ಕವನ ಸಂಗ್ರಹ

[22/4/2019, 5:50 pm] Dr. B. N. Shylaja Ramesh: ಹಾರೈಕೆ... ಅರಿಕೆ
***************


ಕೋರುವೇ ಶುಭಹಾರೈಕೆ
ಹೊಸಬಾಳಿಗಡಿಯಿಟ್ಟ ದಿನಕೆ
ನಲಿವು ಗೆಲುವಲಿ ಜೊತೆಯಾದ
ನವ ಬಾಂಧವ್ಯ ಬೆಸೆದ ಕ್ಷಣಕೆ

ಒಲಿದ ಮನವೆರಡು ಕಲೆತು
ಸಂಸಾರ ನೊಗವ ಹೊತ್ತು
ಬಾಳ ಹಾದಿಯ ಪಯಣ
ಜೊತೆಗೂಡಿ ನಡೆದ ದಿನಕೆ

ಸರಸವಿರಸಗಳನು ಗೆದ್ದು
ನವಿರಾದ ಪ್ರೀತಿಯ ಹೊದ್ದು
ಬಾಳ ನೌಕೆಯ ಪಯಣ
ನಲಿದು ಸಾಗುವ.ದಿನಕೆ

ಶೈಲೂವಿನ ಬಯಕೆಯಿದು
ನಲ್ಮೆಯ ಹಾರೈಕೆಯಿದು
ದುಃಖ ದುಮ್ಮಾನಗಳ ಮರೆತು
ತುಂಬಿ ಬರಲಿ ಹೊಸತು

ಸಂಭ್ರಮದ ದಿನವಿಂದು
ದುಪ್ಪಟ್ಟಾಗಲಿ ಹರುಷ
ಸವಿಯಬೇಕು ಪ್ರೀತಿ ಜೇನು
ಅನಂತವಾಗಲಿ ರಸನಿಮಿಷ

          ಶೈಲೂ.....
[22/4/2019, 6:36 pm] Dr. B. N. Shylaja Ramesh: ಪ್ರೇಮ ಸಂಭಾಷಣೆ
****************
ಎನಿತು ಚಂದವೇ ಸಖಿ
ಮುಗ್ಧಸ್ನಿಗ್ದ ಸೌಂದರ್ಯ
ನಕ್ಕರೂ ಕಾಣದಂತ
ಮುಗುಳುನಗೆಯ ಮಾಧುರ್ಯ

ಹೊಗಳಿದ್ದು ಸಾಕು ಕೃಷ್ಣ
ನೀನೇ ಸೌಂದರ್ಯದ ಗಣಿ
ನಿನ್ನ ಕಣ್ಣ ಕಾಂತಿಯಲ್ಲೇ
ಅಡಗಿಹನು ದಿನಮಣಿ

ಇಲ್ಲ ರಾದೇ ನೀನೇ ಚಂದ
ಕದಪುಗಳಲಿ ಇಹ ಚಂದಿರ
ಅರ್ಧ ತೆರೆದ ನಯನದಲೇ
ಇಹುದು ತಾರಾ ಮಂದಿರ

ಬಾಯಲ್ಲೇ ಅಡಗಿಸಿರುವೆ 
ಚತುರ್ದಶ ಭುವನಲೋಕ
ಅರಿಯಲಿ ಹೇಗೇಳು ನಿನ್ನ
ಕೃಷ್ಣ ನಾನಾದೆ ಮೂಕ

ಬಿಡು ಬಿಡು ಅದೆಲ್ಲ ಸಖಿ
ಅರಿಯಲಾಗದ ನಿಗೂಢ
ನಿನ್ನ ಸೌಂದರ್ಯ ಸೆಳೆತಕೆ
ವಶವಾಗಿ ನಾ ಧಿಗ್ಮೂಢ

ತುಂಟತನದ ನೋಟದಲ್ಲೇ
ಸೆಳೆದು ಬಿಟ್ಟೆ ಮನಸ್ಸಸನ್ನ
ಹೇಳಲೇನಿದೆ ಮಾಧವಾ
ನೀನೇ ನನ್ನ ಮನದನ್ನ

             ಶೈಲೂ......
[22/4/2019, 6:37 pm] Dr. B. N. Shylaja Ramesh: ಇಲ್ಲಿ ನಾನು ನೀನಷ್ಟೇ ಸಾಕು
ಬೇಕಿಲ್ಲ ಬೇರೆ ವಿಚಾರ
ಹೇಳು ರಾಧೇ ಮನದ ಮಾತು
ತೊಳೆ ಮನದ ಭಾರ
[22/4/2019, 7:14 pm] Dr. B. N. Shylaja Ramesh: ಪ್ರೇಮ.ಸಂಭಾಷಣೆ
*****************

ನುಡಿಸುವುದು ಹೇಗೆ
ಕೃಷ್ಣ ನಿನ್ನ ಕೊಳಲು
ನುಡಿಸಿ ಮರೆಯಬೇಕಿದೆ
ನನ್ನ ಮನದ ಅಳಲು

ಹಿಡಿಯಲ್ಹೇಗೆ ಕೈಯಲಿ
ಯಾವುದು ತುದಿ ಮೊದಲು
ತುಟಿಯಲಿಟ್ಟು ಉಸಿರು ತುಂಬಿ
ಹೇಳಿಕೊಡು ನುಡಿಸಲು

ಶ್.!! ಸುಮ್ಮನಿರು ರಾಧೇ
ಇಲ್ಲ ಸಮಯ ನುಡಿಯಲು
ಸ್ವರ್ಗ ಸುಖವ ನೀಡುತಿದೆ
ಪ್ರೇಮ ತುಂಬಿದ ಮಡಿಲು

ತುಂಬಿ ನನ್ನ ಕಣ್ಣಲೇ ನಿನ್ನ
ಮರೆವೆ ಜಗದ ಪರಿವೆಯ
ಸ್ಫೂರ್ತಿ ನೀನೇ ಮುನ್ನಡೆಸಲು
ಶಕ್ತಿ ನೀನೇ ಅರಿತೆಯಾ

ಸಾಕು ಬಡಿವಾರ ಬಿಡು
ಬರಿದೇ ಮಾತಿನ ಮಲ್ಲ
ನುಡಿಸಲ್ಹೇಗೆ ಹೇಳಿಕೊಡು
ಊದಬೇಕು ಬಿದಿರುಕೊಳಲ

ನನ್ನೆದೆಯ ಮಾತುಗಳ
ಹಾಡಾಗಿಸಿ ನುಡಿಸಿ
ತುಂಬ ಬೇಕು ಪ್ರೇಮಭಕ್ತಿ
ನಿನ್ನೊಲುಮೆಯಲಿ ಕರಗಿ

ನುಡಿಸಲಾರೆ ಬಿಡು ಸಖಿ
ಹೊಮ್ಮುವ ರಾಗ ನೀನೇ
ಕರದಲಿ ನವಿರಾಗಿ ಹಿಡಿದ
ಬಿದಿರು ಕೊಳಲು ನಾನೇ

ನಿನ್ನ ಕೈಯ ಹಿಡಿತದಲಿ
ಮೆರೆವ ಕೊಳಲು ನಾನು
ಮಾಂತ್ರಿಕ ಸ್ಪರ್ಶದಲೇ
ಮಿಡಿವ ನಾದ ನೀನು

ನಾನು ನೀನು, ನೀನು ನಾನು
ಸೇರಿದರೇ ನವರಾಗ ತಾನೇ
ವೇಣು ನಾನು ನಾದ ನೀನು
ನುಡಿಸಿದರೇ ಸ್ವರ್ಗ ತಾನೇ

             ಶೈಲೂ......
[23/4/2019, 1:51 pm] Dr. B. N. Shylaja Ramesh: ಬರೆಯಲೇ  ಗೆಳೆಯ 
ನಿನಗಾಗಿ ಕವಿತೆ
ತುಂಬಿ ಅದರಲ್ಲಿ
ಸಿರಿಸ್ನೇಹ ಮಮತೆ
ಬರದಿರಲಿ ಎಂದೂ
ಸ್ನೇಹಕ್ಕೆ ಕೊರತೆ
ಸಂಭ್ರಮದ ಬದುಕಲಿ
ಬೆಳಗಲಿ ಘನತೆ

ಚಂದದ ಸಾಲುಗಳು👌👌👍💐💐
[23/4/2019, 2:11 pm] Dr. B. N. Shylaja Ramesh: # ಸಾಹಿತ್ಯ ಸಂಪದ
# ಸ್ಪರ್ಧೆಯ ಅಂಕಣ
# ಅಶುಕವನ ವಿಭಾಗ
# ಶೀರ್ಷಿಕೆ ...
    ನನ್ನ ಆತ್ಮ ಸಂಗಾತಿ - ಪುಸ್ತಕ
**************************

ಪುಸ್ತಕಗಳ ಸಂಬಂಧ
ಮಸ್ತಕಕೆ ಅನುಬಂಧ
ಜ್ಞಾನ ದಾಹವ ತಣಿಸೋ
ಅಮೃತ ಕಲಶವೇ ಪುಸ್ತಕ

ಬಾಳಿಗೆ ಒಡನಾಡಿಯಿದು
ನೋವು.ದುಃಖವ ಮರೆಸಿ
ನಿತ್ಯ ರಸದೌತಣವೀವ
ಆತ್ಮ ಸಂಗಾತಿ ಪುಸ್ತಕ

ಅರಿವಿನ ಹರಿವು ನಿತ್ಯ
ಮೌಢ್ಯ ಹರಿಸುತ ಸತ್ಯ
ಜ್ಞಾನ.ಸೆಲೆಯ ಮೂಲ
ಅಜ್ಞಾನದ ತೆರೆ ನಿರ್ಮೂಲ

ನೋವು ನಲಿವಿಗೆ ಗೆಳೆಯ
ತುಂಬುತ ಸದಾಶಯ
ತಿಳಿಸುತ್ತ  ಅಕ್ಕರದ ತಿಳುಹು
ಹೊತ್ತಿಗೆಯ ಮಹತ್ವದರಿವು

ಇರಲೆಲ್ಲರಿಗೂ ಪುಸ್ತಕ ಜ್ಞಾನ
ತೊಡೆಯುತ್ತ ಮೌಢ್ಯ ಅಜ್ಞಾನ
ಮೂಡಲಿ ಸಾಹಿತ್ಯ ಜಿಜ್ಞಾಸೆ
ಅದುವೇ ಜ್ಞಾನದ ಪರಿಭಾಷೆ

             ಶೈಲೂ....
[24/4/2019, 4:12 pm] Dr. B. N. Shylaja Ramesh: ಎಲ್ಲವೂ  ನೀನೇ
*************

ನನ್ನೊಲವ ಮಂದಿರದಿ
ನೆಲೆಸಿಹ ಮೂರುತಿ ನೀನೇ
ಕಿರುನಗೆಯ ಜ್ಯೋತಿಯನು
ಬೆಳಗುವವನೂ ನೀನೇ

ನನ್ನೊಲವ ಬದುಕಿನಲಿ
ಬೆಳಕಂತೆ  ತಾ  ಬಂದು
ಕಹಿಯ ಕತ್ತಲ ದೂಡಿ
ಬಾಳು ಬೆಳಗುವವ ನೀನೇ

ನನ್ನೊಲವ ಹೂ ಬನದಿ
ಬಿರಿದು ಮಲ್ಲಿಗೆಯಂತೆ
ಸೊಗವಿತ್ತು  ಹೂ ಬನಕೆ
ಗಂಧ ಪಸರಿಸಿದವ ನೀನೇ

ನನ್ನೊಲವ  ಆಗಸದಿ
ಸರಿಸಿ ದುಃಖದ ಮೋಡ
ಶುಭ್ರಾಗಸದಿ ನಗುತ
ಪ್ರಭೆ ಬೀರೋ ಸೂರ್ಯನೂ ನೀನೇ

ಅಡಗಿ  ಮೋಡದ ಹಿಂದೆ
ಇಣುಕಿಣುಕಿ  ನೋಡುತಲಿ
ಒಲವ ಅಮೃತದ ಧಾರೆ
ಸುರಿವ ಚಂದ್ರಮನೂ  ನೀನೇ

ಬಿರಿದ ಮಲ್ಲಿಗೆಯಂತ
ಮನದ ಕುಸುಮದ ಜೇನು
ಮೊಗೆಮೊಗೆದು ಹೀರುವ
ನನ್ನೊಲವ ಭ್ರಮರವು ನೀನೇ

ಒಲವ ಸುಂದರ ಬದುಕು
ತೂಗೋ ಉಯ್ಯಾಲೆಯ ತೆರದಿ
ಹಾಗೊಮ್ಮೆ ಹೀಗೊಮ್ಮೆ ಅಳಿಸಿ ನಲಿಸಿ
ಜೀಕುವವನೂ  ನೀನೇ

ನಾ  ಏನ ಹೇಳಲಿ ಕೃಷ್ಣ
ನನ್ನದಿನಿತೂ ಇಲ್ಲ,, ಜಗವ
ಮಾಯೆಯೋಳಾಡಿಸೋ
ಸರ್ವೋತ್ತಮನೂ  ನೀನೇ

             ಶೈಲೂ....
[24/4/2019, 5:21 pm] Dr. B. N. Shylaja Ramesh: ತುಸು ಬಿಟ್ಟುಬಿಡು ಒಬ್ಬಂಟಿ..!
_____________________________

ಹೇಳೆಂದರೆ ಏನ ಹೇಳಲಿ 
ಹೇಳಲೇನು ಗೊತ್ತಾಗದ ತಳಮಳ
ಯಾಕೆಂದರೆ ಹೇಳಲೆಂತು ಖಚಿತ ?
ಕಾರಣ ಗೊತ್ತಿಲ್ಲದ ಕಾರಣ ! ||

ಸುಮ್ಮನೆ ಹೊಮ್ಮಿತದೆಂತೊ
ತಳಮಳ ನಿರುತ್ಸಾಹ ಕಳವಳದಲೆ
ಖಾಲಿಯಾದಂತೆಲ್ಲ ಒಳ ಜೀವಸತ್ವ
ಉದಾಸಿ ಮನ ಹಿಂಡಿ ಹಿಪ್ಪೆ ! ||

ಯಾವ ಯಾತನೆ ವೇದನೆ
ಯಾವ ಸಂಕಟವೊ ಗರಗಸ ಸ್ಪರ್ಶ
ಯಾರು ಏನೊಂದು ಬೇಡವೆನ್ನುತಲಿ
ಮೂಲೆ ಹಿಡಿಸಿ ಗೋಳ ಶೈಲಿ ||

ಕಣ್ಣಂಚಿನಲೇಕೊ ನೀರು
ಯಾವ ನೋವ ವಿದಾಯಕೊ ಕಾಣೆ
ಯಾವ ಭಾವ ಎತ್ತೊಗೆಯಿತೊ ಮುತ್ತಿ
ರಣರಂಗದ ನಡುವೆ ನಿಶ್ಯಸ್ತ್ರ ||

ಕೇಳದಿರು ಮಾತಾಡಿಸದಿರು
ಬಿಟ್ಟೆನ್ನ ಪಾಡಿಗೆ ಒಬ್ಬಂಟಿ ನೀ ಹೋಗು
ಏಕಾಂತವೊ ಏಕಾಂಗಿತನವೊ ಕುಕ್ಕಲಿ
ನನ್ನ ಕವಚ ನಾನೆ ಕಳಚುವೆ ||

- ನಾಗೇಶ ಮೈಸೂರು
೨೩.೦೪.೨೦೧೯

(Picture source: internet / social media received via Shilpa Mohan - thank you madam 🙏😊👍)
[24/4/2019, 8:37 pm] Dr. B. N. Shylaja Ramesh: ಹೇಳಲಿ ಹೇಗೆ.?
*************

ಹೇಳಲಿದೆ ಬೇಕಾದಷ್ಟು
ಹೇಳಲಾರದ ಬಿಕ್ಕಟ್ಟು
ಹೇಳಲೆಂತು ಮನದ ಮಾತು
ಹೇಳೆ ನೋವಾದರೆಂತು?

ಹೇಳುವಾಸೆ ಎಲ್ಲ ನಿನಗೆ
ಹೇಳಿದರೆ ಹೇಗೋ ನಿನ್ನ ಬಗೆ
ಹೇಳದೇನೋ ತಳಮಳ
ಹೇಳಲೆಂತರಿಯಲಿ ನಿನ್ನೊಡಲ

ಹೇಳೆಂದರೂ ನಾ ಹೇಳಲೇನು?
ಹೇಳದಿರೆ ತಪನ ಬಲ್ಲೆಯೇನು.?
ಹೇಳದೆಯೂ ನೀನರಿಯಬೇಕು
ಹೇಳಿ ಕೇಳೇಕೆ ತಿಳಿಯಬೇಕು?

ಹೇಳಿ ಬಂದೆಯೇನು ಒಳಗೆ
ಹೇಳದೇ ಹೋದ್ದದ್ದೇಕೆ ಹೊರಗೆ
ಹೇಳಲಿಲ್ಲವೇನೂ ವಿಷಯ?
ಹೇಳೆ ಸಂತಸ ನೀ ಬಲ್ಲೆಯಾ

ಹೇಳಲೇನು ಮನದ ಮಾತ
ಹೇಳಲ್ಹೇಗೆ ಕಾರಣವಿಲ್ಲದೆ ಖಚಿತ
ಹೇಳಬೇಕೆಂದರೂ ಬರಲೊಲ್ಲದು
ಹೇಳಿದ್ಯಾತರ ಗೊಂದಲ ಮನದ್ದು

            ಶೈಲೂ.....
[26/4/2019, 4:13 pm] Dr. B. N. Shylaja Ramesh: ಹೊಲೆದಾಟ ಸುಲಭದ್ದಲ್ಲ
ಸರಿಸುತ್ತಿರಬೇಕು ವಸ್ತ್ರವ ಮೆಲ್ಲ
ಮೈಮರೆತರೆ  ಕೈಯೊಳಗೆ ಸೂಜಿ
ಚಾಕಚಕ್ಯತೆಯಿರೆ ಉತ್ತಮ ದರ್ಜಿ

ವಸ್ತ್ರದ ಮೇಲೆ ವಿವಿಧ ವಿನ್ಯಾಸ 
ಬಣ್ಣದ ಬಳಪದಿಂದ ಚಿತ್ರೀತ ನ್ಯಾಸ
ಚಕಚಕನೆ ಚಲಿಸಿ ಕತ್ತರಿ
ಬಲು ಚಂದ ಕತ್ತರಿಸುವ ಪರಿ

ಮಾರುದ್ಧದ ಬಟ್ಟೆ ನೂರಾರು ಪೀಸು
ಒಂದಕೊಂದ ಜೋಡಿಸ್ಹೊಲೆಯೇ ಜೋಶು
ನಾಜೂಕಿನಲಿ ಮಾಡಿ ಕುಸರಿ 
ಸುಂದರ ವಸ್ತ್ರದನುಬಂಧದ ಪರಿ

ಹೊಲೆಯಬೇಕಿದೆ  ಹೊಲಿಗೆ
ಬಂಧ ಕಳಚಿದ ಬದುಕ ಬಿರುಕಿನ ನಡುವೆ
ಹಾಕಿ ಎಲ್ಲ ತೂತುಗಳಿಗೆ ತೇಪೆ
ಬಾಂಧವ್ಯದ ಬೆಸುಗೆಯಿದ್ದರೆ ಹೊಳಪೇ..!

ಆಗಬೇಕಿದೆ ಸೃಜಿಸುವ ಯಂತ್ರ
ಬಿತ್ತಿ ಎಲ್ಲರೊಳಗೆ ಶಾಂತಿ ಮಂತ್ರ
ಬಿರುಕು ಕಾಣದಂತೆ ಹೊಲೆದು
ಹೊಂದಾಣಿಸೆ ಚತುರತೆ ಮೆರೆದು

ತುಂಬಾ ಚೆನ್ನಾಗಿದೆ ಸರ್ ನಿಮ್ಮ ಹೊಲೆದಾಟ..!!
ವಸ್ತ್ರದ ಜೊತೆ ಜೊತೆಗೆ ಬದುಕನ್ನೂ ಸೇರಿಸಿ ಬಿಟ್ಟಿದ್ದೀರಿ...ಸೂಪರ್👌👍💐💐
[26/4/2019, 4:47 pm] Dr. B. N. Shylaja Ramesh: ದಿಗಂತ
*******
ಹೇ ದಿಗಂತ... ನೀನನಂತ
ವರ್ಣಿಸಲಿ ನಿನ್ನಂಏನಂತ?
ಮಿತಿಯುಂಟೇನು‌  ಪರಿಧಿಗೆ
ಸಕಲ ಬ್ರಹ್ಮಾಂಡ ನಿನ್ನೊಳಗೆ

ಅಷ್ಟದಿಕ್ಕಿಗೂ ವ್ಯಾಪಿಸುತ
ಅದರಾಚೆ ಪರಿಧಿ ಪಸರಿಸುತ
ವಿಸ್ತರಿಸುತ್ತಾ  ದಿಗ್ದಿಗಂತ
ವ್ಯೋಮಾಕಾಶ ನಿನದೇ ಪೂರ್ತ

ಜಗದಗಲ ಮುಗಿಲಗಲ ವ್ಯಾಪ್ತಿ
ಅಂಬರ ಆಕಾಶ ದಿಗಂತ ದೀಪ್ತಿ
ಮಿತಿಯೆಲ್ಲಿದೆ ಅನಂತ ದಿಗಂತಕೆ
ಹಿಗ್ಗಿ ಹಿರಿದಾಗಿ ಬೆಳೆದ ಅನಂತಕೆ

ಎತ್ತರೆತ್ತರಕೆ ಮುಗಿಲನೂ ದಾಟಿ
ಬೆಳೆಯಲಿದೆ ದಿಗಂತವನೂ ಮೀಟಿ
ಬೆಳೆವಮನಕೆಲ್ಲಿಯ ಇತಿಮಿತಿ
ಬೆಳೆಯಲಿದೆ ಜೀವನ ಪೂರ್ತಿ

                ಶೈಲೂ....
[26/4/2019, 6:33 pm] Dr. B. N. Shylaja Ramesh: ಎಂದೂ ಬರೆದಿರದ ಸಾಲುಗಳು
**************************

ಬಾಳ ಹೊತ್ತಿಗೆಯಲಿ
ಖಾಲಿ ಖಾಲಿ ಪುಟಗಳು
ಬರಿದಾದ ಮನದಂಗಳದಿ
ಬರೆದಿರದ ಸಾಲುಗಳು

ಬರೆಯಬೇಕೆಂದರೂ ಬಾರದು
ಒಳಮನದ ನೋವುಗಳು
ಅಕ್ಷರದಲ್ಲಡಗಿಸಲಸಾಧ್ಯ
ಬರಿದಾದ ಪದಪುಂಜಗಳು

ಕನಸಲ್ಲಿ ಕಾಡಿದ್ದ ನವಿರು ನೆನಪು
ಹಗಲಲ್ಲಿ ಕಂಡಿದ್ದ ಸವಿಗನಸು
ತುಸು ಕೋಪತಾಪ ಹುಸಿಮುನಿಸು
ಎಂದೂ ಬರೆದಿರದ ಸಾಲಾಯ್ತು

ಕಂಗಳಿಂದಿಳಿದಿದ್ದ ಕಂಬನಿ ಲೆಕ್ಕ
ನವಿರಾದ ಪ್ರೇಮದ ಪುಳಕ
ಬರೆಯಲಾರದ ಕವನದ ಶೈಲಿ
ಬರಿದೇ ಖಾಲಿ ಖಾಲಿ ಖಾಲಿ

           ಶೈಲೂ.....
[26/4/2019, 7:26 pm] Dr. B. N. Shylaja Ramesh: [19/04 9:48 pm] drbnshylaramesh: ಯುಗಾದಿಯ ಸಂಭ್ರಮ
🌿🌹🌿🌹🌿🌹🌿

ಹಳತೆಲ್ಲ ಕಳೆದು
ಹೊಸತು ಬರುತಿದೆ ನೋಡು
ತುಂಬಿ ಹೊಸ ತನ
ಎಲ್ಲೆಲ್ಲೂ ನವಚೇತನ ಹಾಡು
ಇದೇ ನವ ಯುಗಾದಿಯ ಜಾಡು

ಶಿಶಿರ  ಋತು ಕಳೆದು
ರಾಜ ವಸಂತನಾಗಮನ
ನಳನಳಿಸುತ ಪ್ರಕೃತಿ 
ಕಣ ಕಣದಿ ತುಂಬಿ ಹೊಸಚೇತನ
ಇದೇ ಯುಗಾದಿಯ ಹೊಸತನ

ಹಣ್ಣೆಲೆ ಕಳಚುದುರಿ
ಹೊಸ ಚಿಗುರು ಚಿಗುರಿ
ಹಸಿರು ಪೀತಾಂಬರಿ
ಉಟ್ಟು ಮೆರೆವ ಸರದಿ
ಇದೇ ಸಂಭ್ರಮದ ಯುಗಾದಿ

ಮಾವು ಬೇವು ತೋರಣ
ಬೇವು ಬೆಲ್ಲದ ಮಿಶ್ರಣ
ಸಿಹಿ - ಕಹಿಯು ಸಮವಿರಲಿ
ಬದುಕಾಗಲೀ ಪೂರ್ಣ
ಇದೇ ಯುಗಾದಿಯ ಹೂರಣ

ಬೇಳೆಯ ಸಿಹಿ ಹೋಳಿಗೆ
ಜೊತೆ ಪಂಚಾಂಗದ ಶ್ರವಣ
ನಾಳಿನ ಭವಿತದ ಚಿಂತೆ
ಸುಖ ಸಂತೋಷದ ಮಜ್ಜನ
ಇದೇ ಯುಗಾದಿಯ ಪ್ರೇರಣ

ಹೊಸತು ಬದುಕು ಸಹಬಾಳ್ವೆ
ಸಂಬಂಧದ  ಜೊತೆ ಜೊತೆಗೆ
ಹಳತು ನೋವನೆಲ್ಲ ಕಳೆದು
ನಾಳೆಗಳ ಕನಸಿನಲಿ
ಯುಗದ ಆದಿಯ ಸಂಭ್ರಮ

           ಶೈಲೂ........

ಎಲ್ಲಾ ಬಾಂಧವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐💐💐
ಶ್ರೀ ವಿಕಾರಿ ನಾಮ ಸಂವತ್ಸರವು ಎಲ್ಲಾ ಸುಖ ಶಾಂತಿಗಳನ್ನು ತಂದು ಬದುಕು ಹಸನಾಗಲಿ💐💐💐💐💐
[20/04 1:05 pm] drbnshylaramesh: ,ನವಿರಾದ ನೆನಪು
**************

ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಕಾಯ್ವೆ ನಾ ಮುದದಿಂದ...

           ಶೈಲೂ.....
[22/04 6:08 pm] drbnshylaramesh: ಹಾರೈಕೆ... ಹರಕೆ
****************


ಕೋರುವೇ ಶುಭಹಾರೈಕೆ
ಹೊಸಬಾಳಿಗಡಿಯಿಟ್ಟ ದಿನಕೆ
ನಲಿವು ಗೆಲುವಲಿ ಜೊತೆಯಾದ
ನವ ಬಾಂಧವ್ಯ ಬೆಸೆದ ಕ್ಷಣಕೆ

ಒಲಿದ ಮನವೆರಡು ಕಲೆತು
ಸಂಸಾರ ನೊಗವ ಹೊತ್ತು
ಬಾಳ ಹಾದಿಯ ಪಯಣ
ಜೊತೆಗೂಡಿ ನಡೆದ ದಿನಕೆ

ಸರಸವಿರಸಗಳನು ಗೆದ್ದು
ನವಿರಾದ ಪ್ರೀತಿಯ ಹೊದ್ದು
ಬಾಳ ನೌಕೆಯ ಪಯಣ
ನಲಿದು ಸಾಗುವ.ದಿನಕೆ

ಶೈಲೂವಿನ ಬಯಕೆಯಿದು
ನಲ್ಮೆಯ ಹಾರೈಕೆಯಿದು
ದುಃಖ ದುಮ್ಮಾನಗಳ ಮರೆತು
ತುಂಬಿ ಬರಲಿ ಹೊಸತು

ಸಂಭ್ರಮದ ದಿನವಿಂದು
ದುಪ್ಪಟ್ಟಾಗಲಿ ಹರುಷ
ಸವಿಯಬೇಕು ಪ್ರೀತಿ ಜೇನು
ಅನಂತವಾಗಲಿ ರಸನಿಮಿಷ

          ಶೈಲೂ.....
[23/04 2:12 pm] drbnshylaramesh: # ಸಾಹಿತ್ಯ ಸಂಪದ
# ಸ್ಪರ್ಧೆಯ ಅಂಕಣ
# ಅಶುಕವನ ವಿಭಾಗ
# ಶೀರ್ಷಿಕೆ ...
    ನನ್ನ ಆತ್ಮ ಸಂಗಾತಿ - ಪುಸ್ತಕ
**************************

ಪುಸ್ತಕಗಳ ಸಂಬಂಧ
ಮಸ್ತಕಕೆ ಅನುಬಂಧ
ಜ್ಞಾನ ದಾಹವ ತಣಿಸೋ
ಅಮೃತ ಕಲಶವೇ ಪುಸ್ತಕ

ಬಾಳಿಗೆ ಒಡನಾಡಿಯಿದು
ನೋವು.ದುಃಖವ ಮರೆಸಿ
ನಿತ್ಯ ರಸದೌತಣವೀವ
ಆತ್ಮ ಸಂಗಾತಿ ಪುಸ್ತಕ

ಅರಿವಿನ ಹರಿವು ನಿತ್ಯ
ಮೌಢ್ಯ ಹರಿಸುತ ಸತ್ಯ
ಜ್ಞಾನ.ಸೆಲೆಯ ಮೂಲ
ಅಜ್ಞಾನದ ತೆರೆ ನಿರ್ಮೂಲ

ನೋವು ನಲಿವಿಗೆ ಗೆಳೆಯ
ತುಂಬುತ ಸದಾಶಯ
ತಿಳಿಸುತ್ತ  ಅಕ್ಕರದ ತಿಳುಹು
ಹೊತ್ತಿಗೆಯ ಮಹತ್ವದರಿವು

ಇರಲೆಲ್ಲರಿಗೂ ಪುಸ್ತಕ ಜ್ಞಾನ
ತೊಡೆಯುತ್ತ ಮೌಢ್ಯ ಅಜ್ಞಾನ
ಮೂಡಲಿ ಸಾಹಿತ್ಯ ಜಿಜ್ಞಾಸೆ
ಅದುವೇ ಜ್ಞಾನದ ಪರಿಭಾಷೆ

             ಶೈಲೂ....
[26/04 7:23 pm] drbnshylaramesh: ಹೇಳಲಿ ಹೇಗೆ.?
*************

ಹೇಳಲಿದೆ ಬೇಕಾದಷ್ಟು
ಹೇಳಲಾರದ ಬಿಕ್ಕಟ್ಟು
ಹೇಳಲೆಂತು ಮನದ ಮಾತು
ಹೇಳೆ ನೋವಾದರೆಂತು?

ಹೇಳುವಾಸೆ ಎಲ್ಲ ನಿನಗೆ
ಹೇಳಿದರೆ ಹೇಗೋ ನಿನ್ನ ಬಗೆ
ಹೇಳದೇನೋ ತಳಮಳ
ಹೇಳಲೆಂತರಿಯಲಿ ನಿನ್ನೊಡಲ

ಹೇಳೆಂದರೂ ನಾ ಹೇಳಲೇನು?
ಹೇಳದಿರೆ ತಪನ ಬಲ್ಲೆಯೇನು.?
ಹೇಳದೆಯೂ ನೀನರಿಯಬೇಕು
ಹೇಳಿ ಕೇಳೇಕೆ ತಿಳಿಯಬೇಕು?

ಹೇಳಿ ಬಂದೆಯೇನು ಒಳಗೆ
ಹೇಳದೇ ಹೋದ್ದದ್ದೇಕೆ ಹೊರಗೆ
ಹೇಳಲಿಲ್ಲವೇನೂ ವಿಷಯ?
ಹೇಳೆ ಸಂತಸ ನೀ ಬಲ್ಲೆಯಾ

ಹೇಳಲೇನು ಮನದ ಮಾತ
ಹೇಳಲ್ಹೇಗೆ ಕಾರಣವಿಲ್ಲದೆ ಖಚಿತ
ಹೇಳಬೇಕೆಂದರೂ ಬರಲೊಲ್ಲದು
ಹೇಳಿದ್ಯಾತರ ಗೊಂದಲ ಮನದ್ದು

            ಶೈಲೂ.....
[27/4/2019, 4:00 pm] Dr. B. N. Shylaja Ramesh: ಅದೇನಿಂತು ನಾಚಿಕೆ ಗೆಳತಿ
ನೀ.ಸೌಂದರ್ಯದ ಒಡತಿ
ಮುಚ್ಚಿದ್ದೇಕೆ ಅರೆಬರೆ ಕಣ್ಣು
ನೀನೊಂದುಸವಿಯಾದ ಹಣ್ಣು

ಆಹಾ ಕೆಂಪಿನ ಚಂದದ ತುಟಿ
ಅಡಗಿದ್ದೇಕಲ್ಲಿ ದಾಳಿಂಬೆ ಕಾಳು
ಸೇಬನ್ನೂ ನಾಚಿಸುವ ಕದಪು
ಹೆಣ್ಣೇ ಏಕಿಂತು ವೈಯ್ಯಾರ ಒನಪು

ಕಾಮನ ಬಿಲ್ಲಂತೆ ತೀಡಿದ ಹುಬ್ಬು
ಚಂದ್ರಕಾಂತಿಯೂ ನಿನ್ನೆದುರು ಮಬ್ಬು
ಅರೆಬಿರಿದ ತುಟಿಯ ಮಾಸದ ನಗು
ಮರೆಯಲಾರೆ ಗೆಳತಿ ಸದಾನಿನ್ನದೆ ಗುಂಗು

ಮೇಘಮಾಲೆಯೇನು ನಿನ್ನ ಹೆರಳು
ತೂಗಾಡುವ ಚೂಪು ಮುಂಗುರುಳು
ಆಹಾ ಅದೇನಂತ ನಾಚಿಕದದ್ಭುತ
ನಸು ನಾಚಿಕೆಯಲೇ ಇತ್ತೆಯೇನು ಸಮ್ಮತ

ಮಲ್ಲೆ ಮುಡಿದ ಮನಸೆಳೆದ ನಲ್ಲೆ
ನೀನಾರ ಕುಂಚದ ಕಲೆಯ ಬಲೆ
ಮನಸೆಳೆಯಲೇ ಕಡೆದನೇನು ಚತುರ
ಸೆರೆಯಾದೆ ನಾ ನಿನ್ನೊಲವೇ ಮಧುರ

          ಶೈಲೂ.....
[27/4/2019, 9:29 pm] Dr. B. N. Shylaja Ramesh: ದ್ರೋಣ
*******

ಅಂಬಾರಿ ಹೊರುವ ದ್ರೋಣ
ಪಾಪ ತೊರೆದುಬಿಟ್ಟ ಪ್ರಾಣ
ಭಾರೀ ಆಕಾರ ಧೀರ ಗಂಭೀರ
ಭುವನೇಶ್ವರಿಗೆ ಸೇವೆಯಿತ್ತಿದ್ದ ಅಪಾರ

ದಸರಾ ದಿಬ್ಬಣದ ಮುಖ್ಯಸ್ಥ
ಚಂದಾಲಂಕಾರ ಸಾಲಂಕೃತ
ಶಿಸ್ತಿನ ಸಿಪಾಯಿ ಮೆರವಣಿಗೆ
ನಿನ್ನಿಂದಲೇ ಮೆರುಗು ಅಂಬಾರಿಗೆ

ಅದೆಷ್ಟು ಹೊತ್ತು ಮೆರೆದಿದ್ದೆ ಭಾರ
ಸಾವಿರಾರು ಕಿಲೋ  ಬೆಳ್ಳಿ ಬಂಗಾರ
ಭಾರದಬ್ಬರಕೆ ಹೇಳು ಆಯಾಸವಾಯ್ತೆ
ಮಾಗಿ ಬಾಗಿದ ಜೀವಕೆ ವಯಸ್ಸಾಯ್ತೆ

ನಾಗರಹೊಳೆ ಅರಣ್ಯದ ದೊರೆ
ಇಳಿಸಿದೆ ಭೂಮಿ ಋಣದ ಹೊರೆ
ಗಜರಾಜ ನಿನಗಿದೋ ಅಶ್ರುತರ್ಪಣ
ದಸರ ಸಂಭ್ರಮವಿನ್ನು ಭಣ ಭಣ

          ಶೈಲೂ.....
[30/4/2019, 9:32 am] Dr. B. N. Shylaja Ramesh: #ಏತಕೆ_ಹೀಗೆ

ಮಾತಿನಲಿ ಮೌನದಲಿ
ನೀನಿರುವೆ ಎಂದಾಗ
ಮಾತನಾಡಿದರೇನು?
ಮೌನವಾಗಿರಲೇನು?

ಹಗಲಲಿ ಇರುಳಲಿ
ನಿನ್ನನೇ ನೆನೆವಾಗ
ಬೆಳಕು ಇರಲೇನು?
ಕತ್ತಲಾದರೆ ಏನು?

ನೋವಲಿ ನಲಿವಲಿ
ನಿನ್ನ ಕಾಣುತಲಿರಲು
ಕಂಬನಿಯು ಏಕೆ?
ನಗೆ ಅರಳಲೇಕೆ?

ಸೋಲಲಿ ಗೆಲುವಲಿ
ನೀ ಜೊತೆಯಲಿರಲು
ಸೋಲಲಂಜಿಕೆ ಏಕೆ?
ಗೆಲುವ ಸಂಭ್ರಮವೇಕೆ?

ಒಳಿತಿಗೂ ಕೆಡುಕಿಗೂ
ಒಡೆಯ ನೀನಾಗಿರಲು
ಸುಳಿವ ಅಹಮಿಕೆ ಏಕೆ?
ಕೊಲುವ ರೋಷವದೇಕೆ?

ಎಲ್ಲವೂ ನೀನಾಗಿರಲು
ಎಲ್ಲರಲೂ ನೀನಿರಲು
ಎಲ್ಲೆಡೆಯೂ ನೆಲೆಸಿರಲು
ಹುಡುಕಾಟವು ಅದೇಕೆ?

–ಟಿ.ಕೆ.ವಾಣಿ
[30/4/2019, 10:56 am] Dr. B. N. Shylaja Ramesh: ಶ್ರೀನಾರಸಿಂಹ ನಮಾಮಿ
*********************

ಸ್ಮರಣೆ ಮಾತ್ರದಲೇ ದೇವ
ಬಂದು ಹರಸುತ  ಕಾವ
ಕ್ಷಣಮಾತ್ರದಲೇ ನೋವ
ದಹಿಸಿ ಮುಕ್ತಿಯನೀವ

ಕಂಬದಿಂದುಧ್ಭವಿಸಿ
ಭಕ್ತ ಕಂದನ ಹರಸಿ
ದುರುಳ ರಕ್ಕಸನ ತರಿದು
ಬಂದೆ ನರಹರಿ ಇಂದು

ಮೋಕ್ಷ ಫಲಗಳ ಕೊಡುವ
ಕಲ್ಪತರು ನೀನು
ಜನ್ಮ ಸಫಲವಗೈದು
ಫಲವೀವ ಕಾಮಧೇನು

ಇಹಪರಕೆ ನೀನೇ ಗತಿ
ನೀ ಎನ್ನ ಪ್ರಿಯ ಬಂಧು
ಹರಿಸಿ ಸಂಕಟಗಳನ್ನು
ಕಾಯೋ ಎನ್ನ  ಬಳಿ ಬಂದು

ಉಗ್ರನಾದರೆ  ಏನು
ನೀ ವ್ಯಾಘ್ರನಾದರೂ  ಏನು
ದುರಿತರಾಶಿಯ ತರಿದು
ಪೊರೆವ ನಿನ್ನಾಂತರ್ಯ ಸವಿಜೇನು

ರೂಪವಾದರೂ  ಘೋರ
ಮನವುಕರುಣರಸ ಸಾಗರ
ಪಿತನಂತೆ ಬಂದೆ ಉದಿಸಿ
ಶ್ರೀ ನಾರಸಿಂಹನೆಂದೆನಿಸಿ.

🙏🙏🙏🙏🙏🙏🙏🙏
       ಶೈಲೂ.....

ಶೋಭನಾದ್ರಿ ನಿವಾಸಾಯ
ಶೋಭಿತಾರ್ಥ ಪ್ರದಾಯಿನೇ
ರಾಜಲಕ್ಷ್ಮೀ ಸಮೇತಾಯ
ಶ್ರೀ ನಾರಸಿಂಹಾಯ  ಮಂಗಳಂ
[30/4/2019, 9:23 pm] Dr. B. N. Shylaja Ramesh: ಮನದ  ಮಾತು
*************

ಮನವು ಹೇಳುತಿದೆ
ಮನದೊಳಗಿನ ಮಾತು
ಮನವಿರಿಸಿ ಕೇಳಿದರೆ
ಮನವರಿಕೆಯಾದೀತು

ಮನದ ಮಾತಿದು ಕೇಳು
ಮನವನಾವರಿಸಿರುವೆ ನೀನು
ಮನ ಮತ್ತೆ.ಹೇಳುತಿದೆ
ಮನದೊಡೆಯ ನೀನು

ಮನದ ಭಿತ್ತಿಯೊಳಗೆ
ಮನಸಿಟ್ಟು ನೆಟ್ಟ ಚಿತ್ರ
ಮನಮುಟ್ಟುವಂತಿದೆ
ಮನದನ್ನ ನೀ ಕೇಳು

ಮನವೇಕಿಲ್ಲ ನಿನಗೆ.?
ಮನದ ಮಾತು ಕೇಳಲು
ಮನಸು ಮಾಡೆನ್ನ ಚೆನ್ನ
ಮನವನರಿತು ನೋಡು

ಮನದೊಳಗೆ ಮುಳುಗಿಹುದು
ಮನಸ್ಸೆಂಬ ಸ್ವಾತಿಮುತ್ತು
ಮನವಿತ್ತು  ಚಿತ್ತೈಸು
ಮನಸದು ನಿನ್ನದೇ ಸ್ವತ್ತು

            ಶೈಲೂ......
[1/5/2019, 12:32 pm] Dr. B. N. Shylaja Ramesh: ಕಾರ್ಮಿಕ ದಿನಾಚರಣೆ
*******************

ಬಂಡವಾಳಶಾಹಿಗಳ ಹಿಡಿತದಲಿ
ದುಡಿವ ವರ್ಗವಿದು ನಿತ್ಯ ನರಳುತಲಿ
ಶೋಷಣೆಗೆ ಒಳಪಟ್ಟ ಶ್ರಮಿಕವರ್ಗ
ಸಿಡಿದು ನಿಂತಾಗ ಆಯ್ತು ಕಾರ್ಮಿಕ ಪರ್ವ

ಅನಿರ್ದಿಷ್ಟ ಅವಧಿಯ ದುಡಿತದ ಶ್ರಮ
ಶ್ರೀಮಂತರಿಗಾಗಿಯೇ ದುಡಿವ ಕರ್ಮ
ನಿರಂತರ ಶೋಷಣೆಯ ವಿರುದ್ಧ ಹೋರಾಟ
ಫಲನೀಡಿತ್ತು 8 ಗಂಟೆಗಳ ದುಡಿತದ ಹಠ

ಸರ್ಕಾರದ ಸ್ವಾಮ್ಯದಡಿಯ ಸಂಘಟಿತರು
ಖಾಸಗಿಉದ್ದಿಮೆಗಳಲಿ ದುಡಿವ ಅಸಂಘಟಿತರು
ನಿರ್ಧಿಷ್ಟ ಕೂಲಿಯದು ಗಗನ ಕುಸುಮ
ದಿನಗೂಲಿ ಲೆಕ್ಕದಲೂ ದುಡಿಮೆ ಅಸಮ

ಶೋಷಣೆಯಲೇ ಬದುಕುತ್ತಿರುವ ಕಾರ್ಮಿಕ ಸಂತ
ಅವರ ದುಡಿಮೆಯಲ್ಲಿ ದುಪ್ಪಟ್ಟಾದ ಶ್ರೀಮಂತ
ದುಡಿವವರು ದುಡಿದು ದುಡಿದೂ ಸೋಲು
ಶ್ರಮವಿತ್ತರೂ ಕೊನೆಗೆ ಹಸನಾಗಲಿಲ್ಲ ಬಾಳು

ಇರಬೇಕು ಕಾರ್ಮಿಕರಲಿ ಐಕ್ಯತೆಯ ಮಂತ್ರ
ಶ್ರಮಿಕರಿಗೆ ನೆರವಾಯ್ತು ಒಕ್ಕೂಟ ಸೂತ್ರ
ಬಂಡವಾಳಶಾಹಿ ವಿರುದ್ಧ ಕೂಗು ಹೋರಾಟ
ಕಾರ್ಮಿಕ ದಿನಾಚರಣೆ ಎಂಬ ಆವಿಷ್ಕಾರ

ದುಡಿದು ದುಡಿದೂ ಬಸವಳಿದ ಕಾರ್ಮಿಕ
ಇಂದೊಂದು ದಿನವಾದರೂ ವಿಶ್ರಾಂತಿ ಕಾಯಕ
ಅಮರವಾಗಲಿ ನಿಮ್ಮ ದುಡಿತದ ಫಲದ ಗದ್ದುಗೆ
ಜಯವಾಗಲೀ ಕಾರ್ಮಿಕ ದಿನಾಚರಣೆಯ ಹಾದಿಗೆ

                ಶೈಲೂ.....
[1/5/2019, 7:32 pm] Dr. B. N. Shylaja Ramesh: ಏನೊ ಗುಂಗದು...!
__________________________________

ಏನೊ ಗುಂಗದು, ಯಾಕೊ ದೂರ ಹೋಗದು
ಕಾಡೊ ಪರಿಯದು, ಮಾತಲಿ ಹೇಳಲಾಗದು
ದಡದತ್ತ ಮರಳುತ್ತ, ಸಾಗರದ ಅಲೆಗಳು
ಹಿಂದಕ್ಕೆ ತೆರಳುತ್ತ, ಬಿಟ್ಟು ಹೋದ ಕಲೆಗಳು || ಏನೊ ||

ಹೆಸರೇನಿಡಲಿ ಹೇಳು, ಕಾಡುವದೆ ಗುಂಗಿಗೆ
ನಿಯಮಿತದೆ ಆಗಮಿಸೊ, ಅತಿಥಿಯ ಹಾಗೆ
ಇರಲೆಷ್ಟು ಕಾಲ, ದಡದೆ ಬಂಡೆಯ ತರಹ
ಕೊರೆಕೊರೆದು ಸತತ, ನುಣುಪಾಗಿ ವಿರಹ || ಏನೊ ||

ತಂದೊಟ್ಟಿವೆ ಅಲೆಗಳು, ಕಪ್ಪೆಚಿಪ್ಪು ಶಂಖ
ನುಣುಪಿಹ ಕಲ್ಲುಗಳ, ರಾಶಿಯಲು ಪುಳಕ
ಪ್ರತಿಯೊಂದರಲ್ಲು, ಕೊರೆದಿಟ್ಟ ಕವಿತೆಗಳು
ಸಾರಿ ಹೇಳುತಿವೆ, ಆ ದಿನಗಳಾ ಕಥನಗಳು || ಏನೊ ||

ಅಲ್ಲಿಲ್ಲೊಂದು ಸ್ವಾತಿ, ಮುತ್ತೆನಿಸೊ ಹರಳು
ನೆನಪಿಸುತ ನಡಿಗೆ, ಜೊತೆ ಬೆಸೆದಿತ್ತ ಬೆರಳು 
ಗಾಳಿಯಲೆಯಲೆಯಾಗಿ, ತೇಲುದ್ದ ಕುರುಳು
ಬೆವರ ಬೇಗೆಯ ಮರೆಸಿ, ನಕ್ಕವದೆ ಕಂಗಳು || ಏನೊ ||

ಗುಂಗಿನ್ನು ಹೊಸತು, ಹೊರಗೆ ಬರದೆ ಸ್ಮೃತಿ
ನಿನ್ನೆ ಮೊನ್ನೆ ತಾನೆ, ನಡೆದ ಹಾಗಿದೆ ವಿಸ್ಮೃತಿ
ಕೃತಿಯದೇನೊ ಚಳಕ, ಬರೆದ ಪುಟ ಜಳಕ
ವಿಕೃತಿಯಿಲ್ಲದ ಪುಳಕ, ನೆನೆದಷ್ಟು ಭಾವುಕ || ಏನೊ ||

- ನಾಗೇಶ ಮೈಸೂರು
೦೧.೦೫.೨೦೧೯

(Picture source: internet / social media)
[1/5/2019, 7:36 pm] Dr. B. N. Shylaja Ramesh: ಏನಿದು ಬೆರಗು ಅದರದೇ ಗುಂಗು
ಮನವನು ಕಾಡುತ ನಾಚಿಸೋ ಸೊಬಗು
ಮರೆಯಲೂ ಆಗದ
[2/5/2019, 7:19 pm] Dr. B. N. Shylaja Ramesh: ಕಿಟಕಿಬಳಿ ನಿಂತವಳನ್ನು
ಮುದ್ದಿಸಿದನೇನು ಭಾನು.?
ಸುಳಿದು ಕಿಂಡಿ ಕಿಂಡಿಯಲಿ
ಬರಸೆಳೆದು ಅಪ್ಪಿದನೇನು.?

ಆಗಿರಬೇಕು ಪ್ರಣಯದಾಸೆ
ದಂತದ ಗೊಂಬೆಯ ಕಂಡು
ಇಣುಕಿಣುಕಿ ನೋಡುತಿರುವ
ಚಂದದ ಪರಿಯ ಕಂಡು

ಬೆಚ್ಚಿದ್ದಳಂದು  ಸಂಜ್ನ್ಯಾ
ಪ್ರಖರ ಶಾಖವ ಕಂಡು
ಬೇಸರವಾಗಿರಬೇಕು ಪಾಪ
ಬರಿದೇ ಛಾಯೆಯನುಂಡು

ಎಳೆ ಬಿಸಿಲ ಶಾಖಕೆ ಮೈಯೊಡ್ಡಿ
ನಿಂತ ವೈಯ್ಯಾರಿಯ  ಸ್ಪರ್ಶಕೆ
ಭಾಸ್ಕರ ನೇ ಬಿಸಿ ಬಿಸಿಯಾಗಿ
ಬೆವರಾಗಿ ಸುರಿದು ಸರಿದ ನೇಪಥ್ಯಕೆ
       ಶೈಲೂ...
[2/5/2019, 7:35 pm] Dr. B. N. Shylaja Ramesh: ಬೇಡ ಕೃಷ್ಣ , ಮೋಸದಾಟ !
________________________________

ಕರವ ಕೊಡದೆ, ಕೊಳಲ ಕೊಡುವೆ
ಸರಿಯೇನೀ ಮೋಸ ಮಾಧವ ?
ಈ ಪ್ರೇಮದವಳ, ಕಡೆಗಣಿಸುತಲೆ
ನಿನ್ನವನೆನ್ನುವೆ ಸರಿಯೆ ಯಾಧವ? ||

ನನಗಿಷ್ಟು ನುಡಿಸಿದೆ, ಸರಿಯೆ ನೀತಿ
ನುಡಿಸಿ ಗೋಪಾಲ, ಎಲ್ಲ ಗೋವಲ್ಲಿ
ಗೋಪಿಕೆ ಎಲ್ಲಗು, ಪಾಲಿತ್ತೆ ಗೋವಿಂದ
ಮತ್ತೆ ನನ್ನದೆನ್ನೊ, ಪರಿಹಾಸ ಬಿಡೆಯಾ ? ||

ಕೊಡುವಂತಿದ್ದರೆ ಕೊಡು, ಕರಕೆ ಕರ
ವರವಾಗಲದು, ಬದುಕಿನ ಸಹಚರ
ಅದು ಬಿಟ್ಟೇನಿ, ಪರಿಪರಿ ಉಪಚಾರ ?
ಮಾತಿನ ಮಲ್ಲ, ಮಾಡೆಲ್ಲ ಉಪಸಂಹಾರ ! ||

ಬೇಡೆನಗೆ ಬಿಡು, ಅಷ್ಟ ಮಹಿಷಿ ಪಟ್ಟ
ಕಾಡುತಿರು ಸಾಕು, ಬದುಕಿನ ಪೂರ್ತ
ದಾಸಿ ಅರಸಿ ಸರಿ, ನೀನಿಟ್ಟಂತಿರುವೆ
ಕೈಬಿಡುವ ಮಾತ, ಬಿಡಲೆನ್ನನ್ನರ್ಪಿಸುವೆ ! ||

ನೀ ಬಲ್ಲೆ ಸಂದಿಗ್ಧ, ರಾಧೆ ನೀನಲ್ಲ ಮುಗ್ದೆ
ಹೋಗಲೆ ಬೇಕಿದೆ ಕಾದಿದೆ, ಕರ್ಮದ ಹುದ್ಧೆ
ತೆರಳೊ ಮುನ್ನ ತ್ಯಜಿಸಿದ, ಮುರಳಿ ನಿನಗಷ್ಟೆ !
ಮತ್ತೆಂದೂ ಬಾರಿಸೆ, ನಿನಗರ್ಪಿತ - ಕೈಬಿಡು ಮತ್ತೆ ||

- ನಾಗೇಶ ಮೈಸೂರು
೦೨.೦೫.೨೦೧೯

(Picture source: Internet / social media received via Shashirekha Davanageri - thank you madam! 🙏😊👍)
[2/5/2019, 7:48 pm] Dr. B. N. Shylaja Ramesh: ತೊರೆದು ಹೋಗದಿರು ಮಾಧವಾ
ಹಿಡಿದಿಟ್ಟಿರುವೆ ನಿನ್ನಲೇ ಜೀವಾ
ಈ ರಾಧೆಯ ಕಡೆಗಣಿಸಲೇಕೆ
ನೀನಿಲ್ಲದಿರೆ ..ಸಾಕು ಈ ಬದುಕೇತಕೆ?

ಕರವ ಪಿಡಿದರೇಕೆ ಕೊಳಲ ಕೊಡುವೆ
ಬಿಡದೆ ಕರದೊಳಗೆನ್ನ ಕರವನಿಡುವೆ
ನುಡಿಸು ಮುರಳೀಗಾನ ತುಂಬಿ ಪ್ರೀತಿ
ಮರೆವೆ ಜಗವನೇ ಏನಿಲ್ಲ ಭೀತಿ

ಬಯಕೆ ಇಲ್ಲೆನಗೆ
[3/5/2019, 9:32 am] Dr. B. N. Shylaja Ramesh: ಮಾತಿನ ಮಲ್ಲನ ಮೌನ ಮೆರವಣಿಗೆ
ಬಾಳ ಪುಟರ ಕೊನೆ ಹಾಳೆಯ ವರೆಗೆ
ನಾಟಕ ಪರದೆಯ ಅಂಕವು ಜಾರಿ
ಜೀವನ್ನಾಟಕ ಮುಗಿಸಿದ ಸೂತ್ರಧಾರಿ

ಕರುನಾಡ ಕಣ್ಮಣಿ ನರಸಿಂಹಮೂರ್ತಿ
ರಂಗಭೂಮಿಯಲ್ಲಿ ಗಳಿಸಿದ ಕೀರ್ತಿ
ಬೆಳ್ಳಿತೆರೆಗೂ ಹಬ್ಬಿತು ಅದಮ್ಯ." ವಾಣಿ "
ಕಂಚಿನ ಕಂಠದ  ನಿರರ್ಗಳ ವಾಣಿ

ನಟರತ್ನಾಕರನ  ನಟನೆ ಅಪಾರ
ಹೆಸರು ಗಳಿಸಿದ್ದು ಲಂಚಾವತಾರ
ರಾಜಕೀಯದ ಹೊಲಸ ಬಿಚ್ಚಿದ ಧೀರ
ಯಾರಿಗೂ ಹೆದರದ ಕೆಚ್ಚೆದೆಗಾರ

ಸಾಮಾಜಿಕ ಕಾಳಜಿಯ  ಕಳಕಳಿ
ಭ್ರಷ್ಟತೆಯ ಅನಾವರಣ ಮಾಡಿದ ಪುತ್ಥಳಿ
ಮೊನಚು ಮಾತಲ್ಲೇ ಜನಜಾಗೃತಿಯ ಅನಾವರಣ
ಸಹಿಸದನೇಕ ಮಂದಿಯ ಹಗೆ ವಿನಾಕಾರಣ

ಹಿರಣ್ಣಯ್ಯ ಮಿತ್ರಮಂಡಲಿಯ  ರೂವಾರಿ
ನಟ ರತ್ನಾಕರ ಬಿರುದಾಂಕಿತ ಪಾತ್ರಧಾರಿ
ಹಾಸ್ಯ ವಿಡಂಬನೆಯಲೇ ಚಾಟಿ ಏಟಿತ್ತ ನಾಜೂಕಯ್ಯ
ನಟನೆಯ ದೈತ್ಯ ಪ್ರತಿಭೆ ನೀ ಮಹಾರಾಯ

ಹೊರಟು ಬಿಟ್ಟಿರೇಕೆ ಭೂಮಿಯನು ತೊರೆದು
ರಂಗಭೂಮಿಯಲಿ ಸಾರ್ವಭೌಮಿಕೆ ಮೆರೆದು
ಇನ್ನಾರಿಹರು ನಿಮ್ಮಂಥ ಧೀಮಂತ ವ್ಯಕ್ತಿ
ಭ್ರಷ್ಟತೆಯ ಎಳೆಎಳೆಯಾಗಿ ಬಿಚ್ಚಿಡುವ ಅಭಿವ್ಯಕ್ತಿ


           ಶೈಲೂ.....
[3/5/2019, 11:25 am] Dr. B. N. Shylaja Ramesh: ಪದಪಿದ್ಯೋತ್ಸವ##

★★ ರಂಗೋಲಿ ★★
******************

ಅಂಗಳಕೆ ಶೋಭೆ ಅಂದದ ರಂಗೋಲಿ
ಶುಭವ ಸೂಸುವ ಚಿತ್ತಾರ ಬಾಗಿಲ ಬಳಿಯಲ್ಲಿ
ಬಿಳಿಪುಡಿಯ ಎಳೆ ಎಳೆಯು ಹೊಸ್ತಿಲ ಮೇಲೆ
ನಡುವೆ ಕೆಂಪಿನ ಗೆರೆಯು ರಂಗೋಲಿ ಮಡಿಲಲ್ಲೇ

ಸಂಪ್ರದಾಯದ ಸಿರಿಯು ಮನೆಗೆ ಭೂಷಣ
ಗೃಹಿಣಿಯರ ಕೌಶಲ್ಯದನಾವರಣ
ವೃ0ದಾವನಡೆದುರು ಶಂಕುಚಕ್ರಗಧಾಪದ್ಮ
ದೇವನಿರುವೆಡೆಯಲ್ಲಿ  ಶುಭಕರ ಗೋಪದ್ಮ

ಶ್ರೀರಂಗ ನಿಗೆ  ಅತಿಪ್ರಿಯ ರಂಗೋಲಿ
ಬಣ್ಣದ ನವಾವರಣ ತುಂಬಿ ಅದರಲ್ಲಿ
ಒಂದೊಂದು ದೈವಕೊಂದೊಂದು ತೆರನಾಗಿ
ವಾಂಛಿತ ಫಲವೀವ ದೈವಿಕ ರಂಗವಲ್ಲಿ

ಎಳೆಎಳೆಯ ಸರಳ  ಗೆರೆಗಳುಂಟು
ಚಿಕ್ಕುಗಳ ಚಿತ್ತಾರವಿಹುದು ಬ್ರಹ್ಮಗಂಟು
ವಿವಿಧ ವಿನ್ಯಾಸ ಆಕಾರ ಸಾಕಾರ
ಕೌಶಲತೆಯ ಕೈಚಳಕದ ಕಲಾಹಂದರ

ನಮ್ಮ ಸಂಸ್ಕೃತಿಯ ಪ್ರತೀಕ ರಂಗೋಲಿ
ಭಕ್ತಿ ಭಾವ ಕೌಶಲ ಮಿಳಿತ ಅದರಲ್ಲಿ
ರಾರಾಜಿಸುತಿರೇ ಮನೆಯ ಮುಂದೆ
ಶುಭಸಮಾರಂಭ ಇಹುದು ಎಂದೇ

ಜೀವನವೂ ಇಹುದು ರಂಗೋಲಿಯಂತೆ
ಬಿಡಿಸದಿದ್ದರೆ ಮನೆಮನ ಸೂತಕಛಾಯೆಯಂತೆ
ತಪ್ಪಿದ ಚುಕ್ಕಿಗಳಲ್ಲಿ ವಿನ್ಯಾಸ ಅಪೂರ್ಣ
ಹದವರಿತು ಬಿಡಿಸಿದರೆ ಬಾಳು ಸಂಪೂರ್ಣ

          ಶೈಲೂ.....

[3/5/2019, 4:02 pm] Dr. B. N. Shylaja Ramesh: ಕಣ್ಮುಚ್ಚಿ ಹಾಲ ಕುಡಿದಾ ಬೆಕ್ಕು
____________________________

ಚೆನ್ನೆ ನಿನ್ನ ಕೆನ್ನೆ ಮೇಲೆ
ಏನೊ ಕೂತ ಹಾಗಿದೆ
ನಿಲ್ಲೆ ಗಳಿಗೆ ಅಲ್ಲಾಡದೆಲೆ
ನೋಡಿಬಿಡುವೆ ಹತ್ತಿರದೆ ||

ಬಿಟ್ಟು ನೆಪವ ಸರಿ ದೂರಕ್ಕೆ
ನಿನ್ನಾಟದ ಪರಿ ಗೊತ್ತಿದೆ !
ನೋಡೊ ನೆಪದೆ ಮುತ್ತ ಕದ್ದು
ಓಡುವಾಟ ಇನ್ನು ನಡೆಯದೆ ! ||

ದೇವರಾಣೆ ಚಪಲಕಲ್ಲವೆ
ಈ ಬಾರಿ ನಿಜ ಏನೊ ಕೂತಿದೆ
ಕೆಂದಾವರೆ ಮೊಗದ ಮೇಲೆ
ಗುರುತಾದರೆ ಚಂದ ಕಾಣದೆ ! ||

ಮೊಡವೆ ವಯಸಿನ ನಗವೊ
ಒಡವೆಯಂತೆ ಇರಲಿ ಬಿಡೊ
ಮುಟ್ಟಿದರೆ ಮನೆಹಾಳಾಗಿಸೊ
ಕುಟಿಲ ಕೆಡುಕ ಮುಟ್ಟದಿರೊ ||

ನೋಡಿಬಿಡುವೆ ಒಂದೇ ಬಾರಿ
ದೂರಾಗಲಿ ಅನುಮಾನ ಬಿಡೆ
ಕಣ್ಣುಮುಚ್ಚಿ ಸುಮ್ಮ ನಿಲ್ಲರೆಗಳಿಗೆ
ನೋಡಿ ತೀರ್ಪ ನೀಡಿ ಬಿಡುವೆ ||

ತಪ್ಪಬಾರದು ಆಡಿದ ಮಾತು
ಮಾಡಬಾರದು ಮೋಸ ಕಣೊ
ದೂರದಿಂದಲೆ ನೋಡಿ ತುಸುವೆ
ಅಲ್ಲಿ ಕೂತದ್ದೇನು ಉಸುರಿಬಿಡು ||

ಬಂದ ನಲ್ಲ ಅವಳ ಹತ್ತಿರ ಪಕ್ಕ
ಕಣ್ಣುಮುಚ್ಚಿ ಹಾಲ ಕುಡಿವ ಬೆಕ್ಕು
ಕೆನ್ನೆಗೊಂದು ಸುತ್ತಲು ಮೂರಾರು
ಕೊಟ್ಟರು ಇಲ್ಲ ಇನಿತೂ ತಕರಾರು ||

- ನಾಗೇಶ ಮೈಸೂರು
೦೩.೦೫.೨೦೨೯

(Picture source: internet / social media)
[3/5/2019, 8:29 pm] Dr. B. N. Shylaja Ramesh: ನಾ ಹಾರುವ ಹಕ್ಕಿಯಾಗಿದ್ದರೆ.?
************************

ಬಾನಲ್ಲಿ ಹಾರಾಡುವ 
ಹಕ್ಕಿ ನಾನಾಗಿದ್ದರೆ
ಆಹಾ ಅದೆಷ್ಟು ಚಂದವಿರುತಿತ್ತು
ಬೀಗಿಸುತ್ತಾ ಕೊಕ್ಕು
ಹಾರಿಸುತ್ತಾ ರೆಕ್ಕೆ
ಭೂಮಂಡಲವನ್ನೆಲ್ಲ ಸುತ್ತಬಹುದಿತ್ತು

ಹಾಗೇ ತೇಲುತ್ತ ತೇಲುತ್ತ
ಗಗನಡೆದೆಗೆ ಹಾರುತ್ತ
ಬೆಳ್ಮುಗಿಲಮೇಲೆ ಕೂರಬಹುದತ್ತು
ಕಟ್ಟಿದ್ದ ಕಾರ್ಮುಗಿಲ
ಕೊಕ್ಕಿನಿಂದ ಕುಕ್ಕುತ್ತಾ
ಧರೆಯೆಡೆಗೆ ಮಳೆಯ ಸುರಿಸಬಹುದಿತ್ತು

ಖಗವಾಗಿ ಗೆಲುವಾಗಿ
ದೇವಲೋಕದೆಡೆಹೋಗಿ
ಮಾಧವನನ್ನೊಮ್ಮೆ ನೋಡಬಹುದಿತ್ತು
ಮೃದುವಾಗಿ ತಲೆಬಾಗಿ
ಭಕ್ತಿಯಿಂದ ಬೇಡಿ
ಹೆಗಲಮೇಲವನ ಮೆರೆಸಬಹುದಿತ್ತು

ಕಪ್ಪಾದರೇನಂತೆ
ಕೋಗಿಲೆ ನಾನಾಗಿ
ಇಂಪಾಗಿ ಹಾಡನ್ನ ಹಾಡಬಹುದಿತ್ತು
ಹಸಿರುಡುಗೆಯನ್ನುಟ್ಟು
ಕೆಂಪು ಕೊಕ್ಕಲಿ ಕುಕ್ಕಿ
ರುಚಿಯಾದ ಹಣ್ಣನ್ನು ಸವಿಯಬಹುದಿತ್ತು

ಬಣ್ಣಬಣ್ಣದ ಗರಿಯ
ಹೊತ್ತ ನವಿಲಾಗಿದ್ದರೆ
ಕೃಷ್ಣನ ಮುಡಿಯೇರಿ ನಲಿಯಬಹುದಿತ್ತು
ಆಡುತ್ತ ಕುಣಿಯುತ್ತ
ಮನವನ್ನು ತಣಿಸುತ್ತ
ನನ್ನವನೋಡನಾಟ ಸವಿಯಬಹುದಿತ್ತು

ಸ್ವಚ್ಛ ಬಿಳಿಯ ಪುಕ್ಕ
ಹೊತ್ತ ಹಂಸನಾನಾಗಿದ್ದರೆ
ಪ್ರೇಮಿಗಳ ಪತ್ರ ತಲುಪಿಸಬಹುದಿತ್ತು
ಸ್ವಚ್ಛ ಹಾಲಿನೊಳಗೆ
ಬೆರೆತ ನೀರನ್ನೊಮ್ಮೆ
ಹಂಸಕ್ಷೀರನ್ಯಾಯ ತೋರಬಹುದಿತ್ತು

            ಶೈಲೂ....
[4/5/2019, 7:37 pm] Dr. B. N. Shylaja Ramesh: ಗತವೈಭವ
*********

ಅಂದು ಬಾಳಿ ಬದುಕಿದ್ದ
ಮನೆಯಿಂದು ಪಾಳು ಗುಡಿ
ಮೆರೆದ ಗತವೈಭವವಿಂದು
ಅಳಿದು ಪಳಯುಳಿಕೆಯಡಿ

ತಲೆ ತಲೆಮಾರುಗಳು ಬದುಕಿ
ಪೋಷಣೆಯಿಲ್ಲದೆ ಕುಸಿಯಿತಿಂದು
ಪರಂಪರಾನುಗತ ಅಂದದಮನೆ
ಕಾಲನವಶಕೆ ಸಿಲುಕಿತಿಂದು

ಅದೆಷ್ಟು ಮಂದಿಗೆ ನೆರಳಿತ್ತಿತ್ತೋ
ಹಸಿದು ಬಂದವರಿಗೆ ತುತ್ತನೀಡಿ
ನಿಷ್ಠೆಯ ಬೆವರ ಹನಿ ಬಸಿದವರಿಗೆ
ಅಸನವಸನವಿತ್ತಿತ್ತು ಪ್ರೀತಿ ಮಾಡಿ

ಅಸರೆಯ ತಂಪಿತ್ತು ಬಾಚಿ ತಬ್ಬಿದ್ದ
ಗುರುಹಿರಿಯರಿದ್ದ  ಅಂದದಂಕಣ
ಹಳೆ ಬೇರು ಹೊಸ ಚಿಗುರು
ಹಬ್ಬಿ ನಕ್ಕಿದ್ದ ಭಾವದನಾವರಣ

ಇತ್ತೊಂದು ಕಾಲದಲಿ ಭರಪೂರ
ಸುವರ್ಣಯುಗದ ಸಂಭ್ರಮದ ಕಾಲ
ತಾತ ಮುತ್ತಾತರಾಳಿ ಬದುಕಿದ್ದ
ಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲ

           ಶೈಲೂ...
[5/5/2019, 1:42 pm] Dr. B. N. Shylaja Ramesh: ಇದು ನನ್ನ ವಧೂಪರಿಕ್ಷೆಯದೆ ಕವಿತೆ

ಅಂದು ನನ್ನವರು ನನ್ನನ್ನು ನೋಡಲು ಬಂದಾಗ ನಡೆದ ಒಂದು ಸುಮಧುರ ಸನ್ನಿವೇಶ😊😊

ನೀ ಬಂದು ನಿಂತಾಗ
*****************
ಅಂದು ಆ ಸಂಜೆಯಲಿ
ನಾನಿನ್ನ ಕಂಡಾಗ
ಮಿಡಿದಿತ್ತು ಮನದಲ್ಲಿ ಭಾವವೀಣೆ
ತಲೆತಗ್ಗಿ ನಿಂತವಳ  ಮುಂದೆ
ನೀ ಬಂದು ನಿಂತು ನಕ್ಕಾಗ
ಕೆನ್ನೆ ಕೆಂಪೇರಿದ್ದು ನಾಚಿ ತಾನೇ

ನಡುಗುತ್ತ ಹಿಡಿದಿದ್ದೆ
ಕಾಫಿಲೋಟದ ತಟ್ಟೆ
ಕಣ್ಣರಸಿ ನಿಂದಿದ್ದು ನಿನ್ನ ಮಾತ್ರ
ಜೊತೆಯಲ್ಲಿ ಬಂದಿದ್ದ
ಅತ್ತೆ ಮಾವರ ಮಾತು
ಕೇಳಿಸದಿದ್ದುದಕಿದೆ ನಿನ್ನ ಪಾತ್ರ

ಹೇಳು ನಾ ನಿನಗಿಷ್ಟವೇ
ಹಿಂದಿನಿಂದ ಬಂದ
ಧ್ವನಿಗೆ ನಾ ಬೆಚ್ಚಿ ಮೆಚ್ಚಿ
ಕಳೆದ ಮನದಲ್ಲೇ
ನವಿಲ ನಾಟ್ಯವ ಕಂಡ
ಮಧುರಭಾವದ  ಅರೆಹುಚ್ಚಿ

ನೀ ಹೊರಟು ನಿಂತಾಗ
ಮನದಲ್ಲಿ ತಳಮಳ
ಕಿಟಕಿ ಕಿಂಡಿಯಲಿ ನೋಡುತ್ತ ನಿಂತೆ
ಕಾತರದ ಕಣ್ಣಿಂದ
ತಿರುತಿರುಗಿ ನೋಡುತ್ತ
ಅರೆಬರೆ ಮನಸ್ಸಿನಿಂದ ನೀನು ಹೊರಟೆ

ಏನೋ ಮರೆತಿದ್ದಂತೆ
ನಟಿಸಿ ಒಳಬಂದಾಗ
ಹುಡುಕುತ್ತಿತ್ತು ಕಣ್ಣು ನನ್ನನರಸಿ
ಕೋಣೆ ಬಾಗಿಲಲಿಣುಕಿ
ಹೋಗಿಬರಲೇ ಎಂದಾಗ
ನಾಚಿ ನಾ ನಿಂತೆ ತಲೆಯಾಡಿಸಿ

ಒಣಗಿದ್ದ ಬಟ್ಟೆಯ
ತರುವ ನೆಪವೊಡ್ಡಿ
ಆತುರದಿ ಹತ್ತಿದ್ದೆ ಮನೆಮಾಳಿಗೆ
ಹಿಂತಿರುಗಿ ನೋಡುತ್ತ
ಕೈಬೀಸಿ ನಡೆದಿದ್ದ
ನಿನ್ನ ಚಿತ್ರ ಅಚ್ಚಾಯ್ತು ಕಣ್ಣೊಳಗೆ

         ಶೈಲೂ.......
[6/5/2019, 12:30 pm] Dr. B. N. Shylaja Ramesh: #ನನ್ನ _ಶೀರ್ಷಿಕೆ

ಮನೆಯ ಕಿಟಕಿಯಾಚೆ ನೋಡಿದೆ ಹಾಗೆ
ಬೆಳಕು ಹರಡಿತ್ತು ಸುತ್ತಲೂ ಹೊರಗೆ

ತಿಳಿಗಾಳಿ ಸುಯ್ಯೆಂದು ಸುಳಿಯಿತೊಳಗೆ
ಮನೆಯಂಗಳದ ಹೂವ ಕಂಪಿನ ಜೊತೆಗೆ

ಚಿಲಿಪಿಲಿ ಹಾಡು ತುಂಬಿತು ಕಿವಿಯೊಳಗೆ
ಚಲನಶೀಲತೆ ಗೋಚರಿಸಿತು ಕಂಗಳಿಗೆ

ಹೊರಗಿಹುದು ಸಂಭ್ರಮ ಸಂರಸ ಹೀಗೆ
ನನ್ನೊಳಗೆ ಏತಕೆ ಈ ಪರಿತಾಪ, ಬೇಗೆ?

ಹುಡುಕಿದೆ, ತಿಣಿಕಿದೆ ಕಾರಣವ ತಿಳಿಯದೆ
ಕ್ಷಣಕಾಲ ಹೊರಜಗಕೆ ನಾ ಕುರುಡಾದೆ

ದೀರ್ಘ ಉಸಿರೆಳೆದು ಧ್ಯ‌ಾನಸ್ಥಳಾದೆ
ಮನದಲೇ ಕಾರಣವ ಕಂಡುಕೊಂಡೆ

ಮನದ ಕಿಟಕಿಯ ಕದವ ತೆರೆದಿಲ್ಲವೆಂದು
ಅದಕಾಗಿ ತಮ ಒಳಗೆ ತುಂಬಿರುವುದೆಂದು

ತಕ್ಷಣವೇ ಗವಾಕ್ಷಿಗಳ ನಾ ತೆರೆದುಬಿಟ್ಟೆ
ಒಳ ಬರುವ ಜ್ಞಾನಕೆ ಎಡೆ ಮಾಡಿಕೊಟ್ಟೆ’

ಮನೆಯ ಕಿಟಕಿ ತೆರೆದರೆ ಹೊರೋಟ ಸುಂದರ
ಮನದ ಕಿಟಕಿ ತೆರೆದರೆ ಬೆಳಕಿನಾಟ ನಿರಂತರ

–ಟಿ.ಕೆ.ವಾಣಿ
[7/5/2019, 1:12 pm] Dr. B. N. Shylaja Ramesh: ಕಾಯಕವೇ ಕೈಲಾಸ
*****************

ಕಾಯಕವೇ ಇಲ್ಲದಿರೆ
ಕೈಲಾಸವೆಲ್ಲಿಯದು.?
ಕೈ ಕೆಸರಾದರೆ ತಾನೇ
ಬಾಯಿಗೆ ಮೊಸರು..!!

ದುಡಿಮೆಯೇ ದೇವರು
ಸುರಿಸಿ ಹರಿಸಿ ಬೆವರು
ನಿಷ್ಠೆಯಿಂದ ದುಡಿದವಗೆ
ಅಷ್ಟೇ.. ಒಳ್ಳೆ ಹೆಸರು..!!

ಮೇಲುಕೀಳಿಲ್ಲ ವೃತ್ತಿಯಲಿ
ಗೌರವಿಸಿ ನಡೆದರದು ಧರ್ಮ
ಅವರವರ ವೃತ್ತಿ ದೇವನಾಣತಿ
ನಿಷ್ಠೆಯಲಿಹನು ಅದುವೇ ಮರ್ಮ 

ಇಂಥ ಸವಿನುಡಿಯನಾಣತಿಯ
ನೀಡಿದರೊಬ್ಬ ಮಹಿಮರು
ಭರತವರ್ಷಕೆ ಕ್ರಾಂತಿ ತಂದ
ಜಗಜ್ಯೋತಿ ಬಸವೇಶ್ವರರು

        ✍ ಶೈಲಜಾ ರಮೇಶ್
ಸಮಯ 1 :11 pm
[7/5/2019, 3:06 pm] Dr. B. N. Shylaja Ramesh: ಜಗಜ್ಯೋತಿ ಬಸವೇಶ್ವರ
*********************

ಕಾಯಕವೇ ಕೈಲಾಸ ದುಡಿದರಿಹುದು ಉಲ್ಲಾಸ
ದುಡಿಮೆಯಲಿಹನು ದೇವರು ಶ್ರದ್ಧೆಯಿಂದ ದುಡಿಯುತಿರು

ದಯೆಯಲಿಹುದು ಧರ್ಮ ಕರುಣೆಯದರ ಮರ್ಮ
ಮೂಢನಂಬಿಕೆಯ ಮೌಢ್ಯ ಅಳಿಸಿ ಬಿಸುಟು ಆಗುನೀ ಪ್ರೌಢ

ಜಾತಿವಿಜಾತಿಯಾವುದಿಹುದು ಜಗಕಿಹುದೊಂದೆ ಜಾತಿ
ಭಕ್ತಿಯ ಬಾಂಡ ದೊಳಗಿಹ ಶಿವಶರಣರಿಗಿಲ್ಲ ಯಾವ ಜಾತಿ

ಭಕ್ತಿ ಚಳುವಳಿಯ ಹರಿಕಾರ ಇಷ್ಟಲಿಂಗವದರಾಧಾರ
ಜಾತಿಬೇಧಗಳಿಗಿತ್ತಿತ್ತು ಕೊನೆ ಅನುಭವ ಮಂಟಪದ ಮಹಾಮನೆ

ಏನಗಿಂತ ಕಿರಿಯರಿಲ್ಲೆಂಬ ಸರಳ ಸಜ್ಜನಿಕೆಯ ಶರಣಾಗತಿ
ಶಿವಶರಣರಿಗಿಂತ ಹಿರಿಯರಿಲ್ಲೆಂಬ ಅನುಭವದ ಮಹಾಮತಿ

ಹಸಿದವರಿಗೆ ಅನ್ನವಿಕ್ಕುವ ಮಹಾ ಅನ್ನದಾನ ದಾಸೋಹ
ಇಷ್ಟಲಿಂಗ ಪೂಜಾಕೈಂಕರ್ಯ ಸಾಕಾರ ಶಿವನಿಗಿಷ್ಟು ಸನಿಹ

ದೇಹವಿದು ದೇಗುಲ ನಿಜಭಕ್ತಿಯಲರ್ಚಿಸಲವನು ಸಲಿಲ
ಮೃದುವಚನವೇ ಮಂತ್ರ ಆ ದೇವನೊಲಿಯುವಿಕೆಯ ತಂತ್ರ

ನೀಡಿ ವಚನಾಮೃತ ವಾಣಿ ಬಸವಣ್ಣ ನೀವಾದಿರೆಲ್ಲರ ಕಣ್ಮಣಿ
ಕ್ರಾಂತಿಯ ಹರಿಕಾರ ನಿಜಗುಣ ಭಕ್ತಿ ಭಂಡಾರಿ ಬಸವಣ್ಣ

ಜಗವ ಬೆಳಗಿದ ಜ್ಯೋತಿ ಮಹಾ ಮಾನವತಾವಾದಿ ಬಸವಣ್ಣ
ದೇವನೊಲಿಯುವ ಪರಿಗಿಹುದು ಶರಣು ಶರಣಾರ್ಥಿ ಶರಣ್ಯ

             ಶೈಲೂ......
[8/5/2019, 8:30 pm] Dr. B. N. Shylaja Ramesh: ಸಂತೈಕೆ
*******

ಹಸಿವಾಗಿಹುದೇ..? ಅಳದಿರೂ ತಮ್ಮ
ಏನು ಮಾಡುವುದೇಳು ಹಸಿವೆಯೇ ನಮ್ಮ ಕರ್ಮ

ಎಲ್ಲೆಲ್ಲಿ ನೋಡಿದರೂ ಮರವಿಲ್ಲ ಬಟಾಬಯಲು
ಹಣ್ಣು ಹಂಪಲುಗಲಿಲ್ಲ ಹಸಿವನ್ನು ನೀಗಲು

ಅಂದಿತ್ತು  ಸಂವದ್ಧಿ ಫಲಭರಿತ ಮರಗಳು
ನಿತ್ಯ ಗೋಳಾಯ್ತೆಮಗೆ ಮರವೆಲ್ಲ ಕಡಿಯಲು

ಕಾಡೆಲ್ಲಾ ನಾಡಾಗಿ ಇಲ್ಲವಾಯ್ತೆಮಗೆ ನೆಲೆ
ಅರಸುತ್ತ ಆಹಾರ ಬಂದಿದ್ದೇವೆ ಗುಳೆ

ತುಸು ಸುಮ್ಮನಿರು ತಮ್ಮ ನೋಡುತಿಹಳಮ್ಮ ಆಚೀಚೆ
ಎಲ್ಲಾದರೂ ಕಾಣಸಿಗಬಹುದು ಹಣ್ಣು ಕಾಯಿಪೀಚು ಹೀಚು

ನಮಗೂ ಹಸಿವಾಗುತಿಹುದು ನೋಡು ನಾವು ಅಳುತ್ತಿಲ್ಲ
ಸ್ವಲ್ಪ ಸಾವರಿಸಿಕೊ ಕಂದ ಅಭ್ಯಾಸವಾಗುವುದು ಮೆಲ್ಲ

ಮನುಜರ ಅತ್ಯಾಸೆಗಿಂದು ನಾವು ಬೀದಿ ಪಾಲು
ಕೇಳುವರಾರಿಲ್ಲ ಇಲ್ಲಿ ನಮ್ಮಳಲಿನ ಅಹವಾಲು

ಕರೆದು ಉಣಲಿಕ್ಕುವರಿಲ್ಲ ನಾವು  ಮಂಗಗಳಂತೆ
ಬೆದರಿಸಿ ಕಸಿದರಾಯ್ತು ಹೊಡೆದೋಡಿಸುವರು ಮೃಗದಂತೆ

ಸುಮ್ಮನಿರಲೂ ಬಿಡರಲ್ಲ ಹಿಡಿದೆಮ್ಮ ಪಳಗಿಸಿ ಮಣಿಸಿ
ಅವರಾಟಕೆ ಕುಣಿಸುವರು ಹೊಡೆದು ಹೆದರಿಸಿ ಬೆದರಿಸಿ

ನಮ್ಮ ಅನ್ನ ಕಸಿದವರಿಗೆ ದುಡಿದು ಕೊಡಬೇಕು ಹಣ
ತನ್ನ ಹೊಟ್ಟೆ ತುಂಬಿಸಿಕೊಂಡು ನಮಗೆ  ಬರೀ ಅರೆಹೊಟ್ಟೆನಾ

ಬಾಯಲ್ಲೇನೋ ದೇವರೆಂದು ಕಟ್ಟಿದರು ಗುಡಿಗೋಪುರವ
ಕಂಡಲೆದುರು ಬೀಸುವರು ಕಲ್ಲು ಇದು ಮನುಜನ ತತ್ವವಾ.?

ಅತ್ತು ಹೈರಾಣಾಗದಿರು ಕುಡಿ ಅಮ್ಮನೆದೆಯ ಹಾಲು
ಸಿಕ್ಕಿದೊಡನೆ ಆಹಾರ ಕೊಡುವೆ  ನಿನಗೆ ಪಾಲು

              ಶೈಲೂ.....
[9/5/2019, 1:29 pm] Dr. B. N. Shylaja Ramesh: #ಬಣ್ಣಿಸಲಳವೇ?

ಕೇಳುತಿಹರೇ ಸಖೀ..
ನಿನ್ನ ಕೃಷ್ಣ ಯಾರೆಂದು…
ನೋಡಬಲ್ಲೆ ನಾನವನ
ತೋರಲಳವೇ ಜಗಕೆ???

ಯಾವ ಹೆಸರಲಿ ಅವನ
ಪರಿಚಯಿಸಲಿ ಹೇಳೇ..
ಸಾಸಿರನಾಮಗಳೊಡೆಯ
ಆ ಚೆಲುವ ಚೆನ್ನಿಗನ??

ಬಣ್ಣಿಸಲಳವೇ ಹೇಳು
ಅವನ ಸೌಂದರ್ಯವ? ?
ಭುವನಮೋಹನರೂಪ
ಆ ಚೆಲುವ ಚೆನ್ನಿಗನ??

ಎಷ್ಟೆಂದು ಬಣ್ಣಿಸಲಿ
ಲೀಲಾವಿನೋದಗಳ?
ನಿಗಮಕೂ ನಿಲುಕದ
ಆ ಚೆಲುವ ಚೆನ್ನಿಗನ??

ಗೋಪಿಯರು ಹಲವರು
ಕೃಷ್ಣಪದಾಕಾಂಕ್ಷಿಗಳು
ಕೃಷ್ಣ ಅವನೊಬ್ಬನೇ
ಅವನೇ ಸಿರಿಯರಸನು

ಅಣುರೇಣುತೃಣಕಾಷ್ಠ
ಪರಿಪೂರ್ಣನು ಅವನು
ಅಚ್ಚರಿಗೂ ಅಚ್ಚರಿಯವನು
ಮೆಚ್ಚುಗೆಗೂ ಮೆಚ್ಚಾಗಿಹನು

ಸರ್ವಶಕ್ತನು ಅವನು
ಸರ್ವವ್ಯಾಪಿ ಅವನು
ಅಂತರಂಗದಲಿಹನು
ಬಾಹ್ಯ ಅವನಾಗಿಹನು..

ಹೇಳತೀರದು ಅವನ
ಮಹಿಮೆಗಳ ಪದದಿ
ಸೋತು ಶರಣಾಗುವುದು
ಪದಗಳು ಪದಕಮಲದಿ

–ಟಿ.ಕೆ.ವಾಣಿ
[15/5/2019, 7:12 pm] Dr. B. N. Shylaja Ramesh: ಇರಲೀಸುಖ ಅನವರತ
********************

ಯಾಕೋ ತುಸು ಆರಾಮಿಲ್ಲ
ಮಲಗಲೇ ಮಡಿಲಲಿ ನಲ್ಲ
ಕೈಕಾಲುಗಳಲೆನೋ ಸುಸ್ತು ಸೆಳೆತ
ಓಡಾಡಲಾಗದೇನೋ ನೋವು ಎಳೆತ

ಬಾ ಮಲಗು ರಾಧೇ
ನೀಗಿಸುವೆ ನಿನ್ನೆಲ್ಲ ಬಾಧೆ
ಏನಾಯಿತ್ಹೇಳೇ ಚಿನ್ನಾ
ಪರಿಹರಿಸುವೆ ನೋವನ್ನ

ಎನಿಲ್ಲವೋ ಗೋಪಾಲ
ನಿನ್ನನರಸುತ ಕಳೆದೆ ಕಾಲ
ಹುಡುಕಿ ಹುಡುಕಿ ಸುಸ್ತಾದೆ
ಅಲೆದಲೆದು ಆಯಾಸವಾಗಿದೆ

ಹೌದೇನೇ ರಾಧಾಮಣಿ
ನೆನೆದಿದ್ದರೆ ಸಾಕಿತ್ತಲವೇ ರಾಣಿ
ಓಡೋಡಿ ಬಂದಿರುತ್ತಿದ್ದೆ
ನೆನೆದೊಡನೆ ಹಾಜರು ಕಣ್ಮುಂದೆ

ಸಾಕು ಬಿಡು ಬಡಿವಾರ
ನಿನ್ನನೆನಪೇ ಪ್ರತಿದಿನ ವಾರ
ನೀನೇನೋ  ಜಗದಾದಿಪತಿ
ಇಹುದೆಲ್ಲಿ ನನ್ನೊಳು ಮತಿ

ನೆನೆದೊಡನೆ ಬಂದೆನಲ್ಲವೇ ನಾನು
ಹೇಳು ಜಾಣೆ ಮನದಳಲನ್ನು
ನಿನ್ನೊಡನೆಯೇ ನಾನಿಹೆನಲ್ಲ
ಜಗವೇ ರಾಧಾಕೃಷ್ಣ ಎನುವರಲ್ಲ

ಹೆಸರೊಂದೇ ಸಾಕೇ ನಲ್ಲ
ನಿನ್ನೊಡನಾಟ ಬೇಕಲ್ಲ
ಸದಾ ನಿನ್ನೊಡನಿರಬೇಕು
ಜಗದ ಪರಿವೇ ಮರೆಯಬೇಕು

ಹಾಗೆಂದರಾದೀತೇ ಹೇಳು
ಬೇಕಲ್ಲ ಎಲ್ಲರಿಗೂ ಸಮ ಪಾಲು
ನಿನ್ನೊಡನಾಟದ ಸಿರಿ ಸ್ನೇಹ ಸಖ್ಯ
ಜಗವ ತಣಿಸುವುದೂ ಅಷ್ಟೇ ಮುಖ್ಯ

ಸರಿ ಬಿಡು ಬಿಡು ಮಾಧವಾ
ಅರಿತಿರುವೆ ನಿನ್ನ ಮನವಾ
ಜಗವ ಪಾಲಿಪ ಸ್ವಾಮಿ ನೀನು
ನನಗೇ ಮೀಸಲಿರಲೆಂದು ಬಯೆಸೆನು

ಹೋಗಲಿ ಆ ಮಾತ ಬಿಡು ರಾಧೇ
ಇಂದಿನ ಇಡೀ ಸಮಯ ನಮ್ಮದೇ
ಸುಂದರ ಈ ಪ್ರಕೃತಿ ಮಡಿಲಿನಲಿ
ಕಳೆಯೋಣ ಸುಸಮಯ ಏಕಾಂತದಲಿ

ಅದಕೆಂದೇ ಬಯಸಿದೆ ಮಡಿಲು
ಎದೆಗೊರಗಿ ಆನಂದ ಸವಿಯಲು
ಆಹಾ ಏನೀಸುಖಮಯ ಪ್ರಶಾಂತ
ಇರಲೀ ಬೆಸುಗೆ ನಿತ್ಯ ಅನವರತ
  
                ಶೈಲೂ....

[15/5/2019, 8:12 pm] Dr. B. N. Shylaja Ramesh: ತನ್ನದೆನ್ನುವಜೀವ ಉದರದೊಳರಳೆ
****************************
ಉದರದೊಳು ಮೊಳೆಯುತ್ತಿರುವ ಜೀವ
ತನ್ನದೆನ್ನುವ ಅತೀವ ಪ್ರೇಮ ಭಾವ
ಹೊತ್ತವಳ ಕಷ್ಟಕ್ಕೊದಗುವ ಜೀವ
ತಿಳಿಯುತ್ತಿದ್ದನವಳು ಪಡುವ ನೋವ

ಏನೇನೂ ಮಾಡಲು ಬರದವ
ಹೊತ್ತು ನೆತ್ತಿಗೇರಿದರೂ ಏಳದವ
ಇಂದೆಲ್ಲಾ ಕೆಲಸಕ್ಕೂ ಸಿದ್ದ ಸನ್ನದ್ದ
ಕರುಳ ಕುಡಿಯ ರಕ್ಷಣೆಗೆ ಬದ್ದ

ಬೇಯಿಸಿದ್ದ ರಮಿಸಿ ಉಣಿಸಬೇಕಿತ್ತು
ಕೂತೆಡೆಯೇ ಸರ್ವಸೇವೆಗೈಯ್ಯಬೇಕಿತ್ತು
ದರ್ಪಧಮಡಿ ಜೋರುಮಾತಿಗ್ಹೆದರಿ
ನಡುಗುತ್ತಿದ್ದೆ ಕೈಕಾಲುಗಳದುರಿ

ಈ ನಡುವೇನಾಯ್ತೋ ಎನ್ನರಸನಿಗೆ
ತುಂಬು ಆರೈಕೆ ಬಿಡನರಗಳಿಗೆ
ಮನೆಗೆಲಸಕೆಲ್ಲಾ ಸಹಾಯ ಹಸ್ತ
ಇರಬಹುದೇ ಗರ್ಭಧರಿಸಿದ ನಿಮ್ಮಿತ್ತ

ಅಡುಗೆಮಾಡಲೊಡನೆ ಇರುವ
ಬಟ್ಟೆ ತೊಳೆಯೇ ಜೊತೆಗೆ ಬರುವ
ಹೆಜ್ಜೆಯಿಟ್ಟರವ ಮೆಲ್ಲ  ಎನ್ನುವ
ಅಬ್ಬಾ..! ಅದೆಷ್ಟು ಕಾಳಜಿ ತೋರುವ

ತನ್ನದೆನ್ನುವ ಜೀವ ಉದರದೊಳರಳೆ
ಹಮ್ಮೆಲ್ಲ ಹುಸಿಯಾಯ್ತು ಹೆಮ್ಮೆಯರಳೆ
ಕರುಳಕುಡಿ ಹೊತ್ತವಳನ್ಹೊತ್ತು ಮೆರೆಸಿ 
ಜೀವ ತಾನಾಗಿಹ ಒಲವ ಸುರಿಸಿ

           ಶೈಲೂ.....
[16/5/2019, 9:26 am] Dr. B. N. Shylaja Ramesh: ನೆನಪುಗಳ ಜೊತೆ ಜೊತೆಗೆ
**********************

ನೀ ನೀಡಿದ ಸವಿ
ಪ್ರೀತಿಯ ನೆನೆಪು
ತಾಯಂತೆ ನೇವರಿಸಿ
ಸಂತೈಸಿದ ನೆನೆಪು
ನನ್ನ ದನಿಗೆ ನಿನ್ನ
ದನಿಗೂಡಿಸಿದ ನೆನಪು
ಪ್ರೀತಿಯ ಲಾಲಿ ಹಾಡಿಗೆ
ಸವಿನಿದ್ರೆಗೆ ಜಾರಿದ ನೆನಪು
ಕನಸಲ್ಲಿ ಬಂದು ಕಾಡುವೆ
ಎಂದು ಪಿಸುಗುತ್ತಿದ ನೆನಪು
ಧುತ್ತನೆದುರಿಗೆ ಬಂದಚ್ಚರಿ
ಮೂಡಿಸುವೆನೆಂದ ನೆನಪು
ಎದುರಾದಾಗ ಕಂಗಳ ಕಾಂತಿ
ನೋಡಬೇಕೆಂದ ನೆನಪು
ಹಸಿದಿರಬೇಡ ಎಂದ
ತಾಯಿ ಕಾಳಜಿಯ ನೆನಪು
ಬೇಸರಿಸಿದಾಗ ಸಂತೈಸಿ
ನಗುವು ಮೂಡಿಸಿದ ನೆನಪು
ಕೋಪದೇ ಜಗಳಾಡಿ
ಹುಸಿಮುನಿಸು ತೋರಿದ ನೆನಪು
ಮರುಕ್ಷಣವೇ ಸವಿಮಾತಲಿ
ಮೋಡಿ ಮಾಡಿದ ನೆನಪು
ಕನಸು ಮೂಡಿಸಿದವಳು
 ನೀನೆಂದುಸುರಿದ ನೆನಪು
ಉಸಿರಿನ ಬಿಸಿಗೆ ಮೈಮನ
ಹಗುರಾದ ನೆನಪು
ನಿನ್ನೊಡನೆ ನಾನಿಹೆನೆಂಬ
ಭರವಸೆ ನುಡಿಯ ನೆನಪು
ಆಗಮನದ  ಸಂಭ್ರಮಕೇ
ಆಸೆಕಂಗಳಲಿ ಕಾಯ್ದ ನೆನಪು
ಬಂದೊಡನೆ ಬಂದಂತೆಯೇ
ಮರೆಯಾದ ನೋವಿನ ನೆನಪು
ಸದಾ ಕಾಡುವ ನಿನ್ನ
ನೆನಪಿನದೇ ನೆನಪು
ನೆನಪುಗಳ ಸುಳಿಯಲ್ಲಿ
ಸಿಕ್ಕಿರುವೆ ಓ ಗೆಳೆಯ
ನನಸಾಗಿಸಲು , ನಗು ಮೂಡಿಸಲು
ನೀನೆಂದು ಬರುವೆ..???

              ಶೈಲೂ....
[16/5/2019, 10:02 am] Dr. B. N. Shylaja Ramesh: ಕವಿಯ ಬೆರಗು ನೋಟವ ಕಂಡು
                 ಅವಳು
        ನಾಚಿ ಇಳೆಯಾದಳು
     ಚೆಲುವಿನ ಬಲೆಯಾದಳು
     ತಂಪೀವ ಮಳೆಯಾದಳು
       ಜೇನ ಹೊಳೆಯಾದಳು
[17/5/2019, 10:05 pm] Dr. B. N. Shylaja Ramesh: ಹೀಗೇಕೆ.??
**********

ಬೇಡವೆಂದಾಗ ಬಂದು
ಕಾಡುವೆ ನೀನು
ಏನಿಹುದು  ಆಂತರ್ಯ
ಅರಿಯಲಾರೆನು

ಮರೆಯಲೆಣಿಸಲು ನಾನು
ಕಾಡುವೆಯೇಕೆ ನೆನಪಲ್ಲೇ
ಬೇಕೆಂದು ಬಳಿ ಬರಲು
ಓಡುವೆ ಏಕೆ ನಿಲ್ಲದಲೇ

ಧ್ಯಾನಿಸಲು  ನಾ ನಿನ್ನ
ಮನ ನಿಲಿಸಲಾಗದೆ
ತರತರದ  ಭಾವಗಳು
ಮೂಡಿ ಮರೆಯಾಗದೆ

ಮೌನ ಬಯಸಲು ನಾನು
ಕಾಡಿ ಬೇಡುವೆಯೇನು
ನುಡಿಸಿ ಮನದ ವೀಣೆ
ಗುನುಗುನಿಸುವೆ  ಸರಿಯೇನು

ಏನಿದು ನಿನ್ನಾಟ
ಇರಬಹುದೇ ಹುನ್ನಾರ
ಸಾಕಿನ್ನು ಈ ಕಪಟ
ಬೇಕಿಲ್ಲ  ಬಡಿವಾರ

ಏನಾದರೇನಂತೆ
ಬಿಡಲಾರೆ ನಾ ನಿನ್ನ
ಹಿಡಿದು  ಶ್ರೀಪಾದ
ಪರಮಪದ  ಪಡೆಯುವೆ ನಾ

             ಶೈಲೂ.....
[18/5/2019, 11:46 am] Dr. B. N. Shylaja Ramesh: ಭಾವನೆಗಳ  ಭಾವಗೀತೆ
********************

ಬರಿದೇ ನೆನಪುಗಳ
ಸುಳಿಯಲ್ಲಿ ಸಿಕ್ಕಿ
ಹುಡುಕಿ ತಡಕಾಡಿ
ಅಕ್ಷರಗಳ  ಹೆಕ್ಕಿ
ಮನದೊಳಗಿನ ಭಾವ
ಪದಗಳಲಿ ತುರುಕಿ
ಸುಖದುಃಖಗಳಲೆಯಲಿ
ಮುಳುಗೇಳಿ ತೇಲಿ
ಮನದೊಳಗಿನ ಪ್ರೀತಿಯನು
ಮೊಗೆಮೊಗೆದು ನೀಡಿ
ಸ್ನೇಹ ಕಾರಂಜಿಯ
ರಸಧಾರೆ ಸಿಂಪರಿಸಿ
ನೋವು ನಲಿವುಗಳ
ಅಳೆದಳೆದು  ತೂಗಿ
ತೋಚಿದ್ದನ್ನು ಗೀಚುವ
 *ಸಂಚಯ ಕವನ ಸಂಕಲನವೇ* 
ನನ್ನ ಭಾವನೆಗಳ  ಭಾವಗೀತೆ..!!

         ಶೈಲೂ.....
[18/5/2019, 11:47 am] Dr. B. N. Shylaja Ramesh: ಸ್ನೇಹ
*****

ಸ್ನೇಹಕ್ಕುಂಟೇ  ವ್ಯಾಖ್ಯಾನ
ಅದೊಂದು ಅದ್ಭುತ ಸುಧಾಪಾನ
ನಿಷ್ಕಲ್ಮಶ  ಹೂ ಮನಗಳ
ಸುಮಧುರ  ಸಮ್ಮಿಲನ

ಇಲ್ಲಿ ಜಾತಿ ಮತಗಳ ಹಂಗಿಲ್ಲ
ಬಡವ  ಬಲ್ಲಿದ ನೆಪವಿಲ್ಲ
ವಯಸ್ಸಿನಂತರವೂ ಇಲ್ಲ
ಬರೀ ಸಿರಿ ಸ್ನೇಹವೇ ಎಲ್ಲ

ಇರಬೇಕು  ಸ್ನೇಹಕ್ಕೆ
ಸಮಾನ ಮನಸ್ಥಿತಿ
ಅಂತರ್ಯಗಳ ಒಳಹೊಕ್ಕು
ಸ್ನೇಹವರಸುವ. ಸಮಸ್ಥಿತಿ

ಒಬ್ಬರ ಬೆಳವಣಿಗೆಯಲ್ಲಿ
ಮತ್ತೊಬ್ಬರ  ಖುಷಿ ಇರಬೇಕು
ಪ್ರತಿ ನಡೆಯಲ್ಲಿ ಬೆನ್ನುತಟ್ಟಿ
ಪ್ರೋತ್ಸಾಹ ಕೊಡಬೇಕು

ಕೆಳಗೆ ಬಿದ್ದಾಗ ಮೇಲೆತ್ತುವ
ಸಹೃದಯ ಮನವಿರಬೇಕು
ತನ್ನಾತ್ಮದಂತೆಯೇ ಪರಿಭಾವಿಸಿ
ಗೌರವಿಸಿ ನಡೆಯಬೇಕು

ಮನನೋಯಿಸುವ ನಡೆ ನುಡಿಯಿರೆ
ಸ್ನೇಹ ಕುಸಿಯುವ ಸಂಭವ
ನಿಷ್ಕಾಮ ಸುಪ್ರೇಮ ಸ್ನೇಹಕ್ಕೆ
ಆಯುಶ್ಮಾನ್ ಭವ

ಸ್ನೇಹದಾಲಿಂಗನದ ಅದಮ್ಯ
ಚೈತನ್ಯದೆ ಎಲ್ಲ ಮರೆತೋಯ್ತು
ಪುಷ್ಟಿಯಿತ್ತು ಹುರುಪು ತುಂಬುವ
ಸಿರಿ ಸ್ನೇಹಕ್ಕೆ  ಶುಭಮಸ್ತು

          ಶೈಲೂ.....
[19/5/2019, 1:49 pm] Dr. B. N. Shylaja Ramesh: 🌹🌹ಜನ್ಮೋತ್ಸವದ ಶುಭಾಶಯ🌹🌹

 ವರ್ಷದ ಕೂಸು
*************

ಕನ್ನಡದ ಕಂದ
ನಲ್ಮೆಯ ಬಾಲ ಮುಕುಂದ
ಎಲ್ಲರಚ್ಚುಮೆಚ್ಚಿನ ಕೂಸು
ನಡೆವ ಹಾದಿಯಲ್ಲೆಲ್ಲ  ಹೂ ಹಾಸು
ಮನಸು ತುಂಬಾ ಸ್ವಚ್ಛ
ಹೆಸರಿದಕೆ ಕನ್ನಡ *ಕಥಾಗುಚ್ಛ..!!* 
ಹಡೆದವರು ಹಲವು ದೇವಕೀಯರು..!!
ಪಾಲಿಸುವವರೆಲ್ಲ ಯಶೋಧೆಯರು..!!
ವಸುದೇವರುಗಳ
ಪಾತ್ರವನ್ತೂ  ವರ್ಣನಾತೀತ
ನಂದಗೋಪರುಗಳ
ಸಂಖ್ಯೆ ಅಪರಿಮಿತ..!!
ಗೋಪಿಕೆಯರದೂ ದೊಡ್ಡ ಹಿಂಡು
ಈ ಕೃಷ್ಣನ ರಮಿಸುವಲ್ಲಿ
ಸದಾ ಮುಂದು
ಅದೆಷ್ಟು ಪ್ರೇಮ ಭಕ್ತಿ
ಹಾಸ್ಯ ಕವನ ಕಥಾಹಂದರ
ನಡುವಲ್ಲೇ ಬೆಳೆಯುತ್ತಿರುವ
 *ಕಥಾಗುಚ್ಛ* ಸುಂದರ..!
ಹಾಲು ಮೊಸರು ಮಥಿಸಿ
ನವನೀತ ತೆಗೆದಂತೆ
ಹಲವು ಭಾವಗಳು ಮಿಳಿತ
ಸಂಕಲನ *ಪಯೋನಿಧಿ* ಯಂತೆ
ಉತ್ಕೃಷತೆಗೆ ಸಂದ ಗೌರವ *ಶಾರದಾತನಯ..!* 
ಸಂತೋಷ ಸಂಭ್ರಮಕೇ ಕಾರಣ
 *ಅನುಪಮಾ* ..!
ಹಲವು ಹೂ ಮನಗಳು
ಬೆಸೆದು ಹೊಸೆದ ಕೂಸು..!
ಅಂಬೆಗಾಲಿನಿಂದ ದಾಪುಗಾಲಿನ
ನಡಿಗೆಗಿಂದು ವರ್ಷವಾಯ್ತು
ಜನ್ಮ ಮಹೋತ್ಸವಕಿಂದು
ನಲ್ಮೆಯ ಹಾರೈಕೆ..!
ಹಲವು ಬಗೆಬಗೆಯ ಚಂದದ
ಈ ಹೂಗುಚ್ಛದೊಂದಿಗೆ
ಈ ನಾರೂ ಸ್ವರ್ಗ ಸೇರುವ ಬಯಕೆ.!

            *ಶೈಲೂ.....*
[19/5/2019, 3:19 pm] Dr. B. N. Shylaja Ramesh: ನನ್ನೊಳಗಿನ ನಾನು
****************

ನನ್ನೊಳಗೊಂದು ಅಭಿವ್ಯಕ್ತಿ
ಉದ್ಭವಿಸಿದೆ ನನ್ನದೇ ಭಿತ್ತಿ
ನೋವು ನಲಿವುಗಳಿಗೆ ಸಂಗಾತಿ
ನನ್ನೊಳಿಹ ಉತ್ತಮೊತ್ತಮ ಗೆಳತಿ

ದೃಢಹೆಜ್ಜೆಗೆ ಸಹಕಾರಿಯಾದವಳು
ತಪ್ಪೋಪ್ಪುಗಳ ತಿಳಿಹೇಳಿದವಳು
ಕಣ್ಣೀರೊರೆಸಿ ನೋವ ಮರೆಸಿದವಳು
ಸೋತು ಕಂಗೆಟ್ಟಾಗ ಮಾಡಿಲಾದವಳು

ಮುಂದಡಿಯಿಡಲು ಒತ್ತಾಸೆಯಾದವಳು
ಆತ್ಮವಿಶ್ವಾಸ ನೀಡಿ ನಲಿವಿತ್ತವಳು
ಗುರಿಯೆಡೆಗೆ ಗುರುವಿನಂತಾದವಳು
ಏಕಾಂಗಿತನಕೆ ಜೊತೆಯಾದವಳು

ಬದುಕಿಗೆ ಭರವಸೆಯಿತ್ತವಳು
ಸಾಧಿಸುವ ಚಲವಿತ್ತ ವಳು
ಕಾಲೆಳೆವವರ ಕಡೆಗಣಿಸೆ0ದವಳು
ನನಗಾಗಿ ಕಣ್ಣೀರಸುರಿಸುವವಳು

ನನ್ನೊಳಗಿನ ಈ ನಾನು ಅಹಂ ಅಲ್ಲ
ಎಲ್ಲದೋಳರಿವಿತ್ತ ಸುಮನಸೇ ಎಲ್ಲ
ಧೈರ್ಯ ಗುಂದದಂತೆ ನೀಡಿ ಶಕ್ತಿ
ನನ್ನತನವ ಎತ್ತಿ ಹಿಡಿವ ಅಭಿವ್ಯಕ್ತಿ..!!

           ಶೈಲೂ...
.
[19/5/2019, 5:29 pm] Dr. B. N. Shylaja Ramesh: ಸಪ್ತಪದಿ
*******

ಏಳು ಹೆಜ್ಜೆಗಳ ಈ ಬಂದ
ಜನ್ಮಜನ್ಮಗಳ ಅನುಬಂಧ
ಎರಡು ಮುಗ್ಧ ಮನಗಳ ಬೆಸೆಗೆ
ಪ್ರೀತಿ ಸಾಂಗತ್ಯ ಕೆ ಸೇತುವೆ

ಸನಾತನ ಸಂಸ್ಕೃತಿಯ ಪ್ರತೀಕ
ಸತ್ಸಂಪ್ರಧಾಯದ ದ್ಯೋತಕ
ವೇಧಘೋಷ ಮೇಳಗಳ ನಡುವೆ
ಸಂಬಂಧ ಅನುರಾಗದ ಒಸಗೆ

ಸಂಸಾರಸಾಗರದಲಿ ಈಸಲು
ಪರಸ್ಪರರಲಿ ಸಹಕಾರವಿರಿಸಲು
ಮುಂದಿಡಲು ಸಜ್ಜು ಬಾಳ ಹೆಜ್ಜೆ
ಮುನ್ನಡಿಯಿದು ಈ ಏಳು ಹೆಜ್ಜೆ

ಧರ್ಮೇಚ ಅರ್ಥೇಚ ಕಾಮೇಚ
ನೀನಿಲ್ಲದೇ ನಾತಿ ಚರಾಮಿ..!!
ನಂಬುಗೆಯಡಿಯಲಿ ಸಾಗುವ
ಈ ಜೀವ ನಿನಗೆ ಸಮರ್ಪಯಾಮಿ..!!

ಜೀವದೊಳೊಂದಾಗೆ ಅಗ್ನಿಸಾಕ್ಷಿ
ವಚನಬದ್ಧತೆಗೆ ಆ ದೈವಸಾಕ್ಷಿ
ಹದಿಬದೆಯ ಧರ್ಮಕಡಿಪಾಯ
ಸಪ್ತಪದಿ ಸುಖ ಜೀವನಕುಪಾಯ

ಜೀವನದ ಸರ್ವ ಸುಖ ದುಃಖ
ಜನನಮರಣಗಳೆರಡರಲೂ ಸಾಂಗತ್ಯ
ಉಸಿರಲುಸಿರಾಗಿ ಬಾಳಹಸಿರಾಗಿಸಿ
ಬೆಸೆವ ಬಂಧನ ಸಪ್ತಪದಿಯ ಸ್ವಾರಸ್ಯ

                 ಶೈಲೂ.....
[19/5/2019, 10:32 pm] Dr. B. N. Shylaja Ramesh: Vishwanathkv Kamath ಮನದೊಳಗಿನ
    ಮರಿದುಂಬಿ
        ಸುಶ್ರಾವ್ಯವಾಗಿ
            ಹಾಡಿದಾಗ
                ಮೂಡಿಬಂದ
                   ಮಧುರಾನುಭವದ
                       ಮನದ
                          ಮಾತುಗಳು...
🙏🙏🙏🙏😊😊😊😊😊😊

[20/5/2019, 2:19 pm] Dr. B. N. Shylaja Ramesh: ಹಸಿರು ಗಾಜಿನ ಬಳೆಗಳೇ
**********************

ನೋಡೇ ಅಮ್ಮ ಎಷ್ಟು ಚಂದವಿದೆ
ಘಲ್ ಘಲ್ ಬಳೆಗಳ ನಾದ
ನಿನ್ನಂತೆಯೇ ಇದೆ ಅಂದದ ಕೈಯಲಿ
ತುಂಬಿದ ಬಳೆಗಳ ಮೋದ

ಹೌದು ಪುಟಾಣಿ ಮಕ್ಕಳ ರಾಣಿ
ಬಳೆಗಳೇ  ಹೆಣ್ಣಿಗೆ  ಭೂಷಣ
ಚಂದದ ಕೈಯಲ್ಲಿ ಹಸಿರಿನ ಬಳೆಗಳು
ಸೌಭಾಗ್ಯದ ಸಿರಿಗೆ ಕಾರಣ

ಗಾಜಿನ ಬಳೆಯಿದು ಒಡೆದರೆ ತೊಂದರೆ
ಬಹು ಜಾಣ್ಮೆಯಲಿ ಸಂಭಾಳಿಸು
ಸ್ತ್ರೀತ್ವದ ಸೌಭಾಗ್ಯದ ಸಂಕೇತವಿದು
ತೊಟ್ಟು ಸದಾ ಹಸಿರಂತೆ ಕಂಗೊಳಿಸು

ಚಿನ್ನ ವಜ್ರಕಿಂತ ಅತಿಬೆಲೆಯುಳ್ಳದ್ದು
ಹಸಿರು ಬಳೆಗಳಿಗುಂಟೆ ಸರಿಸಮ
ಐದು ಮುತ್ತುಗಳಲಿ ಸರ್ವಶ್ರೇಷ್ಠವಿದು
ಸದಾ ಧರಿಸುವುದೇ ಸತೀಧರ್ಮ

ಅಂದದ ಕೈಯಲಿ ಬಳೆಗಳು ತುಂಬಿರಲಿ
ಸಕಲ ಸೌಭಾಗ್ಯ ನಿನದಾಗಲಿ ಮಗು
ಹಸಿರು ತುಂಬಿರುವ ಭೂಮಾತೆ ನಲಿದಂತೆ
ಮೊಗದಲ್ಲಿ  ತುಂಬಿರಲಿ ಸದಾ ನಗು

          ಶೈಲೂ
[20/5/2019, 2:27 pm] Dr. B. N. Shylaja Ramesh: ಕಥಾಗುಚ್ಛವೆಂಬ 
ಹೂಗುಚ್ಛ ದಲಿ ಅರಳಿದ
ಸುಮಗಳು ನಾವೆಲ್ಲಾ
ಪ್ರೀತಿ ಸಿಂಚನವ
ಸಿಂಪರಿಸಿ ಆರೈಕೆಮಾಡುವ
ನಿರ್ವಾಹಕರಿರುವಾಗ
ಬಾಡುವ ಭಯವೂ ನಮಗಿಲ್ಲ
ನಳನಳಿಸಿ ಅಕ್ಷರ ಸೌಗಂಧವ
ಪಸರಿಸೆಲ್ಲೆಡೆ  ಸಾಹಿತ್ಯ ದೇವಿಯ
ಪಡದಡಿ ನಲಿಯೋಣ
ಬನ್ನಿರೆಲ್ಲ...
ಜ್ಞಾನ ರಥದಲ್ಲಿ ವಿರಾಜಿಸುತ್ತಿರುವ
ಸಾಹಿತ್ಯದೇವಿಯ
ಕರಸೇವಕರು  ನಾವು
ಸುಮನದ ಸಮಾನ ಮನಸ್ಕ
ಸ್ನೇಹಿತರೊಡನೆ  
ತಾಯ ಸೇವೆಗೈಯಲು
ಕಂಕಣಬದ್ದರು ನಾವು
ನಿಮ್ಮೊಡನಾಟದ
ರಸಗಳಿಗೆಗೆ ಕಟಿಬದ್ದರು ನಾವು
🙏🙏
[21/5/2019, 9:31 am] Dr. B. N. Shylaja Ramesh: ನೀನೇ ಮುರಿಯಬೇಕು ಮೌನ
*************************

ಮೌನವಾಗಿದೆ ಮಾತು
ಭಾವನೆಗಳ ಮರೆತು
ನುಡಿಯಲು ಸಾವಿರ ಮಾತಿದ್ದರೂ
ತುಟಿಯಂಚಲಿ ಜಾರಲು
ತಹತಹಿಸುತ್ತಿದ್ದರೂ
ಮನವೇಕೋ ಹಿಂಜರಿದಿದೆ
ಒಳಮನ ಭಾವನೆಗಳ ಬಿಗಿದಿಟ್ಟಿದೆ
ಸೋಲಲೊಪ್ಪದು ಮನ..
ಈ ತಹತಹಿಕೆ ನನಗೆ
ಮಾತ್ರವಿದೆಯೇಕೆ..???
ಅವನಿಗಿಲ್ಲವೇಕೆ..???
ಇರಬಹುದು ಅವನಿಗೂ..
ಹಮ್ಮುಬಿಮ್ಮುಗಳ ತಾಕಲಾಟದಲಿ
ಮಾತು ಮರೆತಿರಬಹುದು..
ತಪ್ಪುಗಳನ್ನೊಪ್ಪದೆ ನಾನೆಂಬ
ಹಮ್ಮು ಕಾಡುತ್ತಿರಬಹುದು..
ನಾನೂ ಸಹ ಸಿದ್ಧವಿಲ್ಲ
ನನ್ನ ತನವ ಮರೆತು ನಿನ್ನ
ಓಲೈಸುವ ಬಯಕೆ ಎನಗಿಲ್ಲ
ಇರಲಿ ಬಿಡು ಹೀಗೆಯೇ..
ನಡೆಯುತ್ತಿರಲಿ ಅಷ್ಟು ದಿನ
ಮೌನ ಕರಗಿ ತುಟಿಬಿರಿದು
ಚೆನ್ನಡಿ ಬರುವ ತನಕ ಕಾಯುತ್ತೇನೆ..
ಎಂದಿಗಾದರೂ  ಸರಿ
ನೀನೇ ಮುರಿಯಬೇಕು ಮೌನ..

          ಶೈಲೂ.....
[21/5/2019, 9:32 am] Dr. B. N. Shylaja Ramesh: ಚದುರಿದ ಮೋಡ
****************

ಹತ್ತಿಯುಂಡೆಯಂಥ
ಬೆಳ್ಮುಗಿಲ  ಚೂರುಗಳು
ತೂಗಾಡುತ್ತ  ಬಾನಿನಲ್ಲಿ
ಒಂದಕ್ಕೊಂದು ಬಳಿಸಾರಿ
ಸೇರಿ, ಆದವು ಅದ್ಹೇಗೋ
ಹೊದ್ದಂತೆ ಕರಿ ಕಂಬಳಿ..!
ಮೇಳೈಸಿ ಪಿಸುಗುಟ್ಟಿ
ಒಂದಕೊಂದನು  ತಬ್ಬಿ
ದಟ್ಟವಾಗಿ  ಬೆಟ್ಟವಾಗಿ
ನೀರ ಪರ್ವತವಾಗಿ
ಸಾಗಿ ಸಾಗಿ  ಅಬ್ಬರಿಸಿ
ಕಣ್ಣ ಕೋರೈಸುವಂತೆ
ಸಿಡಿದು ಸೀಳಿ ಸೀಳಿ
ಬಂದೇಬಿಟ್ಟಿತು ನೆಲದೆಡೆಗೆ..!
ಆಗುವುದೇನೋ ಜಲಪ್ರಳಯ
ಎಂದೆನ್ನುವಂತೆ..!
ಎಲ್ಲಿಂದಲೋ ಬಂದ
ಮನೆಮುರುಕ ಸುಳಿಗಾಳಿ
ಚದುರಿಸಿ, ಹಾರಿಸಿ ಒಯ್ದೆಬಿಟ್ಟಿತು
ಕಾರ್ಮುಗಿಲನು ಸೀಳಿ ಸೀಳಿ..!
ಹೊರಟೆ ಬಿಟ್ಟಿತು ಮೋಡ ತೇಲಿ ತೇಲಿ.......

          ಶೈಲೂ.......
[21/5/2019, 5:09 pm] Dr. B. N. Shylaja Ramesh: ದ್ರೌಪದಿ ಸ್ವಯಂವರ
******************
ಪಾಂಚಾಲಾಧಿಪತಿ ದ್ರುಪದ ಮಾಹಾರಾಜ
ನಡೆಸಿದ ವೈಖಾನವೆಂಬ ಯಜ್ಞದಿಂದ
ಆವಿರ್ಭವಿಸಿದ ತ್ರಿಭುವನ ಚೆಲುವೆ..!!
ಹೆಸರಿಹುದು ದ್ರೌಪದಿ, ಕೃಷ್ಣೆ, ಪಾಂಚಾಲಿ..!!
ವೃದ್ಧಿಚಂದ್ರನಂತೆ ದಿನಂಪ್ರತಿ ಬೆಳಗುತ್ತಿರುವ
ತ್ರೈಲೋಕ್ಯ ಸುಂದರಿ ಕುವರಿಗೆ
ಅನುರೂಪ ವರನ ಆರಿಸುವ ನಿಮಿತ್ತ
ಸ್ವಯಂವರಕ್ಕೆ ಸಜ್ಜಾಗಿತ್ತು ಪಾಂಚಾಲದೇಶ..!
ಜಗದೇಕವೀರ ಧನಂಜಯ ತನ್ನಳಿಯನಾಗಳೆಂದು
ಅವ ಮಾತ್ರ ಬೇಧಿಸುವ 
ಮತ್ಸ್ಯಯಂತ್ರವ ಪಣವಾಗಿರಿಸಿ
ಗರಗರನೇ ತಿರುಗುವ ಮತ್ಸ್ಯವನಿರಿಸಿ
ಬೇಧಿಸುವವನೇ ವಿಜೇತನವಗೆ ಮಗಳ ಕೊಡುವೆನೆಂದು ಸಾರಿದರು..!
ದೇಶವಿದೇಶದಿಂದಾಗಮಿಸಿದ ರಾಜಕುಮಾರರು
ಕೃಷ್ಣೆಯ ಚೆಲುವಿಗೆ ಬೆರಗಾಗಿ ನಿಂತರು.!
ಧನುವನು ಹೆದೆಯೇರಿಸಿ ಪಂಚಬಾಣಗಳ ಹೂಡಿ
ತಿರುಗುವ ಮತ್ಸ್ಯಯಂತ್ರವ ಭೇಧಿಸುವಲ್ಲಿ ಸೋತರು.!!
ಚೇದಿರಾಜ್ಯದ  ಶಿಶುಪಾಲ ಮಗಧದ ಜರಾಸಂಧ
ಘಟಾನುಘಟಿ ರಾಜರೆಲ್ಲ ಸೋತು ತಲೆತಗ್ಗಿಸಿದರು.!
ಅಂಗರಾಜ ಕರ್ಣ ಹೆದೆಯೇರಿಸಲು ನಡೆಯೇ
ಸೂತಪುತ್ರನ ವರಿಸಲು ನಾನೊಲ್ಲೆನೆಂದಳು ಕೃಷ್ಣೆ..!
ಕ್ಷತ್ರಿಯರೆಲ್ಲ ಕಡೆಗಾಣಿಸಿ ಬಸವಳಿದು ಸೋತಾಗ
ಸಭೆಯಲ್ಲಿದ್ದ ಬ್ರಾಹ್ಮಣ ವರರಾದರೂ 
ಯತ್ನಿಸಬಹುದೆಂಬ ಅಣತಿಯ ಮೇರೆಗೆ
ಕೌರವರ ಉಪಟಳಕೆ ಬೇಸತ್ತು ಬ್ರಾಹ್ಮಣ ವೇಷದಿ 
ತಲೆಮರೆಸಿ ಅಡಗಿದ್ದ ಗಾಂಢೀವಿ ಎದ್ದು ಅಣಿಯಾದನು
ಆವನಿವ ಬ್ರಾಹ್ಮಣ.. ರಾಜಾದಿರಾಜರೇ ಸೋತು ಶರಣಾದಾಗ
ಇವನೇನ ಮಾಡಬಲ್ಲನೆಂದು ನಗುತ್ತಿದ್ದರು ಸಭಿಕರು.!
ದ್ರುಪದನಾಹ್ವಾನ ಮನ್ನಿಸಿ ಯುಧಿಷ್ಠಿರನ ಸಮ್ಮತಿಯ ಮೇರೆಗೆ
ಮನದಲ್ಲೇ ಚಿರಬಂದು ಶ್ರೀಕೃಷ್ಣ ನಿಗೊಂದಿಸಿ
ಸ್ವಯಂವರ ಮಂಟಪದೆಡೆ ಬಂದು..ಧನುವನು
ಲೀಲಾಜಾಲದಿ ಹೆದೆಯೇರಿಸಿದನು..!
ತೈಲಬಾಂಡದಲಿ ನೋಡುತ ಮೇಲಿದ್ದ ಮತ್ಸ್ಯದೆಡೆಗೆ ಲಕ್ಷ್ಯವನಿರಿಸಿ
ಹೂಡಿ ಬಾಣಗಳ ಮತ್ಸ್ಯಯಂತ್ರವ ಬೇಧಿಸಿದ ಪಾರ್ಥನು.!
ಎಲ್ಲೆಲ್ಲೂ ಜಯಘೋಷ ಮಂಗಳವಾದ್ಯ ಮೊಳಗಲು
ಲಜ್ಜೆಯಾಭರಣ ತೊಟ್ಟ ಚೆಲುವಿನರಸಿ ಪಾಂಚಾಲಿ
ವಿಜಯಮಾಲೆಯನು ತೊಡಿಸಿದಳು..!
ಅಪಮಾನಿತರಾದ ನೃಪರೆಲ್ಲ ದ್ವೇಷಾಸೂಯೆಯಲಿ
ಪಾಂಚಾಲನ ಮೇಲೆ ದಂಡೆತ್ತಿ ಬರಲು..!
ವೇಷ ಮರೆಸಿದ್ದ ಭೀಮಾರ್ಜುನರರಪರಿಮಿತ
ಕಾಳಗದ ದೆಸೆಯಿಂದ ದ್ರುಪದ ಜಯಗಳಿಸಿದನು..!
ಸ್ವಯಂವರದಲ್ಲಿ ವರಿಸಿದ್ದ ಪಾಂಚಾಲಿಯೊಡನೆ
ತಮ್ಮ ಕುಠೀರಕೈತಂದು 
ಅಮ್ಮಾ... ಹೆಣ್ಣು ತಂದೆವೆಂದಿದ್ದನ್ನು ಹಣ್ಣೆಂದು ಭ್ರಮಿಸಿದ ಕುಂತಿ
ಸರ್ವರೂ ಸಮಪಾಲಾಗಿ ಹಂಚಿಕೊಳ್ಳಿರೆನಲು..!
ಅಮ್ಮಾ.. ಇದು ಹಣ್ಣಲ್ಲ.. ಹೆಣ್ಣು..
ದ್ರುಪದ ಕುವರಿ ದ್ರೌಪದಿಯ  ಸ್ವಯಂವರ ದಲಿ ಗೆದ್ದು
ವರಿಸಿ ಬಂದಿದ್ದೇವೆನಲು.. ತಾನುಡಿದ ತಪ್ಪಿಗಾಗಿ ಮರುಗಿದಳು..!
ತಾಯ ನುಡಿ ಅನೃತವಾಗಬಾರದೆಂದೆಣಿಸಿ 
ವ್ಯಾಸಮಹರ್ಷಿಗಳಾಣತಿಯಂತೆ
ಪಾಂಡವರೈವರೂ ಕೃಷ್ಣೆಯ ಪತಿಗಳಾದರು..!!
ಹಿಂದಿನ ಜನ್ಮದಲ್ಲಾಕೆ ಶಿವನನ್ನು ಒಲಿಸಿ ನಮಿಸಿ
ಸರ್ವಗುಣಸಂಪನ್ನ ಜಗದೇಕವೀರ ನಾದ
ಪತಿಂದೇಹಿ..ಪತಿಂದೇಹಿ ಎಂದೈದು ಬಾರಿ ಕೇಳಲಾಗಿ..!
ಒಬ್ಬನಲೇ ಸರ್ವಗುಣಸಂಪನ್ನತೆ
ಸಿಗದೆಂಬ ಕಾರಣಕೆ
ಐದು ಪತಿಗಳ ಸತಿಯಾಗೆಂದು ವರ  ಕರುಣಿಸಿದ್ದ ನಿಮಿತ್ತ
ಇಂದಾಕೆ ಪಂಚ ಪಾಂಡವರ ಸತಿಯಾದಳು..!

             ಶೈಲೂ....
[21/5/2019, 9:34 pm] Dr. B. N. Shylaja Ramesh: ನನ್ನವನು...
***********

ಎಲ್ಲರಂತಲ್ಲ ನನ್ನವನು
ಕರುಣಾರಸ ಭರಪೂರಹರಿವ
ಕನಸು ಕಂಗಳ ಚೆಲುವ ಸೊಗಸುಗಾರ...

ಮುಗ್ಧಮುಖ ತುಂಬಿಹುದು
ಬೆಳದಿಂಗಳ ಚಂದ್ರಕಳೆ
ಮನಸೆಳೆವ ಮಾಂತ್ರಿಕ ಮೋಡಿಗಾರ...

ನೀಲ ಮೇಘದ ವರ್ಣ
ಮನವಿಹುದು ಹಳದಿಯ ಚಿನ್ನ
ಸಮ್ಮೋಹಕ ನುಡಿಗಳ ಮಾತುಗಾರ...

ತುಸು ಮುನಿಸು,ಪ್ರೀತಿ ಕಡಲು
ಸುಗಂಧಬೀರುವ ಹೂಮನಸು
ತುಂಟತನದ ಭಂಟ ಮೋಜುಗಾರ...

ದಿಟ್ಟ ನಡೆ ಮಾರ್ಮಿಕ ನುಡಿ
ದುಷ್ಟರ ತರಿದು ಶಿಷ್ಟರ ಪೊರೆವ
ಜಗದೊದ್ಧಾರಕ ಕೃಷ್ಣ ಪೊರೆವನೆಲ್ಲರ...

ಹಾಸ್ಯ ಭರಿತ ತುಂಟತನ
ಕದ್ದನವ ಎಲ್ಲರ ಮನ
ಹಸುಮಗುವಿನ ಮನದ ಜೊತೆಗಾರ...

ಸ್ನೇಹ ತೋರಿದರೆ ಭಂಟ
ಪ್ರೀತಿ ಮಾಡಿದರೆ ನೆಂಟ
ಶರಣಾಗತರ ಪೊರೆವ ಕರುಣಾಕರ...

ಹೆಚ್ಚೇನು ಹೇಳಲಿ..?
ವರ್ಣನೆಗೆ ನಿಲುಕನವ
ದಾಟಿಸುವನವ ಭಾವಸಾಗರ...

ಹೃದಯವೈಶಾಲ್ಯತೆಯ ಕಡಲು
ಅಪ್ಪಿದರೆ ತಾಯ್ಮಡಿಲು
ಸರ್ವಸ್ವ ಅವನೆನ್ನ ಮುರಳೀಧರ...

             ಶೈಲೂ....
[22/5/2019, 2:44 pm] Dr. B. N. Shylaja Ramesh: ಸುಗ್ಗಿಕಾಲ
*********

ಬಂದಿದೆ ನೋಡು ಸುಗ್ಗಿಕಾಲ
ವರ್ಷದ ದುಡಿಮೆಯ ಪ್ರತಿಫಲ
ಉತ್ತು,ಬಿತ್ತು, ಕಳೆ, ಸುಗ್ಗಿ ಕೊಯ್ಲು
ಇಂದು ಈ ಕಣದಲಿ ಬಟಾ ಬಯಲು

ಮನೆಮಂದಿಗೆಲ್ಲ ಕೈತುಂಬ ಕೆಲಸ
ವರ್ಷಂಪ್ರತಿ ದಿನ ಪ್ರತಿದಿವಸ
ದುಡಿದು ದಣಿದು ಭೂತಾಯಿ ಸೇವೆಮಾಡಿ
ಉದರನಿಮಿತ್ತ ಬೆಳೆದದ್ದು ಕಾಳುಕಡಿ

ಮಳೆ ಚಳಿ ಬಿಸಿಲೆನ್ನದ ಕಾಯಕ
ತುತ್ತು ಕೂಳಿಗೂ ಒಮ್ಮೊಮ್ಮೆ ಕಂಟಕ
ದುಡಿತದ ಪ್ರತಿಫಲಕೆ ಕಾಯಬೇಕು ವರ್ಷ
ರಾಶಿಯಲಿ ಧಾನ್ಯವ ಕಂಡಾಗ ಹರುಷ

ಸುಗ್ಗಿಯೆಂದರೇನೋ ಹಿಗ್ಗು ಮನಕೆ
ತೆನೆಯಲಿ ಪೋಣಿಸಿದ್ದ ಕಾಳ ಹೆಕ್ಕುವ ಬಯಕೆ
ಕೊಯ್ದ ಪೈರು ಕಲ್ಲುಗುಂಡಲಿ ತುಳಿಸಿ
ಬೇರ್ಪಡಿಸಿದ್ದ ಕಾಳ ರಾಶಿಯನ್ನಾಗಿಸಿ

ಹೊಟ್ಟು ಬೇರ್ಪಡಿಸಿ ಗಟ್ಟಿಕಾಳನ್ನಾರಿಸಿ
ತೂರಿ ಕೇರಿ ಜೊಳ್ಳುಗಳ ಪ್ರತ್ಯೇಕಿಸಿ
ರಾಶಿಯಾಗಿಸಿ ಹಣ್ಣುಕಾಯಿತ್ತು ಪೂಜಿಸಿ
ಮೊರತುಂಬಿದ ಕಾಳು ಬಡವನಿಗರ್ಪಿಸಿ

ವಂದಿಸಿ ಬೆಳೆಯಿತ್ತ ಭೂತಾಯಿಗೆ
ಸಹಕರಿಸಿ ಜೊತೆಯಾದ ದನ ಕರುವಿಗೆ
ಬೆಳೆದ ರೈತನಿಗೆ ನಂತರವೇ ತುತ್ತು
ಇದುವೇ ತಾನೇ ಸತ್ಸಂಸ್ಕಾರದ ಗತ್ತು

               ಶೈಲೂ.......
[23/5/2019, 9:52 am] Dr. B. N. Shylaja Ramesh: ಮೌನವೇಕೆ ರಾಧೇ
****************

ಮೌನಕ್ಕೆ ಶರಣಾದೆ ಏಕೆ ಗೆಳತಿ ರಾಧೇ.?
ಮನದಲೇಲಿನಿತು  ಚಿಂತೆ ಆವರಿಸಿದೆ
ನಿನ್ನೀ ಮೌನಕೆ ಬೃಂದಾವನವೇ ಸ್ಥಬ್ಧ
ನೋಡೀ ಪರಿಸರ ತಾಳಿತೆಂತು ನಿಶ್ಯಬ್ದ..!!

ನಿನ್ನ ನಲಿವಿಲ್ಲದೇ ಸೃಷ್ಟಿ ಚೈತನ್ಯಕೆಲ್ಲಿ ನಲಿವು
ಪುಷ್ಪಗಂಧಗಳಲೂ ಇನಿತಿಲ್ಲ ಚೆಲುವು
ನೋಡಲ್ಲಿ ಮಂದಾಲಿನವೂ  ಮೌನವಾಗಿಹ
ಉರಿವ ಸೂರ್ಯನೂ ಅದೇಕೋ ಬಳಲಿಹ.!!

ನೀ ಬೃಂದಾವನದ ಚೆಲುವಿನ ಖನಿ
ಮರೆಯಾಯ್ತೆಕೇ ನಿನ್ನುಲಿತದ ಇನಿದನಿ?
ಮಾಧವನ ಕಾಣದೇ ಬೇಸರವೇ?
ಅವನ ಅನುಪಸ್ಥಿತಿ ಮೌನಕೆ ಕಾರಣವೇ..!!

ಎನಿಹುದೇಳು ಮನದ ನೋವು?
ಶ್ಯಾಮನಿಲ್ಲದಿದ್ದುದಕೇನು ಕೊರಗು?
ಇರಬಹುದವನಿಗೆನೇನೋ ಕೆಲಸ
ಬಿಟ್ಟಿಲ್ಲೇ ಹೋಗಿರುವನಲ್ಲ ಮನಸ..!!

ಅವನ ನೆನಪಿಹುದಷ್ಟು ರಾಶಿ ರಾಶಿ
ಮನವಿರಿಸಿ ಅವನನೆನಪಲ್ಲೆ ಕಾಣೋಣ ಖುಷಿ
ನೋವು ನಲಿವುಗಳನ್ನೆಲ್ಲಾ ಅವನಿಗರ್ಪಿಸಿ
ಸೆಟೆದೇಳು ಗೆಳತಿ ಮೌನ ಮರ್ಧಿಸಿ..!!

ನೆನಪಿಗಿಹುದಲ್ಲ ಅವನ ಕೊಳಲು
ಕೊಳಲಲ್ಲವಿದು  ಅವನದೇ ನೆರಳು
ಸಾವಿರಜನ್ಮಕ್ಕಾಗುವಷ್ಟಿದೆ ಅವನೊಡನಾಟದ ಸುಖ
ಮೌನವ ತೊರೆದೇಳು ಬಾ ಗೆಳತಿ ಧರಿಸುತ ಹಸನ್ಮುಖ..!!

             ಶೈಲೂ......
[23/5/2019, 9:56 am] Dr. B. N. Shylaja Ramesh: ನಿನಗೆನ್ನ ನಮನ
*************
ಅರಿಯದಾದೆ ನಾ
ಇದೆಂಥಾ ಪರಿಯ ಕಾತರ
ಅರೆಘಳಿಗೆಯೂ ನಿಲ್ಲದು
ಮನಸು, ಬರಿದೇ ನಿನ್ನ ವಿಚಾರ

ವೇದ ಶಾಸ್ತ್ರಗಳ  ಉವಾಚ
ನೀನು ಆಕಾರ ನಿರಾಕಾರ
ಆದರೆ ನೀನೆನ್ನ ಮನದ
ಮೂರ್ತಿ,  ನೀನೇ ಸಾಕಾರ

ಶಾಂತಿ ಪ್ರೇಮವ ತುಂಬಿ
ಅನುಭೂತಿ ನೀಡಿಹೆ ಮಧುರ
ನಿನ್ನ ನಂಬಿ  ನಾ  ನಡೆವೆ
ಬದುಕಿಗೆ,  ನೀನೇ  ಆಧಾರ

ನಿನ್ನ ನಾಮವೇ ಮಧುರ
ಸುಮಧುರ ಸುಂದರ
ಭಕ್ತಿ ಪರಾಕಾಷ್ಠೆ ಯಲಿ
ದೈವದ,  ಸಾಕ್ಷಾತ್ಕಾರ

ಜಗದೊಡೆಯ ನೀನಾದೆ
ಜನಾರ್ಧನ ಅಜರಾಮರ
ಜಗವ ಪಾಲಿಪ  ಸ್ವಾಮಿ
ನಿನಗೆನ್ನ,  ಕೋಟಿ ನಮಸ್ಕಾರ

          ಶೈಲೂ......
[24/5/2019, 9:54 am] Dr. B. N. Shylaja Ramesh: ಕಾಯುವುದು ಬೇಸರದ ಸಂಗತಿ ಗೆಳೆಯ
ಆದರೂ ಕಾಯುತಿಹೆ
ನಿನ್ನ ಬರುವಿಗಾಗಿ
ಕೃಷ್ಣ ನಿಗಾಗಿ ಕಾಯ್ದ ರಾಧೆಯಂತೆ
ರಾಮನಿಗಾಗಿ ಕಾಯ್ದ ಸೀತೆಯಂತೆ
ಆಸೆ ಕಂಗಳಿಂದ ನೀ ಬರುವ ಹಾದಿಯಲಿ
ಕಾಯುತಿಹೆ ನಿನಗಾಗಿ ಬೇಗ ಬಾ.....

                    ಶೈಲೂ.....

[24/5/2019, 9:55 am] Dr. B. N. Shylaja Ramesh: ಸಂತ  ಭಾವ
***********

ನಾನೇನೂ  ವಿರಾಗಿಣಿಯಲ್ಲ
ಆದರೊಮ್ಮೊಮ್ಮೆ  ವೈರಾಗ್ಯ
ಹಾದು  ಮನಸಿನಲ್ಲಿ
ಮೂಡುತ್ತದೆ..  ಸಂತ ಭಾವ

ಕೆಲವೊಮ್ಮೆ ಮೌನ
ಮತ್ತದೇ ಮಾತು.. ಆದರೂ
ಹಾತೊರೆಯುತ್ತಿದೆ ಮನಸು
ಏಕಾಂತಕೆ  ಮನಸೋತು

ಎಲ್ಲರೊಡನೆ  ಬೆರೆತು
 ನಕ್ಕರೂ ನಲಿವಿನಲಿ
ಒಳಮನದಲೇನೋ
ಚಟಪಡಿಕೆ ನೋವಿನಲಿ

ಬೆರೆತಂತೆ ಅನಿಸಿದರೂ
ಯಾಕೋ ಮನಕೆ  ಚಿಂತೆ
ಮುಖವಾಡ ಇರಬಹುದೇ
ಇದು ಎಂದೆನಿಸುವಂತೆ

ಬದುಕ  ಸಂಭ್ರಮಿಸಿ
ನಕ್ಕು  ನಲಿಯುತ್ತಿರುವಾಗ
ಆಂತರ್ಯದಲ್ಲಿ ಏನೋ
ಮನ ಹಿಂಡಿದ ಆನುಭಾವ

ಏನೆಲ್ಲ ಅರಿಕೆ ಕನವರಿಕೆ 
ಮನಸೇ ಅರಿ 
ನೀ ಯಾರೆಂದು
ಪಡೆ ನೀ  ತಿಳುವಳಿಕೆ

ಬದುಕಲಿದ್ದರೂ ಇರು ನೀ
ತಾವರೆ ಎಲೆ ಮೇಲ ನೀರಿನಂತೆ
ಕೇಸರಾದರೂ ಸರಿ ಬಾಳು
ಅರಳು ನೀ  ಕಮಲದಂತೆ

ಬಿಡು ನೀ ಮನದ ನೋವು
ಇಡು ಭಕ್ತಿ ಅವನಡಿಯಲ್ಲಿ
ವೈರಾಗ್ಯವೋ, ಸಂಸಾರಿಯೋ
ಅರಿ ಎಲ್ಲವೂ ಅವನಿಚ್ಛೆಯಂತೆ..

         ಶೈಲೂ.....
[24/5/2019, 10:02 am] Dr. B. N. Shylaja Ramesh: ನಯನ

******


ಬಂದಿಲ್ಲವೇನು ಇನ್ನೂ

ವಿರಮಿಸುವ ಸಮಯ

ಕಳವಳವೇಕೆ ಮಲಗು

ಮುಚ್ಚಿ ಕಣ್ಣೆವೆಯ


ಏನಿಹುದು ಮನದಿ ಬೇಡಿಕೆ

ಬಾರದೇಕಿನ್ನೂ ತೂಕಡಿಕೆ

ಕಾಯ ದಣಿದಿಲ್ಲವೇನು

ಚಡಪಡಿಕೆಯೇಕೆ ಮನದ ಬಯಕೆ ಏನು.?


ಏನಿಹುದು ಮಹತ್ತರ ವಿಚಾರ

ಕಣ್ಣಿಗೆ ಕಾಣಿಸದ ಅಗೋಚರ

ಮನದಲೇನೋ ಗುಣಾಕಾರ ಭಾಗಾಕಾರ

ಅಂಕೆಗೆ ಸಿಗದ ಲೆಕ್ಕಾಚಾರ


ಮತಿಗೆಡಿಸುತಿದೆ ಏನೋ ಭ್ರಾಂತು

ಬೇಡದ ವಿಚಾರ ಮನದಲಿ ಕುಳಿತು

ಅರಿವಿಲ್ಲದಂತೆ ಕಾಲಗಣನೆ

ಇಡೀ ರಾತ್ರಿ ಜಾಗರಣೆ


ಎಚ್ಚರಿದ್ದು ಕಾಯುವ ವಿಚಾರವೇನು..?

ಬೆಳಗು ಮುಂಜಾವಿನಲೂ ಸಂದಿಗ್ಧವೇನು..?

ಹೇಳಲೇಕೆ ಏನೂ ಕಾರಣ..?

ಹೇಳುತಿದೆ ಸತ್ಯ ಅರೆತೆರೆದ ನಯನ...


             ಶೈಲೂ.....
[24/5/2019, 11:37 am] Dr. B. N. Shylaja Ramesh: ನಯನ
******

ಮನದ ಕನ್ನಡಿಯಿದು ನಯನ
ಅಂದದ ಮೊಗಕೆ ಮುನ್ನುಡಿ ನಯನ
ಮುಖಾರವಿಂದದಲಿ ಚಂದದ ಭಿತ್ತಿ
ಮನದ ಭಾವನೆ ಅರುಹುವ ಅಭಿವ್ಯಕ್ತಿ..!

ಹಾಲಿನ ಬಟ್ಟಲೊಳು ಕಪ್ಪು ದ್ರಾಕ್ಷಿ ಇಟ್ಟಂತೆ
ಹರಿವ ನೀರಿನೊಳು ಮೀನು ಹೊರಳಿದಂತೆ
ಮುಖದ ಕಮಲದಲ್ಲಿ ಜೋಡಿ ಕಮಲವಂತೆ
ಅಬ್ಬಾ..!! ಏನೇನು ಉಪಮೆ ನಯನಕೆ

ಸಂತಸದಿ ಅರಳರಲಿ ನಗುವುದು
ದುಃಖವಾದೊಡೆ ತಾನೇ ಅಳುವುದು
ಆಶ್ಚರ್ಯ ಸಂಭ್ರಮಕೇ ಬೆರಗು ನೋಟ
ಆಹಾ... ನಯನದಲೇನಿನಿತು ಬಗೆ ಬಗೆ ಮಾಟ

ಮನದ ಮಾತುಗಳ ಅರುಹುವುದು ನೋಟ
ಅದೇನು ಕರುಣೆ ಪ್ರೀತಿ ಒಡನಾಟ
ಜಗವನನುಭವಿಸಿ ಕಾಣಲು ಬೇಕು ದೃಷ್ಠಿ
ಆಹಾ.. ಅದೇನು ಸೊಬಗು ಆ ದೇವನ ಸೃಷ್ಟಿ

ಒಂದೊಂದು ಭಾವಕೊಂದೊಂದು ನೋಟ
ಭಯ ರೌದ್ರ ಭೀಕರ ಕರುಣಾ ಶೃಂಗಾರ
ಕೋಪತಾಪಕೂ ಹುಸಿ ಮುನಿಸ ನೋಟ
ಒಳಮರ್ಮವರಿವುದಕೆ ನೇರ ನೋಟ

ಶಾಂತಿಯನರಸಲು ನಯನ ಬುದ್ಧ ಪ್ರಬುದ್ಧ
ಅಂತಃಚಕ್ಷು ತೆರೆದರೆ ಸತ್ಯದರ್ಶನ ಸಂವೃದ್ಧ
ಮನದ ಬಿಂಬದ ಪ್ರತಿಬಿಂಬವೀ ಕಣ್ಣು
ಹೃದಯಭಾಷೆಯನರಿವ ನಯನವೇ  ಹೊನ್ನು

ಸೃಷ್ಟಿ ಸೌಂದರ್ಯ ಸವಿಯೆ ದೇವನಿತ್ತ ವರದಾನ
ದೇಹಸೌಂದರ್ಯಕೂ ಕಾರಣವೀ ನಯನ
ದೃಷ್ಠಿಹೀನರ ಕಂಡು ಕರಗಿ ಮರುಗುವುದು ಮನ
ತಮ್ಮೊಂದಿಗೆ ಮಣ್ಣಾಗಲು ಬಿಡದೆ ಮಾಡಿ ನೇತ್ರದಾನ

             ಶೈಲೂ......
[24/5/2019, 8:23 pm] Dr. B. N. Shylaja Ramesh: ನಾವಿಬ್ಬರೊಂದೇ..!!
*****************

ನಾವಿಬ್ಬರೊಂದೇ ಯಾಕೀ ಮೊರೆತ
ಬೇರಾದರೂ ಬೇರಲ್ಲವಿದು  ಆನೃತ
ಪ್ರುರುಷ - ಪ್ರಕೃತಿ ಒಂದಾದ ವೇಷ
ತಿಳಿ ನಾವರ್ಧನಾರೀ ಪುರುಷ

ನಾ ನಿನ್ನ ಕೈಯೊಳ ಕೊಳಲು
ನೀನಾಗಿ ಹೊಮ್ಮಿ ಅದರ ದನಿ
ಬೆಸೆದು ನವ ರಾಗ ಹೊಸೆಯೇ
ಹೊರಹೊಮ್ಮದೇ  ಇನಿದನಿ.?

ನಾನವನಿ ನೀನಾದೆ ಅಂಬರ
ಭೋರ್ಗರೆದು ಪ್ರೇಮ ಧಾರಾಕಾರ
ಎನಿಂಥ ಚುಂಬಕ ಸೆಳೆತವೀ ಅಮಲು.!
ತಡೆಹಿಡಿಯಿತೇ ಕಯ್ಯಲ್ಲಿನ ಕೊಳಲು ?

ತುಸು ಲಜ್ಜೆ ಬೆರೆಸಲಾರೆ ಕಣ್ಣು
ಇಂಥ ಸನಿಹ ಎದುರಿಸಲ್ಹೇಗೆ ನಾ ಹೆಣ್ಣು.!
ನೀಲದೊಳಗೇ ಗೌರ ಮಿಳಿತು
ನೀಲವಾಯ್ತು ಜಗ ಅವನೊಡನೆ ಕಲೆತು

ಹೇಗಿದ್ದರೂ ನಾವಿಬ್ಬರೊಂದು
ಬಿಡಿಸಲಾಗದ್ದು ಅನಂತವೀ ಸಖ್ಯ
ನಿನ್ನೊಳಗೆ ನಾನಾಗಿ ನನ್ನೊಳು ನೀನು
ದೂರಾಗದೆ ಬೆರೆಯುವುದು ಮುಖ್ಯ

              ಶೈಲೂ.....
[25/5/2019, 8:09 pm] Dr. B. N. Shylaja Ramesh: ದಾರಿ ಕಾಯುತ ನಿಂತೆ
*******************

ದಾರಿಕಾಯುತಿರುವೆ ನಲ್ಲ
ಇನ್ನೂ ನೀ ಏಕೆ ಬರಲಿಲ್ಲ
ಕನಸುಗಳ ಬೆನ್ನತ್ತಿ ನಿಂತೆ
ನೆನಪುಗಳ ಭಾರಕೆ ಸೋತೆ

ಮನದೊಳು ಅಳತೆ ಮೀರಿದ
ಭಾವಗಳ  ಆಂದೋಳನ
ಮನತುಂಬಿ ಓಡಿ ಬರುವ
ನೆನಪುಗಳ  ಸಮ್ಮಿಲನ

ಅನುರಾಗದ ಹೊಳೆಯಲ್ಲಿ
ಕೊಚ್ಚಿಹೋದ ಆ ಘಳಿಗೆ
ಬಿಡದೆ ಕಾಡುವ ಕನಸುಕಂಗಳ
ತುಂಬಾ ಭಾವಬಿಂಬದ ಮಳಿಗೆ

ಬಿಡದೆ ಭೋರ್ಗರೆವ ನಿನ್ನ
ಭಾವದಲೆಯಲಿ ಕೊಚ್ಚಿಹೋಗಿ
ಹಂಬಲಿಕೆ ಬಲವಾಯ್ತು
ಬರಲಿಲ್ಲೇಕಿನ್ನುನನ್ನ ಹೆಸರು ಕೂಗಿ

ಸಾವಿರ ಕನಸಿಗೆ ರಂಗು ಬಳಿದು
ಕಾದಿರುವೆ ನಿನಗಾಗಿ ಅಂಗಳದಲಿ
ಮಳೆಯಾಗಿ ಹನಿಸಿ ಕಾರ್ಮೋಡ ಕರಗಿ
ಕಾಣಲು ತವಕಿಸುತ್ತಿರುವೆ ಗೋಡೆಗೊರಗಿ

             ಶೈಲೂ.....
[27/5/2019, 11:25 am] Dr. B. N. Shylaja Ramesh: *ಸ್ನೇಹದ ವಿಹಾರದಲ್ಲಿ*

ನೂರು ಕಾಲ ಬಾಳಬೇಕು 
ನಗುನಗುತ ನೀವಿರಬೇಕು
ವಾರ್ಷಿಕೋತ್ಸವದ ಶುಭಾಶಯ
ಈಡೇರಲಿ ಸದಾಶಯ

ಸತಿಯ ಒಲವಿನಾಶ್ರಯದಿ
ಪ್ರೇಮದಾಲಾಪನೆಯಲ್ಲಿ
ಜೀವಿತದ ಕೊನೆಯವರೆಗೂ 
ಶ್ರೀ ಕೃಷ್ಣನ ಕೃಪೆಯಿರಲಿ

ನೋವುಗಳು ದೂರ ಸರಿದು 
ನಲಿವು ತಾ ಓಡಿ ಬಂದು 
ದಾಂಪತ್ಯದ ವಿಹಾರದಲ್ಲಿ
ಸಂತೋಷ ತುಂಬಿ ತುಳುಕಲಿ

ನಾಳೆಗಳು ನೆಮ್ಮದಿ ತರಲಿ
ನಿನ್ನೆಗಳು ನೆನಪಾಗುಳಿಯಲಿ
ಇಂದಿನ ಸವಿ ಕ್ಷಣ ಹಿತ ನೀಡಲಿ
ಬದುಕು ದಡವ ಸೇರಲಿ

ಕವಿಭಾವದ ಹಾರೈಕೆಯಿದು
ಕಡೆತನಕ ಉಳಿಯುವಂತದು
ಸಂಭ್ರಮ ಸಮೃದ್ಧಗೊಳ್ಳಲಿ
ಈ ಅನುಬಂಧ ಚಿರವಿರಲಿ

             ಶೈಲೂ....
[28/5/2019, 5:01 pm] Dr. B. N. Shylaja Ramesh: ಮುಗಿಯದ ಕಥೆ
**************

ನೋವುಗಳ ಹಿಂದಿಕ್ಕಿ
ನೋವು ನುಸುಳುವುದಲ್ಲ
ನಗುವೆಂವುದು ಮರೀಚಿಕೆ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ನಾಳೆಗಳಂದದ ಬದುಕಿಗೆ
ಇಂದು ಅಡಿಗಲ್ಲನಿಡಲು
ಕಾಲೆಳೆದು ಹೀಗಳೆವರೆಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಕಂಡ ಕನಸುಗಳನ್ನೆಲ್ಲ
ನನಸಾಗಿಸುವ ಬಯಕೆ
ಚುಚ್ಚಿ ಮನ ಹಿಂಡುವರಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಆಸೆಬಳ್ಳಿಗೆ ನೀರನುಣಿಸಿ
ಹೆಮ್ಮರವಾಗಿಸುವ ಬಯಕೆ
ಚಿಗುರಲ್ಲೇ ಚಿವುಟುವರು ಮಂದಿ
 ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಚಂದದ ಸಾವಿರ ಕುಸುರಿ
ಚಿತ್ತಾರದೆಳೆಯಲ್ಲೂ 
ಕಪ್ಪೊಂದು ಹುಡುಕುವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ರಾಜಾಸನದಿ ಕೂರಿಸಿ
ಸರ್ವಸೇವೆಗೈದರೂ
ತಪ್ಪೊಂದು ಹುಡುಕುವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಅಸನ ವಸನವಿತ್ತು
ತುತ್ತಿತ್ತು ತಣಿಸಿದರೂ
ದ್ರೋಹ ಬಗೆವವರೇ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಕಷ್ಟದಲಿ ಜೊತೆಯಿದ್ದು
ಸಹಕಾರವಿತ್ತರೂ ಕೊನೆಗೆ
ಬೆನ್ನ ಇರಿಯುವ ಮಂದಿ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಸಹಜ ಸ್ನೇಹವನಿತ್ತು
ಅಪ್ಪಿ ಅಧರಿಸಿದರೂ
ತಪ್ಪೇಣಿಸುವವರೆ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಬೆಳಕೀವ ದೀಪದ ಬೆಳಕಿದ್ದರೂ
ಅಡಿಯ ಕತ್ತಲೆಯನೆತ್ತೆತ್ತಿ
ಅಡಿಕೊಳ್ಳುವ ಮಂದಿಯಿವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಜ್ಯೋತಿಯೊಲು ತಾನುರಿದು
ಮನೆಗೆ ಬೆಳಕಾದರೂ ಸಹಿತ
ಹೆಣ್ಣೆಂದು ಜರಿವವರೆ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಹೆತ್ತವರ ಮರೆತು ಕೈಹಿಡಿದವರ
ಅನುಸರಿಸಿ ತೃಪ್ತಿಯಿಂದಿದ್ದರೂ
ತೆಪ್ಪಗಿರರೀಮಂದಿ ಕುಹಕ ನುಡಿವವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಸಹಜತೆಯ ಮರೆತೇಕೆ
ಅಸಹಜತೆಯ ದಾರಿಯಲಿ
ಕುಹಕವಾಡುವರಿವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಮುಗಿಯದೀ ಕಥೆಯ
ಎಂದು ಮುಗಿಸುವೆದೇವ
ಸಹನೆ ತಪ್ಪುವುದರೊಳಗೆ
ಮನ್ನಿಸಿ ಮುಗಿಸಿಬಿಡು ಬಾಳ ವ್ಯಥೆ...

           ಶೈಲೂ......
[30/5/2019, 9:17 am] Dr. B. N. Shylaja Ramesh: ನಾನಾಗಬೇಕಿತ್ತು...!!

ಕಪ್ಪನೆಯ ಕಾರ್ಮೋಡ
ಹನಿಹನಿಮಳೆಯಾಗಿ ಸುರಿದು
ಧರೆಯ ಮಣ್ಣೆಲ್ಲಾ ಮೆತ್ತನೆಯ
ಲಘು ಕೆಸರಾಗಿ ಒಸರಿತ್ತು....
ನನಗಾಗ ಅನಿಸಿದ್ದು
ನಾನಾಗಬೇಕಿತ್ತು ಆ ಮಳೆಹನಿಯೆಂದು..!

ಬಿತ್ತಿದ್ದ ಬೀಜವದು ಮೊಳಕೆಯೊಡೆದು
ಶಿರವೆತ್ತಿ ಮುಗಿಲತ್ತ ನೋಡಲು
ಹಸಿರು ಎಲೆಗಳು ಪಟಪಟನೆ ಸುತ್ತೊರೆದು
ತೆನೆಗಳಾಗಿ ಬಾಗಿತ್ತು...
ನನಗಾಗ ಅನಿಸಿದ್ದು
ನಾನಾಗಬೇಕಿತ್ತು ಆ ಪೈರತೆನೆಯೆಂದು...!

ಕಡುಕತ್ತಲೆಯ ಕಾನನದಿ
ಬಿರಿದಿದ್ದ ಬಿಳಿಮಲ್ಲಿಗೆಯ
ಮೊಗ್ಗು ಪಸರಿಸಿತ್ತು ಸುಮಧುರ ಸುವಾಸನೆಯನು...
ನನಗಾಗ ಅನಿಸಿದ್ದು
ನಾನಾಗಬೇಕಿತ್ತು ಆ ಮಲ್ಲಿಗೆಮೊಗ್ಗೆಂದು...!

ಪಚ್ಚೆ ಎಲೆಗಳ ಮಧ್ಯೆ ರಂಗುರಂಗಿನ
ರೆಕ್ಕೆಯನ್ನು ಪಟಪಟಿಸಿ
ಹೂವಿಂದ ಹೂವಿಗೆ ಹಾರುತ್ತಿದ್ದ
ಪಾತರಗಿತ್ತಿಯು ತೋಟದ ಸೊಬಗನ್ನೇ
ಮೆರೆಸಿದಾಗ ನನಗನಿಸಿದ್ದು
ನಾನಾಗಬೇಕಿತ್ತು ಆ ಮೋಹಕಚಿಟ್ಟೆಯೆಂದು..!

ರಸಭರಿತ ಮಾವುಗಳಿಂ ಜೋಲಾಡುವ
ಮಾವಿನಮರದ ತುದಿಯಂಚಿನ
ರೆಂಬೆಗಳಲಿ ಕುಳಿತು ಸಂಗಾತಿಯನರಸಿ
ಪಂಚಮದಲಿ ಧ್ವನಿಯಾಡಿಸುತ್ತಿದ್ದ
ಪರಪುಟ್ಟನ ನೋಡಿ ನನಗನಿಸಿದ್ದು
ನಾನಾಗಬೇಕಿತ್ತು ಆ ಕೋಗಿಲೆಯೆಂದು...!

ಕಡುನೀಲಿಗಗನದ ಕ್ಷೀರಪಥದಲಿ
ಬಿಳಿವಜ್ರ ಹರಳುಗಳಂತೆ ಮಿನುಗುತ್ತಾ
ನಗುತ್ತಿರುವ ಚುಕ್ಕಿ ನಕ್ಷತ್ರಗಳ
ಹಿಂಡು ನೋಡಿ ನನಗನಿಸಿದ್ದು
ನಾನಾಗಬೇಕಿತ್ತು ಆ
ಗಗನತಾರೆಯೆಂದು...!!

                   ✍ ವಿಜಯಾಸತ್ಯ
                ( ವಿಜಯಲಕ್ಷ್ಮೀ. ಎಸ್)
[30/5/2019, 9:18 am] Dr. B. N. Shylaja Ramesh: ಅಕ್ಷರ -ತರಂಗ ಸ್ಪರ್ಧೆ 

ಶೀರ್ಷಿಕೆ :ನಾನಾಗಬೇಕಿತ್ತು 
************************

ನಾ ಹಕ್ಕಿಯಾಗಬೇಕಿತ್ತು 
ರೆಕ್ಕೆಯೊಂದಿಗೆ ಬಾನಾಡಿಯಾಗಬಹುದಿತ್ತು 
ಕೋಗಿಲೆ ನಾನಾಗಬೇಕಿತ್ತು 
ವಸಂತಮಾಸದೊಳು ಚಿಗುರೆಲೆಯ ತಿಂದು 
ಕುಹೂ ಕುಹೂ ದನಿಗೆ ದನಿಯಾಗಬಹುದಿತ್ತು 

ನಾ ಮಳೆಯಾಗಬೇಕಿತ್ತು 
ಮೋಡದೊಳು ಹನಿಯಾಗಿ ಹುಟ್ಟಿ 
ಭುವಿಯ ಒಡಲ ತಣಿಸ ಬಹುದಿತ್ತು 
ಸ್ವಾತಿ ಹನಿಯಾಗಿ ಕಡಲಾಳವ ಸೇರಿ 
ಬಾಯಿತೆರೆದು ಕೂತ ಚಿಪ್ಪೊಳು ಸೇರಿ ಮುತ್ತಾಗಬಹುದಿತ್ತು 

ನಾ ಬೀಜವಾಗಬೇಕಿತ್ತು 
ನಾ ಧರಣಿಯ ಒಳ ಸೇರಿ 
ಬರುವ ಮಳೆ ಹನಿಗೆ ನೆನೆದು 
ಮೊಳಕೆ ಹೊಡೆಯ ಬಹುದಿತ್ತು 
ಮೊಳಕೆ ಗಿಡವಾಗಿ ರೈತನ ಬೆಳೆಯಾಗಬಹುದಿತ್ತು 

ನಾ ಶಿಲೆಯಾಗಬೇಕಿತ್ತು 
ಶಿಲ್ಪಿಯ ಉಳಿ ಪೆಟ್ಟಿಗೆ ನಾ ಮೂರ್ತಿಯಾಗಬಹುದಿತ್ತು 
ಮೂರ್ತಿ ಎಂದರೆ ಬರಿ ಮೂರ್ತಿಯಲ್ಲಾ 
ಶಿವಾಲಯದ ಎದುರು ಕೂತಿಹ ನಂದಿಯಾಗಬೇಕಿತ್ತು 
ದಿನನಿತ್ಯ ಶಿವನ ಮುಂದೆ ಕುಳಿತು ನಲಿಯಬಹುದಿತ್ತು 

ನಾ ಸಿರಿವಂತನಾಗಬೇಕಿತ್ತು 
ಸಿಕ್ಕ ಸಿಕ್ಕಲ್ಲಿ ತಿರಿವ ಮುಗ್ಧ ಮಕ್ಕಳಿಗೆ 
ನಾ ದಾರಿಯಾಗಬಹುದಿತ್ತು
ವೃದ್ಧರ ಸಾಕಿ ಸಲುಹಿ ಪ್ರೀತಿಯಿಂದಲೇ ನೋಡಿ 
ಅವರ ಹೃದಯದ ಆಶೀರ್ವಾದಕೆ ಭಾಜನನಾಗಬಹುದಿತ್ತು 

ಮಂಜುನಾಥ ನಾಯಕ ಎನ್ ಆರ್ (ನುಗ್ಗಿಹಳ್ಳಿ)✍️
[30/5/2019, 10:45 am] Dr. B. N. Shylaja Ramesh: ನಾನಾಗಬೇಕಿತ್ತು
***************

ಮೋಡದ ಮರೆಯಿಂದಿಣುಕಿ
ಹಾಲುಚೆಲ್ಲುದಂತೆ ಸುತ್ತಮುತ್ತ
ನಗುವ ಬೆಳದಿಂಗಳ ಕಂಡು
ಉಕ್ಕುಕ್ಕಿ ಹರಿವ ಕಡಲು ನಾನಾಗಬೇಕಿತ್ತು.!

ಇರುಳು ಬಾನಿನ ಲಾಂದ್ರ
ಹೊಳೆದೆಳೆವ ಸಮಯದಲಿ
ತಿಳಿಗೊಳದಿ ಬಿಮ್ಮನರಳಿ
ನಗುವ ನೈದಿಲೆ ಹೂವು ನಾನಾಗಬೇಕಿತ್ತು.!

ಕಾರ್ಮೋಡ ತಾ ಕರಗಿ
ಹನಿಹನಿಯಾಗಿ ಧರೆಗಿಳಿದು
ಭುವಿಯೊಡಲ ತಣಿಸುವ
ತುಂತುರು ಸೋನೆ ಮಳೆ ನಾನಾಗಬೇಕಿತ್ತು.!

ಗುಡುಗು ಸಿಡಿಲಾರ್ಭಟಡಿ
ಧೋ ಎಂದು ಮಳೆ ಸುರಿದಾಗ
ಬೆಚ್ಚಿ ಬೆದರದೆ ತಾನು
ಅಪ್ಪಿ ಅಲಂಗಿಸುವ ಇಳೆ ನಾನಾಗಬೇಕಿತ್ತು.!

ಮಳೆ ಬಿಸಿಲಿನಾಟಕೆ
ಪ್ರತಿಫಲಿಸಿ ಪ್ರತಿದ್ವನಿಸಿ
ವರ್ಣ ಮೇಳಗಳ ಸಂತೆಯಲಿ
ಮನಸೆಳೆವ ಇಂದ್ರಧನುಶ್ ನಾನಾಗಬೇಕಿತ್ತು.!

ಪಚ್ಚೆಗಿಡಗಳಲರಳಿ ಮೆಲ್ಲ
ಸೌಗಂಧದಲೇ ಬಂಧಿಸೆಲ್ಲ
ಕ್ಷಣಿಕ ಬದುಕಿದ್ದರೂ ಸಾಕು
ಅಚ್ಚ ಬಿಳಿಯ ಮಲ್ಲಿಗೆ ನಾನಾಗಬೇಕಿತ್ತು.!

ದೇವ ಆಸೆಯಿಹುದೇನೋ ಬಹಳ 
ನಾ ನೀನಿಟ್ಟಂತೆ ಇರುವ ಮರುಳ
ಆದರೂ ಕೊನೆಗೊಂದಾಸೆ
ನಿನ್ನೊಡಲಲ್ಲಿ ನಲಿವ ಕೈಗೂಸು ನಾನಾಗಬೇಕಿತ್ತು.!

        ಶೈಲೂ.

[30/5/2019, 1:05 pm] Dr. B. N. Shylaja Ramesh: ನನ್ನ ಪ್ರೀತಿಯ ಪಪ್ಪ  ಮೋಹನ್ ಪ್ರಸಾದ್ ರವರ  ಆಶಯದ ಮೇರೆಗೆ  ಈ  ಕವನ.....
       ಹೂವು

ಹೂವು 
******

ನಾನೊಂದು ಸುಂದರ ಹೂ..
ಅರಳಿ ನಗುವೆ ಕ್ಷಣ ಕ್ಷಣವೂ
ಒಂದು ದಿನದ.ಆಯುಷ್ಯ
ನಾ ಬಲ್ಲೆ ನನ್ನ ಭವಿಷ್ಯ..

ಚಂದದಿ  ಅರಳಿ, ಅರಳಿಸುವೆ
ನಿಮ್ಮೆಲ್ಲರ  ಮೊಗವ
ದೇವನಾಂಘ್ರಿಯಲಿ ಬೆರೆತು
ಪಡೆಯುವೆ  ಸಗ್ಗವ..

ಲಲನೆ ನಿನ್ನ ಮುಡಿಯೇರಿ
ಇಮ್ಮಡಿಸುವೆ ನಿನ್ನ ಚೆಲುವ
ನನ್ನಂದಕೆ ನಿನ್ನನ್ಹೋಲಿಸಿ
ಬಣ್ಣಿಸುವರು ನಿನ್ನಂದವ..

ಎಲ್ಲೆಡೆಯೂ ಅಲಂಕಾರಕೆ
ನಾನಿರಲೇ  ಬೇಕು
ಅಷ್ಟಾದರೂ  ಕೊಟ್ಟಿರೆನಗೆ
ಬದುಕು..ಅಷ್ಟೇ  ಸಾಕು..

ಹುತಾತ್ಮ ವೀರ ಯೋಧರಿಗೆ
ಮಾಡಿದರೆ  ಅರ್ಪಣೆ
ಸಂತಸದಿ ನಲಿವೆ ನಾ, ಮಾಡುವೆ
ನನ್ನನೇ  ಸಮರ್ಪಣೆ..

ಕಟುಕ ಮನಗಳೂ ಇವೆ
ಮೀರಿ ನಡೆವರು  ಎಲ್ಲೆ
ತುಳಿದು - ಮೆರೆವ ಜನರ
ಕೊರಳನಲಂಕರಿಸಲು ನಾನೊಲ್ಲೆ..

ನನಗಿಷ್ಟ ವೇನಿಹುದಿಲ್ಲಿ
ನಾ ನಿಮ್ಮ ಕೈಲಿರುವ  ಹೂವು
ಬೆಲೆಕಟ್ಟಿ ಮಾರಿದರೂ
ಸಹಿಸಲೇ ಬೇಕಲ್ಲ  ನೋವು..

ಒಂದೇ ದಿನದ ಬದುಕಾದರೂ
ನನ್ನ  ಹೆಸರು  ಅಮರ
ಗಿಡದಲೇ ಬಾಡಿ ಉದುರಿದರೂ
ಆ ಗಿಡಕೆ  ನಾ  ಗೊಬ್ಬರ..

ಇಷ್ಟಾದರೂ  ನಾನು
ಅರಳಿ ನಗುತಲಿರುವೆ
ಕುಸುಮ ಕೋಮಲೇ ನಾನು
ಮನುಜ..ಏಕೆನ್ನ  ಹೊಸಕುವೆ

ಉಪಯುಕ್ತ ನಾನೆಲ್ಲೆಡೆಯೂ
ಬದುಕು  ಸಾರ್ಥಕ
ಕೇಡೆಣಿಸುವ ಮನುಜ
ನೀ  ಬದುಕಿದ್ದೂ  ನಿರರ್ಥಕ..!

       ಶೈಲೂ...
[30/5/2019, 1:06 pm] Dr. B. N. Shylaja Ramesh: ಜೀವನ  ಸತ್ಯ
***********

ಯಾಕಿಂಥಾ ದುರಭಿಮಾನ
ಈ ಜಗದ  ಜನರಿಗೆ
ಇಲ್ಲೇ ತಳವೂರಿ
ನೆಲೆನಿಂತಾರೆನೋ ಕೊನೆಗೆ..?

ಎಷ್ಟು ಚೆಲುವಿದ್ದರೇನು.?
ಅದೆಷ್ಟು ಹಣವಿದ್ದರೇನು.?
ಗೆಲುವಿನ ಜೊತೆ ಜೊತೆಗೇ
ತಾ  ಮೆರೆದರೇನು.?

ಉಪ್ಪರಿಗೆಯ ತಪ್ಪಲಿನಲಿ
ಓಲಾಡಿದರೇನು..?
ಕೊನೆಗೊಮ್ಮೆ ಎಲ್ಲರೂ
ಸೇರಲೇ ಬೇಕು  ಮಣ್ಣು..!

ಜಗದ ಋಣವದು ತೀರೆ
ಅರೆಕ್ಷಣ ನಿಲ್ಲುವಂತಿಲ್ಲ..!
ವಿಧಿ ಬರೆದ ಬರಹವನು
ಬದಲಿಸಲಾಗದಲ್ಲ..!

ಅವ ಬಂದು ಕರೆದಾಗ
ಹೋಗಲೇ ಬೇಕಲ್ಲ..!
ಬರಲಾರೆ ಎಂದವನ
ಹೊರದೂಡುವಂತಿಲ್ಲ..!

ಯಾವ ಸಮಯವಾದರೂ
ಸರಿ ಹೊರಡಲಣಿಯಿರಬೇಕು..!
ಯಮ ಪಾಶಕೆ ಕೊರಳೊಡ್ಡಿ
ನಿಲ್ಲಲೇ ಬೇಕು..!

ಏನಿದ್ದರೇನು ಎಷ್ಟಿದ್ದರೇನು
ಹೋಗುವಾಗ ಮೂರು ಹಿಡಿ ಮಣ್ಣು..!
ನಾಲ್ಕುದಿನದ ಬಾಳಿದು
ಅರಿತು ತೆರೆ ಕಣ್ಣು..!

ಸರಿದಾರಿಯಲಿ ನಡೆದು
ಸೈ ಎನಿಸಬೇಕು..!
ಕೃಷ್ಣನೊಪ್ಪುವ ತೆರದಿ
ನೀ  ಬಾಳಬೇಕು..!

ಎಲ್ಲರೊಡನೆ ಬೆರೆತು
ನಲಿವ ಸಹನೆ ಇರಬೇಕು..!
ತನುವಳಿದರೂ ಸರಿ
ಹೆಸರುಳಿಯಬೇಕು..!

         ಶೈಲೂ......
[31/5/2019, 10:50 am] Dr. B. N. Shylaja Ramesh: ಕವಲುದಾರಿ

ಬಾಳಪಯಣದಲಿ ಎದುರಾದಾಗ ಕವಲುದಾರಿ
ಎತ್ತ ಕಡೆ ತಿರುಗುವುದೋ ಎಂಬ ಭ್ರಾಂತಿ
ಯಾವ ದಾರಿ ಹಿಡಿಯುವುದೋ ತಿಳಿಯದೆ
ಏನೊಂದೂ ಅರಿಯಲಾಗದೆ ಮನದೆ ವಿಭ್ರಾಂತಿ.

ಪ್ರಮುಖ ಘಟ್ಟಗಳಲಿ ಈ ಹೊರಳುದಾರಿ
ನಿರ್ಧಾರ ಮಾಡಲಾಗದು! ದೊಡ್ಡ ಜವಾಬ್ದಾರಿ
ನಿರ್ಣಯದ ಮೇಲೆ ಬದುಕು ನಿರ್ಭರ
ತಪ್ಪುದಾರಿಯ ಹಿಡಿದರೆ ಬಾಳೇ ದುರ್ಭರ.

ಅಯೋಮಯದ ಈ ಸಮಯದಲಿ
ನಂಬಿಕೆಯೊಂದೆ ಭರವಸೆಯ ಜ್ಯೋತಿ
ದೈವಕಾರುಣ್ಯದ ಕರ ಹಿಡಿದು ಮುನ್ನಡೆಸೆ
ದಾರಿ ನಿಚ್ಚಳˌಹೊಮ್ಮುವುದು ಜೀವನಪ್ರೀತಿ.
                       ಸುಜಾತ ರವೀಶ್
[31/5/2019, 10:55 am] Dr. B. N. Shylaja Ramesh: ಪದ ಪದ್ಯೋತ್ಸವ 
                      🌹ಕವಲುದಾರಿ🌹

ನಿಂತಿರುವೆ ಕವಲುದಾರಿಯಲಿ 
ತಿಳಿಯದೆ ನಾ ಎತ್ತ ಸಾಗಲಿ 
ಮಸುಕಾಗಿವೆ ಕಂಗಳು
ಕಣ್ಣೀರಿನ ಪೊರೆಯಲಿ
 
ಏರಿದ್ದೆ ಹಸೆಮಣೆಯ 
ಚಂದದ ಬದುಕಿನ ಚಿತ್ರದೊಂದಿಗೆ  
ವರಿಸಿದ್ದೆ ಅವನ 
ಹೊಸಬಾಳಿನ ಕನಸಿನೊಂದಿಗೆ 

ಬಣ್ಣಬಣ್ಣಗಳ ತೋರಿಸಿದ್ದ ಕೆಲವು ದಿನಗಳವರೆಗೆ 
ಬಯಲಾಗಿತ್ತು ನಂತರ ಅವನ ಹೊಸ ಬಗೆ
ಮಾತುಮಾತಿಗೂ ಚುಚ್ಚು ನುಡಿ 
ಹೊತ್ತುವುದು ಸಂಶಯದ ಕಿಡಿ

ನಿಂತರೂ ತಪ್ಪು ಕೂತರೂ ತಪ್ಪು
ಅರಿವಿಲ್ಲ ಇವನಿಗೆ ಯಾವುದು ಒಪ್ಪುತಪ್ಪು 
ಮೊಸರಲ್ಲೂ ಕಲ್ಲು ಹುಡುಕುವ ಗಂಡಗೆ
ಹೇಗೆ ತಿಳಿಸಿಕೊಡಲಿ ನಾ ಮೆಲ್ಲಗೆ

ಮರೆತು ನನ್ನನೇ ಸತ್ತಂತೆ ಬದುಕಿಬಿಡಲೇ  
ಇಲ್ಲ ಉಳಿಸಿ ನನ್ನತನವ ಮರೆತು ಇವನ 
ನಿಜ ಅರ್ಥದಲ್ಲಿ ಜೀವಿಸಿಬಿಡಲೇ 
ಏನು ಮಾಡಲಿ ನಾ ನಿಂತಿರುವೆ ಕವಲುದಾರಿಯಲ್ಲಿ 

ಶಶಿಕಲಾ
[31/5/2019, 10:56 am] Dr. B. N. Shylaja Ramesh: ಪದಪದ್ಯೋತ್ಸವ
ಕವಲುದಾರಿ
*""""******"""***

ಮರಕ್ಕೊಂದು ರೆಂಬೆ ಕೊಂಬೆ.
ದಾರಿಗೊಂದು ಕವಲು ದಾರಿ.
ಇದು ಲೋಕಾರೂಢಿ ಕವಲು ಕೊಂಬೆ ಹೂ ಹಣ್ಣು ಕೊಡದೇನು?
ಒಬ್ಬೊಬ್ಬರ ಗುರಿ ಒಂದೊಂದು‌ ಕಡೆ ಇದ‌ ಮರೆತೆಯೇನು?

ಬದುಕೊಂದು ಪಯಣ.
ಇಲ್ಲಿದೆ ಹಲವು ಬಗೆಯ ಯಾನ.
ಎಲ್ಲರಿಗೂ ಇಲ್ಲ ಒಂದೇ ನಿಲ್ಧಾಣ.
ಎಲ್ಲಿ ಬದುಕೊ ಅಲ್ಲೇ ಜೀವನ‌ ಯಾನ.

ಹಲವು‌ಊರು ಹಲವು ಮಂದಿ.
ದುಡಿತಕೆ ಸೇರುವ ಒಂದೆಡೆ.
ಸಾಗುವ ಮನೆಗೆ‌ ಬೇರೆಡೆ.
ಬಾಳ ಬದುಕಲಿ‌ ಜನರಿದಕೆ‌ ಬಂಧಿ

ಕವಲು ದಾರಿ ಎಂದೆಕೆ ಬೇಸರ.
ಇದೆ ಜೀವನದಲೂ ಒಡಂಬಡಿಕೆ‌ ಕರಾರ.
ಪ್ರತೀಯೊಬ್ಬ ಗುರಿ ಮುಟ್ಟಲೇ ಬೇಕು.
ಅದು ನೇರ ದಾರಿಯೊ ಕವಲುದಾರಿಯೊ ಅರಿವಿರಬೇಕು.

ಬಾಳಲಿ ಹೊಂದಾಣಿಕೆ ಇದ್ದರೆ‌ ನೇರದಾರಿ
ಇಲ್ಲದಿರೆ  ಮಾಡಲೇಬೇಕು ಕವಲುದಾರಿ
ಕವಲುದಾರಿಯಲೂ ಗುರಿಮುಟ್ಟುವ ಕ್ಷಮತೆ ಇರಲಿ.
ಬರುವಾಗ ನೀ‌ ಒಂಟಿ ಹೋಗುವಾಗ‌ ನೀ‌ಒಂಟಿ‌ ನೆನಪಿರಲಿ.

ನೀರನು‌ ತಡೆದು‌ ಆಣೆಕಟ್ಟು ಕಟ್ಟಬಹುದು
ಅತಿಯಾದರೆ ಅದೂ ಬಿರುಕು ಬಿಡದೆ.?
ಅಂತೆಯೇ ಸಂಬಂಧಗಳು...ಒತ್ತಾಯದೊಳು ಯಾವುದೂ ನಡೆಯದು.
ಬದುಕು ಕವಲು ದಾರಿಯೆಂದು‌ ಹಿಂಜರಿಯಬಾರದು.

ಕವಲುದಾರಿಗೂ ಒಂದು ಗುರಿ ಇದೆ‌ ಎಂಬುದ ಮರೆಯಬೇಡ.
ಕವಲುದಾರಿಯಲಿ ನಡೆವವರೆಲ್ಲ ಕೆಟ್ಟವರಲ್ಲ
ನೇರದಾರಿಯಲಿ ಹೋಗುವವರು ಸಂಭಾವಿತರೂ ಅಲ್ಲ
ಏನೇ ಆದರೂ‌ಮನುಜ ಬಾಯಿಗೆ ಹಾಕು‌ಬೀಗ.ನಡೆ ನಿನ್ನ ಗುರಿಯತ್ತ‌ಇದ ಮರೆಯಬೇಡ.
[31/5/2019, 10:59 am] Dr. B. N. Shylaja Ramesh: ಪದಪದ್ಯೋತ್ಸವ # ಕವಲುದಾರಿ #

ಯಾವುದೋ ದಾರಿ ಎಲ್ಲಿಗೋ ಪಯಣ
ಗೊತ್ತು ಗುರಿ ಇಲ್ಲದ ತೊಡಕುಗಳಾಗರ ಜೀವನ
ನನ್ನವಳೇ ಎಂದುಸುರಿ ಬಿಟ್ಟೇಕೆ ಹೋದೆಯೋ ರಮಣ
ಒಳ ಹೊರಗೂ ನಿನ್ನನ್ನೇ ಅರಸುತ್ತಿವೆ ನನ್ನ ನಯನ

ಸುಂದರವಾದ ಬದುಕು ಒಮ್ಮೆಲೇ ಭಾರವಾಯಿತು
ಎತ್ತ ಸಾಗುವುದೋ ಏನು ಮಾಡುವುದೋ ತಿಳಿಯದಾಯಿತು
ಭಗವಂತಕೊಟ್ಟ ಈ ಜೀವ ಬರೇ ಉಸಿರಿದ್ದ ಶವವಾಯಿತು
ಎಷ್ಟು ಯೋಚಿಸಿದರೂ ಮುಂದೆ ದಿಕ್ಕು ತೋಚದಾಯಿತು

 ಸರಿದಾರಿಯಲ್ಲಿಯೂ ಒಮ್ಮೆ ಎದುರಾಗುತ್ತದೆ ಕವಲುದಾರಿ
ಬದುಕು ಬೇಕೆಂದು ಬಯಸಿದಾಗ ಚಿತ್ತವಾಗುತ್ತದೆ ಚಂಚಲ
ನಿನ್ನೆದೆಯ ಹಸಿರನರಸಿ ಬಂದವಳಿಗೆ ಸಿಕ್ಕಿದ್ದು ಬಯಲುದಾರಿ
ಎಂದಾದರೂ ನೀ ಬರುವೆ ಎಂಬ ನನ್ನ ನಂಬಿಕೆಯೇ ಅಛಲ

ಸುಚಿತ್ರಾ ಸುದರ್ಶನ್ ೩೧.೦೫.೨೦೧೯
[31/5/2019, 11:01 am] Dr. B. N. Shylaja Ramesh: ಪದ ಪದ್ಯೋತ್ಸವ
****************
  ಕವಲುದಾರಿ....
****************

ಇರುವುದು ಜೀವನದಿ ನೂರಾರು ದಾರಿ
ಬರುವುದೊಮ್ಮೆಯಾದರೂ ಕವಲುದಾರಿ
ಎದುರಿಸಬೇಕಾಗುವುದು ಈ ಕಠಿಣ ದಾರಿ
ಆರಿಸಿಕೊಂಡು ಸಾಗಬೇಕಾಗುವುದು ಈ ದಾರಿ

ಬಾಲ್ಯದ ದಿನಗಳಲಿ ಆಸೆಗಳ ಹೆದ್ದಾರಿ
ಯೌವನದೊಳು ಕೌತುಕದ ಕುತೂಹಲದಾರಿ
ಜೀವನ ಜಂಜಾಟದಿ ಏಳುಬೀಳಿನ ಕಗ್ಗತ್ತಲದಾರಿ
ಸಂಸಾರ ಸಾಗರವ ದಾಟುತಾ ಹಳ್ಳಕೊಳ್ಳದ ದಾರಿ

ಒಂದಿನಿತೂ ಮೈಮರೆತರೂ ತಾಳ ತಪ್ಪುವ ಹಾದಿ
ಬರುವ ಕವಲುದಾರಿಯಲಿ ಸಾಗುವ ಸುಲಲಿತ ಹಾದಿ
ನಮ್ಮೊಳಿತಿಗೆ ಅನುವಾಗುವ ದಾರಿಯ ಆಯ್ಕೆಯ ಹಾದಿ
ಅರಿತು ನಡೆವ ತಿಳುವಳಿಕೆಯಿದ್ದರೆ ಬಲು ಸುಲಭ ಹಾದಿ

**************   ಅನಿತ.ಪಿ.ಕೆ...*****************
[31/5/2019, 11:02 am] Dr. B. N. Shylaja Ramesh: #ಪದ_ಪದ್ಯೋತ್ಸವ_ಕವಲುದಾರಿ

ನಡೆಯುತ್ತಲೇ ಇರುತ್ತೇವೆ
ಬಾಳಿನ ಪಯಣದಲ್ಲಿ
ನಿಲ್ಲದೇ, ಕೆಲವೊಮ್ಮೆ 
ಓಡುತ್ತೇವೆ, ತೆವಳುತ್ತೇವೆ
ಗುರಿ ಮುಟ್ಟುವಾಸೆಯಲಿ
ಇದ್ದಕ್ಕಿದ್ದಂತೆ ಎದುರ‌ಗುತ್ತದೆ
ಕವಲುದಾರಿಯೊಂದು…

ಮನದೊಳಗೆ ಅರಂಭ
ಸಂದಿಗ್ಧತೆ… ತೊಳಲಾಟ
ಯಾವ ದಾರಿ ಹಿಡಿವುದೆಂಬ
ದ್ವಂದ್ವ, ಎಡವೋ? ಬಲವೋ?
ಅರಿವಾಗದೇ ನಿಲ್ಲುತ್ತೇವೆ, ದೀರ್ಘಆಲೋಚನೆಯಲಿ ಮುಳುಗುತ್ತೇವೆ…

ಯೋಚಿಸಿಯೇ ಆಯ್ದುಕೊಳ್ಳುತ್ತೇವೆ
ನಮ್ಮ ಆಯ್ಕೆ ಸರಿ ಎಂದುಕೊಳ್ಳುತ್ತೇವೆ
ಆತ್ಮವಿಶ್ವಾಸದಿಂದ ಮುನ್ನಡೆಯುತ್ತೇವೆ
ಆದರೂ ಕೆಲವೊಮ್ಮೆ ಸೋಲುತ್ತೇವೆ
ದಾರಿಯನ್ನು ಕಳೆದುಕೊಳ್ಳುತ್ತೇವೆ…
ಗುರಿಯಿಂದ ದೂರಾಗುತ್ತೇವೆ…

–ಟಿ.ಕೆ.ವಾಣಿ
[31/5/2019, 11:02 am] Dr. B. N. Shylaja Ramesh: ಪದ ಪದ್ಯೋತ್ಸವ 
                      🌹ಕವಲುದಾರಿ🌹

ನಿಂತಿರುವೆ ಕವಲುದಾರಿಯಲಿ 
ತಿಳಿಯದೆ ನಾ ಎತ್ತ ಸಾಗಲಿ 
ಮಸುಕಾಗಿವೆ ಕಂಗಳು
ಕಣ್ಣೀರಿನ ಪೊರೆಯಲಿ
 
ಏರಿದ್ದೆ ಹಸೆಮಣೆಯ 
ಚಂದದ ಬದುಕಿನ ಚಿತ್ರದೊಂದಿಗೆ  
ವರಿಸಿದ್ದೆ ಅವನ 
ಹೊಸಬಾಳಿನ ಕನಸಿನೊಂದಿಗೆ 

ಬಣ್ಣಬಣ್ಣಗಳ ತೋರಿಸಿದ್ದ ಕೆಲವು ದಿನಗಳವರೆಗೆ 
ಬಯಲಾಗಿತ್ತು ನಂತರ ಅವನ ಹೊಸ ಬಗೆ
ಮಾತುಮಾತಿಗೂ ಚುಚ್ಚು ನುಡಿ 
ಹೊತ್ತುವುದು ಸಂಶಯದ ಕಿಡಿ

ನಿಂತರೂ ತಪ್ಪು ಕೂತರೂ ತಪ್ಪು
ಅರಿವಿಲ್ಲ ಇವನಿಗೆ ಯಾವುದು ಒಪ್ಪುತಪ್ಪು 
ಮೊಸರಲ್ಲೂ ಕಲ್ಲು ಹುಡುಕುವ ಗಂಡಗೆ
ಹೇಗೆ ತಿಳಿಸಿಕೊಡಲಿ ನಾ ಮೆಲ್ಲಗೆ

ಮರೆತು ನನ್ನನೇ ಸತ್ತಂತೆ ಬದುಕಿಬಿಡಲೇ  
ಇಲ್ಲ ಉಳಿಸಿ ನನ್ನತನವ ಮರೆತು ಇವನ 
ನಿಜ ಅರ್ಥದಲ್ಲಿ ಜೀವಿಸಿಬಿಡಲೇ 
ಏನು ಮಾಡಲಿ ನಾ ನಿಂತಿರುವೆ ಕವಲುದಾರಿಯಲ್ಲಿ 

ಶಶಿಕಲಾ
[31/5/2019, 11:03 am] Dr. B. N. Shylaja Ramesh: #  ಪದಪದ್ಯೋತ್ಸವ..  ಼ ಕವಲು ದಾರಿ ಼

ಸೃಷ್ಟಿಕರ್ತನ ಸೃಷ್ಟಿಯಲಿ
ಅವನಾಡುವ ಆಟದಲಿ
ನಾವು ಬಂದೇವು ಭುವಿಯಲಿ
ಬದುಕುವ ಹಾದಿಯಲಿ

ಕೊಟ್ಟನವ ಹಾದಿಯೆರಡ
ಬಿಟ್ಟನವ ನಮ್ಮ ಜಾಡನೋಡ
ಕಲ್ಲು ಮುಳ್ಳು  ಸತ್ಯದಾರಿಹರಡಿ
ಕಣ್ ಮಿಂಚುವ ಸುಳ್ಳದಾರಿಯಡ

ಅಂಜದಿರು ಅಳುಕದಿರು
ಅಯೋಮಯವಾಗದಿರು
ಸಲಹೆಗಳೊಂದಿಗೇರು ಪೇರು
ನಿನ್ನಾತ್ಮಸಾಕ್ಷಿ ಮರೆಯದಿರು

ತ್ವರಿತ ಲಾಭ ಮೋಹಬೇಡ
ತ್ವರಿತ ಸುಖವ ಬಯಸಬೇಡ
ಅಂಜಿ ಸತ್ಯ ದಾರಿ ತ್ಯಜಿಸಿ ಬೇಡ
 ಅಡ್ಡ ದಾರಿ ಹಿಡಿಯಬೇಡ

ಕಷ್ಟ ಧೈರ್ಯ ಸೆಣಸಿದಾಗ
ರಾಜಮಾರ್ಗನಡೆದಾಗ
ಗಟ್ಟಿ ಭರವಸೆ ನಿಂತಾಗ
ಆತ್ಮಸ್ಥೈರ್ಯ ಮೆರೆದಾಗ

ಕರುಗಿ ಕತ್ತಲು ಬೆಳಕಾಗುವುದು
ಕಲ್ಲು ಮುಳ್ಳು ದೂರಸರಿವುದು
ಅಭಯಹಸ್ತನಕಿರಣಗಳ ಬೆಳಕ ದಾರಿಕಾಣುವುದು
 ಜೇನತುಂಬಿದಪಾತ್ರೆ ಹೂದಾರಿನಿನ್ನದಾಗುವುದು
       
                  ಼಼ರಮಾಪಾರ್ಥಸಾರಥಿ಼಼
[31/5/2019, 11:04 am] Dr. B. N. Shylaja Ramesh: #ಸಾಹಿತ್ಯೋತ್ಸವ#
#ಪದ_ಪದ್ಯೋತ್ಸವ_ಕವಲುದಾರಿ_

ಬಾಳಿನ-ನಿತ್ಯ-ನಿರಂತರ ಯಾನ;
ಗಂಟು ಬೀಳುತಿದೆ-
ಕವಲು-ದಾರಿಯ-ಪಯಣ;
ಮನದೊ-ಳಗೆ ಭಣಭಣ;
ದ್ವಂದ್ವ-ಯುದ್ಧದ-ಮೇಣ;
ಆಗಿಸಿದೆ-ಹೈರಾಣ.....!

ಬಹಳ ಸಲ ಅಂದು-ಕೊಂಡಿ-ರುವೆ::
ಕಳ್ಳಿ ಗಿಡವಾಗಿ,ಎತ್ತರ ಬೆಳೆದು ಬಿಡಬೇಕು;
ಮುಳ್ಳಿಂದ ಚುಚ್ಚಿ,ಗಾಸಿ-ಗೊಳಿಸಬೇಕು.!
ಪಾರ್ಥೇನಿಯಂ ಕಳೆಯಾಗಿ,ಜನಿಸಿ-
ವಂಶಾಭಿ-ವೃದ್ಧಿ-ಗೊಳಿಸಿ,
ಅಂತರ್ಜಲ ಹೀರಬೇಕು-
ಸಸ್ಯನಾಶಗೊಳಿಸಿ-ಖುಷಿಪಡಬೇಕು.!
ಇಲಿಯೂ ಬೇಡ;ಹುಲಿಯೂ ಬೇಡ-
ಸೊಳ್ಳೆಯಾಗಿಬಿಡೋಣ;
ಕೆಲವೇ ಗಂಟೆಗಳ ಬಾಳಲ್ಲಿ,
ಹೆಚ್ಚು ಜನರ ರಕ್ತ ಕುಡಿಯೋಣ.!
ಮಿಣುಕು ಹುಳುವಾಗಿ,
ಮಿನುಗೇ ಮಿಂಚೆಂದುಬ್ಬಿ-
ಹಾರಾಟ ಮಾಡೋಣ.!
ಕೊಡಲಿ-ರಾಮನೇ-ಆದರೆ-ಹೇಗೆ..?!

ಅನಿಸಿದೆ-ಅನೇಕ-ಸಲ::
ಆಲದ ಮರವಾಗಿ,ಸುತ್ತೆಲ್ಲ-ವಿಸ್ತರಿಸಿ,
ಬಿಳಿಲುಗಳಿಂದ-ಬೇರೂರಿ,
ಬಲವುಳ್ಳ,ರೆಂಬೆ-ಕೊಂಬೆಗಳಿಂದ ಶೋಭಿಸಿ,
ಹಲವು ಜೀವಿಗಳಿಗೆ-
ಆಶ್ರಯವ-ನೀಯ-ಬೇಕು.!
ಪರಿಮಳ ಹರಡುವ ಗಂಧದ ಮರವಾಗಿ,
ಉಪಕಾರಿ-ಯಾಗ-ಬೇಕು.!
ರಾತ್ರಿಯ ಕತ್ತಲೆ-ಯೊಳಗೆ
ಮಾರ್ಗ ತೋರಿಸುವ,
ದಾರಿ-ದೀಪ-ವಾಗಬೇಕು.!
"ಭೂಲೋಕದ-ಕಲ್ಪವೃಕ್ಷ"ವಾಗಿ-ತೂಗಿ,
ಜನಾನು-ರಾಗಿ-ಯಾಗಬೇಕು.!

ಬರುವುದು ವಿಚಾರ ಹಲವು ವೇಳೆ::
ಹೀಗೇ-ಕೆ?ಇದೆಲ್ಲವ ಮಾಡಲು-ನಾ-ನಾರು?
ಬಂದಿದ್ದೇಕೆ,ಕೆಲಸವೇನು,ಮಾಡಿದ್ದೇನು?
ಸ್ವಂತದ್ದೇ-ಹಾಸುವಷ್ಟು,ಹೊದೆವಷ್ಟಿ-ಹುದು
ಬೇರೆಯ-ವರ-ದ-ಕಟ್ಟಿಕೊಂಡೇ-ನು?
ಕೆಸುವಿ-ನೆಲೆ-ಯಂತೆ-
ಹಸುಗೂಸಿ-ನಂತೆ-
ನಿರ್ಲಿಪ್ತ-ನಾ-ಗೋಣ-
ಅಲ್ಪ-ತೃಪ್ತ-ನಾ-ಗೋಣ...!!!

ಇರುವುದು-ಈಗೆರಡು-ದಾರಿ;
ಸತ್ಯ-ಅಸತ್ಯ;ಧರ್ಮ-ಅಧರ್ಮ;
ನಿತ್ಯ-ಮಿಥ್ಯ;ಸುಜ್ಞಾನ-ಅಜ್ಞಾನ;
ಬಂಧ-ಮೋಕ್ಷ...!
ಮುಕ್ತಿ-ಬೇಕಿದೆ-ಎನಗೆ;
ಮುಗಿಸುವೆ-ಕರ್ತವ್ಯ-ನಾನು-ನಾನಾಗಿ-
ಕೊನೆಗೆ-ಕರೆ ಬರಲು-ಹೊರಡುವೆ;
ಏನೇ ನಡೆಯಲಿ
ನಾ-ನಾ-ಗುವೆ
ಮಾನವ-ನಿಜ-ಮಾನವ-...!!!!
***""""""********************
ಗಣಪತಿ_ವರ್ಧನ್_ಬೆಂಗಳೂರು_
೩೧-೦೫-೨೦೧೯
***********************
[31/5/2019, 12:45 pm] Dr. B. N. Shylaja Ramesh: ಕವಲುದಾರಿ
***********

ಇದು ಮುಗಿಯದ ಬಾಳ ಪಯಣ
ನಿತ್ಯ ನಿರಂತರ ಸಾಗುವುದೇ ಜೀವನ
ಸಾಗುತ್ತ ಸಾಗುತ್ತ ಸವೆಸಿ ಅರ್ಧದಾರಿ
ಧುತ್ತನೆದುರು ನಿಂತಿತೇಕೆ ಈ ಕವಲುದಾರಿ?

ಎತ್ತಕಡೆಗಿನ್ನು ಪಯಣ ತಿಳಿಯದಾಯ್ತೆ
ಇತ್ತಲೋ ಅತ್ತಲೋ ಎತ್ತಲೋ ಎದುರಾಯ್ತು ಚಿಂತೆ
ಎತ್ತ ನಡೆದರೆ ಇಹುದು ಪಯಣ ಸುಗಮ
ತಪ್ಹೆಜ್ಜೆ  ಇಟ್ಟರದು ಕವಲುದಾರಿಯ ಭ್ರಮಾ

ಪ್ರಮುಖ.ಘಟ್ಟವಿದು ಬಾಳ ಪಯಣಕೆ
ನಿರ್ಧರಿಸಲಾಗದು ಏಕೋ ಹೆದರಿಕೆ
ನಿರ್ಣಯದಲಿಹುದು ಬದುಕ ಸಿಹಿ ಕಹಿ
ತಪ್ಪುದಾರಿಯ ನಡಿಗೆ ಭರಿಸಲಾಗದ ಕಹಿ

ತೋಚದಾಗಿದೆ... ಈಗ ಎತ್ತ ನಡೆಯಲಿ?
ಭರವಸೆಯ ಜ್ಯೋತಿ ಬೇಕಿದೆ  ದೃಢ ನಿಲುವಿನಲಿ
ಕರಹಿಡಿದೆನ್ನ ಮುನ್ನೆಡೆಸು ಹೇ ಮಾಧವಾ
ಸರಿದಾರಿಯಲೆನ್ನ ನಡೆಸು ಹೇ ಯಾದವಾ..

           ಶೈಲೂ.....
[1/6/2019, 9:38 am] Dr. B. N. Shylaja Ramesh: "ಇಳೆಗೆ ಮಳೆ" 
ಧಗಧಗಿಸುವ ಧರಣಿಗೆ
ಹಂಬಲಿಸಿದ ಮನಗಳಿಗೆ
ಬೇಸತ್ತಿರುವ ರೈತರಿಗೆ
ಮುಂಗಾರಿನ ಮಳೆಹನಿ ತಂಪೆರೆಯುತಿದೆ

ಧೋ ! ಧೋ !ಎನ್ನುತಲಿ
ರಫರಫ ಪಟಪಟವೆನ್ನುತಲಿ
ಬಾನಂಚು,ಮುಗಿಲಮಿಂಚಿಂದ
ಫಳಫಳನೆ ಮಳೆಬಂತು ಇಳೆಗೆ ರಭಸದಿಂದ।।

ಸಿಡಲಾರ್ಭಟದಿ,ಗುಡುಗುಕೋಲ್ಮಿಂಚಿಂದ
ಚಿಟಪಟನೆ ಆಲಿಕಲ್ಲಿನಮಳೆ ಮುಗಿಲಿಂದ
ಸುರಿಯಿತು ಇಳೆಗೆಮಳೆ ಹರಿಯಿತು ಹೊಳೆಯು
ಸುರಿದ ವರ್ಷಧಾರೆಗೆ ಹರಿಯಿತು ಹರ್ಷಧಾರೆಯು ।।

ಕಾದುಕೆಂಡವಾದ ಭೂಮಿ
ಮಂಜಿನಂತೆ ಕರಗಿ ತಂಪಾಗಿ
ಪಕ್ಷಿಗಳು ಕೂಗಿದವು ಇಂಪಾಗಿ
ತಂಗಾಳಿಬೀಸಿದವು ಸೊಂಪಾಗಿ।।

ಆಯಿತು ಸುತ್ತಲಿನ ಪರಿಸರಮಂದಿರ
ಎಲ್ಲೆಲ್ಲೂ ಕಾಣದಂತ ದಿವ್ಯಸುಂದರ।
ಪುಷ್ಪಗಳ ಪರಿಮಳ ಹರಡಿತು ಸರಸರ
ತಂದಿತು ಜೀವಕುಲಕೆ ಆನಂದದಾಗರ।।

✍🏻ಶ್ರೀಈರಪ್ಪ ಬಿಜಲಿ ಶಿಕ್ಷಕರು♥
ಸಾ।।ಭಾಗ್ಯನಗರ,ತಾ।।ಜಿ।।ಕೊಪ್ಪಳ
ಮೊ:8123686020,7019181570.
[1/6/2019, 9:38 am] Dr. B. N. Shylaja Ramesh: ಇಳೆಗೆ ಮಳೆ

ಮಳೆಯಿಲ್ಲದೆ ಭೂಮಿ ಬಾಯ್ಬಿಟ್ಟು ಬರಡಾಗಿದೆ.
ಸುಡುವ ಬಿಸಲ ಧಗೆಗೆ ಕಾದ ಇಳೆ ಕೆಂಪಾಗಿದೆ.
ಓ ಮುಂಗಾರಿನ ಮಳೆರಾಯ ಬೇಗ ಬಂದು ತಣಿಸು.
ಸುಟ್ಟು ಕೆಂಡವಾಗಿಹ ಭುವಿಯ ತಾಪವ ನೀಗಿಸು.

ನೀರಿಲ್ಲದೆ ಕೆರೆ, ಕಟ್ಟೆ, ನದಿ ಒಣಗಿ ಬತ್ತಿ ಹೋಗಿದೆ.
ಕುಡಿವ ನೀರಿಗೂ ಜನ-ಜಾನುವಾರು ಹಪಹಪಿಸುತಿವೆ.
ಪೈರು ಪಚ್ಚೆ, ದವಸ ಧಾನ್ಯಗಳು ಇಲ್ಲವಾದರೆ,
ಬಿಸಿಲ ಬೇಗೆಗೆ ಪ್ರಾಣ ಶಕ್ತಿ ಕುಗ್ಗಿ ಹೋಗುತಿದೆ.

ಮಳೆ ಕುಸಿಯಲು ಮಾನವನೇ ಕಾರಣವಾಗಿಹನು.
ಮೂಢನವ ಮನ್ನಿಸಿ, ಧೋ! ಎಂದು ಸುರಿದುಬಿಡು.
ಕೆರೆ, ಭಾವಿ, ಭೂಗರ್ಭ ಜಲವನೆಲ್ಲಾ ತುಂಬಿಸಿಬಿಡು.
ಹಸಿರು ಮೈದುಂಬಿ ಭೂ ತಾಯಿ ನಳ ನಳಿಸುವಳು.

ಗಿಡ, ಮರ, ಬಳ್ಳಿಗಳು ಚಿಗುರಿ ಚೆಲುವ ತುಂಬಿಸಿ,
ಮಧುಮಗಳಾಗಿ ಭೂರಮೆಯ ಹೂ ಹಣ್ಣಿನಲಿ ಸಿಂಗರಿಸಿ,
ಪ್ರಕೃತಿಯ ಸೊಬಗಿನಿಂದ ಧರಣಿಯ ಸ್ವರ್ಗವಾಗಿಸು.
ತಂದೆ ನೀನು ಪಿಡಿದು ಪೊರೆಯೊ ಕಂದಮ್ಮಗಳನು.

ಭೂ, ವಾಯು, ಜಲ, ಅಗ್ನಿ, ಆಕಾಶ ಪಂಚತತ್ವಗಳೇ,
ಕೋಟಿ ಕೋಟಿ ಜೀವಸಂಕುಲದ ಆಶ್ರಯ ದಾತರು ನೀವು,
ಮುನಿಯದಿರಿ ಇಳೆಯಲಿ ಮಳೆ ಬೆಳೆಯ ಕಾಲಕಾಲಕೆ
ಕರುಣಿಸಿ, ಮುಗ್ಧ ಮಕ್ಕಳು ಬಿಡದೆ ಸಲಹಿರಿ ನಮ್ಮನು.

ಜ್ಯೋತಿಲಕ್ಷ್ಮಿ ಬಿ.ಎನ್
[1/6/2019, 9:39 am] Dr. B. N. Shylaja Ramesh: ॥ಇಳೆಗೆ ಮಳೆ॥
 ಆ ರಾಯ ಬಂದ
ಈರಾಯ ಬಂದ
ಬರುವನಂತೆ ಇನ್ಯಾವುದೋ ರಾಯ
ಬರದಿರೆ ಮಳೆರಾಯ ಇಳೆಗೆ
ಬೆಂದು ಹೋಗುವುದು ಸಕಲ
ಜೀವಿಗಳ ಕಾಯ
ಇಳೆಗೆ ಬಂದರೆ ಮಳೆ
ತೊಳೆದು ಹೋಗುವುದು ಕೊಳೆ
ಹೆಚ್ಚಾಗುದು ಎಲ್ಲರ ಮುಖದ ಕಳೆ
 ಮಳೆಯಂದರದು ಆಕಾಶದಿಂದ
ಇಳಿದು ಬರುವ ಉದ್ದುದ್ದ ಶುಧ್ದ ನೀರೆ
ನೀರಿನ ಮಗದೊಂದು ಹೆಸರು ಜೀವ
 ಇಳೆಗೆ ಬರುವ ಮಳೆ ತರುವುದು
ಜೀವ ಕಳೆ ಬಾರದಿರೆ ಮಳೆರಾಯ
ಕಾಣುವುದು ಎಲ್ಲಿ ನೋಡಿದರಲ್ಲಿ ಕೊಳೆ
ಮಳೆರಾಯ ಒಮ್ಮೊಮ್ಮೆ ಅನಿರೀಕ್ಷಿತ  ಅತಿಥಿ 
ಇನ್ನೊಮ್ಮೆ ಅತಿ ನಿರೀಕ್ಷಿತ ಅತಿಥಿ ಮತ್ತೊಮ್ಮೆ 
ಬಾರದೆ ಮಾಡುವನೆಲ್ಲರ ತಿಥಿ 
ಮಳೆರಾಯನ ಮನ ಓಲೈಕೆಗೆ ಮದುವೆಯಂದರೇನರಿಯದ
ಗಾರ್ಧಭಜೋಡಿಗೆ ಮಾಡುವರು ಮದುವೆ ಅವಕೆ ಚಿಂತೆ ನಮ್ಮನು
ಎಳೆದು ಕೊಂಡು ಹೊಂಟರೆಲ್ಲಿಗೆ
ಇಳೆಯಂಬ ಮಹಿಳೆ ಅಂದು ಮಲೆಗಳೆಂಬ
ತುಂಬ ಕುಚಗಳ ಮಹಿಳೆ  ಸ್ವಾಗತ ಅವಳಿಂದ ಪರ್ಜನ್ಯರಾಜಗೆ
ಮರಗಿಡಗಳೆಂಬ ಬೀಸಣಿಕೆ ಬೀಸಿ  ತಂಗಾಳಿ
ಸುಳಿಗಾಳಿ ಸುಗಂಧ ಪೂರಿತ ಕುರಿಲ್ಗಾಳಿಗಳ
ಪಸರಿಸಿದಾಗ 
ಮೋಹದ ಮಾಯಗೆ ಮನಸೋತ 
ಮಳೆರಾಯ ಬಂದಿಲ್ಲಿಗೆ ರಮಿಸುತಿದ್ದ
ಇಳೆಯಂಬ ದಿವ್ಯ ಸುಂದರಿಯ
ಆಕಾರ ರಹಿತ ನಡುವು ಬೆಟ್ಟ ಗುಡ್ಡಗಳಿಲ್ಲ
ಸಪೂರ ಸಪಾಟ ವಕ್ಷಸ್ಥಲ ವ್ರಕ್ಷಗಳಿಲ್ಲದ
ಬೋರು ಬರಿದಾದ ನೆಲ ಮಳೆರಾಯ ಅದ್ಹೇಗೆ
ಮಾಡಬೇಕು ಮನ
ಇಳೆಯಂಬ ಮಹಿಳೆಯ ಸ್ಥಿತಿ
ಸೈನ್ಯಕ್ಕೆ ಸೇರಿದ ಸರ್ದಾರನ
ಸತಿಯ ಪರಿಸ್ಥಿತಿ   ಸದಾ ಗಡಿಯಲಿ
ಸಂಕಟ ಸಿಗುವುದಿಲ್ಲ ರಜೆ ಇಲ್ಲಿವಳಿಗೆ
ವಿರಹದ ಸಜೆ 
ಗರತಿ ನಮ್ಮ ಅವನಿ  ಕಾಯುವಳು
ತನ್ನಿನಿಯನಿಗಾಗಿ  ಬೇಡುವಳು 
ದೇವನ ಬೇಗ ಬರಲಿಮಳೆರಾಯ
ತಂಪಾಗಲಿ ಸುಡುವ ನನ್ನೀಕಾಯ
[1/6/2019, 10:45 am] Dr. B. N. Shylaja Ramesh: ಧಗಧಗಿಸುವ  ಬಿಸಿಲಝಳಕೆ
ಬಳಲಿ ಬೆಂಡಾಗಿದ್ದಾಳೆ ಅವನಿ
ಹನಿ ನೀರಿಗೆ ಹಪಹಪಿಸುತ್ತಾ
ಮುಗಿಲೆಡೆಗೆ ಬಾಯ್ತೆರೆದಳು ಭೂಮಿ

ಕಾಯ್ದ ಕೆಂಡದಂತಾಗಿ ಒಡಲು
ಮರುಟಿಬಿಟ್ಟಿದೆ ಗಿಡಮರಬಳ್ಳಿ
ಕುಡಿವ ನೀರಿಗೂ ಹಾಹಾಕಾರ
ಪ್ರಾಣಿ ಪಕ್ಷಿಗಳಿಗೆ ಜೀವನವೆಲ್ಲಿ

ಬತ್ತಿದೆ ಕೆರೆಕಟ್ಟೆ ನದಿ ಅಂತರ್ಜಲ
ನೆಲಬಿರಿದು ಉರಿಕೆಂಡ 
ಬಾನಂಚಲ್ಲಿ ಕಟ್ಟಿದ್ದ ಕಾರ್ಮೋಡ
[2/6/2019, 10:01 am] Dr. B. N. Shylaja Ramesh: ......‌‌‌ಪರಿಸರ ಸಂರಕ್ಷಣೆ.........

ಎನಿತು ಸುಂದರವು ಭೂರಮೆಯ ಒಡಲು
ತಿಳಿದುನೋಡಲು ಶಿವನ ಕರುಣೆಯ ಕಡಲು

ದುರಾಸೆಯಿಂದ ಬಗೆದಿಹನು ತಾಯೊಡಲ
ಕಡಿದಿಹನು ನೆರಳಿಡುವ ನೂರಾರು ವೃಕ್ಷಗಳ
ಕಡಿಮೆಯಾಗಿದೆ ನೋಡು ಅಂತರ್ಜಲದ ಮಟ್ಟ
ಪ್ರಕೃತಿ ಸಮತೋಲನಕೆ ನೀಡಿಹನು ಪೆಟ್ಟ// //

ಖನಿಜ ಸಂಪತ್ತೇನು ವನದ ಸಂಪದವೇನು
ಎಲ್ಲವೂ ತನ್ನಯ ಹಿತಕಾಗೇ ಎನ್ನುವನು
ಪ್ರಕೃತಿಸಂರಕ್ಷಣೆಯ ಕರ್ತವ್ಯ ಮರೆತಿಹನು
ನಾಳಿನಾ ಪೀಳಿಗೆಯ ಹಿತವ ಕಡೆಗಣಿಸಿಹನು// //

ಒಲೆ ಹತ್ತಿ ಉರಿದೊಡೆ ನಿಲಬಹುದು ಅಲ್ಲದೆ
ಧರೆ ಹತ್ತಿ ಉರಿದೊಡೆ ನಿಲಬಹುದೇ ತಾಯೇ
ವಿವೇಕ  ಉದಯಿಸಲಿ ಎಲ್ಲರೆದೆಗಳಲಿ
ಮತ್ತೆ ಭೂರಮೆಯು ಹಸಿರಾಗಿ ನಳನಳಿಸಲಿ// //

ಒಂದು ವೃಕ್ಷವನಾದರೂ ನೆಟ್ಟು ನಲಿವ
ಇಂಗುಗುಂಡಿಗಳಿಂದ ಜಲವ ಸಂರಕ್ಷಿಸುವ
ಪೋಲಾಗದಂತೆ ಜಲವ ಸಂರಕ್ಷಿಸುವ
ವಸುಂಧರೆಯೊಡಲಲ್ಲಿ ಧನ್ಯತೆಯ ಪಡೆವ// //

ಸರ್ಕಾರವೆ ಮಾಡಬೇಕಿಲ್ಲ ಎಲ್ಲ
ನಮ್ಮ ಹೊಣೆಗಾರಿಕೆಯ ನಾವೇ ಅರಿಯಬೇಕಲ್ಲ
ಸಾಲುಮರದ ತಿಮ್ಮಕ್ಕ ಸಾಕ್ಷಿ ಇದಕೆ
ಅವರ ಆದರ್ಶ ದೀಪವಾಗಲಿ ಜಗಕೆ// //
[2/6/2019, 10:02 am] Dr. B. N. Shylaja Ramesh: # ಚಿತ್ರಕ್ಕೊಂದು ಕವನ ಸ್ಪರ್ಧೆ#
***************************
# ಪರಿಸರ ಸಂರಕ್ಷಣೆ #
********************
ಪ್ರಕೃತಿ ಚೆಲುವಿನ ದೇವಿ ನೀಡಿಹಳು ಬಹು ಒಲವು,
ಹರಿಸುತ್ತ ಜಗ ಪ್ರಾಣಿ,ಪಕ್ಷಿಗಳಿಗೆ ಬೇಕಾದುದೆಲ್ಲ!
ಮಾನವನ ಅತಿ ಆಸೆ ಸ್ವಾರ್ಥ ಹಂಬಲ ಫಲವು,
ವಿಕೃತಿಯಾಗುತಿದೆ ಆ ಮಹಾತಾಯಿಯೊಡಲು‌ !!
ಎಚ್ಚೆತ್ತುಕೋ ಮನುಜ, ವಿಕೃತಿಯನು ತಡೆಯುತ್ತ,
ಬೆಟ್ಟ,ಗುಡ್ಡದಿ ಗಿಡ ಮರಗಳನ್ನು ಬೆಳೆಸುತ್ತ,
ಮಾಡಿದಾ ಪಾಪ ಕರ್ಮಗಳಿಗೆ ಪರಿಹಾರ ಮಾಡು,
          *************************
ರಚನೆ : ಶ್ರೀ ಗೋಪಾಲ ಭಟ್.ಸಿ.ಯಚ್.
ಕೇರಳ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕರು
ಕಾಸರಗೋಡು.
ಹಕ್ಕುಸ್ವಾಮ್ಯ  : ಲೇಖಕರಲ್ಲಿ.
         **************************
ತಾರೀಖು :೨--೬--೨೦೧೯
         ***************************
[2/6/2019, 10:02 am] Dr. B. N. Shylaja Ramesh: # ಚಿತ್ರಕ್ಕೊಂದು ಕವನ ಸ್ಪರ್ಧೆ #
***********************************
( # ದೀರ್ಘ ಕವನ : 😀😀😀😀🙏🙏)
***********************************
# ಪರಿಸರ ಸಂರಕ್ಷಣೆ #
***********************************
ಮರ,ಗಿಡಗಳ ಕಡಿ,ಕಡಿದು ಭೂಮಿಯೊಡಲ ಬಗೆ,ಬಗೆದು ಮನುಜ ಮಾಡಿದ ಪ್ರಕೃತಿ,ವಿಕೃತಿ!
ತರ,ತರದ ವನ ಸಂಪದವ ಸ್ವಾರ್ಥಕ್ಕೆ ಬಳಸುತ್ತ
ಪಶು,ಪಕ್ಷಿ ಸಂಕುಲಕೆ ತಂದಿತ್ತ ಆಪತ್ತು ಕಿತಾಪತಿ !
ಎಲ್ಲಿ ಹೋಯಿತು?, ಆ ನಿತ್ಯ ಹರಿದ್ವರ್ಣ ಕಾಡುಗಳು?, ಎಲ್ಲಿ ಮರೆಯಾದುವು?ಆ ಗಗನ ತುಂಬಿ ಬೃಹದ್ಗಾತ್ರದ ಮಹಾ ವೃಕ್ಷಗಳು,
ಎಲ್ಲಿ ಹೋಯಿತು ಹಸಿರು ಹೊದಿಸಿದ್ದ ಆ ಸುಂದರ ಬೆಟ್ಟ,ಗುಡ್ಡಗಳು?.
ಎಲ್ಲವೂ ಸ್ವಾರ್ಥ ಮನುಜನ ಆಸೆ,ಪಿಪಾಸುವಿಗೆ
ಮರೆಯಾದುವಲ್ಲಾ?
ಸಸ್ಯ ಶ್ಯಾಮಲೆ, ಹರಿದ್ವರ್ಣ ಕಾಡುಗಳ 
ಆ ಹಸಿರು ಚೆಲುವನ್ನು ತಾನೆ ಕಳೆದೊಗೆದು,
ಮಳೆ ಮೋಡ,ಮಂದ ಮಾರುತ,ತಡೆಗೋಡೆ ಹರಿದೊಗೆದು,ಮಳೆ,ಇಲ್ಲ ಬೆಳೆ ಇಲ್ಲ 
ಎಂದೆನುತ ಮರುಗುತ್ತಾ,ಮುಗಿಲ ಕಡೆ ನೋಡುತ್ತ ಪರಿತಪಿಸಿ ನಿಂದು,
ಆ ದೇವರು,ಈ‌ ದೈವಕ್ಕೆ ಅಭಿಷೇಕ,ಹರಕೆಗಳ
ದಿನ ನಿತ್ಯ ಮಾಡುತ್ತ,ಕೊರಗುತ್ತಾ ನಿಂದು,
ತನ್ನ ಸ್ವಯಂಕೃತ ಅಪರಾಧವರಿಯದೆಲೆ,
ಆ ಇಂದ್ರ,ಚಂದ್ರನಿಗೆ ಮೊರೆಯಿಡುತ ನೊಂದು,
ಕೊನೆಗೊಮ್ಮೆ ತನ್ನ ತಪ್ಪಿನ ಜ್ಞಾನೋದಯವಾಗುತ್ತ,
ಈಗಿದೋ ಗಿಡಗಳನ್ನು ನೆಡುವ ತಾನಿಂದು!
ಅಲ್ಲಲ್ಲಿ ಪ್ಲ್ಯಾಸ್ಟಿಕ್,ಕಸಕಡ್ಡಿ,ಮಾಂಸ 
ತ್ಯಾಜ್ಯಗಳನೆಸೆದು,
ನದಿ,ಹೊಳೆ,ತೋಡು,ಮಾರ್ಗ ಬೀದಿಗಳ
ಮಲಿನಗೊಳಿಸುತ್ತ,
ಬೆಟ್ಟ,ಗುಡ್ಡಗಳನ್ನು ಯಂತ್ರಗಳಿಂದ ಅಗೆದು,ಬಗೆಯುತ್ತ
ಕೆರೆ,ತೊರೆ,ಬಾವಿಗಳ ಮಣ್ಣಿಂದ ಮುಚ್ಚುತ್ತ,
ಹೊಲ,ಗದ್ದೆಗಳ ಬಿಡದೆ ಕಟ್ಟಡಗಳ ಕಟ್ಟುತ್ತ,
ಹಳ್ಳಿ ಬದುಕು ಬೇಡ,ಪಟ್ಟಣಕೇ ಸಾಗುತ್ತ,
ಊರು ಹೊಲಗದ್ದೆಗಳ ಮೂರು ಕಾಸಿಗೆ ಮಾರುತ್ತ,
ವಿಕೃತವ ಮೆರೆವ ಮನುಜನಿಗೆ ಪ್ರಕೃತಿ ಪ್ರೇಮ,ವ್ಯಾಮೋಹ ಮರೆತು ಹೋಯಿತು,
ಕೃತಕ ಯಾಂತ್ರೀಕೃತ ಬದುಕು ಇಷ್ಟವಾಯ್ತು, ನೆಮ್ಮದಿಯ ಬದುಕು ಮರೆಯಾಯ್ತು !!
ಮೋದಿಯವರಾಗಲಿ,ಇನ್ನೊಬ್ಬ ಮಂತ್ರಿಯೇ
ಹೇಳಿದರೆಂದು ಪರಿಸರ ಸ್ವಚ್ಛ ಮಾಡಲು ಹೊರಡುವುದಲ್ಲ!,
ನಮಗೆ,ನಾವೇ ನಮ್ಮ ಪರಿಸರವನ್ನು
ಸ್ವಚ್ಛವಾಗಿರಿಸಬಹುದಲ್ಲಾ?!!

ಮಾಡುವಾ ತಪ್ಪುಗಳ ಮೊದಲೆ ಎಚ್ಚರಿಸಿತ್ತು,
ಆ ಮಾತೆ ಪ್ರಕೃತಿ, ಬಿರುಗಾಳಿ,ಚಂಡಮಾರುತ,
ಭೂಕಂಪ,ಸುನಾಮಿ ರೂಪದಲ್ಲಿ,
ಎಡೆಗೆಡೆಗೆ ಬರಗಾಲ,ಬಿರು ಬಿಸಿಲು ಸುಡುವಾಗ,
ಎಚ್ಚೆತ್ತುಕೊಳ್ಳಬೇಕಿತ್ತು,ಮಾನವ ಜನಾಂಗ!
ಆ ಕಾಡು ಮರಕೋತಿ,ಹಂದಿ,ಹುಲಿ ಚಿರತೆಗಳು,
ಕಾಡಾನೆ,ಜಿಂಕೆ ನವಿಲುಗಳು ನಾಡರಸಿ ಬಂದಾಗ!!
ಆದರೂ ಅರಿವಾಗದಿದ್ದಾಗ,ಪ್ರಕೃತಿ ವಿಕೃತಿ ಮುಂದುವರಿದಾಗ,ಮತ್ತಿನ್ನೇನು ಆದೀತು? ಬರಗಾಲ,ಕುಡಿನೀರಿಗೂ ತತ್ವಾರ,ಆಗದಿದ್ದೀತೇ?, ಆದರೂ ಮನುಜ ಎಚ್ಚೆತ್ತುಕೊಳ್ಳದಿರೆ,
ಭೀಕರತೆ ಉಲ್ಬಣವು,ಭೂಮಿ ಆಳದಾಳಕ್ಕೂ ಕೊರೆದರೂ , ಸಾವಿರ ಅಡಿಗಿಳಿದರೂ,ನೀರಿಲ್ಲದೆ ಹಾಹಾಕಾರವು !
ಇನ್ನಾದರೂ ಎಚ್ಚೆತ್ತುಕೋ,ಮನುಜ!,
ನೆಡುವ ಗಿಡವ,ಆರೈಕೆ ಮಾಡಿ ಬೆಳೆಸುವ ಮರವ,
ನಾಳಿನಾ ಮಕ್ಕಳಿಗೂ,ಪಶು,ಪಕ್ಷಿ ಸಂಕುಲಕೂ
ಇರಲಿ ಈ ಬುವಿಯು ತಂಪಾಗಿ,
ಇರಲಿ ಸಂಮೃದ್ಧ ಕುಡಿನೀರು,ಕೆರೆ,ತೊರೆ,
ಹೊಳೆ,ನದಿ ಜಲದಿಂದ ತುಂಬಿರಲಿ,
ಮರ ಗಿಡಗಳು ಹೂ ಕಾಯಿ,ಹಣ್ಣಿಂದ 
ತುಂಬಿ ತುಳುಕುತ್ತಿರಲಿ,
ಆ ಹಲಸು,ಮಾವು,ನೆಲ್ಲಿ,ಪೇರಳೆ,ನೇರಳೆ
ಸವಿ,ಸಿಹಿ ಹಣ್ಣು ಎಲ್ಲರಿಗೂ ಸಂವೃದ್ಧಿಯಾಗಿ ಸಿಗುವಂತಾಗಲಿ,
ಕುಹೂ,ಕುಹೂ,ಕೋಗಿಲೆ ಹಾಡು ಕೇಳುವಂತಾಗಲಿ,
ನವಿಲು ಗರಿಬಿಚ್ಚಿ ಕುಣಿಯುವಂತಾಗಲಿ,
ಸಿಹಿ ಜೇನು,ಮರಗೆಲ್ಲುಗಳಲ್ಲಿ ,
ಪೊಟರೆಗಳೆಡೆಯಲ್ಲಿ ದೊರಕುವಂತಾಗಲಿ, 
ಜಿಂಕೆ,ಸಾರಂಗ,ಮೊಲ,ದನ,ಕರು ಅಲ್ಲಲ್ಲಿ ಮೇಯುವಂತಾಗಲಿ,
ಇಂತಾಗಲು ಮರಗಿಡಗಳು ಎಲ್ಲೆಡೆಗೂ ಬೆಳೆಯುವಂತಾಗಲಿ!
ಸುಮ್ಮನೇ ವಿಶ್ವ ಪರಿಸರ ದಿನಾಚರಣೆ ಎಂದು ಫೋಟೋಗೆ ಪೋಸ್ ಕೊಡಲೋಸುಗ 
ಗಿಡ ನೆಡುವ ಕಾರ್ಯಕ್ರಮ ಬೇಡ !
ವನಮಹೋತ್ಸವವೆಂದು ಒಂದು ದಿನದಲ್ಲಿ ಭರ್ಜರಿಯಾಗಿ ಮಂತ್ರಿ,ಮಾಗಧರನ್ನು ಕರೆಸಿ ಐಷಾರಾಮಿ ವೈಭವದ ಗಿಡ ನೆಡುವ 
ಕಾಯಕವೂ ಬೇಡ !!
ಸಾಲು ಮರದ ತಿಮ್ಮಕ್ಕನಂತೆ ನಾವೂ ಗಿಡ ನೆಟ್ಟು ಬೆಳೆಸಿ ಮರ ಉಳಿಸುವ ಕೆಲಸ ಮಾಡುವ!
ಮಕ್ಕಳನ್ನೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ !!
ಹಸಿರೆ ಉಸಿರಾಗಲಿ,ಉಸಿರು ಸರಾಗವಾಗಲಿ.
ಮತ್ತೊಮ್ಮೆ ಆ ತೇಗ,ಗಂಧ,ಹಲಸು,ಗಗನ ಚುಂಬಿ,
ಬೀಟಿ,ಉತ್ತಮೋತ್ತಮ ಮೋಪಿನ ಮರಗಳು ಬೆಳೆದು
ಗಗನದೆತ್ತರಕ್ಕೂ ಶುದ್ಧವಾಯು ಪಸರಿಸುವಂತಾಗಲಿ!
ಉಸಿರಾಡಲು ಸ್ವಚ್ಛ ತಂಗಾಳಿ ಸದಾ ಬೀಸುವಂತಾಗಲಿ!
ಇಂದು ನೆಡುವ ಸಹಸ್ರ,ಸಹಸ್ರ ಗಿಡಗಳನ್ನು
ಎಂತು ಮಗುವನ್ನು ರಕ್ಷಿಸುವೆವೋ?,
ಅಂತೆಯೇ ಅವುಗಳ ಸಂರಕ್ಷಿಸುವ,ಬೆಳೆಸಿ 
ನಾಡು ಜೀವನ ಸುಖೀಯಾಗಿಸುವ!
ಇದೇ ನಮ್ಮ ಪ್ರತಿಜ್ಞೆಯಾಗಲಿ,ಇಂದೇ ಇದಕ್ಕೆ ಮೂಹೂರ್ತವಾಗಲಿ!
ವನ ಸಂವೃದ್ಧಿ ನಮ್ಮ ಹಕ್ಕು,ಪರಿಸರ ರಕ್ಷಣೆ 
ನಮ್ಮ ಕರ್ತವ್ಯವಾಗಲಿ !!
ಜೈ ಜೈ ವೃಕ್ಷ ಮಾತೆ!, ಜೈ ಜೈ ಪ್ರಕೃತಿ ಮಾತೆ !!
                    **************************
ರಚನೆ : ಶ್ರೀ ಗೋಪಾಲ ಭಟ್.ಸಿ.ಯಚ್.
ಕೇರಳ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕರು,
ಕಾಸರಗೋಡು ಜಿಲ್ಲೆ.
ಹಕ್ಕುಸ್ವಾಮ್ಯ : ಲೇಖಕರಲ್ಲಿ.
ತಾರೀಖು ೨---೬---೨೦೧೯
                   *************************
( ಚಿತ್ರ ಕೃಪೆ : ಇಂಟರ್ನೆಟ್ ಕ್ರೋಮ್ )
                   *************************
[2/6/2019, 10:03 am] Dr. B. N. Shylaja Ramesh: :ಪರಿಸರ  ಸಂರಕ್ಷಣೆ:
~~~~~~~~~

ಉಳಿಸಬೇಕು  ಬೆಳಸಬೇಕು
ನಾವು  ನಮ್ಮ  ಪರಿಸರ
ಹಚ್ಚಿ  ನಾವು  ಬೇಳಸಬೇಕು
ನಮ್ಮ  ಸುತ್ತ  ಗೀಡಮರ

ಬಾನಲೊಂದು  ರಕ್ಷೆ  ಇತ್ತು
ಅದಕ್ಕೆ  ನಮ್ಮ  ಕಣ್ಣು  ಬಿತ್ತು
ಪ್ರಗತಿಯಂತ್ರ  ಮೇಲೆಹೋತು
ಇಗಅಲ್ಲಿ  ಬರೀತೂತು

ನದಿಯನೀರೆ  ಕುಡಿಯೋಮೂಲ
ಆಗಿಹೋಗಿವೆ  ಮಲಿನ  ಜಲ
ಪ್ರಾಣಿಪಕ್ಷಿಗೂ  ಬೇರೆ ಇಲ್ಲ
ಕುಡಿದು ಮಡಿದರೆ  ಪಾಪಫಲ

ಹಬ್ಬಹರಿ  ದೀನಗಳೆಂದು
ಹಚ್ಚಬೇಕೆ  ನಾವು  ಮದ್ದು
ಉಸೀರು  ಗಟ್ಟುತ್ತಿದ್ರುಅಲ್ಲಿ
ಹಚ್ಚಬೇಕೆ  ನಾವೇಕುದ್ದು

ಬಾನಿನೇತ್ತರ  ಚಿಮುನಿ  ಕಟ್ಟೆ
ಹೋಗೆಯನೆಲ್ಲ  ಬಾನಿಗಟ್ಟಿ
ಕೂಡಿಅಲ್ಲಿ  ಮೋಡಗಟ್ಟಿ
ಬಂದು  ಸೇರಿದೆ  ನಮ್ಮ  ಹೊಟ್ಟೆ

ಬುದ್ಧಿವಂತ  ಮನುಜನೇಕೊ
ಆದನಿಂದು  ಮಾರಕ
ಮುಗ್ದಪ್ರಾಣಿ  ಪಕ್ಷಿಗೇಕೊ
ತೋರಿದಂತೆ  ಇಲ್ಲೆನರಕ

         ಶ್ರೀ.  ಚಂದ್ರಶೇಖರ  ಎಸ್  ಭಂಗಿ
[2/6/2019, 10:03 am] Dr. B. N. Shylaja Ramesh: ಪರಿಸರ ಸಂರಕ್ಷಣೆ 

"ಕಾಡಿದ್ದರೆ ನಾಡು" ಧ್ಯೇಯವಾಕ್ಯವದು.
ಪ್ರಕೃತಿ ಪರಿಸರ ನಾಡಿಗೆ ದೈವವಾಗಿಹುದು.

ಬೆಟ್ಟ ಗುಡ್ಡ ಕಾಡು, ಕೆರೆ ನದಿ ಹೊಳೆ ಸಾಗರಕೆ
ಅವಿನಾಭಾವ ಸಂಬಂಧವಿಹುದು.
ಬೆಟ್ಟ ಗುಡ್ಡವಿದ್ದರೆ ಮೋಡಗಳ ತಡೆದು 
ಭುವಿಗೆ ಮಳೆಯ ಸುರಿಸುವುದು.

ಕಾಡದು ಹಸಿರ ವನಸಿರಿಯು ಲಕ್ಷ ಲಕ್ಷ 
ಜೀವರಾಶಿಯ ಜೀವಕೆ ಉಸಿರಹುದು.
ಕೆರೆ ನದಿ ಹೊಳೆ ಸಾಗರ ಜೀವಸಂಕುಲದ
ಅಮೃತ ಧಾರೆಯ ಜೀವಜಲವದು.

ಪ್ರಕೃತಿ ಆರಾಧಕನಾಗಿ ಬದುಕಿ ಬಾಳಿದ,
ನಾಗರೀಕತೆಯ ಹೆಸರಿನಲಿ ಬೆಳೆದ ಬೆಳೆದ.
ಬೆಳೆದು ನಾಡು-ನುಡಿ ಗುಡಿಯ ಕಟ್ಟಿದ,
ಪ್ರಕೃತಿ ಜಗತ್ತು ಪೂರ ತನದೆಂದು ತಿಳಿದ.

ಬೆಟ್ಟ ಗುಡ್ಡ ಕಡಿದ, ಕಾಡು ಕತ್ತರಿಸಿದ,
ಕೆರೆ ಕಟ್ಟೆ ಮುಚ್ಚಿದ, ನದಿ-ಹೊಳೆ ಬತ್ತಿಸಿದ.
ಭುವಿಯ ಬಗೆದು ಬಗೆದು ಸಂಪತ್ತನ್ನೇಲ್ಲಾ
ತನ್ನಿಚ್ಚೆ ಬಂದಂತೆ ಬರಿದು ಮಾಡಿದ.

ವಾತಾವರಣಕೆ ಬೇಡದ ಹೊಗೆ, ವಿಷಾನಿಲ
ಪ್ಲಾಸ್ಟಿಕ್ ಎಂಬ ಕರಗದ ಜಡವ ನೀಡಿದ.
ಜೀವಜಲವ ಕಲುಷಿತವಾದ ಗಂಗೆ ಮಾಡಿದ.
ಆಹಾರ ಧಾನ್ಯವನು ಕಲಬೆರಕೆ ಮಾಡಿದ.

ಮದ್ದು ಗುಂಡು ಬಾಂಬು ಕ್ಷಿಪಣಿಗಳ ಸೃಷ್ಟಿಸಿ,
ಜಗತ್ತನ್ನೇ ನಾಶ ಮಾಡಲು ಅಣಿಯಾದ.
ಸ್ವಾರ್ಥ ತುಂಬಿದ ಕಡುಗೇಡಿ ರಾಕ್ಷಸನಾಗಿ,
ಕೋಟಿ ಕೋಟಿ ಜೀವಸಂಕುಲಕೆ ಕುತ್ತಾದ.

ಮಳೆಯಿಲ್ಲದೆ ಭೂಮಿ ಬಿರಿದು ಬರಡಾಗಿದೆ,
ಬೆಳೆಯಿಲ್ಲದೆ ತುತ್ತು ಅನ್ನಕೂ ತತ್ವಾರವಾಗಿದೆ.
ಕುಡಿವ ಶುದ್ಧ ನೀರಿಗೂ ಪರದಾಡುವಂತಾಗಿದೆ
ಆದರೂ ಕ್ಷಮಿಸುತಿಹಳು ಮಗುವೆಂದು ನಿನ್ನ.

ಸಿಡಿದು ರೋಷಾಗ್ನಿಯಲಿ ಪ್ರಕೋಪ ತಾಳಿದರೆ
ಉಳಿದು ನೀ ಬದುಕಲಾರೆ, ಬೆಳೆಯಲಾರೆ.
ಈಗಲಾದರೂ ಎಚ್ಚೆತ್ತುಕೊ ಮೂಢ ಮನುಜ
ಪರಿಸರ ಸಂರಕ್ಷಿಸು, ಭೂಮಿಯ ಉಳಿಸು.

ಪ್ರಕೃತಿ ಪರಿಸರ ಶುಚಿಯಾಗಿ ಕಾಪಾಡಿದರೆ
ನಗು ನಗುತ ಬೆಳಗುವುದು ಧಾರಿಣಿ.
ಕಾಡನು ಬೆಳೆಸು, ನಾಡನು ರಕ್ಷಿಸು.
ನೀನು ಬದುಕು ಇತರರನು ಬದುಕಲು ಬಿಡು.

ಮತ್ತೆ ಪ್ರಕೃತಿ ದೇವಿಯ ಆರಾಧಕನಾಗು,
ಭೂತಾಯಿ ಮಡಿಲ ಪೊರೆವ ಮಗನಾಗು.

ಜ್ಯೋತಿಲಕ್ಷ್ಮಿ ಬಿ.ಎನ್
[2/6/2019, 10:03 am] Dr. B. N. Shylaja Ramesh: ಚಿತ್ರಕ್ಕೊಂದು ಕವನ/ಲೇಖನ ಸ್ವಧೆ೯
 ಪರಿಸರ ಸಂರಕ್ಷಣೆ 
**************************************
ಮಾನವ ಜೀವನದ ಬದುಕಿನೊಳಗೆ ನಿಕಟ ಸಂಪಕ೯ ಹೊಂದಿರುವುದು ಪರಿಸರ,ಅದು ಮನುಷ್ಯನ ಮತ್ತು ದೇಹದ ಮೇಲೆ ಅಗಾಧವಾದ ಪರಿಣಾಮಗಳನ್ನು ಬೀರುತ್ತದೆ. ಕಾಡುಮೇಡಗಳಲ್ಲೇ ತನ್ನ ಜೀವನ ಪಯಣ  ಅರಂಭಿಸಿದ ಮಾನವ ಪರಿಸರವನ್ನು ತನ್ನ  ಅವಿಭಾಜ್ಯ ಅಂಗವಾಗಿ ಪ್ರೀತಿಸುತಿದ್ದ,ಗಿಡಮರಗಳನ್ನು ಬೆಳಸುವ ಕಾಯಕದೊಂದಿಗೆ ತನ್ನ ಜೀವನ ಪಯಣವನ್ನು ಅರಂಭಿಸುತಿದ್ದ,ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ,ತನ್ನ ದೇಹವನ್ನು ಮತ್ತು ತನ್ನ ದೇಹದ ಮೇಲೆ ಪ್ರಭಾವಬೀರುವ ಪ್ರತಿಕೂಲ ಪರಿಣಾಮಗಳನ್ನು ತಡೆದು ಆರೋಗ್ಯಯುತ ಜೀವನ ನೆಡೆಸಿ ನೂರಾರು ವಷ೯ ತನ್ನ ಕುಟುಂಬದೊಂದಿಗೆ ಜೀವಿಸಿ ಸಂತೋಷ ಪಡುತಿದ್ದ. ಅದರೆ ಮಾನವ ಅಧುನಿಕ ಯುಗದೊಂದಿಗೆ ಬೆಳೆಯುತ್ತಾ ತನ್ನ ಸ್ವಾಥ೯ಜೀವನಕ್ಕೇ ಪರಿಸರವನ್ನು ಹಾಳು ಮಾಡುತೊಡಗಿದ ಮತ್ತು ಸುಖದ ಜೀವನಕ್ಕಾಗಿ ವಿವಿಧ ರೀತಿಯ ವಸ್ತುಗಳನ್ನು ಕಂಡುಹಿಡಿಯತೊಡಿದ.
ಉದಾಹರಣೆಗೆ ನಮ್ಮ ಪರಿಸರವನ್ನು ಹಾಳು ಮಾಡುತ್ತಿರುವುದು ಪ್ಲಾಸ್ಟಿಕ್ , ಮನುಷ್ಯ ತನ್ನ ದೇಹಕ್ಕೆ ಕಷ್ಟವಾಗಬಾರದೆಂದು ಪದಾರ್ಥಗಳನ್ನು ಸಾಗಿಸಲು,ಕೊಂಡೊಯ್ಯುವ ಸಲುವಾಗಿ ಮತ್ತು ಸುಲಭವಾಗಿ ಉಪಯೋಗಿಸಿ ಬಿಸಾಡುವ ಉದ್ದೇಶ ಹೊಂದಿ ತಯಾರು ಮಾಡಿಕೊಂಡ ಈಗ ಇದೇ ಪ್ಲಾಸ್ಟಿಕ್ ಅವನ ಆರೋಗ್ಯದ ಮೇಲೆ ವಿವಿಧ ರೀತಿಯ ಪರಿಣಾಮಗಳು ಬೀರುತ್ತಾ ಮಾನವನನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ ಮತ್ತು ವಿಷಕಾರಿ ಅನಿಲಗಳಿಂದ ತಯಾರದ ಪ್ಲಾಸ್ಟಿಕ್ ನ್ನು ಮಾನವ ಉಪಯೋಗಿಸಿ ಬಿಸಾಡಿದ ನಂತರ ಅದ ಪ್ರಾಣಿ ಸಂಕುಲ ದೇಹದ ಮೇಲೆ ಅಗಾಧ ಪರಿಣಾಮಗಳು ಬೀರಿ ಅವುಗಳ ಉತ್ಪನ್ನಗಳನ್ನು ಸೇವಿಸುವ ಮನುಕುಲ
ಇನ್ನಷ್ಟು ದುಷ್ಪರಿಣಾಮಗಳನ್ನು ಹೆದರಿಸುತ್ತಿದ್ದಾನೆ.
ಹಿಂದಿನ ಕಾಲದಲ್ಲಿ ಮಾನವರು ವಿವಿಧ ರೀತಿಯ ಸಸ್ಯಸಂಕುಲವನ್ನು  ತನ್ನ ಮನೆ ಹೊಲ ತೋಟದಲ್ಲಿ ಬೆಳೆಸುತ್ತಿದ್ದ,ಸಾವಯವ ಗೊಬ್ಬರದಿಂದ ವಿವಿಧ ತರಕಾರಿ ಹಣ್ಣು ಹಂಪಲುಗಳನ್ನು ಬೆಳೆದು ಸೇವಿಸಿ ಆರೋಗ್ಯ ಜೀವನವನ್ನು ಬಯಸಿದ್ದ. ಅದರೆ ಅಧುನಿಕ ಯುಗದಲ್ಲಿ ಮಾನವ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸಿ ವ್ಯವಸಾಯ ಮಾಡಲು ಪ್ರಾರಂಭಿಸಿ 
ಶಕ್ತಿ ಇಲ್ಲದ ಪದಾರ್ಥಗಳನ್ನು ತಯಾರಿಸಿ ತನ್ನ ದೇಹವನ್ನು ಕೃಶವಾಗಿಸಿ ದೈಹಿಕ ಶ್ರಮವಿಲ್ಲದೆ ಬದುಕತೊಡಗಿದ.
ಬೃಹತ್ತಾದ ಕಾಡುಮೇಡಗಳನ್ನು ನಾಶಪಡಿಸಿ ತನ್ನ ಅಸೆಯ ಸ್ವಾಥ೯ ಜೀವನಕ್ಕೆ ಪರಿಸರವನ್ನು ನಾಶ ಪಡಿಸಿ
ಕಾಂಕ್ರೀಟ್ ನಾಡನ್ನು ಕಟ್ಟ ತೊಡಗಿದ್ದಾನೆ ಮತ್ತು ಕಾಡು ನಾಶದಿಂದಾಗಿ ಪ್ರಾಣಿಸಂಕುಲವೇ ನಾಶವಾಗುತಿದೆ ಮುಂದಿನ ಜನಾಂಗ ಪ್ರಾಣಿ ಪಕ್ಷಿಗಳನ್ನು ಮೃಗಾಲಯದಲ್ಲಿ ನೋಡಿ ಅವುಗಳ ಪರಿಚಯವನ್ನು ಕೇಳಿ ತಿಳಿಯ ಬೇಕಾಗಿದೆ ಮತ್ತು ಅಗಾಧ ಕಾಡಿನ ಪರಿಸರದಿಂದ ಮಳೆಯು ಭೂಮಿಯನ್ನು ತಂಪಾಗಿಸಿ ರೈತ ಮತ್ತು ಪ್ರಾಣಿ ಸಂಕುಲಕ್ಕೇ ನೀರಿನ ಬರವೇ ಇಲ್ಲದಾಗಿತ್ತು ಅದರೆ ಇಂದು ನೀರಿಗೆ ಹಹಾಕರ ಶುರುವಾಗಿದೆ
ಕೊನೆಯದಾಗಿ ಹೇಳುವುದಾದರೆ ನಾವು ಪ್ರತಿಯೊಬ್ಬರು ಸಾಲುಮರದ ತಿಮಕ್ಕರವರಂತೆ ಮನಸ್ಸು ಮಾಡಬೇಕಾಗಿದೆ ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂಪ್ರೇರಿತವಾಗಿ ಉಪಯೋಗವನ್ನು ಕಡಿಮೆ ಮಾಡುತ್ತಾ ಸಸ್ಯಸಂಕುಲವನ್ನು ಬೆಳೆಸುತ್ತಾ ಕಾಡುಮೇಡುಗಳನ್ನು ರಕ್ಷಿಸಲು ಸಂಕಲ್ಪ ಮಾಡುತ್ತಾ ಮುಂದಿನ ಜನಾಂಗ ಕೂಡ ಈ ಭೂಮಿಯ ಮೇಲೆ ನೆಮ್ಮದಿಯ ಆರೋಗ್ಯ ಜೀವನವನ್ನು ನೆಡಸಲು ನಾವು ಮನಸ್ಸು ಮಾಡೋಣ ಎಂದು ಅಶಿಸುತ್ತಾ.....
      ಧನ್ಯವಾದಗಳೊಂದಿಗೆ
                            ✍ ನಾರಾಯಣಸ್ವಾಮಿ
[2/6/2019, 10:04 am] Dr. B. N. Shylaja Ramesh: #ಚಿತ್ರಕ್ಕೊಂದು ಕವನ ಸ್ಪರ್ಧೆ #
 #ಪರಿಸರ ಸಂರಕ್ಷಣೆ #
#ಕರುಳ ಕೂಗು #

ನಾನೆಂದರೆ ನಿನ ಗೇಕೆ ಅಷ್ಟಿಷ್ಟ ?
ನೀ ಬಳಿ ಬಂದರೆ ನಂಗೇನೋ ಒಂತರಾ ಭಯ,  ಕಷ್ಟ !
ಆಗೊಮ್ಮೆ ಹೀಗೊಮ್ಮೆ ಮಾಡುವೆ ನನ್ನ ಸಂಹಾರ, ನಷ್ಟ. 

ನೀ ಬದುಕಲು ನಾ ಉಸಿರ ನೀಡುವೆ 
ದಣಿದು ಬಂದಾಗ ನಿನಗೆ ನನ್ನಲ್ಲೇ ಆಸರೆ ಕೊಡುವೆ 

ನೀ ನನ್ನುಳಿಸಿದರೆ ಮಳೆಗೆ ಕೊರತೆ ಇಲ್ಲ 
ನೀ ನನ್ನ ರಕ್ಷಿಸಿ, ಬೆಳೆಸಿದರೆ ಶುದ್ಧ ಗಾಳಿಗೂ ದಕ್ಕೆ ಇಲ್ಲ 

ಸಾವಿರಾರು  ಪಕ್ಷಿಗಳು ನನ್ನ ಆಸರೆ ಬಯಸುತ್ತವೆ  
ನಾನೇ ಹೂವು ಹಣ್ಣು ಆಸರೆ ನೀಡಿ ಎಲ್ಲರಿಗೂ  ಫಲಕಾರಿಯಾಗುವೆ 

ನಿನಗೆ ಉಷಾರು ತಪ್ಪಿದರೆ ನಾನೇ ಔಷಧಿ ನೀಡುವೆ 
ನಿನಗೆ ಪೀಠೋಪಕರಣ  ಬೇಕಾದಾಗ ನನ್ನನ್ನೇ ನೆನೆವೆ 

ಮಕ್ಕಳಾ ಡಲೂ  ಓದಲೂ ನಾನು ಸಹಕಾರಿ 
ನನ್ನ ವಿಶೇಷತೆ ನಾನು ಬಹಳ ಪರೋಪಕಾರಿ 

ಇಷ್ಟಾದರೂ ನೀ ಸನಿಹ ಬರಲು ನನಗೆ ಎಲ್ಲಿಲ್ಲದ ಭಯ 
ನನ್ನ ಸಂತತಿಯ ಅಳಿವಿನ ಉಳಿವಿನ ಹೋರಾಟದ ಭಯ

ಓ ಮನುಜ ನಿನ್ನ ಐಷಾರಾಮಿ ಜೀವನ ಶೈಲಿಗೆ ಎಷ್ಟು ಸಲ ಕೊಡಲಿ ಏಟು ನೀಡುವೆ  ನನ್ನ ಕೊರಳಿಗೆ ?
ನಿನ್ನ ಉಸಿರು ನಿಂತ ಮೇಲೂ ಕಟ್ಟಿಗೆಯಾಗಿ ಸಹಕರಿಸುವ ನನಗೆ !

ನಾನಿಲ್ಲದಿರ ನಿನ್ನ ಬದುಕು ನಿಜಕ್ಕೂ  ಅಯೋಮಯ !
ಅರಿತು ಉಳಿಸು ಪೋಷಿಸು- ಪರಿಸರ ವೈವಿಧ್ಯಮಯ 😘

ಶ್ರೀಮತಿ ಪುಷ್ಪಾ ಶಶಿಧರ್
02-06-2019
ಬೆಂಗಳೂರು
[2/6/2019, 10:04 am] Dr. B. N. Shylaja Ramesh: ___ಯಾರ ಸಂರಕ್ಷಣೆ _-
__________-----______

ವರುಷಕೂಮ್ಮೆ ಒಮ್ಮೆ ಬರುವರು ನಾವು
ಸಾದ ಬರುವವರಲ್ಲಿ
ಆದರೆ ಕಾಮಣ್ಣನ ಮಕ್ಕಳಲ್ಲ
ಪರಿಸರ ಸಂರಕ್ಷರು
ನಾವೇ ಮರ ಕಡಿಸುವ
ರಾಕ್ಷಸರು ನಾವೇ

ಪರಿಸರದ ಹೆಸರಿನಲ್ಲಿ ಹಣ ಲೋಟಿಮಾಡುವ
ಅರಣ್ಯ ಭಕ್ಷಕರು
ಕತ್ತಿ ಗಿಡವು ಹತ್ತಿ ಗಿಡವೂ ನೆಟ್ಟು
ಅಲ ಬೇವು ನೆಟ್ಟ ಲೆಕ್ಕ ಕೂಟ್ಟು
ತಿಜೋರಿ ತುಂಬಿಸಿ ಕೂಳ್ಳವ
ಪರಿಸರ ಸಂರಕ್ಷಕರು ನಾವೇ

ವಿಜಯೇಂದ್ರ
ಜಯನಗರ
ತುಮಕೂರು
[2/6/2019, 10:04 am] Dr. B. N. Shylaja Ramesh: #ಪರಿಸರ_ಸಂರಕ್ಷಣೆ...#ಕವನ

ಜೀವ ಸಂಕುಲಕೆ ಕಂಟಕ ತರುವ
ನೆಲ ಜಲ ಗಾಳಿ ಕಲುಷಿತಗೊಳ್ಳುವ
ನಮ್ಮ ನಿಮ್ಮೆಲ್ಲರ ಅವಿವೇಕಿತನದ
ನಡೆಗಳೆ ಪರಿಸರ ಮಾಲಿನ್ಯಕೆ ಕಾರಣ
ಅರಿವಿನ ನಡೆಯೇ ಗೆಲುವಿನ ನಡೆ.....

ಸ್ವಸ್ಥ ಜೀವನಕೆ ಶುದ್ಧ ಗಾಳಿಗೆ
ಮನೆ ಮನೆಗೊಂದರಂತೆ ಗಿಡ ನೆಡಿ
ಹೊಗೆ ಕಾರುವ ವಾಹನಗಳ ಕಡಿತಗೊಳಿಸಿ
ಕೈಗಾರಿಕಾ ಚಿಮಣಿಗಳ ಎತ್ತರಕ್ಕೇರಿಸಿ
ಉಸಿರಾಡುವ ಗಾಳಿಗೆ ಮರುಜೀವ ಬಂದೀತು....

ಜಲವೇ ಸಕಲ ಜೀವಿಗೂ ಜೀವಾಳ
ಕೈಗಾರಿಕೋದ್ಯಮಿಗಳಿಗೆ ನೀರೆ ಬಂಡವಾಳ
ಮಾಲೀಕರೆ ಸಂಸ್ಕರಿಸಿದ ನೀರನ್ನ ನದಿಗಳಿಗೆ ಹರಿಸಿ
ನದಿ ಪಾತ್ರದ ಜನರೆ ಒಮ್ಮೆ ಯೋಚಿಸಿ ನೋಡಿ
ಸತ್ತ ಕೊಳೆತ ಪ್ರಾಣಿ ತ್ಯಾಜ್ಯಗಳ ಎಸೆಯಬೇಡಿ...

ಮಣ್ಣು ಮನುಜನ ಬದುಕಿಗೆ ಆಧಾರ
ಸವಕಳಿಯೇ ಅದಕ್ಕಿರುವ ದೊಡ್ಡ ಗಂಡಾಂತರ
ಗಾಳಿ ಮಳೆ ಪ್ರವಾಹದಿ ಕೊಚ್ಚಿ ಹೋಗದಿರಲು
ಮಣ್ಣನ್ನು ಹಿಡಿದಿಡುವ ವನರಾಶಿ ಬೆಳೆಸಿ
ನಿರಂತರ ಮೇಯಿಸದೆ ಹುಲ್ಲುಗಾವಲ ಉಳಿಸಿ....

ಶತ ಶತಮಾನಕ್ಕೂ ಕೊಳೆಯದ ವಸ್ತು
ಸುಟ್ಟರೆ ವಿಷಕಾರುವ ಕರಗದ ವಸ್ತು
ಭೂಮಿಗೆ ನೀರಿಂಗಿಸದ ಮಾರಕ ವಸ್ತು
ಬಳಸದಿರಿ ಬಳಸದಂತೆ ಎಚ್ಚರ ವಹಿಸಿ
ಜಗವ ನಾಶ ಮಾಡುವ ಪ್ಲಾಸ್ಟಿಕ್ ನಿಷೇಧಿಸಿ...

ಪರಿಸರ ದಿನಾಚರಣೆಯೇ ಪರಿಹಾರವಲ್ಲ
ಪರಿಸರ ಸಂರಕ್ಷಣೆಯಲ್ಲಿದೆ ನಮ್ಮಯ ಪಾತ್ರ
ಸರ್ಕಾರದ ಯೋಜನೆಗಳಿಗೆ ಕೈಜೋಡಿಸಿದರೆ ಮಾತ್ರ
ಅನುಭವಿಸಿಯೂ ಅರಿಯದಿರೆ ನಿನ್ನದೇ ಅಳಿವು
ಪರಿಸರ ಸಂರಕ್ಷಣೆಯೇ ನಮ್ಮೆಲ್ಲರ ಗೆಲುವು...

ರಚನೆ:ಶ್ರೀ ಸುರೇಶ್ ಹಾರನಹಳ್ಳಿ
ದಿನಾಂಕ:02.06.2019
[2/6/2019, 10:04 am] Dr. B. N. Shylaja Ramesh: ಪರಿಸರ ಸಂರಕ್ಷಿಸಿ

ಜೀವ ಜಲಧಾರೆ ಜೀಗಿವ ತಾಣ
ಭುವನೆ ಹಸಿರುಟ್ಟು ನಗುವ ಯಾಣ
ಮೃಗಖಗಗಳ ಸಮಾನತೆ ಸಮನ್ವಯ
ನಿತ್ಯವರಳಿ ನಗುವ ಹೂಬನ ದುಂಬಿವನ

ಉಸಿರಿಗುಸಿರು ಪ್ರಕೃತಿಯ ಐಸಿರಿ
ಉಳಿಸಿಕೊಳ್ಳಿ ದೇವನಿತ್ತ ಬನಸಿರಿ
ಕಡಿಯದಿರಿ ವೃಕ್ಷಕೂಟ ಸಂಕುಲ
ನಾಶವಲ್ಲಿ ವೃಕ್ಷವಾಸಿ ಜೀವಕುಲ

ಮೇಘನೊಲುಮೆ ಸಿಗದೆ ಜಿಗಿಯನು
ವರುಣ ಧರೆಗೆ ತಂಗಾಳಿ ಬೀಸದೆ
ವಟವನಪ್ಪಿ ಕರಗುವ ಕರಿಮುಗಿಲು
ಮುನಿಸಿ ಇಳೆಯಲಾರ ನಂಬಿ ಬಯಲ

ಹನಿ ಹನಿಯ ಜೀವಜಲ ಹೀರಲಿರದೆ
ಸಾವುನೋವು ಸಾಲುಸಾಲು ಜೀವಕುಲ
ಗಳಿಸಿ ಮಿತಬಳಕೆಯ ನೀತಿ ಪಾಠವ
ಉಳಿಯಲಿ ಪೃಥ್ವಿ ತಾಣ ಹಸಿರ ಹೂಬನ

ಜೀವಕೆ ಜೀವ ಗಾಳಿ ನೀರು ಮಣ್ಣಕಣ
ಪೋಲು ಮಾಡದಿರಿ ನಾಶವಿಲ್ಲಿ ಜೀವನ
ಹರಸಿ ಪೋಷಿಸಿ ಪ್ರಕೃತಿ ತಾಣಯಾಣವ
ಉಳಿದು ಬೆಳಗಲಿ ಮನಗಳಿಗೆ ತಂಬೆಳಕ

ಜಗದ ಜೀವನಾಡಿ ಹಸಿರ ಸ್ವಚ್ಛಂದ  ಪರಿಸರ
ಉಳಿವು ಅಳಿವು ಮನುಜನ ಕರದಲಿ ಅಡಗಿದೆ
ಕೊಡಲಿ ಹಿಡಿದು ಬರಿದು ಮಾಡದೆ ಬೆಳೆಸಿ
ಬನವನ ನೋಡಿ ಅರಳಲಿ ಮುಗ್ಧ ಹೂಮನ.

ಶ್ರೀಮತಿ ಸಿದ್ದು ಸ್ವಾಮಿ.
[2/6/2019, 10:05 am] Dr. B. N. Shylaja Ramesh: ಚಿತ್ರಕ್ಕೊಂದು ಲೇಖನ ಸ್ಪರ್ಧೆ 

#ಪರಿಸರ ಸಂರಕ್ಷಣೆ #

ಪರಿಸರ ಅಂದರೆ ನಮ್ಮ ಸುತ್ತ ಮುತ್ತಲಿನ ಜಾಗ. ಈ ನೈಸರ್ಗಿಕ ಸಂಪತ್ತು ನಮ್ಮ  ಜೀವದ ಬೇರು. ಅತ್ಯಮೂಲ್ಯ  ಆಸ್ತಿ. ಹೆಚ್ಚುತ್ತಿರುವ ಜನಸಂಖ್ಯೆ ಒಂದೆಡೆಯಾದರೆ , ಮಲಿನಗೊಳ್ಳುತ್ತಿರುವ ಪರಿಸರ ಇನ್ನೊಂದೆಡೆ. ಇನ್ನು ವಿಶ್ವ ಪರಿಸರ ದಿನವೆಂದು ಜೂನ್ 5ನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 

ನಮ್ಮ ಕರುನಾಡಿನ ವೃಕ್ಷ ಮಾತೇ ಸಾಲು ಮರದ ತಿಮ್ಮಕ್ಕ ಯಾರಿಗೆ ಪರಿಚಯ ವಿಲ್ಲವೇಳಿ ? ಸ್ವಾರ್ಥಿಗಳು ಒಂದೆಡೆಯಾದರೆ ಸಮಾಜಮುಖಿಗಳು ಇನ್ನೊಂದೆಡೆ. ಮಕ್ಕಳಿಲ್ಲದ ತಿಮ್ಮಕ್ಕ ನವರು ಸುಮಾರು 400 ಮರಗಳನ್ನು ಮಕ್ಕಳಂತೆ ನೆಟ್ಟು ಬೆಳೆಸಿರುವ ಯಶೋಗಾಥೆ ಶ್ಲಾಘನೀಯ. ನೀರಿನ ಅಭಾವವಿದ್ದರೂ 105 ವರುಷದ ಹಿರಿ ಜೀವ ಹಸನ್ಮುಖಿಯಾಗಿ ಸಮಾಜ ಸೇವೆಗೈಯುತ್ತಿರುವುದು ನೋಡಿದರೆ ಈ ವೀರ ಮಾತೆಗೆ ನಾವೆಂದೂ ಚಿರಋಣಿಗಳೇ. ಉಸಿರಾಡಲು ಒಳ್ಳೆಯ ಗಾಳಿ ಅರಸಿ ಉದ್ಯಾನದೆಡೆಗೆ ಮುಖಮಾಡುವ ಎಷ್ಟೋ ಜನರಿಗೆ ಇವರ ಕೆಲಸ ಸ್ಫೂರ್ತಿ ದಾಯಕವಲ್ಲವೇ ?

ಪರಿಸರ ಪ್ರೇಮವೆಂದರೆ ಹೀಗಿರಬೇಕು. ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ನಮ್ಮ ಕನ್ನಡ ಚಿತ್ರ ರಂಗದ ದರ್ಶನ್ ಕೂಡ ಪ್ರಾಣಿ ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲಿಲ್ಲವೇ ?ನಿಜವಾದ ಪ್ರೀತಿ ಕಾಳಜಿ ಇರುವವರು ಅದರಲ್ಲೇ ಸಂತೋಷ ಕಂಡುಕೊಳ್ಳುತ್ತಾರೆ. 

ಇನ್ನು ಸುಮಾರು ಗೃಹ ನಿರ್ಮಾಣ ಸಂಸ್ಥೆಗಳು ಗ್ರಾಹಕರಿಗೆ ಸಸಿ ನೀಡುವುದು, ಮದುವೆ ಸಮಾರಂಭ, ಸಭೆಗಳಲ್ಲಿ ಪಾಲ್ಗೊಂಡವರಿಗೆ ಗಿಡ ನೀಡುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ. ಆದರೆ ಎಷ್ಟು ಜನ ಅದನ್ನು ನೆಟ್ಟು ಪೋಷಿಸುತ್ತಾರೋ ಗೊತ್ತಿಲ್ಲ.  ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಅದರ ಪ್ರ್ರಾಮುಖ್ಯತೆ ಅರಿತು, ಪ್ರತಿನಿತ್ಯ ನಾವು ಪರಿಸರದ ಸಂರಕ್ಷಣೆಯಲ್ಲಿ ತೊಡಗಿದರೆ ಶುದ್ದ ಮೂಲಭೂತ ಸೌಕರ್ಯ ಕ್ಕೆ ಕೊರತೆ ಇಲ್ಲದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಬಹುದು. 

ಶ್ರೀಮತಿ ಪುಷ್ಪಾ ಶಶಿಧರ್
ಬೆಂಗಳೂರು 
02-06-2019
[2/6/2019, 4:01 pm] Dr. B. N. Shylaja Ramesh: ಜೀವ ಸಂಕುಲದ ಉಳಿವಿಗಿರಬೇಕು ಕಾಡು
ಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡು
ಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತ
ಅವಿವೇಕದ ನಡತೆಗೆ ಪರಿಸರವೇ ದೂಷಿತ

ಪರಿಶುದ್ಧ ಗಾಳಿಗೂ ಬಂತು ಸಂಚಕಾರ
ಗಿಡಮರವ ಕಡಿದು ತಂಪಿಲ್ಲದೆ ಆಹಾಕಾರ
ಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನ
ಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನ

ಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನ
ಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನ
ಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡು
ಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡು
[2/6/2019, 4:57 pm] Dr. B. N. Shylaja Ramesh: ಪರಿಸರ ಸಂರಕ್ಷಣೆ
***************

ಜೀವ ಸಂಕುಲದ ಉಳಿವಿಗಿರಬೇಕು ಕಾಡು
ಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡು
ಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತ
ಅವಿವೇಕದ ನಡತೆಗೆ ಪರಿಸರವೇ ದೂಷಿತ

ಪರಿಶುದ್ಧ ಗಾಳಿಗೂ ಬಂತು ಸಂಚಕಾರ
ಗಿಡಮರವ ಕಡಿದು ತಂಪಿಲ್ಲದೆ ಆಹಾಕಾರ
ಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನ
ಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನ

ಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನ
ಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನ
ಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡು
ಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡು

ಹಸಿರಿನ ಸ್ವಚ್ಛ ಪರಿಸರ ಜಗದ ಜೀವನಾಡಿ
ಗಿಡನೆಡಿ ಮುಂದೊಮ್ಮೆ ಅದುವೆನಮ್ಮ ಒಡನಾಡಿ
ಮನುಜನ ಕೈಯಲ್ಲಿದೆ ಅಳಿವುಉಳಿವಿನ ಪ್ರಶ್ನೆ
ಮರೆಯದೇ ಮಾಡಿ ಪರಿಸರ ಸಂರಕ್ಷಣೆ

             ಶೈಲೂ.....
[3/6/2019, 7:42 pm] Dr. B. N. Shylaja Ramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮುತ್ತಿನ ಹಾರದಂತಿರಬೇಕು..!!
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ಗುರುಹಿರಿಯರಲ್ಲಿ ಗೌರವಾದರದ ಮಾತಿರಲಿ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು
ತರ್ಕದಲಿ ಅತಿ ತೂಕವಿರಲಿ ಮಾತಿನಲಿ
ವಿತಂಡವಾದಿಗಳ ಮಣಿಸುವಂತಿರಲಿ

ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ
[3/6/2019, 8:05 pm] Dr. B. N. Shylaja Ramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ  ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು
ತರ್ಕದಲಿ ಅತಿ ತೂಕವಿರಲಿ ಮಾತಿನಲಿ

ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..

ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು
ಹಿಡಿತವಿರೆ ಮಾತಿನಲಿ ಸೌಜನ್ಯದ ಹೆಗ್ಗುರುತಂತೆ..

           ಶೈಲೂ.....
[3/6/2019, 8:08 pm] Dr. B. N. Shylaja Ramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ  ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು
ತರ್ಕದಲಿ ಮಾತು  ಅತಿ ತೂಕವಿದ್ದರೆ ಸೊಗಸು 

ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..

ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು
ಹಿಡಿತವಿರೆ ಮಾತಿನಲಿ ಸೌಜನ್ಯದ ಹೆಗ್ಗುರುತಂತೆ..

           ಶೈಲೂ.....
[3/6/2019, 8:10 pm] Dr. B. N. Shylaja Ramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ  ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು..
ತರ್ಕದಲಿ ಮಾತು  ಅತಿ ತೂಕವಿದ್ದರೆ ಸೊಗಸು.. 

ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..

ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ..
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ..
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು..
ಹಿಡಿತವಿರೆ ಮಾತಿನಲಿ ಅದೇ ಸೌಜನ್ಯದ ಹೆಗ್ಗುರುತು..

           ಶೈಲೂ.....
[4/6/2019, 3:55 pm] Dr. B. N. Shylaja Ramesh: ಗುಣಿತಾಕ್ಷರ ಕವನ##

 *ಮ  ಯಿಂದ ಮಂ ವರೆಗೆ* 

 *ಮ  ಕಾರದಲ್ಲಿ  ಮಾಧವ*
************************

ಮನದಲಿ ನಿಂತ ಮಮತೆಯ ಮೂರ್ತಿ
 *ಮಾಧವಾ* ಸದಾ ನಿನದೇ ನೆನಪು
ಮಿಡಿವ ಮನದಲಿ  ನೆಲೆನಿಂತವ ನೀನು
ಮೀಟುತಿಹೆ ಸುಶ್ರಾವ್ಯದಿ ಹೃದಯ ವೀಣೆಯನು
ಮುದ ನೀಡುತಿದೆ ನಿನ್ನ ಮುರಳೀಗಾನ
ಮೂಡುತಿದೆ ಮನದಲಿ ನಿನ್ನೊಲವ ಗಾನ
ಮೃದು ನುಡಿಗಳಕ್ಕರದ  ಭಾವದಲಿ
ಮೆಲ್ಲ ಮೆಲ್ಲನೆ ಜಾರುತಿದೆ ಮನಸು
ಮೇಳೈಸಲಿ ನಮ್ಮೀಒಲವ ರಂಗಮಂಚ
ಮೈಮರೆತಿರುವೆ ನಿನ್ನನುಭಾವದಲ್ಲೇ ನಾ
         ಮೈದೋರು ದೊರೆಯೇ
ಮೊಗದ ತುಂಬೆಲ್ಲ ನಸುನಗೆಯ ಭಾವ
ಮೋಹನ ನಿನ್ನೀ ಮೋಹಕ ರೂಪದ ಪ್ರಭಾವ
ಮೌನ ರೂಪಕವಾದೆ ನಾ ಮರೆತೆಲ್ಲ ಮಾತುಗಳ
ಮಂದಿರವಾಯ್ತೆನ್ನೆದೆಯು ನಿನಗಾಗಿ
           ಮಹಾ ಮಹಿಮ ಮುನಿಸು ತೋರದೆ 
           ಬಾರೆನ್ನ ಹೃನ್ಮ0ದಿರಕೆ....

         ಶೈಲೂ......
[4/6/2019, 3:55 pm] Dr. B. N. Shylaja Ramesh: ಕಾಯುತಲಿರುವೆ  ನಿನಗಾಗಿ
***********************

ಹೊಂಬಿಸಿಲ ಬಿಸಿ ಸ್ಪರ್ಶಕೆ
ಕಾಯ್ದು , ತೋಯ್ದ ಧರೆಯಂತೆ
ಮಂಜಿನ ಮುತ್ತಿನ ನೀರ ಹನಿಗಾಗಿ
ಕಾಯುತ್ತಿರುವ ಹೂವಿನೆಸಳಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ವಸಂತನಾಗಮನಕ್ಕಾಗಿ
ಕಾಯ್ದ ಪ್ರಕೃತಿಯಂತೆ
ಮಾವಿನ ಚಿಗುರಿಗಾಗಿ
ಕಾಯುವ ಕೋಗಿಲೆಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಗಗನ ಚುಂಬಿಸಲು
ಹಾತೊರೆವ ಗಿರಿಶಿಖರದಂತೆ
ಭುವಿಯನಪ್ಪಲು ತವಕಿಸುವ
ಮಳೆಯ ಹನಿ ಹನಿಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಮನದ ಭಾವನೆಯ ಭಾರಕೆ
ಮಿಡಿದ ನಿಟ್ಟುಸಿರಿನಲಿ
ನಿದ್ದೆಯಲೂ ಕನವರಿಸುತ್ತಿರುವ
ಮುದ್ದಾದ ನಿನ್ಹೆಸರಿನಲ್ಲಿ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಕಣ್ಣೆವೆಯ ಮುಚ್ಚಿದಾಕ್ಷಣವೇ  ಹೊತ್ತು 
ತರುವ ನಿನ್ನ ನೆನಪಿನ ಸವಿಗನಸು
ನಿನ್ನ ನೆನಪಿನಲೆಯಲ್ಲಿ 
ತೋಯ್ದಾಡುವ ಮೃದುಮನಸು
ಎಲ್ಲವೂ ಬೇಡುತ್ತಿದೆ ಗೆಳೆಯ
ನಿನ್ನಾಗಮನದ ಮಧುರ ಕ್ಷಣಕ್ಕಾಗಿ..

             ಶೈಲೂ......

[30/5/2019, 1:05 pm] Dr. B. N. Shylaja Ramesh: ನನ್ನ ಪ್ರೀತಿಯ ಪಪ್ಪ  ಮೋಹನ್ ಪ್ರಸಾದ್ ರವರ  ಆಶಯದ ಮೇರೆಗೆ  ಈ  ಕವನ.....
       ಹೂವು

ಹೂವು 
******

ನಾನೊಂದು ಸುಂದರ ಹೂ..
ಅರಳಿ ನಗುವೆ ಕ್ಷಣ ಕ್ಷಣವೂ
ಒಂದು ದಿನದ.ಆಯುಷ್ಯ
ನಾ ಬಲ್ಲೆ ನನ್ನ ಭವಿಷ್ಯ..

ಚಂದದಿ  ಅರಳಿ, ಅರಳಿಸುವೆ
ನಿಮ್ಮೆಲ್ಲರ  ಮೊಗವ
ದೇವನಾಂಘ್ರಿಯಲಿ ಬೆರೆತು
ಪಡೆಯುವೆ  ಸಗ್ಗವ..

ಲಲನೆ ನಿನ್ನ ಮುಡಿಯೇರಿ
ಇಮ್ಮಡಿಸುವೆ ನಿನ್ನ ಚೆಲುವ
ನನ್ನಂದಕೆ ನಿನ್ನನ್ಹೋಲಿಸಿ
ಬಣ್ಣಿಸುವರು ನಿನ್ನಂದವ..

ಎಲ್ಲೆಡೆಯೂ ಅಲಂಕಾರಕೆ
ನಾನಿರಲೇ  ಬೇಕು
ಅಷ್ಟಾದರೂ  ಕೊಟ್ಟಿರೆನಗೆ
ಬದುಕು..ಅಷ್ಟೇ  ಸಾಕು..

ಹುತಾತ್ಮ ವೀರ ಯೋಧರಿಗೆ
ಮಾಡಿದರೆ  ಅರ್ಪಣೆ
ಸಂತಸದಿ ನಲಿವೆ ನಾ, ಮಾಡುವೆ
ನನ್ನನೇ  ಸಮರ್ಪಣೆ..

ಕಟುಕ ಮನಗಳೂ ಇವೆ
ಮೀರಿ ನಡೆವರು  ಎಲ್ಲೆ
ತುಳಿದು - ಮೆರೆವ ಜನರ
ಕೊರಳನಲಂಕರಿಸಲು ನಾನೊಲ್ಲೆ..

ನನಗಿಷ್ಟ ವೇನಿಹುದಿಲ್ಲಿ
ನಾ ನಿಮ್ಮ ಕೈಲಿರುವ  ಹೂವು
ಬೆಲೆಕಟ್ಟಿ ಮಾರಿದರೂ
ಸಹಿಸಲೇ ಬೇಕಲ್ಲ  ನೋವು..

ಒಂದೇ ದಿನದ ಬದುಕಾದರೂ
ನನ್ನ  ಹೆಸರು  ಅಮರ
ಗಿಡದಲೇ ಬಾಡಿ ಉದುರಿದರೂ
ಆ ಗಿಡಕೆ  ನಾ  ಗೊಬ್ಬರ..

ಇಷ್ಟಾದರೂ  ನಾನು
ಅರಳಿ ನಗುತಲಿರುವೆ
ಕುಸುಮ ಕೋಮಲೇ ನಾನು
ಮನುಜ..ಏಕೆನ್ನ  ಹೊಸಕುವೆ

ಉಪಯುಕ್ತ ನಾನೆಲ್ಲೆಡೆಯೂ
ಬದುಕು  ಸಾರ್ಥಕ
ಕೇಡೆಣಿಸುವ ಮನುಜ
ನೀ  ಬದುಕಿದ್ದೂ  ನಿರರ್ಥಕ..!

       ಶೈಲೂ...
[30/5/2019, 1:06 pm] Dr. B. N. Shylaja Ramesh: ಜೀವನ  ಸತ್ಯ
***********

ಯಾಕಿಂಥಾ ದುರಭಿಮಾನ
ಈ ಜಗದ  ಜನರಿಗೆ
ಇಲ್ಲೇ ತಳವೂರಿ
ನೆಲೆನಿಂತಾರೆನೋ ಕೊನೆಗೆ..?

ಎಷ್ಟು ಚೆಲುವಿದ್ದರೇನು.?
ಅದೆಷ್ಟು ಹಣವಿದ್ದರೇನು.?
ಗೆಲುವಿನ ಜೊತೆ ಜೊತೆಗೇ
ತಾ  ಮೆರೆದರೇನು.?

ಉಪ್ಪರಿಗೆಯ ತಪ್ಪಲಿನಲಿ
ಓಲಾಡಿದರೇನು..?
ಕೊನೆಗೊಮ್ಮೆ ಎಲ್ಲರೂ
ಸೇರಲೇ ಬೇಕು  ಮಣ್ಣು..!

ಜಗದ ಋಣವದು ತೀರೆ
ಅರೆಕ್ಷಣ ನಿಲ್ಲುವಂತಿಲ್ಲ..!
ವಿಧಿ ಬರೆದ ಬರಹವನು
ಬದಲಿಸಲಾಗದಲ್ಲ..!

ಅವ ಬಂದು ಕರೆದಾಗ
ಹೋಗಲೇ ಬೇಕಲ್ಲ..!
ಬರಲಾರೆ ಎಂದವನ
ಹೊರದೂಡುವಂತಿಲ್ಲ..!

ಯಾವ ಸಮಯವಾದರೂ
ಸರಿ ಹೊರಡಲಣಿಯಿರಬೇಕು..!
ಯಮ ಪಾಶಕೆ ಕೊರಳೊಡ್ಡಿ
ನಿಲ್ಲಲೇ ಬೇಕು..!

ಏನಿದ್ದರೇನು ಎಷ್ಟಿದ್ದರೇನು
ಹೋಗುವಾಗ ಮೂರು ಹಿಡಿ ಮಣ್ಣು..!
ನಾಲ್ಕುದಿನದ ಬಾಳಿದು
ಅರಿತು ತೆರೆ ಕಣ್ಣು..!

ಸರಿದಾರಿಯಲಿ ನಡೆದು
ಸೈ ಎನಿಸಬೇಕು..!
ಕೃಷ್ಣನೊಪ್ಪುವ ತೆರದಿ
ನೀ  ಬಾಳಬೇಕು..!

ಎಲ್ಲರೊಡನೆ ಬೆರೆತು
ನಲಿವ ಸಹನೆ ಇರಬೇಕು..!
ತನುವಳಿದರೂ ಸರಿ
ಹೆಸರುಳಿಯಬೇಕು..!

         ಶೈಲೂ......
[31/5/2019, 10:50 am] Dr. B. N. Shylaja Ramesh: ಕವಲುದಾರಿ

ಬಾಳಪಯಣದಲಿ ಎದುರಾದಾಗ ಕವಲುದಾರಿ
ಎತ್ತ ಕಡೆ ತಿರುಗುವುದೋ ಎಂಬ ಭ್ರಾಂತಿ
ಯಾವ ದಾರಿ ಹಿಡಿಯುವುದೋ ತಿಳಿಯದೆ
ಏನೊಂದೂ ಅರಿಯಲಾಗದೆ ಮನದೆ ವಿಭ್ರಾಂತಿ.

ಪ್ರಮುಖ ಘಟ್ಟಗಳಲಿ ಈ ಹೊರಳುದಾರಿ
ನಿರ್ಧಾರ ಮಾಡಲಾಗದು! ದೊಡ್ಡ ಜವಾಬ್ದಾರಿ
ನಿರ್ಣಯದ ಮೇಲೆ ಬದುಕು ನಿರ್ಭರ
ತಪ್ಪುದಾರಿಯ ಹಿಡಿದರೆ ಬಾಳೇ ದುರ್ಭರ.

ಅಯೋಮಯದ ಈ ಸಮಯದಲಿ
ನಂಬಿಕೆಯೊಂದೆ ಭರವಸೆಯ ಜ್ಯೋತಿ
ದೈವಕಾರುಣ್ಯದ ಕರ ಹಿಡಿದು ಮುನ್ನಡೆಸೆ
ದಾರಿ ನಿಚ್ಚಳˌಹೊಮ್ಮುವುದು ಜೀವನಪ್ರೀತಿ.
                       ಸುಜಾತ ರವೀಶ್
[31/5/2019, 10:55 am] Dr. B. N. Shylaja Ramesh: ಪದ ಪದ್ಯೋತ್ಸವ 
                      🌹ಕವಲುದಾರಿ🌹

ನಿಂತಿರುವೆ ಕವಲುದಾರಿಯಲಿ 
ತಿಳಿಯದೆ ನಾ ಎತ್ತ ಸಾಗಲಿ 
ಮಸುಕಾಗಿವೆ ಕಂಗಳು
ಕಣ್ಣೀರಿನ ಪೊರೆಯಲಿ
 
ಏರಿದ್ದೆ ಹಸೆಮಣೆಯ 
ಚಂದದ ಬದುಕಿನ ಚಿತ್ರದೊಂದಿಗೆ  
ವರಿಸಿದ್ದೆ ಅವನ 
ಹೊಸಬಾಳಿನ ಕನಸಿನೊಂದಿಗೆ 

ಬಣ್ಣಬಣ್ಣಗಳ ತೋರಿಸಿದ್ದ ಕೆಲವು ದಿನಗಳವರೆಗೆ 
ಬಯಲಾಗಿತ್ತು ನಂತರ ಅವನ ಹೊಸ ಬಗೆ
ಮಾತುಮಾತಿಗೂ ಚುಚ್ಚು ನುಡಿ 
ಹೊತ್ತುವುದು ಸಂಶಯದ ಕಿಡಿ

ನಿಂತರೂ ತಪ್ಪು ಕೂತರೂ ತಪ್ಪು
ಅರಿವಿಲ್ಲ ಇವನಿಗೆ ಯಾವುದು ಒಪ್ಪುತಪ್ಪು 
ಮೊಸರಲ್ಲೂ ಕಲ್ಲು ಹುಡುಕುವ ಗಂಡಗೆ
ಹೇಗೆ ತಿಳಿಸಿಕೊಡಲಿ ನಾ ಮೆಲ್ಲಗೆ

ಮರೆತು ನನ್ನನೇ ಸತ್ತಂತೆ ಬದುಕಿಬಿಡಲೇ  
ಇಲ್ಲ ಉಳಿಸಿ ನನ್ನತನವ ಮರೆತು ಇವನ 
ನಿಜ ಅರ್ಥದಲ್ಲಿ ಜೀವಿಸಿಬಿಡಲೇ 
ಏನು ಮಾಡಲಿ ನಾ ನಿಂತಿರುವೆ ಕವಲುದಾರಿಯಲ್ಲಿ 

ಶಶಿಕಲಾ
[31/5/2019, 10:56 am] Dr. B. N. Shylaja Ramesh: ಪದಪದ್ಯೋತ್ಸವ
ಕವಲುದಾರಿ
*""""******"""***

ಮರಕ್ಕೊಂದು ರೆಂಬೆ ಕೊಂಬೆ.
ದಾರಿಗೊಂದು ಕವಲು ದಾರಿ.
ಇದು ಲೋಕಾರೂಢಿ ಕವಲು ಕೊಂಬೆ ಹೂ ಹಣ್ಣು ಕೊಡದೇನು?
ಒಬ್ಬೊಬ್ಬರ ಗುರಿ ಒಂದೊಂದು‌ ಕಡೆ ಇದ‌ ಮರೆತೆಯೇನು?

ಬದುಕೊಂದು ಪಯಣ.
ಇಲ್ಲಿದೆ ಹಲವು ಬಗೆಯ ಯಾನ.
ಎಲ್ಲರಿಗೂ ಇಲ್ಲ ಒಂದೇ ನಿಲ್ಧಾಣ.
ಎಲ್ಲಿ ಬದುಕೊ ಅಲ್ಲೇ ಜೀವನ‌ ಯಾನ.

ಹಲವು‌ಊರು ಹಲವು ಮಂದಿ.
ದುಡಿತಕೆ ಸೇರುವ ಒಂದೆಡೆ.
ಸಾಗುವ ಮನೆಗೆ‌ ಬೇರೆಡೆ.
ಬಾಳ ಬದುಕಲಿ‌ ಜನರಿದಕೆ‌ ಬಂಧಿ

ಕವಲು ದಾರಿ ಎಂದೆಕೆ ಬೇಸರ.
ಇದೆ ಜೀವನದಲೂ ಒಡಂಬಡಿಕೆ‌ ಕರಾರ.
ಪ್ರತೀಯೊಬ್ಬ ಗುರಿ ಮುಟ್ಟಲೇ ಬೇಕು.
ಅದು ನೇರ ದಾರಿಯೊ ಕವಲುದಾರಿಯೊ ಅರಿವಿರಬೇಕು.

ಬಾಳಲಿ ಹೊಂದಾಣಿಕೆ ಇದ್ದರೆ‌ ನೇರದಾರಿ
ಇಲ್ಲದಿರೆ  ಮಾಡಲೇಬೇಕು ಕವಲುದಾರಿ
ಕವಲುದಾರಿಯಲೂ ಗುರಿಮುಟ್ಟುವ ಕ್ಷಮತೆ ಇರಲಿ.
ಬರುವಾಗ ನೀ‌ ಒಂಟಿ ಹೋಗುವಾಗ‌ ನೀ‌ಒಂಟಿ‌ ನೆನಪಿರಲಿ.

ನೀರನು‌ ತಡೆದು‌ ಆಣೆಕಟ್ಟು ಕಟ್ಟಬಹುದು
ಅತಿಯಾದರೆ ಅದೂ ಬಿರುಕು ಬಿಡದೆ.?
ಅಂತೆಯೇ ಸಂಬಂಧಗಳು...ಒತ್ತಾಯದೊಳು ಯಾವುದೂ ನಡೆಯದು.
ಬದುಕು ಕವಲು ದಾರಿಯೆಂದು‌ ಹಿಂಜರಿಯಬಾರದು.

ಕವಲುದಾರಿಗೂ ಒಂದು ಗುರಿ ಇದೆ‌ ಎಂಬುದ ಮರೆಯಬೇಡ.
ಕವಲುದಾರಿಯಲಿ ನಡೆವವರೆಲ್ಲ ಕೆಟ್ಟವರಲ್ಲ
ನೇರದಾರಿಯಲಿ ಹೋಗುವವರು ಸಂಭಾವಿತರೂ ಅಲ್ಲ
ಏನೇ ಆದರೂ‌ಮನುಜ ಬಾಯಿಗೆ ಹಾಕು‌ಬೀಗ.ನಡೆ ನಿನ್ನ ಗುರಿಯತ್ತ‌ಇದ ಮರೆಯಬೇಡ.
[31/5/2019, 10:59 am] Dr. B. N. Shylaja Ramesh: ಪದಪದ್ಯೋತ್ಸವ # ಕವಲುದಾರಿ #

ಯಾವುದೋ ದಾರಿ ಎಲ್ಲಿಗೋ ಪಯಣ
ಗೊತ್ತು ಗುರಿ ಇಲ್ಲದ ತೊಡಕುಗಳಾಗರ ಜೀವನ
ನನ್ನವಳೇ ಎಂದುಸುರಿ ಬಿಟ್ಟೇಕೆ ಹೋದೆಯೋ ರಮಣ
ಒಳ ಹೊರಗೂ ನಿನ್ನನ್ನೇ ಅರಸುತ್ತಿವೆ ನನ್ನ ನಯನ

ಸುಂದರವಾದ ಬದುಕು ಒಮ್ಮೆಲೇ ಭಾರವಾಯಿತು
ಎತ್ತ ಸಾಗುವುದೋ ಏನು ಮಾಡುವುದೋ ತಿಳಿಯದಾಯಿತು
ಭಗವಂತಕೊಟ್ಟ ಈ ಜೀವ ಬರೇ ಉಸಿರಿದ್ದ ಶವವಾಯಿತು
ಎಷ್ಟು ಯೋಚಿಸಿದರೂ ಮುಂದೆ ದಿಕ್ಕು ತೋಚದಾಯಿತು

 ಸರಿದಾರಿಯಲ್ಲಿಯೂ ಒಮ್ಮೆ ಎದುರಾಗುತ್ತದೆ ಕವಲುದಾರಿ
ಬದುಕು ಬೇಕೆಂದು ಬಯಸಿದಾಗ ಚಿತ್ತವಾಗುತ್ತದೆ ಚಂಚಲ
ನಿನ್ನೆದೆಯ ಹಸಿರನರಸಿ ಬಂದವಳಿಗೆ ಸಿಕ್ಕಿದ್ದು ಬಯಲುದಾರಿ
ಎಂದಾದರೂ ನೀ ಬರುವೆ ಎಂಬ ನನ್ನ ನಂಬಿಕೆಯೇ ಅಛಲ

ಸುಚಿತ್ರಾ ಸುದರ್ಶನ್ ೩೧.೦೫.೨೦೧೯
[31/5/2019, 11:01 am] Dr. B. N. Shylaja Ramesh: ಪದ ಪದ್ಯೋತ್ಸವ
****************
  ಕವಲುದಾರಿ....
****************

ಇರುವುದು ಜೀವನದಿ ನೂರಾರು ದಾರಿ
ಬರುವುದೊಮ್ಮೆಯಾದರೂ ಕವಲುದಾರಿ
ಎದುರಿಸಬೇಕಾಗುವುದು ಈ ಕಠಿಣ ದಾರಿ
ಆರಿಸಿಕೊಂಡು ಸಾಗಬೇಕಾಗುವುದು ಈ ದಾರಿ

ಬಾಲ್ಯದ ದಿನಗಳಲಿ ಆಸೆಗಳ ಹೆದ್ದಾರಿ
ಯೌವನದೊಳು ಕೌತುಕದ ಕುತೂಹಲದಾರಿ
ಜೀವನ ಜಂಜಾಟದಿ ಏಳುಬೀಳಿನ ಕಗ್ಗತ್ತಲದಾರಿ
ಸಂಸಾರ ಸಾಗರವ ದಾಟುತಾ ಹಳ್ಳಕೊಳ್ಳದ ದಾರಿ

ಒಂದಿನಿತೂ ಮೈಮರೆತರೂ ತಾಳ ತಪ್ಪುವ ಹಾದಿ
ಬರುವ ಕವಲುದಾರಿಯಲಿ ಸಾಗುವ ಸುಲಲಿತ ಹಾದಿ
ನಮ್ಮೊಳಿತಿಗೆ ಅನುವಾಗುವ ದಾರಿಯ ಆಯ್ಕೆಯ ಹಾದಿ
ಅರಿತು ನಡೆವ ತಿಳುವಳಿಕೆಯಿದ್ದರೆ ಬಲು ಸುಲಭ ಹಾದಿ

**************   ಅನಿತ.ಪಿ.ಕೆ...*****************
[31/5/2019, 11:02 am] Dr. B. N. Shylaja Ramesh: #ಪದ_ಪದ್ಯೋತ್ಸವ_ಕವಲುದಾರಿ

ನಡೆಯುತ್ತಲೇ ಇರುತ್ತೇವೆ
ಬಾಳಿನ ಪಯಣದಲ್ಲಿ
ನಿಲ್ಲದೇ, ಕೆಲವೊಮ್ಮೆ 
ಓಡುತ್ತೇವೆ, ತೆವಳುತ್ತೇವೆ
ಗುರಿ ಮುಟ್ಟುವಾಸೆಯಲಿ
ಇದ್ದಕ್ಕಿದ್ದಂತೆ ಎದುರ‌ಗುತ್ತದೆ
ಕವಲುದಾರಿಯೊಂದು…

ಮನದೊಳಗೆ ಅರಂಭ
ಸಂದಿಗ್ಧತೆ… ತೊಳಲಾಟ
ಯಾವ ದಾರಿ ಹಿಡಿವುದೆಂಬ
ದ್ವಂದ್ವ, ಎಡವೋ? ಬಲವೋ?
ಅರಿವಾಗದೇ ನಿಲ್ಲುತ್ತೇವೆ, ದೀರ್ಘಆಲೋಚನೆಯಲಿ ಮುಳುಗುತ್ತೇವೆ…

ಯೋಚಿಸಿಯೇ ಆಯ್ದುಕೊಳ್ಳುತ್ತೇವೆ
ನಮ್ಮ ಆಯ್ಕೆ ಸರಿ ಎಂದುಕೊಳ್ಳುತ್ತೇವೆ
ಆತ್ಮವಿಶ್ವಾಸದಿಂದ ಮುನ್ನಡೆಯುತ್ತೇವೆ
ಆದರೂ ಕೆಲವೊಮ್ಮೆ ಸೋಲುತ್ತೇವೆ
ದಾರಿಯನ್ನು ಕಳೆದುಕೊಳ್ಳುತ್ತೇವೆ…
ಗುರಿಯಿಂದ ದೂರಾಗುತ್ತೇವೆ…

–ಟಿ.ಕೆ.ವಾಣಿ
[31/5/2019, 11:02 am] Dr. B. N. Shylaja Ramesh: ಪದ ಪದ್ಯೋತ್ಸವ 
                      🌹ಕವಲುದಾರಿ🌹

ನಿಂತಿರುವೆ ಕವಲುದಾರಿಯಲಿ 
ತಿಳಿಯದೆ ನಾ ಎತ್ತ ಸಾಗಲಿ 
ಮಸುಕಾಗಿವೆ ಕಂಗಳು
ಕಣ್ಣೀರಿನ ಪೊರೆಯಲಿ
 
ಏರಿದ್ದೆ ಹಸೆಮಣೆಯ 
ಚಂದದ ಬದುಕಿನ ಚಿತ್ರದೊಂದಿಗೆ  
ವರಿಸಿದ್ದೆ ಅವನ 
ಹೊಸಬಾಳಿನ ಕನಸಿನೊಂದಿಗೆ 

ಬಣ್ಣಬಣ್ಣಗಳ ತೋರಿಸಿದ್ದ ಕೆಲವು ದಿನಗಳವರೆಗೆ 
ಬಯಲಾಗಿತ್ತು ನಂತರ ಅವನ ಹೊಸ ಬಗೆ
ಮಾತುಮಾತಿಗೂ ಚುಚ್ಚು ನುಡಿ 
ಹೊತ್ತುವುದು ಸಂಶಯದ ಕಿಡಿ

ನಿಂತರೂ ತಪ್ಪು ಕೂತರೂ ತಪ್ಪು
ಅರಿವಿಲ್ಲ ಇವನಿಗೆ ಯಾವುದು ಒಪ್ಪುತಪ್ಪು 
ಮೊಸರಲ್ಲೂ ಕಲ್ಲು ಹುಡುಕುವ ಗಂಡಗೆ
ಹೇಗೆ ತಿಳಿಸಿಕೊಡಲಿ ನಾ ಮೆಲ್ಲಗೆ

ಮರೆತು ನನ್ನನೇ ಸತ್ತಂತೆ ಬದುಕಿಬಿಡಲೇ  
ಇಲ್ಲ ಉಳಿಸಿ ನನ್ನತನವ ಮರೆತು ಇವನ 
ನಿಜ ಅರ್ಥದಲ್ಲಿ ಜೀವಿಸಿಬಿಡಲೇ 
ಏನು ಮಾಡಲಿ ನಾ ನಿಂತಿರುವೆ ಕವಲುದಾರಿಯಲ್ಲಿ 

ಶಶಿಕಲಾ
[31/5/2019, 11:03 am] Dr. B. N. Shylaja Ramesh: #  ಪದಪದ್ಯೋತ್ಸವ..  ಼ ಕವಲು ದಾರಿ ಼

ಸೃಷ್ಟಿಕರ್ತನ ಸೃಷ್ಟಿಯಲಿ
ಅವನಾಡುವ ಆಟದಲಿ
ನಾವು ಬಂದೇವು ಭುವಿಯಲಿ
ಬದುಕುವ ಹಾದಿಯಲಿ

ಕೊಟ್ಟನವ ಹಾದಿಯೆರಡ
ಬಿಟ್ಟನವ ನಮ್ಮ ಜಾಡನೋಡ
ಕಲ್ಲು ಮುಳ್ಳು  ಸತ್ಯದಾರಿಹರಡಿ
ಕಣ್ ಮಿಂಚುವ ಸುಳ್ಳದಾರಿಯಡ

ಅಂಜದಿರು ಅಳುಕದಿರು
ಅಯೋಮಯವಾಗದಿರು
ಸಲಹೆಗಳೊಂದಿಗೇರು ಪೇರು
ನಿನ್ನಾತ್ಮಸಾಕ್ಷಿ ಮರೆಯದಿರು

ತ್ವರಿತ ಲಾಭ ಮೋಹಬೇಡ
ತ್ವರಿತ ಸುಖವ ಬಯಸಬೇಡ
ಅಂಜಿ ಸತ್ಯ ದಾರಿ ತ್ಯಜಿಸಿ ಬೇಡ
 ಅಡ್ಡ ದಾರಿ ಹಿಡಿಯಬೇಡ

ಕಷ್ಟ ಧೈರ್ಯ ಸೆಣಸಿದಾಗ
ರಾಜಮಾರ್ಗನಡೆದಾಗ
ಗಟ್ಟಿ ಭರವಸೆ ನಿಂತಾಗ
ಆತ್ಮಸ್ಥೈರ್ಯ ಮೆರೆದಾಗ

ಕರುಗಿ ಕತ್ತಲು ಬೆಳಕಾಗುವುದು
ಕಲ್ಲು ಮುಳ್ಳು ದೂರಸರಿವುದು
ಅಭಯಹಸ್ತನಕಿರಣಗಳ ಬೆಳಕ ದಾರಿಕಾಣುವುದು
 ಜೇನತುಂಬಿದಪಾತ್ರೆ ಹೂದಾರಿನಿನ್ನದಾಗುವುದು
       
                  ಼಼ರಮಾಪಾರ್ಥಸಾರಥಿ಼಼
[31/5/2019, 11:04 am] Dr. B. N. Shylaja Ramesh: #ಸಾಹಿತ್ಯೋತ್ಸವ#
#ಪದ_ಪದ್ಯೋತ್ಸವ_ಕವಲುದಾರಿ_

ಬಾಳಿನ-ನಿತ್ಯ-ನಿರಂತರ ಯಾನ;
ಗಂಟು ಬೀಳುತಿದೆ-
ಕವಲು-ದಾರಿಯ-ಪಯಣ;
ಮನದೊ-ಳಗೆ ಭಣಭಣ;
ದ್ವಂದ್ವ-ಯುದ್ಧದ-ಮೇಣ;
ಆಗಿಸಿದೆ-ಹೈರಾಣ.....!

ಬಹಳ ಸಲ ಅಂದು-ಕೊಂಡಿ-ರುವೆ::
ಕಳ್ಳಿ ಗಿಡವಾಗಿ,ಎತ್ತರ ಬೆಳೆದು ಬಿಡಬೇಕು;
ಮುಳ್ಳಿಂದ ಚುಚ್ಚಿ,ಗಾಸಿ-ಗೊಳಿಸಬೇಕು.!
ಪಾರ್ಥೇನಿಯಂ ಕಳೆಯಾಗಿ,ಜನಿಸಿ-
ವಂಶಾಭಿ-ವೃದ್ಧಿ-ಗೊಳಿಸಿ,
ಅಂತರ್ಜಲ ಹೀರಬೇಕು-
ಸಸ್ಯನಾಶಗೊಳಿಸಿ-ಖುಷಿಪಡಬೇಕು.!
ಇಲಿಯೂ ಬೇಡ;ಹುಲಿಯೂ ಬೇಡ-
ಸೊಳ್ಳೆಯಾಗಿಬಿಡೋಣ;
ಕೆಲವೇ ಗಂಟೆಗಳ ಬಾಳಲ್ಲಿ,
ಹೆಚ್ಚು ಜನರ ರಕ್ತ ಕುಡಿಯೋಣ.!
ಮಿಣುಕು ಹುಳುವಾಗಿ,
ಮಿನುಗೇ ಮಿಂಚೆಂದುಬ್ಬಿ-
ಹಾರಾಟ ಮಾಡೋಣ.!
ಕೊಡಲಿ-ರಾಮನೇ-ಆದರೆ-ಹೇಗೆ..?!

ಅನಿಸಿದೆ-ಅನೇಕ-ಸಲ::
ಆಲದ ಮರವಾಗಿ,ಸುತ್ತೆಲ್ಲ-ವಿಸ್ತರಿಸಿ,
ಬಿಳಿಲುಗಳಿಂದ-ಬೇರೂರಿ,
ಬಲವುಳ್ಳ,ರೆಂಬೆ-ಕೊಂಬೆಗಳಿಂದ ಶೋಭಿಸಿ,
ಹಲವು ಜೀವಿಗಳಿಗೆ-
ಆಶ್ರಯವ-ನೀಯ-ಬೇಕು.!
ಪರಿಮಳ ಹರಡುವ ಗಂಧದ ಮರವಾಗಿ,
ಉಪಕಾರಿ-ಯಾಗ-ಬೇಕು.!
ರಾತ್ರಿಯ ಕತ್ತಲೆ-ಯೊಳಗೆ
ಮಾರ್ಗ ತೋರಿಸುವ,
ದಾರಿ-ದೀಪ-ವಾಗಬೇಕು.!
"ಭೂಲೋಕದ-ಕಲ್ಪವೃಕ್ಷ"ವಾಗಿ-ತೂಗಿ,
ಜನಾನು-ರಾಗಿ-ಯಾಗಬೇಕು.!

ಬರುವುದು ವಿಚಾರ ಹಲವು ವೇಳೆ::
ಹೀಗೇ-ಕೆ?ಇದೆಲ್ಲವ ಮಾಡಲು-ನಾ-ನಾರು?
ಬಂದಿದ್ದೇಕೆ,ಕೆಲಸವೇನು,ಮಾಡಿದ್ದೇನು?
ಸ್ವಂತದ್ದೇ-ಹಾಸುವಷ್ಟು,ಹೊದೆವಷ್ಟಿ-ಹುದು
ಬೇರೆಯ-ವರ-ದ-ಕಟ್ಟಿಕೊಂಡೇ-ನು?
ಕೆಸುವಿ-ನೆಲೆ-ಯಂತೆ-
ಹಸುಗೂಸಿ-ನಂತೆ-
ನಿರ್ಲಿಪ್ತ-ನಾ-ಗೋಣ-
ಅಲ್ಪ-ತೃಪ್ತ-ನಾ-ಗೋಣ...!!!

ಇರುವುದು-ಈಗೆರಡು-ದಾರಿ;
ಸತ್ಯ-ಅಸತ್ಯ;ಧರ್ಮ-ಅಧರ್ಮ;
ನಿತ್ಯ-ಮಿಥ್ಯ;ಸುಜ್ಞಾನ-ಅಜ್ಞಾನ;
ಬಂಧ-ಮೋಕ್ಷ...!
ಮುಕ್ತಿ-ಬೇಕಿದೆ-ಎನಗೆ;
ಮುಗಿಸುವೆ-ಕರ್ತವ್ಯ-ನಾನು-ನಾನಾಗಿ-
ಕೊನೆಗೆ-ಕರೆ ಬರಲು-ಹೊರಡುವೆ;
ಏನೇ ನಡೆಯಲಿ
ನಾ-ನಾ-ಗುವೆ
ಮಾನವ-ನಿಜ-ಮಾನವ-...!!!!
***""""""********************
ಗಣಪತಿ_ವರ್ಧನ್_ಬೆಂಗಳೂರು_
೩೧-೦೫-೨೦೧೯
***********************
[31/5/2019, 12:45 pm] Dr. B. N. Shylaja Ramesh: ಕವಲುದಾರಿ
***********

ಇದು ಮುಗಿಯದ ಬಾಳ ಪಯಣ
ನಿತ್ಯ ನಿರಂತರ ಸಾಗುವುದೇ ಜೀವನ
ಸಾಗುತ್ತ ಸಾಗುತ್ತ ಸವೆಸಿ ಅರ್ಧದಾರಿ
ಧುತ್ತನೆದುರು ನಿಂತಿತೇಕೆ ಈ ಕವಲುದಾರಿ?

ಎತ್ತಕಡೆಗಿನ್ನು ಪಯಣ ತಿಳಿಯದಾಯ್ತೆ
ಇತ್ತಲೋ ಅತ್ತಲೋ ಎತ್ತಲೋ ಎದುರಾಯ್ತು ಚಿಂತೆ
ಎತ್ತ ನಡೆದರೆ ಇಹುದು ಪಯಣ ಸುಗಮ
ತಪ್ಹೆಜ್ಜೆ  ಇಟ್ಟರದು ಕವಲುದಾರಿಯ ಭ್ರಮಾ

ಪ್ರಮುಖ.ಘಟ್ಟವಿದು ಬಾಳ ಪಯಣಕೆ
ನಿರ್ಧರಿಸಲಾಗದು ಏಕೋ ಹೆದರಿಕೆ
ನಿರ್ಣಯದಲಿಹುದು ಬದುಕ ಸಿಹಿ ಕಹಿ
ತಪ್ಪುದಾರಿಯ ನಡಿಗೆ ಭರಿಸಲಾಗದ ಕಹಿ

ತೋಚದಾಗಿದೆ... ಈಗ ಎತ್ತ ನಡೆಯಲಿ?
ಭರವಸೆಯ ಜ್ಯೋತಿ ಬೇಕಿದೆ  ದೃಢ ನಿಲುವಿನಲಿ
ಕರಹಿಡಿದೆನ್ನ ಮುನ್ನೆಡೆಸು ಹೇ ಮಾಧವಾ
ಸರಿದಾರಿಯಲೆನ್ನ ನಡೆಸು ಹೇ ಯಾದವಾ..

           ಶೈಲೂ.....
[1/6/2019, 9:38 am] Dr. B. N. Shylaja Ramesh: "ಇಳೆಗೆ ಮಳೆ" 
ಧಗಧಗಿಸುವ ಧರಣಿಗೆ
ಹಂಬಲಿಸಿದ ಮನಗಳಿಗೆ
ಬೇಸತ್ತಿರುವ ರೈತರಿಗೆ
ಮುಂಗಾರಿನ ಮಳೆಹನಿ ತಂಪೆರೆಯುತಿದೆ

ಧೋ ! ಧೋ !ಎನ್ನುತಲಿ
ರಫರಫ ಪಟಪಟವೆನ್ನುತಲಿ
ಬಾನಂಚು,ಮುಗಿಲಮಿಂಚಿಂದ
ಫಳಫಳನೆ ಮಳೆಬಂತು ಇಳೆಗೆ ರಭಸದಿಂದ।।

ಸಿಡಲಾರ್ಭಟದಿ,ಗುಡುಗುಕೋಲ್ಮಿಂಚಿಂದ
ಚಿಟಪಟನೆ ಆಲಿಕಲ್ಲಿನಮಳೆ ಮುಗಿಲಿಂದ
ಸುರಿಯಿತು ಇಳೆಗೆಮಳೆ ಹರಿಯಿತು ಹೊಳೆಯು
ಸುರಿದ ವರ್ಷಧಾರೆಗೆ ಹರಿಯಿತು ಹರ್ಷಧಾರೆಯು ।।

ಕಾದುಕೆಂಡವಾದ ಭೂಮಿ
ಮಂಜಿನಂತೆ ಕರಗಿ ತಂಪಾಗಿ
ಪಕ್ಷಿಗಳು ಕೂಗಿದವು ಇಂಪಾಗಿ
ತಂಗಾಳಿಬೀಸಿದವು ಸೊಂಪಾಗಿ।।

ಆಯಿತು ಸುತ್ತಲಿನ ಪರಿಸರಮಂದಿರ
ಎಲ್ಲೆಲ್ಲೂ ಕಾಣದಂತ ದಿವ್ಯಸುಂದರ।
ಪುಷ್ಪಗಳ ಪರಿಮಳ ಹರಡಿತು ಸರಸರ
ತಂದಿತು ಜೀವಕುಲಕೆ ಆನಂದದಾಗರ।।

✍🏻ಶ್ರೀಈರಪ್ಪ ಬಿಜಲಿ ಶಿಕ್ಷಕರು♥
ಸಾ।।ಭಾಗ್ಯನಗರ,ತಾ।।ಜಿ।।ಕೊಪ್ಪಳ
ಮೊ:8123686020,7019181570.
[1/6/2019, 9:38 am] Dr. B. N. Shylaja Ramesh: ಇಳೆಗೆ ಮಳೆ

ಮಳೆಯಿಲ್ಲದೆ ಭೂಮಿ ಬಾಯ್ಬಿಟ್ಟು ಬರಡಾಗಿದೆ.
ಸುಡುವ ಬಿಸಲ ಧಗೆಗೆ ಕಾದ ಇಳೆ ಕೆಂಪಾಗಿದೆ.
ಓ ಮುಂಗಾರಿನ ಮಳೆರಾಯ ಬೇಗ ಬಂದು ತಣಿಸು.
ಸುಟ್ಟು ಕೆಂಡವಾಗಿಹ ಭುವಿಯ ತಾಪವ ನೀಗಿಸು.

ನೀರಿಲ್ಲದೆ ಕೆರೆ, ಕಟ್ಟೆ, ನದಿ ಒಣಗಿ ಬತ್ತಿ ಹೋಗಿದೆ.
ಕುಡಿವ ನೀರಿಗೂ ಜನ-ಜಾನುವಾರು ಹಪಹಪಿಸುತಿವೆ.
ಪೈರು ಪಚ್ಚೆ, ದವಸ ಧಾನ್ಯಗಳು ಇಲ್ಲವಾದರೆ,
ಬಿಸಿಲ ಬೇಗೆಗೆ ಪ್ರಾಣ ಶಕ್ತಿ ಕುಗ್ಗಿ ಹೋಗುತಿದೆ.

ಮಳೆ ಕುಸಿಯಲು ಮಾನವನೇ ಕಾರಣವಾಗಿಹನು.
ಮೂಢನವ ಮನ್ನಿಸಿ, ಧೋ! ಎಂದು ಸುರಿದುಬಿಡು.
ಕೆರೆ, ಭಾವಿ, ಭೂಗರ್ಭ ಜಲವನೆಲ್ಲಾ ತುಂಬಿಸಿಬಿಡು.
ಹಸಿರು ಮೈದುಂಬಿ ಭೂ ತಾಯಿ ನಳ ನಳಿಸುವಳು.

ಗಿಡ, ಮರ, ಬಳ್ಳಿಗಳು ಚಿಗುರಿ ಚೆಲುವ ತುಂಬಿಸಿ,
ಮಧುಮಗಳಾಗಿ ಭೂರಮೆಯ ಹೂ ಹಣ್ಣಿನಲಿ ಸಿಂಗರಿಸಿ,
ಪ್ರಕೃತಿಯ ಸೊಬಗಿನಿಂದ ಧರಣಿಯ ಸ್ವರ್ಗವಾಗಿಸು.
ತಂದೆ ನೀನು ಪಿಡಿದು ಪೊರೆಯೊ ಕಂದಮ್ಮಗಳನು.

ಭೂ, ವಾಯು, ಜಲ, ಅಗ್ನಿ, ಆಕಾಶ ಪಂಚತತ್ವಗಳೇ,
ಕೋಟಿ ಕೋಟಿ ಜೀವಸಂಕುಲದ ಆಶ್ರಯ ದಾತರು ನೀವು,
ಮುನಿಯದಿರಿ ಇಳೆಯಲಿ ಮಳೆ ಬೆಳೆಯ ಕಾಲಕಾಲಕೆ
ಕರುಣಿಸಿ, ಮುಗ್ಧ ಮಕ್ಕಳು ಬಿಡದೆ ಸಲಹಿರಿ ನಮ್ಮನು.

ಜ್ಯೋತಿಲಕ್ಷ್ಮಿ ಬಿ.ಎನ್
[1/6/2019, 9:39 am] Dr. B. N. Shylaja Ramesh: ॥ಇಳೆಗೆ ಮಳೆ॥
 ಆ ರಾಯ ಬಂದ
ಈರಾಯ ಬಂದ
ಬರುವನಂತೆ ಇನ್ಯಾವುದೋ ರಾಯ
ಬರದಿರೆ ಮಳೆರಾಯ ಇಳೆಗೆ
ಬೆಂದು ಹೋಗುವುದು ಸಕಲ
ಜೀವಿಗಳ ಕಾಯ
ಇಳೆಗೆ ಬಂದರೆ ಮಳೆ
ತೊಳೆದು ಹೋಗುವುದು ಕೊಳೆ
ಹೆಚ್ಚಾಗುದು ಎಲ್ಲರ ಮುಖದ ಕಳೆ
 ಮಳೆಯಂದರದು ಆಕಾಶದಿಂದ
ಇಳಿದು ಬರುವ ಉದ್ದುದ್ದ ಶುಧ್ದ ನೀರೆ
ನೀರಿನ ಮಗದೊಂದು ಹೆಸರು ಜೀವ
 ಇಳೆಗೆ ಬರುವ ಮಳೆ ತರುವುದು
ಜೀವ ಕಳೆ ಬಾರದಿರೆ ಮಳೆರಾಯ
ಕಾಣುವುದು ಎಲ್ಲಿ ನೋಡಿದರಲ್ಲಿ ಕೊಳೆ
ಮಳೆರಾಯ ಒಮ್ಮೊಮ್ಮೆ ಅನಿರೀಕ್ಷಿತ  ಅತಿಥಿ 
ಇನ್ನೊಮ್ಮೆ ಅತಿ ನಿರೀಕ್ಷಿತ ಅತಿಥಿ ಮತ್ತೊಮ್ಮೆ 
ಬಾರದೆ ಮಾಡುವನೆಲ್ಲರ ತಿಥಿ 
ಮಳೆರಾಯನ ಮನ ಓಲೈಕೆಗೆ ಮದುವೆಯಂದರೇನರಿಯದ
ಗಾರ್ಧಭಜೋಡಿಗೆ ಮಾಡುವರು ಮದುವೆ ಅವಕೆ ಚಿಂತೆ ನಮ್ಮನು
ಎಳೆದು ಕೊಂಡು ಹೊಂಟರೆಲ್ಲಿಗೆ
ಇಳೆಯಂಬ ಮಹಿಳೆ ಅಂದು ಮಲೆಗಳೆಂಬ
ತುಂಬ ಕುಚಗಳ ಮಹಿಳೆ  ಸ್ವಾಗತ ಅವಳಿಂದ ಪರ್ಜನ್ಯರಾಜಗೆ
ಮರಗಿಡಗಳೆಂಬ ಬೀಸಣಿಕೆ ಬೀಸಿ  ತಂಗಾಳಿ
ಸುಳಿಗಾಳಿ ಸುಗಂಧ ಪೂರಿತ ಕುರಿಲ್ಗಾಳಿಗಳ
ಪಸರಿಸಿದಾಗ 
ಮೋಹದ ಮಾಯಗೆ ಮನಸೋತ 
ಮಳೆರಾಯ ಬಂದಿಲ್ಲಿಗೆ ರಮಿಸುತಿದ್ದ
ಇಳೆಯಂಬ ದಿವ್ಯ ಸುಂದರಿಯ
ಆಕಾರ ರಹಿತ ನಡುವು ಬೆಟ್ಟ ಗುಡ್ಡಗಳಿಲ್ಲ
ಸಪೂರ ಸಪಾಟ ವಕ್ಷಸ್ಥಲ ವ್ರಕ್ಷಗಳಿಲ್ಲದ
ಬೋರು ಬರಿದಾದ ನೆಲ ಮಳೆರಾಯ ಅದ್ಹೇಗೆ
ಮಾಡಬೇಕು ಮನ
ಇಳೆಯಂಬ ಮಹಿಳೆಯ ಸ್ಥಿತಿ
ಸೈನ್ಯಕ್ಕೆ ಸೇರಿದ ಸರ್ದಾರನ
ಸತಿಯ ಪರಿಸ್ಥಿತಿ   ಸದಾ ಗಡಿಯಲಿ
ಸಂಕಟ ಸಿಗುವುದಿಲ್ಲ ರಜೆ ಇಲ್ಲಿವಳಿಗೆ
ವಿರಹದ ಸಜೆ 
ಗರತಿ ನಮ್ಮ ಅವನಿ  ಕಾಯುವಳು
ತನ್ನಿನಿಯನಿಗಾಗಿ  ಬೇಡುವಳು 
ದೇವನ ಬೇಗ ಬರಲಿಮಳೆರಾಯ
ತಂಪಾಗಲಿ ಸುಡುವ ನನ್ನೀಕಾಯ
[1/6/2019, 10:45 am] Dr. B. N. Shylaja Ramesh: ಧಗಧಗಿಸುವ  ಬಿಸಿಲಝಳಕೆ
ಬಳಲಿ ಬೆಂಡಾಗಿದ್ದಾಳೆ ಅವನಿ
ಹನಿ ನೀರಿಗೆ ಹಪಹಪಿಸುತ್ತಾ
ಮುಗಿಲೆಡೆಗೆ ಬಾಯ್ತೆರೆದಳು ಭೂಮಿ

ಕಾಯ್ದ ಕೆಂಡದಂತಾಗಿ ಒಡಲು
ಮರುಟಿಬಿಟ್ಟಿದೆ ಗಿಡಮರಬಳ್ಳಿ
ಕುಡಿವ ನೀರಿಗೂ ಹಾಹಾಕಾರ
ಪ್ರಾಣಿ ಪಕ್ಷಿಗಳಿಗೆ ಜೀವನವೆಲ್ಲಿ

ಬತ್ತಿದೆ ಕೆರೆಕಟ್ಟೆ ನದಿ ಅಂತರ್ಜಲ
ನೆಲಬಿರಿದು ಉರಿಕೆಂಡ 
ಬಾನಂಚಲ್ಲಿ ಕಟ್ಟಿದ್ದ ಕಾರ್ಮೋಡ
[2/6/2019, 10:01 am] Dr. B. N. Shylaja Ramesh: ......‌‌‌ಪರಿಸರ ಸಂರಕ್ಷಣೆ.........

ಎನಿತು ಸುಂದರವು ಭೂರಮೆಯ ಒಡಲು
ತಿಳಿದುನೋಡಲು ಶಿವನ ಕರುಣೆಯ ಕಡಲು

ದುರಾಸೆಯಿಂದ ಬಗೆದಿಹನು ತಾಯೊಡಲ
ಕಡಿದಿಹನು ನೆರಳಿಡುವ ನೂರಾರು ವೃಕ್ಷಗಳ
ಕಡಿಮೆಯಾಗಿದೆ ನೋಡು ಅಂತರ್ಜಲದ ಮಟ್ಟ
ಪ್ರಕೃತಿ ಸಮತೋಲನಕೆ ನೀಡಿಹನು ಪೆಟ್ಟ// //

ಖನಿಜ ಸಂಪತ್ತೇನು ವನದ ಸಂಪದವೇನು
ಎಲ್ಲವೂ ತನ್ನಯ ಹಿತಕಾಗೇ ಎನ್ನುವನು
ಪ್ರಕೃತಿಸಂರಕ್ಷಣೆಯ ಕರ್ತವ್ಯ ಮರೆತಿಹನು
ನಾಳಿನಾ ಪೀಳಿಗೆಯ ಹಿತವ ಕಡೆಗಣಿಸಿಹನು// //

ಒಲೆ ಹತ್ತಿ ಉರಿದೊಡೆ ನಿಲಬಹುದು ಅಲ್ಲದೆ
ಧರೆ ಹತ್ತಿ ಉರಿದೊಡೆ ನಿಲಬಹುದೇ ತಾಯೇ
ವಿವೇಕ  ಉದಯಿಸಲಿ ಎಲ್ಲರೆದೆಗಳಲಿ
ಮತ್ತೆ ಭೂರಮೆಯು ಹಸಿರಾಗಿ ನಳನಳಿಸಲಿ// //

ಒಂದು ವೃಕ್ಷವನಾದರೂ ನೆಟ್ಟು ನಲಿವ
ಇಂಗುಗುಂಡಿಗಳಿಂದ ಜಲವ ಸಂರಕ್ಷಿಸುವ
ಪೋಲಾಗದಂತೆ ಜಲವ ಸಂರಕ್ಷಿಸುವ
ವಸುಂಧರೆಯೊಡಲಲ್ಲಿ ಧನ್ಯತೆಯ ಪಡೆವ// //

ಸರ್ಕಾರವೆ ಮಾಡಬೇಕಿಲ್ಲ ಎಲ್ಲ
ನಮ್ಮ ಹೊಣೆಗಾರಿಕೆಯ ನಾವೇ ಅರಿಯಬೇಕಲ್ಲ
ಸಾಲುಮರದ ತಿಮ್ಮಕ್ಕ ಸಾಕ್ಷಿ ಇದಕೆ
ಅವರ ಆದರ್ಶ ದೀಪವಾಗಲಿ ಜಗಕೆ// //
[2/6/2019, 10:02 am] Dr. B. N. Shylaja Ramesh: # ಚಿತ್ರಕ್ಕೊಂದು ಕವನ ಸ್ಪರ್ಧೆ#
***************************
# ಪರಿಸರ ಸಂರಕ್ಷಣೆ #
********************
ಪ್ರಕೃತಿ ಚೆಲುವಿನ ದೇವಿ ನೀಡಿಹಳು ಬಹು ಒಲವು,
ಹರಿಸುತ್ತ ಜಗ ಪ್ರಾಣಿ,ಪಕ್ಷಿಗಳಿಗೆ ಬೇಕಾದುದೆಲ್ಲ!
ಮಾನವನ ಅತಿ ಆಸೆ ಸ್ವಾರ್ಥ ಹಂಬಲ ಫಲವು,
ವಿಕೃತಿಯಾಗುತಿದೆ ಆ ಮಹಾತಾಯಿಯೊಡಲು‌ !!
ಎಚ್ಚೆತ್ತುಕೋ ಮನುಜ, ವಿಕೃತಿಯನು ತಡೆಯುತ್ತ,
ಬೆಟ್ಟ,ಗುಡ್ಡದಿ ಗಿಡ ಮರಗಳನ್ನು ಬೆಳೆಸುತ್ತ,
ಮಾಡಿದಾ ಪಾಪ ಕರ್ಮಗಳಿಗೆ ಪರಿಹಾರ ಮಾಡು,
          *************************
ರಚನೆ : ಶ್ರೀ ಗೋಪಾಲ ಭಟ್.ಸಿ.ಯಚ್.
ಕೇರಳ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕರು
ಕಾಸರಗೋಡು.
ಹಕ್ಕುಸ್ವಾಮ್ಯ  : ಲೇಖಕರಲ್ಲಿ.
         **************************
ತಾರೀಖು :೨--೬--೨೦೧೯
         ***************************
[2/6/2019, 10:02 am] Dr. B. N. Shylaja Ramesh: # ಚಿತ್ರಕ್ಕೊಂದು ಕವನ ಸ್ಪರ್ಧೆ #
***********************************
( # ದೀರ್ಘ ಕವನ : 😀😀😀😀🙏🙏)
***********************************
# ಪರಿಸರ ಸಂರಕ್ಷಣೆ #
***********************************
ಮರ,ಗಿಡಗಳ ಕಡಿ,ಕಡಿದು ಭೂಮಿಯೊಡಲ ಬಗೆ,ಬಗೆದು ಮನುಜ ಮಾಡಿದ ಪ್ರಕೃತಿ,ವಿಕೃತಿ!
ತರ,ತರದ ವನ ಸಂಪದವ ಸ್ವಾರ್ಥಕ್ಕೆ ಬಳಸುತ್ತ
ಪಶು,ಪಕ್ಷಿ ಸಂಕುಲಕೆ ತಂದಿತ್ತ ಆಪತ್ತು ಕಿತಾಪತಿ !
ಎಲ್ಲಿ ಹೋಯಿತು?, ಆ ನಿತ್ಯ ಹರಿದ್ವರ್ಣ ಕಾಡುಗಳು?, ಎಲ್ಲಿ ಮರೆಯಾದುವು?ಆ ಗಗನ ತುಂಬಿ ಬೃಹದ್ಗಾತ್ರದ ಮಹಾ ವೃಕ್ಷಗಳು,
ಎಲ್ಲಿ ಹೋಯಿತು ಹಸಿರು ಹೊದಿಸಿದ್ದ ಆ ಸುಂದರ ಬೆಟ್ಟ,ಗುಡ್ಡಗಳು?.
ಎಲ್ಲವೂ ಸ್ವಾರ್ಥ ಮನುಜನ ಆಸೆ,ಪಿಪಾಸುವಿಗೆ
ಮರೆಯಾದುವಲ್ಲಾ?
ಸಸ್ಯ ಶ್ಯಾಮಲೆ, ಹರಿದ್ವರ್ಣ ಕಾಡುಗಳ 
ಆ ಹಸಿರು ಚೆಲುವನ್ನು ತಾನೆ ಕಳೆದೊಗೆದು,
ಮಳೆ ಮೋಡ,ಮಂದ ಮಾರುತ,ತಡೆಗೋಡೆ ಹರಿದೊಗೆದು,ಮಳೆ,ಇಲ್ಲ ಬೆಳೆ ಇಲ್ಲ 
ಎಂದೆನುತ ಮರುಗುತ್ತಾ,ಮುಗಿಲ ಕಡೆ ನೋಡುತ್ತ ಪರಿತಪಿಸಿ ನಿಂದು,
ಆ ದೇವರು,ಈ‌ ದೈವಕ್ಕೆ ಅಭಿಷೇಕ,ಹರಕೆಗಳ
ದಿನ ನಿತ್ಯ ಮಾಡುತ್ತ,ಕೊರಗುತ್ತಾ ನಿಂದು,
ತನ್ನ ಸ್ವಯಂಕೃತ ಅಪರಾಧವರಿಯದೆಲೆ,
ಆ ಇಂದ್ರ,ಚಂದ್ರನಿಗೆ ಮೊರೆಯಿಡುತ ನೊಂದು,
ಕೊನೆಗೊಮ್ಮೆ ತನ್ನ ತಪ್ಪಿನ ಜ್ಞಾನೋದಯವಾಗುತ್ತ,
ಈಗಿದೋ ಗಿಡಗಳನ್ನು ನೆಡುವ ತಾನಿಂದು!
ಅಲ್ಲಲ್ಲಿ ಪ್ಲ್ಯಾಸ್ಟಿಕ್,ಕಸಕಡ್ಡಿ,ಮಾಂಸ 
ತ್ಯಾಜ್ಯಗಳನೆಸೆದು,
ನದಿ,ಹೊಳೆ,ತೋಡು,ಮಾರ್ಗ ಬೀದಿಗಳ
ಮಲಿನಗೊಳಿಸುತ್ತ,
ಬೆಟ್ಟ,ಗುಡ್ಡಗಳನ್ನು ಯಂತ್ರಗಳಿಂದ ಅಗೆದು,ಬಗೆಯುತ್ತ
ಕೆರೆ,ತೊರೆ,ಬಾವಿಗಳ ಮಣ್ಣಿಂದ ಮುಚ್ಚುತ್ತ,
ಹೊಲ,ಗದ್ದೆಗಳ ಬಿಡದೆ ಕಟ್ಟಡಗಳ ಕಟ್ಟುತ್ತ,
ಹಳ್ಳಿ ಬದುಕು ಬೇಡ,ಪಟ್ಟಣಕೇ ಸಾಗುತ್ತ,
ಊರು ಹೊಲಗದ್ದೆಗಳ ಮೂರು ಕಾಸಿಗೆ ಮಾರುತ್ತ,
ವಿಕೃತವ ಮೆರೆವ ಮನುಜನಿಗೆ ಪ್ರಕೃತಿ ಪ್ರೇಮ,ವ್ಯಾಮೋಹ ಮರೆತು ಹೋಯಿತು,
ಕೃತಕ ಯಾಂತ್ರೀಕೃತ ಬದುಕು ಇಷ್ಟವಾಯ್ತು, ನೆಮ್ಮದಿಯ ಬದುಕು ಮರೆಯಾಯ್ತು !!
ಮೋದಿಯವರಾಗಲಿ,ಇನ್ನೊಬ್ಬ ಮಂತ್ರಿಯೇ
ಹೇಳಿದರೆಂದು ಪರಿಸರ ಸ್ವಚ್ಛ ಮಾಡಲು ಹೊರಡುವುದಲ್ಲ!,
ನಮಗೆ,ನಾವೇ ನಮ್ಮ ಪರಿಸರವನ್ನು
ಸ್ವಚ್ಛವಾಗಿರಿಸಬಹುದಲ್ಲಾ?!!

ಮಾಡುವಾ ತಪ್ಪುಗಳ ಮೊದಲೆ ಎಚ್ಚರಿಸಿತ್ತು,
ಆ ಮಾತೆ ಪ್ರಕೃತಿ, ಬಿರುಗಾಳಿ,ಚಂಡಮಾರುತ,
ಭೂಕಂಪ,ಸುನಾಮಿ ರೂಪದಲ್ಲಿ,
ಎಡೆಗೆಡೆಗೆ ಬರಗಾಲ,ಬಿರು ಬಿಸಿಲು ಸುಡುವಾಗ,
ಎಚ್ಚೆತ್ತುಕೊಳ್ಳಬೇಕಿತ್ತು,ಮಾನವ ಜನಾಂಗ!
ಆ ಕಾಡು ಮರಕೋತಿ,ಹಂದಿ,ಹುಲಿ ಚಿರತೆಗಳು,
ಕಾಡಾನೆ,ಜಿಂಕೆ ನವಿಲುಗಳು ನಾಡರಸಿ ಬಂದಾಗ!!
ಆದರೂ ಅರಿವಾಗದಿದ್ದಾಗ,ಪ್ರಕೃತಿ ವಿಕೃತಿ ಮುಂದುವರಿದಾಗ,ಮತ್ತಿನ್ನೇನು ಆದೀತು? ಬರಗಾಲ,ಕುಡಿನೀರಿಗೂ ತತ್ವಾರ,ಆಗದಿದ್ದೀತೇ?, ಆದರೂ ಮನುಜ ಎಚ್ಚೆತ್ತುಕೊಳ್ಳದಿರೆ,
ಭೀಕರತೆ ಉಲ್ಬಣವು,ಭೂಮಿ ಆಳದಾಳಕ್ಕೂ ಕೊರೆದರೂ , ಸಾವಿರ ಅಡಿಗಿಳಿದರೂ,ನೀರಿಲ್ಲದೆ ಹಾಹಾಕಾರವು !
ಇನ್ನಾದರೂ ಎಚ್ಚೆತ್ತುಕೋ,ಮನುಜ!,
ನೆಡುವ ಗಿಡವ,ಆರೈಕೆ ಮಾಡಿ ಬೆಳೆಸುವ ಮರವ,
ನಾಳಿನಾ ಮಕ್ಕಳಿಗೂ,ಪಶು,ಪಕ್ಷಿ ಸಂಕುಲಕೂ
ಇರಲಿ ಈ ಬುವಿಯು ತಂಪಾಗಿ,
ಇರಲಿ ಸಂಮೃದ್ಧ ಕುಡಿನೀರು,ಕೆರೆ,ತೊರೆ,
ಹೊಳೆ,ನದಿ ಜಲದಿಂದ ತುಂಬಿರಲಿ,
ಮರ ಗಿಡಗಳು ಹೂ ಕಾಯಿ,ಹಣ್ಣಿಂದ 
ತುಂಬಿ ತುಳುಕುತ್ತಿರಲಿ,
ಆ ಹಲಸು,ಮಾವು,ನೆಲ್ಲಿ,ಪೇರಳೆ,ನೇರಳೆ
ಸವಿ,ಸಿಹಿ ಹಣ್ಣು ಎಲ್ಲರಿಗೂ ಸಂವೃದ್ಧಿಯಾಗಿ ಸಿಗುವಂತಾಗಲಿ,
ಕುಹೂ,ಕುಹೂ,ಕೋಗಿಲೆ ಹಾಡು ಕೇಳುವಂತಾಗಲಿ,
ನವಿಲು ಗರಿಬಿಚ್ಚಿ ಕುಣಿಯುವಂತಾಗಲಿ,
ಸಿಹಿ ಜೇನು,ಮರಗೆಲ್ಲುಗಳಲ್ಲಿ ,
ಪೊಟರೆಗಳೆಡೆಯಲ್ಲಿ ದೊರಕುವಂತಾಗಲಿ, 
ಜಿಂಕೆ,ಸಾರಂಗ,ಮೊಲ,ದನ,ಕರು ಅಲ್ಲಲ್ಲಿ ಮೇಯುವಂತಾಗಲಿ,
ಇಂತಾಗಲು ಮರಗಿಡಗಳು ಎಲ್ಲೆಡೆಗೂ ಬೆಳೆಯುವಂತಾಗಲಿ!
ಸುಮ್ಮನೇ ವಿಶ್ವ ಪರಿಸರ ದಿನಾಚರಣೆ ಎಂದು ಫೋಟೋಗೆ ಪೋಸ್ ಕೊಡಲೋಸುಗ 
ಗಿಡ ನೆಡುವ ಕಾರ್ಯಕ್ರಮ ಬೇಡ !
ವನಮಹೋತ್ಸವವೆಂದು ಒಂದು ದಿನದಲ್ಲಿ ಭರ್ಜರಿಯಾಗಿ ಮಂತ್ರಿ,ಮಾಗಧರನ್ನು ಕರೆಸಿ ಐಷಾರಾಮಿ ವೈಭವದ ಗಿಡ ನೆಡುವ 
ಕಾಯಕವೂ ಬೇಡ !!
ಸಾಲು ಮರದ ತಿಮ್ಮಕ್ಕನಂತೆ ನಾವೂ ಗಿಡ ನೆಟ್ಟು ಬೆಳೆಸಿ ಮರ ಉಳಿಸುವ ಕೆಲಸ ಮಾಡುವ!
ಮಕ್ಕಳನ್ನೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ !!
ಹಸಿರೆ ಉಸಿರಾಗಲಿ,ಉಸಿರು ಸರಾಗವಾಗಲಿ.
ಮತ್ತೊಮ್ಮೆ ಆ ತೇಗ,ಗಂಧ,ಹಲಸು,ಗಗನ ಚುಂಬಿ,
ಬೀಟಿ,ಉತ್ತಮೋತ್ತಮ ಮೋಪಿನ ಮರಗಳು ಬೆಳೆದು
ಗಗನದೆತ್ತರಕ್ಕೂ ಶುದ್ಧವಾಯು ಪಸರಿಸುವಂತಾಗಲಿ!
ಉಸಿರಾಡಲು ಸ್ವಚ್ಛ ತಂಗಾಳಿ ಸದಾ ಬೀಸುವಂತಾಗಲಿ!
ಇಂದು ನೆಡುವ ಸಹಸ್ರ,ಸಹಸ್ರ ಗಿಡಗಳನ್ನು
ಎಂತು ಮಗುವನ್ನು ರಕ್ಷಿಸುವೆವೋ?,
ಅಂತೆಯೇ ಅವುಗಳ ಸಂರಕ್ಷಿಸುವ,ಬೆಳೆಸಿ 
ನಾಡು ಜೀವನ ಸುಖೀಯಾಗಿಸುವ!
ಇದೇ ನಮ್ಮ ಪ್ರತಿಜ್ಞೆಯಾಗಲಿ,ಇಂದೇ ಇದಕ್ಕೆ ಮೂಹೂರ್ತವಾಗಲಿ!
ವನ ಸಂವೃದ್ಧಿ ನಮ್ಮ ಹಕ್ಕು,ಪರಿಸರ ರಕ್ಷಣೆ 
ನಮ್ಮ ಕರ್ತವ್ಯವಾಗಲಿ !!
ಜೈ ಜೈ ವೃಕ್ಷ ಮಾತೆ!, ಜೈ ಜೈ ಪ್ರಕೃತಿ ಮಾತೆ !!
                    **************************
ರಚನೆ : ಶ್ರೀ ಗೋಪಾಲ ಭಟ್.ಸಿ.ಯಚ್.
ಕೇರಳ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕರು,
ಕಾಸರಗೋಡು ಜಿಲ್ಲೆ.
ಹಕ್ಕುಸ್ವಾಮ್ಯ : ಲೇಖಕರಲ್ಲಿ.
ತಾರೀಖು ೨---೬---೨೦೧೯
                   *************************
( ಚಿತ್ರ ಕೃಪೆ : ಇಂಟರ್ನೆಟ್ ಕ್ರೋಮ್ )
                   *************************
[2/6/2019, 10:03 am] Dr. B. N. Shylaja Ramesh: :ಪರಿಸರ  ಸಂರಕ್ಷಣೆ:
~~~~~~~~~

ಉಳಿಸಬೇಕು  ಬೆಳಸಬೇಕು
ನಾವು  ನಮ್ಮ  ಪರಿಸರ
ಹಚ್ಚಿ  ನಾವು  ಬೇಳಸಬೇಕು
ನಮ್ಮ  ಸುತ್ತ  ಗೀಡಮರ

ಬಾನಲೊಂದು  ರಕ್ಷೆ  ಇತ್ತು
ಅದಕ್ಕೆ  ನಮ್ಮ  ಕಣ್ಣು  ಬಿತ್ತು
ಪ್ರಗತಿಯಂತ್ರ  ಮೇಲೆಹೋತು
ಇಗಅಲ್ಲಿ  ಬರೀತೂತು

ನದಿಯನೀರೆ  ಕುಡಿಯೋಮೂಲ
ಆಗಿಹೋಗಿವೆ  ಮಲಿನ  ಜಲ
ಪ್ರಾಣಿಪಕ್ಷಿಗೂ  ಬೇರೆ ಇಲ್ಲ
ಕುಡಿದು ಮಡಿದರೆ  ಪಾಪಫಲ

ಹಬ್ಬಹರಿ  ದೀನಗಳೆಂದು
ಹಚ್ಚಬೇಕೆ  ನಾವು  ಮದ್ದು
ಉಸೀರು  ಗಟ್ಟುತ್ತಿದ್ರುಅಲ್ಲಿ
ಹಚ್ಚಬೇಕೆ  ನಾವೇಕುದ್ದು

ಬಾನಿನೇತ್ತರ  ಚಿಮುನಿ  ಕಟ್ಟೆ
ಹೋಗೆಯನೆಲ್ಲ  ಬಾನಿಗಟ್ಟಿ
ಕೂಡಿಅಲ್ಲಿ  ಮೋಡಗಟ್ಟಿ
ಬಂದು  ಸೇರಿದೆ  ನಮ್ಮ  ಹೊಟ್ಟೆ

ಬುದ್ಧಿವಂತ  ಮನುಜನೇಕೊ
ಆದನಿಂದು  ಮಾರಕ
ಮುಗ್ದಪ್ರಾಣಿ  ಪಕ್ಷಿಗೇಕೊ
ತೋರಿದಂತೆ  ಇಲ್ಲೆನರಕ

         ಶ್ರೀ.  ಚಂದ್ರಶೇಖರ  ಎಸ್  ಭಂಗಿ
[2/6/2019, 10:03 am] Dr. B. N. Shylaja Ramesh: ಪರಿಸರ ಸಂರಕ್ಷಣೆ 

"ಕಾಡಿದ್ದರೆ ನಾಡು" ಧ್ಯೇಯವಾಕ್ಯವದು.
ಪ್ರಕೃತಿ ಪರಿಸರ ನಾಡಿಗೆ ದೈವವಾಗಿಹುದು.

ಬೆಟ್ಟ ಗುಡ್ಡ ಕಾಡು, ಕೆರೆ ನದಿ ಹೊಳೆ ಸಾಗರಕೆ
ಅವಿನಾಭಾವ ಸಂಬಂಧವಿಹುದು.
ಬೆಟ್ಟ ಗುಡ್ಡವಿದ್ದರೆ ಮೋಡಗಳ ತಡೆದು 
ಭುವಿಗೆ ಮಳೆಯ ಸುರಿಸುವುದು.

ಕಾಡದು ಹಸಿರ ವನಸಿರಿಯು ಲಕ್ಷ ಲಕ್ಷ 
ಜೀವರಾಶಿಯ ಜೀವಕೆ ಉಸಿರಹುದು.
ಕೆರೆ ನದಿ ಹೊಳೆ ಸಾಗರ ಜೀವಸಂಕುಲದ
ಅಮೃತ ಧಾರೆಯ ಜೀವಜಲವದು.

ಪ್ರಕೃತಿ ಆರಾಧಕನಾಗಿ ಬದುಕಿ ಬಾಳಿದ,
ನಾಗರೀಕತೆಯ ಹೆಸರಿನಲಿ ಬೆಳೆದ ಬೆಳೆದ.
ಬೆಳೆದು ನಾಡು-ನುಡಿ ಗುಡಿಯ ಕಟ್ಟಿದ,
ಪ್ರಕೃತಿ ಜಗತ್ತು ಪೂರ ತನದೆಂದು ತಿಳಿದ.

ಬೆಟ್ಟ ಗುಡ್ಡ ಕಡಿದ, ಕಾಡು ಕತ್ತರಿಸಿದ,
ಕೆರೆ ಕಟ್ಟೆ ಮುಚ್ಚಿದ, ನದಿ-ಹೊಳೆ ಬತ್ತಿಸಿದ.
ಭುವಿಯ ಬಗೆದು ಬಗೆದು ಸಂಪತ್ತನ್ನೇಲ್ಲಾ
ತನ್ನಿಚ್ಚೆ ಬಂದಂತೆ ಬರಿದು ಮಾಡಿದ.

ವಾತಾವರಣಕೆ ಬೇಡದ ಹೊಗೆ, ವಿಷಾನಿಲ
ಪ್ಲಾಸ್ಟಿಕ್ ಎಂಬ ಕರಗದ ಜಡವ ನೀಡಿದ.
ಜೀವಜಲವ ಕಲುಷಿತವಾದ ಗಂಗೆ ಮಾಡಿದ.
ಆಹಾರ ಧಾನ್ಯವನು ಕಲಬೆರಕೆ ಮಾಡಿದ.

ಮದ್ದು ಗುಂಡು ಬಾಂಬು ಕ್ಷಿಪಣಿಗಳ ಸೃಷ್ಟಿಸಿ,
ಜಗತ್ತನ್ನೇ ನಾಶ ಮಾಡಲು ಅಣಿಯಾದ.
ಸ್ವಾರ್ಥ ತುಂಬಿದ ಕಡುಗೇಡಿ ರಾಕ್ಷಸನಾಗಿ,
ಕೋಟಿ ಕೋಟಿ ಜೀವಸಂಕುಲಕೆ ಕುತ್ತಾದ.

ಮಳೆಯಿಲ್ಲದೆ ಭೂಮಿ ಬಿರಿದು ಬರಡಾಗಿದೆ,
ಬೆಳೆಯಿಲ್ಲದೆ ತುತ್ತು ಅನ್ನಕೂ ತತ್ವಾರವಾಗಿದೆ.
ಕುಡಿವ ಶುದ್ಧ ನೀರಿಗೂ ಪರದಾಡುವಂತಾಗಿದೆ
ಆದರೂ ಕ್ಷಮಿಸುತಿಹಳು ಮಗುವೆಂದು ನಿನ್ನ.

ಸಿಡಿದು ರೋಷಾಗ್ನಿಯಲಿ ಪ್ರಕೋಪ ತಾಳಿದರೆ
ಉಳಿದು ನೀ ಬದುಕಲಾರೆ, ಬೆಳೆಯಲಾರೆ.
ಈಗಲಾದರೂ ಎಚ್ಚೆತ್ತುಕೊ ಮೂಢ ಮನುಜ
ಪರಿಸರ ಸಂರಕ್ಷಿಸು, ಭೂಮಿಯ ಉಳಿಸು.

ಪ್ರಕೃತಿ ಪರಿಸರ ಶುಚಿಯಾಗಿ ಕಾಪಾಡಿದರೆ
ನಗು ನಗುತ ಬೆಳಗುವುದು ಧಾರಿಣಿ.
ಕಾಡನು ಬೆಳೆಸು, ನಾಡನು ರಕ್ಷಿಸು.
ನೀನು ಬದುಕು ಇತರರನು ಬದುಕಲು ಬಿಡು.

ಮತ್ತೆ ಪ್ರಕೃತಿ ದೇವಿಯ ಆರಾಧಕನಾಗು,
ಭೂತಾಯಿ ಮಡಿಲ ಪೊರೆವ ಮಗನಾಗು.

ಜ್ಯೋತಿಲಕ್ಷ್ಮಿ ಬಿ.ಎನ್
[2/6/2019, 10:03 am] Dr. B. N. Shylaja Ramesh: ಚಿತ್ರಕ್ಕೊಂದು ಕವನ/ಲೇಖನ ಸ್ವಧೆ೯
 ಪರಿಸರ ಸಂರಕ್ಷಣೆ 
**************************************
ಮಾನವ ಜೀವನದ ಬದುಕಿನೊಳಗೆ ನಿಕಟ ಸಂಪಕ೯ ಹೊಂದಿರುವುದು ಪರಿಸರ,ಅದು ಮನುಷ್ಯನ ಮತ್ತು ದೇಹದ ಮೇಲೆ ಅಗಾಧವಾದ ಪರಿಣಾಮಗಳನ್ನು ಬೀರುತ್ತದೆ. ಕಾಡುಮೇಡಗಳಲ್ಲೇ ತನ್ನ ಜೀವನ ಪಯಣ  ಅರಂಭಿಸಿದ ಮಾನವ ಪರಿಸರವನ್ನು ತನ್ನ  ಅವಿಭಾಜ್ಯ ಅಂಗವಾಗಿ ಪ್ರೀತಿಸುತಿದ್ದ,ಗಿಡಮರಗಳನ್ನು ಬೆಳಸುವ ಕಾಯಕದೊಂದಿಗೆ ತನ್ನ ಜೀವನ ಪಯಣವನ್ನು ಅರಂಭಿಸುತಿದ್ದ,ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ,ತನ್ನ ದೇಹವನ್ನು ಮತ್ತು ತನ್ನ ದೇಹದ ಮೇಲೆ ಪ್ರಭಾವಬೀರುವ ಪ್ರತಿಕೂಲ ಪರಿಣಾಮಗಳನ್ನು ತಡೆದು ಆರೋಗ್ಯಯುತ ಜೀವನ ನೆಡೆಸಿ ನೂರಾರು ವಷ೯ ತನ್ನ ಕುಟುಂಬದೊಂದಿಗೆ ಜೀವಿಸಿ ಸಂತೋಷ ಪಡುತಿದ್ದ. ಅದರೆ ಮಾನವ ಅಧುನಿಕ ಯುಗದೊಂದಿಗೆ ಬೆಳೆಯುತ್ತಾ ತನ್ನ ಸ್ವಾಥ೯ಜೀವನಕ್ಕೇ ಪರಿಸರವನ್ನು ಹಾಳು ಮಾಡುತೊಡಗಿದ ಮತ್ತು ಸುಖದ ಜೀವನಕ್ಕಾಗಿ ವಿವಿಧ ರೀತಿಯ ವಸ್ತುಗಳನ್ನು ಕಂಡುಹಿಡಿಯತೊಡಿದ.
ಉದಾಹರಣೆಗೆ ನಮ್ಮ ಪರಿಸರವನ್ನು ಹಾಳು ಮಾಡುತ್ತಿರುವುದು ಪ್ಲಾಸ್ಟಿಕ್ , ಮನುಷ್ಯ ತನ್ನ ದೇಹಕ್ಕೆ ಕಷ್ಟವಾಗಬಾರದೆಂದು ಪದಾರ್ಥಗಳನ್ನು ಸಾಗಿಸಲು,ಕೊಂಡೊಯ್ಯುವ ಸಲುವಾಗಿ ಮತ್ತು ಸುಲಭವಾಗಿ ಉಪಯೋಗಿಸಿ ಬಿಸಾಡುವ ಉದ್ದೇಶ ಹೊಂದಿ ತಯಾರು ಮಾಡಿಕೊಂಡ ಈಗ ಇದೇ ಪ್ಲಾಸ್ಟಿಕ್ ಅವನ ಆರೋಗ್ಯದ ಮೇಲೆ ವಿವಿಧ ರೀತಿಯ ಪರಿಣಾಮಗಳು ಬೀರುತ್ತಾ ಮಾನವನನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ ಮತ್ತು ವಿಷಕಾರಿ ಅನಿಲಗಳಿಂದ ತಯಾರದ ಪ್ಲಾಸ್ಟಿಕ್ ನ್ನು ಮಾನವ ಉಪಯೋಗಿಸಿ ಬಿಸಾಡಿದ ನಂತರ ಅದ ಪ್ರಾಣಿ ಸಂಕುಲ ದೇಹದ ಮೇಲೆ ಅಗಾಧ ಪರಿಣಾಮಗಳು ಬೀರಿ ಅವುಗಳ ಉತ್ಪನ್ನಗಳನ್ನು ಸೇವಿಸುವ ಮನುಕುಲ
ಇನ್ನಷ್ಟು ದುಷ್ಪರಿಣಾಮಗಳನ್ನು ಹೆದರಿಸುತ್ತಿದ್ದಾನೆ.
ಹಿಂದಿನ ಕಾಲದಲ್ಲಿ ಮಾನವರು ವಿವಿಧ ರೀತಿಯ ಸಸ್ಯಸಂಕುಲವನ್ನು  ತನ್ನ ಮನೆ ಹೊಲ ತೋಟದಲ್ಲಿ ಬೆಳೆಸುತ್ತಿದ್ದ,ಸಾವಯವ ಗೊಬ್ಬರದಿಂದ ವಿವಿಧ ತರಕಾರಿ ಹಣ್ಣು ಹಂಪಲುಗಳನ್ನು ಬೆಳೆದು ಸೇವಿಸಿ ಆರೋಗ್ಯ ಜೀವನವನ್ನು ಬಯಸಿದ್ದ. ಅದರೆ ಅಧುನಿಕ ಯುಗದಲ್ಲಿ ಮಾನವ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸಿ ವ್ಯವಸಾಯ ಮಾಡಲು ಪ್ರಾರಂಭಿಸಿ 
ಶಕ್ತಿ ಇಲ್ಲದ ಪದಾರ್ಥಗಳನ್ನು ತಯಾರಿಸಿ ತನ್ನ ದೇಹವನ್ನು ಕೃಶವಾಗಿಸಿ ದೈಹಿಕ ಶ್ರಮವಿಲ್ಲದೆ ಬದುಕತೊಡಗಿದ.
ಬೃಹತ್ತಾದ ಕಾಡುಮೇಡಗಳನ್ನು ನಾಶಪಡಿಸಿ ತನ್ನ ಅಸೆಯ ಸ್ವಾಥ೯ ಜೀವನಕ್ಕೆ ಪರಿಸರವನ್ನು ನಾಶ ಪಡಿಸಿ
ಕಾಂಕ್ರೀಟ್ ನಾಡನ್ನು ಕಟ್ಟ ತೊಡಗಿದ್ದಾನೆ ಮತ್ತು ಕಾಡು ನಾಶದಿಂದಾಗಿ ಪ್ರಾಣಿಸಂಕುಲವೇ ನಾಶವಾಗುತಿದೆ ಮುಂದಿನ ಜನಾಂಗ ಪ್ರಾಣಿ ಪಕ್ಷಿಗಳನ್ನು ಮೃಗಾಲಯದಲ್ಲಿ ನೋಡಿ ಅವುಗಳ ಪರಿಚಯವನ್ನು ಕೇಳಿ ತಿಳಿಯ ಬೇಕಾಗಿದೆ ಮತ್ತು ಅಗಾಧ ಕಾಡಿನ ಪರಿಸರದಿಂದ ಮಳೆಯು ಭೂಮಿಯನ್ನು ತಂಪಾಗಿಸಿ ರೈತ ಮತ್ತು ಪ್ರಾಣಿ ಸಂಕುಲಕ್ಕೇ ನೀರಿನ ಬರವೇ ಇಲ್ಲದಾಗಿತ್ತು ಅದರೆ ಇಂದು ನೀರಿಗೆ ಹಹಾಕರ ಶುರುವಾಗಿದೆ
ಕೊನೆಯದಾಗಿ ಹೇಳುವುದಾದರೆ ನಾವು ಪ್ರತಿಯೊಬ್ಬರು ಸಾಲುಮರದ ತಿಮಕ್ಕರವರಂತೆ ಮನಸ್ಸು ಮಾಡಬೇಕಾಗಿದೆ ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂಪ್ರೇರಿತವಾಗಿ ಉಪಯೋಗವನ್ನು ಕಡಿಮೆ ಮಾಡುತ್ತಾ ಸಸ್ಯಸಂಕುಲವನ್ನು ಬೆಳೆಸುತ್ತಾ ಕಾಡುಮೇಡುಗಳನ್ನು ರಕ್ಷಿಸಲು ಸಂಕಲ್ಪ ಮಾಡುತ್ತಾ ಮುಂದಿನ ಜನಾಂಗ ಕೂಡ ಈ ಭೂಮಿಯ ಮೇಲೆ ನೆಮ್ಮದಿಯ ಆರೋಗ್ಯ ಜೀವನವನ್ನು ನೆಡಸಲು ನಾವು ಮನಸ್ಸು ಮಾಡೋಣ ಎಂದು ಅಶಿಸುತ್ತಾ.....
      ಧನ್ಯವಾದಗಳೊಂದಿಗೆ
                            ✍ ನಾರಾಯಣಸ್ವಾಮಿ
[2/6/2019, 10:04 am] Dr. B. N. Shylaja Ramesh: #ಚಿತ್ರಕ್ಕೊಂದು ಕವನ ಸ್ಪರ್ಧೆ #
 #ಪರಿಸರ ಸಂರಕ್ಷಣೆ #
#ಕರುಳ ಕೂಗು #

ನಾನೆಂದರೆ ನಿನ ಗೇಕೆ ಅಷ್ಟಿಷ್ಟ ?
ನೀ ಬಳಿ ಬಂದರೆ ನಂಗೇನೋ ಒಂತರಾ ಭಯ,  ಕಷ್ಟ !
ಆಗೊಮ್ಮೆ ಹೀಗೊಮ್ಮೆ ಮಾಡುವೆ ನನ್ನ ಸಂಹಾರ, ನಷ್ಟ. 

ನೀ ಬದುಕಲು ನಾ ಉಸಿರ ನೀಡುವೆ 
ದಣಿದು ಬಂದಾಗ ನಿನಗೆ ನನ್ನಲ್ಲೇ ಆಸರೆ ಕೊಡುವೆ 

ನೀ ನನ್ನುಳಿಸಿದರೆ ಮಳೆಗೆ ಕೊರತೆ ಇಲ್ಲ 
ನೀ ನನ್ನ ರಕ್ಷಿಸಿ, ಬೆಳೆಸಿದರೆ ಶುದ್ಧ ಗಾಳಿಗೂ ದಕ್ಕೆ ಇಲ್ಲ 

ಸಾವಿರಾರು  ಪಕ್ಷಿಗಳು ನನ್ನ ಆಸರೆ ಬಯಸುತ್ತವೆ  
ನಾನೇ ಹೂವು ಹಣ್ಣು ಆಸರೆ ನೀಡಿ ಎಲ್ಲರಿಗೂ  ಫಲಕಾರಿಯಾಗುವೆ 

ನಿನಗೆ ಉಷಾರು ತಪ್ಪಿದರೆ ನಾನೇ ಔಷಧಿ ನೀಡುವೆ 
ನಿನಗೆ ಪೀಠೋಪಕರಣ  ಬೇಕಾದಾಗ ನನ್ನನ್ನೇ ನೆನೆವೆ 

ಮಕ್ಕಳಾ ಡಲೂ  ಓದಲೂ ನಾನು ಸಹಕಾರಿ 
ನನ್ನ ವಿಶೇಷತೆ ನಾನು ಬಹಳ ಪರೋಪಕಾರಿ 

ಇಷ್ಟಾದರೂ ನೀ ಸನಿಹ ಬರಲು ನನಗೆ ಎಲ್ಲಿಲ್ಲದ ಭಯ 
ನನ್ನ ಸಂತತಿಯ ಅಳಿವಿನ ಉಳಿವಿನ ಹೋರಾಟದ ಭಯ

ಓ ಮನುಜ ನಿನ್ನ ಐಷಾರಾಮಿ ಜೀವನ ಶೈಲಿಗೆ ಎಷ್ಟು ಸಲ ಕೊಡಲಿ ಏಟು ನೀಡುವೆ  ನನ್ನ ಕೊರಳಿಗೆ ?
ನಿನ್ನ ಉಸಿರು ನಿಂತ ಮೇಲೂ ಕಟ್ಟಿಗೆಯಾಗಿ ಸಹಕರಿಸುವ ನನಗೆ !

ನಾನಿಲ್ಲದಿರ ನಿನ್ನ ಬದುಕು ನಿಜಕ್ಕೂ  ಅಯೋಮಯ !
ಅರಿತು ಉಳಿಸು ಪೋಷಿಸು- ಪರಿಸರ ವೈವಿಧ್ಯಮಯ 😘

ಶ್ರೀಮತಿ ಪುಷ್ಪಾ ಶಶಿಧರ್
02-06-2019
ಬೆಂಗಳೂರು
[2/6/2019, 10:04 am] Dr. B. N. Shylaja Ramesh: ___ಯಾರ ಸಂರಕ್ಷಣೆ _-
__________-----______

ವರುಷಕೂಮ್ಮೆ ಒಮ್ಮೆ ಬರುವರು ನಾವು
ಸಾದ ಬರುವವರಲ್ಲಿ
ಆದರೆ ಕಾಮಣ್ಣನ ಮಕ್ಕಳಲ್ಲ
ಪರಿಸರ ಸಂರಕ್ಷರು
ನಾವೇ ಮರ ಕಡಿಸುವ
ರಾಕ್ಷಸರು ನಾವೇ

ಪರಿಸರದ ಹೆಸರಿನಲ್ಲಿ ಹಣ ಲೋಟಿಮಾಡುವ
ಅರಣ್ಯ ಭಕ್ಷಕರು
ಕತ್ತಿ ಗಿಡವು ಹತ್ತಿ ಗಿಡವೂ ನೆಟ್ಟು
ಅಲ ಬೇವು ನೆಟ್ಟ ಲೆಕ್ಕ ಕೂಟ್ಟು
ತಿಜೋರಿ ತುಂಬಿಸಿ ಕೂಳ್ಳವ
ಪರಿಸರ ಸಂರಕ್ಷಕರು ನಾವೇ

ವಿಜಯೇಂದ್ರ
ಜಯನಗರ
ತುಮಕೂರು
[2/6/2019, 10:04 am] Dr. B. N. Shylaja Ramesh: #ಪರಿಸರ_ಸಂರಕ್ಷಣೆ...#ಕವನ

ಜೀವ ಸಂಕುಲಕೆ ಕಂಟಕ ತರುವ
ನೆಲ ಜಲ ಗಾಳಿ ಕಲುಷಿತಗೊಳ್ಳುವ
ನಮ್ಮ ನಿಮ್ಮೆಲ್ಲರ ಅವಿವೇಕಿತನದ
ನಡೆಗಳೆ ಪರಿಸರ ಮಾಲಿನ್ಯಕೆ ಕಾರಣ
ಅರಿವಿನ ನಡೆಯೇ ಗೆಲುವಿನ ನಡೆ.....

ಸ್ವಸ್ಥ ಜೀವನಕೆ ಶುದ್ಧ ಗಾಳಿಗೆ
ಮನೆ ಮನೆಗೊಂದರಂತೆ ಗಿಡ ನೆಡಿ
ಹೊಗೆ ಕಾರುವ ವಾಹನಗಳ ಕಡಿತಗೊಳಿಸಿ
ಕೈಗಾರಿಕಾ ಚಿಮಣಿಗಳ ಎತ್ತರಕ್ಕೇರಿಸಿ
ಉಸಿರಾಡುವ ಗಾಳಿಗೆ ಮರುಜೀವ ಬಂದೀತು....

ಜಲವೇ ಸಕಲ ಜೀವಿಗೂ ಜೀವಾಳ
ಕೈಗಾರಿಕೋದ್ಯಮಿಗಳಿಗೆ ನೀರೆ ಬಂಡವಾಳ
ಮಾಲೀಕರೆ ಸಂಸ್ಕರಿಸಿದ ನೀರನ್ನ ನದಿಗಳಿಗೆ ಹರಿಸಿ
ನದಿ ಪಾತ್ರದ ಜನರೆ ಒಮ್ಮೆ ಯೋಚಿಸಿ ನೋಡಿ
ಸತ್ತ ಕೊಳೆತ ಪ್ರಾಣಿ ತ್ಯಾಜ್ಯಗಳ ಎಸೆಯಬೇಡಿ...

ಮಣ್ಣು ಮನುಜನ ಬದುಕಿಗೆ ಆಧಾರ
ಸವಕಳಿಯೇ ಅದಕ್ಕಿರುವ ದೊಡ್ಡ ಗಂಡಾಂತರ
ಗಾಳಿ ಮಳೆ ಪ್ರವಾಹದಿ ಕೊಚ್ಚಿ ಹೋಗದಿರಲು
ಮಣ್ಣನ್ನು ಹಿಡಿದಿಡುವ ವನರಾಶಿ ಬೆಳೆಸಿ
ನಿರಂತರ ಮೇಯಿಸದೆ ಹುಲ್ಲುಗಾವಲ ಉಳಿಸಿ....

ಶತ ಶತಮಾನಕ್ಕೂ ಕೊಳೆಯದ ವಸ್ತು
ಸುಟ್ಟರೆ ವಿಷಕಾರುವ ಕರಗದ ವಸ್ತು
ಭೂಮಿಗೆ ನೀರಿಂಗಿಸದ ಮಾರಕ ವಸ್ತು
ಬಳಸದಿರಿ ಬಳಸದಂತೆ ಎಚ್ಚರ ವಹಿಸಿ
ಜಗವ ನಾಶ ಮಾಡುವ ಪ್ಲಾಸ್ಟಿಕ್ ನಿಷೇಧಿಸಿ...

ಪರಿಸರ ದಿನಾಚರಣೆಯೇ ಪರಿಹಾರವಲ್ಲ
ಪರಿಸರ ಸಂರಕ್ಷಣೆಯಲ್ಲಿದೆ ನಮ್ಮಯ ಪಾತ್ರ
ಸರ್ಕಾರದ ಯೋಜನೆಗಳಿಗೆ ಕೈಜೋಡಿಸಿದರೆ ಮಾತ್ರ
ಅನುಭವಿಸಿಯೂ ಅರಿಯದಿರೆ ನಿನ್ನದೇ ಅಳಿವು
ಪರಿಸರ ಸಂರಕ್ಷಣೆಯೇ ನಮ್ಮೆಲ್ಲರ ಗೆಲುವು...

ರಚನೆ:ಶ್ರೀ ಸುರೇಶ್ ಹಾರನಹಳ್ಳಿ
ದಿನಾಂಕ:02.06.2019
[2/6/2019, 10:04 am] Dr. B. N. Shylaja Ramesh: ಪರಿಸರ ಸಂರಕ್ಷಿಸಿ

ಜೀವ ಜಲಧಾರೆ ಜೀಗಿವ ತಾಣ
ಭುವನೆ ಹಸಿರುಟ್ಟು ನಗುವ ಯಾಣ
ಮೃಗಖಗಗಳ ಸಮಾನತೆ ಸಮನ್ವಯ
ನಿತ್ಯವರಳಿ ನಗುವ ಹೂಬನ ದುಂಬಿವನ

ಉಸಿರಿಗುಸಿರು ಪ್ರಕೃತಿಯ ಐಸಿರಿ
ಉಳಿಸಿಕೊಳ್ಳಿ ದೇವನಿತ್ತ ಬನಸಿರಿ
ಕಡಿಯದಿರಿ ವೃಕ್ಷಕೂಟ ಸಂಕುಲ
ನಾಶವಲ್ಲಿ ವೃಕ್ಷವಾಸಿ ಜೀವಕುಲ

ಮೇಘನೊಲುಮೆ ಸಿಗದೆ ಜಿಗಿಯನು
ವರುಣ ಧರೆಗೆ ತಂಗಾಳಿ ಬೀಸದೆ
ವಟವನಪ್ಪಿ ಕರಗುವ ಕರಿಮುಗಿಲು
ಮುನಿಸಿ ಇಳೆಯಲಾರ ನಂಬಿ ಬಯಲ

ಹನಿ ಹನಿಯ ಜೀವಜಲ ಹೀರಲಿರದೆ
ಸಾವುನೋವು ಸಾಲುಸಾಲು ಜೀವಕುಲ
ಗಳಿಸಿ ಮಿತಬಳಕೆಯ ನೀತಿ ಪಾಠವ
ಉಳಿಯಲಿ ಪೃಥ್ವಿ ತಾಣ ಹಸಿರ ಹೂಬನ

ಜೀವಕೆ ಜೀವ ಗಾಳಿ ನೀರು ಮಣ್ಣಕಣ
ಪೋಲು ಮಾಡದಿರಿ ನಾಶವಿಲ್ಲಿ ಜೀವನ
ಹರಸಿ ಪೋಷಿಸಿ ಪ್ರಕೃತಿ ತಾಣಯಾಣವ
ಉಳಿದು ಬೆಳಗಲಿ ಮನಗಳಿಗೆ ತಂಬೆಳಕ

ಜಗದ ಜೀವನಾಡಿ ಹಸಿರ ಸ್ವಚ್ಛಂದ  ಪರಿಸರ
ಉಳಿವು ಅಳಿವು ಮನುಜನ ಕರದಲಿ ಅಡಗಿದೆ
ಕೊಡಲಿ ಹಿಡಿದು ಬರಿದು ಮಾಡದೆ ಬೆಳೆಸಿ
ಬನವನ ನೋಡಿ ಅರಳಲಿ ಮುಗ್ಧ ಹೂಮನ.

ಶ್ರೀಮತಿ ಸಿದ್ದು ಸ್ವಾಮಿ.
[2/6/2019, 10:05 am] Dr. B. N. Shylaja Ramesh: ಚಿತ್ರಕ್ಕೊಂದು ಲೇಖನ ಸ್ಪರ್ಧೆ 

#ಪರಿಸರ ಸಂರಕ್ಷಣೆ #

ಪರಿಸರ ಅಂದರೆ ನಮ್ಮ ಸುತ್ತ ಮುತ್ತಲಿನ ಜಾಗ. ಈ ನೈಸರ್ಗಿಕ ಸಂಪತ್ತು ನಮ್ಮ  ಜೀವದ ಬೇರು. ಅತ್ಯಮೂಲ್ಯ  ಆಸ್ತಿ. ಹೆಚ್ಚುತ್ತಿರುವ ಜನಸಂಖ್ಯೆ ಒಂದೆಡೆಯಾದರೆ , ಮಲಿನಗೊಳ್ಳುತ್ತಿರುವ ಪರಿಸರ ಇನ್ನೊಂದೆಡೆ. ಇನ್ನು ವಿಶ್ವ ಪರಿಸರ ದಿನವೆಂದು ಜೂನ್ 5ನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 

ನಮ್ಮ ಕರುನಾಡಿನ ವೃಕ್ಷ ಮಾತೇ ಸಾಲು ಮರದ ತಿಮ್ಮಕ್ಕ ಯಾರಿಗೆ ಪರಿಚಯ ವಿಲ್ಲವೇಳಿ ? ಸ್ವಾರ್ಥಿಗಳು ಒಂದೆಡೆಯಾದರೆ ಸಮಾಜಮುಖಿಗಳು ಇನ್ನೊಂದೆಡೆ. ಮಕ್ಕಳಿಲ್ಲದ ತಿಮ್ಮಕ್ಕ ನವರು ಸುಮಾರು 400 ಮರಗಳನ್ನು ಮಕ್ಕಳಂತೆ ನೆಟ್ಟು ಬೆಳೆಸಿರುವ ಯಶೋಗಾಥೆ ಶ್ಲಾಘನೀಯ. ನೀರಿನ ಅಭಾವವಿದ್ದರೂ 105 ವರುಷದ ಹಿರಿ ಜೀವ ಹಸನ್ಮುಖಿಯಾಗಿ ಸಮಾಜ ಸೇವೆಗೈಯುತ್ತಿರುವುದು ನೋಡಿದರೆ ಈ ವೀರ ಮಾತೆಗೆ ನಾವೆಂದೂ ಚಿರಋಣಿಗಳೇ. ಉಸಿರಾಡಲು ಒಳ್ಳೆಯ ಗಾಳಿ ಅರಸಿ ಉದ್ಯಾನದೆಡೆಗೆ ಮುಖಮಾಡುವ ಎಷ್ಟೋ ಜನರಿಗೆ ಇವರ ಕೆಲಸ ಸ್ಫೂರ್ತಿ ದಾಯಕವಲ್ಲವೇ ?

ಪರಿಸರ ಪ್ರೇಮವೆಂದರೆ ಹೀಗಿರಬೇಕು. ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ನಮ್ಮ ಕನ್ನಡ ಚಿತ್ರ ರಂಗದ ದರ್ಶನ್ ಕೂಡ ಪ್ರಾಣಿ ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲಿಲ್ಲವೇ ?ನಿಜವಾದ ಪ್ರೀತಿ ಕಾಳಜಿ ಇರುವವರು ಅದರಲ್ಲೇ ಸಂತೋಷ ಕಂಡುಕೊಳ್ಳುತ್ತಾರೆ. 

ಇನ್ನು ಸುಮಾರು ಗೃಹ ನಿರ್ಮಾಣ ಸಂಸ್ಥೆಗಳು ಗ್ರಾಹಕರಿಗೆ ಸಸಿ ನೀಡುವುದು, ಮದುವೆ ಸಮಾರಂಭ, ಸಭೆಗಳಲ್ಲಿ ಪಾಲ್ಗೊಂಡವರಿಗೆ ಗಿಡ ನೀಡುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ. ಆದರೆ ಎಷ್ಟು ಜನ ಅದನ್ನು ನೆಟ್ಟು ಪೋಷಿಸುತ್ತಾರೋ ಗೊತ್ತಿಲ್ಲ.  ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಅದರ ಪ್ರ್ರಾಮುಖ್ಯತೆ ಅರಿತು, ಪ್ರತಿನಿತ್ಯ ನಾವು ಪರಿಸರದ ಸಂರಕ್ಷಣೆಯಲ್ಲಿ ತೊಡಗಿದರೆ ಶುದ್ದ ಮೂಲಭೂತ ಸೌಕರ್ಯ ಕ್ಕೆ ಕೊರತೆ ಇಲ್ಲದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಬಹುದು. 

ಶ್ರೀಮತಿ ಪುಷ್ಪಾ ಶಶಿಧರ್
ಬೆಂಗಳೂರು 
02-06-2019
[2/6/2019, 4:01 pm] Dr. B. N. Shylaja Ramesh: ಜೀವ ಸಂಕುಲದ ಉಳಿವಿಗಿರಬೇಕು ಕಾಡು
ಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡು
ಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತ
ಅವಿವೇಕದ ನಡತೆಗೆ ಪರಿಸರವೇ ದೂಷಿತ

ಪರಿಶುದ್ಧ ಗಾಳಿಗೂ ಬಂತು ಸಂಚಕಾರ
ಗಿಡಮರವ ಕಡಿದು ತಂಪಿಲ್ಲದೆ ಆಹಾಕಾರ
ಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನ
ಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನ

ಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನ
ಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನ
ಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡು
ಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡು
[2/6/2019, 4:57 pm] Dr. B. N. Shylaja Ramesh: ಪರಿಸರ ಸಂರಕ್ಷಣೆ
***************

ಜೀವ ಸಂಕುಲದ ಉಳಿವಿಗಿರಬೇಕು ಕಾಡು
ಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡು
ಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತ
ಅವಿವೇಕದ ನಡತೆಗೆ ಪರಿಸರವೇ ದೂಷಿತ

ಪರಿಶುದ್ಧ ಗಾಳಿಗೂ ಬಂತು ಸಂಚಕಾರ
ಗಿಡಮರವ ಕಡಿದು ತಂಪಿಲ್ಲದೆ ಆಹಾಕಾರ
ಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನ
ಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನ

ಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನ
ಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನ
ಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡು
ಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡು

ಹಸಿರಿನ ಸ್ವಚ್ಛ ಪರಿಸರ ಜಗದ ಜೀವನಾಡಿ
ಗಿಡನೆಡಿ ಮುಂದೊಮ್ಮೆ ಅದುವೆನಮ್ಮ ಒಡನಾಡಿ
ಮನುಜನ ಕೈಯಲ್ಲಿದೆ ಅಳಿವುಉಳಿವಿನ ಪ್ರಶ್ನೆ
ಮರೆಯದೇ ಮಾಡಿ ಪರಿಸರ ಸಂರಕ್ಷಣೆ

             ಶೈಲೂ.....
[3/6/2019, 7:42 pm] Dr. B. N. Shylaja Ramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮುತ್ತಿನ ಹಾರದಂತಿರಬೇಕು..!!
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ಗುರುಹಿರಿಯರಲ್ಲಿ ಗೌರವಾದರದ ಮಾತಿರಲಿ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು
ತರ್ಕದಲಿ ಅತಿ ತೂಕವಿರಲಿ ಮಾತಿನಲಿ
ವಿತಂಡವಾದಿಗಳ ಮಣಿಸುವಂತಿರಲಿ

ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ
[3/6/2019, 8:05 pm] Dr. B. N. Shylaja Ramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ  ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು
ತರ್ಕದಲಿ ಅತಿ ತೂಕವಿರಲಿ ಮಾತಿನಲಿ

ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..

ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು
ಹಿಡಿತವಿರೆ ಮಾತಿನಲಿ ಸೌಜನ್ಯದ ಹೆಗ್ಗುರುತಂತೆ..

           ಶೈಲೂ.....
[3/6/2019, 8:08 pm] Dr. B. N. Shylaja Ramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ  ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು
ತರ್ಕದಲಿ ಮಾತು  ಅತಿ ತೂಕವಿದ್ದರೆ ಸೊಗಸು 

ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..

ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು
ಹಿಡಿತವಿರೆ ಮಾತಿನಲಿ ಸೌಜನ್ಯದ ಹೆಗ್ಗುರುತಂತೆ..

           ಶೈಲೂ.....
[3/6/2019, 8:10 pm] Dr. B. N. Shylaja Ramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ  ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು..
ತರ್ಕದಲಿ ಮಾತು  ಅತಿ ತೂಕವಿದ್ದರೆ ಸೊಗಸು.. 

ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..

ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ..
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ..
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು..
ಹಿಡಿತವಿರೆ ಮಾತಿನಲಿ ಅದೇ ಸೌಜನ್ಯದ ಹೆಗ್ಗುರುತು..

           ಶೈಲೂ.....
[4/6/2019, 3:55 pm] Dr. B. N. Shylaja Ramesh: ಗುಣಿತಾಕ್ಷರ ಕವನ##

 *ಮ  ಯಿಂದ ಮಂ ವರೆಗೆ* 

 *ಮ  ಕಾರದಲ್ಲಿ  ಮಾಧವ*
************************

ಮನದಲಿ ನಿಂತ ಮಮತೆಯ ಮೂರ್ತಿ
 *ಮಾಧವಾ* ಸದಾ ನಿನದೇ ನೆನಪು
ಮಿಡಿವ ಮನದಲಿ  ನೆಲೆನಿಂತವ ನೀನು
ಮೀಟುತಿಹೆ ಸುಶ್ರಾವ್ಯದಿ ಹೃದಯ ವೀಣೆಯನು
ಮುದ ನೀಡುತಿದೆ ನಿನ್ನ ಮುರಳೀಗಾನ
ಮೂಡುತಿದೆ ಮನದಲಿ ನಿನ್ನೊಲವ ಗಾನ
ಮೃದು ನುಡಿಗಳಕ್ಕರದ  ಭಾವದಲಿ
ಮೆಲ್ಲ ಮೆಲ್ಲನೆ ಜಾರುತಿದೆ ಮನಸು
ಮೇಳೈಸಲಿ ನಮ್ಮೀಒಲವ ರಂಗಮಂಚ
ಮೈಮರೆತಿರುವೆ ನಿನ್ನನುಭಾವದಲ್ಲೇ ನಾ
         ಮೈದೋರು ದೊರೆಯೇ
ಮೊಗದ ತುಂಬೆಲ್ಲ ನಸುನಗೆಯ ಭಾವ
ಮೋಹನ ನಿನ್ನೀ ಮೋಹಕ ರೂಪದ ಪ್ರಭಾವ
ಮೌನ ರೂಪಕವಾದೆ ನಾ ಮರೆತೆಲ್ಲ ಮಾತುಗಳ
ಮಂದಿರವಾಯ್ತೆನ್ನೆದೆಯು ನಿನಗಾಗಿ
           ಮಹಾ ಮಹಿಮ ಮುನಿಸು ತೋರದೆ 
           ಬಾರೆನ್ನ ಹೃನ್ಮ0ದಿರಕೆ....

         ಶೈಲೂ......
[4/6/2019, 3:55 pm] Dr. B. N. Shylaja Ramesh: ಕಾಯುತಲಿರುವೆ  ನಿನಗಾಗಿ
***********************

ಹೊಂಬಿಸಿಲ ಬಿಸಿ ಸ್ಪರ್ಶಕೆ
ಕಾಯ್ದು , ತೋಯ್ದ ಧರೆಯಂತೆ
ಮಂಜಿನ ಮುತ್ತಿನ ನೀರ ಹನಿಗಾಗಿ
ಕಾಯುತ್ತಿರುವ ಹೂವಿನೆಸಳಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ವಸಂತನಾಗಮನಕ್ಕಾಗಿ
ಕಾಯ್ದ ಪ್ರಕೃತಿಯಂತೆ
ಮಾವಿನ ಚಿಗುರಿಗಾಗಿ
ಕಾಯುವ ಕೋಗಿಲೆಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಗಗನ ಚುಂಬಿಸಲು
ಹಾತೊರೆವ ಗಿರಿಶಿಖರದಂತೆ
ಭುವಿಯನಪ್ಪಲು ತವಕಿಸುವ
ಮಳೆಯ ಹನಿ ಹನಿಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಮನದ ಭಾವನೆಯ ಭಾರಕೆ
ಮಿಡಿದ ನಿಟ್ಟುಸಿರಿನಲಿ
ನಿದ್ದೆಯಲೂ ಕನವರಿಸುತ್ತಿರುವ
ಮುದ್ದಾದ ನಿನ್ಹೆಸರಿನಲ್ಲಿ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಕಣ್ಣೆವೆಯ ಮುಚ್ಚಿದಾಕ್ಷಣವೇ  ಹೊತ್ತು 
ತರುವ ನಿನ್ನ ನೆನಪಿನ ಸವಿಗನಸು
ನಿನ್ನ ನೆನಪಿನಲೆಯಲ್ಲಿ 
ತೋಯ್ದಾಡುವ ಮೃದುಮನಸು
ಎಲ್ಲವೂ ಬೇಡುತ್ತಿದೆ ಗೆಳೆಯ
ನಿನ್ನಾಗಮನದ ಮಧುರ ಕ್ಷಣಕ್ಕಾಗಿ..

             ಶೈಲೂ......
.

Comments

Popular posts from this blog

343 ಒಗಟಿನ ರೂಪದ.ಚುಟುಕು

356 ತಿಳಿಯುವ ಬಾ