346 ಹೊಂಬಿಸಿಲು

#ಕವನಸ್ಪರ್ಧೆ

#ಹೊಂಬಿಸಿಲು

ಉದಯಿಸಿದನಿದೋ ನೋಡು ಭಾಸ್ಕರ
ಹೊಂಬಿಸಿಲನು ಚೆಲ್ಲಿ..!
ಬಾನಂಗಳದಲಿ ಹೊನ್ನಿನೆಳೆಯ ಚಿತ್ತಾರ
ಎಳೆದನವ ರಂಗವಲ್ಲಿ..!

ಹೊಂಬಿಸಿಲ ಬಿಸಿ ಸ್ಪರ್ಶಕೆ ನೀಗಿತು
ಜಗದ ಜಡ ಚೇತನ..!
ಲಗುಬಗೆಯಲಿ ಮಿಂಚಿ ಸುಳಿದಾಡಿತು
ಜಗದ ಜನಜೀವನ..!

ಕವಿದ ಕತ್ತಲ ಅಜ್ಞಾನ ಎಲ್ಲ ಜಡತ್ವ
ಮೆಲ್ಲಮೆಲ್ಲ ಸರಿಯಿತು..!
ಉತ್ತೇಜಿಸುವುದು ಹೊಂಬಿಸಿಲ ತತ್ವ
ಚರಾಚರ ಜಗ ಹೊಳೆಯಿತು..!

             ಶೈಲಜಾ ರಮೇಶ್

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ