349 ಹಚ್ಚೋಣ ಬನ್ನಿ ಕರುನಾಡ ದೀಪ


ಎಲ್ಲರಿಗೂ ನಮಸ್ಕಾರಗಳು🙏🙏
ಸಮಸ್ತ ಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐

#ಚಿತ್ರ_ಕಾವ್ಯ_ಸ್ಪರ್ಧೆ

#ಹಚ್ಚ_ಬನ್ನಿ_ಕರುನಾಡ_ದೀಪವ

ಹಚ್ಚೋಣ ಬನ್ನಿ ಕರುನಾಡ ದೀಪ
ತೊಡೆಯಲೆಲ್ಲ ದ್ವೇಷಾಸೂಯೆಯ ಪಾಪ
ಬೆಳಗಲಿ ಎಲ್ಲೆಲ್ಲೂ ಕನ್ನಡಮ್ಮನ ಕೀರ್ತಿ.!
ಹರಡಲವಳ ಹೆಸರು ಈ ದೇಶದ ಭರ್ತಿ..!!

ಹಚ್ಚಿ ಪ್ರಣತಿ ಕಸ್ತೂರಿ ತೈಲವನೆರೆದು
ದೈದೀಪ್ಯಮಾನದಲುರಿಯಲಿ ಮೆರೆದು
ಬೆಳಗಲಿ ಜ್ಞಾನ; ಅಜ್ಞಾನ ತಮ ಕಳೆದು..!
ತೊಲಗಲೆಲ್ಲರ ಪಾಪಗಳು ಉರಿದುರಿದು ಉರಿದು..!!

ಕನ್ನಡ ನಾಡಿದು ದೇವಮಂದಿರದಂತೆ
ಪೊರೆವ ತಾಯಿ ಭುವನೇಶ್ವರಿಯಂತೆ
ಕಾವಳೆಮ್ಮನು ತನ್ನ ಮಡಿಲ ತೆಕ್ಕೆಯಲಿರಿಸಿ..!
ಧೀಮಂತ ಸಂಸ್ಕೃತಿಯ ಜ್ಞಾನದಮೃತವ ಕುಡಿಸಿ..!!

ಎನಿತು ಸುಂದರ ಈ ಕರುನಾಡ ಮಂದಿರವು
ಜೀವಂತ ನೆಲೆ ಆ ನಿತ್ಯ ಹರಿದ್ವರ್ಣವೂ
ಜೀವಸೆಲೆಗಿಹುದು ಜೀವನದಿ ಕಾವೇರಿ..!
ಹೊಳೆಯುತಿದೆ ಶಿಲ್ಪಕಲೆ ವೈಭವದ ಸಿರಿ..!!

     ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ