359 #ಅನವರತ_ಪೊರೆಯೆಮ್ಮ_ಅಂಜನೀಪುತ್ರ

#ಭಕ್ತಿ_ಗೀತೆ

#ಅನವರತ_ಪೊರೆಯೆಮ್ಮ_ಅಂಜನೀಪುತ್ರ

ಅನವರತ  ಪೊರೆಯೆಮ್ಮ ಅಂಜನೀಪುತ್ರ
ನಿರುತ  ನಿನ್ನನೇ  ನೆನೆವೆ  ಸರಸಿಜ  ನೇತ್ರ
ಕರುಣಿಸು  ಶ್ರೀರಾಮ  ನಾಮದಲಿ ಭಕುತಿ
ಸಕಲ ಕಾರ್ಯಗಳಲ್ಲಿ ಬೆರೆಸು ನಿನ್ನ ಶಕುತಿ

ಉದಯರವಿಯ ಹಣ್ಣೆಂದು ಭ್ರಮಿಸಿದನೆ
ತಿನ್ನಲು  ಆಗಸಕೆ  ಚಂಗನೆ  ನೆಗೆದವನೆ
ಬಾಲ್ಯಕಾಲದಲೇ ನಿನಗೆ ಅದೆಂತಹ ಶಕ್ತಿ
ಕಾರಣವೇ ಆರಾಧ್ಯ ದೈವದಲ್ಲಿನ  ಭಕ್ತಿ

ಅಮಿತಪರಾಕ್ರಮಿ ಸಾಗರವ ಲಂಘಿಸಿದ ಧೀರ
ಲಂಕಿಣಿಯ ಮಣಿಸಿ ಲಂಕೆಯ ಸುಟ್ಟ ಕಪಿವೀರ
ಸಂಜೀವಿನಿ ಪರ್ವತವನೆತ್ತಿ ತಂದ ಪರಾಕ್ರಮಿ
ದೈನ್ಯತೆಯೇ ಮೂರ್ತಿವೆತ್ತ ಸಕಲಜನ ಪ್ರೇಮಿ

ಆಜಾನುಬಾಹು ಹನುಮ ಅಮಿತಬಲತೇಜ
ಬಿತ್ತಿದೆ ಎಲ್ಲೆಡೆ ಶ್ರೀರಾಮ ನಾಮದ ಬೀಜ
ಬುದ್ಧಿರ್ಬಲಕೆ ನಿನಗೆ ಸರಿಸಮರು ಉಂಟೇನು
ವಾಕ್ಪಟುತ್ವಕೆ ಹೆಸರು ಈ ಶ್ರೀರಾಮನ ಭಂಟನು

         ಶೈಲಜಾ ರಮೇಶ್

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ