ಗುರುದೇವ ಶ್ರೀ ರಾಮಕೃಷ್ಣ

ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯ ಈ ಶುಭದಿನದಂದು ಪ್ರಭುರಾಮಕೃಷ್ಣ ಎಲ್ಲರಿಗೂ ಸನ್ಮಂಗಳವನ್ನುಂಟುಮಾಡಲಿ🙏🙏

ಶ್ರೀ ರಾಮಕೃಷ್ಣ
*************

ನೀ ರಾಮ ನೀ ಕೃಷ್ಣ ಶ್ರೀ ರಾಮಕೃಷ್ಣ
ಪ್ರೇಮದಲಿ ಸಲಹಯ್ಯ ಪ್ರಭು ರಾಮಕೃಷ್ಣ
ಸರ್ವರಲಿ ಸಮದೃಷ್ಟಿ ಸಕಲ ಮತವೊಂದೇ
ಗುರಿಸೇರುವುದಕೆ ಹಲವು ದಾರಿಯಿದೆ ಎಂದೇ

ಕಾಮಕಾಂಚನ ಮುಕ್ತಿಮಾರ್ಗಕೆ ಬಂಧನ
ದೈವಸಾಕ್ಷಾತ್ಕಾರಕೆ ಭಕ್ತಿಯೇ ಲಾಂಛನ
ಶುದ್ಧ ಹೃದಯದ ಕರೆಗೆ ನೀ ಓಡಿ ಬರುವೆ
ತ್ಯಾಗಪಥದ ಸ್ಫೂರ್ತಿ ನೀ ಕಲ್ಪತರುವೇ

ಎಷ್ಟು ಮತವಿಹುದೋ ಅಷ್ಟು ಪಥವಿಹುದು
ಶ್ರದ್ಧೆಯಿದ್ದರೆ ಸಾಕು ಗುರಿ ಸೇರಬಹುದು
ಎಲ್ಲದಾರಿಯ ಗುರಿ ಆತ್ಮದರ್ಶನವೇ
ಸರ್ವಧರ್ಮದ ಅನುಭೂತಿ ಪಡೆದ ಗುರುವೇ

ಹಗಲಿರುಳು ಜಪಿಸುತ ತಾಯ ಶುಭ ನಾಮ
ದಕ್ಷಿಣೇಶ್ವರವಾಯ್ತು ಭಕ್ತಿಯ ಸಂಗಮ
ಭವತಾರಿಣೀ ತನಯ ಭವ ಹರಿಸು ಗದಾಧರ
ಪ್ರಭು ರಾಮಕೃಷ್ಣ ನೀ ಸರ್ವಧರ್ಮದ ಸಾರ

            ಶೈಲೂ.....

ಇಂದು   ಗುರುದೇವ  ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ .....
                ಜೈ  ಗುರುದೇವ

ಶ್ರೀ ರಾಮಕೃಷ್ಣ
*************

ತೋರು ಶ್ರೀ ಚರಣ ಅರ್ಪಿಸುವೆ ನಮನ
ಕಾಯೋ ಕರುಣಾನಿಧೇ ಶ್ರೀ ರಾಮಕೃಷ್ಣ

ಕೊ ನೆಯಿಲ್ಲದಾ  ದುಃಖ ಪಾರುಗಾಣಿಸೋ ತಂದೆ
ನಿನ್ನ ಪಾದಾರವಿಂದವನು ನಂಬಿ ನಾ ಬಂದೆ

ಕರುಣಾರಸ ಸಿಂಧು ದೀನ ಭಕ್ತರ ಬಂಧು
ಪೊರೆಯಬೇಕಿಂದು ಹರಸುತಲಿ ಬಳಿಬಂದು

ಜ್ಞಾನ ಭಕ್ತಿಯ ನೀಡು ಅಹಮಿಕೆಯ ಹೊರದೂಡು
ವಿವೇಕ ವೈರಾಗ್ಯ ಗಳ ಕರುಣಿಸುವ ಕೃಪೆಮಾಡು
 
ಸೂರ್ಯತೇಜ ಸಮ ಕಾಂತಿ ಹೊಮ್ಮುವ ಬೆಳಕ
ಪ್ರಭೆಯ ಪ್ರಕಾಶದಲಿ ಬೆಳಗೆಮ್ಮ ಬದುಕ

ಕಾಮಕ್ರೋಧವ ಅಳಿಸು ನೇಮನಿಷ್ಠೆಯ ನೀಡು
ಭಾವತಾರಿಣಿಯ ಪದತಲದೇ ಎನ್ನ ಮನವನು ಇರಿಸು

ಸರ್ವಧರ್ಮಗಳ ಸಮನ್ವಯ ಮೂರುತಿ ನೀ ತಂದೆ
ದೈವ ಸಾಕ್ಷಾತ್ಕಾರಕೆ  ಎಲ್ಲ ಧರ್ಮಗಳೊಂದೆ ಎಂದೆ

ಸಕಲಶಾಸ್ತ್ರಗಳ ಸಾರ ನಿನ್ನ ಮಹಿಮೆ ಅಪಾರ
ತೋರು ಕರುಣಾಮಹಾಪೂರ ದಾಟಿಸು ಭವ ಸಾಗರ

ಕಮಲದಳ ನಯನ ಪ್ರಭು ರಾಮಕೃಷ್ಣ
ತಾಪ ತಿಮಿರವ ಕಳೆದು ನಿನ್ನಲೇ ಬೆರೆಸೆನ್ನ ಮನ

            ಶೈಲೂ.....
 
Photo sources ( Internet / social media)

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ