡಿಗೆಂದೂ ಎಡೆಕೊಡದಿರಲಿ..ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..ಗುರುಹಿರಿಯರಲ್ಲಿ ಗೌರವಾದರದ ಬೇಕಂತೆ..ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..ಕೈಲಾಗದವನಿಗೆ ಹುರುಪುತುಂಬಲಿ ಮಾತು..ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು..ತರ್ಕದಲಿ ಮಾತು ಅತಿ ತೂಕವಿದ್ದರೆ ಸೊಗಸು..ವಿತಂಡವಾದದಲಿ ಮಾತು ಮಣಿಸುವಂತಿರಲಿ..ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ..ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ..ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು..ಹಿಡಿತವಿರೆ ಮಾತಿನಲಿ ಅದೇ ಸೌಜನ್ಯದ ಹೆಗ್ಗುರುತು..ಶೈಲೂ.....
Comments
Post a Comment