341, ಜಾನಪದ ಶೈಲಿ ಕವನ

#ಜಾನಪದ_ಶೈಲಿ_ಕವನ

#ಶೀರ್ಷಿಕೆ

#ಹಳ್ಳಿಯಲ್ಲಿ_ಅರಳಿದ_ಮಲ್ಲೇ

ಏನ್ ಚಂದ ಕಾಣ್ತೀ
ಹುಸಿ ನಗೆಯ ಗರತಿ
ಅಂದಾಕೆ ಒಡತಿಯೇ ನೀನು|| ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ಹುಬ್ಬು ಕಾಮನಬಿಲ್ಲು
ಲಜ್ಜೆಯಾ ಕಣ್ಣುಗಳು
ಚಂಚಲ ನೋಟವಿಲ್ಲ||ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ನಾಗರ ಜಡೆಯನ್ನ
ಎತ್ಕಟ್ಟಿ ತುರುಬನ್ನ
ಘಮ್ಮೆನ್ನೋ ಮಲ್ಲಿಗಿ ಮುಡಿದು||ಓ ಹೆಣ್ಣೇ|
ನೀ ಹಳ್ಯಾಗೆ ಅರಳಿದ ಮಲ್ಲೇ..

ದುಂಡಾದ ಮುಖದಲ್ಲಿ
ಸೇಬಂತಾ ಕದಪಲ್ಲಿ
ನಾಚಿಕೆ ಹರಡೈತೆ || ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ದೇವತೆ ಕಳೆ ಐತಿ
ಮುಗೀಬೇಕು ಕೈಯೆತ್ತಿ
ನೀಯಾರ ಮನೆಯ ದೀಪ
|| ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

     ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ